Tag: ಪ್ರೇಯಸಿ

  • ಮುತ್ತಿನ ಆಸೆಗೆ ಬುರ್ಕಾ ಧರಿಸಿ ನಡುಬೀದಿಯಲ್ಲೇ ಒದೆತಿಂದ!

    ಮುತ್ತಿನ ಆಸೆಗೆ ಬುರ್ಕಾ ಧರಿಸಿ ನಡುಬೀದಿಯಲ್ಲೇ ಒದೆತಿಂದ!

    ಚೆನ್ನೈ: ಪ್ರೇಯಸಿಯಿಂದ ಮುತ್ತು ಪಡೆಯಲು ರಸ್ತೆಗೆ ಬುರ್ಕಾ ಧರಿಸಿ ಬಂದಿದ್ದ ಯುವಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಮಿಳುನಾಡಿನ ರಾಯ್ಪೆಟ್ಟಾದಲ್ಲಿ ನಡೆದಿದೆ.

    ಪಟ್ಟಬ್ರಾಮ್ ಪ್ರದೇಶದ ನಿವಾಸಿ ಶಕ್ತಿವೇಲ್ ಮುತ್ತಿನ ಆಸೆಗೆ ಒದೆ ತಿಂದಿದ್ದಾನೆ. ಹೌದು, ಶಕ್ತಿವೇಲ್ ಕಳೆದ ಆರು ತಿಂಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರಿಂದ ಪ್ರೇಮಿಗಳ ದಿನದಂದು ಪ್ರೇಯಸಿ ಬಳಿ ಯುವಕ ಕಿಸ್ ಕೊಡುವಂತೆ ಕೇಳಿದ್ದಾನೆ.

    ಈ ವೇಳೆ ಮುತ್ತು ಪಡೆಯಲು ಗೆಳತಿ ಬುರ್ಕಾ ಧರಿಸಿ ರಾಯ್ಪೆಟ್ಟಾದ ರಸ್ತೆಯಲ್ಲಿ ನಡೆದುಕೊಂಡು ಮರೀನಾ ಬೀಚ್ ಬಳಿ ಬಂದರೆ ಮಾತ್ರ ಮುತ್ತು ಕೊಡುತ್ತೇನೆ ಎಂದು ವಿಚಿತ್ರ ಷರತ್ತನ್ನು ವಿಧಿಸಿದ್ದಾಳೆ. ಮುತ್ತಿಗೋಸ್ಕರ ಯುವತಿಯ ಮಾತು ಒಪ್ಪಿದ ಯುವಕ ಮಂಗಳವಾರ ರಾತ್ರಿ ಬುರ್ಕಾ ಧರಿಸಿ ರಸ್ತೆಗಿಳಿದಿದ್ದಾನೆ.

    ಇನ್ನೇನು ಆತ ಯುವತಿ ಬಳಿ ತಲುಪಬೇಕು ಎನ್ನುವಷ್ಟರಲ್ಲಿ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ. ಮರೀನಾ ಬೀಚ್ ಸಮೀಪದಲ್ಲಿರುವ ಐಸ್ ಹೌಸ್ ಬಳಿ ಯುವಕ ಬುರ್ಕಾ ಧರಿಸಿ ಬರುತ್ತಿದ್ದಾಗ ವ್ಯಕ್ತಿಯೊಬ್ಬ ಆತನನ್ನು ಗಮನಿಸಿದ್ದಾನೆ.

    ಯುವಕ ನಡೆಯುವ ಶೈಲಿ ನೋಡಿ ಅನುಮಾನ ಬಂದು ಆತನನ್ನೇ ಹಿಂಬಾಲಿಸಿದ್ದಾನೆ. ಬಳಿಕ ಯುವಕ ಹಾಕಿದ್ದ ಚಪ್ಪಲಿಯನ್ನು ಗಮನಿಸಿ ಬುರ್ಕಾ ಧರಿಸಿರುವುದು ಮಹಿಳೆ ಅಲ್ಲ ಎನ್ನುವುದು ಖಚಿತವಾಗಿದೆ.

    ನಂತರ ಸ್ಥಳದಲ್ಲಿದ್ದವರಿಗೆ ವಿಷಯ ತಿಳಿಸಿದ ಎಲ್ಲರು ಸೇರಿಕೊಂಡು ಯುವಕನನ್ನು ಕಳ್ಳನೆಂದು ಭಾವಿಸಿ ಹೊಡೆದಿದ್ದಾರೆ. ಯಾಕೆ ಬುರ್ಕಾ ಧರಿಸಿ ಹೀಗೆ ಓಡಾಡುತ್ತಿದ್ದೀಯಾ ಅಂತ ಪ್ರಶ್ನಿಸಿದ್ದಾರೆ. ಆದರೆ ಯಾವುದಕ್ಕೂ ಯುವಕ ಉತ್ತರ ನೀಡದೇ ಇದ್ದಾಗ ಸಿಕ್ಕಾಪಟ್ಟೆ ಹೊಡೆದು ಕೊನೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಳಿಕ ಪೊಲೀಸರು ಯುವಕನನ್ನು ವಿಚಾರಣೆ ನಡೆಸಿದಾಗ ಸತ್ಯಾಂಶವನ್ನು ಯುವಕ ಬಾಯ್ಬಿಟ್ಟಿದ್ದಾನೆ. ಸದ್ಯ ವಿಚಾರಣೆ ಬಳಿಕ ಪೊಲೀಸರು ಯುವಕನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೋರ್ವನ ಜೊತೆ ಯುವತಿಯ ಸುತ್ತಾಟ-ಪ್ರಿಯತಮೆಯನ್ನ ಕೊಂದ ಮಾಜಿ ಗೆಳೆಯ ಅರೆಸ್ಟ್

    ಮತ್ತೋರ್ವನ ಜೊತೆ ಯುವತಿಯ ಸುತ್ತಾಟ-ಪ್ರಿಯತಮೆಯನ್ನ ಕೊಂದ ಮಾಜಿ ಗೆಳೆಯ ಅರೆಸ್ಟ್

    ತುಮಕೂರು: ಪ್ರೇಯಸಿಯನ್ನು ಕೊಂದ ಪ್ರಿಯಕರನನ್ನು ಹುಲಿಯೂರುದುರ್ಗ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

    ಅರ್ಪಿತಾ(26) ಕೊಲೆಯಾದ ಪ್ರೇಯಸಿ. ಬೆಂಗಳೂರಿನ ಲೋಹಿತ್(27) ಬಂಧಿತ ಆರೋಪಿ. ಫೆಬ್ರವರಿ 3ರಂದು ಕುಣಿಗಲ್ ತಾಲೂಕಿನ ಸಂತೆಮಾವತ್ತೂರಿನಲ್ಲಿ ಲೋಹಿತ್ ತನ್ನ ಪ್ರೇಯಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿ ಆಗಿದ್ದನು.

    ಅರ್ಪಿತಾ ತನ್ನ ಪ್ರಿಯಕರ ಲೋಹಿತ್‍ನನ್ನು ಬಿಟ್ಟು ಬೇರೆ ವ್ಯಕ್ತಿ ಜೊತೆ ತಿರುಗಾಡುತ್ತಿದ್ದಳು. ಇದರಿಂದ ಕೋಪಗೊಂಡ ಲೋಹಿತ್ ತನ್ನ ಪ್ರೇಯಸಿ ಅರ್ಪಿತಾಳನ್ನು ಕೊಲೆ ಮಾಡಿದ್ದಾನೆ. ಯುವತಿ ಧರಿಸಿದ್ದ ಎZ ಪಿ ಪೆಟ್ರೋಲ್ ಬಂಕ್ ಸಮವಸ್ತ್ರ ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಹುಲಿಯೂರುದುರ್ಗ ಪೊಲೀಸರು ಆರೋಪಿ ಲೋಹಿತ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ, ಪ್ರೇಯಸಿಗೆ ಕೈ ಕೊಟ್ಟು ಸಮಾಜ ಸೇವಕಿಯ ಕೈ ಹಿಡಿದ ಯೋಧ..!

    ಪತ್ನಿ, ಪ್ರೇಯಸಿಗೆ ಕೈ ಕೊಟ್ಟು ಸಮಾಜ ಸೇವಕಿಯ ಕೈ ಹಿಡಿದ ಯೋಧ..!

    ಬೆಳಗಾವಿ: ದೇಶದಲ್ಲಿ ಯೋಧರಿಗೆ ವಿಶೇಷ ಗೌರವಿದೆ. ಆದರೆ ಯೋಧರೊಬ್ಬರು ಪತ್ನಿ ಹಾಗೂ ಪ್ರೇಯಸಿಗೆ ಕೈ ಕೊಟ್ಟು, ಸಮಸ್ಯೆ ಬಗೆಹರಿಸಲು ಬಂದ ಸಮಾಜ ಸೇವಕಿಯನ್ನೇ ಮದುವೆಯಾದ ವಿಚಿತ್ರ ಘಟನೆಯೊಂದು ನಡೆದಿದೆ.

    ಮೂಲತಃ ಬಾಗಲಕೋಟೆಯ ಮದರಕಂಡಿ ಗ್ರಾಮದ ಅಜಿತ್ ಮಾದರ್ ಮೂವರನ್ನು ಮದುವೆಯಾದ ಯೋಧ. ಸಿ.ಆರ್.ಪಿ.ಎಫ್ ನಲ್ಲಿ ಕೆಲಸ ಶುರು ಮಾಡಿದ ನಂತರ 2011ರಲ್ಲಿ ದಾಕ್ಷಾಯಿಣಿ ಎಂಬಾಕೆ ಜೊತೆ ಅಜಿತ್ ಮದುವೆ ನೆರವೇರಿತ್ತು. ಇಬ್ಬರು ಮಕ್ಕಳು ಕೂಡ ಇದ್ದರು. ಆದ್ರೆ ಅಜಿತ್ ಬಿಹಾರದಲ್ಲಿ ಕೆಲಸ ಮಾಡ್ತಿದ್ದ ವೇಳೆ ಪತ್ನಿಗೆ ಗೊತ್ತಾಗದಂತೆ ಇನ್ನೊಬ್ಬ ವಿವಾಹಿತೆಯೊಂದಿಗೆ ಲವ್ವಿ ಡವ್ವಿ ಶುರುವಾಗಿತ್ತು.

    ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸೀಮಾ ಎಂಬಾಕೆಯನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿ ಸಂಸಾರ ಆರಂಭಿಸಿದ್ದನು. ಈ ವಿಚಾರ ಗೊತ್ತಾಗ್ತಿದ್ದಂತೆ ದಾಕ್ಷಾಯಿಣಿ, ಸಿ.ಆರ್.ಪಿ.ಎಫ್ ಕಮಾಂಡರ್ ಗೆ ದೂರು ಕೊಟ್ಟಿದ್ದಾರೆ. ಬಳಿಕ ಕಮಾಂಡರ್ ಕೌಟುಂಬಿಕ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಬರುವಂತೆ ಅಜಿತ್ ಮಾದರ್ ಗೆ 15 ದಿನ ರಜೆ ಮೇಲೆ ಊರಿಗೆ ಕಳುಹಿಸಿದ್ದರು. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿ ಮಗುವಾದ್ಮೇಲೆ ಕೈಕೊಟ್ಟ- ರೊಚ್ಚಿಗೆದ್ದ ಪತ್ನಿಯಿಂದ ಪತಿ ಮನೆಯೆದುರು ಆಕ್ರೋಶ

    ಯಾವಾಗ ರಜೆಯಲ್ಲಿ ಊರಿಗೆ ಬಂದ ಬಳಿಕ ಜೆಡಿಎಸ್ ಕಿತ್ತೂರು ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸೂರ್ಯವಂಶಿ ಬಳಿ ತನ್ನ ಸಂಸಾರದ ವಿವಾದ ಇತ್ಯರ್ಥ ಪಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಈ ಸಮಸ್ಯೆ ಇತ್ಯರ್ಥ ಮಾಡುವ ವೇಳೆ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದ್ದು, ಇಬ್ಬರೂ ರಿಜಿಸ್ಟರ್ ಮದುವೆ ಕೂಡ ಆಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡೋಕೆ ಹೋದ ನನಗೆ ಜಯಶ್ರೀ ಸೂರ್ಯವಂಶಿ ಬೆದರಿಕೆ ಹಾಕಿದ್ದಾಳೆ ಅಂತ ನೊಂದ ದಾಕ್ಷಾಯಿಣಿ ಆರೋಪಿಸಿದ್ದಾರೆ.

    ಸದ್ಯ ದಾಕ್ಷಾಯಿಣಿ ನನಗೆ ನ್ಯಾಯ ಕೊಡಿಸಿ ಎಂದು ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ. ಇನ್ನೊಂದು ಕಡೆ ಅಜಿತ್ ಪ್ರೇಯಸಿ ಸೀಮಾ ಬದುಕು ಕೂಡ ಅತಂತ್ರವಾಗಿದೆ. ಸಾಮಾಜ ಸೇವೆ ಮಾಡೋ ಜಯಶ್ರೀ ಸೂರ್ಯವಂಶಿ ಮಾಡಿರೋ ಕೆಲಸಕ್ಕೆ ದಾಕ್ಷಾಯಿಣಿ ಕುಟುಂಬ ಬೀದಿಪಾಲಾಗಿದೆ.

    ಈ ಬಗ್ಗೆ ಠಾಣೆಯಲ್ಲಿ ದೂರು ಕೊಟ್ಟರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ದೇಶ ಕಾಯುವ ಯೋಧ ಇಬ್ಬರ ಬಾಳಲ್ಲಿ ಆಟವಾಡಿರೋದು ತಪ್ಪು. ನಮಗೆ ನ್ಯಾಯ ಕೊಡಿಸಿ ಅಂತ ನೊಂದ ಮಹಿಳೆ ಕಣ್ಣೀರಿಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಯಸಿಯೊಂದಿಗೆ ಸೇರಿ ಪತ್ನಿಯನ್ನು ಕೊಂದ ಪಾಪಿ ಪತಿ

    ಪ್ರೇಯಸಿಯೊಂದಿಗೆ ಸೇರಿ ಪತ್ನಿಯನ್ನು ಕೊಂದ ಪಾಪಿ ಪತಿ

    ಕಲಬುರಗಿ: ಪತಿಯೊಬ್ಬ ತನ್ನ ಪ್ರೇಯಸಿ ಜೊತೆ ಸೇರಿ ತಾಳಿ ಕಟ್ಟಿದ್ದ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ರೇಷ್ಮಾ (25) ಕೊಲೆಯಾದ ಮಹಿಳೆ. ಪತಿ ವಿಜಯ್ ಕುಮಾರ್ ತನ್ನ ಪ್ರೇಯಸಿ ಪೂಜಾ ಜೊತೆ ಸೇರಿ ರೇಷ್ಮಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ವಿಜಯ್ ಹಾಗೂ ಪೂಜಾ ರೇಷ್ಮಾಳ ಮೃತದೇಹವನ್ನು ಜೇವರ್ಗಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹೊಲದಲ್ಲಿ ಹೂತು ಹಾಕಿದ್ದನು.

    ರೇಷ್ಮಾಳನ್ನು ಕೊಲೆ ಮಾಡಿದ ಬಳಿಕ ವಿಜಯ್ ಕುಮಾರ್ ಡಿಸೆಂಬರ್ 4ರಂದು ವಾಡಿ ಪೊಲೀಸ್ ಠಾಣೆಯಲ್ಲಿ ತನ್ನ ಪತ್ನಿ ನಾಪತ್ತೆ ಆಗಿದ್ದಾಳೆ ಎಂದು ದೂರು ದಾಖಲಿಸಿದ್ದನು. ಆಗ ಪೊಲೀಸರಿಗೆ ಅನುಮಾನ ಬಂದು ಪತಿ ವಿಜಯಕುಮಾರ್ ನನ್ನು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಯಸಿ ಜೊತೆಗಿದ್ದ ಪತಿಯನ್ನ ಹಿಡಿದ ಪತ್ನಿ

    ಪ್ರೇಯಸಿ ಜೊತೆಗಿದ್ದ ಪತಿಯನ್ನ ಹಿಡಿದ ಪತ್ನಿ

    ಹೈದರಾಬಾದ್: ಪ್ರಿಯತಮೆಯ ಜೊತೆ ಇದ್ದಾಗ ಪತಿಯನ್ನು ರೆಡ್‍ಹ್ಯಾಂಡ್ ಆಗಿ ಹಿಡಿದು ಮಹಿಳೆ ಆತನನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ತೆಲಂಗಾಣದ ಮೀರ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ನಾಗರಾಜು ಪ್ರೇಯಸಿ ಜೊತೆ ಇದ್ದಾಗ ಪತ್ನಿಗೆ ಸಿಕ್ಕಿಹಾಕಿಕೊಂಡ ಪತಿ. ಈತ 2007ರಲ್ಲಿ ಅಮೂಲ್ಯರನ್ನು ಮದುವೆಯಾಗಿದ್ದನು. ಈ ದಂಪತಿಗೆ 8 ವರ್ಷದ ಮಗಳಿದ್ದಾಳೆ. ನಾಗರಾಜು ಟಿಸಿಎಸ್ ತಂಡದ ಲೀಡರ್ ಆಗಿ ಕೆಲಸ ಮಾಡುತ್ತಿದ್ದು, ಇಬ್ಬರ ಸಂಸಾರ ಜೀವನ ಚೆನ್ನಾಗಿ ಇತ್ತು. ಆದರೆ ಕಳೆದ ಕೆಲವು ದಿನಗಳ ಹಿಂದೆ ಜಗಳವಾಡಿಕೊಂಡು ಇಬ್ಬರು ಬೇರೆ ಬೇರೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಪತ್ನಿ ಅಮೂಲ್ಯ ಅವರಿಗೆ ತನ್ನ ಪತಿ ಕಳೆದ ಆರು ತಿಂಗಳಿನಿಂದ ಆತನ ಸಹೋದ್ಯೋಗಿ ಜೊತೆ ತುಂಬಾ ಕ್ಲೋಸ್ ಆಗಿ ಇರುವುದು ತಿಳಿದು ಬಂದಿದೆ. ಇದನ್ನು ಪತ್ತೆ ಮಾಡಲು ಬುಧವಾರ ಸಂಬಂಧಿಗಳೊಂದಿಗೆ ಹಸ್ತಿನಾಪುರಂವನ ದ್ವಾರಕಾನಗರ ಪತಿಯ ಮನೆಗೆ ಏಕಾಏಕಿ ಹೋಗಿದ್ದಾರೆ. ಇತ್ತ ಪತಿ ನಾಗರಾಜು ಪ್ರೇಯಸಿ ಜೊತೆ ಇದ್ದನು. ನಂತರ ನಾಗರಾಜು ಪ್ರಿಯತಮೆ ಜೊತೆ ಇದ್ದಾಗ ರೆಡ್‍ಹ್ಯಾಂಡ್ ಆಗಿ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಪತ್ನಿ ಅಮೂಲ್ಯ ಸಂಬಂಧಿಕರ ಸಹಾಯದಿಂದ ಅವರ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ನಾಗರಾಜುವಿನ ವಿರುದ್ಧ 490 ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇಬ್ಬರಿಗೂ ಕೌನ್ಸಿಲ್ ಮಾಡಿ ಮನೆಗೆ ವಾಪಸ್ ಕಳುಹಿಸಿದ್ದೇವೆ ಎಂದು ಮೀರ್ ಪೇಟ್ ಸಿಐ ಯಾದಯ್ಯ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇರಳದ ಎಂಜಿನಿಯರ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಲಾಡ್ಜ್ ನಲ್ಲಿ ಪ್ರೇಯಸಿ ಜೊತೆ ಪ್ರತ್ಯಕ್ಷ

    ಕೇರಳದ ಎಂಜಿನಿಯರ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಲಾಡ್ಜ್ ನಲ್ಲಿ ಪ್ರೇಯಸಿ ಜೊತೆ ಪ್ರತ್ಯಕ್ಷ

    ಚಿಕ್ಕಮಗಳೂರು: ಕೇರಳದ ಎಂಜಿನಿಯರ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾಪತ್ತೆಯಾಗಿ ತಿಂಗಳ ಬಳಿಕ ಎಂಜಿನಿಯರ್ ಪ್ರತ್ಯಕ್ಷವಾಗಿದ್ದಾರೆ.

    ಎಂಜಿನಿಯರ್ ಸಂದೀಪ್ ಮುಂಬೈನ ಲಾಡ್ಜ್ ನಲ್ಲಿ ಪ್ರೇಯಸಿ ಜೊತೆ ಪ್ರತ್ಯಕ್ಷನಾಗಿದ್ದಾರೆ. ನಾಗಲಾಪುರ ಗ್ರಾಮದ ಬಳಿ ತುಂಗಾ ಸೇತುವೆ ಮೇಲೆ ಸಂದೀಪ್ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದರು. ಈಗ ಕೇರಳ ಪೊಲೀಸರಿಗೆ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಸಂದೀಪ್ ಪ್ರೇಯಸಿಯೂ ನಾಪತ್ತೆಯಾಗಿರುವ ಬಗ್ಗೆ ಕೇರಳದಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ ಕೇರಳದ ಎಂಜಿನಿಯರ್ ನಾಪತ್ತೆ

    ಏನಿದು ಪ್ರಕರಣ?
    ಕೇರಳದ ಕ್ಯಾಲಿಕಟ್‍ನ ಖಾಸಗಿ ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಬಂದಿದ್ದರು. ಆದರೆ ನವೆಂಬರ್ 28 ರಂದು ಕೊಪ್ಪ ತಾಲೂಕಿನ ನಾಗಲಾಪುರ ಗ್ರಾಮದ ಬಳಿ ತುಂಗಾ ಸೇತುವೆ ಮೇಲೆ ಸಂದೀಪ್ ಬೈಕ್ ಪತ್ತೆಯಾಗಿತ್ತು. ನದಿ ದಡದ ದಂಡೆಯ ಮೇಲೆ ವಾಚ್, ಟವೆಲ್ ಕೂಡ ಪತ್ತೆಯಾಗಿದೆ. ಟ್ರಕ್ಕಿಂಗ್ ಸಲುವಾಗಿ ಬಂದಿದ್ದ ಅವರು ಮೂರು ದಿನಗಳ ಕಾಲ ಸ್ನೇಹಿತರ ಸಂಪರ್ಕದಲ್ಲಿದ್ದರು. ಕೊನೆ ದಿನದ ಸಂದೀಪ್ ನಾಪತ್ತೆಯಾಗಿದ್ದರು. ಸೇತುವೆ ಬಳಿ ವಾಚ್, ಟವೆಲ್ ಪತ್ತೆಯಾಗಿದ್ದರಿಂದ ಈಜಲು ಹೋಗಿ ನದಿಯಲ್ಲಿ ಮುಳುಗಿ ಸಾವನಪ್ಪಿರಬಹುದು ಎಂದು ಶಂಕಿಸಲಾಗಿತ್ತು.

    ಈ ಬಗ್ಗೆ ಕೇರಳದ ನಲ್ಲಳಂ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ದೂರು ದಾಖಲಾಗಿದ್ದು, ಕೇರಳ ಪೊಲೀಸರು ಸಂದೀಪ್‍ಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಈಗ ಮುಂಬೈನಲ್ಲಿ ಪತ್ತೆಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯತಮೆ ಜೊತೆ ಸೆಲ್ಫಿ ಕ್ಲಿಕ್ಕಿಸೋ ವೇಳೆ ಅಡ್ಡಬಂದಿದ್ದಕ್ಕೆ ಯುವಕನಿಗೆ ಮನಬಂದಂತೆ ಥಳಿತ!

    ಪ್ರಿಯತಮೆ ಜೊತೆ ಸೆಲ್ಫಿ ಕ್ಲಿಕ್ಕಿಸೋ ವೇಳೆ ಅಡ್ಡಬಂದಿದ್ದಕ್ಕೆ ಯುವಕನಿಗೆ ಮನಬಂದಂತೆ ಥಳಿತ!

    ಬೆಂಗಳೂರು: ಪ್ರಿಯತಮೆ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಆಕಸ್ಮಿಕವಾಗಿ ಅಡ್ಡಬಂದ ಯುವಕನಿಗೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಉತ್ತರಹಳ್ಳಿಯ ಅಕ್ಕಮ್ಮ ಬೆಟ್ಟದಲ್ಲಿ ನಡೆದಿದೆ.

    ಜಬ್ಬಿ ಖಾನ್ ಹಲ್ಲೆಗೊಳಗಾದ ಯುವಕ. ಅಕ್ಕಮ್ಮ ಬೆಟ್ಟದಲ್ಲಿ ಪ್ರೇಯಸಿ ಜೊತೆ ಪ್ರಿಯಕರನೊಬ್ಬ ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಜಬ್ಬಿ ಖಾನ್ ಅಡ್ಡ ಬಂದಿದ್ದಾನೆ. ಇದರಿಂದ ಕುಪಿತಗೊಂಡ ಪ್ರಿಯಕರ ಮನಸ್ಸೋ ಇಚ್ಛೆ ಥಳಿಸಿದ್ದಾನೆ. ಬಳಿಕ ತನ್ನ 6 ಮಂದಿ ಸ್ನೇಹಿತರೊಂದಿಗೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಜಬ್ಬಿ ಖಾನ್ ಬಳಿಯಿದ್ದ ಪರ್ಸ್ ಹಾಗೂ ಮೊಬೈಲ್ ಅನ್ನು ಕಿತ್ತು ಕಳುಹಿಸಿದ್ದಾರೆ.

    ಗಾಯಗೊಂಡ ಜಬ್ಬಿ ಖಾನ್ ಕೂಡಲೇ ಚಿಕ್ಕಜಾಲ ಪೊಲೀಸ್ ಠಾಣೆಗೆ ತೆರಳಿ ಘಟನೆ ಸಂಬಂಧ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಲ್ಲೆ ನಡೆಸಿರುವ ಆರೋಪಿಗಳಿಗಾಗಿ ಶೋಧಕಾರ್ಯ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪ್ರೇಯಸಿ ಜೊತೆ ಸೇರಿ ಹೆತ್ತ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿ ಕಾಲು ಮುರಿದ ಮಗ

    ಪ್ರೇಯಸಿ ಜೊತೆ ಸೇರಿ ಹೆತ್ತ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿ ಕಾಲು ಮುರಿದ ಮಗ

    ಗದಗ: ಮಗನೊಬ್ಬ ಪ್ರೇಯಸಿ ಜೊತೆ ಸೇರಿ ಹೆತ್ತ ತಾಯಿಯನ್ನೇ ಹಿಗ್ಗಾಮುಗ್ಗಾ ಥಳಿಸಿ, ಹಿರಿ ಜೀವದ ಕಾಲುಗಳನ್ನೇ ಮುರಿದ ಪ್ರಕರಣವೊಂದು ಗದಗದಲ್ಲಿ ಬೆಳಕಿಗೆ ಬಂದಿದೆ. ಮಗ ಹಾಗೂ ಆತನ ಪ್ರೇಯಸಿಯ ದೌರ್ಜನ್ಯಕ್ಕೆ ಹಿರಿಜೀವ ನಲುಗಿ ಹೋಗಿದ್ದು, ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ.

    ಗದಗ ನಗರದ ಎಸ್.ಎಂ ಕೃಷ್ಣಾ ನಗರದಲ್ಲಿ ಸಿದ್ದಲಿಂಗಯ್ಯ ನಾಗಾವಿಮಠ ತನ್ನ ಪ್ರೇಯಸಿ ಜೊತೆ ಸೇರಿಕೊಂಡು ಹೆತ್ತ ತಾಯಿಯನ್ನೇ ಥಳಿಸಿದ್ದಾನೆ. ವೃದ್ಧಾಪ್ಯದಲ್ಲಿ ನಮ್ಮನ್ನು ಆರೈಕೆ ಮಾಡುತ್ತಾನೆ ಅಂತ ವೃದ್ಧ ದಂಪತಿ ಕಿರಿಯ ಮಗನನ್ನು ಮುದ್ದಾಗಿ ಸಾಕಿದ್ದರು. ಆದರೆ ಆ ಕಿರಿಯ ಪುತ್ರ ತನ್ನ ಪ್ರಿಯತಮೆಯ ಜೊತೆ ಸೇರಿಕೊಂಡು ಹೆತ್ತ ತಾಯಿ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

    ಸಿದ್ದಲಿಂಗಯ್ಯ ನಾಗಾವಿಮಠ ಹಾಗೂ ಆತನ ಪ್ರೇಯಸಿ ಕರುಣೆ ಇಲ್ಲದೇ ಹಿರಿಜೀವದ ಎರಡೂ ಮೊಣಕಾಲನ್ನು ಮುರಿಯೋ ಮೂಲಕ ರಾಕ್ಷಸಿತನ ಮೆರೆದಿದ್ದಾಳೆ. ಪುತ್ರ, ಪ್ರೇಯಸಿ ಹೊಡೆತಕ್ಕೆ ಜಿಮ್ಸ್ ಆಸ್ಪತ್ರೆಯಲ್ಲಿ ವೃದ್ಧೆ ತಾಯಿ ಪ್ರೇಮವ್ವ ಕಣ್ಣೀರು ಹಾಕುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಘಟನೆ ನಡೆದು ನಾಲ್ಕು ದಿನಗಳಾಗಿದ್ದು, ಈಗಾಗಲೇ ವೃದ್ಧೆ ಪ್ರೇಮವ್ವ ದೂರನ್ನು ನೀಡಿದ್ದಾರೆ. ಇಷ್ಟಾದರೂ ಸಹ ದೂರು ದಾಖಲಿಸಿಕೊಂಡ ಗದಗ ಗ್ರಾಮೀಣ ಪೊಲೀಸರು ಕಿರಾತಕ ಪುತ್ರ ಹಾಗೂ ಪ್ರೇಯಸಿಯನ್ನು ಬಂಧಿಸಿಲ್ಲ. ದೂರು ದಾಖಲು ಮಾಡಿಕೊಳ್ಳುವ ವೇಳೆ ಗದಗ ಗ್ರಾಮೀಣ ಪೊಲೀಸರೂ ಸಹ ಅಮಾನವೀಯ ವರ್ತನೆ ಮಾಡಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿಕೊಳ್ಳದ ಗದಗ ಗ್ರಾಮೀಣ ಪಿಎಸ್‍ಐ ಮಲ್ಲಿಕಾರ್ಜುನ, ನೀನು ಮೊದ್ಲು ಆಸ್ಪತ್ರೆಗೆ ಹೋಗು ಅಂತ ಗದರಿಸಿದ್ದಾರಂತೆ.

    ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಿದರೂ ದೂರು ದಾಖಲಿಸಿಕೊಳ್ಳದ ಪೊಲೀಸರು, ವೃದ್ಧೆಗೆ ಹೆದರಿಸಿ ಕಿರಾತಕರಿಗೆ ಮನೆ ಬೀಗ ಕೊಡಿಸಿದ್ದಾರೆ. ಪೊಲೀಸರ ಅಮಾನವೀಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಯಸಿಯನ್ನು ಕೊಂದು ತಾನು ನೇಣಿಗೆ ಶರಣಾದ..!

    ಪ್ರೇಯಸಿಯನ್ನು ಕೊಂದು ತಾನು ನೇಣಿಗೆ ಶರಣಾದ..!

    ನವದೆಹಲಿ: ದಕ್ಷಿಣ ದೆಹಲಿಯ ಫ್ಲಾಟ್‍ವೊಂದರಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಕೊಂದು ನಂತರ ತಾನು ನೇಣಿಗೆ ಶರಣಾಗಿರುವ ಘಟನೆ ಸೋಮವಾರದಂದು ನಡೆದಿದೆ.

    ಅಭಿಷೇಕ್ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪ್ರೇಮಿ. ಅಭಿಷೇಕ್ ಪ್ರೇಯಸಿ ಹಾಗೂ ಅವಳ ಗೆಳತಿ ಕಳೆದ ಎರಡು ತಿಂಗಳಿಂದ ಒಟ್ಟಿಗೆ ದೆಹಲಿಯ ಸುಮನ್ ಕಾಲೋನಿಯ ಫ್ಲ್ಯಾಟ್ ವೊಂದರಲ್ಲಿ ವಾಸಿಸುತ್ತಿದ್ದರು. ಸೋಮವಾರ ಸಂಜೆ 7.30 ಸುಮಾರಿಗೆ ಯುವತಿಯ ಗೆಳತಿ ತಮ್ಮ ಫ್ಲ್ಯಾಟ್ ಬಾಗಿಲು ಒಳಗಿನಿಂದ ಲಾಕ್ ಆಗಿದೆ ಒಳಗೆ ಕಳ್ಳರು ಸೇರಿರಬಹುದು ಎಂದು ಪೊಲೀಸರಿಗೆ ಕರೆಮಾಡಿ ತಿಳಿಸಿದ್ದಳು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಒಳಗೆ ಹೋದಾಗ ಯುವತಿ ಹಾಗೂ ಅಭಿಷೇಕ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ಕಳೆದ ಹಲವು ವರ್ಷಗಳಿಂದ ಅಭಿಷೇಕ್ ಹಾಗೂ ಯುವತಿ ಪ್ರೀತಿಸುತ್ತಿದ್ದರು. ಆದರೆ ಕೆಲದಿನಗಳಿಂದ ಅವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು. ಇದರಿಂದ ಮನನೊಂದಿದ್ದ ಅಭಿಷೇಕ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಬಳಿಕ ಏಕಾಏಕಿ ಯುವತಿಯ ಫ್ಲ್ಯಾಟ್‍ಗೆ ತೆರಳಿದ್ದ ಅಭಿಷೇಕ್ ಆಕೆಯ ಕತ್ತು ಕೊಯ್ದು ಸಾಯಿಸಿ ನಂತರ ತಾನು ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡುಕೊಂಡಿದ್ದಾನೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತು ದಕ್ಷಿಣ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಯಸಿಗಾಗಿ ಶಿಕ್ಷಕಿ ಪತ್ನಿಯ ಹತ್ಯೆ!

    ಪ್ರೇಯಸಿಗಾಗಿ ಶಿಕ್ಷಕಿ ಪತ್ನಿಯ ಹತ್ಯೆ!

    ನವದೆಹಲಿ: ದೆಹಲಿಯ ವಬಾನಾ ಪ್ರದೇಶದಲ್ಲಿ ನಡೆದಿದ್ದ ಶಿಕ್ಷಕಿಯೊಬ್ಬರ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ಸುನಿತಾ(38) ಕೊಲೆಯಾಗಿದ್ದ ಶಿಕ್ಷಕಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಪತಿ ಮಂಜೀತ್ (38), ಆತನ ಪಾಟ್ನರ್ ಏಂಜೆಲ್ ಗುಪ್ತಾ ಮತ್ತು ಏಂಜೆಲ್ ಗುಪ್ತಾಳ ತಂದೆ ರಾಜೀವ್ ಬಂಧಿತ ಆರೋಪಿಗಳು. ಬಂಧಿತ ಏಂಜೆಲ್ ಗುಪ್ತಾ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾಳೆ ಎಂದು ತಿಳಿದು ಬಂದಿದೆ.

    ಆರೋಪಿ ಮಂಜೀತ್ ಹಾಗೂ ಏಂಜೆಲ್ ಗುಪ್ತಾ ಗುರ್ಗಾಂವ್ ನಲ್ಲಿ ಭೇಟಿಯಾಗಿದ್ದು, ಪರಿಚಯದಿಂದ ಇಬ್ಬರು ಪ್ರೀತಿಸುತ್ತಿದ್ದರು. ಮದುವೆಯಾಗಲು ನಿರ್ಧಾರ ಮಾಡಿದ್ದರು. ಆದರೆ ಸುನಿತಾಗೆ ಪತಿ ಮತ್ತು ಗುಪ್ತಾಳ ನಡುವಿನ ಸಂಬಂಧ ತಿಳಿದಿದೆ. ಹೀಗಾಗಿ ಗುಪ್ತಾಳ ಜೊತೆಗಿನ ಪತಿಯ ಸಂಬಂಧವನ್ನು ವಿರೋಧಿಸಿದ್ದಕ್ಕೆ ಸುನಿತಾಳನ್ನು ಕೊಲೆ ಮಾಡಿದ್ದಾರೆ ಎಂದು ಡಿಪಿಸಿ ರಜನೀಶ್ ಗುಪ್ತಾ ಹೇಳಿದ್ದಾರೆ.

    ಸುನಿತಾರನ್ನು ಕೊಲೆ ಮಾಡಲು ಕಾಂಟ್ರ್ಯಾಕ್ಟ್ ಕೊಲೆಗಾರರನ್ನು ನೇಮಕ ಮಾಡಲಾಗಿತ್ತು. ಆದ್ದರಿಂದ ತನಿಖೆ ಮಾಡಲಾಗುತ್ತಿದೆ. ಈ ವೇಳೆ ಅವರ ಹೆಸರನ್ನು ಬಹಿರಂಗ ಪಡಿಸಬಾರದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಹರಿಯಾಣದ ಸೋನೆಪಟ್ ನ ಸರ್ಕಾರಿ ಶಾಲೆಯಲ್ಲಿ ಸುನಿತಾ ಶಿಕ್ಷಕಿಯಾಗಿದ್ದರು. ಸೋಮವಾರ ಬೆಳಗ್ಗೆ ಸುನೀತಾ ಅವರು ಬವಾನಾದಲ್ಲಿ ತನ್ನ ಸ್ಕೂಟರ್ ಪಕ್ಕದಲ್ಲಿ ಗುಂಡಿನ ಪೆಟ್ಟು ತಿಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಅವರನ್ನು ನೋಡಿ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.

    ಏಂಜೆಲ್ ಗುಪ್ತಾ

    ಮೊದಲಿಗೆ ಸುನಿತಾ ಕೊಲೆಗೆ ಕಾರಣವೆಂದು ತನಿಖೆ ಮಾಡುತ್ತಿದ್ದಾಗ ಇದು ದರೋಡೆಗಾಗಿ ನಡೆದಿಲ್ಲ ಎಂದು ತಿಳಿದು ಬಂದಿತ್ತು. ಏಕೆಂದರೆ ಆಕೆ ಬಿದ್ದಿದ್ದ ಜಾಗದಲ್ಲಿ ಅವರಿಗೆ ಸೇರಿದ ವಸ್ತುಗಳಾದ ನಗದು ಮತ್ತು ಫೋನ್, ಬ್ಯಾಗ್ ಸ್ಥಳದಲ್ಲಿಯೇ ಸಿಕ್ಕಿತ್ತು.

    ಪತಿ ಸುನಿತಾ ಕೊಲೆಯಲ್ಲಿ ಭಾಗಿಯಾಗಿದ್ದು, ಆತನಿಗೆ ಇದ್ದ ಸಂಬಂಧದ ಬಗ್ಗೆ ಸುನಿತಾ ಕುಟುಂಬದ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಶಿಕ್ಷಕಿ ಸುನಿತಾ ಡೈರಿಯಲ್ಲಿ ಏಂಜಲ್ ಗುಪ್ತಾ ಬಗ್ಗೆ ಮಾಹಿತಿಯಿತ್ತು. ಕೊನೆಗೆ ಪೊಲೀಸರು ಅನುಮಾನಗೊಂಡು ಮಂಜೀತ್ ನನ್ನು ವಿಚಾರಣೆ ನಡೆಸಲು ಕರೆಸಿದ್ದಾರೆ. ಇತ್ತ ಮುಂಬೈನಲ್ಲಿದ್ದ ಏಂಜೆಲ್ ಕೂಡ ತನಿಖೆಗೆ ಒಳಪಡಿಸಿದ್ದಾರೆ.

    ಸುನಿತಾ ಕೊಲೆಗೆ ಗುಪ್ತಾಳ ತಂದೆಯೂ ಕೂಡ ಸಾಥ್ ನೀಡಿದ್ದು, ಸದ್ಯಕ್ಕೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv