Tag: ಪ್ರೇಯಸಿ

  • ಶಾಲಾ ಆವರಣದಲ್ಲೇ ಪ್ರೇಯಸಿ ಜೊತೆ ಶಿಕ್ಷಕ ಸೆಕ್ಸ್

    ಶಾಲಾ ಆವರಣದಲ್ಲೇ ಪ್ರೇಯಸಿ ಜೊತೆ ಶಿಕ್ಷಕ ಸೆಕ್ಸ್

    ಚೆನ್ನೈ: ಶಾಲೆಯ ಆವರಣದಲ್ಲಿ ಶಿಕ್ಷಕನೊಬ್ಬ ತನ್ನ ಅಂಗನವಾಡಿ ಸಿಬ್ಬಂದಿ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಈ ಸಂಬಂಧ ಗ್ರಾಮಸ್ಥರು ಶಿಕ್ಷಕನಿಗೆ ಥಳಿಸಿದ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ನಡೆದಿದೆ.

    ನಾಮಕ್ಕಲ್ ಉದುಪ್ಪಂ ಸರ್ಕಾರಿ ಶಾಲೆಯ ಶಿಕ್ಷಕ ಶಾಲೆ ಸಮಯ ಮುಗಿದ ನಂತರ ಅಂಗನವಾಡಿ ಮಹಿಳಾ ಸಿಬ್ಬಂದಿ ಜೊತೆ ದೈಹಿಕ ಸಂಬಂಧ ಬೆಳೆಸುತ್ತಿದ್ದನು. ಕಳೆದ ಎರಡು ತಿಂಗಳಿಂದ ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಮಹಿಳೆಯೂ ಗ್ರಾಮೀಣ ಮಕ್ಕಳ ಆರೋಗ್ಯ ಅಭಿವೃದ್ಧಿ ವಿಭಾಗದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಾಳೆ. ಅಲ್ಲದೆ ಆಕೆ ಈ ಶಾಲೆಯೊಂದಿಗೆ ಸಂಬಂಧ ಹೊಂದಿದ್ದಾಳೆ. ಶಾಲೆಯ ಸಮಯ ಮುಗಿದ ನಂತರ ಇಬ್ಬರು ಒಟ್ಟಿಗೆ ಭೇಟಿ ಆಗುತ್ತಿದ್ದರು.

    ಇಬ್ಬರು ದೈಹಿಕ ಸಂಬಂಧ ಬೆಳೆಸುತ್ತಿರುವುದನ್ನು ಶಾಲೆಯ ಮಕ್ಕಳು ನೋಡಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಪೋಷಕರಿಗೂ ದೂರು ನೀಡಿದ್ದಾರೆ. ಮಂಗಳವಾರ ಪೋಷಕರ ಗುಂಪು ಶಾಲೆಗೆ ಭೇಟಿ ನೀಡಿದ್ದಾಗ ಇಬ್ಬರೂ ದೈಹಿಕ ಸಂಬಂಧ ಬೆಳೆಸುತ್ತಿದ್ದರು.

    ಇದರಿಂದ ಸಿಟ್ಟುಗೊಂಡ ಗ್ರಾಮಸ್ಥರು ಶಿಕ್ಷಕನನ್ನು ಹಾಗೂ ಅಂಗನವಾಡಿ ಸಿಬ್ಬಂದಿಯನ್ನು ಥಳಿಸಿದ್ದಾರೆ. ನಂತರ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಹೇಳಿ ನಿಂದಿಸಿದ್ದಾರೆ. ಬಳಿಕ ಪುಡನ್‍ಸಂಡೈ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಶಿಕ್ಷಕನನ್ನು ಹಾಗೂ ಅಂಗನವಾಡಿ ಸಿಬ್ಬಂದಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಶಾಲೆಯ ಪ್ರಾಂಶುಪಾಲರು ಆರೋಪಿ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ ಅಂಗನವಾಡಿ ಸಿಬ್ಬಂದಿ ಬಗ್ಗೆ ಆಕೆ ಕೆಲಸ ಮಾಡುವ ಸ್ಥಳದಲ್ಲಿ ಹೇಳುವುದಾಗಿ ಹೇಳಿದ್ದಾರೆ.

  • ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಕೊಲೆ

    ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಕೊಲೆ

    ಹೈದರಾಬಾದ್: ಪ್ರಿಯಕರ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಂಗಳವಾರ ತೆಲಂಗಾಣದ ಖಮ್ಮಂ ಜಿಲ್ಲೆಯ ಕೋಥ ಲಂಕಪಲ್ಲಿ ಗ್ರಾಮದಲ್ಲಿ ನಡೆದಿದೆ.

    ತೇಜಸ್ವಿನಿ(20) ಕೊಲೆಯಾದ ಯುವತಿ. ತೇಜಸ್ವಿನಿ ಕುಪ್ಪೇನಾಕುಂಟ್ಲಾ ಗ್ರಾಮದವಳಾಗಿದ್ದು, ಆರೋಪಿ ನಿತಿನ್ ಸತ್ತುಪಲ್ಲಿ ಗ್ರಾಮದವನು. ಇಬ್ಬರು ಗಂಗರಾಮ್‍ನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದರು. ಈ ವೇಳೆ ನಿತಿನ್ ಹಾಗೂ ತೇಜಸ್ವಿನಿ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು.

    ನಿತಿನ್ ಎಲ್ಲಾ ವಿಷಯಗಳಲ್ಲಿ ಪಾಸ್ ಆದ ನಂತರ ಖಮ್ಮಂನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಕೋರ್ಸ್ ಗೆ ಸೇರಿದ್ದನು. ಇತ್ತ ತೇಜಸ್ವಿನಿ ಮೂರು ವಿಷಯಗಳಲ್ಲಿ ಫೇಲ್ ಆಗಿ ಮನೆಯಲ್ಲಿಯೇ ಇದ್ದಳು. ಈ ನಡುವೆ ತೇಜಸ್ವಿನಿ ತನ್ನ ಸಂಬಂಧಿಕರ ಹುಡುಗನ ಜೊತೆ ಸಂಪರ್ಕದಲ್ಲಿ ಇದ್ದಾಳೆ ಎಂಬ ಅನುಮಾನದಿಂದ ನಿತಿನ್ ಆಕೆಗೆ ಫೋನ್ ಮಾಡಿ ಆಕೆಯ ಜೊತೆ ಜಗಳವಾಡುತ್ತಿದ್ದನು.

    ಮಂಗಳವಾರ ನಿತಿನ್ ತನ್ನ ಬೈಕಿನಲ್ಲಿ ಕುಪ್ಪೇನಾಕುಂಟ್ಲಾ ಹೋಗಿ ಮಾತನಾಡಬೇಕೆಂದು ತೇಜಸ್ವಿನಿಗೆ ಮೆಸೇಜ್ ಮಾಡಿದ್ದನು. ನಿತಿನ್ ಮನವಿ ಮಾಡಿಕೊಂಡಿದ್ದ ಕಾರಣ ತೇಜಸ್ವಿನಿ ಆತನನ್ನು ಭೇಟಿ ಮಾಡಲು ಒಪ್ಪಿಕೊಂಡಳು. ಬಳಿಕ ಇಬ್ಬರು ಕುಕ್ಕಲಗುಟ್ಟ ಸಮೀಪವಿರುವ ನಿರ್ಜನ ಪ್ರದೇಶಕ್ಕೆ ಹೋದರು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಬಳಿಕ ನಿತಿನ್ ಖಮ್ಮಂಗೆ ತಲುಪುವ ಮೊದಲು ಕೆರ್ಚೀಫ್‍ನಿಂದ ತೇಜಸ್ವಿನಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

    ತೇಜಸ್ವಿನಿಯ ಮೃತದೇಹವನ್ನು ಸುಡಲು ನಿತಿನ್ ನಿರ್ಧರಿಸಿದ್ದನು. ಆದರೆ 50 ಮೀ. ದೂರದಲ್ಲಿ ರಾಜ್ಯದ ಹೆದ್ದಾರಿ ಇದ್ದ ಕಾರಣ ನಿತಿನ್ ಆಕೆಯ ಮೃತದೇಹವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಬಳಿಕ ತೇಜಸ್ವಿನಿಯ ತಂದೆ ಸತ್ಯನಾರಾಯಣ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವಾಗ ತೇಜಸ್ವಿನಿಯ ಮೃತದೇಹ ಪತ್ತೆಯಾಗಿದ್ದು, ನಿತಿನ್‍ನನ್ನು ಬಂಧಿಸಿದ್ದಾರೆ.

  • ಲಾಡ್ಜಿನಲ್ಲಿ ಪ್ರೇಯಸಿ ಜೊತೆ ಚೆಲ್ಲಾಟವಾಡ್ತಿದ್ದ ಪತಿಗೆ ಗೂಸಾ ಕೊಟ್ಟ ಪತ್ನಿ

    ಲಾಡ್ಜಿನಲ್ಲಿ ಪ್ರೇಯಸಿ ಜೊತೆ ಚೆಲ್ಲಾಟವಾಡ್ತಿದ್ದ ಪತಿಗೆ ಗೂಸಾ ಕೊಟ್ಟ ಪತ್ನಿ

    ಲಕ್ನೋ: ಲಾಡ್ಜಿನಲ್ಲಿ ರೂಮ್ ಮಾಡಿಕೊಂಡು ಪ್ರೇಯಸಿ ಜೊತೆ ಮಜಾ ಮಾಡುತ್ತಿದ್ದ ಪತಿಯನ್ನು ರೆಡ್ ಹ್ಯಾಡ್ ಹಿಡಿದ ಪತ್ನಿ ಸಖತ್ ಗೂಸಾ ಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಬಿಲಾಸ್ಪುರದಲ್ಲಿ ನಡೆದಿದೆ.

    ಮದುವೆಯಾಗಿದ್ದರು ಪ್ರೇಯಸಿ ಜೊತೆ ಲಾಡ್ಜ್ ಮಾಡಿಕೊಂದು ಮಜಾ ಪಡೆಯುತ್ತಿದ್ದ ಪತಿಯ ರಂಗಿನಾಟಕ್ಕೆ ಪತ್ನಿ ಬ್ರೇಕ್ ಹಾಕಿದ್ದಾಳೆ. ಜಶ್ಪುರದ ಪೊಲೀಸ್ ಸಿಬ್ಬಂದಿ ಮಗನಾದ ಪ್ರೀತಮ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದನು. ಆದರೆ ಮದುವೆಗೆ ಮುಂಚೆ ಪ್ರೀತಮ್ ಜಶ್ಪುರದ ಯುವತಿಯನ್ನೇ ಪ್ರೀತಿಸುತ್ತಿದ್ದನು. ಈ ವಿಷಯ ಪತ್ನಿಗೆ ತಿಳಿದಿತ್ತು. ಆದ್ದರಿಂದ ಪತಿ ಮೇಲೆ ಪತ್ನಿ ಕಣ್ಣಿಟ್ಟಿದ್ದಳು.

    ಇದೇ ಬೆನ್ನೆಲ್ಲೆ ಪತಿ ಪತ್ನಿಗೆ ಸುಳ್ಳು ಹೇಳಿ ಬಿಲಾಸ್ಪುರಕ್ಕೆ ಪ್ರೇಯಸಿ ಜೊತೆ ಹೋಗಿದ್ದನು. ಅಲ್ಲಿ ಆರಾಮಾಗಿ ಲಾಡ್ಜಿನಲ್ಲಿ ರೂಮ್ ಮಾಡಿಕೊಂಡು ಮಜಾ ಮಾಡುವ ಪ್ಲಾನ್ ಮಾಡಿದ್ದನು. ಆದ್ರೆ ಈ ಪ್ಲಾನ್‍ಗೆ ಪತ್ನಿ ಎಳ್ಳು ನೀರು ಬಿಟ್ಟಿದ್ದಾಳೆ. ಪತಿ ವಿಷಯ ತಿಳಿದು ಪತ್ನಿ, ತನ್ನ ಕುಟುಂಬಸ್ಥರ ಜೊತೆ ಲಾಡ್ಜಿಗೆ ಬಂದು ಪತಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾಳೆ.

    ಮೋಸ ಮಾಡಿ ಬೇರೊಬ್ಬಳ ಜೊತೆ ಹೋಗಿದ್ದ ಪತಿ ವಿರುದ್ಧ ಪೊಲೀಸರಿಗೆ ಪತ್ನಿ ದೂರು ನೀಡಿದ್ದು, ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

  • ಈಗಲೇ ಮದುವೆ ಬೇಡ ಎಂದಿದ್ದಕ್ಕೆ ಪ್ರೇಯಸಿಯ ಕೊಲೆಗೆ ಯತ್ನ

    ಈಗಲೇ ಮದುವೆ ಬೇಡ ಎಂದಿದ್ದಕ್ಕೆ ಪ್ರೇಯಸಿಯ ಕೊಲೆಗೆ ಯತ್ನ

    ತುಮಕೂರು: ಮದುವೆ ತಡವಾಗಿ ಆಗೋಣ ಎಂದಿದ್ದಕ್ಕೆ ಜಿ.ಪಂ ಸದಸ್ಯೆಯ ಮಗ ತನ್ನ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ ನಡೆದಿದೆ.

    24 ವರ್ಷದ ಮಹಾವೀರ ಭಕ್ತ ಗುರುನಾನಕ್ ಎಂಬ ಹುಚ್ಚು ಪ್ರೇಮಿ ತನ್ನ 23 ವರ್ಷದ ಪ್ರಿಯತಮೆಯ ಹತ್ಯೆಗೆ ಮಂದಾಗಿದ್ದಾನೆ. ಮದಲೂರು ಗ್ರಾಮಕ್ಕೆ ಗುರುವಾರ ಯುವತಿಯನ್ನು ಕರೆಸಿಕೊಂಡು ಅತೀ ಶೀಘ್ರದಲ್ಲೇ ಮದುವೆಯಾಗುವಂತೆ ಒತ್ತಡ ಹಾಕಿದ್ದಾನೆ. ಆದರೆ  ಚಿತ್ರದುರ್ಗದಲ್ಲಿ ಬಿ.ಎಸ್ಸಿ ನರ್ಸಿಂಗ್ ಓದುತ್ತಿರುವ ಯುವತಿ ಈಗಲೇ ಮದುವೆ ಬೇಡ ಎಂದು ಹೇಳಿದ್ದಾಳೆ.

    ಮದುವೆ ಬೇಡ ಎಂದಿದ್ದಕ್ಕೆ ಸಿಟ್ಟಿಗೆದ್ದ ಮಹಾವೀರ್, ಯುವತಿ ಧರಿಸಿದ್ದ ಚೂಡಿದಾರದ ವೇಲನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಪರಿಣಾಮ ಯುವತಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ತನ್ನ ಲವ್ವರ್ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ಮಹಾವೀರ ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಜ್ಞೆ ಬಂದ ಬಳಿಕ ಆಕೆ ತನ್ನ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ.

    ಘಟನೆಯಿಂದ ಯುವತಿಯ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಾರಾರಿಯಾಗಿರುವ ಆರೋಪಿಯನ್ನು  ಭಕ್ತ ಗುರುನಾನಕ್ ಮದಲೂರು ಜಿ.ಪಂ ಕ್ಷೇತ್ರದ ಸದಸ್ಯೆ ಲಕ್ಷ್ಮಿ ದೇವಮ್ಮಳ ಮಗನೆಂದು ತಿಳಿದು ಬಂದಿದೆ.

    ಈ ಸಂಬಂಧ ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರಿನಲ್ಲಿ ಪ್ರೇಯಸಿಯೊಂದಿಗೆ ಪತಿ – ಪತ್ನಿಗೆ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ

    ಕಾರಿನಲ್ಲಿ ಪ್ರೇಯಸಿಯೊಂದಿಗೆ ಪತಿ – ಪತ್ನಿಗೆ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ

    ಲಕ್ನೋ: ಕಾರಿನಲ್ಲಿ ಪ್ರೇಯಸಿಯೊಂದಿಗಿದ್ದಾಗ ಪತಿ ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದರೂ ಹೆಂಡತಿಗೆ ಗುದ್ದಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ನೋಯ್ಡಾದ ಸೆಕ್ಟರ್ 49ರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಿವಾಹಿತ ಮಹಿಳೆಗೆ ಪತಿ ಬೇರೆ ಹುಡುಗಿಯ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಅನುಮಾನವಿತ್ತು. ಅದರಂತೆಯೇ ಪತಿಯನ್ನು ಹಿಂಬಾಲಿಸಿಕೊಂಡು ಪತ್ನಿ ಹೋಗಿದ್ದು, ಪ್ರೇಯಸಿಯೊಂದಿಗೆ ಕಾರಿನಲ್ಲಿದ್ದಾಗಲೇ ಪತಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

    ನಡೆದಿದ್ದೇನು?
    ಮಹಿಳೆ ಪ್ರೇಯಸಿಯೊಂದಿಗೆ ಪತಿಯನ್ನು ನೋಡಿದ ತಕ್ಷಣ ಕಾರನ್ನು ಆಟೋದಲ್ಲಿ ಹಿಂಬಾಲಿಸಿದ್ದಾಳೆ. ಆಟೋದಲ್ಲಿ ತೆರಳುವ ವೇಳೆ ಪತಿಗೆ ಫೋನ್ ಮಾಡಿದ್ದಾಳೆ. ಆದರೆ ಪತಿ ಫೋನ್ ರಿಸೀವ್ ಮಾಡಿಲ್ಲ. ಹಾಗಾಗಿ ಕೋಪಗೊಂಡ ಮಹಿಳೆ ಪತಿಯಿದ್ದ ಕಾರನ್ನ ಓವರ್ ಟೇಕ್ ಮಾಡಿ ಕಾರಿನ ಮುಂದೆ ಹೋಗಿ ಆಟೋ ನಿಲ್ಲಿಸಿದ್ದಾಳೆ. ಪತ್ನಿ ಆಟೋದಿಂದ ಕೆಳಗಿಳಿದಿದ್ದಾಳೆ. ಆಗ ಕಾರಿನ ಮುಂದೆ ಪತ್ನಿಯನ್ನು ನೋಡುತ್ತಿದ್ದಂತೆ ಪತಿ ಕಂಗಾಲಾಗಿದ್ದು, ಕಾರಿನಿಂದ ಹೊರಗಿಳಿಯಲು ಪತಿ ಭಯಪಟ್ಟಿದ್ದಾನೆ.

    ಪತ್ನಿ ತಕ್ಷಣ ಸಾಕ್ಷಿಗಾಗಿ ತನ್ನ ಫೋನಿನಲ್ಲಿ ಅವರಿಬ್ಬರು ಒಟ್ಟಿಗೆ ಇದ್ದುದ್ದನ್ನು ರೆಕಾರ್ಡ್ ಮಾಡಿಕೊಳ್ಳಲು ಶುರು ಮಾಡಿದ್ದಾಳೆ. ಇದನ್ನು ಕಾರಿನಲ್ಲಿದ್ದ ಪತಿಯ ಪ್ರೇಯಸಿ ನೋಡಿ ಕಿರುಚಾಡಿದ್ದಾಳೆ. ಆಗ ಸ್ಥಳದಲ್ಲಿದ್ದ ಜನರು ಕಾರಿನ ಬಳಿ ಜಮಾಯಿಸಿದ್ದಾರೆ. ಆದರೂ ಪತ್ನಿ ವಿಡಿಯೋ ರೆಕಾರ್ಡ್ ಮಾಡುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಪ್ರೇಯಸಿ ಕಾರನ್ನು ಮಹಿಳೆಗೆ ಗುದ್ದಿ ಆಕೆಯ ಪತಿಯೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಸೆಕ್ಟರ್ 75ರ ಪ್ರದೇಶದಲ್ಲಿ ವಾಸಿಸುತ್ತಿದ್ದು, ಎಂಎನ್‍ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಪತಿ ಐಟಿ ಕಂಪನಿಯಲ್ಲಿ ಕೆಲಸದಲ್ಲಿದ್ದಾನೆ. ಇಬ್ಬರು ಪರಸ್ಪರ ಒಪ್ಪಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವು ದಿನಗಳಲ್ಲೇ ಪತಿ ಬೇರೆ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಪತ್ನಿ ಶಂಕಿಸಿದ್ದಾಳೆ. ಹೀಗಾಗಿ ಅವರಿಬ್ಬರನ್ನು ಹಿಂಬಾಲಿಸುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಸದ್ಯಕ್ಕೆ ಮಹಿಳೆ ಪತಿ ಮತ್ತು ಆತನ ಪ್ರೇಯಸಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಪತಿ ಮತ್ತು ಆತನ ಪ್ರೇಯಸಿಗಾಗಿ ಶೋಧಕಾರ್ಯ ಶುರುಮಾಡಿದ್ದಾರೆ.

  • ಹೆಲ್ಮೆಟ್ ತೆಗೆಯುವಂತೆ ಹೇಳಿ ಲವ್ವರ್ ಮೇಲೆ ಆ್ಯಸಿಡ್ ಎರಚಿದ್ಳು

    ಹೆಲ್ಮೆಟ್ ತೆಗೆಯುವಂತೆ ಹೇಳಿ ಲವ್ವರ್ ಮೇಲೆ ಆ್ಯಸಿಡ್ ಎರಚಿದ್ಳು

    ನವದೆಹಲಿ: ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವತಿ ಆತನ ಮೇಲೆಯೇ ಆ್ಯಸಿಡ್ ಎರಚಿರುವ ಘಟನೆ ದೆಹಲಿಯ ವಿಕಾಸ್ಪುರಿ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಜೂನ್ 11 ರಂದು ನಡೆದಿದ್ದು, ಯುವತಿ ಪ್ರಿಯಕನ ಜೊತೆ ಮೋಟಾರ್ ಬೈಕಿನಲ್ಲಿ ಹಿಂದೆ ಕುಳಿತುಕೊಂಡು ಹೋಗುತ್ತಿದ್ದಳು. ಈ ವೇಳೆ ಆಕೆ ಪ್ರಿಯರಕನ ಹೆಲ್ಮೆಟ್ ತೆಗೆಯುವಂತೆ ಕೇಳಿದ್ದಾಳೆ. ಬಳಿಕ ಏಕಾಏಕಿ ಆ್ಯಸಿಡ್ ಎರಚಿದ್ದಾಳೆ. ಪ್ರೇಮಿಗಳ ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ ಎಂದು ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ಪೊಲೀಸರು ಹೋಗಿದ್ದು, ಅಲ್ಲಿ ಯುವತಿಯ ಕೈಗೆ ಸಣ್ಣ ಗಾಯಗಳಾಗಿತ್ತು. ಆದರೆ ಯುವಕನ ಮುಖ, ಕುತ್ತಿಗೆ ಮತ್ತು ಎದೆಯ ಮೇಲೆ ತೀವ್ರವಾದ ಗಾಯಗಳಾಗಿದ್ದನ್ನು ಪೊಲೀಸರು ಗಮನಿಸಿದ್ದಾರೆ.

    ಪೊಲೀಸರಿಗೆ ಅನೇಕ ದಿನಗಳವರೆಗೆ ಅವರ ಮೇಲೆ ಆ್ಯಸಿಡ್ ದಾಳಿ ಮಾಡಿದವರು ಯಾರು ಎಂದು ಗೊತ್ತಾಗಲಿಲ್ಲ. ಆದರೆ ಈ ಬಗ್ಗೆ ವಿಚಾರಣೆ ಮಾಡುವಾಗ ಯುವಕ ನಾವು ಬೈಕಿನಲ್ಲಿ ಹೋಗುವಾಗ ಆ್ಯಸಿಡ್ ಎರಚಲಾಗಿದೆ ಎಂದು ಹೇಳಿದ್ದನು. ಜೊತೆಗೆ ಯುವತಿಯು ಹೆಲ್ಮೆಟ್ ತೆಗೆಯುವಂತೆ ನನ್ನ ಬಳಿ ಕೇಳಿಕೊಂಡಿದ್ದಳು. ಹೀಗಾಗಿ ಹೆಲ್ಮೆಟ್ ತೆಗೆದಿದ್ದೆ ಎಂದು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ತಕ್ಷಣ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ವೇಳೆ ಈ ಕೃತ್ಯವನ್ನು ತಾನೇ  ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.

    ಯುವಕ ಮತ್ತು ಯುವತಿ ಇಬ್ಬರೂ ಮೂರು ವರ್ಷಗಳಿಂದ ರಿಲೇಷನ್‍ಶಿಪ್‍ನಲ್ಲಿ ಇದ್ದರು. ಆದರೆ ಇತ್ತೀಚೆಗೆ ಯುವಕ ಈ ರಿಲೇಷನ್‍ಶಿಪ್ ಅನ್ನು ಇಲ್ಲಿಗೆ ಕೊನೆಯಾಗಿಸೋಣ ಎಂದು ಕೇಳಿಕೊಂಡಿದ್ದನು. ಆದರೆ ಯುವತಿಗೆ ಆತನನ್ನು ಮದುವೆಯಾಗಬೇಕೆಂದು ಬಯಸಿದ್ದಳು. ಅದರಂತೆಯೇ ವಿವಾಹವಾಗೋಣ ಎಂದು ಪ್ರಿಯಕರನನ್ನು ಕೇಳಿದ್ದಾಳೆ. ಆದರೆ ಆತ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಈ ರೀತಿಯಾಗಿ ಮಾಡಿದ್ದಾಳೆ ಎಂದು ಡಿಸಿಪಿ ಮೋನಿಕಾ ಭಾರಾದ್ವಾಜ್ ತಿಳಿಸಿದ್ದಾರೆ.

    ಯುವತಿಯ ಪರ್ಸ್ ನಲ್ಲಿ ಮನೆ ಸ್ವಚ್ಛ ಮಾಡಲು ಬಳಸುವ ಕೆಮಿಕಲ್ ಬಾಟಲ್ ಪತ್ತೆಯಾಗಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರೇಯಸಿಯ ಖುಷಿಗಾಗಿ ಚಾಟ್‍ಬಾಟ್ ಸೃಷ್ಟಿಸಿದ ಟೆಕ್ಕಿ

    ಪ್ರೇಯಸಿಯ ಖುಷಿಗಾಗಿ ಚಾಟ್‍ಬಾಟ್ ಸೃಷ್ಟಿಸಿದ ಟೆಕ್ಕಿ

    ಬೀಜಿಂಗ್: ಪ್ರಿಯಕರ ತನ್ನ ಮೆಸೇಜ್‍ಗೆ ರಿಪ್ಲೈ ಮಾಡುತ್ತಿಲ್ಲ, ತನಗೆ ಸಮಯ ಕೊಡುತ್ತಿಲ್ಲ ಎಂದು ಅನೇಕ ಹುಡುಗಿಯರು ಬೇಸರ ಮಾಡಿಕೊಳ್ಳುತ್ತಾರೆ. ಇದಕ್ಕೆ ಪರಿಹಾರ ಎಂಬಂತೆ ಸದಾ ಪ್ರೇಯಸಿಯನ್ನು ಸಂತೋಷದಿಂದ ಇಟ್ಟುಕೊಳ್ಳಲು ಚೈನೀಸ್ ಸಾಫ್ಟ್ ವೇರ್ ಎಂಜಿನಿಯರ್ ಬ್ರಿಲಿಯಂಟ್ ಉಪಾಯ ಕಂಡು ಹಿಡಿದಿದ್ದಾರೆ.

    ಲಿ ಕೈಕ್ಸಿಯಾಂಗ್ ಕೆಲಸದ ಬ್ಯುಸಿ ಇರುವ ವೇಳೆ ಗೆಳೆತಿಯ ಜೊತೆ ಚಾಟ್ ಮಾಡಲು ಚಾಟ್‍ಬಾಟ್ ಅನ್ನು ಸಾಫ್ಟ್ ವೇರ್ ಎಂಜಿನಿಯರ್ ಕಂಡು ಹಿಡಿದಿದ್ದಾನೆ. ಈ ರೋಬೋಟ್ “ಬೇಬಿ ಇದು ನಮ್ಮ 618ನೇ ಭೇಟಿಯಾಗಿದ್ದು, ನೀನು ಸುಂದರ ಬಿಸಿಲನ್ನು ಎಂಜಾಯ್ ಮಾಡುತ್ತಿದ್ದೀಯಾ ಎಂದು ಭಾವಿಸಿದ್ದೇನೆ” ಎಂದು ಇದೇ ರೀತಿ ಅನೇಕ ರೀತಿಯ ರೊಮ್ಯಾಂಟಿಕ್ ಆಗಿ ಸಂದೇಶ ಕಳುಹಿಸುತ್ತದೆ.

    ಲಿ ಕೈಕ್ಸಿಯಾಂಗ್ ತನ್ನ ಕೆಲಸದ ಒತ್ತಡದಿಂದ ಪ್ರೇಯಸಿಯ ಮೆಸೇಜ್‍ಗಳನ್ನು ಕಡೆಗಣಿಸುತ್ತಿದ್ದೇನೆ, ಜೊತೆಗೆ ಆಕೆಗೆ ಸಮಯವನ್ನು ಕೊಡಲು ಸಾಧ್ಯವಾಗುತಿಲ್ಲ ಎಂಬುದು ಅರ್ಥ ಆಗಿದೆ. ಇದರಿಂದ ಪ್ರಿಯಕರ ತನ್ನ ಪ್ರೇಯಿಸಿಗೆ ಪ್ರತಿಕ್ರಿಯಿಸಲು ಚಾಟ್‍ಬಾಟ್ ಡಿಸೈನ್ ಮಾಡಲು ನಿರ್ಧರಿಸಿದ್ದನು.

    ಅದರಂತೆಯೇ ಪ್ರಿಯಕರ ಚೀನಾದ ಮೈಕ್ರೋಬ್ಲಾಗಿಂಗ್ ಸೈಟ್ ವೀಬೊ ಮೂಲಕ ಚಾಟ್‍ಬಾಟ್ ಸೃಷ್ಟಿಸಿದ್ದನು. ಈ ಚಾಟ್‍ಬಾಟ್ ಲಿ ಕೈಕ್ಸಿಯಾಂಗ್ ಕೆಲಸದ ವೇಳೆ ಬ್ಯುಸಿ ಇದ್ದಾಗ ಪ್ರೇಯಸಿಯ ಜೊತೆ 300ಕ್ಕೂ ಹೆಚ್ಚು ಬಾರಿ ಚಾಟ್ ಮಾಡಿದೆ ಎಂದು ವರದಿ ಮಾಡಿದೆ.

    ಹೀಗೆ ಮೆಸೇಜ್ ಮಾಡುತ್ತಿದ್ದಂತೆ ಆ ಮೆಸೇಜ್‍ಗಳಲ್ಲಿ ಏನೋ ದೋಷವಿದೆ ಎಂಬ ಅನುಮಾನ ಪ್ರೇಯಸಿಗೆ ಬಂದಿದೆ. ಪ್ರಿಯಕರ ಸಹಜವಾಗಿ ತಡವಾಗಿ ರಿಪ್ಲೈ ಮಾಡುತ್ತಿದ್ದನು. ಆದರೆ ಇತ್ತೀಚೆಗೆ ಬಹು ಬೇಗ ಉತ್ತರಿಸುತ್ತಿದ್ದಾನೆ. (How can I respond when there’s no problem?) ಸಮಸ್ಯೆಯೇ ಇಲ್ಲದಿದ್ದಾಗ ನಾನು ಹೇಗೆ ಸ್ಪಂದಿಸಲಿ ಎಂದು ಒಂದು ಮೆಸೇಜ್ ಹೋಗಿದೆ.

    ಇದೀಗ ಲಿ ಕೈಕ್ಸಿಯಾಂಗ್ ವೀಬೋ ಖಾತೆ ಡಿಲೀಟ್ ಆಗಿದೆ. ಆದರೆ ಆತ ಪ್ರೇಯಸಿ ಮಾಡಿದ ಚಾಟ್‍ನ ಸ್ಕ್ರೀನ್‍ಶಾಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

  • ಪ್ರೇಯಸಿ ಜೊತೆ ಸೆಕ್ಸ್ ಮಾಡೋವಾಗ ಸಿಕ್ಕಿಬಿದ್ದ- ಕುಟುಂಬಸ್ಥರಿಂದ ಯುವಕನ ಕೊಲೆ

    ಪ್ರೇಯಸಿ ಜೊತೆ ಸೆಕ್ಸ್ ಮಾಡೋವಾಗ ಸಿಕ್ಕಿಬಿದ್ದ- ಕುಟುಂಬಸ್ಥರಿಂದ ಯುವಕನ ಕೊಲೆ

    ಗೋರಕ್‍ಪುರ: ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ರೂಮಿನಲ್ಲಿ ಸೆಕ್ಸ್ ಮಾಡುವ ವೇಳೆ ಸಿಕ್ಕಿಬಿದ್ದಿದ್ದು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ ಗೋರಕ್‍ಪುರ್ ನಲ್ಲಿ ನಡೆದಿದೆ.

    ಸೂರಜ್(24) ಕೊಲೆಯಾದ ಯುವಕ. ಸೂರಜ್ ಶೇರ್ ಪುರ್ ನ ನಿವಾಸಿಯಾಗಿದ್ದು, ಭಾನುವಾರ ತನ್ನ ಪ್ರೇಯಸಿಯ ರೂಮಿನಲ್ಲಿ ಆಕೆಯ ಜೊತೆ ದೈಹಿಕ ಸಂಬಂಧ ಬೆಳೆಸುತ್ತಿದ್ದ. ಈ ವೇಳೆ ಯುವತಿಯ ಸಹೋದರ ರೂಮಿಗೆ ಬಂದಾಗ ಇಬ್ಬರು ಸೆಕ್ಸ್ ನಲ್ಲಿ ತೊಡಗಿದ್ದರು.

    ಸೂರಜ್ ಯುವತಿಯ ಸಹೋದರನನ್ನು ಕಂಡ ಕೂಡಲೇ ಗಾಬರಿಯಿಂದ ಲೈಸೆನ್ಸ್ ಇಲ್ಲದ ಗನ್ ತೆಗೆದು ಗೌತಮ್ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಗೌತಮ್‍ಗೆ ಗುಂಡು ತಗುಲಿ ಗಾಯಗೊಂಡಿದ್ದನು. ಗುಂಡಿನ ಸದ್ದು ಕೇಳಿದ ಗ್ರಾಮಸ್ಥರು ಹಾಗೂ ಕುಟುಂಬದವರು ಯುವತಿಯ ರೂಮಿಗೆ ಬಂದರು.

    ಸ್ಥಳಕ್ಕೆ ಬಂದ ಗ್ರಾಮಸ್ಥರು ಹಾಗೂ ಕುಟುಂಬದವರು ಸೂರಜ್ ಮೇಲೆ ಮರದ ತುಂಡು ಹಾಗೂ ಚೂಪಾದ ವಸ್ತುವಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ಸೂರಜ್ ತಲೆಗೆ ಗಂಭೀರ ಗಾಯಗಳಾಗಿತ್ತು. ಬಳಿಕ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಸೂರಜ್ ಮೃತಪಟ್ಟಿದ್ದಾನೆ.

    ಈ ಘಟನೆಯಲ್ಲಿ ಯುವತಿಯ ತಂದೆ ಹಾಗೂ ಸಹೋದರ ಸೇರಿದಂತೆ ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಸೂರಜ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

  • ಪ್ರೇಯಸಿ ಕುರಿತ ಸುಳ್ಳು ಸುದ್ದಿಗೆ ಪ್ರೇಮಿ ಬಲಿ

    ಪ್ರೇಯಸಿ ಕುರಿತ ಸುಳ್ಳು ಸುದ್ದಿಗೆ ಪ್ರೇಮಿ ಬಲಿ

    ನವದೆಹಲಿ: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ನಿಜವೆಂದು ನಂಬಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ದೆಹಲಿಯಲ್ಲಿ ನಡೆದಿದೆ.

    ಮೃತ ಪ್ರೇಮಿಯನ್ನು ಓಲಾ ಕ್ಯಾಬ್ ಚಾಲಕ ದೀಪಕ್ ಎಂದು ಗುರುತಿಸಲಾಗಿದೆ. ದೀಪಕ್ ತನ್ನ ತಂದೆ-ತಾಯಿ ಹಾಗೂ ಮೂವರು ಸಹೋದರಿಯರ ಜೊತೆ ದೆಹಲಿಯಲ್ಲಿ ವಾಸವಾಗಿದ್ದನು. ಅಲ್ಲದೆ ಮಥುರಾದ ಯುವತಿಯೊಬ್ಬಳನ್ನು ದೀಪಕ್ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದನು. ಆದರೆ ಇಬ್ಬರ ಪ್ರೀತಿ ವಿಷಯ ತಿಳಿದ ಹುಡುಗಿ ಮನೆಯವರು ದೀಪಕ್‍ಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಯುವತಿಗೆ ದೀಪಕ್ ಜೊತೆ ಮಾತನಾಡದಂತೆ ಸೂಚನೆ ನೀಡಿದ್ದರು. ಹೀಗಾಗಿ ಮನೆಯವರ ಕಿರಿಕಿರಿಗೆ ಬೇಸತ್ತ ಯುವತಿ ದೀಪಕ್‍ಗೆ ಕರೆ, ಮೆಸೇಜ್ ಮಾಡುವುದನ್ನು ಬಿಟ್ಟಿದ್ದಳು.

    ಹೀಗೆ ಇಬ್ಬರು ತಮ್ಮ ಪಾಡಿಗಿದ್ದರು. ಆದರೆ ಸೋಮವಾರದಂದು ಯುವಕನ ಫೋನ್ ಗೆ ಕರೆಯೊಂದು ಬಂದಿದೆ. ಯಾರೋ ತಮಾಷೆಗಾಗಿ ನಿನ್ನ ಪ್ರೇಯಸಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಆದರೆ ಇದನ್ನೇ ನಿಜವೆಂದು ನಂಬಿದ ಯುವಕ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

    ಈ ಸಂಬಂಧ ಯುವಕನ ಮನೆಯವರು ಯುವತಿ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಈಗ ಪೊಲೀಸರು ಯುವಕನ ಫೋನ್ ವಶಕ್ಕೆ ಪಡೆದು ತನಿಖೆ ಶುರು ಮಾಡಿದ್ದಾರೆ.

  • ಪ್ರೇಯಸಿಗಾಗಿ ಬಿಎಸ್‍ಪಿ ಮುಖಂಡನಿಂದ ಪ್ರಶ್ನೆ ಪತ್ರಿಕೆ ಲೀಕ್

    ಪ್ರೇಯಸಿಗಾಗಿ ಬಿಎಸ್‍ಪಿ ಮುಖಂಡನಿಂದ ಪ್ರಶ್ನೆ ಪತ್ರಿಕೆ ಲೀಕ್

    ಲಕ್ನೋ: ಪ್ರೇಯಸಿಗಾಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಲು ಬಹುಜನ ಸಮಾಜವಾದಿ ಪಕ್ಷದ(ಬಿಎಸ್‍ಪಿ) ನಾಯಕನೊಬ್ಬನು ಯತ್ನಿಸಿದ್ದು, ಆತನಿಗೆ ಸಹಾಯ ಮಾಡಿದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಉತ್ತರ ಪ್ರದೇಶದ ಬಿಎಸ್‍ಪಿ ನಾಯಕ ಫಿರೋಜ್ ಅಲಾಮ್ ಬಂಧಿತ ಆರೋಪಿ. ಈತ ಎಂಬಿಎ ಓದುತ್ತಿದ್ದ ತನ್ನ ಪ್ರೇಯಸಿಗಾಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡುವ ಪ್ರಯತ್ನ ನಡೆಸಿದ್ದನು. ಆಲಿಗಢ್ ಮುಸ್ಲಿಂ ವಿಶ್ವವಿದ್ಯಾನಿಲಯದ(ಎಎಂವಿ) ಸಿಬ್ಬಂದಿ ಸಹಾಯದಿಂದ ಎಂಬಿಎ ಪೇಪರ್ ಲೀಕ್ ಮಾಡುವ ತಯಾರಿ ನಡೆಸಿದ್ದನು. ಪ್ರಶ್ನೆ ಪತ್ರಿಕೆ ತಂದು ಕೊಟ್ಟರೆ ವಿಶ್ವವಿದ್ಯಾಲಯದಲ್ಲಿ ಕೆಲಸ ಖಾಯಂಗೊಳಿಸುತ್ತೇನೆ ಎಂದು ಆಫರ್ ನೀಡಿದ್ದನು.

    ಪ್ರೇಯಸಿಗೆ ಪರೀಕ್ಷೆ ಮೊದಲು ಪ್ರಶ್ನೆ ಪತ್ರಿಕೆ ನೀಡುವುದಾಗಿ ಫಿರೋಜ್ ಭರವಸೆ ನೀಡಿದ್ದನಂತೆ. ಆದರೆ ಮೊದಲು ಎಎಂವಿ ಸಿಬ್ಬಂದಿ ನಕಲಿ ಪ್ರಶ್ನೆ ಪತ್ರಿಕೆ ನೀಡಿದ್ದ ಎನ್ನಲಾಗಿದೆ. ಬಳಿಕ ಇದು ಪ್ರೇಯಸಿಗೆ ತಿಳಿದು ಗಲಾಟೆ ಮಾಡಿದ್ದಾಳೆ. ಹೀಗಾಗಿ ಸ್ನೇಹಿತ ಹೈದರ್ ಜೊತೆ ಸೇರಿ ಫಿರೋಜ್ ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ಪುನಃ ಪ್ರಶ್ನೆ ಪತ್ರಿಕೆ ತೆರಲು ಹೇಳಿದ್ದಾನೆ. ಅಲ್ಲದೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಲು ವಾಟ್ಸಾಪ್ ಗ್ರೂಪ್ ಕೂಡ ಮಾಡಲಾಗಿತ್ತು.

    ಲೀಕ್ ಆದ ಒಂದು ಪ್ರಶ್ನೆ ಪತ್ರಿಕೆಗೆ 2 ಸಾವಿರ ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ ಇನ್ನೇನು ಪ್ರಶ್ನೆ ಪತ್ರಿಕೆಗೆ ಲೀಕ್ ಮಾಡುವಷ್ಟರಲ್ಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಎಎಂವಿ ಸಿಬ್ಬಂದಿ ಹಾಗೂ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಫಿರೋಜ್ ಮಾತ್ರ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದಾನೆ.