Tag: ಪ್ರೇಯಸಿ

  • 22 ವರ್ಷದ ಗೆಳತಿ, ಕ್ಯಾಬ್ ಚಾಲಕನಿಗೆ ಗುಂಡಿಕ್ಕಿದ ಬಾಡಿ ಬಿಲ್ಡರ್ ಅರೆಸ್ಟ್

    22 ವರ್ಷದ ಗೆಳತಿ, ಕ್ಯಾಬ್ ಚಾಲಕನಿಗೆ ಗುಂಡಿಕ್ಕಿದ ಬಾಡಿ ಬಿಲ್ಡರ್ ಅರೆಸ್ಟ್

    – ನಾಲ್ಕು ಬಾರಿ ಪ್ರೇಯಸಿ ತಲೆಗೆ ಬುಲೆಟ್ ಇಳಿಸಿದ್ದ

    ನವದೆಹಲಿ: ನಾಲ್ಕು ಬಾರಿ ಪ್ರೇಯಸಿಯ ತಲೆಗೆ ಗುಂಡಿಕ್ಕಿ ಕೊಂದು ಬಾಡಿಗೆ ಕಾರಿನಲ್ಲಿ ಪರಾರಿಯಾಗಿ ನಂತರ ಕಾರು ಚಾಲಕನನ್ನು ಶೂಟ್ ಮಾಡಿದ್ದ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಮತ್ತು ಜಿಮ್ ಒಂದರ ಮಾಲೀಕನಾಗಿದ್ದ ಹೇಮಂತ್ ಲಂಬಾ, 22 ವರ್ಷದ ತನ್ನ ಪ್ರೇಯಸಿಯನ್ನು ಡಿಸೆಂಬರ್ 7 ರಂದು ಹರ್ಯಾಣದ ರೇವಾರಿ ಎಂಬಲ್ಲಿ ತಲೆಗೆ ನಾಲ್ಕು ಬಾರಿ ಗುಂಡು ಹಾರಿಸಿ ಕೊಂದು ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿ ಬಾಡಿಗೆ ಕಾರಿನಲ್ಲಿ ಪರಾರಿಯಾಗಿದ್ದ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದ ರೇವಾರಿ ಜಿಲ್ಲೆಯ ಡಿಎಸ್‍ಪಿ ಜಮ್ಮಲ್ ಖಾನ್, ಕೊಲೆಯಾದ ಸಂತ್ರಸ್ತೆ ರಾಜಸ್ಥಾನದ ಮೂಲದವಳಾಗಿದ್ದು, ದೆಹಲಿಯ ರೋಹಿಣಿಯಲ್ಲಿ ಸಂಬಂಧಿಕರ ಮನೆಯಲ್ಲಿ ತಂದೆಯ ಜೊತೆ ವಾಸಿಸುತ್ತಿದ್ದಳು, ಆಕೆಯ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ಘಟನೆಯಾದ ನಂತರ ಪರಾರಿಯಾಗಿದ್ದ ಹೇಮಂತ್ ಲಂಬಾನ ವಿರುದ್ಧ ಕೊಲೆ ಪ್ರಕರಣದ ದಾಖಲಾಗಿತ್ತು ಎಂದು ಹೇಳಿದ್ದರು.

    ಸಂತ್ರಸ್ತೆಯನ್ನು ಕೊಲೆ ಮಾಡಿ ಬಾಡಿಗೆ ಕಾರಿನಲ್ಲಿ ಎಸ್ಕೇಪ್ ಆಗಿದ್ದ ಹೇಮಂತ್ ಲಂಬಾ ನಂತರ ಬಾಡಿಗೆ ಕಾರು ಚಾಲಕ ದೇವೇಂದ್ರನಿಗೆ ಗನ್ ತೋರಿಸಿ ಜೈಪುರಕ್ಕೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ. ಆದರೆ ಇದಕ್ಕೆ ಒಪ್ಪದ ಚಾಲಕ ದೇವೇಂದ್ರನನ್ನು ಸಹ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ನಂತರ ಆತನೇ ಕಾರನ್ನು ತೆಗೆದುಕೊಂಡು ಜೈಪುರಕ್ಕೆ ಹೋಗಿದ್ದಾನೆ.

    ಆರೋಪಿಯನ್ನು ಹಿಡಿದು ಕೊಟ್ಟ ಕಾರ್ ಡೀಲರ್
    ಕಾರ್ ಚಾಲಕನನ್ನು ಕೊಲೆ ಮಾಡಿ ಕಾರು ತೆಗೆದುಕೊಂಡು ಬಂದಿದ್ದ ಹೇಮಂತ್ ಲಂಬಾ ಜೈಪುರದಲ್ಲಿ ಸ್ಥಳೀಯ ಕಾರ್ ಡೀಲರ್ ಬಳಿ ಕಾರನ್ನು ಮಾರಲು ಹೋಗಿದ್ದಾನೆ. ಆದರೆ ಹೇಮಂತ್ ಲಂಬಾನ ನಡುವಳಿಕೆ ನೋಡಿ ಅನುಮಾನಗೊಂಡ ಕಾರು ವ್ಯಾಪಾರಿ ಅಲ್ಪೇಶ್ ಕಾರಿನ ಹಿಂಭಾಗದಲ್ಲಿ ಇದ್ದ ಫೋನ್ ನಂಬರ್ ಗೆ ಕರೆ ಮಾಡಿದ್ದಾರೆ. ಆಗ ಕರೆಯನ್ನು ಕಾರು ಚಾಲಕನ ಪತ್ನಿ ಸ್ವೀಕರಿಸಿದ್ದಾರೆ. ಇದರಿಂದ ಮತ್ತಷ್ಟು ಅನುಮಾನಗೊಂಡ ವ್ಯಾಪಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಹೇಮಂತ್ ನನ್ನು ಬಂಧಿಸಿದ್ದಾರೆ.

  • ಸೆಕ್ಸ್ ನಂತ್ರ 500 ರೂ. ಕೇಳಿದ ಪ್ರೇಯಸಿಯನ್ನೇ ಕೊಂದ

    ಸೆಕ್ಸ್ ನಂತ್ರ 500 ರೂ. ಕೇಳಿದ ಪ್ರೇಯಸಿಯನ್ನೇ ಕೊಂದ

    ರಾಯ್‍ಪುರ: ದೈಹಿಕ ಸಂಬಂಧ ಬೆಳೆಸಿದ ನಂತರ 500 ರೂ. ಕೇಳಿದ್ದಕ್ಕೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನೇ ಕೊಂದ ಘಟನೆ ಛತ್ತಿಸ್‍ಗಢದ ಕೊರ್ಬಾದಲ್ಲಿ ನಡದಿದೆ.

    ಚಂದ್ರವಿಜಯ್ ಕೊಲೆ ಮಾಡಿದ ಆರೋಪಿ. ಇಂದ್ರ ದೇವಿ ಭಾರದ್ವಾಜ್ (40) ಜೊತೆ ಆರೋಪಿ ಚಂದ್ರವಿಜಯ್ ಅಕ್ರಮ ಸಂಬಂಧ ಹೊಂದಿದ್ದನು. ಡಿಸೆಂಬರ್ 9ರ ರಾತ್ರಿ ಇಂದ್ರ ದೇವಿಯ ಶವ ಜಮೀನಿನಲ್ಲಿ ಪತ್ತೆಯಾಗಿತ್ತು. ಕೊಲೆಯನ್ನು ಅಪಘಾತವಾಗಿ ಬಿಂಬಸಲು ಚಂದ್ರವಿಜಯ್ ಕತ್ತು ಹಿಸುಕಿ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಇಂದ್ರ ಹಾಗೂ ಚಂದ್ರವಿಜಯ್ ಹಲವು ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದರು.

    ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ಮಹಿಳೆಯ ಶವ ಆಕೆಯ ಮನೆಯಿಂದ ಸುಮಾರು 70 ಮೀ. ದೂರದಲ್ಲಿರುವ ಜಮೀನಿನಲ್ಲಿ ಪತ್ತೆಯಾಗಿತ್ತು. ಮಹಿಳೆಯ ಮಗ ಮನೆಗೆ ಬಂದಾಗ ತಾಯಿ ಎಲ್ಲಿಯೂ ಕಾಣಿಸಲಿಲ್ಲ. ಆಗ ಆತ ತನ್ನ ತಾಯಿಯನ್ನು ಹುಡುಕಲು ಶುರು ಮಾಡಿದ್ದನು. ಈ ವೇಳೆ ಜಮೀನಿನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ತಕ್ಷಣ ಆತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದನು. ಆಗ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಪರಿಶೀಲನೆ ವೇಳೆ ಡಾಗ್ ಸ್ಕ್ವಾಡ್ ಚಂದ್ರವಿಜಯ್ ಮನೆಗೆ ತಲುಪಿತ್ತು. ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಾನು ಹಾಗೂ ಇಂದ್ರ ಹಲವು ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದೇವೆ. ಘಟನೆಯ ದಿನ ಇಂದ್ರ ನನ್ನನ್ನು ಜಮೀನಿಗೆ ಕರೆದಿದ್ದಳು. ಅಲ್ಲಿ ನಾವಿಬ್ಬರು ದೈಹಿಕ ಸಂಬಂಧ ಬೆಳೆಸಿದ್ದೆವು. ಬಳಿಕ ಆಕೆ ನನಗೆ 500 ರೂ. ಕೇಳಿದ್ದಳು. ಆದರೆ ನಾನು ಕೊಡಲು ನಿರಾಕರಿಸಿದೆ ಎಂದು ಆರೋಪಿ ಪೊಲೀಸರ ಬಳಿ ತಿಳಿಸಿದ್ದಾನೆ.

    ನಾನು ಹಣ ಕೊಡಲು ನಿರಾಕರಿಸಿದ್ದಕ್ಕೆ ಇಂದ್ರ ಜೋರಾಗಿ ಕಿರುಚಾಡಲು ಶುರು ಮಾಡಿದ್ದಳು. ಅಲ್ಲದೆ ನಾವಿಬ್ಬರು ಅಕ್ರಮ ಸಂಬಂಧ ಹೊಂದಿರುವ ವಿಷಯವನ್ನು ಪೋಷಕರಿಗೆ ತಿಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಆಕೆಯ ಕಿರುಚಾಟ ಕೇಳಿ ಕೋಪದಿಂದ ಕತ್ತು ಹಿಸುಕಿದೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದೆ ಎಂದು ಚಂದ್ರವಿಜಯ್ ಹೇಳಿದ್ದಾನೆ. ಸದ್ಯ ಪೊಲೀಸರು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಆರೋಪಿಯನ್ನು ಬಂಧಿಸಿದ್ದಾರೆ.

  • ಪ್ರೇಯಸಿ ಜೊತೆ ಮಜಾ ಮಾಡಲು ತಾಯಿಯ ಚಿನ್ನವನ್ನೇ ಕದ್ದ

    ಪ್ರೇಯಸಿ ಜೊತೆ ಮಜಾ ಮಾಡಲು ತಾಯಿಯ ಚಿನ್ನವನ್ನೇ ಕದ್ದ

    ಹೈದರಾಬಾದ್: ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ಮಜಾ ಮಾಡಲು ಮನೆಯಲ್ಲಿದ್ದ ತನ್ನ ತಾಯಿಯ ಚಿನ್ನಾಭರಣವನ್ನೇ ಕದ್ದ ಘಟನೆ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ಅರುಣ್ ಕುಮಾರ್ ಚಿನ್ನ ಕದ್ದ ಆರೋಪಿ. ಅರುಣ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ತನ್ನ ಪ್ರೀತಿಗಾಗಿ ಅವನು ಮನೆಯಲ್ಲಿ ಕದಿಯಲು ಶುರು ಮಾಡಿದ್ದನು. ಅಲ್ಲದೆ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ಕದಿಯುತ್ತಿದ್ದನು. ಮನೆಯಲ್ಲಿ ಕಳ್ಳತನ ಆಗುವುದನ್ನು ನೋಡಿ ಯುವಕನ ತಾಯಿ ಈ ಬಗ್ಗೆ ಸಂಜೀವ್ ರೆಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ, ಅರುಣ್ ಕುಮಾರ್ ಹಲವು ದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಯುವತಿಗೆ ಬೇಕಾದ ಅಗತ್ಯಗಳನ್ನು ಪೂರೈಸಲು ಅರುಣ್ ಕುಮಾರ್ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದನು. ಅಲ್ಲದೆ ಆಕೆಗೆ ಪ್ರತಿ ತಿಂಗಳು ಉಡುಗೊರೆ ನೀಡುತ್ತಿದ್ದನು. ಇದರ ಜೊತೆಗೆ ಆಕೆಯನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ.

    ತನ್ನ ಪ್ರೇಯಸಿಗಾಗಿ ಅರುಣ್ ಮನೆಯಲ್ಲಿ ಕಳ್ಳತನ ಮಾಡುವ ನಿರ್ಧಾರ ಮಾಡುತ್ತಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅರುಣ್ 50 ಸಾವಿರ ನಗದು ಹಾಗೂ 80 ಗ್ರಾಂ ಚಿನ್ನಾಭರಣವನ್ನು ಕದ್ದಿದ್ದಾನೆ. ಚಿನ್ನಾಭರಣ ಹಾಗೂ ಹಣ ಕಾಣಿಸದಿದ್ದಾಗ ಯುವಕನ ತಾಯಿ ಮೊದಲು ಮನೆಯಲ್ಲಿ ಹುಡುಕಾಟ ನಡೆಸಿದ್ದರು. ಬಳಿಕ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿದೆ ಎಂದು ಅರಿತ ಯುವಕನ ತಾಯಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅರುಣ್‍ನನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಆತ ಸರಿಯಾದ ಉತ್ತರ ನೀಡಲಿಲ್ಲ. ಹಾಗಾಗಿ ಪೊಲೀಸರು ಅರುಣ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಿದ್ದಾರೆ.

  • ಪ್ರೇಯಸಿಯನ್ನು ಭೇಟಿ ಮಾಡಲು ಪತ್ನಿಯನ್ನು ಮನೆಯಲ್ಲಿ ಕೂಡಿ ಹಾಕಿದ

    ಪ್ರೇಯಸಿಯನ್ನು ಭೇಟಿ ಮಾಡಲು ಪತ್ನಿಯನ್ನು ಮನೆಯಲ್ಲಿ ಕೂಡಿ ಹಾಕಿದ

    ಗಾಂಧಿನಗರ: ಪತಿಯೊಬ್ಬ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಪತ್ನಿಯನ್ನು ಮನೆಯಲ್ಲಿಯೇ ಕೂಡಿ ಹಾಕಿದ ಘಟನೆ ಗುಜರಾತಿನ ಅಹಮದಾಬಾದ್‍ನಲ್ಲಿ ನಡೆದಿದೆ.

    ಪತಿ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಪತ್ನಿಯನ್ನು ಮನೆಯಲ್ಲಿಯೇ ಕೂಡಿ ಹಾಕಿ ಹೋಗಿದ್ದು, ಪತ್ನಿ ಒಂದು ಗಂಟೆಗಳ ಕಾಲ ಕಿರುಚುತ್ತಿದ್ದಳು. ಬಳಿಕ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದಿದ್ದಾನೆ. ಈ ವೇಳೆ ಮಹಿಳೆ ಮನೆಯಿಂದ ಹೊರ ಬಂದಿದ್ದಾಳೆ.

    ಮಹಿಳೆ ಮನೆಯಿಂದ ಹೊರಬಂದ ತಕ್ಷಣ ಪ್ರೇಯಸಿಯ ಮನೆಗೆ ಹೋಗಿದ್ದಾಳೆ. ಈ ವೇಳೆ ಇಬ್ಬರು ಜೊತೆಯಲ್ಲಿ ಇರುವುದನ್ನು ನೋಡಿದ ಮಹಿಳೆ ಮಣಿನಗರ ಪೊಲೀಸ್ ಠಾಣೆಗೆ ಹೋಗಿ ಪತಿಯ ವಿರುದ್ಧ ದೂರು ನೀಡಲು ಹೋಗಿದ್ದಳು. ಬಳಿಕ ಪೊಲೀಸರು ಖಾದಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.

    ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಎಫ್‍ಐಆರ್ ನಲ್ಲಿ 16 ವರ್ಷದ ಹಿಂದೆ ಕುಟುಂಬಸ್ಥರ ಒಪ್ಪಿಗೆ ಮೆರಿಗೆ ನಾವಿಬ್ಬರು ಮದುವೆಯಾಗಿದ್ದೀವಿ. ಮದುವೆಯಾದ ನಂತರ ನಮ್ಮಿಬ್ಬರ ನಡುವೆ ಜಗಳವಾಗುತ್ತಿತ್ತು ಎಂದು ಉಲ್ಲೇಖಿಸಿದ್ದಾಳೆ.

    ಭಾನುವಾರ ಸಂಜೆ ನನ್ನ ಪತಿ ತನ್ನ ಪ್ರೇಯಸಿಯನ್ನು ಭೇಟಿಯಾಗಲು ರೆಡಿಯಾಗುತ್ತಿದ್ದರು. ಆಗ ಅವರು ತನ್ನ ಪ್ರೇಯಸಿಯನ್ನು ಭೇಟಿಯಾಗಲು ಹೋಗುತ್ತಿದ್ದಾರೆ ಎಂದು ನನಗೆ ತಿಳಿಯಿತು. ನನ್ನ ಪತಿ ಮೂರು ವರ್ಷಗಳಿಂದ ಮತ್ತೊಬ್ಬ ಮಹಿಳೆ ಜೊತೆ ಅನೈತಿಕ ಸಂಬಂಧದಲ್ಲಿ ಇದ್ದಾರೆ ಎಂದು ಮಹಿಳೆ ತಿಳಿಸಿದ್ದಾಳೆ.

  • ಪ್ರೇಯಸಿ, ಗೆಳೆಯನ ಜೊತೆ ಸೇರಿ ನಿರೂಪಕನಿಂದ ಪತ್ನಿಯ ಕೊಲೆ

    ಪ್ರೇಯಸಿ, ಗೆಳೆಯನ ಜೊತೆ ಸೇರಿ ನಿರೂಪಕನಿಂದ ಪತ್ನಿಯ ಕೊಲೆ

    ಲಕ್ನೋ: ನಿರೂಪಕನೊಬ್ಬ ತನ್ನ ಪ್ರೇಯಸಿ ಹಾಗೂ ಗೆಳೆಯನ ಜೊತೆ ಸೇರಿ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ.

    ದಿವ್ಯಾ (27) ಕೊಲೆಯಾದ ಮಹಿಳೆ. ದೆಹಲಿ ಮೂಲದ ನಿರೂಪಕ ಅಜಿತೇಶ್ ತನ್ನ ಪ್ರೇಯಸಿ ಹಾಗೂ ಸ್ನೇಹಿತನ ಜೊತೆ ಸೇರಿ ದಿವ್ಯಾಳನ್ನು ಕೊಲೆ ಮಾಡಿದ್ದಾನೆ. ಸೋಮವಾರ ದಿವ್ಯಾ ಇಟಾವಾದ ಕಟ್ರಾ ಬಾಲ್ ಸಿಂಗ್ ಏರಿಯಾದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.

    ಕೊಲೆಯಾದ ದಿನವೇ ದಿವ್ಯಾ ಮಾವ ಪ್ರಮೋದ್ ಮಿಶ್ರಾ, ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ದಳದ ಮೂಲಕ ಪೊಲೀಸರು ಈ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದರು. ತನಿಖೆ ವೇಳೆ ಅಜಿತೇಶ್ ತನ್ನ ಸ್ನೇಹಿತ ಅಖಿಲ್ ಕುಮಾರ್ ಸಿಂಗ್ ಹಾಗೂ ಭಾವನಾ ಆರ್ಯ ಜೊತೆ ಸೇರಿ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮೂವರು ಆರೋಪಿಗಳು ದೆಹಲಿಯಲ್ಲಿರುವ ನ್ಯೂಸ್ ಚಾನೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು.

    ಸೋಮವಾರ ಈ ಕೊಲೆ ನಡೆದಿದ್ದು, ಗುರುವಾರ ಪೊಲೀಸರು ಕೊಲೆ ಆರೋಪಿಗಳಾದ ಅಜಿತೇಶ್, ಭಾವನಾ ಹಾಗೂ ಅಖಿಲ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಸ್‍ಪಿ ಸಂತೋಷ್ ಕುಮಾರ್, ವಿಚಾರಣೆ ವೇಳೆ ಅಜಿತೇಶ್, ನನ್ನ ಹಾಗೂ ಭಾವನಾ ನಡುವೆ ಅನೈತಿಕ ಸಂಬಂಧ ಇದೆ. ನಮ್ಮಿಬ್ಬರ ವಿಷಯ ದಿವ್ಯಾಗೆ ತಿಳಿದು ಆಕೆ ದಿನ ನನ್ನ ಜೊತೆ ಜಗಳವಾಡುತ್ತಿದ್ದರು. ಹಾಗಾಗಿ ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಡೆದಿದ್ದೇನು?
    ಪ್ಲಾನ್ ಪ್ರಕಾರ ಅಕ್ಟೋಬರ್ 14ರಂದು ಅಖಿಲ್, ಅಜಿತೇಶ್ ಮನೆಗೆ ಆಗಮಿಸಿದ್ದಾನೆ. ಅಖಿಲ್ ಮೊದಲೇ ಪರಿಚಯವಿದ್ದ ಕಾರಣ ದಿವ್ಯಾ ಆತನನ್ನು ಮನೆಯೊಳಗೆ ಕರೆಸಿ ತನ್ನ ಮದುವೆ ಆಲ್ಬಂ ತೋರಿಸುತ್ತಿದ್ದಳು. ಈ ವೇಳೆ ಅಖಿಲ್ ಹೂ ಕುಂಡದಿಂದ ದಿವ್ಯಾ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡ ದಿವ್ಯಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ದಿವ್ಯಾ ಪ್ರಜ್ಞೆ ತಪ್ಪುತ್ತಿದ್ದಂತೆ ಅಖಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ.

  • ಪ್ರೇಯಸಿಯ ಪ್ರೀತಿ ಪರೀಕ್ಷೆ ಮಾಡಲು ಕಿಡ್ನಾಪ್ ಪ್ಲಾನ್ ಮಾಡಿ ಜೈಲು ಪಾಲಾದ

    ಪ್ರೇಯಸಿಯ ಪ್ರೀತಿ ಪರೀಕ್ಷೆ ಮಾಡಲು ಕಿಡ್ನಾಪ್ ಪ್ಲಾನ್ ಮಾಡಿ ಜೈಲು ಪಾಲಾದ

    ಗಾಂಧಿನಗರ: ಪ್ರೇಮಿಗಳಲ್ಲಿ ಒಬ್ಬರನೊಬ್ಬರು ಎಷ್ಟು ಪ್ರೀತಿ ಮಾಡುತ್ತಾರೆ ಎಂದು ತಿಳಿಯುವ ಕಾತುರವಿರುತ್ತದೆ. ಅದಕ್ಕೆ ಚಿತ್ರವಿಚಿತ್ರ ಉಪಾಯ ಮಾಡಿ ತಮ್ಮ ಲವರ್ ತಮ್ಮನ್ನು ಎಷ್ಟು ಪ್ರೀತಿ ಮಾಡ್ತಾರೆ ಎಂದು ತಿಳಿಯುತ್ತಾರೆ. ಹೀಗೆ ಪ್ರೇಯಸಿಯ ಪ್ರೀತಿ ಪರೀಕ್ಷೆ ಮಾಡಲು ಹುಚ್ಚು ಪ್ಲಾನ್ ಮಾಡಿದ ಪ್ರೇಮಿಯೋರ್ವ ಪೊಲೀಸರ ಅತಿಥಿಯಾಗಿದ್ದಾನೆ.

    ಗುಜರಾತಿನ ಕಚ್ ಜಿಲ್ಲೆಯ ಭುಜ್ ಪ್ರದೇಶದಲ್ಲಿ ಮೆಹುಲ್ ಜೋಶಿ(23) ಪ್ರೇಯಸಿ ಪ್ರೀತಿ ಪರೀಕ್ಷಿಸಲು ತನ್ನದೇ ಕಿಡ್ನಾಪ್ ನಾಟಕವಾಡಿ ಸಿಕ್ಕಿಬಿದ್ದಿದ್ದಾನೆ. ಜೋಶಿ ತನ್ನ ಪ್ರೇಯಸಿ ಇಶಾ ಪಚ್ಚೆಲ್(18) ತನ್ನನ್ನು ಎಷ್ಟು ಪ್ರೀತಿಸುತ್ತಾಳೆ ಎಂದು ತಿಳಿಯಲು ಕಿಡ್ನಾಪ್ ಪ್ಲಾನ್ ಮಾಡಿದ್ದನು. ಮಂಗಳವಾರ ಕೆಲಸಕ್ಕೆ ಹೋಗಿದ್ದ ಜೋಶಿ ಅಲ್ಲಿಂದ ತಾನು ನಾಪತ್ತೆಯಾಗಿದ್ದೇನೆ ಎನ್ನುವಂತೆ ಬಿಂಬಿಸಲು ಮನೆಗೆ ವಾಪಸ್ ಹೋಗಿರಲಿಲ್ಲ. ಹಾಗೆಯೇ ತನ್ನ ಮೊಬೈಲ್ ಸಿಮ್ ಬದಲಾಯಿಸಿ, ಕಿಡ್ನಾಪ್ ನಾಟಕವಾಡಲು ಆರಂಭಿಸಿದ್ದ. ಬೇರೆ ಸಿಮ್ ಉಪಯೋಗಿಸಿ, ಧ್ವನಿ ಬದಲಾವಣೆ ಆ್ಯಪ್ ಬಳಸಿ ಪ್ರೇಯಸಿಗೆ ಕರೆ ಮಾಡಿ ಬೆದರಿಸಿದ್ದ. ಇದನ್ನೂ ಓದಿ:ಪ್ರೇಯಸಿಯಂತೆ ನಟಿಸಿ ದರೋಡೆಕೋರರನ್ನು ಸೆರೆಹಿಡಿದ ಮಹಿಳಾ ಪೇದೆ

    ನಿನ್ನ ಪ್ರಿಯಕರನನ್ನು ಕಿಡ್ನಾಪ್ ಮಾಡಿದ್ದೇವೆ, ಆತನನ್ನು ಜೀವಂತವಾಗಿ ಬಿಡಬೇಕೆಂದರೆ 3 ಲಕ್ಷ ರೂಪಾಯಿ ತೆಗೆದುಕೊಂಡು ಗಾಂಧಿಧಾಮದ ಬಳಿ ಬಾ ಎಂದು ಕರೆ ಮಾಡಿದ್ದ. ಇದನ್ನು ನಂಬಿದ ಪ್ರೇಯಸಿ, ದಿಕ್ಕು ತೋಚದೆ ಪೊಲೀಸರಿಗೆ ಮಾಹಿತಿ ತಿಳಿಸಿದಳು. ಆಕೆಗೆ ಬಂದ ಕರೆಯನ್ನು ಪೊಲೀಸರು ಟ್ರ್ಯಾಕ್ ಮಾಡಿದಾಗ ಸ್ಥಳ ಪತ್ತೆಯಾಗಿ, ಅದರ ಆಧಾರದ ಮೇಲೆ ಪೊಲೀಸರು ಸ್ಥಳವನ್ನು ಹುಡುಕಿ ಹೊರಟಾಗ ನಿಜಾಂಶ ಹೊರಬಿದ್ದಿದೆ. ಜೋಶಿಯೇ ತನ್ನ ಕಿಡ್ನಾಪ್ ಪ್ಲಾನ್ ಮಾಡಿ ನಾಟಕವಾಡುತ್ತಿದ್ದನು ಎನ್ನುವುದು ಬಯಲಾಗಿದೆ.

    ಬುಧವಾರ ಗಾಂಧಿಧಾಮದ ಹತ್ತಿರದ ವಸತಿ ನಿಲಯದಲ್ಲಿ ಜೋಶಿ ವಾಸವಾಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನ್ನ ನಾಟಕದ ಹಿಂದಿನ ಉದ್ದೇಶವನ್ನು ಬಾಯ್ಬಿಟ್ಟಿದ್ದಾನೆ. ಪ್ರೇಯಸಿಯ ಪ್ರೀತಿ ಪರೀಕ್ಷೆ ಮಾಡಲು ಹೀಗೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

    ಸುಳ್ಳು ಮಾಹಿತಿ ನೀಡಿ ಸರ್ಕಾರಿ ಅಧಿಕಾರಿಗಳ ದಾರಿ ತಪ್ಪಿಸಿದ್ದಕ್ಕಾಗಿ ಜೋಶಿ ವಿರುದ್ಧ ಐಪಿಸಿ ಸೆಕ್ಷನ್ 182ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರೇಯಸಿಯಂತೆ ನಟಿಸಿ ದರೋಡೆಕೋರರನ್ನು ಸೆರೆಹಿಡಿದ ಮಹಿಳಾ ಪೇದೆ

    ಪ್ರೇಯಸಿಯಂತೆ ನಟಿಸಿ ದರೋಡೆಕೋರರನ್ನು ಸೆರೆಹಿಡಿದ ಮಹಿಳಾ ಪೇದೆ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಲವು ದಿನಗಳಿಂದ ಮೂರು ಮಂದಿ ದರೋಡೆಕೋರರ ತಂಡವೊಂದು ಪೊಲೀಸರಿಗೆ ತಲೆನೋವು ತಂದಿಟ್ಟಿತ್ತು. ಆದರೆ ಈ ಚಾಲಾಕಿ ದರೋಡೆಕೋರರನ್ನು ಮಹಿಳಾ ಪೊಲೀಸ್ ಪೇದೆ ಜಾಣತಣದಿಂದ ಸೆರೆಹಿಡಿದಿದ್ದಾರೆ.

    ಬಂಧಿತ ದರೋಡೆಕೋರರನ್ನು ಸೋಮ್‍ವೀರ್(23), ಮನೋಜ್(26) ಮತ್ತು ಪ್ರದೀಪ್(21) ಎಂದು ಗುರುತಿಸಲಾಗಿದೆ. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಚಾಲಾಕಿ ಖದೀಮರು ಖಾಕಿ ಪಡೆಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದರು. ಈ ತಂಡ ಹಲವು ದರೋಡೆ ಪ್ರಕರಣ ಮತ್ತು ಕಾರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಈ ಖತರ್ನಾಕ್ ತಂಡವನ್ನು ಬಂಧಿಸಲು ಪೊಲೀಸರು ಆ ತಂಡದ ಓರ್ವನ ಪ್ರೇಯಸಿಯ ಸಹಾಯ ಪಡೆದು ಬಲೆ ಬೀಸಿದ್ದರು. ಈ ಮೂಲಕ ಕೊನೆಗೂ ದರೋಡೆಕೋರರನ್ನು ಸೋಮವಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಅಕ್ಟೋಬರ್ ಮೊದಲ ವಾರದಲ್ಲಿ ಈ ಮೂವರು ಆರೋಪಿಗಳು ಪೀರಾಗರ್ಹಿಯಿಂದ ಮಂಡ್ಕಾ ಪ್ರದೇಶಕ್ಕೆ ಕ್ಯಾಬ್ ಬುಕ್ ಮಾಡಿಕೊಂಡು ಸಂಚರಿಸುತ್ತಿದ್ದರು. ಆದರೆ ಮಾರ್ಗ ಮಧ್ಯೆ ಕ್ಯಾಬ್ ಚಾಲಕನಿಗೆ ಹೆದರಿಸಿ, ಬಿಯರ್ ಬಾಟಲಿಯಿಂದ ಹೊಡೆದು, ಆತನನ್ನು ರಸ್ತೆ ಮಧ್ಯೆ ಬಿಟ್ಟು ಕಾರಿನೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ಕ್ಯಾಬ್ ಚಾಲಕ ಪೊಲೀಸರಿಗೆ ದೂರು ನೀಡಿದ್ದನು. ಅಲ್ಲದೆ ಅ. 10ರಂದು ಅದೇ ಕಾರಿನಲ್ಲಿ ಹರಿಯಾಣ ತಲುಪಿದ್ದ ಆರೋಪಿಗಳು, ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಎಸ್ಕೇಪ್ ಆಗಿದ್ದರು. ಈ ಬಗ್ಗೆ ಕೂಡ ದೆಹಲಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಇತ್ತ ಕ್ಯಾಬ್ ಚಾಲಕನಿಗೆ ಪೊಲೀಸ್ ಠಾಣೆಯಲ್ಲಿದ್ದ ಕಾರುಗಳ್ಳರ ಫೋಟೋವನ್ನು ತೋರಿಸಿದಾಗ ಸೋಮ್‍ವೀರ್ ನನ್ನು ಗುರುತಿಸಿದ್ದನು. ಆ ಬಳಿಕ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?
    ಕೆಲ ದಿನಗಳ ಹಿಂದೆ ಆರೋಪಿ ಸೋಮ್‍ವೀರ್ ನ ಫೋನ್ ಕರೆ ವಿವರಗಳನ್ನು ಪೊಲೀಸರು ಪಡೆದು, ಆತನ ಪ್ರೇಯಸಿಯ ಬಗ್ಗೆ ತಿಳಿದು ಆಕೆಯನ್ನು ಭೇಟಿ ಮಾಡಿದ್ದರು. ಬಳಿಕ ಆರೋಪಿಗಳನ್ನು ಬಂಧಿಸುವುದಕ್ಕೆ ಸಹಾಯ ಕೋರಿದ್ದರು. ಅದಕ್ಕೊಪ್ಪಿದ ಯುವತಿ ಪೊಲೀಸರಿಗೆ ಸಹಾಯ ಮಾಡಿದಳು. ಆಕೆಯ ಮೊಬೈಲ್ ಫೋನ್‍ನನ್ನು ಮಹಿಳಾ ಪೊಲೀಸ್ ಪೇದೆಗೆ ನೀಡಿದ್ದಳು. ಈ ಫೋನ್ ಮೂಲಕ ಪೇದೆ ಸೋಮ್‍ವೀರ್ ನನ್ನು ಸಂಪರ್ಕಿಸಿ ಆತನ ಪ್ರೇಯಸಿಯಂತೆ ಪ್ರೇಮದ ನಾಟಕವಾಡಿದ್ದರು.

    ಈ ಬಗ್ಗೆ ನಿಜಾಂಶ ಅರಿಯದ ಸೋಮ್‍ವಿರ್ ನಿಜವಾಗಿಯೂ ಪ್ರೇಯಸಿಯೇ ಸಂದೇಶ, ಕರೆ ಮಾಡುತ್ತಿದ್ದಾಳೆ ಅಂದುಕೊಂಡಿದ್ದ. ಹೀಗೆ ಕೆಲವು ದಿನಗಳು ಕಳೆದ ಬಳಿಕ ತನ್ನನ್ನು ಭೇಟಿಯಾಗುವಂತೆ ಆತನಿಗೆ ಹೇಳಿ ಕರೆಸಿಕೊಂಡರು. ದೆಹಲಿಗೆ ಬಂದರೆ ಪೊಲೀಸರು ಹಿಡಿಯುತ್ತಾರೆ ಎಂಬ ಭಯದ ನಡುವೆಯೂ ಪ್ರೇಯಸಿ ಕರೆದಳು ಎಂದು ಸೋಮ್‍ವೀರ್ ಭೇಟಿ ಮಾಡಲು ಬಂದು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

    ಆತನನ್ನು ವಿಚಾರಣೆ ನಡೆಸುತ್ತಿದ್ದಾಗ ಆರೋಪಿ ತನ್ನ ಜೊತೆ ದರೋಡೆ ಮಾಡುತ್ತಿದ್ದ ಮತ್ತಿಬ್ಬರು ಆರೋಪಿಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಬಳಿಕ ಅವರನ್ನು ಕೂಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಸುಟ್ಟು ತಾನು ಹೆಣವಾದ

    ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಸುಟ್ಟು ತಾನು ಹೆಣವಾದ

    ತಿರುವನಂತಪುರಂ: ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗಲು ಒಪ್ಪಲಿಲ್ಲ ಎಂದು ಮನನೊಂದ ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ ಸುಟ್ಟು, ಕೊನೆಗೆ ತಾನೂ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.

    ಕೇರಳದ ಕೊಚ್ಚಿಯ 17 ವರ್ಷದ ಹುಡುಗಿಯನ್ನು ಮಿಥುನ್(24) ಪ್ರೀತಿಸುತ್ತಿದ್ದನು. ಮೃತ ಹುಡುಗಿ ಹಾಗೂ ಮಿಥುನ್ ಇಬ್ಬರೂ ಸಂಬಂಧಿಗಳು. ಅಲ್ಲದೆ ಅವರಿಬ್ಬರ ಮನೆ ಅಕ್ಕಪಕ್ಕದಲ್ಲೇ ಇತ್ತು. ಆದ್ದರಿಂದ ಆಗಾಗ ಮಿಥುನ್ ಆಕೆಯ ಮನೆಗೆ ಹೋಗುತ್ತಿದ್ದನು. ಹೀಗೆ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಹೇಗೋ ಇಬ್ಬರು ಪ್ರೀತಿಸುತ್ತಿದ್ದೇವೆ ಮದುವೆ ಆಗಿಬಿಡೋಣ ಎಂದು ಮಿಧುನ್ ಪೀಡಿಸುತ್ತಿದ್ದನು. ಆದರೆ ಮದುವೆಗೆ ಹುಡುಗಿ ಒಪ್ಪಿರಲಿಲ್ಲ. ನಾನಿನ್ನೂ ಓದಬೇಕು ಎಂದು ಹೇಳಿ ಮಿಥುನ್‍ನಿಂದ ಅಂತರ ಕಾಯ್ದುಕೊಂಡಿದ್ದಳು. ಇದನ್ನೂ ಓದಿ:ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

    ಆದರೂ ಕೂಡ ಮಿಥುನ್ ಸದಾ ತನ್ನನ್ನು ಮದುವೆಯಾಗು ಎಂದು ಹುಡುಗಿಯನ್ನು ಪೀಡಿಸುತ್ತಲೇ ಇದ್ದನು. ಈ ಬಗ್ಗೆ ಹುಡುಗಿಯ ಮನೆಯವರಿಗೆ ತಿಳಿದು ಅ. 7ರಂದು ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಆ ಬಳಿಕ ಬುಧವಾರ ಪ್ರೇಯಸಿ ಟ್ಯೂಷನ್‍ಗೆ ಹೋಗಿದ್ದಾಗ ಮಿಥುನ್ ಆಕೆಯನ್ನು ಭೇಟಿಯಾಗಿದ್ದನು. ಈ ವೇಳೆ ಇಬ್ಬರ ನಡುವೆ ಜಗಳ ಕೂಡ ನಡೆದಿತ್ತು. ಬಳಿಕ ಇಬ್ಬರೂ ಅವರವರ ಮನೆಗೆ ತೆರಳಿದ್ದರು. ಇದನ್ನೂ ಓದಿ:ಯುವಕನ ಮುಂದೆ ಕೈ ಚಾಚಿ ಬೇಡಿಕೊಂಡೆ- ಪ್ರೇಮಿಯಿಂದ ಇರಿತಕ್ಕೊಳಗಾದ ಸ್ನೇಹಿತೆಯನ್ನು ನರ್ಸ್ ರಕ್ಷಿಸಿದ ಕಥೆ ಓದಿ

    ಮೊದಲೇ ಮದುವೆ ಆಗಲು ನಿರಾಕರಿಸಿದ್ದಕ್ಕೆ ಮಿಥುನ್‍ಗೆ ಹುಡುಗಿ ಮೇಲೆ ಕೋಪವಿತ್ತು. ಜೊತೆಗೆ ಆಕೆ ತನ್ನ ಬಳಿ ಜಗಳವಾಡಿದಕ್ಕೆ ಕೋಪ ಹೆಚ್ಚಾಗಿತ್ತು. ಜಗಳ ನಡೆದ ಬಳಿಕವೂ ರಾತ್ರಿ ಆಕೆಯನ್ನು ಭೇಟಿಯಾಗಲು ಮಿಥುನ್ ಪ್ರಯತ್ನಿಸಿದ್ದನು. ಆಗ ಆಕೆಯ ತಂದೆ ಆತನನ್ನು ತಡೆದು, ಬುದ್ಧಿ ಹೇಳಿದ್ದರು. ಅವರ ಮಾತು ಮಿಥುನ್ ಕೇಳದಿದ್ದಾಗ ಇಬ್ಬರ ನಡುವೆ ಗಲಾಟೆ ನಡೆದಿತ್ತು.

    ಒಂದೆಡೆ ತಾನು ಪ್ರೀತಿಸಿದವಳು ತನ್ನನ್ನು ಮದುವೆ ಆಗಲು ಒಪ್ಪಲಿಲ್ಲ, ಇನ್ನೊಂದೆಡೆ ಆಕೆಯಿಂದ ಇಷ್ಟೆಲ್ಲಾ ಗಲಾಟೆಯಾಯ್ತಲ್ಲ ಎನ್ನುವ ಕೋಪಕ್ಕೆ ಮಿಥುನ್, ಮನೆಯಿಂದ ಹೊರಗೆ ಬಂದು ಪೆಟ್ರೋಲ್ ತಂದು, ಪ್ರೇಯಸಿಯ ಮನೆಯಲ್ಲೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿಯಲ್ಲಿ ಸುಡುತ್ತಾ ನರಳುತ್ತಿದ್ದ ಮಗಳನ್ನು ರಕ್ಷಿಸಲು ಹೋದ ಸಂತ್ರಸ್ತೆಯ ತಂದೆಗೂ ಸುಟ್ಟ ಗಾಯಗಳಾಗಿದ್ದು, ತಗುಲಿದ್ದ ಬೆಂಕಿ ಆರಿಸಿ, ಅವರನ್ನು ತಕ್ಷಣ ಎರ್ನಾಕುಲಂನ ಮೆಡಿಕಲ್ ಕಾಲೇಜಿಗೆ ಸೇರಿಸುವಷ್ಟರಲ್ಲಿ ಇಬ್ಬರೂ ಪ್ರಾಣಬಿಟ್ಟಿದ್ದಾರೆ.

  • ಪ್ರೇಮಿಯ ಮರ್ಮಾಂಗ ಕತ್ತರಿಸಿದ ಪ್ರೇಯಸಿಗೆ 13 ವರ್ಷ ಜೈಲು ಶಿಕ್ಷೆ

    ಪ್ರೇಮಿಯ ಮರ್ಮಾಂಗ ಕತ್ತರಿಸಿದ ಪ್ರೇಯಸಿಗೆ 13 ವರ್ಷ ಜೈಲು ಶಿಕ್ಷೆ

    – ಸೆಕ್ಸ್ ವಿಡಿಯೋ ಸ್ನೇಹಿತರಿಗೆ ತೋರಿಸಿದಕ್ಕೆ ಕತ್ತರಿಸಿದ್ಳು
    – ಕೋರ್ಟ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಪ್ರೇಯಸಿ
    – ಕೊಲೆ ಮಾಡಿಲ್ಲ, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದೆ

    ಬ್ಯೂನಸ್‍ಐರಿಸ್: ತಮ್ಮಿಬ್ಬರ ಸೆಕ್ಸ್ ವಿಡಿಯೋವನ್ನು ಪ್ರೇಮಿ ತನ್ನ ಸ್ನೇಹಿತರಿಗೆ ತೋರಿಸಿದ ಎಂಬ ಸಿಟ್ಟಿಗೆ ಪ್ರೇಯಸಿ ಆತನ ಮರ್ಮಾಂಗವನ್ನೇ ಕತ್ತರಿಸಿದ್ದು, ಆಕೆಗೆ ನ್ಯಾಯಾಲಯ 13 ವರ್ಷದ ಜೈಲು ಶಿಕ್ಷೆ ವಿಧಿಸಿದೆ.

    ಅರ್ಜೆಂಟಿನಾದಲ್ಲಿ 2017ರಲ್ಲಿ ಕೃತ್ಯ ಎಸಗಿದಕ್ಕೆ ದೋಷಿಯಾಗಿರುವ ಬ್ರೆಂಡಾಗೆ(28) ಅರ್ಜೆಂಟಿನಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ:ಸೆಕ್ಸ್ ನಿರಾಕರಿಸಿದ್ದಕ್ಕೆ ಪುರುಷರಿಬ್ಬರ ಮರ್ಮಾಂಗ ಕತ್ತರಿಸಿದ ಸಲಿಂಗಕಾಮಿ

    ಆರ್ಕಿಟೆಕ್ಟ್ ಆಗಿರುವ ಬ್ರೆಂಡಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಅಬರಿಬ್ಬರ ನಡುವೆ ಲೈಂಗಿಕ ಸಂಪರ್ಕ ಕೂಡ ಇತ್ತು. ಆದರೆ ಅವರಿಬ್ಬರು ಸೆಕ್ಸ್ ಮಾಡಿರುವ ವಿಡಿಯೋವನ್ನು ಯುವಕ ಬ್ರೆಂಡಾಗೆ ತಿಳಿಯದಂತೆ ಸೆರೆಹಿಡಿದಿದ್ದನು. ಅಷ್ಟೇ ಅಲ್ಲದೆ ಈ ವಿಡಿಯೋವನ್ನು ತನ್ನ ಸ್ನೇಹಿತರಿಗೆ ತೋರಿಸಿದ್ದನು. ಇದನ್ನೂ ಓದಿ:ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

    ಈ ಬಗ್ಗೆ ಬ್ರೆಂಡಾಗೆ ತಿಳಿದು ಆಕೆ ಯುವಕನ ವಿರುದ್ಧ ಕೋಪಗೊಂಡಿದ್ದಳು. ಆದ್ದರಿಂದ ಆತನಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ ಬ್ರೆಂಡಾ ಒಂದು ದಿನ ಪ್ರಿಯಕರನನ್ನು ತನ್ನ ಮನೆಗೆ ಕರೆಸಿ ಈ ಕೃತ್ಯವೆಸೆಗಿದ್ದಳು. ನನ್ನನ್ನು ಮನೆಗೆ ಕರೆಸಿ, ಸರ್ಪ್ರೈಸ್​ ಕೊಡುವುದಾಗಿ ಹೇಳಿ ನನ್ನ ಕಣ್ಣಿಗೆ ಬಟ್ಟೆ ಕಟ್ಟಿದಳು. ಬಳಿಕ ನನ್ನ ಮರ್ಮಾಂಗ ಕತ್ತರಿಸಿದಳು ಎಂದು ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದನು.

    ಯುವಕನ ದೂರಿನ ಆಧಾರದ ಮೇಲೆ ಪೊಲೀಸರು ಬ್ರೆಂಡಾಳನ್ನು ಬಂಧಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಬ್ರೆಂಡಾ ತಪ್ಪನ್ನು ಒಪ್ಪಿಕೊಂಡಿದ್ದು, ನಾನು ಆತನನ್ನು ಸಾಯಿಸಲು ಆ ರೀತಿ ಮಾಡಿಲ್ಲ. ಆತನ ಮೇಲೆ ನನಗೆ ಪ್ರೀತಿಯಿದೆ. ಆದರೆ ಅವನು ತಪ್ಪು ಮಾಡಿದ್ದಾನೆ, ಅದಕ್ಕೆ ಬುದ್ಧಿ ಕಲಿಸಲು ಹೀಗೆ ಮಾಡಿದೆ. ಅಲ್ಲದೆ ಕೃತ್ಯವೆಸೆಗಿದ ಬಳಿಕ ಆತ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಾಗ ನಾನೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದು ಎಂದು ಹೇಳಿದ್ದಾಳೆ. ಇದನ್ನೂ ಓದಿ:ಪುರುಷರ ಮರ್ಮಾಂಗಕ್ಕೆ ಯುವತಿ ಬಾಯಿಟ್ಟು ಎಡಿಟ್ – ಸೈಕೋ ಸ್ಟೂಡೆಂಟ್ ವಿರುದ್ಧ ದೂರು

    ಈ ಸಂಬಂಧ ವಾದ, ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿಗೆ 13 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣ ನಡೆದ ಬಳಿಕ ಬ್ರೆಂಡಾಳನ್ನು ಅರ್ಜೆಂಟಿನಾ ಮಂದಿ ಈ ಹಿಂದೆ ಇದೇ ರೀತಿ ಪ್ರಿಯಕರ ಮರ್ಮಾಂಗ ಕತ್ತರಿಸಿದ ಆರೋಪಿ ಲೊರೆನಾಳಿಗೆ ಹೋಲಿಸುತ್ತಿದ್ದಾರೆ. ಇದನ್ನೂ ಓದಿ:ಸಂಸಾರ ನಡೆಸೋಣ ಬಾ ಎಂದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ

    1993ರಲ್ಲಿ ಲೊರೆನಾ ಮಲಗಿದ್ದ ತನ್ನ ಪತಿಯ ಮರ್ಮಾಂಗ ಕತ್ತರಿಸಿ ವಿಕೃತಿ ಮೆರೆದಿದ್ದಳು. ಪತಿ ಪ್ರತಿದಿನ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದನು, ಚಿತ್ರಹಿಂಸೆ ನೀಡುತ್ತಿದ್ದನು. ಆತನ ಹಿಂಸೆಗೆ ಬೇಸತ್ತು ಆತ ಮಲಗಿದ್ದಾಗ ಆತನ ಮರ್ಮಾಂಗ ಕತ್ತರಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಳು. ಈ ಪ್ರಕರಣ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಅಲ್ಲದೆ ಪ್ರಕರಣ ಬೆಳಕಿಗೆ ಬಂದಾಗ ಇಡೀ ಅರ್ಜೆಂಟಿನಾವನ್ನು ಬೆಚ್ಚಿಬೀಳಿಸಿತ್ತು.

  • ಉದ್ಯಮಿ ಹತ್ಯೆಗೆ ಮಾಜಿ ಪ್ರೇಯಸಿ ಸ್ಕೆಚ್- ಸೀಟ್ ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆಗೆ ಯತ್ನ

    ಉದ್ಯಮಿ ಹತ್ಯೆಗೆ ಮಾಜಿ ಪ್ರೇಯಸಿ ಸ್ಕೆಚ್- ಸೀಟ್ ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆಗೆ ಯತ್ನ

    ಬೆಂಗಳೂರು: ಆಸ್ತಿಗಾಗಿ ಪ್ರೀತಿ ಮಾಡಿದ ವ್ಯಕ್ತಿಯನ್ನೇ ಯುವತಿ ಕೊಲ್ಲಲು ಪ್ರಯತ್ನ ಮಾಡಿರುವ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ.

    ಪವಿತ್ರ ಕೊಲೆ ಮಾಡಲು ಯತ್ನಿಸಿದ ಯುವತಿ. ಪವಿತ್ರ ಆರ್ಕೆಸ್ಟ್ರಾ ಸಿಂಗರ್ ಆಗಿದ್ದು, ಕಳೆದ ಕೆಲ ವರ್ಷಗಳಿಂದ 2015 ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಫರ್ಧಿಸಿದ್ದ ಉದ್ಯಮಿ ಪ್ರಭಾಕರ್ ರೆಡ್ಡಿ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದರು. ಸೆಪ್ಟಂಬರ್ 20ರಂದು ಪವಿತ್ರ ಇದ್ದಕ್ಕಿದ್ದಂತೆ ಪ್ರಭಾಕರ್ ರೆಡ್ಡಿಯನ್ನು ಆರ್ ಆರ್ ನಗರದಲ್ಲಿ ಭೇಟಿ ಮಾಡಿ ಕಾರಲ್ಲಿ ನೈಸ್ ರಸ್ತೆಗೆ ಕರೆದುಕೊಂಡು ಹೋಗಿದ್ದಳು.

    ಕಾರಲ್ಲಿ ಹೋಗುತ್ತಿದ್ದ ವೇಳೆ ಪವಿತ್ರ ಆಸ್ತಿ ಬರೆದುಕೊಡುವಂತೆ ಒತ್ತಾಯಿಸಿ ಗಲಾಟೆ ಮಾಡಿದ್ದಾಳೆ. ಅಲ್ಲದೆ ಕಾರಿನ ಸೀಟ್‍ ಬೆಲ್ಟ್‌ನಿಂದ ಕತ್ತು ಬಿಗಿದು ಪ್ರಭಾಕರ್ ರನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ. ಪ್ರಭಾಕರ್ ರೆಡ್ಡಿ ಈಗಾಗಲೇ ಪವಿತ್ರಗೆ 2 ಕೆಜಿ ಚಿನ್ನ, 5 ಕೋಟಿ ಮೌಲ್ಯದ ಕಟ್ಟಡವನ್ನು ನೀಡಿದ್ದಾರೆ. ಆದರೂ ಎಲ್ಲಾ ಆಸ್ತಿ ಬರೆದುಕೊಡುವಂತೆ ಪವಿತ್ರ, ಪ್ರಭಾಕರ್ ಗೆ ಧಮ್ಕಿ ಹಾಕಿ ಕೊಲೆಗೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಪ್ರಭಾಕರ್ ರೆಡ್ಡಿ ಅವರು, ಕುಟುಂಬದಲ್ಲಿ ಗಲಾಟೆ ಅಷ್ಟೇ. ನೈಸ್ ರೋಡಿನಲ್ಲಿ ಬರುತ್ತಿರುವಾಗ ನಮ್ಮಿಬ್ಬರ ನಡುವೆ ಜಗಳವಾಯಿತು. ಈ ವೇಳೆ ಪವಿತ್ರ ಸೀಟ್ ಬೆಲ್ಟಿನಿಂದ ಕೊಲೆ ಮಾಡಲು ಯತ್ನಿಸಿದ್ದಳು. ಅಲ್ಲದೆ ನೀರಿನ ಬಾಟಲಿಯಿಂದ ನನ್ನನ್ನು ಹಲ್ಲೆ ಮಾಡಿದ್ದಳು. ಹಲ್ಲೆಯಿಂದ ನನ್ನ ಕಿವಿಯಲ್ಲಿ ರಕ್ತ ಬರುತ್ತಿದ್ದ ಕಾರಣ ನಾನು ಆಸ್ಪತ್ರೆಗೆ ಹೋಗಿ ಪೊಲೀಸ್ ಠಾಣೆಗೆ ಹೋದೆ. ಪವಿತ್ರ ನನಗೆ ಒಂದೂವರೆ ವರ್ಷದಿಂದ ಪರಿಚಯ. ನಾವಿಬ್ಬರು ಜೊತೆಯಲ್ಲಿಯೇ ಇದ್ದೆವು. ಈ ನಡುವೆ ಕುಟುಂಬದಲ್ಲಿ ಜಗಳವಾಗಿದೆ. ಪವಿತ್ರ ನನ್ನನ್ನು ಇಷ್ಟಪಡುತ್ತಿದ್ದಳು ಎಂದು ತಿಳಿಯಿತು. ಆಗ ಇಬ್ಬರು ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿ ಇದ್ದೆವು. ಆಕೆಗೆ ನಾನು ಮನೆ ಕೊಡಿಸಿದೆ. ನನಗೆ ಕಮಿಟ್ಸ್ ಮೆಂಟ್ ಇದೆ, ನನಗೆ ಏನಾದರೂ ಮಾಡಿಸು ಎಂದು ಬೇಡಿಕೆಯಿಟ್ಟಿದ್ದಳು ಎಂದು ಹೇಳಿದ್ದಾರೆ.

    ಪವಿತ್ರಗೆ ಈಗಾಗಲೇ ಮದುವೆಯಾಗಿ ಡಿವೋರ್ಸ್ ಆಗಿದ್ದು, ಆಕೆಗೆ 5 ವರ್ಷದ ಮಗು ಕೂಡ ಇದೆ. ಮೂಲತಃ ಚನ್ನಪಟಣ್ಣದವಳಾಗಿರುವ ಪವಿತ್ರ ಈಗ ಬೆಂಗಳೂರಿನ ಆರ್‍ಆರ್ ನಗರದಲ್ಲಿ ಇದ್ದಾರೆ. ನಾನು ಪೊಲೀಸರಿಗೆ ಅರೆಸ್ಟ್ ಮಾಡಿ ಎಂದು ಒತ್ತಡ ಹಾಕಲಿಲ್ಲ. ಇದಾದ ಬಳಿಕ ನಾನು ಮಾತನಾಡಲು ಆಕೆಯನ್ನು ಕರೆದೆ. ಆದರೆ ಅವರು ಒಪ್ಪಲಿಲ್ಲ. ಫೈನಾನ್ಸ್ ನಲ್ಲಿ ತೊಂದರೆ ಆದಾಗ ಪವಿತ್ರ ನನಗೆ ಸಹಾಯ ಮಾಡಿದ್ದಳು. ಕಷ್ಟದ ಸಂದರ್ಭದಲ್ಲಿ ನನ್ನ ಪರವಾಗಿ ಯಾರು ಬರದಿದ್ದಾಗ ಆಕೆ ನನ್ನ ಸಹಾಯಕ್ಕೆ ಬಂದಿದ್ದಳು. ಸಹಾಯ ಮಾಡಿದ್ದಾಳೆ ಎಂದು ಮಾನವೀಯತೆ ದೃಷ್ಟಿಯಿಂದ ನಾನು ಅವರಿಗೆ ತುಂಬಾ ಗೌರವ ನೀಡುತ್ತಿದ್ದೆ. ದೌರ್ಜನ್ಯ ಮಾಡಿದ್ದಕ್ಕೆ ನಾನು ದೂರು ನೀಡಿದೆ ಹೊರತು ಬೇರೆ ವಿಷಯಕ್ಕೆ ಅಲ್ಲ ಎಂದು ಪ್ರಭಾಕರ್ ತಿಳಿಸಿದ್ದಾರೆ.

    ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಶುರು ಮಾಡಿದ್ದಾರೆ.