Tag: ಪ್ರೇಯಸಿ

  • ಪ್ರೇಯಸಿ ಕೊಲೆಗೈದ ಪಾಗಲ್‌ ಪ್ರೇಮಿಗಾಗಿ ಹುಡುಕಾಟ; ತಮಿಳುನಾಡಿಗೆ ಎಸ್ಕೇಪ್‌ ಆಗಿರೋ ಶಂಕೆ

    ಪ್ರೇಯಸಿ ಕೊಲೆಗೈದ ಪಾಗಲ್‌ ಪ್ರೇಮಿಗಾಗಿ ಹುಡುಕಾಟ; ತಮಿಳುನಾಡಿಗೆ ಎಸ್ಕೇಪ್‌ ಆಗಿರೋ ಶಂಕೆ

    ಬೆಂಗಳೂರು: ಪ್ರೇಯಸಿಯನ್ನ‌ ಭೀಕರವಾಗಿ ಹತ್ಯೆ (Lover Killed) ಮಾಡಿ ತಲೆಮರಿಸಿಕೊಂಡಿರೋ ಹಂತಕನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

    ಯುವತಿ ಪ್ರೀತಿ‌ ನಿರಾಕಿಸಿದ್ದಕ್ಕೆ ಆರೋಪಿ ವಿಘ್ನೇಶ್ ಶ್ರೀರಾಂಪುರ ರೈಲ್ವೇ ನಿಲ್ದಾಣದ ಬಳಿ ಹತ್ಯೆ ಮಾಡಿ ತಾನು ಬಳಸುತ್ತಿದ್ದ ಮೊಬೈಲ್ ಎಸೆದು ಎಸ್ಕೇಪ್ ಆಗಿದ್ದಾನೆ. ನೆನ್ನೆ ಮಧ್ಯಾಹ್ನ ನಡೆದ ಕೊಲೆ ಪ್ರಕರಣದ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ (Srirampura Police Station) ಮೊಕದ್ದಮೆ ಸಂಖ್ಯೆ 144/2025, ಕಲಂ 103 ಕ್ಲಾಸ್-1 ಬಿಎನ್‌ಎಸ್‌ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ತನಿಖೆ (Investigation) ಕೈಗೊಂಡಿರುವ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ. ಇತ್ತ ಮೃತಳ ಶವವು ವಿಕ್ಟೋರಿಯಾ ಆಸ್ಪತ್ರೆಯಲ್ಲಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

    ತಮಿಳುನಾಡಿಗೆ ಎಸ್ಕೇಪ್‌ ಆಗಿದ್ದಾನಾ ಹಂತಕ?
    ಇನ್ನೂ ತಲೆ ಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪ್ರತ್ಯೇಕ ಎರಡು ತಂಡಗಳನ್ನ ರಚನೆ ಮಾಡಿ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿ ತಮಿಳುನಾಡಿಗೆ ಹೋಗಿ ತಲೆಮರಿಸಿಕೊಂಡಿರೋ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆ ತಮಿಳುನಾಡಿಗೂ ಒಂದು ತಂಡ ತೆರಳಿದ್ದು, ಶೋಧ ನಡೆಸುತ್ತಿದೆ.

  • ಪ್ರೇಯಸಿಯನ್ನೇ ಬರ್ಬರವಾಗಿ ಇರಿದು ಕೊಂದ ಪ್ರಿಯಕರ – ಶವವನ್ನು ಪೊದೆಗೆ ಎಸೆದು ಎಸ್ಕೇಪ್

    ಪ್ರೇಯಸಿಯನ್ನೇ ಬರ್ಬರವಾಗಿ ಇರಿದು ಕೊಂದ ಪ್ರಿಯಕರ – ಶವವನ್ನು ಪೊದೆಗೆ ಎಸೆದು ಎಸ್ಕೇಪ್

    ಮುಂಬೈ: 20ರ ಹರೆಯದ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ (Lover) ಬರ್ಬರವಾಗಿ ಇರಿದು ಕೊಂದು, ಆಕೆಯ ಶವವನ್ನು ರೈಲ್ವೆ ನಿಲ್ದಾಣದ (Railway Station) ಬಳಿಯ ಪೊದೆಯಲ್ಲಿ ಎಸೆದಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.

    ಘಟನೆಯ ಕುರಿತು ಉಪ ಪೊಲೀಸ್ ಆಯುಕ್ತ (ನವಿ ಮುಂಬೈ) ವಿವೇಕ್ ಪನ್ಸಾರೆ ಪ್ರತಿಕ್ರಿಯಿಸಿ, ಉರಾನ್ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ ಎಂದು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಆಕೆಯ ಮೃತದೇಹ ಅನೇಕ ಗಾಯದ ಗುರುತುಗಳು ಮತ್ತು ಇರಿತದ ಗಾಯಗಳನ್ನು ಒಳಗೊಂಡಿದೆ. ಇದು ಆಕೆಯನ್ನು ಅತ್ಯಂತ ಬರ್ಬರವಾಗಿ ಹತ್ಯೆಗೈಯಲಾಗಿದೆ ಎಂದು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಟಿಕೆಟ್, OTT ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್‌ ವಿಧಿಸಲು ತೀರ್ಮಾನ – ಫಿಲ್ಮ್‌ ಚೇಂಬರ್‌ ಅಸಮಾಧಾನ

    ಕೊಲೆಯಾದ ಯುವತಿಯನ್ನು ಯಶಶ್ರೀ ಶಿಂಧೆ ಎಂದು ಗುರುತಿಸಲಾಗಿದ್ದು, ಆಕೆ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಾಗಿತ್ತು. ಈಕೆ ಊರನ್ ನಿವಾಸಿಯಾಗಿದ್ದು, ಸುಮಾರು 25 ಕಿ.ಮೀ ದೂರದ ಬೇಲಾಪುರದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕಬಿನಿ, ಕೆಆರ್‌ಎಸ್‌ ಜಲಾಶಯಗಳು ಭರ್ತಿ – ಸೋಮವಾರ ಸಿದ್ದರಾಮಯ್ಯ, ಡಿಕೆಶಿ ಬಾಗಿನ ಅರ್ಪಣೆ

    ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೀತಿ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಯ ಬಳಿಕ ಪ್ರಿಯಕರ ಕೂಡ ನಾಪತ್ತೆಯಾಗಿದ್ದಾನೆ. ಈ ಕುರಿತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಅಲ್ಲದೇ ಆರೋಪಿ ಪ್ರಿಯಕರನ ಪತ್ತೆಗೆ ಐದು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ – ಹಿಂದೂ ಸಂಘಟನೆಗಳ ಒಕ್ಕೂಟದಿಂದ ಕಮಿಷನರ್‌ಗೆ ದೂರು

  • ಹಾಸನದಲ್ಲಿ ಕತ್ತು ಕೊಯ್ದು ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

    ಹಾಸನದಲ್ಲಿ ಕತ್ತು ಕೊಯ್ದು ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

    ಹಾಸನ: ಪ್ರೇಮ ವೈಫಲ್ಯದಿಂದ (Love Failure) ಪ್ರಿಯಕರ ತನ್ನ ಪ್ರೇಯಸಿಯ (Lover) ಕತ್ತು ಕುಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಹಾಸನ (Hassan) ತಾಲೂಕಿನ ಕುಂತಿಗುಡ್ಡದಲ್ಲಿ (Kuntigudda) ನಡೆದಿದೆ.

    ಸುಚಿತ್ರಾ (20) ಕೊಲೆಯಾದ ಯುವತಿ. ತೇಜಸ್ (23) ಕೊಲೆ ಮಾಡಿರುವ ಪ್ರಿಯಕರ. ಸುಚಿತ್ರಾ ಆಲೂರು ತಾಲೂಕಿನ ಕವಳಗೆರೆ ಗ್ರಾಮದವಳಾಗಿದ್ದು, ಮೊಸಳೆಹೊಸಳ್ಳಿ ಎಂಜಿನಿಯರ್ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ ಪದವಿ ಓದುತ್ತಿದ್ದಳು. ಮೂಲತಃ ಹಾಸನ ತಾಲೂಕಿನ ಶಂಕರನಹಳ್ಳಿ ಗ್ರಾಮದವನಾದ ತೇಜಸ್ ಸುಚಿತ್ರಾಳ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದಿದ್ದಾನೆ. ಇದನ್ನೂ ಓದಿ: ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ – ಮಗಳ ಮನೆಗೆ ತೆರಳುತ್ತಿದ್ದ ಮಹಿಳೆ ದಾರುಣ ಸಾವು

    ಪ್ರೀತಿಸಲು ನಿರಾಕರಿಸಿದ್ದಕ್ಕೆ ತೇಜಸ್ ಸುಚಿತ್ರಾಳನ್ನು ತನ್ನೊಂದಿಗೆ ಕುಂತಿಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಇಂದು ಮುಂಜಾನೆ ಯುವತಿಯನ್ನು ಒಂಟಿಯಾಗಿ ಕರೆದೊಯ್ದು ಬಳಿಕ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಆರೋಪಿ ತೇಜಸ್ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಹಳಿಯಲ್ಲಿ ಕಬ್ಬಿಣದ ರಾಡ್, ದೊಡ್ಡ ಮರದ ದಿಮ್ಮಿ – ಮೈಸೂರಿನಲ್ಲಿ ತಪ್ಪಿತು ಭಾರೀ ರೈಲು ದುರಂತ

    ತೇಜಸ್ ಕೂಡಾ ಮೊಸಳೆಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 10 ಕೋಟಿ ಆಸ್ತಿ ಆಸೆಗೆ ಪತ್ನಿಯನ್ನೇ ಕೊಂದು ಸಹಜ ಸಾವೆಂದು ನಾಟಕವಾಡಿ ಸಿಕ್ಕಿಬಿದ್ದ ಪತಿ

  • ಪ್ರೇಯಸಿಯನ್ನು ಕೊಂದು ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಭೂಪ ಅಂದರ್

    ಪ್ರೇಯಸಿಯನ್ನು ಕೊಂದು ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಭೂಪ ಅಂದರ್

    ಲಕ್ನೋ: ವ್ಯಕ್ತಿಯೋರ್ವ ತನ್ನ ಪ್ರಿಯತಮೆಯನ್ನು (Lover) ಕೊಂದು ಆಕೆಯ ಶವವನ್ನು ನಿರ್ಮಾಣ ಹಂತದಲ್ಲಿರುವ ತನ್ನ ಮನೆಯ ಟ್ಯಾಂಕ್‌ನಲ್ಲಿ (Tank) ಬಚ್ಚಿಟ್ಟ ಘಟನೆ ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆದಿದೆ.

    ರಾಜ್ ಕೇಸರ್ (35) ಕೊಲೆಯಾದ ಮಹಿಳೆ. ಯಮುನಾಪರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಹೇವಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿ ಅರವಿಂದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ 15 ದಿನಗಳ ಹಿಂದೆ ತನ್ನ ಪ್ರೇಯಸಿಯನ್ನು ಕೊಂದು ನಿರ್ಮಾಣ ಹಂತದಲ್ಲಿರುವ ತನ್ನ ಮನೆಯ ಟ್ಯಾಂಕ್‌ನಲ್ಲಿ ಆಕೆಯ ಶವವನ್ನು ಬಚ್ಚಿಟ್ಟಿದ್ದ ಎಂದು ಸ್ಟೇಷನ್ ಹೌಸ್ ಆಫೀಸರ್ (SHO) ತಿಳಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ ಮುಚ್ಚಿಟ್ಟಿದ್ದರು – ಡೆಡ್ಲಿ ಮರ್ಡರ್ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲು

    ಮೇ 30ರಂದು ಕೇಸರ್ ಅವರ ಕುಟುಂಬವು ಆಕೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಿತ್ತು. ಈ ಹಿನ್ನೆಲೆ ಆಕೆಯ ಫೋನ್ ಕರೆ ವಿವರಗಳ ಆಧಾರದ ಮೇಲೆ ಅರವಿಂದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ ಎಂದು ಎಸ್‌ಹೆಚ್‌ಒ ವಿಶ್ವಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಂಬೈ, ದೆಹಲಿಯಷ್ಟೇ ಅಲ್ಲ ಬೆಂಗ್ಳೂರಲ್ಲೂ ಹೆಚ್ಚಾಗ್ತಿದೆ ಲಿವಿಂಗ್ ರಿಲೇಷನ್ ಕೊಲೆ ಕೇಸ್

    ಆರೋಪಿಯ ಮನೆಯಿಂದ ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರೈಲು ದುರಂತದ ಬಳಿಕ ಒಡಿಶಾದಲ್ಲಿ ಒಂದಿಲ್ಲೊಂದು ಅವಘಡ – ರೈಲು ಬೋಗಿಯಲ್ಲಿ ಆಕಸ್ಮಿಕ ಬೆಂಕಿ

  • ಮದುವೆಯಾಗಲು ಪ್ರೇಯಸಿ ನಿರಾಕರಿಸಿದ್ದಕ್ಕೆ ಮನನೊಂದು ಲೈವ್‌ ವೀಡಿಯೋ ಮಾಡಿ ಯುವಕ ಆತ್ಮಹತ್ಯೆ

    ಮದುವೆಯಾಗಲು ಪ್ರೇಯಸಿ ನಿರಾಕರಿಸಿದ್ದಕ್ಕೆ ಮನನೊಂದು ಲೈವ್‌ ವೀಡಿಯೋ ಮಾಡಿ ಯುವಕ ಆತ್ಮಹತ್ಯೆ

    ದಿಸ್ಪುರ: ಪ್ರೇಯಸಿ ಮದುವೆಯಾಗಲು ನಿರಾಕಸಿದ್ದಕ್ಕೆ ಮನನೊಂದು ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಲೈವ್‌ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸ್ಸಾಂನ (Assam) ಗುವಾಹಟಿಯಲ್ಲಿ ನಡೆದಿದೆ.

    ಜಯದೀಪ್‌ ರಾಯ್‌ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ತನ್ನ ಕುಟುಂಬದವರ ಒತ್ತಡದಿಂದಾಗಿ ನನ್ನ ಗೆಳತಿ ನನ್ನನ್ನು ಮದುವೆಯಾಗಲು ನಿರಾಕರಿಸಿದಳು ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನನ್ನ ಮಗನ ಸಾವಿಗೆ ಯುವತಿಯ ಮನೆಯವರೇ ಕಾರಣ ಎಂದು ಯುವಕನ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: 3ನೇ ಮದುವೆಯಾದ್ರೂ 2ನೇ ಗಂಡನೊಂದಿಗೆ ಸಂಬಂಧ- ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ ಮೂರನೇ ಪತಿ

    ಜಯದೀಪ್‌ ರಾಯ್ ಸಿಲ್ಚಾರ್‌ನಲ್ಲಿರುವ ತನ್ನ ಬಾಡಿಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಫೇಸ್‌ಬುಕ್ ಲೈವ್‌ನಲ್ಲಿ, “ನಾನು ಮದುವೆಯ ಪ್ರಸ್ತಾಪವನ್ನು ಕಳುಹಿಸಿದ್ದೆ. ಆದರೆ ಅವಳು ನಿರಾಕರಿಸಿದಳು. ಗೆಳತಿಯ ಚಿಕ್ಕಪ್ಪ ಕೊಲೆ ಬೆದರಿಕೆ ಹಾಕಿದ್ದ. ಅವಳು ನನ್ನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ನಾನು ಇಹಲೋಕ ತ್ಯಜಿಸುತ್ತೇನೆ” ಎಂದು ಯುವಕ ಹೇಳಿಕೊಂಡಿದ್ದಾನೆ.

    “ನನ್ನ ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಸಹೋದರಿ, ಅಣ್ಣ ಮತ್ತು ಸೋದರ ಮಾವನಿಗೆ ಕ್ಷಮಿಸಿ ಎಂದು ಕೇಳಿಕೊಳ್ಳುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಆದರೆ ನಾನು ನನ್ನ ಗೆಳತಿಯನ್ನು ಹೆಚ್ಚು ಪ್ರೀತಿಸುತ್ತೇನೆ. ಅವಳಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ” ಎಂದು ವೀಡಿಯೋದಲ್ಲಿ ಮಾತನಾಡಿದ್ದಾನೆ. ಇದನ್ನೂ ಓದಿ: ಜೈ ಶ್ರೀ ರಾಮ್ ಎನ್ನಲು ನಿರಾಕರಿಸಿದ 10 ವರ್ಷದ ಬಾಲಕನಿಗೆ ಥಳಿತ

    ಕುಟುಂಬದವರಿಂದ ನಮಗೆ ಇನ್ನೂ ಯಾವುದೇ ಔಪಚಾರಿಕ ದೂರು ಬಂದಿಲ್ಲ. ಆದರೆ ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ನುಮಲ್ ಮಹಂತ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೇಯಸಿಯ ಶವವನ್ನು ಕಬ್ಬಿನ ಗದ್ದೆಯಲ್ಲಿ ಹೂತಾಕಿದ ಪ್ರಿಯಕರ – 15 ದಿನದ ಬಳಿಕ ಪ್ರಕರಣ ಬೆಳಕಿಗೆ

    ಪ್ರೇಯಸಿಯ ಶವವನ್ನು ಕಬ್ಬಿನ ಗದ್ದೆಯಲ್ಲಿ ಹೂತಾಕಿದ ಪ್ರಿಯಕರ – 15 ದಿನದ ಬಳಿಕ ಪ್ರಕರಣ ಬೆಳಕಿಗೆ

    ಹಾಸನ: ಪ್ರೇಯಸಿಯ (Girlfriend) ಶವವನ್ನು ಯಾರಿಗೂ ತಿಳಿಯದಂತೆ ಪ್ರೀಯಕರನೇ ಕಬ್ಬಿನ ಗದ್ದೆಯಲ್ಲಿ (Sugarcane Field) ಹೂತು ಹಾಕಿರುವ (Buried) ಘಟನೆ ಹೊಳೆನರಸೀಪುರ ತಾಲೂಕಿನ, ಪಾರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕಾವ್ಯ (25) ಮೃತಪಟ್ಟ ಯುವತಿಯಾಗಿದ್ದು, ಆಕೆಯನ್ನು ಕೊಲೆ ಮಾಡಿ ಹೂತು ಹಾಕಿದ್ದಾನೆ ಎಂದು ಪ್ರಿಯಕರ ಅವಿನಾಶ್ ವಿರುದ್ಧ ಕಾವ್ಯ ಪೋಷಕರು ಆರೋಪಿಸಿದ್ದಾರೆ.

    ಅರಕಲಗೂಡು ತಾಲೂಕಿನ, ಮುದ್ಲಾಪುರ ಗ್ರಾಮದ ಕಲ್ಪನಾ ಅವರ ಪುತ್ರಿ ಕಾವ್ಯ ಒಂದುವರೆ ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದಳು. ನಂತರ ದೊಡ್ಡಮ್ಮನ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡಿದ್ದಳು. ಬಿಬಿಎಂ ಓದಿದ್ದ ಕಾವ್ಯ ಅಕ್ಷಯ್‌ನನ್ನು ಪ್ರೀತಿಸಿ ವಿವಾಹವಾಗಿದ್ದಳು. ಈ ವಿಷಯವನ್ನು ತಾಯಿಯ ಬಳಿವೂ ಹೇಳಿರಲಿಲ್ಲ. ಮದುವೆಯಾದ ಕೆಲವೇ ತಿಂಗಳಲ್ಲಿ ಸಂಸಾರದಲ್ಲಿ ಹೊಂದಾಣಿಕೆ ಬಾರದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿ ಅಕ್ಷಯ್ ಜೊತೆ ವಿವಾಹ ಸಂಬಂಧ ಮುರಿದುಕೊಂಡಿದ್ದಳು. ಈ ವಿಚಾರವನ್ನು ಕೂಡ ತನ್ನ ತಾಯಿಯಿಂದ ಮುಚ್ಚಿಟ್ಟಿದ್ದಳು. ನಂತರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು.

    ಬೆಂಗಳೂರಿನಲ್ಲಿ ಕೆಲ ತಿಂಗಳುಗಳ ಕಾಲ ಕೆಲಸ ಮಾಡಿದ ಕಾವ್ಯ ನಂತರ ಹಾಸನಕ್ಕೆ ವಾಪಾಸಾಗಿದ್ದಳು. ಬಳಿಕ ಹೊಳೆನರಸೀಪುರ ತಾಲೂಕಿನ, ಪಾರಸನಹಳ್ಳಿ ಗ್ರಾಮದ ಅವಿನಾಶ್‌ನನ್ನು ಪ್ರೀತಿಸುತ್ತಿದ್ದಳು. ಕಳೆದ 2 ವರ್ಷಗಳಿಂದ ಅವಿನಾಶ್ ಮನೆಯಲ್ಲಿಯೇ ವಾಸವಿದ್ದ ಕಾವ್ಯ ತಾಯಿಯ ಬಳಿ ಬೆಂಗಳೂರಿನಲ್ಲೇ ಇರುವುದಾಗಿ ಹೇಳಿದ್ದಳು.

    ಕಾವ್ಯ ಕಳೆದ 1 ತಿಂಗಳಿನಿಂದ ತಾಯಿಗೆ ಫೋನ್ ಮಾಡದೇ ವಾಯ್ಸ್ ಮೆಸೇಜ್ ಕಳುಹಿಸುತ್ತಿದ್ದಳು. ಮೊಬೈಲ್, ಲ್ಯಾಪ್‌ಟ್ಯಾಪ್ ತೆಗೆದುಕೊಳ್ಳಬೇಕೆಂದು 25 ಸಾವಿರ ಹಣವನ್ನು ಹಾಕಿಸಿಕೊಂಡಿದ್ದಳು. ಕಳೆದ 20 ದಿನಗಳಿಂದ ಕಾವ್ಯ ತನ್ನ ತಾಯಿಗೆ ಫೋನ್ ಮಾಡಿರಲಿಲ್ಲ. ಅವಳ ಫೋನ್ ಕೂಡಾ ಸ್ವಿಚ್ ಆಫ್ ಆಗಿತ್ತು. ಇದರಿಂದ ಕಾವ್ಯಳ ತಾಯಿ ಆತಂಕಗೊಂಡಿದ್ದರು. ನಂತರ ಕಲ್ಪನಾ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಫೋನ್ ಮಾಡಿ, ನಿಮ್ಮ ಮಗಳನ್ನು ಹೂತು ಹಾಕಿದ್ದಾರೆ ಎಂದು ಗ್ರಾಮದಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು.

    ಇದಾದ ಬಳಿಕ ಮಗಳು ಕಾಣೆಯಾಗಿರುವ ಬಗ್ಗೆ ಕಲ್ಪನಾ ಹೊಳೆನರಸೀಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವಿನಾಶ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕಾವ್ಯಳ ಶವವನ್ನು ಕಬ್ಬಿನಗದ್ದೆಯಲ್ಲಿ ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಅವಿನಾಶ್ ಹಾಗೂ ಆತನ ಪೋಷಕರೇ ನನ್ನ ಮಗಳನ್ನು ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂದು ಕಲ್ಪನಾ ಆರೋಪಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ 13ರ ಬಾಲಕಿ ಗರ್ಭಿಣಿ – ಅತ್ಯಾಚಾರ ಎಸಗಿದ್ದ ಮೂವರು ಅರೆಸ್ಟ್

    ನವೆಂಬರ್ 25 ರಂದು ಕಾವ್ಯಳ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ಪೊಲೀಸರು ಅವಿನಾಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳೆದ 18 ದಿನಗಳ ಹಿಂದೆ ರಾತ್ರಿ 12 ಗಂಟೆ ವೇಳೆಗೆ ಕಾವ್ಯಳ ಶವವನ್ನು ಹೊತ್ತೊಯ್ದು ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿರುವುದಾಗಿ ಆರೋಪಿ ತಿಳಿಸಿದ್ದಾನೆ.

    ಕಾವ್ಯ ಶವವನ್ನು ಹೂತು ಹಾಕಿದ್ದ ಜಾಗವನ್ನು ಅವಿನಾಶ್ ತೋರಿಸಿದ್ದಾನೆ. ತಹಶೀಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಕಾವ್ಯಳದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದುಬರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ತಂದೆಯನ್ನ ಕೊಂದು 20 ತುಂಡು ಮಾಡಿ ಕೊಳವೆ ಬಾವಿಗೆ ಬಿಸಾಡಿದ ಪಾಪಿ ಮಗ

    Live Tv
    [brid partner=56869869 player=32851 video=960834 autoplay=true]

  • ಮೊದಲ ಗಂಡ ಸಾಯ್ತಾನೆ – ಜ್ಯೋತಿಷಿ ಮಾತು ನಂಬಿ ಪ್ರಿಯಕರನಿಗೆ ವಿಷ ಕೊಟ್ಟು ಸಾಯಿಸಿದ್ಲು

    ಮೊದಲ ಗಂಡ ಸಾಯ್ತಾನೆ – ಜ್ಯೋತಿಷಿ ಮಾತು ನಂಬಿ ಪ್ರಿಯಕರನಿಗೆ ವಿಷ ಕೊಟ್ಟು ಸಾಯಿಸಿದ್ಲು

    ತಿರುವನಂತಪುರಂ: ಮೊದಲನೇ ಗಂಡ ಸಾಯುತ್ತಾನೆ ಎಂಬ ಜ್ಯೋತಿಷಿ ಮಾತು ಕೇಳಿ ಪ್ರೇಯಸಿಯೇ ಪ್ರಿಯಕರನಿಗೆ ವಿಷಪ್ರಾಶನ ನೀಡಿ ಹತ್ಯೆಗೈದಿರುವ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿ (Thiruvananthapuram ) ನಡೆದಿದೆ.

    ಮೃತದುರ್ದೈವಿಯನ್ನು ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ (23) ಎಂದು ಗುರುತಿಸಲಾಗಿದ್ದು, ಅಕ್ಟೋಬರ್ 25ರಂದು ಈತ ಮೃತಪಟ್ಟಿದ್ದಾನೆ. ಅಕ್ಟೋಬರ್ 31ರಂದು ಎಂಟು ಗಂಟೆಗಳ ಕಾಲ ನಡೆದ ವಿಚಾರಣೆ ಬಳಿಕ ಪ್ರೇಯಸಿಯೇ ತನ್ನ ಪ್ರಿಯಕರನನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ- ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್!

    ಆರೋಪಿಯನ್ನು ಗ್ರೀಷ್ಮಾ ಎಂದು ಗುರುತಿಸಲಾಗಿದ್ದು, ಲವ್ ಬ್ರೇಕ್ ಅಪ್ ಮಾಡಿಕೊಳ್ಳುವುದಕ್ಕಾಗಿ ಶರೋನ್ ರಾಜ್ ಅನ್ನು ಕೊಂದಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ. ಕೊಲೆ ಮಾಡಲು ಮೊದಲೇ ಪ್ರೀ ಪ್ಲಾನ್ ಮಾಡಿದ್ದ ಗ್ರೀಷ್ಮಾ ಅಕ್ಟೋಬರ್ 14 ರಂದು ಶರೋನ್ ರಾಜ್ ಅನ್ನು ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಕಷಾಯದೊಂದಿಗೆ ಕೀಟನಾಶಕವನ್ನು ಬೆರೆಸಿ ಕುಡಿಸಿದ್ದಾಳೆ. ಇದಾದ ಬಳಿಕ ಪ್ರಿಯಕರ ವಾಂತಿ ಮಾಡಿಕೊಳ್ಳಲು ಆರಂಭಿಸಿ, ಬಳಿಕ ಸ್ನೇಹಿತನೊಂದಿಗೆ ತೆರಳಿದನು. ಇದನ್ನೂ ಓದಿ: ಸಿವಿಲ್ ಡಿಪ್ಲೊಮಾ ಎಂಜಿನಿಯರಿಂಗ್ ರಾಜ್ಯಕ್ಕೆ ಪ್ರಥಮ ಬಂದ 70ರ ವೃದ್ಧ

    ಗ್ರೀಷ್ಮಾ ಮತ್ತು ಶರೋನ್ ಒಂದು ವರ್ಷದಿಂದ ರಿಲೇಶನ್ ಶಿಪ್‍ನಲ್ಲಿದ್ದರು. ಅಲ್ಲದೇ ಮನೆಯವರು ಗ್ರೀಷ್ಮಾಗೆ ಬೇರೆಯವರೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಫೆಬ್ರವರಿಯಿಂದ ಗ್ರೀಷ್ಮಾ ಹಾಗೂ ಶರೋನ್ ನಡುವೆ ಕೆಲವು ಮನಸ್ತಾಪಗಳು ಪ್ರಾರಂಭವಾಯಿತು. ಹೀಗಿದ್ದರೂ ಇಬ್ಬರೂ ರಿಲೇಶನ್ ಶಿಪ್ ಮಂದುವರೆಸಿದರು. ಆದರೆ ಇತ್ತೀಚೆಗೆ ಇವರಿಬ್ಬರ ನಡುವೆ ಮನಸ್ತಾಪ ಹೆಚ್ಚಾಗಿದ್ದರಿಂದ ಶರೋನ್ ಅನ್ನು ಬಿಡುವ ಸಲುವಾಗಿ, ವಿಷ ನೀಡಿ ಕೊಲ್ಲಲು ನಿರ್ಧರಿಸಿದಳು. ಮೊದಲಿಗೆ ಸಮಾಧಾನದಿಂದ ಮೃದು ಸ್ವಭಾವದಿಂದ ಬ್ರೇಕ್ ಅಪ್ ಮಾಡಿಕೊಳ್ಳೋಣ ಎಂದು ತಿಳಿಸಿದಳು. ಆದರೆ ಇದಕ್ಕೆ ಶರೋನ್ ರಾಜ್ ನಿರಾಕರಿಸಿದ್ದಾನೆ. ಅಲ್ಲದೇ ಜ್ಯೋತಿಷಿ ಒಬ್ಬರು ಗ್ರೀಷ್ಮಾ ಜಾತಕದ ಪ್ರಕಾರ, ಆಕೆಯ ಮೊದಲ ಪತಿ ಸಾಯುತ್ತಾನೆ ಎಂದು ಹೇಳಿದ್ದರು. ಇದರಿಂದ ಭಯಗೊಂಡು ಆತನೊಂದಿಗೆ ಬ್ರೇಕ್ ಮಾಡಿಕೊಳ್ಳಲು ಪ್ರಯತ್ನಿಸಿದಳು.

    ಶರೋನ್‍ಗೆ ಏನು ನೀಡಿದ್ದಾಳೆ ಎಂದು ತಿಳಿದುಕೊಳ್ಳಲು ಆತನ ಸಹೋದರ ಗ್ರೀಷ್ಮಾಗೆ ನಿರಂತರ ಕರೆ ಮಾಡುತ್ತಿದ್ದನು. ಆದರೆ ಭಯದಿಂದ ಏನನ್ನೂ ಕೂಡ ಆಕೆ ಹೇಳಿಕೊಳ್ಳಲಿಲ್ಲ. ಒಂದು ವೇಳೆ ಸತ್ಯ ತಿಳಿಸಿದ್ದರೆ ಆತನನ್ನು ಉಳಿಸಬಹುದಾಗಿತ್ತು. ಅಕ್ಟೋಬರ್ 25 ರಂದು ಶರೋನ್ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು. ಆತನ ಸಾವಿಗೆ ಪ್ರೇಯಸಿಯೇ ಕಾರಣ ಎಂದು ಶರೋನ್ ಕುಟುಂಬಸ್ಥರು ಆರೋಪಿಸಿದ್ದಾರೆ.

    ಈ ಪ್ರಕರಣ ಸಂಬಂಧ ಅಕ್ಟೋಬರ್ 20 ರಂದು ಶರೋನ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ತಾನೂ ಯಾರ ಮೇಲೂ ಅನುಮಾನ ಹೊಂದಿಲ್ಲ ಎಂದು ತಿಳಿಸಿ ಕೊನೆಯುಸಿರೆಳೆದಿದ್ದಾನೆ. ಇದೀಗ 8 ಗಂಟೆಗಳ ವಿಚಾರಣೆಯ ಬಳಿಕ ತಪ್ಪೊಪ್ಪಿಕೊಂಡ ಗ್ರೀಷ್ಮಾಳನ್ನು ತಿರುವನಂತಪುರಂನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೇಯಸಿ ಜೊತೆ ಗಂಡನ ಫೋಟೋ ನೋಡಿ ನವವಿವಾಹಿತೆ ಆತ್ಮಹತ್ಯೆ

    ಪ್ರೇಯಸಿ ಜೊತೆ ಗಂಡನ ಫೋಟೋ ನೋಡಿ ನವವಿವಾಹಿತೆ ಆತ್ಮಹತ್ಯೆ

    -ಹೆಂಡತಿಯನ್ನು ತವರು ಮನೆಯಲ್ಲಿ ಬಿಟ್ಟು ಪ್ರೇಯಸಿ ಜೊತೆ ಗಂಡನ ಪ್ರವಾಸ?
    -ಮೋನಿಕಾನೇ ಬೇರೊಬ್ಬನ್ನ ಪ್ರೀತಿಸ್ತಿದ್ಳು ಅಂತ ಗಂಡನ ಕಡೆಯವರ ಆರೋಪ

    ಚಿಕ್ಕಬಳ್ಳಾಪುರ: ತವರು ಮನೆಯಲ್ಲೇ ತನ್ನ ಸಾವಿಗೆ ಗಂಡನೇ ಕಾರಣ ಅಂತ ಡೆತ್ ನೋಟ್ ಬರೆದು ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕು ಹೆಣ್ಣೂರು ಕದಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ದೇವಮ್ಮ-ಮುನಿರಾಜು ದಂಪತಿ ಹಿರಿಯ ಪುತ್ರಿ ಮೋನಿಕಾ (22) ಮೃತ ದುರ್ದೈವಿ. ಅಂದಹಾಗೆ ಮೃತ ಮೋನಿಕಾಳನ್ನು ಚಿಕ್ಕಬಳ್ಳಾಪುರ ನಗರದ ನಿವಾಸಿ ಭಾರ್ಗವ್ ಕಳೆದ ತಿಂಗಳ ಹಿಂದೆಯಷ್ಟೇ ಶಾಸ್ತ್ರೋಕ್ತವಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದ. ಮದುವೆಯಾಗಿ 6 ತಿಂಗಳ ಕಾಲ ಹೆಂಡತಿ ಜೊತೆ ಸಂಸಾರ ಮಾಡಿದ್ದ ಭಾರ್ಗವ್ ಇತ್ತೀಚೆಗಷ್ಟೇ ಗೌರಿ ಹಬ್ಬಕ್ಕೆ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಹೋಗಿದ್ದ. ಹಬ್ಬ ಮುಗಿದ ಮೇಲೆ ಗಂಡ ಬಂದು ಮನೆಗೆ ವಾಪಸ್ ಕರೆದುಕೊಂಡು ಹೋಗುತ್ತಾನೆ ಎಂದು ಮೋನಿಕಾ ಕಾಯುತ್ತಿದ್ದಳು. ಆದರೆ ಗಂಡ ಬರಲೇ ಇಲ್ಲ ಮತ್ತು ಫೋನ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಇದೇ ವೇಳೆ ಗಂಡ ಪ್ರೇಯಸಿ ಜೊತೆ ಸುತ್ತಾಡುತ್ತಿರುವ ಫೋಟೋಗಳು ಮೋನಿಕಾಳ ಕಣ್ಣಿಗೆ ಬಿದ್ದಿವೆ. ಇದರಿಂದ ಕಟ್ಟಿಕೊಂಡ ಗಂಡ ತನ್ನನ್ನು ಬಿಟ್ಟು ಪ್ರೇಯಸಿ ಜೊತೆಗೆ ರೋಮ್ಯಾನ್ಸ್ ಮಾಡುತ್ತಿದ್ದಾನೆಂದು ಮನನೊಂದ ಮೋನಿಕಾ ತವರು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಸಾಯುವ ಮುನ್ನ ತನ್ನ ಸಾವಿಗೆ ಗಂಡನೇ ಕಾರಣ ಅಂತ ಡೆತ್‍ನೋಟ್‍ನಲ್ಲಿ ಮೋನಿಕಾ ಬರೆದಿದ್ದಾಳೆ. ಇದೀಗ ಈ ಸಂಬಂಧ ಮೋನಿಕಾ ತಂದೆ ತಾಯಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಂಡ ಭಾರ್ಗವ್ ವಿರುದ್ಧ ದೂರು ದಾಖಲಿಸಿದ್ದು ಭಾರ್ಗವ್ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್‌ ನಿಷೇಧ ಮುಂದುವರಿಕೆ – ಸಚಿವ ಬಿ.ಸಿ.ನಾಗೇಶ್

    POLICE JEEP

    ದೇವಮ್ಮ-ಮುನಿರಾಜು ದಂಪತಿಗೆ ಮೂರು ಜನ ಮಕ್ಕಳಿದ್ದು, ಎರಡು ಲಕ್ಷ ಹಣ ತೆಗೆದುಕೊಂಡು ಬಂದರೆ ಮಾತ್ರ ಮನೆಗೆ ಬಾ ಅಂತ ಗಂಡ ಹಣಕ್ಕಾಗಿ ಒತ್ತಡ ಹಾಕಿದ್ದಾನೆ. ಜೊತೆಗೆ ಕಟ್ಟಿಕೊಂಡ ಹೆಂಡತಿ ಮುಂದೆಯೇ ಪ್ರೇಯಸಿ ಜೊತೆ ಮಾತನಾಡುವುದು ಮಾಡುತ್ತಿದ್ದ. ಇದರಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆಲ್ಲಾ ಗಂಡ ಭಾರ್ಗವ್ ಕಾರಣ ಅಂತ ಮೋನಿಕಾ ಪೋಷಕರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಬಿಜೆಪಿ ಶಾಸಕ, ನಿವೃತ್ತ ಐಪಿಎಸ್ ಅಧಿಕಾರಿ, ರೌಡಿ ಶೀಟರ್

    ಮತ್ತೊಂದೆಡೆ, ನವಿವಿವಾಹಿತೆ ಮೋನಿಕಾ ಮದುವೆಗೂ ಮುನ್ನ ಬೇರೊಬ್ಬನನ್ನು ಪ್ರೀತಿಸುತ್ತಿದ್ದು, ಮದುವೆ ನಂತರವೂ ಅವನ ಜೊತೆ ಸಂಪರ್ಕ ಇಟ್ಟುಕೊಂಡಿದ್ದಲು. ನಿರಂತರವಾಗಿ ಆತನ ಜೊತೆ ಫೋನ್‍ನಲ್ಲಿ ಮಾತನಾಡುತ್ತಿದ್ದಳು. ಈ ವಿಚಾರ ತಿಳಿದು ಗಂಡ ವಾರ್ನ್ ಮಾಡಿ ಬುದ್ಧಿವಾದ ಹೇಳಿದರೂ ಅವನ ಜೊತೆ ಮಾತನಾಡುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ತವರು ಮನೆಯಲ್ಲಿ ಬಿಟ್ಟು ಬಂದಿದ್ದೇವೆ ಎಂದು ಭಾರ್ಗವ್ ಕಡೆಯವರು ಆರೋಪಿಸುತ್ತಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತನ್ನ ಪತಿಯನ್ನು ಖುಷಿಯಾಗಿರಿಸಲು ಮೂವರು ಸುಂದರಿಯರನ್ನ ಕೆಲಸಕ್ಕೆ ನೇಮಿಸಿದ ಪತ್ನಿ!

    ತನ್ನ ಪತಿಯನ್ನು ಖುಷಿಯಾಗಿರಿಸಲು ಮೂವರು ಸುಂದರಿಯರನ್ನ ಕೆಲಸಕ್ಕೆ ನೇಮಿಸಿದ ಪತ್ನಿ!

    ಬ್ಯಾಂಕಾಕ್: ಸತಿ-ಪತಿಗಳಿಬ್ಬರು ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಸುಖವಾಗಿದ್ದರೆ ಸಂಸಾರ ಹಾಲು-ಜೇನು ಎಂದು ಎಲ್ಲರೂ ಹೇಳುತ್ತಾರೆ. ಇದಕ್ಕೆ ಥಾಯ್‌ಲ್ಯಾಂಡ್‌ನ ಮಹಿಳೆಯೊಬ್ಬರು ಸಾಕ್ಷಿಯಾಗಿ ನಿಲ್ಲುತ್ತಾಳೆ.

    ಹೌದು.. ಬ್ಯಾಂಕಾಕ್‌ನ 44 ವರ್ಷದ ಪಾತೀಮಾ ಚಮ್ನಾನ್, ತನ್ನ ಪತಿಯನ್ನು ಸಂತೋಷವಾಗಿಡಲು ಮೂವರು ಸುಂದರ ಹಾಗೂ ವಿದ್ಯಾವಂತ ಪ್ರೇಯಸಿಯರನ್ನ ಕೆಲಸಕ್ಕೆ ನೇಮಿಸಿಕೊಂಡಿದ್ದಾಳೆ. ತನ್ನ ಪತಿಯೊಂದಿಗೆ ಆಕೆ ಹೆಚ್ಚು ಸಮಯ ಕೊಡಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಪ್ರೇಯಸಿಯನ್ನ ಕೆಲಸಕ್ಕೆ ನೇಮಿಸಿಕೊಂಡಿರುವುದಾಗಿ ಹೇಳಿದ್ದಾಳೆ. ಇದನ್ನೂ ಓದಿ: ವಾಮನ ಟೀಸರ್ ರಿಲೀಸ್, ಆಕ್ಷನ್ ಮೂಡ್ ನಲ್ಲಿ ಶೋಕ್ದಾರ್ ಧನ್ವೀರ್

    ಇತ್ತೀಚೆಗೆ ಚಮ್ನಾನ್ ಅವರು ಕಾಲೇಜು ಡಿಪ್ಲೋಮಾ ಹೊಂದಿರುವ ಯುವ ಹಾಗೂ ಏಕಾಂಗಿ ಮಹಿಳೆಯರನ್ನು ಕೆಲಸಕ್ಕಾಗಿ ಹುಡುಕುವ ಬಗ್ಗೆ ವೀಡಿಯೋ ಜಾಹೀರಾತನ್ನು ಜಾಲತಾಣದಲ್ಲಿ ಪ್ರಕಟಿಸಿದ್ದರು. ಅದಕ್ಕಾಗಿ 15 ಸಾವಿರ ಬಹ್ತ್ (33,800 ರೂ.) ವೇತನ ನೀಡುವುದಾಗಿಯೂ ಹೇಳಿದ್ದರು. ಇದರೊಂದಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ನೀವು ನನಗೆ ಸಹಾಯ ಮಾಡಬೇಕು. ನನ್ನ ಕಚೇರಿಯಲ್ಲಿ ದಾಖಲೆಗಳ ಸಿದ್ಧತೆಗಾಗಿ ಇಬ್ಬರು ಹಾಗೂ ನಾನು, ನನ್ನ ಪತಿ-ಮಗುವನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ವೀಡಿಯೋನಲ್ಲಿ ಹೇಳಿದ್ದರು.

    ನನ್ನ ನಿಮ್ಮ ನಡುವೆ ಯಾವುದೇ ಜಗಳ ನಡೆಯುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನನ್ನ ಪತಿ ಏಕಾಂಗಿಯಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾನೆ. ನಾನು ಅವನನ್ನು ಸಂತೋಷವಾಗಿಡಲು ಬಯಸುತ್ತೇನೆ. ಮನೆಗೆ ಸ್ನೇಹಿತರು ಬಂದಾಗ ನಾನು ಅವನೊಂದಿಗೆ ಇರಲು ಬಯಸುತ್ತೇನೆ. ಹಾಗಾಗಿ ಮಹಿಳೆಯರ ಅಗತ್ಯವಿದೆ. ಆದರೆ ಕೆಲಸಕ್ಕೆ ಬರುವವರು ಮಕ್ಕಳನ್ನು ಹೊಂದಿರಬಾರದು, ಉತ್ತಮ ಸಂವಹನ ಕೌಶಲ ಇರಬೇಕು. ಜೊತೆಗೆ ಪ್ರೇಯಸಿಯರು ನನ್ನ ಪತಿಯನ್ನು ಮೆಚ್ಚಿಸಲು, ಅವನನ್ನು ಸಂತೋಷಪಡಿಸಲು ಹಾಗೂ ಒಡನಾಟದಲ್ಲಿ ಸಮರ್ಥರಾಗಿರುವಂತಹವರು ಆಗಿರಬೇಕು ಎಂದು ಷರತ್ತು ವಿಧಿಸಿದ್ದಾರೆ. ಇದನ್ನೂ ಓದಿ: ದೇಶ ವಿಭಜನೆ ಒಪ್ಪಿಕೊಳ್ಳದಿದ್ರೆ ಭಾರತ ಛಿದ್ರವಾಗ್ತಿತ್ತು- ಪಟೇಲ್ ಹೇಳಿಕೆ ಪುನರುಚ್ಚರಿಸಿದ ಸೋನಿಯಾ

    ಅದರಂತೆ ಮೂವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಚೇರಿ ಕೆಲಸ ಮಾಡಲು ಇಬ್ಬರು ಹಾಗೂ ಮನೆಯಲ್ಲಿ ಗಂಡ-ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು 33 ವರ್ಷದ ಮಹಿಳೆ ಒಪ್ಪಿಕೊಂಡಿದ್ದಾಳೆ. ಆದರೆ ಆಕೆ ಚಮ್ಮಾನ್ ಸ್ನೇಹಿತೆಯೇ ಆಗಿದ್ದಾಳೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

    Live Tv

  • ತ್ರಿಕೋನ ಪ್ರೇಮ ಪ್ರಕರಣ – ರೆಡ್ ಹ್ಯಾಂಡಾಗಿ ಗೆಳೆಯನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿಗೆ ನಡು ರಸ್ತೆಯಲ್ಲೇ ಚಾಕು ಇರಿದ ಪ್ರಿಯಕರ

    ತ್ರಿಕೋನ ಪ್ರೇಮ ಪ್ರಕರಣ – ರೆಡ್ ಹ್ಯಾಂಡಾಗಿ ಗೆಳೆಯನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿಗೆ ನಡು ರಸ್ತೆಯಲ್ಲೇ ಚಾಕು ಇರಿದ ಪ್ರಿಯಕರ

    ಮಡಿಕೇರಿ: ಕೊಡಗಿನಲ್ಲಿ ನಡೆದ ತ್ರಿಕೋನ ಪ್ರೇಮ ಪ್ರಕರಣ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ರೊಚ್ಚಿಗೆದ್ದ ಪ್ರಿಯಕರನೋರ್ವ ತನ್ನ ಪ್ರೇಯಸಿ ಮತ್ತು ಆಕೆಯೊಂದಿಗೆ ಇದ್ದ ಯುವಕನಿಗೆ ಚಾಕು ಇರಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡ ಯುವಕ ಮತ್ತು ಯುವತಿ ಇಬ್ಬರು ಕುಶಾಲನಗರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಚಾಕು ಇರಿದ ಯುವಕ ಕುಶಾಲನಗರದ ಹೋಟೆಲ್ ಸಪ್ಲೆಯರ್ ಎಂದು ತಿಳಿದುಬಂದಿದೆ. ಈ ಸಂಬಂಧ ಇದೀಗ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತ್ರಿವರ್ಣ ಧ್ವಜ ಭಾರತೀಯರಿಗಷ್ಟೇ ಅಲ್ಲ, ವಿದೇಶದಲ್ಲಿರುವ ಪ್ರಜೆಗಳಿಗೂ ರಕ್ಷಣಾತ್ಮಕ ಗುರಾಣಿ: ಮೋದಿ ಬಣ್ಣನೆ

    ಏನ್ನಿದು ಪ್ರಕರಣ?
    ಕಳೆದ ನಾಲ್ಕು ವರ್ಷದಿಂದ ಯುವಕನೋರ್ವ ಕಾಲೇಜಿಗೆ ಹೋಗುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ನಾಲ್ಕು ವರ್ಷದಿಂದ ಪ್ರೀತಿ ಮಾಡಿದ ಯುವತಿ, ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಪ್ರಿಯಾಕರನೊಂದಿಗೆ ಗಲಾಟೆ ಮಾಡುತ್ತಿದ್ದಳು ಎನ್ನಲಾಗಿದೆ. ಕುಶಾಲನಗರದ ಹೋಟೆಲ್ ಒಂದರಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ದಿನ ನಿತ್ಯ ಫೋನ್ ಮಾಡಿ ಯುವತಿಯ ಯೋಗ ಕ್ಷೇಮ ವಿಚಾರಿಸುತ್ತಿದ್ದ. ಅದರಂತೆ ಇಂದು ಕೂಡ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸುವಾಗ ಎಲ್ಲಿದ್ಯಾ  ಎಂದು ಯುವಕ ಕೇಳಿದ್ದಾನೆ. ಇದಕ್ಕೆ ಯುವತಿ ತಾನು ಕಾಲೇಜಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಳೆ. ಆದರೆ ಅನುಮಾನಗೊಂಡ ಯುವಕ ಇಂದು ಕುಶಾಲನಗರ ಕಾವೇರಿ ನಿಸರ್ಗಧಾಮಕ್ಕೆ ಹೋಗಿ ಹುಡುಕಾಟ ನಡೆಸಿದಾಗ ಈ ವೇಳೆ ಯುವತಿ ಮತ್ತೋರ್ವ ಯುವಕನೊಂದಿಗೆ ಇರುವುದನ್ನು ಕಂಡು ತನ್ನೊಂದಿಗೆ ಕಾಲೇಜಿಗೆ ಹೋಗುವುದಾಗಿ ಹೇಳಿ ಇಲ್ಲಿ ಮತ್ತೋರ್ವನ ಜೊತೆ ಇದ್ಯಾ ಎಂದು ಪ್ರಿಯಕರ ಗಲಾಟೆ ಮಾಡಿದ್ದಾನೆ.

    ಬಳಿಕ ಮೂವರು ಜಗಳವಾಡಿದ್ದಾರೆ. ಅಲ್ಲದೇ ತನ್ನೊಂದಿಗೆ ಇದ್ದ ಚಾಕುವನ್ನು ತೆಗೆದು ಯುವಕ, ಯುವತಿಗೆ ಪ್ರಿಯಕರ ಚುಚ್ಚಿದ್ದಾನೆ. ಚಾಕು ಇರಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಯುವಕ, ಯುವತಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಕು ಇರಿದ ಯುವಕ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಬಾರ್ ಓಪನ್ ಆದ ಒಂದೇ ವರ್ಷಕ್ಕೆ ಏಳಕ್ಕೂ ಹೆಚ್ಚು ಮಂದಿ ಸಾವು – ಬಾರ್ ಬಂದ್ ಮಾಡುವಂತೆ ಉಗ್ರ ಹೋರಾಟ

    ಸದ್ಯ ಯುವಕ, ಯುವತಿ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ತ್ರಿಕೋನ ಪ್ರೇಮ ಪ್ರಕರಣವನ್ನು ಕುಶಾಲನಗರದ ಗ್ರಾಮಾಂತರ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]