Tag: ಪ್ರೇಮ ಬರಹ

  • ಭಾವಿ ಪತಿ ಜೊತೆ ಅರ್ಜುನ್ ಸರ್ಜಾ ಪುತ್ರಿಯ ಬರ್ತ್‌ಡೇ ಸಂಭ್ರಮ

    ಭಾವಿ ಪತಿ ಜೊತೆ ಅರ್ಜುನ್ ಸರ್ಜಾ ಪುತ್ರಿಯ ಬರ್ತ್‌ಡೇ ಸಂಭ್ರಮ

    ಸ್ಟಾರ್ ನಟ ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯ (Aishwarya) ಇತ್ತೀಚೆಗಷ್ಟೇ ಎಂಗೇಜ್‌ಮೆಂಟ್‌ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದರು. ಇದೀಗ ಭಾವಿ ಪತಿ ಜೊತೆ ಐಶ್ವರ್ಯ ಬರ್ತ್‌ಡೇ ಸೆಲೆಬ್ರೇಟ್ ಮಾಡಿ ಸಂಭ್ರಮಿಸಿದ್ದಾರೆ.

    ಐಶ್ವರ್ಯ ಅರ್ಜುನ್ ಅವರು ವ್ಯಾಲೆಂಟೈನ್ ವೀಕ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಭಾವಿ ಪತಿ ಉಮಾಪತಿ ರಾಮಯ್ಯ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಐಶ್ವರ್ಯಗೆ ಸರ್ಪ್ರೈಸ್ ಕೊಟ್ಟು ಆ ನಂತರ ಉಮಾಪತಿ ಕೇಕ್ ಕಟ್ ಮಾಡಿದ್ದಾರೆ.

    ನೇರಳೆ ಬಣ್ಣದ ಡ್ರೆಸ್ ಧರಿಸಿ ಕೈಯಲ್ಲಿ ರೋಸ್ ಹಿಡಿದು ಐಶ್ವರ್ಯ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಡಲ ತೀರಿದಲ್ಲಿ ಉಮಾಪತಿ-ಐಶ್ವರ್ಯ ಸುಂದರ ಸಮಯ ಕಳೆದಿದ್ದಾರೆ. ಮಗಳು ಮತ್ತು ಭಾವಿ ಅಳಿಯನ ಜೊತೆ ಅರ್ಜುನ್ ಸರ್ಜಾ ದಂಪತಿ ಕೂಡ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಒಟ್ನಲ್ಲಿ ಬರ್ತ್‌ಡೇ ಜೊತೆ ವ್ಯಾಲೆಂಟೈನ್ ಡೇ ಕೂಡ ಸಂಭ್ರಮದಿಂದ ಈ ಜೋಡಿ ಆಚರಿಸಿದೆ. ಇದನ್ನೂ ಓದಿ:ರಿಷಿ ನಟನೆಯ ‘ರುದ್ರ ಗರುಡ ಪುರಾಣ’ ಚಿತ್ರದ ಶೂಟಿಂಗ್ ಕಂಪ್ಲೀಟ್

    ಅಂದಹಾಗೆ ಉಮಾಪತಿ ರಾಮಯ್ಯ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಚಿತ್ರಗಳಲ್ಲಿ ನಟಿಸುತ್ತಾ ಆ್ಯಕ್ಟೀವ್ ಆಗಿದ್ದಾರೆ. ಐಶ್ವರ್ಯ ಕೂಡ ಕನ್ನಡ ಮತ್ತು ಪರಭಾಷಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅರ್ಜುನ್ ಸರ್ಜಾ ಅವರ ಮುಂದಿನ ನಿರ್ದೇಶನದ ಸಿನಿಮಾದಲ್ಲಿ ಐಶ್ವರ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗಲಿದೆ.

    ಕನ್ನಡದ ‘ಪ್ರೇಮ ಬರಹ’ (Prema Baraha) ಸಿನಿಮಾ ಮೂಲಕ ನಾಯಕಿಯಾಗಿ ಐಶ್ವರ್ಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ‘ಬಿಗ್ ಬಾಸ್’ ಖ್ಯಾತಿಯ ಚಂದನ್ ಕುಮಾರ್‌ಗೆ ನಾಯಕಿಯಾಗಿದ್ದರು.

  • ಅಪ್ಪನ ನಿರ್ದೇಶನದಲ್ಲಿ ಐಶ್ವರ್ಯ ಅರ್ಜುನ್: ಟಾಲಿವುಡ್‌ಗೆ `ಪ್ರೇಮ ಬರಹ’ ನಾಯಕಿ

    ಅಪ್ಪನ ನಿರ್ದೇಶನದಲ್ಲಿ ಐಶ್ವರ್ಯ ಅರ್ಜುನ್: ಟಾಲಿವುಡ್‌ಗೆ `ಪ್ರೇಮ ಬರಹ’ ನಾಯಕಿ

    ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟನಾಗಿ ಬಹುಭಾಷೆಯಲ್ಲಿ ಯಶಸ್ಸು ಕಂಡಿರುವ ನಟ, ನಟನೆಯ ಜತೆ ನಿರ್ದೇಶನ, ಬರವಣಿಗೆ, ನಿರ್ಮಾಣದ ಮೂಲಕ ಬಣ್ಣದ ಲೋಕದಲ್ಲಿ ಗಮನ ಸೆಳೆದಿದ್ದಾರೆ. ಇದೀಗ ಮಗಳ ಯಶಸ್ಸಿಗಾಗಿ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ.

    ಬಹುಭಾಷಾ ನಟನಾಗಿ ಗುರುತಿಸಿಕೊಂಡಿರುವ ಕನ್ನಡ ಮೂಲದ ನಟ ಅರ್ಜುನ್ ಸರ್ಜಾ ಕನ್ನಡ ಚಿತ್ರರಂಗದಲ್ಲೂ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಮತ್ತೆ ನಿರ್ದೇಶದತ್ತ ಮುಖ ಮಾಡಿದ್ದಾರೆ. ಮಗಳು ಐಶ್ವರ್ಯಳ ಚಿತ್ರರಂಗದ ಯಶಸ್ಸಿಗಾಗಿ ಟಾಲಿವುಡ್‌ನಲ್ಲಿ ಲಾಂಚ್ ಮಾಡಲು ಮುಂದಾಗಿದ್ದಾರೆ.

    ನಟಿ ಐಶ್ವರ್ಯ ಅರ್ಜುನ್ ನಟನೆಯ ಜೊತೆ ಬ್ಯೂಟಿಯಿರೋ ಪ್ರತಿಭಾವಂತ ನಟಿ 2013ರಲ್ಲಿ `ಪಟ್ಟತ್ತು ಯಾನೈ’ ಚಿತ್ರದ ಮೂಲಕ ನಟನರಂಗಕ್ಕೆ ಪರಿಚಿತರಾಗಿದ್ದರು. ಬಳಿಕ 2018ರಲ್ಲಿ `ಪ್ರೇಮ ಬರಹ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ಮೂಡಿ ಬಂದಿತ್ತು. ಐಶ್ವರ್ಯ ಮತ್ತು ಚಂದನ್ `ಪ್ರೇಮ ಬರಹ’ ಸಿನಿಮಾಗೆ ಅರ್ಜುನ್ ಸರ್ಜಾ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು. ಈ ಚಿತ್ರದ ಬಳಿಕ ಯಾವ ಚಿತ್ರದಲ್ಲೂ ಐಶ್ವರ್ಯ ಅರ್ಜುನ್ ಕಾಣಿಸಿಕೊಂಡಿಲ್ಲ. ಇದನ್ನೂ ಓದಿ:ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ಇದೀಗ ಮತ್ತೆ ಭಿನ್ನ ಕಥೆಯ ಮೂಲಕ ಮಗಳು ಐಶ್ವರ್ಯಳನ್ನು ಟಾಲಿವುಡ್ ರಂಗಕ್ಕೆ ಪರಿಚಯಿಸಲು ಸಕಲ ಸಿದ್ಧತೆಯನ್ನ ನಟ ಕಮ್ ನಿರ್ದೇಶಕ ಅರ್ಜುನ್ ಸರ್ಜಾ ಮಾಡಿಕೊಂಡಿದ್ದಾರೆ. ಈ ಕುರಿತು ಪೋಸ್ಟರ್ ರಿವೀಲ್ ಮಾಡಿದ್ದಾರೆ. ಚಿತ್ರದ ಟೈಟಲ್ ಇನ್ನುಳಿದ ಮಾಹಿತಿ ಮುಂದಿನ ದಿನಗಳಲ್ಲಿ ರಿವೀಲ್ ಮಾಡಲಿದ್ದಾರೆ. ಅಪ್ಪನ ನಿರ್ದೇಶನಲ್ಲಿ ನಟಿ ಐಶ್ವರ್ಯ ಅರ್ಜುನ್ ಈಗ ಟಾಲಿವುಡ್ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

    Live Tv

  • ‘ಪ್ರೇಮ ಬರಹ’ದಲ್ಲಿ ವಿವಾದ ಬರೆದುಕೊಂಡ ನಟ ಚಂದನ್

    ‘ಪ್ರೇಮ ಬರಹ’ದಲ್ಲಿ ವಿವಾದ ಬರೆದುಕೊಂಡ ನಟ ಚಂದನ್

    ಬೆಂಗಳೂರು: ಇನ್ನೂ ಪೂರ್ತಿ ಹೀರೋ ಅನ್ನಿಸಿಕೊಳ್ಳದೇ ಇರೋ ಹುಡುಗರು ಏನೇನೋ ಮಾತಾಡಿ ವಿವಾದ ಸೃಷ್ಟಿಸಿಕೊಳ್ಳುತ್ತಿರುತ್ತಾರೆ. ಎರಡು ಮೂರು ಸಿನಿಮಾಗಳಲ್ಲಿ ನಾಯಕನಾಗಿ ಗುರುತಿಸಿಕೊಂಡಿರುವ ಚಂದನ್ ಎನ್ನುವ ನಟ ಏಕಾಏಕಿ ಕನ್ನಡ ಸಿನಿಮಾ ವಿಮರ್ಶಕರ ಕುರಿತಾಗಿ ಮಾತಾಡಿ ಇಲ್ಲದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತೆ ಕಾಣುತ್ತಿದೆ.

    ಪ್ರೇಮ ಬರಹ ಸಿನಿಮಾಗೆ ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಬಂದಿರಲಿಲ್ಲ. ಬಹುತೇಕ ಎಲ್ಲ ಪತ್ರಿಕೆಗಳು, ಆನ್ ಲೈನ್ ಮೀಡಿಯಾಗಳು ಈ ಸಿನಿಮಾಗೆ ಕಡಿಮೆ ಅಂಕ ನೀಡಿದ್ದವು. ಇದರಿಂದ ಸಿಕ್ಕಾಪಟ್ಟೆ ಬೇಸರಕ್ಕೊಳಗಾದ ಚಂದನ್, `ಕಾಸು ಕೇಳಿ ರಿವ್ಯೂ ಬರೆಯುವವರನ್ನು ನಂಬಬೇಡಿ. ಅವರು ನನ್ನ – ಗೆ ಸಮ’ ಎಂದು ಹೇಳಿ ಕೂದಲು ಕಿತ್ತುಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೋಡುವ ಜನರಿಗೆ ಚಂದನ್ ಅವರ ಮಾತು ತಪ್ಪು ಸಂದೇಶ ರವಾನಿಸುವಂತಿದೆ.

    ಚಂದನ್ ಸದಾ ಒಂದಲ್ಲ ಒಂದು ವಿವಾದಗಳಿಗೆ ಆಹಾರವಾಗುತ್ತಲೇ ಇರುತ್ತಾರೆ. ಈ ಬಾರಿ ಏಕಾಏಕಿ ಮಾಧ್ಯಮದವರನ್ನೇ ಮೈಮೇಲೆಳೆದುಕೊಂಡಿದ್ದಾರೆ. ಇನ್ನೂ ಈಗಷ್ಟೇ ತಲೆಯೆತ್ತುತ್ತಿರುವ ನಟ ಚಂದನ್ ಹೀಗೆ ಪತ್ರಕರ್ತರ ವಿರುದ್ಧ ಮಾತಾಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮಾಧ್ಯಮ ವಲಯದಲ್ಲೂ ಹರಿದಾಡುತ್ತಿದೆ. ಅದೂ ಕೈ ಸನ್ನೆಯ ಮೂಲಕ ಕೆಟ್ಟದಾಗಿ ಮಾತಾಡಿರುವ ಚಂದನ್ ವಿರುದ್ಧ ಪತ್ರಕರ್ತರೆಲ್ಲಾ ಸಮರ ಸಾರಲಿದ್ದಾರಾ ಎನ್ನುವ ಅನುಮಾನ ಕೂಡಾ ಮೂಡುತ್ತಿದೆ.

    ಇಷ್ಟೆಲ್ಲಾ ಆದರೂ ಚಿತ್ರದ ನಿರ್ದೇಶಕ ಕಂ ನಟ ಅರ್ಜುನ್ ಸರ್ಜಾ ಈ ಬಗ್ಗೆ ಏನೂ ಪ್ರತಿಕ್ರಿಯಿಸಿಲ್ಲ. ಹಾಗೆ ನೋಡಿದರೆ ಪಬ್ಲಿಕ್ ಟಿವಿ ವರದಿಗಾರರೊಂದಿಗೆ ಮಾತಾಡುತ್ತಾ ‘ನನಗೆ ಕೆಲವೊಂದು ವಿಚಾರ ಬೇಸರ ತರಿಸಿದೆ’ ಎಂದಷ್ಟೇ ಅರ್ಜುನ್ ಸರ್ಜಾ ಹೇಳಿದ್ದರು. ಆದರೆ ಅವರದ್ದೇ ಚಿತ್ರದ ನಾಯಕ ನಟ ತೀರಾ ಕೆಳದರ್ಜೆಯ ಮಾತಾಡಿರೋದು ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತಿದೆ.