Tag: ಪ್ರೇಮ ಪ್ರಕರಣ

  • ಪ್ರೇಮಕ್ಕೆ ವಿರೋಧ – ಥಳಿಸಿ, ವಿಷಕುಡಿಸಿ ಯುವಕನನ್ನು ಕೊಂದೇ ಬಿಟ್ರು

    ಪ್ರೇಮಕ್ಕೆ ವಿರೋಧ – ಥಳಿಸಿ, ವಿಷಕುಡಿಸಿ ಯುವಕನನ್ನು ಕೊಂದೇ ಬಿಟ್ರು

    ಲಕ್ನೋ: ಪ್ರೇಮಿಗಳಿಬ್ಬರ ಪ್ರೇಮ ಸಂಬಂಧವನ್ನು ಒಪ್ಪದ ಹುಡುಗಿಯ ಸಂಬಂಧಿಕರು ಯುವಕನೊಬ್ಬನನ್ನು ಕ್ರೂರವಾಗಿ ಥಳಿಸಿ, ವಿಷ ಕುಡಿಸಿದ ಘಟನೆ ಗ್ರೇಟರ್ ನೋಯ್ಡಾದ ಕೊತ್ವಾಲಿಯ ದಾದ್ರಿ ಪ್ರದೇಶದಲ್ಲಿ ನಡೆದಿದೆ.

    police (1)

    ಅನಂಗ್‍ಪುರ ಗ್ರಾಮದ ನಿವಾಸಿ ವಿಶಾಲ್ ಪಾಂಡೆ ಹಲ್ಲೆಗೊಳಗಾಗಿದ್ದ ವ್ಯಕ್ತಿ. ಯುವಕನನ್ನು ಮಾರಣಾಂತಿಕ ಹಲ್ಲೆ ನಡೆಸಿ ಆತ ಮೃತಪಟ್ಟಿರಬಹುದು ಎಂದು ಭಾವಿಸಿ ಆತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವಕನನ್ನು ಕಂಡ ದಾರಿಹೋಕರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಗಾಯಾಳುವನ್ನು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ. ಸಾವಿಗೂ ಮುನ್ನ ಯುವಕ ವೀಡಿಯೋ ರೆಕಾರ್ಡ್ ಮಾಡಿ ಕುಟುಂಬ ಸದಸ್ಯರಿಗೆ ಕಳುಹಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸ್ಟೇರಿಂಗ್ ಕಟ್ ಆಗಿ ಕೆರೆಗೆ ಉರುಳಿದ ಗೂಡ್ಸ್ ವಾಹನ

    ಗ್ರೇಟರ್ ನೋಯ್ಡಾದ ಹೆಚ್ಚುವರಿ ಡಿಸಿಪಿ ಪ್ರಕಾರ, ಮೃತನನ್ನು ಮೊದಲಿಗೆ ಮಹಿಳೆಯ ಮನೆಯವರು ಸಂಚು ರೂಪಿಸಿ ಯುವತಿಗೆ ಆತನನ್ನು ದಂಕೌರ್‍ನ ಚಿಟಿ ಗ್ರಾಮದ ಕಾಲುವೆ ಬಳಿ ಕರೆಸುವಂತೆ ಒತ್ತಡ ಹೇರಿದ್ದಾರೆ. ನಂತರ ಕುಟುಂಬವು ಯುವಕನನ್ನು ಬರ್ಬರವಾಗಿ ಥಳಿಸಿ ವಿಷವನ್ನು ಕುಡಿಸಿ ಹಲ್ಲೆಗೈದಿದ್ದಾರೆ. ಈ ವೇಳೆ ಆತ ಸತ್ತಿದ್ದಾನೆ ಎಂದು ಭಾವಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪಗೆ ಕೊಟ್ಟು ಗೊತ್ತೇ ಹೊರತು ಬೇಡಿ ಪಡೆದು ಗೊತ್ತಿಲ್ಲ: ಬಿ.ವೈ.ವಿಜಯೇಂದ್ರ 

    ಮೃತನ ತಂದೆ ನೀಡಿದ ದೂರಿನ ಮೇರೆಗೆ ದಾದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಪ್ರಿಯಕರನ ಪತ್ನಿಯ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಯುವತಿ ಜೈಲುಪಾಲು!

    ಪ್ರಿಯಕರನ ಪತ್ನಿಯ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಯುವತಿ ಜೈಲುಪಾಲು!

    ಚಿಕ್ಕಬಳ್ಳಾಪುರ: ಪ್ರಿಯಕರನ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ ಯುವತಿ ಜೈಲುಪಾಲಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಆನೆಮಡುಗು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 19 ವರ್ಷದ ಯುವತಿ ಗಂಗೋತ್ರಿ ಕೊಲೆ ಮಾಡಲು ಯತ್ನಿಸಿದ ಯುವತಿ‌. ಇದನ್ನೂ ಓದಿ: ಕಲಬುರಗಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಡೇಟ್‌ ಫಿಕ್ಸ್‌- ಯಾವ ವರ್ಗಕ್ಕೆ ಸ್ಥಾನ ಮೀಸಲು?

    ಯುವತಿ ಗಂಗೋತ್ರಿ ಹಾಗೂ ಇದೇ ಗ್ರಾಮದ ಗಂಗರಾಜು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಗಂಗರಾಜು ಕಳೆದ 10 ತಿಂಗಳ ಹಿಂದೆ ಅಕ್ಕನ ಮಗಳಾದ ಮೋನಿಕಾಳನ್ನು ಮದುವೆಯಾಗಿದ್ದ. ಇದನ್ನು ಸಹಿಸದ ಗಂಗೋತ್ರಿ ಬಹಿರ್ದೆಸೆಗೆ ತೆರಳಿದ್ದ ಮೋನಿಕಾಳ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾಳೆ‌‌‌. ಗಾಯಾಳು ಮೋನಿಕಾರನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕತ್ತಿಗೆ 8 ಹೊಲಿಗೆ ಬಿದ್ದಿದೆ. ಕೈಗೆ ಚಾಕುವಿನಿಂದ ಇರಿದ ಗಾಯಗಳಾಗಿದ್ದು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ

    ಆರೋಪಿ ಗಂಗೋತ್ರಿಯನ್ನು ಪೊಲೀಸರು ಬಂಧಿಸಿದ್ದು, ಘಟನೆಯಲ್ಲಿ ಸಂತ್ರಸ್ತೆ ಗಂಡ ಗಂಗರಾಜು ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಗರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.