ಉಡುಪಿ: ಬ್ರಹ್ಮಾವರದ (Brahmavar) ಕೊಕ್ಕರ್ಣೆ ಬಳಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಯುವಕ, ಪ್ರಿಯತಮೆಗೆ ಚಾಕು ಇರಿದ ಪ್ರಕರಣದಲ್ಲಿ ಇದೀಗ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಇವರಿಬ್ಬರ ಮದುವೆಗೆ ಯುವತಿಯ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಯುವತಿ ಆತನ ನಂಬರ್‌ನ್ನು ಬ್ಲಾಕ್ ಮಾಡಿದ್ದಳು. ಇದರಿಂದ ಕೋಪಗೊಂಡ ಕಾರ್ತಿಕ್, ಆಕೆ ಮನೆಯಿಂದ ಬಸ್ ನಿಲ್ದಾಣಕ್ಕೆ ಹೋಗುವಾಗ ಹಿಂಬಾಲಿಸಿ ಕತ್ತು ಹಾಗೂ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಚಾಕು ಇರಿದ ಬಳಿಕ ಕಾರ್ತಿಕ್ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಕಾರ್ತಿಕ್‌ಗಾಗಿ ಶೋಧ ನಡೆಸುತ್ತಿದ್ದ ವೇಳೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಶಿವಮೊಗ್ಗ: ಮದುವೆಯಾಗುವಂತೆ ಪೀಡಿಸುತ್ತಿದ್ದಳೆಂದು ಪ್ರಿಯತಮೆ ಮೇಲೆ ಹಲ್ಲೆ ನಡೆಸಿ ಪ್ರಯಕರ ಕೊಂದಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಯುವತಿ ಸೌಮ್ಯ ಕೊಲೆಯಾದವಳು. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಯುವಕ ಸೃಜನ್ ಕೊಲೆ ಮಾಡಿದ ಆರೋಪಿ. ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಯಾಗುವಂತೆ ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಿಯಕರ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂ ಒಳಹರಿವಿನ ಸ್ಥಳದಲ್ಲಿ ತಡೆಗೋಡೆ ಕುಸಿತ
ತೀರ್ಥಹಳ್ಳಿಯಲ್ಲಿ ಫೈನಾನ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಯುವತಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರ ನಡುವೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ನಂಬಿಸಿ ಯುವಕ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ಇಬ್ಬರದ್ದು ಬೇರೆ ಬೇರೆ ಸಮುದಾಯ ಆಗಿದ್ದರಿಂದ ಯುವಕನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ತೀರ್ಥಹಳ್ಳಿಗೆ ಹೋಗುತ್ತೇನೆ ಅಂತಾ ಜು.2 ರಂದು ಕೊಪ್ಪದಿಂದ ಯುವತಿ ಬಂದಿದ್ದಳು. ಯುವಕನ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಳು. ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಪ್ರಿಯಕರ ಹೇಳಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಯುವತಿ ಮೇಲೆ ಯುವಕ ಬಲವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆಯ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ – ಕಿಂಗ್‌ಪಿನ್ ಶ್ರೀಕಿ ಸೇರಿ 3 ಆರೋಪಿಗಳಿಗೆ ಜಾಮೀನು
ಇದರಿಂದ ಭಯಭೀತನಾದ ಯುವಕ, ಯುವತಿಯ ಶವವನ್ನು ಮುಂಬಾಳು ಬಳಿ ಹೂತಿಟ್ಟು ತೆರಳಿದ್ದ. ಇತ್ತ ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕೊಪ್ಪ ಪೊಲೀಸರಿಗೆ ಯುವತಿ ಪೋಷಕರು ದೂರು ನೀಡಿದ್ದರು. ಯುವಕನನ್ನು ಹುಡುಕಿಕೊಂಡು ಕೊಪ್ಪ ಪೊಲೀಸರು ಸಾಗರಕ್ಕೆ ಬಂದಿದ್ದರು. ಪೊಲೀಸರ ಎದುರು ಯುವತಿಯನ್ನು ಕೊಂದು ಹೂತಿಟ್ಟ ರಹಸ್ಯವನ್ನು ಯುವಕ ಬಿಚ್ಚಿಟ್ಟಿದ್ದಾನೆ. ಇಂದು ತಹಶೀಲ್ದಾರ್ ಸಮ್ಮುಖದಲ್ಲಿ ಶವ ಹೊರಗೆ ತೆಗೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ.
ಬೆಳಗಾವಿ: ಪ್ರೀತಿಸಿ ಕೈಕೊಡುವುದರ ಜೊತೆಗೆ ಮದುವೆ ಮುರಿದ ಪಾಗಲ್ ಪ್ರೇಮಿ ಈಗ ಎಸ್ಕೇಪ್ ಆಗಿದ್ದಾನೆ. ಯುವಕನ ಹುಚ್ಚಾಟಕ್ಕೆ ಕುಟುಂಬಸ್ಥರು, ಸ್ಥಳೀಯರು ಯುವತಿಯ ಬೆನ್ನಿಗೆ ನಿಂತಿದ್ದು ಯುವತಿ ಪಾಗಲ್ ಪ್ರೇಮಿಯ ಮನೆ ಮುಂದೆ ನ್ಯಾಯಕ್ಕಾಗಿ ಇಡೀ ರಾತ್ರಿ ಪ್ರತಿಭಟನೆಗೆ ಕುಳಿತಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಲವ್ ಸೆಕ್ಸ್ ದೋಖಾ ಪ್ರಕರಣ ನಡೆದಿದೆ. ಕಿತ್ತೂರು ಪಟ್ಟಣದ ನೇಕಾರ ಕಾಲೋನಿ ನಿವಾಸಿ ಮುತ್ತುರಾಜ್ ಇಟಗಿ ಎಂಬಾತ ಯುವತಿ ಬಾಳು ಹಾಳು ಮಾಡಿದವ. ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಯುವಕನೂ ಕೈಕೊಟ್ಟ, ಸಪ್ತಪದಿ ತುಳಿದ ಗಂಡನೂ ನೀ ನನಗೆ ಬೇಡ ಎಂದಿದ್ದು ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿಯ ಕುಟುಂಬ ಬೀದಿಗೆ ಬಂದಿದೆ. ಇದನ್ನೂ ಓದಿ: ರಾಮ ಭಕ್ತರಿದ್ದ ರೈಲಿಗೆ ಬೆದರಿಕೆ – ಬಂಧಿತ ವ್ಯಕ್ತಿ ಸಿ ಗ್ರೂಪ್ ನೌಕರ
ಏನಿದು ಪ್ರಕರಣ?: ಕಳೆದ ಆರು ವರ್ಷಗಳಿಂದ ತಮ್ಮ ಮನೆಯ ಪಕ್ಕದ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದ ಮುತ್ತುರಾಜ್ ಮದುವೆ ಆಗುವುದಾಗಿ ನಂಬಿಸಿ ಆಕೆಯ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದನು. ಸಾಲದೆಂಬಂತೆ ಇಬ್ಬರ ಖಾಸಗಿ ವೀಡಿಯೋ, ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದನು. ಆರು ವರ್ಷಗಳ ಕಾಲ ಯುವತಿ ಜೊತೆಗೆ ಸುತ್ತಾಡಿ ಕುಟುಂಬಸ್ಥರು ಮದುವೆಗೆ ಒಪ್ಪುತ್ತಿಲ್ಲ. ನೀನು ಬೇರೆ ಮದುವೆ ಆಗು ಎಂದು ದಿಢೀರ್ ಮದುವೆ ಆಗಲ್ಲವೆಂದು ಕೈ ಎತ್ತಿದ್ದಾನೆ. ಬಳಿಕ ಪೋಷಕರು ತೋರಿಸಿದ್ದ ವರನ ಜೊತೆಗೆ ಕೆಲ ದಿನಗಳ ಹಿಂದಷ್ಟೇ ಖಾನಾಪುರ ತಾಲೂಕಿನ ಯುವಕನ ಜೊತೆಗೆ ಯುವತಿಯ ವಿವಾಹ ಆಗಿತ್ತು.
ಮದುವೆಯ ಮರುದಿನವೇ ತವರುಮನೆಗೆ: ಸಾಲಸೋಲ ಮಾಡಿದ ಪೋಷಕರು, ಪುತ್ರಿಯ ಮದುವೆ ಮಾಡಿಕೊಟ್ಟಿದ್ದರು.ಮದುವೆ ಆದ ಮೊದಲ ದಿನವೇ ವರನ ಮನೆಯಲ್ಲಿ ಪಾಗಲ್ ಪ್ರೇಮಿಯ ಹೈಡ್ರಾಮಾ ಮಾಡಿದ್ದು, ಗಂಡನ ಮನೆಗೆ ಹೋಗಿ ವರನ ಸಂಬಂಧಿಗೆ ಯುವತಿ ಜೊತೆಗಿನ ಖಾಸಗಿ ವೀಡಿಯೋ ಶೇರ್ ಮಾಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಯುವತಿ ಪೋಷಕರ ಜೊತೆಗೆ ವರನ ಪೋಷಕರು ವಾಗ್ವಾದ ನಡೆಸಿದ್ದಾರೆ. ಮದುವೆ ಆದ ಮೊದಲ ದಿನವೇ ನೀ ನನಗೆ ಬೇಡವೆಂದು ತವರು ಮನೆಗೆ ವಧುವನ್ನ ಕಳುಹಿಸಿದ್ದಾರೆ. ತಮ್ಮದೇ ನೂತನ ಮನೆಯ ಗೃಹ ಪ್ರವೇಶ ಇದ್ದರೂ ಗೈರಾಗಿ ಎಸ್ಕೆಪ್ ಆಗಿದ್ದಾನೆ. ಇನ್ನು ನ್ಯಾಯ ಕೊಡಿಸುವಂತೆ ಎರಡ್ಮೂರು ಸಲ ಕಿತ್ತೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಕಿತ್ತೂರು ಪಿಎಸ್ ಐ ಸಕಾರಾತ್ಮಕ ಸ್ಪಂದನೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಿಯಕರನ ಮನೆ ಮುಂದೆ ಧರಣಿ: ಜೀವನ ಹಾಳು ಮಾಡಿದ ಪಾಗಲ್ ಪ್ರೇಮಿ ಮುತ್ತುರಾಜ್ ಮನೆ ಎದುರು ಯುವತಿ ಪ್ರತಿಭಟನೆಗೆ ಮುಂದಾಗಿದ್ದು, ಯುವತಿ ಮನೆ ಎದುರು ಬರುತ್ತಿದ್ದಂತೆಯೇ ಮುತ್ತುರಾಜ್‌ನ ಸಹೋದರಿಯರು ಬಾಗಿಲು ಹಾಕಿಕೊಂಡು ಒಳಗೆ ಕುಳಿತುಕೊಂಡಿದ್ದಾರೆ. ಈ ವೇಳೆ ಮುತ್ತುರಾಜ್ ಪೋಷಕರು, ಸಹೋದರಿಯರ ವಿರುದ್ಧ ಯುವತಿ ಪೋಷಕರ ಆಕ್ರೋಶ ವ್ಯಕ್ತಪಡಿಸಿದರು. ಉಭಯ ಕುಟುಂಬಸ್ಥರ ಮಧ್ಯೆ ಕೆಲಹೊತ್ತು ವಾಗ್ವಾದ ನಡೆದಿದ್ದು, ಹೊಸ ಮನೆಯಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಪೋಷಕರು ಮನೆ ಒಳಗಿದ್ದರೆ, ಇತ್ತ ರಾತ್ರಿಯಿಡಿ ಮನೆ ಮುಂದೆಯೇ ಯುವತಿ ಹಾಗೂ ತಾಯಿ ಕುಳಿತು ಪ್ರತಿಭಟಿಸಿದರು. ನಮ್ಮ ಪುತ್ರಿಯನ್ನು ಮದುವೆ ಮಾಡಿಕೊಂಡು ಬಾಳು ಕೊಡುವಂತೆ ಮುತ್ತುರಾಜ್‌ಗೆ ಯುವತಿಯ ಪೋಷಕರು ಆಗ್ರಹಿಸಿದರು.
ಚಿಕ್ಕಮಗಳೂರು: ತನ್ನ ಪ್ರೇಮಿಯೊಂದಿಗೆ (Lover) ಸರಸವಾಡಲು ಪತ್ನಿಯೇ ಪತಿಯನ್ನ ಮುಗಿಸಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.
ಪತಿ ನವೀನ್ (28) ಮೃತ ದುರ್ದೈವಿ, ಪತ್ನಿ ಪಾವನಾ ಬಂಧಿತ ಆರೋಪಿ. ಗಂಡನಿಗೆ ಊಟದಲ್ಲಿ ನಿದ್ರೆ ಮಾತ್ರೆ (Sleeping Tablet) ಹಾಕಿ ಜ್ಞಾನ ತಪ್ಪಿಸಿದ ಪಾವನಾ ಬಳಿಕ ಪ್ರೇಮಿಯ ಜೊತೆ ಬೈಕ್‌ನಲ್ಲಿ ಮೃತದೇಹವನ್ನ ತೆಗೆದುಕೊಂಡು ಹೋಗಿ ಕೆರೆಗೆ ಎಸೆದು ಬಂದಿದ್ದಾಳೆ. ಇದನ್ನೂ ಓದಿ: ಬಿಡುಗಡೆಗೂ ಮುನ್ನ ‘ಜವಾನ್’ ಚಿತ್ರದ ವಿಡಿಯೋ ಲೀಕ್: ಪೊಲೀಸ್ ಠಾಣೆ ಮೆಟ್ಟಿಲೇರಿದ ತಂಡ
ಪೋಷಕರ ದೂರಿನ ಆಧಾರದ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ ಇದು ಸಹಜ ಸಾವಲ್ಲ ಅನ್ನೋದು ಖಾತ್ರಿಯಾಗಿದೆ. ಪತ್ನಿ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಪಾವನಾ, ಸಂಜಯ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಸಂಜಯ್ ಜೊತೆ ಸೇರಿಸಲು ನವೀನ್ ಅಡ್ಡಗಾಲಾಗಿದ್ದರಿಂದ ಪತಿಯನ್ನ ಸ್ಕೆಚ್ ಹಾಕಿ ಮುಗಿಸಿದ್ದಾಳೆ ಅನ್ನೋ ಸತ್ಯ ತನಿಖೆಯಲ್ಲಿ ಬಯಲಾಗಿದೆ.
ವಿಜಯನಗರ: ಪಾಗಲ್ ಪ್ರೇಮಿಯೊಬ್ಬ ನಡುರಸ್ತೆಯಲ್ಲಿ ಗೃಹಿಣಿಯನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ವಿಜಯನಗರ (Vijaya Nagar) ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ.
ಪ್ರತಿಭಾ ನಾಗರಾಜ್ (25) ಕೊಲೆಯಾದ ಮಹಿಳೆ ಹಾಗೂ ದುಗ್ಗಾವತಿ ಪಕ್ಕದ ಚಿರಸ್ತಹಳ್ಳಿಯ ನಿವಾಸಿ ಮೂಕಪ್ಪನವರ ಹನುಮಂತ (27) ಕೊಲೆ ಮಾಡಿದ ಆರೋಪಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ದುಗ್ಗಮ್ಮ ದೇವಿ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಜಾತ್ರೆಗೆಂದು ಪ್ರತಿಭಾ ಚಿಕ್ಕಮ್ಮನ ಮನೆಗೆ ಬಂದಿದ್ದಳು.
ಘಟನೆ ಹಿನ್ನೆಲೆಯಲ್ಲಿ ತೀವ್ರಗಾಯಗೊಂಡಿದ್ದ ಪ್ರತಿಭಾಳನ್ನು ಹರಿಹರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ರಸ್ತ ಸ್ರಾವದಿಂದ ಮಾರ್ಗಮಧ್ಯಯೇ ಸಾವನ್ನಪ್ಪಿದ್ದಾರೆ. ಪ್ರತಿಭಾ ರಾಣೆಬೆನ್ನೂರಿನ ನಾಗರಾಜ್ ಎಂಬುವವರ ಜೊತೆ ವಿವಾಹವಾಗಿದ್ದು, ಓರ್ವ ಗಂಡು ಮಗು ಸಹ ಇದೆ. ಘಟನೆಗೆ ಸಂಬಂಧಿಸಿದಂತೆ ಹರಪನಹಳ್ಳಿ ತಾಲೂಕಿನ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದ ಹನುಮಂತುವನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮದುವೆ ಆಗ್ತೀನಿ ಅಂತಾ ನಂಬಿಸಿ ಯುವತಿಯನ್ನು 7 ತಿಂಗಳ ಗರ್ಭಿಣಿ ಮಾಡಿ ಕೈಕೊಟ್ಟ
ಪ್ರೇಮಿಯ ಈ ಚೀಟಿ ಹುಂಡಿ ಎಣಿಕೆ ಸಂದರ್ಭದಲ್ಲಿ ಸಿಕ್ಕಿದೆ. ದೇವರೇ ನನಗೆ ಹೆಣ್ಣನ್ನು ಕರುಣಿಸು ಎಂದು ಬರೆದಿದ್ದ ಪತ್ರ ಮೊನ್ನೆ ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ ಸಿಕ್ಕಿತ್ತು. ಇದೀಗ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಯಲ್ಲಿ ಮತ್ತೊಂದು ರೀತಿಯ ಪತ್ರ ದೊರೆತಿದ್ದು, ಗಮನಸೆಳೆದಿದೆ.
Live Tv
[brid partner=56869869 player=32851 video=960834 autoplay=true]
ಚಿಕ್ಕಮಗಳೂರು: ತಾಲೂಕಿನ ಆಲ್ದೂರು ಸಮೀಪದ ಗುಲ್ಲನ್‍ಪೇಟ್-ಸತ್ತಿಹಳ್ಳಿಯ ಕಾಡಿನಲ್ಲಿ ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಪ್ರೇಮಿಗಳ (Lovers) ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರೇಮಿಗಳ ಸಾವಿಗೆ ಮೂರನೇಯವಳು ಕಾರಣ ಅಂಶ ಬಯಲಾಗಿದೆ.
ಚಿಕ್ಕಮಗಳೂರು (Chikkamagaluru) ತಾಲೂಕಿನ ಮಲ್ಲಂದೂರು ಸಮೀಪದ ಕಲ್ಲುಗುಡ್ಡೆ ಗ್ರಾಮದ ದರ್ಶನ್ ಹಾಗೂ ಹಾಸನ (Hassan) ಜಿಲ್ಲೆ ಸಕಲೇಶಪುರ ತಾಲೂಕಿನ ಹಾನ್‍ಬಾಳು ಗ್ರಾಮದ ಪೂರ್ವಿಕಾ ಆಲ್ದೂರು ಸಮೀಪದ ಗುಲ್ಲನ್‍ಪೇಟೆಯ ಸತ್ತಿಹಳ್ಳಿಯ ನಿರ್ಜನ ಪ್ರದೇಶದಲ್ಲಿ ನೇಣಿಗೆ ಕೊರಳೊಡ್ಡಿದ್ದರು. ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದರ್ಶನ್ ಹಾಗೂ ಪೂರ್ವಿಕಾ ಮದುವೆಗೆ ಮನೆಯವರು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ ಆ ಸಂದರ್ಭದಲ್ಲಿ ದರ್ಶನ್ ಊರಿನದ್ದೇ ಹುಡುಗಿಯೊಬ್ಬಳು, ದರ್ಶನ್‍ನಿಂದ ನನಗೆ ಅನ್ಯಾಯವಾಗಿದೆ ಎಂದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಈ ಹಿನ್ನೆಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.
ಮಂಗಳೂರಿಗೆ (Mangaluru) ಹೋಗಿ ಬರುತ್ತಿದ್ದ ದರ್ಶನ್‍ಗೆ ಮಂಗಳೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪೂರ್ವಿಕಾ ನಡುವೆ ಸ್ನೇಹವಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿತ್ತು. ವಿಷಯ ಮನೆಯವರಿಗೆ ತಿಳಿದು 5 ವರ್ಷದ ಬಳಿಕ ಮದುವೆ ಮಾಡುತ್ತೇವೆ ಎಂದಿದ್ದರು. ಆದರೆ, ಒಂದು ತಿಂಗಳ ಹಿಂದೆ ದರ್ಶನ್ ವಿರುದ್ಧ ತಾಲೂಕಿನ ಮಲ್ಲಂದೂರು ಠಾಣೆಯಲ್ಲಿ ಹುಡುಗಿಯೊಬ್ಬಳು ನನಗೆ ದರ್ಶನ್‍ನಿಂದ ಅನ್ಯಾಯವಾಗಿದೆ. ನಾನು ಗರ್ಭಿಣಿ ಇದ್ದೇನೆ. ಈಗ ಮದುವೆ ಆಗೋಕೆ ಒಪ್ಪುತ್ತಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ದೂರು ನೀಡಿದ್ದಳು. ಈ ಕೇಸ್ ಪ್ರೇಮಿಗಳ ಮಧ್ಯೆ ಬಿರುಕು ಮೂಡಿಸಿತ್ತು. ಅಷ್ಟೇ ಅಲ್ಲದೇ 6 ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿ ಪೂರ್ವಿಕಾಳನ್ನೇ ಮದುವೆ ಆಗೋದಾಗಿ ಹೇಳಿದ್ದ ದರ್ಶನ್ ದೂರುಕೊಟ್ಟ ಹುಡುಗಿಯನ್ನೇ ಮದುವೆಯಾಗೋ ಸಂದರ್ಭವೂ ಎದುರಾಗಿತ್ತು.
ಈ ವಿಚಾರ ಗೊತ್ತಾಗುತ್ತಿದ್ದಂತೆ ಪೂರ್ವಿಕ ಸಿಟ್ಟಾಗಿದ್ದಳು. ದರ್ಶನ್ ಎಲ್ಲಾ ರೀತಿಯಲ್ಲೂ ಪೂರ್ವಿಕಾಳ ಮನವೊಲಿಸುವ ಪ್ರಯತ್ನ ಮಾಡಿದ್ದಳು. ಡಿ.ಎನ್.ಎ. ಟೆಸ್ಟ್ ಬೇಕಾದರೂ ಮಾಡಿಸು ಎಂದು ಬೇಡಿಕೊಂಡಿದ್ದ. ಆದರೆ, 3 ದಿನದ ಹಿಂದೆ ಮಂಗಳೂರಿನಿಂದ ಬಂದ ಪೂರ್ವಿಕಾ, ದರ್ಶನ್‍ನನ್ನು ಭೇಟಿಯಾಗಿ ಮಾತನಾಡಿದ್ದಾಳೆ. ಆ ವೇಳೆ ಇಬ್ಬರ ನಡುವೆ ಏನಾಯ್ತೋ ಗೊತಿಲ್ಲ. ಏನು ಮಾತನಾಡಿಕೊಂಡರೋ ಅದೂ ಗೊತ್ತಿಲ್ಲ. ಆದರೆ, ಅಪ್ಪ-ಅಮ್ಮನಿಗೆ ಕ್ಷಮಿಸಿ, ಅವನನ್ನ ಬಿಟ್ಟು ಇರೋಕೆ ಆಗುತ್ತಿಲ್ಲ ಎಂದು ವಾಯ್ಸ್ ಮೆಸೇಜ್ ಕಳಿಸಿ ಪೂರ್ವಿಕಾ ತನ್ನ ಪ್ರೇಮಿ ಜೊತೆ ನೇಣಿಗೆ ಕೊರಳೊಡ್ಡಿದ್ದಾಳೆ. ಇದನ್ನೂ ಓದಿ: ಒಂದೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಬದುಕಿದ್ದರೆ ದೂರುಕೊಟ್ಟ ಹುಡುಗಿಯನ್ನೇ ಮದುವೆ ಆಗಬೇಕು ಎಂಬ ಭಯವೋ ಅಥವಾ 6 ವರ್ಷದ ಪ್ರೀತಿಗೆ ಮೋಸ ಮಾಡುವ ಅಳುಕೋ ಗೊತ್ತಿಲ್ಲ. ಇಬ್ಬರು ಒಂದೇ ಮರಕ್ಕೆ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಿಕಿತ್ಸೆಗೆಂದು ಬಂದಿದ್ದ ತಾಯಿ, ಮಗಳು – ಆಸ್ಪತ್ರೆಯ ಕಬೋರ್ಡ್‍ನಲ್ಲಿ, ಹಾಸಿಗೆಯ ಕೆಳಗೆ ಶವವಾಗಿ ಪತ್ತೆ
Live Tv
[brid partner=56869869 player=32851 video=960834 autoplay=true]
ಚಿಕ್ಕಮಗಳೂರು: ಪ್ರೇಮಿಗಳಿಬ್ಬರು (Lovers) ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಒಂದೇ ವೇಲ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಆಲ್ದೂರು ಸಮೀಪದ ಗುಲ್ಲನ್‍ಪೇಟೆಯ ಸತ್ತಿಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೃತರಿಬ್ಬರು 20 ರಿಂದ 23 ವರ್ಷದ ಒಳಗಿನವರು ಎಂದು ಅಂದಾಜಿಸಲಾಗಿದೆ. ಮೃತ ಯುವಕನನ್ನು ತಾಲೂಕಿನ ಕಲ್ಲುಗುಡ್ಡೆ ಸಮೀಪದ ಆಣೂರಿನ ದರ್ಶನ್ ಹಾಗೂ ಯುವತಿಯನ್ನು ಹಾಸನ (Hassan) ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನ್‍ಬಾಳು ಮೂಲದ ಪೂರ್ವಿಕಾ ಎಂದು ಗುರುತಿಸಲಾಗಿದೆ. ಆದರೆ, ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ:ಜವಾಬ್ದಾರಿ ತೆಗೆದುಕೊಳ್ಳೋ ಮೂರ್ಖ ಸಿಕ್ಕ ತಕ್ಷಣ ಸಿಇಒ ಹುದ್ದೆಯಿಂದ ಕೆಳಗಿಯುತ್ತೇನೆ: ಮಸ್ಕ್
ದರ್ಶನ್ ಚಿಕ್ಕಮಗಳೂರಿನಲ್ಲಿದ್ದ, (Chikkamagaluru) ಪೂರ್ವಿಕಾ ಮಂಗಳೂರಿನಲ್ಲಿ (Mangaluru) ಕೆಲಸ ಮಾಡಿಕೊಂಡಿದ್ದಳು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಇಬ್ಬರು ಪ್ರೇಮಿಗಳಿರಬಹುದು ಎಂದು ಶಂಕಿಸಲಾಗಿದೆ. ವೇಲಿನ ಒಂದು ತುದಿಗೆ ಆಕೆ ಕೊರಳೊಡ್ಡಿದ್ದರೆ, ಮತ್ತೊಂದು ತುದಿಗೆ ದರ್ಶನ್ ನೇಣು ಬಿಗಿದುಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆಲ್ದೂರು ಪೊಲೀಸರು ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ತಂದಿದ್ದಾರೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ
Live Tv
[brid partner=56869869 player=32851 video=960834 autoplay=true]
ವಿಜಯಪುರ: ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ (Love) ಬಲಿಯಾಗಿರುವ ಘಟನೆ ವಿಜಯಪುರ (Vijayapura) ಜಿಲ್ಲೆ ತಿಕೋಟಾ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ.
ಕಳ್ಳಕವಟಗಿಯ ಅಪ್ರಾಪ್ತೆ ಹಾಗೂ ಘೋಣಸಗಿ ಗ್ರಾಮ ಮಲ್ಲು ಜಮಖಂಡಿ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಏಕಾಂತದಲ್ಲಿದ್ದಾಗ ಹುಡುಗಿ ತಂದೆ ಗುರಪ್ಪನ ಕೈಗೆ ಸಿಕ್ಕಿಕೊಂಡಿದ್ದರು. ಆಗ ಗುರುಪ್ಪ ಇಬ್ಬರಿಗೂ ಬುದ್ಧಿ ಹೇಳಿದ್ದರು. ಆದರೆ ತಂದೆಯ (Father) ಮಾತು ಕೇಳದೆ ಆತುರದಲ್ಲಿ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಅದಾದ ಬಳಿಕ ಮಲ್ಲು ಜಮಖಂಡಿ ಶವ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಸಿಕ್ಕಿದೆ. ಸೆಪ್ಟೆಂಬರ್ 22 ರಂದು ನಡೆದ ಘಟನೆ ಇಂದು ಶವ ಸಿಕ್ಕಿದ ಬಳಿಕ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಮಗಳ ಸಾವಿಗೆ ಕಾರಣವಾದ ಪ್ರೇಮಿ ಮಲ್ಲುವನ್ನು ಬಿಡಬಾರದು ಎಂದು ಕೈಕಾಲು ಕಟ್ಟಿ ಅದೇ ವಿಷವನ್ನು ಯುವಕನಿಗೆ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಮಲ್ಲು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೋಟೆಲ್ ಮಾಲೀಕರಿಗೆ ಗುಡ್‌ನ್ಯೂಸ್ – ಮಧ್ಯರಾತ್ರಿ 1 ಗಂಟೆವರೆಗೂ ಹೋಟೆಲ್ ತೆರೆಯಲು ಅನುಮತಿ
ತಿಕೋಟಾ ಹಾಗೂ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ತಿಕೋಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ ಗುರಪ್ಪ ಹಾಗೂ ಆತನ ಅಳಿಯ ಅಜೀತ್‌ನನ್ನು ತಿಕೋಟಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಬೈಕ್ ಸಮೇತ ನದಿಯಲ್ಲಿ ಕೊಚ್ಚಿ ಹೋದ ಸವಾರರು- ಓರ್ವ ಸಾವು
Live Tv
[brid partner=56869869 player=32851 video=960834 autoplay=true]