Tag: ಪ್ರೇತ ಕಲ್ಯಾಣ

  • ದಕ್ಷಿಣ ಕನ್ನಡದಲ್ಲೊಂದು ವಿಶೇಷ ಸಂಪ್ರದಾಯ – ಸತ್ತ 30 ವರ್ಷಗಳ ನಂತ್ರ ನಡೆಯುತ್ತೆ ಪ್ರೇತಗಳ ಮದುವೆ

    ದಕ್ಷಿಣ ಕನ್ನಡದಲ್ಲೊಂದು ವಿಶೇಷ ಸಂಪ್ರದಾಯ – ಸತ್ತ 30 ವರ್ಷಗಳ ನಂತ್ರ ನಡೆಯುತ್ತೆ ಪ್ರೇತಗಳ ಮದುವೆ

    ಮಂಗಳೂರು: ಪ್ರೇತ ಕಲ್ಯಾಣವನ್ನು ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಇಂದಿಗೂ ಆಚರಿಸುತ್ತಾ ಬಂದಿರುವ ಸಂಪ್ರದಾಯವಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಮರಣ ಹೊಂದಿದವರಿಗೆ ಮದುವೆಯನ್ನು ಮಾಡಲಾಗುತ್ತದೆ. ಇದನ್ನು ಇಲ್ಲಿನ ಜನರು ಗೌರವಿಸುತ್ತಾರೆ ಮತ್ತು ನಂಬುತ್ತಾರೆ.

    ಹೌದು, ಕರಾವಳಿ ಭಾಗದಲ್ಲೊಂದು ಪ್ರೇತಗಳ ಮದುವೆ ನಡೆದಿದೆ. 30 ವರ್ಷಗಳ ಹಿಂದೆ ಮೃತಪಟ್ಟ ಶೋಭಾ ಮತ್ತು ಚಂದಪ್ಪಗೆ ಈಗ ಮದುವೆ ಮಾಡಲಾಗಿದೆ. ಇದನ್ನು ‘ಪ್ರೇತ ಕಲ್ಯಾಣ’ ಅಥವಾ ‘ಸತ್ತವರ ಮದುವೆ’ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ದ.ಕ ಜಿಲ್ಲೆಯಲ್ಲಿ 3 ದಿನಗಳ ಕಾಲ ಕಟ್ಟೆಚ್ಚರ – ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ

    ಈ ಬಗ್ಗೆ ಅನ್ನಿ ಅರುಣ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ  ಹಂಚಿಕೊಂಡಿದ್ದಾರೆ. ನಾನು ಮದುವೆ ಒಂದಕ್ಕೆ ಹೋಗಿದ್ದೆ. ಇದರ ವಿಶೇಷತೆ ಏನು ಎಂದು ನೀವು ಕೇಳಬಹುದು. ಯಾಕೆಂದರೆ ಇದರಲ್ಲಿ ಗಂಡು ಮತ್ತು ಹೆಣ್ಣು 30 ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಅವರ ಮದುವೆ ಈಗ ಮಾಡಲಾಯಿತು. ಪ್ರತಿವರ್ಷ ಆಷಾಢ ಮಾಸದಲ್ಲಿ ಇಲ್ಲಿ ಪ್ರೇತಗಳಿಗೆ ಮದುವೆ ಮಾಡಲಾಗುತ್ತಿದೆ. ಹಾಗೆಯೇ ಇಂದು ಕೂಡ ಇಬ್ಬರು ಅತೃಪ್ತ ಆತ್ಮಗಳಾಗಿ ತಿರುಗುತ್ತಿದ್ದಾರೆ ಎಂದು ಮದುವೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

    ಸಣ್ಣ ವಯಸ್ಸಿನಲ್ಲೇ ಮೃತಪಟ್ಟವರು ಪ್ರೇತವಾಗಿ ತಿರುಗುತ್ತಾರೆ. ಮದುವೆ ವಯಸ್ಸಿಗೆ ಬಂದ ಪ್ರೇತ ಮನೆಯವರಿಗೆ ಕಾಟ ಕೊಡುತ್ತದೆ. ಆಗ ಮನೆಯವರು ಮಂತ್ರವಾದಿಗಳ ಬಳಿಗೆ ಹೋಗಿ ಸತ್ತ ಆತ್ಮಗಳ ಮದುವೆ ಮಾಡಿಸಿ ಶಾಂತಿ ಸಿಗುವಂತೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ವರುಣನ ಆರ್ಭಟ – 4 ತಾಲೂಕಿನ ಶಾಲೆಗಳಿಗೆ ರಜೆ

    ಪ್ರೇತದ ಮದುವೆಗೂ ಗಂಡು ಹೆಣ್ಣು ಹುಡುಕಲಾಗುತ್ತದೆ. ಸಂಬಂಧ ನಿಗದಿಯಾದ ನಂತರ ಗೋತ್ರ, ನಕ್ಷತ್ರ ಹೊಂದಾಣಿಕೆ ಮಾಡಿ ಶಾಸ್ತ್ರ ಪ್ರಕಾರವಾಗಿ ಮದುವೆ ಮಾಡಿಸುತ್ತಾರೆ. ಒಂದು ವೇಲೆ ಜನನದ ವೇಳೆ ಮಗು ಮರಣ ಹೊಂದಿದರೆ, ಇದೇ ರೀತಿ ಜನನದ ಸಮಯದಲ್ಲಿ ಮರಣ ಹೊಂದಿದ ಮತ್ತೊಂದು ಮಗುವಿಗೆ ವಿವಾಹ ಮಾಡಲಾಗುತ್ತದೆ. ಆದರೆ ಈ ಮದುವೆಗೆ ಮಕ್ಕಳು ಮತ್ತು ಅವಿವಾಹಿತರಿಗೆ ಪ್ರವೇಶವಿರುವುದಿಲ್ಲ.

    ಸಪ್ತಪದಿ ಸೇರಿದಂತೆ ಹಲವಾರು ಶಾಸ್ತ್ರಗಳನ್ನು ಜೀವಂತ ಇರುವವರಿಗೆ ಮಾಡುವಂತೆ, ಪ್ರೇತಗಳಿಗೂ ಮದುವೆ ಶಾಸ್ತ್ರವನ್ನು ಮಾಡಲಾಗುತ್ತದೆ. ಮದುವೆಯಲ್ಲಿ ವಧುವರ ಬದಲಾಗಿ ಭಾವಚಿತ್ರಗಳನ್ನು ಇಡಲಾಗುತ್ತದೆ. ಇಷ್ಟೇ ಅಲ್ಲದೇ ಪ್ರೇತಗಳ ಮದುವೆ ಸಮಾರಂಭದಲ್ಲಿ ಮೀನಿನ ಫ್ರೈ, ಚಿಕನ್ ಸುಕ್ಕ, ಕಡ್ಲೆ ಬಲ್ಯಾರ್, ಇಡ್ಲಿಯೊಂದಿಗೆ ಮಟನ್ ಗ್ರೇವಿ ಹೀಗೆ ಹಲವಾರು ವಿಧವಿಧವಾದ ಖಾದ್ಯಗಳನ್ನು ಮಾಡಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]