Tag: ಪ್ರೇಕ್ಷಕ

  • ಸಿನಿಮಾ ನೋಡೋದೇ ಜನರ ಉದ್ಯೋಗವಲ್ಲ: ಫಹಾದ್ ಫಾಸಿಲ್ ಅಚ್ಚರಿ ಹೇಳಿಕೆ

    ಸಿನಿಮಾ ನೋಡೋದೇ ಜನರ ಉದ್ಯೋಗವಲ್ಲ: ಫಹಾದ್ ಫಾಸಿಲ್ ಅಚ್ಚರಿ ಹೇಳಿಕೆ

    ಮ್ಮ ಸಿನಿಮಾವನ್ನು ತಪ್ಪದೇ ನೋಡಿ, ಮರೆಯಬೇಡಿ, ಮರೆತು ನಿರಾಸೆಯಾಗಬೇಡಿ ಎಂದು ಹೇಳುವುದರ ಜೊತೆಗೆ ಥಿಯೇಟರ್ ಗೆ ಜನರನ್ನು ಕರೆತರಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ ಸಿನಿಮಾ ಮಂದಿ. ಅದರಲ್ಲೂ ನಟರು ತಮ್ಮ ಪಾತ್ರ, ಕಥೆ, ಸನ್ನಿವೇಶ ಹೀಗೆ ಸಾಕಷ್ಟು ವಿಷಯಗಳನ್ನು ಪ್ರಚಾರ ಮಾಡಿ, ಜನರಿಗೆ ಸಿನಿಮಾ ನೋಡಿ ಎಂದು ಹೇಳುತ್ತಾರೆ.

    ಆದರೆ, ದಕ್ಷಿಣದ ಹೆಸರಾಂತ ನಟ ಫಹಾದ್ ಫಾಸಿಲ್ (Fahad Faasil), ‘ಸಿನಿಮಾ ನೋಡುವುದೇ ಜನರ (Audience) ಉದ್ಯೋಗವಲ್ಲ. ಅವರಿಗೆ ಅವರದ್ದೇ ಆದ ಕೆಲಸವಿರುತ್ತದೆ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಫಾಸಿಲ್ ಆಡಿದ ಈ ಮಾತು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಫಹಾದ್ ಈ ರೀತಿ ಹೇಳಬಾರದಿತ್ತು ಎಂದು ಇಂಡಸ್ಟ್ರಿಯವರು ಪ್ರತಿಕ್ರಿಯಿಸಿದ್ದಾರೆ.

    ಫಹಾದ್ ಹೀಗೆ ಮಾತನಾಡುವುದಕ್ಕೆ ಕಾರಣವಿದೆ. ಸಿನಿಮಾ ನೋಡಿದ ಮೇಲೆ, ಅದನ್ನು ಮನೆವರೆಗೂ ತಗೆದುಕೊಂಡು ಹೋಗಬಾರದು. ನಿಮಗೆ ನಿಮ್ಮದೇ ಆದ ಖಾಸಗಿ ಬದುಕಿದೆ. ಸಿನಿಮಾ ನೋಡಿದ ತಕ್ಷಣ ಅದರಿಂದ ಆಚೆ ಬಂದು ಬಿಡಬೇಕು. ಅಷ್ಟಕ್ಕೂ ಸಿನಿಮಾ ನೋಡೋದೇ ನಿಮ್ಮ ಉದ್ಯೋಗವಲ್ಲ ಎಂದಿದ್ದಾರೆ. ಈ ಮಾತನ್ನು ಬೇರೆ ರೀತಿಯಲ್ಲಿ ತಿರುಗಿಸಲಾಗುತ್ತಿದೆ.

  • ‘ಬೈಕಾಟ್’ ಅನ್ನುವವರು ನಿಜವಾದ ಪ್ರೇಕ್ಷಕರಲ್ಲ: ಸೈಫ್ ಅಲಿ ಖಾನ್ ಆರೋಪ

    ‘ಬೈಕಾಟ್’ ಅನ್ನುವವರು ನಿಜವಾದ ಪ್ರೇಕ್ಷಕರಲ್ಲ: ಸೈಫ್ ಅಲಿ ಖಾನ್ ಆರೋಪ

    ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಬೈಕಾಟ್ ಬಿಸಿಗೆ ಬಾಲಿವುಡ್ ಬೆದರಿ ಬೆಂಡಾಗಿದೆ. ಲಾಲ್ ಸಿಂಗ್ ಚಡ್ಡಾ, ಬ್ರಹ್ಮಾಸ್ತ್ರ, ವಿಕ್ರಮ್ ವೇದಾ ಸೇರಿದಂತೆ ಹಲವು ಚಿತ್ರಗಳು ಬೈಕಾಟ್ ಹೊಡೆತಕ್ಕೆ ತತ್ತರಿಸಿ ಹೋದವು. ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗುವುದಷ್ಟೇ ಅಲ್ಲ, ಬಾಲಿವುಡ್ ಯುಗವೇ ಮುಗಿಯಿತು ಎನ್ನುವಷ್ಟರ ಮಟ್ಟಿಗೆ ಬಳಲಿದವು. ಆಯಾ ಕಾಲಕ್ಕೆ ಬೈಕಾಟ್ ಬಗ್ಗೆ ನಟರು ಕಾಮೆಂಟ್ ಮಾಡಿದರೂ, ನಟ ಸೈಫ್ ಅಲಿಖಾನ್ ಅಷ್ಟು ನೇರವಾಗಿ ಯಾರೂ ಮಾತನಾಡಿರಲಿಲ್ಲ.

    ಬಾಲಿವುಡ್ ನಟ ಸೈಫ್ ಅಲಿಖಾನ್ ಇದೀಗ ಬೈಕಾಟ್ ಬಗ್ಗೆ ಮಾತನಾಡಿದ್ದು, ಬೈಕಾಟ್ ಮಾಡುವವರು ನಿಜವಾದ ಪ್ರೇಕ್ಷಕರೇ ಅಲ್ಲ ಎಂದು ಆರೋಪಿಸಿದ್ದಾರೆ. ನಿಜವಾದ ಸಿನಿ ಪ್ರೇಕ್ಷಕರು ಚಿತ್ರಗಳನ್ನು ನೋಡುತ್ತಾರೆ. ಜಾತಿ, ಧರ್ಮ ಎನ್ನುವುದಿಲ್ಲ. ಆದರೆ, ಇಲ್ಲಿ ಕೆಲವರು ವಿನಾಕಾರಣ ಸಿನಿಮಾ ರಂಗದ ಮೇಲೆ ಹಿಡಿತ ಸಾಧಿಸಲು ಹೊರಟಂತಿದೆ. ಅದೇ ಬೈಕಾಟ್ ಆಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ:`ಕಾಂತಾರ’ ಚಿತ್ರದ ಹಾಡಿಗೆ ಧ್ವನಿಯಾದ ಜರ್ಮನ್ ಅಂಧ ಗಾಯಕಿ

    ಈ ಕುರಿತು ಕೆಲವು ಸಲಹೆಗಳನ್ನೂ ನೀಡಿರುವ ಸೈಫ್, ಬೈಕಾಟ್ ಅನ್ನು ಸಣ್ಣದರಲ್ಲಿ ಇರುವಾಗಲೇ ಹತ್ತಿಕ್ಕಬೇಕಿತ್ತು. ಅದನ್ನು ಇಷ್ಟೊಂದು ದೊಡ್ಡದಾಗಿ ಬೆಳೆಯಲು ಬಿಡಬಾರದು. ಬೈಕಾಟ್ ಬಿಸಿಯಿಂದ ತಪ್ಪಿಸಿಕೊಳ್ಳಲು ಬಾಲಿವುಡ್ ಒಂದಾಗಬೇಕು. ಇಡೀ ಬಾಲಿವುಡ್ ಒಂದಾದರೆ, ಎಂತಹ ಶಕ್ತಿಯನ್ನಾದರೂ ಎದುರಿಸೋಕೆ ಬರುತ್ತದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]