Tag: ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ

  • ಪಬ್ಲಿಕ್ ಟಿವಿ‌ ಸಂಪಾದಕ ದಿವಾಕರ್‌ಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ

    ಪಬ್ಲಿಕ್ ಟಿವಿ‌ ಸಂಪಾದಕ ದಿವಾಕರ್‌ಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ

    ಬೆಂಗಳೂರು: ಪಬ್ಲಿಕ್‌ ಟಿವಿ (Public Tv) ಮುಖ್ಯ ಸಂಪಾದಕ ದಿವಾಕರ್‌.ಸಿ (Divakar.C) ಅವರು ಪ್ರತಿಷ್ಠಿತ ಬೆಂಗಳೂರು ಪ್ರೆಸ್‌ ಕ್ಲಬ್‌ನ ವಾರ್ಷಿಕ ಪ್ರಶಸ್ತಿಗೆ (Press Club Annual Award) ಭಾಜನರಾಗಿದ್ದಾರೆ.

    ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿರುವ 33 ಹಿರಿಯ ಪತ್ರಕರ್ತರಿಗೆ ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇದೇ ವೇಳೆ ಇತ್ತೀಚೆಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ʼವರ್ಷದ ವ್ಯಕ್ತಿʼ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜೊತೆಗೆ ಸಚಿವರಾದ ಮುರುಗೇಶ್‌ ನಿರಾಣಿ ಹಾಗೂ ಎಸ್‌.ಟಿ.ಸೋಮಶೇಖರ್‌ ಅವರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ

    ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ
    ಹೆಚ್‌.ಎಸ್.ಬಲರಾಂ, ಅಗ್ರಹಾರ ಕೃಷ್ಣಮೂರ್ತಿ, ಗಂಗಾಧರ ಮೊದಲಿಯಾರ್‌, ಚೆನ್ನ ನಾಗರಾಜ್‌ ಎಂ., ಶ್ರೀಧರ್‌ ಬಿ.ಎನ್, ವಿನಯ್‌ ಎಂ., ಗೌತಮ್‌ ಮಾಚಯ್ಯ ಎಂ., ರಾಜಶೇಖರ್‌ ಎಸ್‌., ಹೆಚ್‌.ಮೂರ್ತಿ, ಐ.ಹೆಚ್‌.ಸಂಗಮ್‌ ದೇವ್‌, ಮುನೀರ್‌ ಅಹಮದ್‌ ಅಜದ್‌, ಕೆ.ವಿ.ಪರಮೇಶ್‌, ಸಿ.ಎಸ್‌.ಬೋಪಯ್ಯ, ಶ್ಯಾಂ ಬೋಜಕ್‌, ಕೆ.ಭಾಗ್ಯ ಪ್ರಕಾಶ್‌, ಅನಿಲ್‌ ವಿ.ಗೆಜ್ಜೆ, ಗಾಯಿತ್ರಿ ನಿವಾಸ್‌, ಬಸವರಾಜು, ಹನುಮೇಶ್‌ ಯಾವಗಲ್‌, ಶಿವಣ್ಣ, ಎಂ.ಸಿ.ಶೋಭಾ, ವೈ.ಎಂ.ನಾಗಭೂಷಣ್, ವಿಲಾಸ್‌ ನಂದೂಡಕರ್‌, ಇ.ನಾಗರಾಜು, ಪಿ.ರಾಜೇಂದ್ರ, ಟಿ.ವಿ.ಶಿವಾನಂದ ತಗಡೂರು, ಎಸ್.ಶಿವಪ್ರಕಾಶ್‌, ಓಂಕಾರ ಕಾಕಡೆ, ಆರ್‌.ಜಯಪ್ರಕಾಶ್‌, ನರಸಿಂಹ ರಾವ್‌, ಕೆ.ರಾಘವೇಂದ್ರ, ಕೆ.ಗಿರಿಪ್ರಕಾಶ್‌.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಟಿವಿಯ ಬದ್ರುದ್ದೀನ್ ಮಾಣಿಯವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನ

    ಪಬ್ಲಿಕ್ ಟಿವಿಯ ಬದ್ರುದ್ದೀನ್ ಮಾಣಿಯವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನ

    ಬೆಂಗಳೂರು: ಸೋಮವಾರದಂದು ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ 2018ರ ವರ್ಷದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಬ್ಲಿಕ್ ಟಿವಿಯ ರಾಜಕೀಯ ವಿಭಾಗದ ಮುಖ್ಯಸ್ಥ ಬದ್ರುದ್ದೀನ್.ಕೆ.ಮಾಣಿ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಈ ಸಮಾರಂಭದಲ್ಲಿ ನಗರಾಭಿವೃದ್ದಿ ಸಚಿವ ಜಿ ಪರಮೇಶ್ವರ್ ಮತ್ತು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ಪತ್ರಿಕೋದ್ಯಮದ ಎಲ್ಲಾ ಹಿರಿಯ ಪತ್ರಕರ್ತರು ಭಾಗಿಯಾಗಿದ್ದರು. ಇದೇ ವೇಳೆ ಸಚಿವ ಜಿ. ಪರಮೇಶ್ವರ್ ಮತ್ತು ಸುಧಾಮೂರ್ತಿ ಅವರಿಗೆ ಸನ್ಮಾನ ಮಾಡಲಾಯಿತು. ಹಾಗೆಯೇ ಸಚಿವ ಜಿ ಪರಮೇಶ್ವರ್ ಮತ್ತು ಸುಧಾಮೂರ್ತಿ ಅವರು ಸಾಧನೆ ಮಾಡಿರುವ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.

    ಪಬ್ಲಿಕ್ ಟಿವಿಯ ಬದ್ರುದ್ದೀನ್ ಕೆ. ಮಾಣಿ, ಕೆ.ಎನ್ ತಿಲಕ್ ಕುಮಾರ್, ರವಿ ಹೆಗಡೆ, ಕೆ.ಎಸ್.ಸಚ್ಚಿದಾನಂದ ಮೂರ್ತಿ (ಸಚ್ಚಿ), ತಿಮ್ಮಪ್ಪ ಭಟ್, ಎ.ಬಾಲಚಂದ್ರ, ವೆಂಕಟನಾರಾಯಣ, ರಾಮಣ್ಣ ಎಚ್. ಕೋಡಿ ಹೊಸಹಳ್ಳಿ, ತುಂಗಾ ರೇಣುಕ, ಕೆ.ವಿ.ಪ್ರಭಾಕರ್, ಡಿ.ಸಿ.ನಾಗೇಶ್, ರಾಜಶೇಖರ ಹತ್ ಗುಂದಿ, ವೇದಂ ಜಯಶಂಕರ್, ರಾಜಶೇಖರ ಅಬ್ಬೂರು, ಶಿವಾಜಿ ಗಣೇಶನ್ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಬದ್ರುದ್ದೀನ್ ಕೆ. ಮಾಣಿ, ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದರಿಂದ ನನ್ನ ಜವಾಬ್ದಾರಿ ಹೆಚ್ಚಾದಂತೆ ಅನಿಸುತ್ತಿದೆ. ಈ ಪ್ರಶಸ್ತಿಯನ್ನು ದೃಶ್ಯ ಮಾಧ್ಯಮದ ನನ್ನ ಎಲ್ಲಾ ಗೆಳೆಯರಿಗೆ ಸಮರ್ಪಿಸುತ್ತೇನೆ. ನನ್ನನ್ನು ಗುರುತಿಸಿ ಬೆಳೆಸಿದಂತಹ ಪಬ್ಲಿಕ್ ಟಿವಿಗೆ ನಾನು ಆಭಾರಿಯಾಗಿದ್ದೇನೆ. ಕಳೆದ ನಾಲ್ಕು ವರ್ಷದಿಂದ ರಾಜಕೀಯ ವಿಭಾಗದಲ್ಲಿ ನನಗೆ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಈ ಪ್ರಶಸ್ತಿಯು ನನ್ನ ಪಬ್ಲಿಕ್ ಟಿವಿ ಸಂಸ್ಥೆಗೂ ಸಲ್ಲುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv