Tag: ಪ್ರೆಗ್ನೆಂಟ್

  • ಚಿತ್ರೀಕರಣದಲ್ಲಿ ದೀಪಿಕಾ: ಕಳವಳ ವ್ಯಕ್ತ ಪಡಿಸಿದ ಫ್ಯಾನ್ಸ್

    ಚಿತ್ರೀಕರಣದಲ್ಲಿ ದೀಪಿಕಾ: ಕಳವಳ ವ್ಯಕ್ತ ಪಡಿಸಿದ ಫ್ಯಾನ್ಸ್

    ತ್ತೀಚೆಗಷ್ಟೇ ತಾನು ತಾಯಿ ಆಗುತ್ತಿರುವ ಕುರಿತಂತೆ ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದರು. ಪ್ರೆಗ್ನೆಂಟ್ (Pregnant) ಅಂತ ಹೇಳಿ ಇದೀಗ ಸಿನಿಮಾವೊಂದರ ಚಿತ್ರೀಕರಣದಲ್ಲಿ ತೊಡಗಿದ್ದಾರೆ ನಟಿ. ಈ ನಡೆಗೆ ಫ್ಯಾನ್ಸ್ ಆತಂಕ ವ್ಯಕ್ತ ಪಡಿಸಿದ್ದಾರೆ. ಈ ಸಮಯದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳೋದು ಸರಿಯಲ್ಲ ಎಂದು ತಿಳುವಳಿಕೆ ಹೇಳಿದ್ದಾರೆ. ಯಾವುದಕ್ಕೂ ಹುಷಾರಾಗಿ ಕೆಲಸ ಮಾಡಿ ಎಂದು ಸಲಹೆಯನ್ನೂ ನೀಡಿದ್ದಾರೆ.


    ದೀಪಿಕಾ ಪಡುಕೋಣೆ (Deepika Padukone) ಸದ್ಯ ‘ಸಿಂಗಂ ಅಗೈನ್’ (Singham Again) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಾಯಕವೇ ಕೈಲಾಸ ಅಂತ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಿಗೆ ಗರ್ಭಿಣಿ ದೀಪಿಕಾ ಸಾಥ್ ನೀಡುತ್ತಿದ್ದಾರೆ. ಸದ್ಯ ಚಿತ್ರೀಕರಣಕ್ಕೆ ಹಾಜರಿ ಹಾಕಿರುವ ದೀಪಿಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ‘ಪಠಾಣ್’ ಮತ್ತು ‘ಜವಾನ್’ ಸಿನಿಮಾಗಳ ಸಕ್ಸಸ್ ನಂತರ ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್‌ನ ಟಾಪ್ ನಟಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳು ಅವರ ಲಿಸ್ಟ್ನಲ್ಲಿದೆ. ಇದರ ನಡುವೆ ಇತ್ತೀಚೆಗೆ ತಾವು ತಾಯಿಯಾಗಿರುವ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆದರೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ನಟಿ ಕೈಬಿಟ್ಟಿಲ್ಲ.

    ‘ಸಿಂಗಂ ಅಗೈನ್’ ಚಿತ್ರದಲ್ಲಿ ದೀಪಿಕಾ ಪೊಲೀಸ್ ಅಧಿಕಾರಿ ನಟಿಸುತ್ತಿದ್ದಾರೆ. ಕಳೆದ ವರ್ಷದ ಅಂತ್ಯದಿಂದಲೇ ಅವರ ಭಾಗದ ಚಿತ್ರೀಕರಣ ಶುರುವಾಗಿತ್ತು. ಪ್ರೆಗ್ನೆಂಟ್ ಆಗಿರುವ ದೀಪಿಕಾ ವಿಶ್ರಾಂತಿ ಪಡೆಯಬೇಕಿತ್ತು. ಆದರೆ ಸಿನಿಮಾಗೆ ತೊಂದರೆ ಆಗಬಾರದು ಎಂದು ಕೊಟ್ಟ ಮಾತಿನಂತೆ, ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ ಕೊಡಲು ಮತ್ತೆ ಶೂಟಿಂಗ್‌ಗೆ ನಟಿ ಭಾಗಿಯಾಗಿದ್ದಾರೆ. ಇದೀಗ ನಟಿಯ ಶೂಟಿಂಗ್ ಫೋಟೋಗಳು ಗಮನ ಸೆಳೆಯುತ್ತಿವೆ.

     

    ‘ಸಿಂಗಂ ಅಗೈನ್’ ಚಿತ್ರದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್, ಕರೀನಾ ಕಪೂರ್ ಕೂಡ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಪೊಲೀಸ್ ಅಧಿಕಾರಿಯಾಗಿ ಶಕ್ತಿ ಶೆಟ್ಟಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ರೋಹಿತ್‌ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.

  • ಪರಿಣಿತಿ ಪ್ರೆಗ್ನೆಂಟ್: ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಗರಂ ಆದ ನಟಿ

    ಪರಿಣಿತಿ ಪ್ರೆಗ್ನೆಂಟ್: ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಗರಂ ಆದ ನಟಿ

    ಬಾಲಿವುಡ್ ನ ಖ್ಯಾತ ನಟಿ ಪರಿಣಿತಿ ಚೋಪ್ರಾ ಪ್ರೆಗ್ನೆಂಟ್ (Pregnant) ಆಗಿರುವ ವಿಚಾರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಕುರಿತಂತೆ ಅವರ ತಂಡ ಸ್ಪಷ್ಟನೆ ನೀಡಿದ್ದರೂ, ಮತ್ತೆ ಮತ್ತೆ ಸುದ್ದಿ ಆಗುತ್ತಲೇ ಇತ್ತು. ಈ ಕುರಿತಂತೆ ಸ್ವತಃ ಪರಿಣಿತಿಯೇ ಸ್ಪಷ್ಟನೆ ನೀಡಿದ್ದಾರೆ. ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವವರ ವಿರುದ್ಧ ಗರಂ ಆಗಿದ್ದಾರೆ.

    ಪರಿಣಿತಿ ಚೋಪ್ರಾ (Parineeti Chopra) ಅವರು ರಾಜಕಾರಣಿ ರಾಘವ್ ಚಡ್ಡಾ (Raghav Chadha) ಜೊತೆ ಮದುವೆಯಾಗಿ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪರಿಣಿತಿ ನಟನೆಯ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ಈ ನಡುವೆ ಸುಳ್ಳು ಸುದ್ದಿ ಹಬ್ಬಿರುವುದು ಅವರಿಗೆ ಬೇಸರ ತರಿಸಿದೆ.

    ಕೆಲ ದಿನಗಳಿಂದ ಪರಿಣಿತಿ ಚೋಪ್ರಾ ಪ್ರೆಗ್ನೆಂಟ್ ಆಗಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಸರಿಯಾಗಿ ಲೂಸ್ ಟಾಪ್ ಧರಿಸಿ ಪರಿಣಿತಿ ಕಾಣಿಸಿಕೊಂಡಿದ್ದರು. ಈ ಸುದ್ದಿಗೆ ಪರಿಣಿತಿ ಲುಕ್ ಮತ್ತಷ್ಟು ಪುಷ್ಠಿ ನೀಡಿತ್ತು.

     

    ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಾಗ ಬಿಳಿ ಶರ್ಟ್ಸ್ ಮತ್ತು ಶಾಟ್ಸ್ ಅನ್ನು ನಟಿ ಧರಿಸಿದ್ದರು. ಡ್ರೆಸ್ ತುಂಬಾ ಲೂಸ್ ಆಗಿತ್ತು. ನಿಧಾನವಾಗಿ ನಡೆಯುತ್ತಾ ಪಾಪರಾಜಿಗಳಿಗೆ ನಟಿ ಸ್ಮೈಲ್ ಮಾಡಿದ್ದರು. ಪರಿಣಿತಿ ಲುಕ್ ನೋಡಿದ್ರೆ ಪ್ರೆಗ್ನೆಂಟ್ ಎಂದೇ ಹೇಳಲಾಗಿತ್ತು. ನಟಿ ಪ್ರೆಗ್ನೆಂಟ್ ಆದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.

  • ಮದುವೆಯಾದ ಎರಡೇ ತಿಂಗಳಿಗೆ ‘ಹೆಬ್ಬುಲಿ’ ನಟಿ ಪ್ರೆಗ್ನೆಂಟ್: ಫೋಟೋ ವೈರಲ್

    ಮದುವೆಯಾದ ಎರಡೇ ತಿಂಗಳಿಗೆ ‘ಹೆಬ್ಬುಲಿ’ ನಟಿ ಪ್ರೆಗ್ನೆಂಟ್: ಫೋಟೋ ವೈರಲ್

    ಳೆದ ನವೆಂಬರ್ ನಲ್ಲಿ ಮದುವೆಯಾಗಿದ್ದ ಹೆಬ್ಬುಲಿ ಖ್ಯಾತಿಯ ನಟಿ ಅಮಲಾ ಪೌಲ್ (Amala Paul), ಅಭಿಮಾನಿಗಳಿಗೆ ಖುಷಿ ಮತ್ತು ಶಾಂಕಿಂಗ್ ಸುದ್ದಿಯನ್ನು ಒಟ್ಟೊಟ್ಟಿಗೆ ನೀಡಿದ್ದಾರೆ. ಅವರು ಮದುವೆಯಾಗಿ ಇನ್ನೂ ಎರಡು ತಿಂಗಳೂ ಆಗಿಲ್ಲ, ಆಗಲೇ ತಾವು ಗರ್ಭಿಣಿ ಎಂದು ಹೇಳಿಕೊಂಡಿದ್ದಾರೆ. ಪ್ರೆಗ್ನಿಸಿಯ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

    ಮದುವೆಗೂ ಮುನ್ನ ಅಮಲಾ ಗರ್ಭಿಣಿಯಾಗಿದ್ದರಾ ಎನ್ನುವ ಅನುಮಾನವನ್ನು ಹಲವರು ವ್ಯಕ್ತ ಪಡಿಸಿದ್ದಾರೆ. ಕೆಲವರು ಮದುವೆಗೂ ಮುನ್ನ ಅವರು ಸಹಜೀವನ ನಡೆಸುತ್ತಿರಬೇಕು. ಪ್ರೆಗ್ನೆಂಟ್ ಅಂತ ಗೊತ್ತಾದ ತಕ್ಷಣ ಮದುವೆಯಾಗಿರಬೇಕು ಎಂದು ಅನುಮಾನವನ್ನೂ ಹಲವರು ಹಂಚಿಕೊಂಡಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ‘ಇಬ್ಬರು ಮೂವರಾಗುತ್ತಿದ್ದೇವೆ’ ಎಂದು ನಟಿ ಅಮಲಾ ಬೇಬಿ ಬಂಪ್ (Baby Bump) ಫೋಟೋ ಶೇರ್ ಮಾಡಿ ಬರೆದುಕೊಂಡಿದ್ದರು. ನಟಿಯ ಪೋಸ್ಟ್‌ಗೆ ನಟ-ನಟಿಯರು, ಅಭಿಮಾನಿಗಳು ಶುಭಕೋರಿದ್ದರು. ಜೊತೆಗೆ ಸಾಕಷ್ಟು ಪ್ರಶ್ನೆಗಳನ್ನೂ ಕೇಳಲಾಗಿದೆ.

    ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಅವರು 2023ರ ನವೆಂಬರ್‌ನಲ್ಲಿ ಜಗತ್ ದೇಸಾಯಿ (Jagat Desai) ಜೊತೆ ಕೊಚ್ಚಿಯಲ್ಲಿ ಮದುವೆಯಾದರು. ಇದು ಅಮಲಾ 2ನೇ ಮದುವೆಯಾಗಿತ್ತು. ನಿರ್ದೇಶಕ ವಿಜಯ್ ಜೊತೆಗಿನ ಡಿವೋರ್ಸ್ ನಂತರ ಜಗತ್ ಜೊತೆ ಹಲವು ವರ್ಷಗಳು ಡೇಟಿಂಗ್ ಮಾಡಿದ್ದರು ಅಮಲಾ.

     

    ಕನ್ನಡ, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ನಾಯಕಿಯಾಗಿ ನಟಿಸುತ್ತಾ ಅಪಾರ ಅಭಿಮಾನಿಗಳ ಗಳಿಸಿದ್ದಾರೆ. ಮದುವೆ ನಂತರವೂ ಮತ್ತೆ ಸಿನಿಮಾ ಮಾಡುತ್ತಾರಾ ಅಮಲಾ ಈ ಬಗ್ಗೆ ಸ್ಪಷ್ಟನೆ ಇಲ್ಲ.

  • ಮೊದಲ ಮಗುವಿಗೆ ತಾಯಿ ಆಗುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿ ರುಬಿನಾ

    ಮೊದಲ ಮಗುವಿಗೆ ತಾಯಿ ಆಗುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿ ರುಬಿನಾ

    ರುಬಿನಾ ದಿಲಾಯಕ್ (Rubina Dilayak) ತಾಯಿ ಆಗುತ್ತಿದ್ದಾರೆ. ಈ ಸಂತಸದ ಸುದ್ದಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಇವರು, ಮಾಡೆಲಿಂಗ್ ಮತ್ತು ಕಿರುತೆರೆ ಜಗತ್ತಿನಲ್ಲಿ ಹೆಸರು ಮಾಡಿದವರು. ಅಲ್ಲದೇ, ಬಿಗ್ ಬಾಸ್ ವಿನ್ನರ್ ಆಗಿಯೂ ಹೊರ ಹೊಮ್ಮಿದವರು. ಹೊರ ದೇಶದಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿರುವ ರುಬಿಯಾ, ಅಲ್ಲಿಂದಲೇ ಸಂತಸದ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    ಅಭಿನವ್ ಶುಕ್ಲಾ (Abhinav Shukla) ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಈ ಹಿಂದೆಯೇ ಅವರು ಹೇಳಿಕೊಂಡಿದ್ದರು. ಇವರ ಸ್ನೇಹ ಡೇಟಿಂಗ್ ಗೆ ಮಾತ್ರ ಸೀಮಿತವಾಗಿರಲಿದೆ ಎಂದು ಹಲವರು  ಅಂದುಕೊಂಡಿದ್ದರು. ಆದರೆ, 2018ರಲ್ಲಿ ಅಭಿನವ್ ಜೊತೆ ಮದುವೆ ಆಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಐದು ವರ್ಷಗಳ ನಂತರ ತಾಯಿ ಆಗುತ್ತಿದ್ದಾರೆ. ಇದನ್ನೂ ಓದಿ:ತೆಲುಗಿಗೆ ರಕ್ಷಿತ್‌ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ- ರಿಲೀಸ್‌ ಡೇಟ್‌ ಫಿಕ್ಸ್

    ಅಭಿನವ್ ಮತ್ತು ರುಬಿಯಾ ಮೊದ ಮೊದಲ ಸ್ನೇಹಿತರು. ಆ ನಂತರ ಪ್ರೇಮಿಗಳಾದರು. ಇಬ್ಬರೂ ಕುಟುಂಬದ ಒಪ್ಪಿಗೆ ಪಡೆದುಕೊಂಡು ಶಿಮ್ಲಾದಲ್ಲಿ ಮದುವೆಯಾದರು. ಮೊದಲು ಪ್ರಪೋಸ್ ಮಾಡಿದ್ದು ಅಭಿನವ್ ಎಂದು ಬಿಗ್ ಬಾಸ್ ಮನೆಯಲ್ಲಿ ತಮ್ಮ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದರು ರುಬಿಯಾ.

     

    ‘ನಾವಿಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟೆವು. ಕಾಮನ್ ಸ್ನೇಹಿತರ ಮನೆಯಲ್ಲಿ ಮೊದಲು ಭೇಟಿಯಾಗಿದ್ದು. ನಾವಿಬ್ಬರೂ  ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡೆ, ಹೊಸ ಜೀವನಕ್ಕೆ ಕಾಲಿಡಲು ಹೊರಟೆವು. ಇದೀಗ ನಾವು ಅದ್ಭುತವಾಗಿ ಜೀವನವನ್ನು ಸಾಗಿಸುತ್ತಿದ್ದೇವೆ’ ಎನ್ನುವ ವಿಚಾರವನ್ನು ಹಲವು ಬಾರಿ ಅವರು ಮಾತನಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನಗೆ ಪ್ರೆಗ್ನೆಂಟ್ ಆಗುವ ಶಕ್ತಿ ಇದೆ, ಡಾಕ್ಟರ್ ಜೊತೆ ಬಂದು ಉತ್ತರಿಸಿದ ನಟಿ ರಾಖಿ

    ನನಗೆ ಪ್ರೆಗ್ನೆಂಟ್ ಆಗುವ ಶಕ್ತಿ ಇದೆ, ಡಾಕ್ಟರ್ ಜೊತೆ ಬಂದು ಉತ್ತರಿಸಿದ ನಟಿ ರಾಖಿ

    ಜೈಲಿನಿಂದ ಹೊರ ಬರುತ್ತಿದ್ದಂತೆಯೇ ನಟಿ ರಾಖಿ ಸಾವಂತ್ (Rakhi Sawant) ಪತಿ ಆದಿಲ್, ಹೆಂಡತಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ‘ತನ್ನಿಂದಾಗಿ ರಾಖಿ ಪ್ರೆಗ್ನೆಂಟ್ (Pregnant) ಆಗಿದ್ದಳು ಎಂದು ಸುಳ್ಳು ಹೇಳಿದ್ದಾಳೆ. ಅವಳಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಬಸಿರಿಯಾಗಲು ಸಾಧ್ಯವೇ ಇಲ್ಲ. ಸುಳ್ಳು ಹೇಳಿ ಪ್ರಚಾರ ಪಡೆಯುತ್ತಿದ್ದಾಳೆ’ ಎಂದು ಆದಿಲ್ (Adil) ಹೇಳಿದ್ದರು.

    ಈ ಮಾತಿಗೆ ರಾಖಿ ಸಾವಂತ್ ತಿರುಗೇಟು ನೀಡಿದ್ದು, ವೈದ್ಯರೊಂದಿಗೆ ಬಂದು ಅದಕ್ಕೆ ಉತ್ತರಿಸಿದ್ದಾಳೆ. ತನಗೆ ಯಾವುದೇ ಆರೋಗ್ಯ ಸಮಸ್ಯೆಯಿಲ್ಲ. ಮಗುವನ್ನು ಹೆರಲು ನಾನು ಸಮರ್ಥಳು ಎಂದು ಹೇಳಿದ್ದಾಳೆ. ಈ ವಿಷಯದ ಕುರಿತು ವೈದ್ಯರನ್ನೂ ಮಾತನಾಡಿಸಿದ್ದಾಳೆ. ಆ ವಿಡಿಯೋವನ್ನು ಶೇರ್ ಕೂಡ ಮಾಡಿದ್ದಾಳೆ.

    ರಿತೇಜ್ ಜೊತೆ ಈಗಲೂ ರಾಖಿ ಸಂಪರ್ಕದಲ್ಲಿ ಇದ್ದಾಳೆ ಎಂದು ಮತ್ತೊಂದು ಆರೋಪ ಮಾಡಿದ್ದಾರೆ ಆದಿಲ್. ಕಳೆದ ದೀಪಾವಳಿಯಂದು ನಾನು ದುಬೈಗೆ ಹೋಗುತ್ತಿದ್ದೆ. ಆಕೆ ಲಂಡನ್ ಗೆ ಹೋಗುತ್ತಿದ್ದಳು. ಲಂಡನ್ ನಿಂದ ಮತ್ತೆ ದುಬೈಗೆ ಬಂದಳು. ಆಕೆ ಇನ್ನೂ ರಿತೇಜ್ ಜೊತೆ ಸಂಪರ್ಕದಲ್ಲಿ ಇದ್ದಾಳೆ ಎಂದು ಗೊತ್ತಾಯಿತು. ಅವಳು ಆತನ ಜೊತೆ ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ಮೆಸೇಜ್ ಕೂಡ ನೋಡಿದ್ದೇನೆ’ ಎಂದಿದ್ದಾರೆ ಆದಿಲ್.

    ರಾಖಿಯನ್ನು ಹೇಗೆ ನಂಬಿದೆ ಎನ್ನುವ ಕುರಿತು ಆದಿಲ್ ಮಾತನಾಡಿದ್ದಾರೆ. ‘ಪ್ರತಿ ಸಲವೂ ಆಕೆ ರಿತೇಜ್ ನನ್ನು ಮದುವೆ ಆಗಿಲ್ಲ ಅಂತಾನೇ ಹೇಳಿದಳು. ಅಂಧೇರಿ ಕೋರ್ಟ್ ನಲ್ಲಿ ಮ್ಯಾರೇಜ್ ಮಾಡಿಕೊಳ್ಳುವಾಗಲೂ ಸಿಂಗಲ್ ಅಂತಾನೇ ಬರೆದಿದ್ದಳು. ಹಾಗಾಗಿ ನಾನು ನಂಬುತ್ತಾ ಹೋದೆ. ರಿತೇಜ್ ಮತ್ತು ಆಕೆ ಕಾನೂನು ಪ್ರಕಾರವೇ ಮದುವೆ ಆಗಿದ್ದಾರೆ. ಇನ್ನೂ ಅವರು ಡಿವೋರ್ಸ್ ಪಡೆದುಕೊಂಡಿಲ್ಲ ಎನ್ನುವುದು ಆದಿಲ್ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಲಿಯಾ ಭಟ್ ಗೆ ಇಬ್ಬರು ಗಂಡು ಮಕ್ಕಳೇ ಬೇಕಂತೆ

    ಆಲಿಯಾ ಭಟ್ ಗೆ ಇಬ್ಬರು ಗಂಡು ಮಕ್ಕಳೇ ಬೇಕಂತೆ

    ನಿನ್ನೆಯಷ್ಟೇ ತಾನು ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಬಹಿರಂಗಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದ ಆಲಿಯಾ ಭಟ್, ಇದೀಗ ಮತ್ತೊಂದು ಬೇಡಿಕೆಯನ್ನು ಪತಿ ರಣ್ಬೀರ್ ಕಪೂರ್ ಮುಂದೆ ಇಟ್ಟಿದ್ದಾರೆ. ತಮಗೆ ಎರಡು ಗಂಡು ಮಕ್ಕಳು ಬೇಕು ಎನ್ನುವ ಆಸೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಮಕ್ಕಳ ಬಗ್ಗೆ ಈಗಿನಿಂದಲೇ ಹಲವು ಯೋಜನೆಗಳನ್ನೂ ಅವರು ಹಾಕಿಕೊಂಡಿದ್ದಾರೆ.

    ಮದುವೆಯಾಗಿ 57ನೇ ದಿನಕ್ಕೆ ತಾವು ತಾಯಿ ಆಗುತ್ತಿರುವುದಾಗಿ ಆಲಿಯಾ ಭಟ್ ನಿನ್ನೆಯೇ ತಿಳಿಸುತ್ತಿದ್ದಂತೆಯೇ ಇಡೀ ಬಾಲಿವುಡ್ ಸಂಭ್ರಮಿಸಿತು. ಕರಣ್ ಜೋಹಾರ್ ಸೇರಿದಂತೆ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಜೋಡಿಯನ್ನು ಇಷ್ಟ ಪಡುವ ಪ್ರತಿಯೊಬ್ಬರೂ ಹಾರೈಸಿದರು. ಈ ನಡುವೆ ಆಲಿಯಾ ಮತ್ತು ರಣಬೀರ್ ದಂಪತಿ ಮಗುವಿನ ಬಗ್ಗೆ ಪಕ್ಕಾ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ನಿರೂಪಕಿ ಅನುಶ್ರೀಗೆ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್

    ಈಗಾಗಲೇ ವಿದೇಶದಲ್ಲಿ ಮಗುವಿಗಾಗಿ ಶಾಪಿಂಗ್ ಕೂಡ ಮಾಡಿದ್ದಾರಂತೆ. ಹುಟ್ಟುವ ಮಗು ಗಂಡಾದರೆ ಏನು ಹೆಸರು ಇಡಬೇಕು? ಹೆಣ್ಣಾದರೆ ಯಾವ ಹೆಸರಿನಿಂದ ಕರೆಯಬೇಕು ಎನ್ನುವುದನ್ನೂ ಈಗಲೇ ನಿರ್ಧಾರ ಮಾಡಿದ್ದಾರಂತೆ. ಅಲ್ಲದೇ, ಆ ಮಗುವನ್ನು ಯಾವ ರೀತಿಯಲ್ಲಿ ಬೆಳೆಸಬೇಕು ಎನ್ನುವ ಕುರಿತೂ ಚರ್ಚೆ ಮಾಡಿದ್ದಾರೆ ಅನ್ನುವ ಸುದ್ದಿ ಅವರ ಆಪ್ತರಿಂದ ಬಹಿರಂಗವಾಗಿದೆ. ಒಟ್ಟಿನಲ್ಲಿ ಮಗುವಿನ ಬಗ್ಗೆ ಈ ದಂಪತಿ ತುಂಬಾ ಕನಸು ಕಟ್ಟಿಕೊಂಡಿರುವುದು ಸ್ಪಷ್ಟವಾಗಿದೆ.

    Live Tv

  • ಮಮ್ಮಿ ಆಗ್ತಿದ್ದಾರಾ ಪದ್ಮಾವತಿ – ಆಸ್ಪತ್ರೆಗೆ ಬಂದ ದೀಪ್‍ವೀರ್

    ಮಮ್ಮಿ ಆಗ್ತಿದ್ದಾರಾ ಪದ್ಮಾವತಿ – ಆಸ್ಪತ್ರೆಗೆ ಬಂದ ದೀಪ್‍ವೀರ್

    ಮುಂಬೈ: ಬಾಲಿವುಡ್ ಸಿನಿಮಾಗಳಲ್ಲಿ ಹಿಟ್ ಜೋಡಿ ಅನ್ನಿಸಿಕೊಂಡು ನಿಜ ಜೀವನದಲ್ಲಿಯೂ ಸಪ್ತಪದಿ ತುಳಿದು ರಣ್‍ವೀರ್ ಹಾಗೂ ದೀಪಿಕಾ ಪಡುಕೋಣೆ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

    ಹೌದು, ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಇಬ್ಬರು ಮುಂಬೈನ ಹಿಂದುಜಾ ಆಸ್ಪತ್ರೆಗೆ ಗುಟ್ಟಾಗಿ ಭೇಟಿ ನೀಡಿದ್ದಾರೆ. ಈ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ದೀಪಿಕಾ ಹಾಗೂ ರಣ್‍ವೀರ್ ಆಸ್ಪತ್ರೆಯ ಆವರಣದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೀಗಾಗಿ ಅಭಿಮಾನಿಗಳಲ್ಲಿ ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಆಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಕೆಲವರು ದೀಪಿಕಾ ಪ್ರೆಗ್ನೆಂಟ್ ಆಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ಅನಾರೋಗ್ಯದ ಕಾರಣದಿಂದಲೂ ದೀಪಿಕಾ ಆಸ್ಪತ್ರೆಗೆ ಭೇಟಿ ನೀಡಿರಬಹುದು ಎಂದು ಹೇಳುತ್ತಿದ್ದಾರೆ.

    ಒಟ್ಟಾರೆ ದೀಪಿಕಾ ಹಾಗೂ ರಣ್‍ವೀರ್ ಆಸ್ಪತ್ರೆಗೆ ಗುಟ್ಟಾಗಿ ಭೇಟಿ ನೀಡಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹಿಂದೆ ಕೂಡ ಹಲವಾರು ಬಾರಿ ದೀಪಿಕಾ ಪ್ರೆಗ್ನೆಂಟ್, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ರಾಮಲೀಲಾ ಸಿನಿಮಾದಲ್ಲಿ ದೀಪಿಕಾ ಹಾಗೂ ರಣ್‍ವೀರ್ ಒಟ್ಟಿಗೆ ಅಭಿನಯಿಸಿದ್ದರು. ಈ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರ ಜೊತೆಗೆ ಇಬ್ಬರಿಗೂ ದೊಡ್ಡ ಮಟ್ಟದಲ್ಲಿ ಹಿಟ್ ತಂದು ಕೊಟ್ಟಿತ್ತು. ನಂತರ ಬಂದ ಬಾಜೀರಾವ್ ಮಸ್ತಾನಿ ಹಾಗೂ ಪದ್ಮಾವತ್ ಸಿನಿಮಾ ಕೂಡ ಬಾಲಿವುಡ್‍ನಲ್ಲಿ ಸಕ್ಸಸ್ ಕಂಡಿತ್ತು. ಇದನ್ನೂ ಓದಿ:ಶುಭಾ ಕೊಟ್ಟ ಟಾಸ್ಕ್ ಸೋತಿರುವುದಾಗಿ ಒಪ್ಪಿದ ಬಿಗ್‍ಬಾಸ್

     

    View this post on Instagram

     

    A post shared by Viral Bhayani (@viralbhayani)

  • ನೀವು ಪ್ರೆಗ್ನೆಂಟಾ ಪ್ರಶ್ನೆಗೆ ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ

    ನೀವು ಪ್ರೆಗ್ನೆಂಟಾ ಪ್ರಶ್ನೆಗೆ ಅನುಷ್ಕಾ ಶರ್ಮಾ ಖಡಕ್ ಪ್ರತಿಕ್ರಿಯೆ

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಮದುವೆಯಾಗಿ 1 ವರ್ಷವಾಗುತ್ತಿದ್ದು, ಅಭಿಮಾನಿಗಳು ಅನುಷ್ಕಾಗೆ ನೀವೂ ಪ್ರೆಗ್ನೆಂಟ್ ಆಗಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಅನುಷ್ಕಾ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಅನುಷ್ಕಾ ಶರ್ಮಾ ಈ ನಡುವೆ ತಮ್ಮ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಚಿತ್ರದ ಪ್ರಮೋಶನ್‍ಗೆಂದು ಬಂದಾಗ ಮಾಧ್ಯಮದವರು ನೀವು ಗರ್ಭಿಣಿಯೇ ಎಂದು ಪ್ರಶ್ನಿಸಿದ್ದಾರೆ.

    ಈ ಪ್ರಶ್ನೆಗೆ, ನಿಮಗೆ ಈ ರೀತಿಯ ಸುದ್ದಿಗಳು ಹೇಗೆ ಬರುತ್ತೆ ಎಂಬುದು ನನಗೆ ಗೊತ್ತಿಲ್ಲ. ಇದು ಕೆಲಸಕ್ಕೆ ಬಾರದ ಮಾತುಗಳು. ನೀವು ಮದುವೆಯನ್ನು ಅಡಗಿಸಬಹುದು. ಆದರೆ ಪ್ರೆಗ್ನೆನ್ಸಿಯನ್ನು ಹೇಗೆ ಅಡಗಿಸುತ್ತೀರಾ ಎಂದು ಅನುಷ್ಕಾ ಶರ್ಮಾ ಖಡಕ್ ಆಗಿ ಅನುಷ್ಕಾ ಪ್ರತಿಕ್ರಿಯೆ ನೀಡಿದ್ದಾರೆ.

    ಹಲವು ನಟಿಯರಿಗೆ ಈ ರೀತಿ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನನಗೆ ಇಂತಹ ಸುದ್ದಿ ಮುಖ್ಯವಾಗುವುದಿಲ್ಲ. ಇಲ್ಲಿ ಜನರು ಮದುವೆ ಮೊದಲೇ ನಿಮ್ಮನ್ನು ಮುತ್ತೈದೆ ಮಾಡುತ್ತಾರೆ. ಮಗು ಆಗುವ ಮೊದಲೇ ತಾಯಿ ಮಾಡುತ್ತಾರೆ. ನನಗೆ ಇದರಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಈ ರೀತಿಯ ಸುದ್ದಿ ಕೇಳಿ ನನಗೆ ನಗು ಬರುತ್ತೆ ಎಂದು ಹೇಳಿದ್ದಾರೆ.

    ಅನುಷ್ಕಾ ಶಾರೂಕ್ ನಟನೆಯ ‘ಝೀರೋ’ ಚಿತ್ರದ ನಂತರ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಅನುಷ್ಕಾ ಗರ್ಭಿಣಿಯಾಗಿರುವ ಕಾರಣ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಸ್ವತಃ ಅನುಷ್ಕಾ ಈ ವಿಷಯಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.

    ಕಳೆದ ವರ್ಷದ ಡಿಸೆಂಬರ್ 11ರಂದು ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv