Tag: ಪ್ರೀಮಿಯರ್ ಲೀಗ್

  • ಫೆಬ್ರವರಿ 28ರಿಂದ ಹುಬ್ಬಳ್ಳಿಯಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್

    ಫೆಬ್ರವರಿ 28ರಿಂದ ಹುಬ್ಬಳ್ಳಿಯಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್

    ಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ N1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ಕಳೆದ ಎರಡು ವರ್ಷಗಳಿಂದ ಟೆಲಿವಿಷನ್ (Television) ಪ್ರೀಮಿಯರ್ ಲೀಗ್ (Premier League) ನಡೆಸುತ್ತಾ ಬಂದಿದ್ದಾರೆ. ಈಗಾಗಲೇ ಯಶಸ್ವಿಯಾಗಿ 2 ಸೀಸನ್ ಮುಕ್ತಾಯಗೊಂಡಿದ್ದು, ಇದೀಗ ಟಿಪಿಎಲ್ ಮೂರನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಕಿರುತೆರೆ ಕಲಾವಿದರ ಕ್ರಿಕೆಟ್ (Cricket) ಪಂದ್ಯಾವಳಿಗೆ ಸಾಕ್ಷಿಯಾಗಲಿದೆ. ಹುಬ್ಬಳ್ಳಿ ಕೆ.ಎಸ್.ಸಿ.ಎ ಮೈದಾನದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 3 ರವರೆಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯಲಿದೆ. ಕಿರುತೆರೆಯ ಕಲಾವಿದರು ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ನಲ್ಲಿ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ, ನೆನಪಿರಲಿ ಪ್ರೇಮ್, ತಿಲಕ್, ಸಚಿವ ಸಂತೋಷ್ ಲಾಡ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಹನುಮಂತರಾಯಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಲಾವಿದರಿಗೆ ಶುಭ ಕೋರಿದರು.

    ಈ ವೇಳೆ ಮಾತನಾಡಿದ ಶ್ರೀಮುರಳಿ, ಯಾವುದೇ ಇವೆಂಟ್ ಚೆನ್ನಾಗಿ ಆಗಬೇಕು ಎಂದರೆ  ಪಾಸಿಟಿವ್ ಮೈಂಡ್ ಸೆಟ್, ಒಳ್ಳೆಯ ಜನ ಹಾಗೂ ಒಂದೇ ರೀತಿ ಯೋಚಿಸುವುದು ಮುಖ್ಯ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಅಪ್ಪು ಮಾವ ನೆರಳಲ್ಲಿ ಪ್ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಖುಷಿಯಾಗುತ್ತದೆ. ಅಪ್ಪು ಮಾವನಿಗೆ ಒಂದು ಆಸೆ ಇತ್ತು. ಎಲ್ಲರೂ ಜೊತೆಗೂಡಬೇಕು. ಬರೀ ಇಂಡಿಯಾ ಅಲ್ಲ. ವರ್ಲ್ಡ್ ವೈಡ್ ಹೋಗಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಆದರೆ ಎಲ್ಲರ ಟೈಮ್ ಸೆಟ್ ಆಗುವುದಿಲ್ಲ. ಎಲ್ಲಾ ಟೆಲಿವಿಷನ್ ಕಲಾವಿದರಿಗೂ ನನ್ನದೊಂದು ಗೌರವ. ಎಲ್ಲರೂ ಚೆನ್ನಾಗಿ ಆಡಿ. ಯಾರಾದ್ರೂ ಗೆಲ್ಲಲಿ ಭಾಗವಹಿಸುವುದು ಮುಖ್ಯ. ನನಗೆ ಕ್ರಿಕೆಟ್ ಎಂದರೆ ಇಷ್ಟ. ಆದರೆ ನನಗೆ ಆಡಲು ಬರುವುದಿಲ್ಲ ಎಂದರು.

    ಸಚಿವ ಸಂತೋಷ್ ಲಾಡ್  ಮಾತನಾಡಿ, ವಿಶೇಷವಾದ ಆಹ್ವಾನ ನೀಡಿದ ಸುನಿಲ್ ಅವರಿಗೆ ಧನ್ಯವಾದ. ಟಿಲಿವಿಷನ್ ಪ್ರೀಮಿಯರ್ ಲೀಗ್ ಸತತ ಮೂರನೇ ಬಾರಿಗೆ ನಡೆಯುತ್ತಿದೆ. ನನ್ನ ಅದೃಷ್ಟ ನಾನು ಈ ಬಾರಿ ಹುಬ್ಬಳ್ಳಿ ಧಾರವಾಡ ಜಿಲ್ಲಾ ಉಸ್ತುವಾರಿ  ಸಚಿವನಾಗಿದ್ದೇನೆ. ಅಲ್ಲಿ ನಡೆಯುತ್ತಿದೆ. ನಿಮ್ಮೆಲ್ಲರಿಗೆ ಉತ್ತರ ಕರ್ನಾಟಕ ನಮ್ಮ ಟ್ವಿನ್ಸ್ ಸಿಟಿಗೆ ಸ್ವಾಗತಿಸ್ತೇನೆ,. ಕ್ರಿಕೆಟ್ ನಿಂದ ಇತ್ತೀಚೆಗೆ ಯುವ ಜನತೆಗೆ ಸಾಕಷ್ಟು ಅವಕಾಶ ಸಿಗುತ್ತಿದೆ. ನೀವು ಪ್ರಮೋಟ್ ಮಾಡ್ತಿರುವುದರಿಂದ ಈ ಕ್ರಿಕೆಟ್ ಮತ್ತಷ್ಟು ಬೆಳೆಯಲಿ. ಕ್ರಿಕೆಟ್ ನಲ್ಲಿ ಭಾಗವಹಿಸುತ್ತಿರುವ ನಿಮ್ಮೆಲ್ಲರಿಗೆ ಒಳ್ಳೆದಾಗಲಿ ಎಂದು ತಿಳಿಸಿದರು.

    ನೆನಪಿರಲಿ ಪ್ರೇಮ್ ಮಾತನಾಡಿ, ಇಲ್ಲಿರುವ ಎಲ್ಲರೂ ನನ್ನ ಆತ್ಮೀಯ ಸ್ನೇಹಿತರು. ಎಲ್ಲರೂ ಸೇರಿ ಕ್ರಿಕೆಟ್ ಆಡುತ್ತಿರುವುದು  ಬಹಳ ಖುಷಿ ವಿಚಾರ. ಕ್ರಿಕೆಟ್ ಅಂದರೆ ಬರೀ ಆಟವಲ್ಲ. ಎಲ್ಲರೂ ಒಂದು ಕಡೆ ಸೇರಿಸುವ ಆಟವಾಗಿದೆ. ಕೆಲಸ ಮಾಡಿ ಮನೆಗೆ ಹೋಗುತ್ತೇವೆ, ನಮ್ಮದೇ ಲೈಫ್ ನಲ್ಲಿ ಕಳೆದು ಹೋಗುತ್ತೇವೆ. ಎಲ್ಲಾ ಸ್ನೇಹಿತರು ಒಂದು ಕಡೆ ಸೇರುವುದು ಕಷ್ಟ. ಆದ್ರೆ ಇಲ್ಲಿ ಕ್ರಿಕೆಟ್ ಮಾಡುತ್ತಿದೆ. ಬಹಳ ಸಂತೋಷ ವಿಚಾರ. ನನಗೂ ಟೆಲಿವಿಷನ್ ಗೂ ಅವಿನಾಭಾವ ಸಂಬಂಧವಿದೆ. ನಾನು ಇಲ್ಲಿ ಗೆಸ್ಟ್ ಆಗಿ ಬಂದಿಲ್ಲ. ಸ್ನೇಹಿತನಾಗಿ ಬಂದಿದ್ದೇನೆ. ಎಲ್ಲಾ ತಂಡಕ್ಕೂ ಒಳ್ಳೆದಾಗಲಿ ಎಂದರು.

    ಹುಬ್ಬಳ್ಳಿಯ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿವೆ. 12 ಓವರ್ ಗಳ ಪಂದ್ಯದಲ್ಲಿ 10 ತಂಡಗಳು ಭಾಗವಹಿಸಲಿವೆ. ಐಪಿಎಲ್ ನಂತೆ ಬಿಡ್ಡಿಂಗ್ ಮಾಡಿ ಆಟಗಾರರ ಆಯ್ಕೆ ಮಾಡಲಾಗಿದೆ. ಟಿಪಿಎಲ್ ರಾಯಭಾರಿಯಾಗಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇದ್ದು, ಪ್ರಮುಖ ನಟರಾದ ಲೂಸ್ ಮಾದ ಯೋಗಿ, ರವಿಶಂಕರ್ ಗೌಡ ಟಿಪಿಎಲ್ 3 ನಲ್ಲಿ ಆಡುತ್ತಿರುವುದು ವಿಶೇಷ..

    ಯಾವ ಯಾವ ತಂಡಗಳು ಭಾಗಿ?

    ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, ಕೆಕೆಆರ್ ಮೀಡಿಯಾ ಹೌಸ್, ಬಯೋಟಾಪ್ ಲೈಫ್ ಸೆವಿಯರ್, AVR ಟಸ್ಕರ್ಸ್, ರಾಸು ವಾರಿಯರ್, ಭಜರಂಗಿ ಬಾಯ್ಸ್, ದಿ ಬುಲ್ ಸ್ಕ್ವಾಡ್, ಇನ್ಸೇನ್ ಕ್ರಿಕೆಟ್ ಟೀಂ, ಜಿಎಲ್ಆರ್ ವಾರಿಯರ್ಸ್ ಸೇರಿದಂತೆ ಒಟ್ಟು 10 ಟೀಮ್ ಗಳು ಭಾಗವಹಿಸಲಿದ್ದು, 170 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ 10 ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್ಗಳಿರಲಿದ್ದಾರೆ. ಎವಿಆರ್ ಗ್ರೂಪ್ಸ್‍ ನ ಹೆಚ್ ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ.

  • ಬೌಲಿಂಗ್ ಶೈಲಿ ಮೂಲಕ ಮತ್ತೆ ಸದ್ದು ಮಾಡಿದ ಅಶ್ವಿನ್

    ಬೌಲಿಂಗ್ ಶೈಲಿ ಮೂಲಕ ಮತ್ತೆ ಸದ್ದು ಮಾಡಿದ ಅಶ್ವಿನ್

    ಚೆನ್ನೈ: ಐಪಿಎಲ್ ಟೂರ್ನಿಯಲ್ಲಿ ಮಂಕಡ್ ರನೌಟ್ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದ ಆರ್. ಅಶ್ವಿನ್ ಅವರು ಮತ್ತೊಮ್ಮೆ ತಮ್ಮ ವಿಶಿಷ್ಟ ಬೌಲಿಂಗ್ ಮೂಲಕ ಸುದ್ದಿಯಾಗಿದ್ದಾರೆ.

    ತಮಿಳುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಅಶ್ವಿನ್, ಶುಕ್ರವಾರ ನಡೆದ ಸೂಪರ್ ಗಲ್ಲಿಸ್, ದಿಂದಿಗಲ್ ಡ್ರಾಗನ್ಸ್ (ಡಿಡಿ) ತಂಡಗಳ ನಡುವಿನ ಪಂದ್ಯದಲ್ಲಿ ವಿಶಿಷ್ಟ ಶೈಲಿಯಲ್ಲಿ ಬೌಲ್ ಮಾಡಿದರು. ಪರಿಣಾಮ ಸ್ಟ್ರೈಕ್ ನಲ್ಲಿದ್ದ ಬ್ಯಾಟ್ಸ್ ಮನ್ ಕೂಡ ಅಚ್ಚರಿಗೊಂಡಿದ್ದರು. ಡಿಡಿ ತಂಡದ ನಾಯಕರಾಗಿರುವ ಅಶ್ವಿನ್ ತಂಡ ಪಂದ್ಯದಲ್ಲಿ 10 ರನ್ ಜಯ ಪಡೆದಿತ್ತು. ಪಂದ್ಯದಲ್ಲಿ 2 ಎಸೆತಗಳಿಗೆ 17 ರನ್ ಗಳು ಬೇಕಾಗಿರುವ ಸಂದರ್ಭದಲ್ಲಿ ಅಶ್ವಿನ್ ವಿಶೇಷ ರೀತಿಯಲ್ಲಿ ಬೌಲ್ ಮಾಡಿದ್ದರು. ಮೊದಲು ಬ್ಯಾಟ್ ಮಾಡಿದ್ದ ಡಿಡಿ ತಂಡ 9 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು.

    ಅಶ್ವಿನ್ ಬೌಲ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಶ್ವಿನ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಪೂರ್ಣ ಆ್ಯಕ್ಷನ್ ಮಾಡದೆ ಬೌಲ್ ಮಾಡಿದ್ದಾರೆ. ಈ ಎಸೆತ ಪಂದ್ಯದ ಫಲಿತಾಂಶದ ಮೇಲೆ ಹೆಚ್ಚು ಪ್ರಭಾವ ಉಂಟು ಮಾಡದಿದ್ದರು, ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷ ಎಂದರೆ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಅರ್ಡರ್ ನಲ್ಲೂ ಗಮನ ಸೆಳೆದಿದ್ದ ಅಶ್ವಿನ್, ನಂ3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ 1 ಸಿಕ್ಸರ್, 5 ಬೌಂಡರಿಗಳ ನೆರವಿನಿಂದ 19 ಎಸೆತಗಳಲ್ಲಿ 37 ರನ್ ಗಳಿಸಿದರು.

    https://twitter.com/IManish10_/status/1152282071529771011

  • ಈಗ ಅಧಿಕೃತ: ಡಿ.16ಕ್ಕೆ ಸಪ್ತಪದಿ ತುಳಿಯಲಿದ್ದಾರೆ ಸೈನಾ, ಕಶ್ಯಪ್

    ಈಗ ಅಧಿಕೃತ: ಡಿ.16ಕ್ಕೆ ಸಪ್ತಪದಿ ತುಳಿಯಲಿದ್ದಾರೆ ಸೈನಾ, ಕಶ್ಯಪ್

    ಹೈದರಾಬಾದ್: ಭಾರತ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಪಾರುಪಲ್ಲಿ ಕಶ್ಯಪ್ ಹಾಗೂ ಸೈನಾ ಸೆಹ್ವಾಲ್ ಮದುವೆ ಡಿಸೆಂಬರ್ 16 ರಂದು ನಡೆಯಲಿದ್ದು, ಈ ಕುರಿತು ಸ್ವತಃ ಸೈನಾ ನೆಹ್ವಾಲ್ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿ ಖಚಿತ ಪಡಿಸಿದ್ದಾರೆ.

    ಡಿ.20 ಬಳಿಕ ಬ್ಯಾಡಿಂಟನ್ ಪ್ರೀಮಿಯರ್ ಲೀಗ್ ಹಾಗೂ ಟೋಕಿಯೋ ಗೇಮ್ಸ್ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿರುವ ಕಾರಣ ಡಿ.16 ರಂದೇ ನಮ್ಮ ಮದುವೆ ನಿಶ್ಚಯ ಮಾಡಲಾಗಿದೆ. ಈ ಸಮಯ ಬಿಟ್ಟರೆ ನಮಗೆ ಬೇರೆ ಉತ್ತಮ ಅವಕಾಶವಿಲ್ಲ ಎಂದು ಸೈನಾ ತಿಳಿಸಿದ್ದಾರೆ.

    ಕಳೆದ 10 ವರ್ಷಗಳಿಂದ ಇಬ್ಬರ ನಡುವೆ ಪರಿಚಯವಿದ್ದು, ಒಬ್ಬರಿಗೆ ಒಬ್ಬರೂ ಚೆನ್ನಾಗಿ ಆರ್ಥ ಮಾಡಿಕೊಂಡಿದ್ದೇವೆ. 2007-08 ರ ಬಳಿಕ ನಾವಿಬ್ಬರೂ ಒಟ್ಟಿಗೆ ಬ್ಯಾಡ್ಮಿಂಟನ್ ಟೂರ್ನಿ ಜರ್ನಿ ಆರಂಭಿಸಿದ್ದು, ಹಲವು ಟೂರ್ನಿಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದೇವೆ. ತರಬೇತಿ ಪಡೆದಿದ್ದೇವೆ. ಬೇರೊಬ್ಬರೊಂದಿಗೆ ಉತ್ತಮ ಬಾಂಧವ್ಯ ರೂಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಇಬ್ಬರು ಬಹುಬೇಗ ಆತ್ಮೀಯಾರಗಿದ್ದೇವೆ ಎಂದು ಹೇಳಿದ್ದಾರೆ.

    ಸೈನಾ, ಕಶ್ಯಪ್ ಮದುವೆ ಕುರಿತು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ಈ ಕುರಿತು ಇಬ್ಬರು ಅಧಿಕೃತ ಹೇಳಿಕೆಯನ್ನು ಎಲ್ಲೂ ನೀಡಿರಲಿಲ್ಲ. ಸೈನಾ ಹಾಗೂ ಕಶ್ಯಪ್ ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್ ಅವರ ಗರಡಿಯಲ್ಲಿ ಪಳಗಿದ ಆಟಗಾರರಾಗಿದ್ದಾರೆ. ಉಳಿದಂತೆ ಕುಟುಂಬಗಳ ಹಿರಿಯರು ಈಗಾಗಲೇ ಮದುವೆ ಕುರಿತು ಮಾತುಕತೆ ನಡೆಸಿದ್ದಾರೆ. ಅಲ್ಲದೇ ವಿವಾಹ ಕಾರ್ಯಕ್ರಮದ ಸಿದ್ಧತೆಗಳನ್ನು ಆರಂಭಿಸಿದ್ದು, ಮದುವೆಯ ಸಮಾರಂಭಕ್ಕೆ ಕುಟುಂಬದ ಸದಸ್ಯರು ಹಾಗೂ ಆಪ್ತ ವಲಯದ ಕೆಲವೇ ಮಂದಿಗೆ ಆಹ್ವಾನ ನೀಡಲಾಗುತ್ತದೆ ಎನ್ನಲಾಗಿದೆ.

    28 ವರ್ಷದ ಸೈನಾ ನೆಹ್ವಾಲ್ ಹಾಗೂ 32 ವರ್ಷದ ಕಶ್ಯಪ್ ವಿಶ್ವ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಡಿ.20 ರಿಂದ ಆರಂಭವಾಗಲಿರುವ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ನಲ್ಲಿ ಭಾರತದ ಪಿವಿ ಸಿಂಧೂ ಸೇರಿದಂತೆ ಹಲವು ಆಟಗಾರರು ಭಾಗವಹಿಸಲಿದ್ದಾರೆ. ಡಿ.22 ರಿಂದ ಜನವರಿ 13ರ ವರೆಗೂ ಟೂರ್ನಿಯ ಪಂದ್ಯಗಳು ದೆಹಲಿಯಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BhoNuHKFUmX/?hl=en&taken-by=nehwalsaina

    https://www.instagram.com/p/BgdNzPNg6G5/?hl=en&taken-by=nehwalsaina