Tag: ಪ್ರೀತಿ ಜಿಂಟಾ

  • ಸೆಹ್ವಾಗ್ ಜೊತೆ ಮುನಿಸು – ಸ್ಪಷ್ಟನೆ ಕೊಟ್ಟ ಪ್ರೀತಿ ಜಿಂಟಾ

    ಸೆಹ್ವಾಗ್ ಜೊತೆ ಮುನಿಸು – ಸ್ಪಷ್ಟನೆ ಕೊಟ್ಟ ಪ್ರೀತಿ ಜಿಂಟಾ

    ನವದೆಹಲಿ: ನನ್ನ ಮತ್ತು ಸೆಹ್ವಾಗ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮಾಲಕಿ ಪ್ರೀತಿ ಜಿಂಟಾ ಹೇಳಿದ್ದಾರೆ.

    ನಮ್ಮ ಪರವಾಗಿ ಸುದ್ದಿ ಪ್ರಕಟವಾಗುವಂತೆ ನಾವು ಮಾಧ್ಯಮಗಳಿಗೆ ಹಣ ನೀಡಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳು ಎಲ್ಲವೂ ಸುಳ್ಳು ಎಂದು ಪ್ರೀತಿ ಜಿಂಟಾ ಟ್ವೀಟ್ ಮಾಡಿದ್ದಾರೆ.

    ರಾಜಸ್ಥಾನದ ವಿರುದ್ಧ ಪಂದ್ಯದಲ್ಲಿ ಸುಲಭ ಮೊತ್ತವನ್ನು ಬೆನ್ನತ್ತಲು ತಂಡ ವಿಫಲವಾಗಲು ಮೆಂಟರ್ ಸೆಹ್ವಾಗ್ ಅವರ ನಿರ್ಧಾರವೇ ಕಾರಣ ಎಂದು ಪ್ರೀತಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

    ರಾಜಸ್ಥಾನ ಪಂದ್ಯದಲ್ಲಿ ನಾಯಕ ಆಶ್ವಿನ್‍ಗೆ ಬ್ಯಾಟಿಂಗ್ ನಲ್ಲಿ ಮುಂಬಡ್ತಿ ನೀಡಿ ನಂಬರ್ 3 ಸ್ಥಾನದಲ್ಲಿ ಕಳಿಸಲಾಗಿತ್ತು. ಆದರೆ ಪಂದ್ಯದಲ್ಲಿ ಅಶ್ವಿನ್ ಶೂನ್ಯ ಸುತ್ತುವ ಮೂಲಕ ಎಲ್ಲ ಲೆಕ್ಕಾಚಾರನ್ನು ತಲೆ ಕೆಳಗೆ ಮಾಡಿದ್ದರು. ಸದ್ಯ ಪಂದ್ಯದ ಫಲಿತಾಂಶದಿಂದ ಪ್ರೀತಿ ಅಸಮಾಧಾನಗೊಂಡಿದ್ದರು ಎಂದು ಬರೆಯಲಾಗಿತ್ತು.

    ಪಂದ್ಯದ ಬಳಿಕ ಆಟಗಾರರು ಮೈದಾನದಿಂದ ಮರಳುವ ಮುನ್ನವೇ ಪ್ರೀತಿ ಜಿಂಟಾ ಈ ಕುರಿತು ಪ್ರಶ್ನೆ ಮಾಡಿದ್ದರು. ಆದ್ರೆ ಸೆಹ್ವಾಗ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ಲೇಆಫ್ ಗೆ ಆಯ್ಕೆ ಆಗುವ ಎಲ್ಲಾ ಅವಕಾಶ ಇರುವ ವೇಳೆ ಈ ರೀತಿಯ ಗೊಂದಲಗಳಿಗೆ ಅವಕಾಶ ನೀಡಬಾರದು. ಇದು ಆಟಗಾರ ಮೇಲೆ ಪರಿಣಾಮ ಉಂಟಾಗಬಹುದು ಎಂದು ಸೆಹ್ವಾಗ್ ಪ್ರತಿಕ್ರಿಯೇ ನೀಡಿಲ್ಲ ಎಂದು ವರದಿ ತಿಳಿಸಿತ್ತು.

  • ಪ್ರೀತಿ ಜಿಂಟಾ ಮುನಿಸು, ಕಿಂಗ್ಸ್ ಇಲೆವೆನ್ ತಂಡದಲ್ಲಿ ಬಿರುಕು?

    ಪ್ರೀತಿ ಜಿಂಟಾ ಮುನಿಸು, ಕಿಂಗ್ಸ್ ಇಲೆವೆನ್ ತಂಡದಲ್ಲಿ ಬಿರುಕು?

    ಮುಂಬೈ: ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋಲುಂಡ ಬಳಿಕ ತಂಡದ ಮೆಂಟರ್ ಸೆಹ್ವಾಗ್ ಹಾಗೂ ಕೋ-ಓನರ್ ಪ್ರೀತಿ ಜಿಂಟಾ ನಡುವೆ ಎಲ್ಲವೂ ಸರಿ ಇಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ.

    ರಾಜಸ್ಥಾನದ ವಿರುದ್ಧ ಪಂದ್ಯದಲ್ಲಿ ಸುಲಭ ಮೊತ್ತವನ್ನು ಬೆನ್ನತ್ತಲು ತಂಡ ವಿಫಲವಾಗಲು ಮೆಂಟರ್ ಸೆಹ್ವಾಗ್ ಅವರ ನಿರ್ಧಾರವೇ ಕಾರಣ ಎಂದು ಪ್ರೀತಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಅಂದಹಾಗೇ ರಾಜಸ್ಥಾನ ಪಂದ್ಯದಲ್ಲಿ ನಾಯಕ ಆಶ್ವಿನ್‍ಗೆ ಬ್ಯಾಟಿಂಗ್ ನಲ್ಲಿ ಮುಂಬಡ್ತಿ ನೀಡಿ ನಂಬರ್ 3 ಸ್ಥಾನದಲ್ಲಿ ಕಳಿಸಲಾಗಿತ್ತು. ಆದರೆ ಪಂದ್ಯದಲ್ಲಿ ಅಶ್ವಿನ್ ಶೂನ್ಯ ಸುತ್ತುವ ಮೂಲಕ ಎಲ್ಲ ಲೆಕ್ಕಾಚಾರನ್ನು ತಲೆ ಕೆಳಗೆ ಮಾಡಿದ್ದರು. ಸದ್ಯ ಪಂದ್ಯದ ಫಲಿತಾಂಶದಿಂದ ಪ್ರೀತಿ ಅಸಮಾಧಾನಗೊಂಡಿದ್ದರೆ ಎನ್ನಲಾಗಿದೆ.

    ಪಂದ್ಯದ ಬಳಿಕ ಆಟಗಾರರು ಮೈದಾನದಿಂದ ಮರಳುವ ಮುನ್ನವೇ ಪ್ರೀತಿ ಜಿಂಟಾ ಈ ಕುರಿತು ಪ್ರಶ್ನೆ ಮಾಡಿದ್ದರು. ಆದ್ರೆ ಸೆಹ್ವಾಗ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ಲೇಆಫ್ ಗೆ ಆಯ್ಕೆ ಆಗುವ ಎಲ್ಲಾ ಅವಕಾಶ ಇರುವ ವೇಳೆ ಈ ರೀತಿಯ ಗೊಂದಲಗಳಿಗೆ ಅವಕಾಶ ನೀಡಬಾರದು. ಇದು ಆಟಗಾರ ಮೇಲೆ ಪರಿಣಾಮ ಉಂಟಾಗಬಹುದು ಎಂದು ಸೆಹ್ವಾಗ್ ಪ್ರತಿಕ್ರಿಯೇ ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಈ ಕುರಿತು ಮಾಧ್ಯಮಗಳು ಸೆಹ್ವಾಗ್ ಹಾಗೂ ಪ್ರೀತಿ ಜಿಂಟಾ ಅವರ ಪ್ರತಿಕ್ರಿಯೆಗಳನ್ನು ಕೇಳಿದ್ದು, ಇಬ್ಬರು ಈ ಕುರಿತು ಮಾತನಾಡಲು ನಿರಾಕರಿಸಿದ್ದಾರೆ. ಟೂರ್ನಿಯಲ್ಲಿ ಪಂಜಾಬ್ ಇದುವರೆಗೂ ಉತ್ತಮ ಪ್ರದರ್ಶನವನ್ನು ನೀಡಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಕಳೆದ ಬಾರಿ ಪಂಬಾಜ್ ಪರ ಬ್ಯಾಟ್ ಬೀಸಿದ್ದ ಸೆಹ್ವಾಗ್ ಈ ಬಾರಿ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ತಂಡದ ನಾಯಕತ್ವ ಸ್ಥಾನಕ್ಕೆ ಆಶ್ವಿನ್ ಆಯ್ಕೆ ಹಾಗೂ ಕ್ರಿಸ್‍ಗೇಲ್ ಖರೀದಿ ವೇಳೆಯೂ ಸೆಹ್ವಾಗ್ ಸಲಹೆಯನ್ನು ಪಡೆಯಲಾಗಿತ್ತು.

  • ಸಿಂಹದ ಮರಿ ಜೊತೆಗಿನ ಫೋಟೋ ಬಗ್ಗೆ ಟ್ರೋಲ್ ಮಾಡಿದವ್ರಿಗೆ ಸಖತ್ ಉತ್ತರ ಕೊಟ್ರು ಪ್ರೀತಿ ಜಿಂಟಾ

    ಸಿಂಹದ ಮರಿ ಜೊತೆಗಿನ ಫೋಟೋ ಬಗ್ಗೆ ಟ್ರೋಲ್ ಮಾಡಿದವ್ರಿಗೆ ಸಖತ್ ಉತ್ತರ ಕೊಟ್ರು ಪ್ರೀತಿ ಜಿಂಟಾ

    ನವದೆಹಲಿ: ಸಿಂಹದ ಮರಿ ಜೊತೆಗಿನ ಫೋಟೋ ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಜಿಂಟಾ ಟ್ರೋಲ್‍ಗೊಳಗಾಗಿದ್ದಾರೆ. ಹಾಗೇ ಟ್ರೋಲ್ ಮಾಡಿದವರಿಗೆ ಸಖತ್ ಉತ್ತರವನ್ನೂ ಕೊಟ್ಟಿದ್ದಾರೆ.

    ಇತ್ತೀಚೆಗೆ ಪ್ರೀತಿ ಜಿಂಟಾ ದಕ್ಷಿಣ ಆಫ್ರಿಕಾದಲ್ಲಿ ಸಿಂಹದ ಮರಿ ಜೊತೆಗೆ ತೆಗೆಸಿಕೊಂಡ ಫೋಟೋವನ್ನ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ರು. “ದಕ್ಷಿಣ ಆಫ್ರಿಕಾದಲ್ಲಿ ಹೊಸ ಗೆಳೆಯರು. ಇದಕ್ಕಿಂತ ಅದ್ಭುತವಾದುದು ಮತ್ತೊಂದಿಲ್ಲ” ಅಂತ ಪೋಸ್ಟ್ ಮಾಡಿದ್ದರು. ಇದಕ್ಕೆ ಕೆಲವರು ಚೆನ್ನಾಗಿದೆ ಅಂತ ಕಮೆಂಟ್ ಮಾಡಿದ್ದರೆ ಇನ್ನೂ ಕೆಲವರು ಟ್ರೋಲ್ ಮಾಡಿದ್ದಾರೆ. ಒಬ್ಬ ಬಳಕೆದಾರ, ಸಾಮಾನ್ಯವಾಗಿ ಪ್ರಾಣಿಗಳಿಗೆ ಡ್ರಗ್ಸ್ ನೀಡಲಾಗಿರುತ್ತದೆ. ನಿಮಗೆ ಇದು ಸುಂದರವಾದ ಅನುಭವವಿರಬಹುದು. ಆದ್ರೆ ಆ ಪ್ರಾಣಿಗಲ್ಲ ಅಂತ ಕಮೆಂಟ್ ಮಾಡಿದ್ದರು.

    ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ ಪ್ರೀತಿ, ಈ ಸಿಂಹದ ಮರಿಗೆ ಯಾವುದೇ ಡ್ರಗ್ ನೀಡಿಲ್ಲ. ಬಿಸಿಲಿನಿಂದ ಸ್ವಲ್ಪ ನಿದ್ದೆ ಮೂಡ್‍ನಲ್ಲಿದೆ ಅಷ್ಟೇ. ಜೀವನದಲ್ಲಿ ಎಲ್ಲವೂ ಪಿತೂರಿ ಅಥವಾ ಕೆಟ್ಟದ್ದಲ್ಲ. ಏನೋ ತೀರ್ಮಾನಕ್ಕೆ ಜಿಗಿಯೋ ಮುನ್ನ ಕೆಲವೊಂದು ಸಂಗತಿಗಳನ್ನ ಪ್ರಶಂಸಿಸೋದನ್ನ ಕಲಿಯಬೇಕು ಅಂತ ಕಮೆಂಟ್ ಮಾಡಿದ್ದಾರೆ.

    ಪ್ರೀತಿ ಹೇಳಿಕೆಗೆ ಕೆಲವು ಅಭಿಮಾನಿಗಳು ಧನಿಗೂಡಿಸಿದ್ದು, ಈ ಮರಿಗಳನ್ನ ಯಾವಾಗಲು ನರ್ಸರಿಗಳಲ್ಲಿ ಜನರೊಂದಿಗೆ ಇರಿಸಿರುತ್ತಾರೆ. ಹೀಗಾಗಿ ಅವುಗಳಿಗೆ ಜನರೊಂದಿಗೆ ಇರುವುದು ಅಭ್ಯಾಸವಾಗಿರುತ್ತದೆ. ಅವು ದೊಡ್ಡವಾದ ನಂತರ ಕಾಡಿಗೆ ಬಿಡುತ್ತಾರೆ ಅಂತ ಕಮೆಂಟ್ ಮಾಡಿದ್ದಾರೆ.

    https://www.instagram.com/p/BZK-wivgSKm/

    ಇತ್ತೀಚೆಗೆ ಶಿಲ್ಪಾ ಶೆಟ್ಟಿ ಕೂಡ ದುಬೈನ ಲಕ್ಷಾಧಿಪತಿಯೊಬ್ಬರ ಖಾಸಗಿ ಝೂನಲ್ಲಿ ತೆಗೆಸಿಕೊಂಡ ಫೋಟೋಗಾಗಿ ಟ್ರೊಲ್‍ಗೊಳಗಾಗಿದ್ರು. ನಂತರ ಶಿಲ್ಪಾ ಶೆಟ್ಟಿ ಆ ಪೋಸ್ಟ್ ಡಿಲೀಟ್ ಮಾಡಿದ್ದರು.