Tag: ಪ್ರೀತಂ ಗುಬ್ಬಿ

  • ಬ್ಯೂಟಿಫುಲ್ ಹುಡುಗಿಯರ ಜೊತೆ ಬಾನ ದಾರಿಯಲ್ಲಿ ಕುಣಿದ ಗೋಲ್ಡನ್ ಸ್ಟಾರ್

    ಬ್ಯೂಟಿಫುಲ್ ಹುಡುಗಿಯರ ಜೊತೆ ಬಾನ ದಾರಿಯಲ್ಲಿ ಕುಣಿದ ಗೋಲ್ಡನ್ ಸ್ಟಾರ್

    ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ  ‘ಬಾನದಾರಿಯಲ್ಲಿ’ ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಕವಿರಾಜ್ ಬರೆದಿರುವ ‘ನಿನ್ನನ್ನು ನೋಡಿದ ನಂತರ’ ಎಂಬ ಗೀತೆ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಸಿನಿಮಾ ಬಗ್ಗೆ ಮಾತನಾಡಿದರು.

    ‘ಇದು ಕೊರೋನ ಸಮಯದಲ್ಲಿ ಅಂದರೆ ಸುಮಾರು ಎರಡುವರೆ ವರ್ಷಗಳ ಹಿಂದೆ ನಾನು ಹಾಗೂ ಪ್ರೀತಾ ಜಯರಾಂ ಸೇರಿ ಮಾಡಿದ ಕಥೆ. ರಾಜ್ಯದ ನಾನಾ ಭಾಗಗಳಲ್ಲಿ ಶೂಟಿಂಗ್ ಮಾಡಿ ಇದೀಗ ಸಂಪೂರ್ಣ ಚಿತ್ರೀಕರಣ ಮುಗಕ್ತಾಯವಾಗಿದೆ. ನಾವು ಅಂದುಕೊಂಡಿದ್ದಕ್ಕಿಂತಲೂ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಈ ಸಿನಿಮಾದ ಮೊದಲ ಹಾಡನ್ನು ಈಗ ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು’ ನಿರ್ದೇಶಕ  ಪ್ರೀತಂ ಗುಬ್ಬಿ. ಇದನ್ನೂ ಓದಿ: ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಅಬ್ಬರಿಸಲಿದ್ದಾರೆ ಆಮೀರ್ ಖಾನ್

    ನಾಯಕನ ನಟ ಗಣೇಶ್ ಮಾತನಾಡಿ, ‘ ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. ಹುಡುಗಾಟ ಚಿತ್ರದ ಮಂದಾಕಿನಿಯೇ ಹಾಡಿನಿಂದ ಶುರುವಾದ ನಮ್ಮ ಜರ್ನಿ ಈ ಹಾಡಿನ ತನಕ ಮುಂದುವರೆದಿದೆ. ನನ್ನ ಅನೇಕ ಹಿಟ್ ಹಾಡುಗಳನ್ನು ಕವಿರಾಜ್ ಅವರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ಮತ್ತೊಂದು ಹೈಲೆಟ್ . ನಿರ್ದೇಶಕ ಪ್ರೀತಂ ಗುಬ್ಬಿ ಈ ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ. ಸಾಮಾನ್ಯವಾಗಿ ನಾನು ಡಬ್ಬಿಂಗ್ ಸಮಯದಲ್ಲಿ ಚಿತ್ರದ ಬಗ್ಗೆ ಹೇಳಿ ಬಿಡುತ್ತೇನೆ. ಈ ಚಿತ್ರದ ಡಬ್ಬಿಂಗ್ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ. ನಾಯಕಿಯರಾದ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಕೀನ್ಯಾ ಭಾಗದ  ಚಿತ್ರೀಕರಣವನ್ನು  ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಈ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದೇನೆ’ ಎಂದಿದ್ದಾರೆ ಗಣೇಶ್.

    ಚಿತ್ರ ತುಂಬಾ ಚೆನ್ನಾಗಿದೆ. ಇಂದು ಬಿಡುಗಡೆಯಾಗಿರುವ ಹಾಡು ಅಷ್ಟೇ ಇಂಪಾಗಿದೆ. ನಾನು ಈ ಹಾಡಿಗಾಗಿ ಸರ್ಫಿಂಗ್ ಅಭ್ಯಾಸ ಮಾಡಿದ್ದೇನೆ ಎಂದು ನಾಯಕಿ ರುಕ್ಮಿಣಿ ವಸಂತ್ ಹೇಳಿದರೆ, ಗಣೇಶ್ ಹಾಗೂ ರಂಗಾಯಣ ರಘು ಅವರು ನನಗೆ ಸಾಕಷ್ಟು ಹೇಳಿಕೊಟ್ಟಿದ್ದಾರೆ.  ಕಳೆದ ವರ್ಷ ಅನೇಕ ಕನ್ನಡ ಚಿತ್ರಗಳು ಗೆದ್ದು ದಾಖಲೆ ನಿರ್ಮಿಸಿವೆ. ಈ ವರ್ಷವೂ ಎಲ್ಲಾ ಕನ್ನಡ ಚಿತ್ರಗಳು ದೊಡ್ಡಮಟ್ಟದ ಯಶಸ್ಸು ಕಾಣಲಿ. ಅದರಲ್ಲಿ ಬಾನದಾರಿಯಲ್ಲಿ ಚಿತ್ರವೂ ಇರಲಿ ಎನ್ನುತ್ತಾರೆ ಚಿತ್ರದ ಮತ್ತೊಬ್ಬ ನಾಯಕಿ ರೀಷ್ಮಾ ನಾಣಯ್ಯ.

    ಬಾನದಾರಿಯಲ್ಲಿ ಹಾಡು ಹುಟ್ಟಿದ ಸಮಯವನ್ನು ವರ್ಣಿಸಿದ  ಗೀತರಚನೆಕಾರ ಕವಿರಾಜ್, ಮುಂಬೈನ ಖ್ಯಾತ ಯಶ್ ರಾಜ್ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ನಡೆದಿದೆ. ಖ್ಯಾತ ಗಾಯಕ ಸೋನು ನಿಗಮ್ ಸುಮಧುರವಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ ಎಂದು ತಿಳಿಸಿದರು.  ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು. ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂತೋಷ್ ಹಾಗೂ ವೇಣು ಬಂಡವಾಳ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಯಕಿ ರುಕ್ಮಿಣಿ ಜೊತೆ ಆಫ್ರಿಕಾಗೆ ಹೊರಟು ನಿಂತ ಗೋಲ್ಡನ್ ಸ್ಟಾರ್ ಗಣೇಶ್

    ನಾಯಕಿ ರುಕ್ಮಿಣಿ ಜೊತೆ ಆಫ್ರಿಕಾಗೆ ಹೊರಟು ನಿಂತ ಗೋಲ್ಡನ್ ಸ್ಟಾರ್ ಗಣೇಶ್

    ಗೋಲ್ಡನ್ ಸ್ಟಾರ್ ಗಣೇಶ್ (Ganesh) – ಪ್ರೀತಂ ಗುಬ್ಬಿ ಕಾಂಬಿನೇಶನ್ ನಲ್ಲಿ ಬರುತ್ತಿದೆ ಮತ್ತೊಂದು ಸುಂದರ ಚಿತ್ರ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಾಂಬಿನೇಶನ್ ನಲ್ಲಿ ಈ ಹಿಂದೆ ಕೆಲವು ಚಿತ್ರಗಳು ಪ್ರೇಕ್ಷಕರನ್ನು ಮೋಡಿ ಮಾಡಿದೆ. ಈಗ ಇದೇ ಕಾಂಬಿನೇಷನ್ ನಲ್ಲಿ ” ಬಾನ ದಾರಿಯಲ್ಲಿ” (Banadariyalli) ಚಿತ್ರ ಬರುತ್ತಿದೆ.

    ಸ್ಪೋರ್ಟ್ಸ್ ಜಾನರ್ ನ ಈ ಚಿತ್ರದಲ್ಲಿ ಗಣೇಶ್ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ರುಕ್ಮಿಣಿ ವಸಂತ್ (Rukmini Vasanth) ಈಜುಗಾರ್ತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಪ್ರಸ್ತುತ ಈ ಚಿತ್ರಕ್ಕೆ ಮಂಗಳೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ವಾಟರ್‌ ಗೇಮ್ಸ್ ಸೇರಿದಂತೆ ಕೆಲವು ಭಾಗದ ಚಿತ್ರೀಕರಣ ನಾಯಕ ಗಣೇಶ್, ನಾಯಕಿ ರುಕ್ಮಿಣಿ ವಸಂತ್ ಮುಂತಾದವರ ಅಭಿನಯದಲ್ಲಿ ಮಂಗಳೂರಿನಲ್ಲಿ ನಡೆದಿದೆ. ಮೂರನೇ ಹಂತದ ಚಿತ್ರೀಕರಣ ಆಫ್ರಿಕಾದಲ್ಲಿ (Africa) ನಡೆಯಲಿದ್ದು, ಸದ್ಯದಲ್ಲೇ ಚಿತ್ರತಂಡ ಆಫ್ರಿಕಾಗೆ ತೆರಳಲಿದೆ.

    ಪ್ರೀತಂ ಗುಬ್ಬಿ (Pritam Gubbi) ನಿರ್ದೇಶನದ ಈ ಚಿತ್ರದ ಕಥೆ ಪ್ರೀತಾ ಜಯರಾಂ ಅವರದು. ಮಾಸ್ತಿ ಸಂಭಾಷಣೆ,  ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

    ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಬಾನ ದಾರಿಯಲ್ಲಿ” ಚಿತ್ರದ ತಾರಾಬಳಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರುಕ್ಮಿಣಿ ವಸಂತ್, ರೀಶ್ಮಾ ನಾಣಯ್ಯ, ರಂಗಾಯಣ ರಘು ಮುಂತಾದವರಿದ್ದಾರೆ‌. ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಹಾಡೊಂದರ ಸಾಲು ಚಿತ್ರದ ಶೀರ್ಷಿಕೆಯಾಗಿದ್ದು, “ಬಾನ ದಾರಿಯಲ್ಲಿ” ಶೀರ್ಷಿಕೆ ಈಗಾಗಲೇ ಜನರ ಮನ ಗೆದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್ ನಲ್ಲಿ ಮತ್ತೊಂದು ಹೊಸ ಸಿನಿಮಾ ಬರಲಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿ ಬ್ರೇಕ್ ಮಾಡಿತ್ತು. ಇದೀಗ ಆ ಸಿನಿಮಾದ ಟೈಟಲ್ ಲಾಂಚ್ ಗೆ ಸಿದ್ಧತೆ ನಡೆದಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ತಮ್ಮ ಹೊಸ ಸಿನಿಮಾದ ಶೀರ್ಷಿಕೆ ರಿವಿಲ್ ಮಾಡುವುದಾಗಿ ಸ್ವತಃ ಗಣೇಶ್ ಅವರೇ ಟ್ವಿಟ್ ಮಾಡಿದ್ದಾರೆ. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ‘ನವ ಸಂವತ್ಸರ ಯುಗಾದಿಯಂದು ಹೊಸ ಚಿತ್ರದ ಟೈಟಲ್ ಲಾಂಚ್. ನಾನು, ಪ್ರೀತಮ್ ಗುಬ್ಬಿ ಮುಂಗಾರು ಮಳೆಯಿಂದ ಸಿನಿ ಪಯಣದಲ್ಲಿ ಜೊತೆಯಾದವರು. ನಮ್ಮ ಜೋಡಿಯ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಮತ್ತು 99 ಚಿತ್ರಗಳನ್ನು ನೋಡಿ ತಾವು ಹರಿಸಿದ್ದೀರಿ. ಈಗ ಶ್ರೀವಾರಿ ಟಾಕೀಸ್ ನೊಂದಿಗೆ ಮತ್ತೊಂದು ಹೊಸ ಕನಸಿನ ಪಯಣ ಪ್ರಾರಂಭ. ಹರೆಯದ ಹೃದಯಗಳೇ ಹರಸಿ’ ಎಂದು ಗಣೇಶ್ ಹೊಸ ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ.

    ಗಣೇಶ್ ಅವರೇ ಹೇಳಿಕೊಂಡಂತೆ ಪ್ರೀತಮ್ ಗುಬ್ಬಿ ಮತ್ತು ಗಣೇಶ್ ಸ್ನೇಹಿತರು. ಆರಂಭದ ದಿನಗಳಲ್ಲಿ ಒಟ್ಟಿಗೆ ಒಂದೇ ರೂಮ್ ನಲ್ಲಿ ಕಾಲಕಳೆದವರು. ಗಣೇಶ್ ಅವರ ಮುಂಗಾರು ಮಳೆ ಚಿತ್ರಕ್ಕೆ ಪ್ರೀತಮ್ ಕಥೆ ಬರೆದದ್ದು. ಅಲ್ಲದೇ ಗಣೇಶ್ ಜತೆಗೆ ಈವರೆಗೂ ಮೂರು ಸಿನಿಮಾಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಗೆಳೆಯನಿಗಾಗಿಯೇ ಗಣೇಶ್ ಮಳೆಯಲಿ ಜೊತೆಯಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ಗಣೇಶ್ ಮತ್ತು ಪ್ರೀತಮ್ ಕಾಂಬಿನೇಷನ್ ನ ‘99’ ಸಿನಿಮಾದ ನಂತರ ಈ ಹೊಸ ಸಿನಿಮಾ ಲಾಂಚ್ ಆಗುತ್ತಿದೆ. ಈ ಕಾಂಬಿನೇಷನ್ ನಲ್ಲಿ ಈವರೆಗೂ ಲವ್ ಸ್ಟೋರಿಗಳನ್ನೇ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಹೊಸ ಸಿನಿಮಾದಲ್ಲೂ ಪ್ರೇಮಕಥೆಯೇ ಇರಲಿದೆ ಎನ್ನಲಾಗುತ್ತಿದೆ. ಏಪ್ರಿಲ್ 2 ರಂದು ಕೆಲವು ಸುದ್ದಿಗಳು ಹೊರ ಬೀಳಲಿವೆ.

  • ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ

    ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ

    ನಿರ್ದೇಶಕ ಪ್ರೀತಂ ಗುಬ್ಬಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕಾಂಬಿನೇಷನ್ ನ 4ನೇ ಸಿನಿಮಾ ಇದಾಗಿದೆ. ಇದನ್ನೂ ಓದಿ : ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್

    ‘ಮಳೆಯಲಿ ಜೊತೆಯಲಿ’ ಸಿನಿಮಾದ ಮೂಲಕ ಈ ಜೋಡಿ ಒಂದಾಗಿತ್ತು. ಆನಂತರ ‘ದಿಲ್  ರಂಗೀಲಾ’ ಆಗಿ ತೆರೆಯ ಮೇಲೆ ಕಾಣಿಸಿಕೊಂಡಿತ್ತು. ಈ ಕಾಂಬಿನೇಷನ್ ನ ಕೊನೆಯ ಸಿನಿಮಾ ‘99’. ಇದಾದ ನಂತರ ಪ್ರೀತಂ ಮತ್ತು ಗಣೇಶ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲಿ ಅಮೀರ್‌ ಮೇಲೆ ಕ್ರಷ್‌ ಆಗಿತ್ತು.. ಲವ್‌ ಲೆಟರ್‌ ಕೂಡ ಬರೆದಿದ್ದೆ: ಬಾಲಿವುಡ್‌ ನಟಿ

    ಸಾಮಾನ್ಯವಾಗಿ ಪ್ರೀತಂ ಸಿನಿಮಾಗಳೆಂದರೆ, ಅಲ್ಲೊಂದು ಲವ್ ಸ್ಟೋರಿ ಇದ್ದೇ ಇರುತ್ತದೆ. ಹಾಗಾಗಿ ಈ ಸಿನಿಮಾದಲ್ಲೂ ಅಪರೂಪದ ಪ್ರೇಮಕಥೆಯನ್ನು ಹೇಳಲಿದ್ದಾರಂತೆ ನಿರ್ದೇಶಕರು. ‘ಮುಂಗಾರು ಮಳೆ’ ಸಿನಿಮಾದ ಮೂಲಕ ಈ ಜೋಡಿ ಒಂದಾಗಿ ಕೆಲಸ ಮಾಡುತ್ತಿದ್ದರೂ, ಮುಂಗಾರು ಮಳೆಗೆ ಪ್ರೀತಂ ಕೇವಲ ಕಥೆಗಾರ ಆಗಿದ್ದರು. ಇದನ್ನೂ ಓದಿ: ಮಾಧುರಿ ದೀಕ್ಷಿತ್ ಇರೋದು ಮನೇಲಿ ಅಲ್ಲ, ಅರಮನೆಯಲ್ಲಿ: ಹೊಸ ಮನೆಗೆ ದೇವದಾಸ್ ಬೆಡಗಿ

    ಇತ್ತ ಗಣೇಶ್ ಕೂಡ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ, ಟಾಕ್ ಶೋ  ಒಂದನ್ನು ನಡೆಸಿಕೊಡುತ್ತಿದ್ದಾರೆ. ಗಾಳಿಪಟ2 ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದರೆ, ತ್ರಿಬಲ್ ರೈಡಿಂಗ್ ಕೂಡ ಶೂಟಿಂಗ್ ಮುಗಿಸಿಕೊಂಡಿದೆ. ಹೀಗಾಗಿ ಹೊಸ ಸಿನಿಮಾ ಅತೀ ಶೀಘ್ರದಲ್ಲೇ ಸೆಟ್ಟೇರಿದೆ ಅಚ್ಚರಿ ಪಡಬೇಕಿಲ್ಲ.

  • ಮತ್ತೆ ಒಂದಾಗಲಿದ್ದಾರೆ ಗೋಲ್ಡನ್ ಸ್ಟಾರ್, ಪ್ರೀತಂ ಗುಬ್ಬಿ

    ಮತ್ತೆ ಒಂದಾಗಲಿದ್ದಾರೆ ಗೋಲ್ಡನ್ ಸ್ಟಾರ್, ಪ್ರೀತಂ ಗುಬ್ಬಿ

    ಬೆಂಗಳೂರು: ‘ಮರೆಯುವ ಮುನ್ನಾ’ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್‍ವುಡ್‍ನಲ್ಲಿ ಮಿಂಚಲು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಸಜ್ಜಾಗಿದ್ದಾರೆ.

    ದಿಲ್ ರಂಗೀಲಾ, ಮಳೆಯಲಿ ಜೊತೆಯಲಿ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ತೆರೆ ಮೇಲೆ ಮಿಂಚಿಸಿದ ಈ ಜೋಡಿ, ಇದೀಗ ಮತ್ತೆ ಚಂದನವನದಲ್ಲಿ ‘ಮರೆಯುವ ಮುನ್ನಾ’ ಎಂಬ ಸಿನಿಮಾದ ಮೂಲಕ ಚಾಪು ಮೂಡಿಸಲು ಬರುತ್ತಿದ್ದಾರೆ. ಗಣೇಶ ಹಬ್ಬದಂದೇ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.

    ಈಗಾಗಲೇ ಪ್ರೀತಂ ಗುಬ್ಬಿ, ಯೋಗ್‍ರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಾರಥ್ಯದಲ್ಲಿ ಮುಂಗಾರು ಮಳೆ ಸಿನಿಮಾ ತೆರೆಯ ಮೇಲೆ ಮಿಂಚಿತ್ತು. ಇದೀಗ ಮೂರನೇ ಬಾರಿ ಇಬ್ಬರೂ ಸೇರಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

    ಚಿತ್ರದ ಬಗ್ಗೆ ಮಾತನಾಡಿದ ಪ್ರೀತಂ ಗುಬ್ಬಿ ‘ಮರೆಯುವ ಮುನ್ನಾ’ ರೋಮ್ಯಾಂಟಿಕ್ ಚಿತ್ರಕಥೆಯಾಗಿದ್ದು, ಇದು ಗಣೇಶ್ ಅವರಿಗೆ ಹೋಲುವಂತೆ ಇದೆ. ಕೆಲವು ತಿಂಗಳಿಂದ ಮರೆಯುವ ಮುನ್ನಾ ಸಿನಿಮಾದ ಪ್ರಾಜೆಕ್ಟ್ ಶುರು ಮಾಡಲಾಗಿದೆ. ಗಣೇಶ್ ಅವರು ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಆ ಸಿನಿಮಾ ಚಿತ್ರೀಕರಣ ಮುಗಿದ ಕೂಡಲೇ ಮರೆಯುವ ಮುನ್ನಾ ಸಿನಿಮಾ ಸ್ಟಾರ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಸದ್ಯಕ್ಕೆ ಗಣೇಶ್ ಪ್ರಶಾಂತ್ ರಾಜ್ ಅವರ ನಿರ್ದೇಶನದ ‘ಅರೆಂಜ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅದು ಕೊನೆಯ ಹಂತ ತಲುಪಿದೆ. ಬಳಿಕ ನಾಗಣ್ಣ ನಿರ್ದೇನದ ‘ಗಿಮಿಕ್’ ಮತ್ತು ವಿಜಯ್ ನಾಗೇಂದ್ರ ಅವರ ‘ಗೀತಾ’ ಸಿನಿಮಾದ ನಂತರ ಮರೆಯುವ ಮುನ್ನಾ ಸಿನಿಮಾ ಚಿತ್ರೀಕರಣ ಆರಂಭಿಸಲಾಗುವುದು ಎಂದರು.

     

     

     

     

     

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv