Tag: ಪ್ರಿ ರಿಲೀಸ್ ಇವೆಂಟ್

  • ‘ಗಂಧದ ಗುಡಿ’ ಪ್ರಿ ರಿಲೀಸ್ ಇವೆಂಟ್ : ಅಮಿತಾಭ್, ರಜನಿ ಸೇರಿ ಗಣ್ಯರಿಗೆ ಆಹ್ವಾನ

    ‘ಗಂಧದ ಗುಡಿ’ ಪ್ರಿ ರಿಲೀಸ್ ಇವೆಂಟ್ : ಅಮಿತಾಭ್, ರಜನಿ ಸೇರಿ ಗಣ್ಯರಿಗೆ ಆಹ್ವಾನ

    ಪುನೀತ್ ರಾಜ್ ಕುಮಾರ್ ನಟಿಸಿರುವ ‘ಗಂಧದ ಗುಡಿ’ (Gandhad Gudi) ಡಾಕ್ಯುಮೆಂಟರಿ ಮಾದರಿಯ ಸಿನಿಮಾ ಇದೇ ತಿಂಗಳು ಕೊನೆಯಲ್ಲಿ ಬಿಡುಗಡೆ ಆಗುತ್ತಿದೆ. ರಿಲೀಸ್ ಗೂ ಮುನ್ನ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Puneeth Rajkumar) ಅದ್ಧೂರಿಯಾಗಿ ಪ್ರಿ ರಿಲೀಸ್ ಇವೆಂಟ್ ಆಯೋಜನೆ ಮಾಡಲಾಗಿದ್ದು, ಭಾರತೀಯ ಸಿನಿಮಾ ರಂಗದ ದಿಗ್ಗಜರಿಗೆ ಅವರು ಆಹ್ವಾನ ನೀಡಿದ್ದಾರೆ. ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್, ಹಿರಿಯ ನಟ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಅನೇಕರಿಗೆ ಆಹ್ವಾನ ಹೋಗಿದೆ.

    ಈಗಾಗಲೇ ಕನ್ನಡ ಸಿನಿಮಾ ರಂಗದ ಅನೇಕರಿಗೆ ಆಹ್ವಾನ ಪತ್ರಿಕೆಯನ್ನು ಕೊಡಲಾಗಿದ್ದು, ಡಾ.ರಾ‍ಜ್ ಕುಟುಂಬ ಮೊನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಈ ಕಾರ್ಯಕ್ರಮಕ್ಕೆ ಆಹ್ವಾನಿಸಲೆಂದೇ ವಿಶೇಷ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಲಾಗಿದ್ದು, ಪುನೀತ್ ಪುತ್ಥಳಿ, ಗಂಧದ ತುಂಡಿನಲ್ಲಿ ಪುನೀತ್ ಹಸ್ತಾಕ್ಷರ ಹಾಗೂ ಮರದ ಹಲಗೆಯಲ್ಲಿ ಕೆತ್ತಲಾದ ಆಮಂತ್ರಣ ಪತ್ರಿಕೆಯನ್ನು ತಯಾರಿಸಲಾಗಿದೆ. ಇದನ್ನೂ ಓದಿ:ಕನ್ನಡದ ಹೆಸರಲ್ಲಿ ರೋಲ್‌ಕಾಲ್‌: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ

    ಮೊನ್ನೆಯಷ್ಟೇ  ಗಂಧದ ಗುಡಿ ಟೀಸರ್ ಬಿಡುಗಡೆ ಆಗಿದ್ದು, ಪ್ರೇಕ್ಷಕರು ದಾಖಲೆ ರೀತಿಯಲ್ಲಿ ಅದನ್ನು ವೀಕ್ಷಿಸಿದ್ದಾರೆ. ಈ ಟೀಸರ್ ನಲ್ಲಿ ಏನಿಲ್ಲ, ಎಲ್ಲವೂ ಇದೆ. ಬೆಟ್ಟ, ಗುಡ್ಡ, ನದಿ, ಹಳ್ಳ, ಕೊಳ್ಳ, ಅರಣ್ಯ, ಕಾಡು ಪ್ರಾಣಿಗಳು, ಕಾಡಂಚಿನ ಜನರು, ದೇವರು, ದೈವ ಎಲ್ಲವನ್ನೂ ಒಂದೇ ಉಸಿರಿಗೆ ಹಿಡಿದಿಟ್ಟಿದ್ದಾರೆ ಪುನೀತ್ ರಾಜ್‍ಕುಮಾರ್. ರಾತ್ರಿ ಅವರು ಕಾಡಿನೊಳಗೆ ನುಗ್ಗಿದಾಗ ನಾವೇ ಭಯಪಡುವಷ್ಟು ಸುಂದರವಾಗಿ ಸೆರೆ ಹಿಡಿದಿದ್ದಾರೆ ಆ ರಾತ್ರಿಯನ್ನು. ಸಮುದ್ರದಾಳಕ್ಕೆ ಅಪ್ಪು ಜಿಗಿದಾಗ ಇಲ್ಲಿ ನಾವೇ ಒದ್ದೆಯಾಗುವಂತೆ ಸಿನಿಮಾಟೋಗ್ರಫಿ ಇದೆ. ಎಲ್ಲವೂ ಚಂದ, ಚಂದ.

    ಗಂಧದ ಗುಡಿ ಟ್ರೈಲರ್ ನ ಮತ್ತೊಂದು ಸೊಗಸು ಅಂದರೆ, ಅಪ್ಪು ಹಾಗೂ ಅವರ ಅಪ್ಪಾಜಿ ಬಾಳಿ ಬದುಕಿದ ಮನೆಯನ್ನು ತೋರಿಸಿದ್ದಾರೆ. ಸ್ವತಃ ಆ ಮನೆಯ ಬಗ್ಗೆ ಪುನೀತ್ ರಾಜ್‍ಕುಮಾರ್ ಅವರೇ ವಿವರಿಸುತ್ತಾರೆ. ಮನೆಯನ್ನು ಕಣ್ತುಂಬಿಕೊಳ್ಳುವ ಹೊತ್ತಲ್ಲಿ ಡಾ.ರಾಜ್ ಕುಮಾರ್ ಪ್ರವೇಶ. ಥ್ರಿಲ್ ಅನಿಸುವಷ್ಟು ಮಜಾ ಕೊಡುತ್ತದೆ ಟ್ರೇಲರ್.

    ಇಂದು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗಾಗಿ ಟ್ರೇಲರ್ ಪ್ರದರ್ಶನ ಏರ್ಪಡಿಸಲಾಗಿತ್ತು. ಗಂಧದ ಗುಡಿಯ ಅಂದವನ್ನು ಕಣ್ತುಂಬಿಕೊಂಡ ಕಂಗಳಲ್ಲಿ ಅಪ್ಪು ಇಲ್ಲ ಅನ್ನುವ ಕಂಬನಿ ಸುರಿಯುತ್ತಿತ್ತು. ರಾಘವೇಂದ್ರ ರಾಜಕುಮಾರ ಸೇರಿದಂತೆ ಅಲ್ಲಿದ್ದವರ ಅಷ್ಟೂ ಕಣ್ಣುಗಳು ಒದ್ದೆ ಆಗಿದ್ದವು. ಟ್ರೇಲರೇ ಇಷ್ಟೊಂದು ಭಾವುಕತೆ ಸೃಷ್ಟಿ ಮಾಡಿದೆ. ಇದೇ ತಿಂಗಳು ಕೊನೆಯಲ್ಲಿ ಪೂರ್ತಿ ಚಿತ್ರವೇ ಬಿಡುಗಡೆ ಆಗುತ್ತಿದೆ. ಹೃದಯ ಒಡೆಯುವ ಕಾಲವದು.

    Live Tv
    [brid partner=56869869 player=32851 video=960834 autoplay=true]

  • 100 ಎಕರೆ ಪ್ರದೇಶದಲ್ಲಿ ಆರ್.ಆರ್.ಆರ್  ಕನ್ನಡ ಪ್ರಿರಿಲೀಸ್ ಇವೆಂಟ್ : ಯಾರೆಲ್ಲ ಬರ್ತಾರೆ ಗೊತ್ತಾ?

    100 ಎಕರೆ ಪ್ರದೇಶದಲ್ಲಿ ಆರ್.ಆರ್.ಆರ್ ಕನ್ನಡ ಪ್ರಿರಿಲೀಸ್ ಇವೆಂಟ್ : ಯಾರೆಲ್ಲ ಬರ್ತಾರೆ ಗೊತ್ತಾ?

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಕನ್ನಡ ಇವೆಂಟ್ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ. ಮಾರ್ಚ್ 19ರಂದು ನಡೆಯಲಿರುವ ಈ ಇವೆಂಟ್ ಗಾಗಿ 100 ಎಕರೆ ಪ್ರದೇಶ ಸಿದ್ಧಗೊಳ್ಳುತ್ತಿದೆ. 2 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸೇರಲಿರುವ ಈ ಕಾರ್ಯಕ್ರಮದಲ್ಲಿ ತೆಲುಗು, ತಮಿಳು ಮತ್ತು ಕನ್ನಡದ ಸ್ಟಾರ್ ನಟರು ಭಾಗಿಯಾಗುತ್ತಿರುವುದು ವಿಶೇಷ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ಈ ಇವೆಂಟ್ ಅನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲು ಚಿತ್ರತಂಡ ನಿರ್ಧರಿಸಿದ್ದು, ಪುನೀತ್ ನೆನಪಿನಲ್ಲಿ ಹಲವು ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ಇದರ ನೇತೃತ್ವವನ್ನು ಶಿವರಾಜ್ ಕುಮಾರ್ ಅವರಿಗೆ ವಹಿಸಲಾಗಿದೆಯಂತೆ.  ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?

    ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಮಾತ್ರವಲ್ಲ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಾಗಿ ಎಲ್ಲ ರೀತಿಯ ಭದ್ರತೆಯನ್ನೂ ಮಾಡಿಕೊಳ್ಳಲಾಗುತ್ತಿದೆಯಂತೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಈ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್ ತೇಜ್, ಜ್ಯೂನಿಯರ್ ಎನ್.ಟಿ.ಆರ್, ಆಲಿಯಾ ಭಟ್, ಅಜಯ್ ದೇವಗನ್,  ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸೇರಿದಂತೆ ಚಿತ್ರತಂಡದ ಬಹುತೇಕ ಸದಸ್ಯರು ಕೂಡ ಅಂದು ಭಾಗಿಯಾಗಲಿದ್ದಾರೆ. ಮನರಂಜನೆ ಕಾರ್ಯಕ್ರಮ ಮತ್ತು ಚಿತ್ರತಂಡದೊಂದಿಗೆ ಸಂವಾದ ಕೂಡ ಈ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.