Tag: ಪ್ರಿಯಾ ಪ್ರಕಾಶ್ ವಾರಿಯರ್

  • ಕಣ್ಸನ್ನೆ ಚೆಲುವೆಗೆ ಖುಲಾಯಿಸಿತು ಲಕ್

    ಕಣ್ಸನ್ನೆ ಚೆಲುವೆಗೆ ಖುಲಾಯಿಸಿತು ಲಕ್

    ಹೈದರಾಬಾದ್: ಕಣ್ಸನ್ನೆ ಮೂಲಕವೇ ಲಕ್ಷಾಂತರ ಜನರ ಮನಗೆದ್ದು, ಕಣ್ಸನ್ನೆ ಚೆಲುವೆ ಎಂದೇ ಗುರುತಿಸಿಕೊಂಡಿರುವ ಪ್ರಿಯಾ ಪ್ರಕಾಶ್ ವಾರಿಯರ್‍ಗೆ ಇದೀಗ ಅದೃಷ್ಟ ಖುಲಾಯಿಸಿದೆ. ಈ ಮೂಲಕ ಅವರಿಗೆ ದೊಡ್ಡ ಬ್ರೇಕ್ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ಪ್ರುಯಾ ಪ್ರಕಾಶ್ ವಾರಿಯರ್ ಕೆಲ ಸಿನಿಮಾಗಳನ್ನು ಮಾಡಿದರೂ ಅಷ್ಟೇನು ದೊಡ್ಡ ಬ್ರೇಕ್ ಅವರಿಗೆ ಸಿಕ್ಕಿಲ್ಲ. ಹೀಗಾಗಿ ಉತ್ತಮ ಅವಕಾಶದ ನಿರೀಕ್ಷೆಯಲ್ಲಿದ್ದ ಕಣ್ಸನ್ನೆ ಚೆಲುವೆಗೆ ಅದೃಷ್ಟ ಖುಲಾಯಿಸಿದೆ. ಸ್ಟಾರ್ ನಟರೊಬ್ಬರ ಚಿತ್ರದಲ್ಲಿ ನಟಿಸಲು ಪ್ರಿಯಾ ವಾರಿಯರ್‍ಗೆ ಅವಕಾಶ ಒದಗಿದ್ದು, ಈ ಚಿತ್ರವನ್ನು ಫೇಮಸ್ ನಿರ್ದೇಶಕರು ನಿರ್ದೇಶಿಸುತ್ತಿದ್ದಾರೆ. ಹೀಗಾಗಿ ಪ್ರಿಯಾ ಅವರಿಗೆ ಬಹುದೊಡ್ಡ ಸಿನಿಮಾದಲ್ಲಿ ನಟಿಸುವ ಅವಕಾಶ ಲಭಿಸಿದೆ.

    ಮಲೆಯಾಳಂನ ಒರು ಅಡಾರ್ ಲವ್ ಸಿನಿಮಾದ ಹಾಡಿನ ಮೂಲಕ ಫೇಮಸ್ ಆಗಿದ್ದ ಪ್ರಿಯಾಗೆ ನಂತರ ಭಾರೀ ಜನಪ್ರಿಯತೆ ಒದಗಿತ್ತು. ಅಲ್ಲದೆ ನಂತರ ಹೆಚ್ಚು ಆಫರ್‍ಗಳು ಸಹ ಬಂದವು. ಆದರೆ ಅದಾವುದೂ ಅವರಿಗೆ ಅಷ್ಟೇನು ದೊಡ್ಡ ಯಶಸ್ಸು ತಂದುಕೊಡಲಿಲ್ಲ. ಇದೀಗ ತೆಲುಗಿನ ಸ್ಟಾರ್ ನಟ ನಿತಿನ್ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಇನ್ನೂ ವಿಶೇಷ ಎಂಬಂತೆ ಈ ಸಿನಿಮಾವನ್ನು ಒಕ್ಕಡುನ್ನಾಡು, ಸಾಹಸಂ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಚಂದ್ರಶೇಖರ್ ಯೆಲೆಟಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಟೈಟಲ್ ಸಹ ವಿಶೇಷವಾಗಿದ್ದು, ‘ಚೆಕ್’ ಎಂದು ಹೆಸರಿಡಲಾಗಿದೆ. ಹೀಗಾಗಿ ನಿತಿನ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.

    ನಟ ನಿತಿನ್ ಕೈಯಲ್ಲಿ ಈಗ ಸಿಕ್ಕಾಪಟ್ಟೆ ಸಿನಿಮಾಗಳಿವೆ. ಈ ಹಿಂದೆ ಒಪ್ಪಿಕೊಂಡ ಸಿನಿಮಾಗಳ ಪೈಕಿ ಇದೀಗ ಒಂದು ಚಿತ್ರದ ಶೀರ್ಷಿಕೆ ಘೋಷಣೆ ಆಗಿದ್ದು, ‘ಚೆಕ್’ ಎಂದು ಹೆಸರಿಡಲಾಗಿದೆ. ತೆಲುಗಿನ ಖ್ಯಾತ ನಿರ್ದೇಶಕ ಕೊರಟಾಲ ಶಿವ ಈ ಸಿನಿಮಾದ ಟೈಟಲ್ ಮತ್ತು ಪ್ರಿ-ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ಚದುರಂಗದ ‘ಚೆಕ್’ ಆಧರಿಸಿ ಟೈಟಲ್ ಇಡಲಾಗಿದೆ. ಹೀಗಾಗಿ ಕಥೆ ಯಾವ ರೀತಿ ಇರಲಿದೆ ಎಂಬುದು ಸದ್ಯ ಅಭಿಮಾನಿಗಳ ಕುತೂಹಲ. ಇನ್ನೂ ಸಪ್ರ್ರೈಸ್ ಎಂದರೆ ಈ ಸಿನಿಮಾಗೆ ಇಬ್ಬರು ನಾಯಕಿಯರು. ಒಬ್ಬರು ರಾಕುಲ್ ಪ್ರೀತ್ ಸಿಂಗ್ ಹಾಗೂ ಮತ್ತೊಬ್ಬರು ಪ್ರಿಯಾ ವಾರಿಯರ್. ಹೀಗಾಗಿ ಚಿತ್ರ ವಿಶೇಷತೆ ಹೊಂದಿದೆ.

    ಪ್ರಿಯಾ ಪ್ರಕಾಶ್ ವಾರಿಯರ್ ಇದೇ ಮೊದಲ ಬಾರಿಗೆ ಸ್ಟಾರ್ ನಟನ ಜೊತೆಗೆ ನಟಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಅದೃಷ್ಟ ಖುಲಾಯಿಸಿದಂತಾಗಿದೆ. ಅಂದಹಾಗೆ ಚೆಕ್ ಚಿತ್ರಕ್ಕೆ ಬಾಹುಬಲಿ ಖ್ಯಾತಿಯ ಎಂಎಂ ಕೀರವಾಣಿ ಸಂಗೀತ ನಿರ್ದೇಶನವಿದೆ. ವಿ.ಆನಂದ್ ಪ್ರಸಾದ್ ನಿರ್ಮಿಸುತ್ತಿದ್ದು, ಸಿನಿಮಾದ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಟೈಟಲ್ ಮತ್ತು ಪಾತ್ರವರ್ಗದ ಕುರಿತು ಈಗ ಮಾಹಿತಿ ಹಂಚಿಕೊಂಡಿದೆ.

  • ಕಣ್ಸನ್ನೆ ಚೆಲುವೆಯ ಮತ್ತೊಂದು ವಿಡಿಯೋ ಜಾದೂ

    ಕಣ್ಸನ್ನೆ ಚೆಲುವೆಯ ಮತ್ತೊಂದು ವಿಡಿಯೋ ಜಾದೂ

    ತಿರುವನಂತಪುರ: ವಿಂಕಿಂಗ್ ಸ್ಟಾರ್ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದು, ವೈರಲ್ ಆಗಿದೆ.

    ಬಹುದಿನಗಳ ಬಳಿಕ ಕಣ್ಸನ್ನೆ ವಿಡಿಯೋ ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಜಾದೂ ಮಾಡ್ತಿದ್ದಾರೆ. ಕೇವಲ ಒಂದು ಕಣ್ಸನ್ನೆ ಮೂಲಕ ನ್ಯಾಶನಲ್ ಕ್ರಶ್ ಆಗಿರುವ ಪ್ರಿಯಾ ಪ್ರಕಾಶ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಡ್ಯಾನ್ಸ್ ವಿಡಿಯೋ, ಸಿನಿಮಾಗೆ ಸಂಬಂಧಿಸಿದ ವಿಷಯಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸದಾ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ.

    ಬ್ಯೂಟಿ ಪಾರ್ಲರ್ ನಲ್ಲಿ ಚೇರ್ ಮೇಲೆ ಕುಳಿತು ಸೆಲ್ಫಿ ಮಿರರ್ ವಿಡಿಯೋದಲ್ಲಿ ಓರು ಆಡಾರ್ ಲವ್ ಚಿತ್ರದಂತೆ ಕಾಮನಬಿಲ್ಲಿನ ಹುಬ್ಬುಗಳ ಮೂಲಕ ಕಣ್ಸನ್ನೆ ಮಾಡಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ 70 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಪ್ರಿಯಾ ಹೊಂದಿದ್ದಾರೆ. ಶ್ರೀದೇವಿ ಬಂಗಲೋ ಮತ್ತು ಲವ್ ಹ್ಯಾಕರ್ಸ್ ಚಿತ್ರಗಳ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

     

    View this post on Instagram

     

    A post shared by Priya Prakash Varrier???? (@priya.p.varrier) on

  • ಕೊಡಗಿಗೆ ಬಂದಿಳಿದ ಕಣ್ಸನ್ನೆ ಬೆಡಗಿ!

    ಕೊಡಗಿಗೆ ಬಂದಿಳಿದ ಕಣ್ಸನ್ನೆ ಬೆಡಗಿ!

    ಕೊಡಗು: ಒರು ಅಡಾರ್ ಲವ್ ಎಂಬ ಮಲೆಯಾಳಂ ಚಿತ್ರದ ಒಂದು ದೃಶ್ಯದ ಮೂಲಕ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಫೇಮಸ್ ಆದಾಕೆ ಪ್ರಿಯಾ ಪ್ರಕಾಶ್ ವಾರಿಯರ್. ಆ ಚಿತ್ರ ತೆರೆ ಕಂಡು ಅದು ಕಿರಿಕ್ ಲವ್ ಸ್ಟೋರಿ ಎಂಬ ಹೆಸರಿನಲ್ಲಿ ಕನ್ನಡದಲ್ಲಿಯೂ ಬಿಡುಗಡೆಯಾಗಿ ಹೋಗಿದೆ. ಆ ಚಿತ್ರ ಹೇಳಿಕೊಳ್ಳುವಂಥಾ ಗೆಲುವು ದಾಖಲಿಸದಿದ್ದರೂ ಪ್ರಿಯಾಗೆ ನಟಿಯಾಗಿ ಇರೋ ಬೇಡಿಕೆ, ಆಕೆಯೆಡೆಗಿರೋ ಕ್ರೇಜ್ ಮಾತ್ರ ಒಂದಿನಿತೂ ಕಡಿಮೆಯಾಗಿಲ್ಲ. ಪ್ರಿಯಾ ವಿಷ್ಣುಪ್ರಿಯಾ ಎಂಬ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸುತ್ತಿದ್ದಾರೆಂಬ ಸುದ್ದಿ ಹೊರಬಿದ್ದ ಬೆನ್ನಲ್ಲಿಯೇ ಅವರೀಗ ಏಕಾಏಕಿ ಕೊಡಗಿನಲ್ಲಿ ಕಾಣಿಸಿಕೊಂಡಿದ್ದಾರೆ!

    ಹಾಗಂತ ವಿಷ್ಣುಪ್ರಿಯಾ ಚಿತ್ರದ ಚಿತ್ರೀಕರಣ ಆರಂಭವಾಗಿದೆ, ಪ್ರಿಯಾ ಆ ಕಾರಣದಿಂದಲೇ ಕೊಡಗಿಗೆ ಬಂದಿದ್ದಾರೆ ಅಂದುಕೊಳ್ಳಬೇಕಿಲ್ಲ. ಪ್ರಿಯಾ ಬಂದಿರೋದು ವಿಹಾರಕ್ಕಾಗಿಯಷ್ಟೇ. ಹೀಗೆ ಕಣ್ಣೇಟಿನ ಸುಂದರಿ ಕೊಡಗಿನ ಸುಂದರ ತಾಣಗಳಲ್ಲಿ ಓಡಾಡುತ್ತಾ ಶಾಪಿಂಗ್ ಮಾಡಲಾರಂಭಿಸಿದ್ದೇ ಜನರೆಲ್ಲ ಗುರುತು ಹಿಡಿದು ಮುಗಿಬಿದ್ದಿದ್ದಾರೆ. ಪ್ರಿಯಾ ಎಲ್ಲರೊಂದಿಗೂ ಚೆಂದಗೆ ಮಾತಾಡಿ, ಅಭಿಮಾನಿಗಳ ಸೆಲ್ಫಿ ಸಂಭ್ರಮಕ್ಕೆ ಮನಸಾರೆ ಸಹಕರಿಸಿ ಖುಷಿಗೊಂಡಿದ್ದಾರೆ.

    ಒರು ಅಡಾರ್ ಲವ್ ಎಂಬ ಚಿತ್ರದ ನಂತರ ಪ್ರಿಯಾ ವಾರಿಯರ್ ಬಾಲಿವುಡ್‍ಗೂ ಎಂಟ್ರಿ ಕೊಟ್ಟಿದ್ದರು. ಶ್ರೀದೇವಿ ಬಂಗ್ಲೊ ಎಂಬ ಚಿತ್ರದಲ್ಲಿ ಪ್ರಿಯಾ ನಟಿಸಲು ತಯಾರಾಗಿದ್ದರಾದರೂ ಆರಂಭದಲ್ಲಿಯೇ ವಿವಾದವೆದ್ದು ಆ ಚಿತ್ರ ತಾತ್ಕಾಲಿಕವಾಗಿ ನಿಂತು ಹೋಗಿದೆ. ಇದೀಗ ಅವರು ಕನ್ನಡದತ್ತ ಮುಖ ಮಾಡಿದ್ದಾರೆ. ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅವರ ಎರಡನೇ ಚಿತ್ರ ವಿಷ್ಣುಪ್ರಿಯದಲ್ಲಿ ಅವರು ನಾಯಕಿಯಾಗಿ ನಟಿಸೋದು ಬಹುತೇಕ ಖಚಿತಗೊಂಡಿದೆ. ಅದಕ್ಕೂ ಮುಂಚೆಯೇ ಪ್ರಿಯಾ ವಾರಿಯರ್ ಕೊಡಗಿನ ಸುಂದರ ತಾಣಗಳಲ್ಲಿ ಒಂದು ರೌಂಡು ಹಾಯಾಗಿ ವಿಹಾರ ನಡೆಸಿದ್ದಾರೆ. ಜೊತೆಗೆ ತನ್ನ ಬ್ರ್ಯಾಂಡ್ ಆಗಿರೋ ಕಣ್ಸನ್ನೆಯನ್ನೂ ಅಭಿಮಾನಿಗಳಿಗೆ ತೋರಿಸಿದ್ದಾರೆ.

  • ಗೆಳೆಯನೊಂದಿಗೆ ಕಾರ್ ಡಿಕ್ಕಿಯಲ್ಲಿ ಕಾಣಿಸಿಕೊಂಡ ಕಣ್ಸನ್ನೆ ಚೆಲುವೆ

    ಗೆಳೆಯನೊಂದಿಗೆ ಕಾರ್ ಡಿಕ್ಕಿಯಲ್ಲಿ ಕಾಣಿಸಿಕೊಂಡ ಕಣ್ಸನ್ನೆ ಚೆಲುವೆ

    ತಿರುವನಂತಪುರ: ಕೇವಲ ತನ್ನ ಒಂದು ಕಣ್ಸನ್ನೆಯಿಂದಾಗಿ ನ್ಯಾಷನಲ್ ಕ್ರಷ್ ಆಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಾರ್ ಡಿಕ್ಕಿಯಲ್ಲಿ ತೆಗೆಯಲಾದ ಫೋಟೋಗಳು ನೆಟ್ಟಿಗರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿವೆ. ಇತ್ತೀಚೆಗೆ ತನ್ನ ಸಹ ನಟ ರೋಶನ್ ಅಬ್ದುಲ್ ರವೂಫ್ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳು ಮಿಂಚಿನಂತೆ ಹರಿದಾಡುತ್ತಿವೆ.

    ಕಾರ್ ಡಿಕ್ಕಿಯಲ್ಲಿ ಲೈಟಿಂಗ್ ಡೆಕೋರೇಷನ್ ನಲ್ಲಿ ಪ್ರಿಯಾ ಮತ್ತು ರೋಶನ್ ಜೊತೆಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಕೆಲ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಿಯಾ ಹಾಕಿಕೊಂಡಿದ್ದಾರೆ. ಒರು ಅಡರ್ ಲವ್ ಸ್ಟೋರಿ ಸಿನಿಮಾ ಫೆಬ್ರವರಿ 14ರಂದು ಬಿಡುಗಡೆಯಾಗಲಿದೆ.

    ಒಂದು ಕಣ್ಸನ್ನೆ ಮೂಲಕವೇ ಪಡ್ಡೆ ಹುಡುಗರ ಮನಗೆದ್ದಿರುವ ಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಬಾಲಿವುಡ್‍ನಲ್ಲಿ ಕೆಲ ಆಫರ್ ಗಳನ್ನು ಪಡೆದುಕೊಂಡಿರುವ ಪ್ರಸಿದ್ಧ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದು, ಕೆಲ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸಿನಿಮಾದಲ್ಲಿಯೂ ಪ್ರಿಯಾ ನಟಿಸುತ್ತಿದ್ದು, ರಣ್‍ವೀರ್ ಸಿಂಗ್ ಮತ್ತು ವಿಕ್ಕಿ ಕೌಶಲ್ ಜೊತೆ ಶೀಘ್ರದಲ್ಲಿಯೇ ತೆರೆಹಂಚಿಕೊಳ್ಳುವ ಸಾಧ್ಯತೆಗಳಿವೆ.

    https://www.instagram.com/p/BsSrhl0Hyx8/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಣ್ಸನ್ನೆ ಬೆಡಗಿಯ ಕ್ಯೂಟ್ ಫೋಟೋ ವೈರಲ್

    ಕಣ್ಸನ್ನೆ ಬೆಡಗಿಯ ಕ್ಯೂಟ್ ಫೋಟೋ ವೈರಲ್

    ಬೆಂಗಳೂರು: ಒಂದು ಕಣ್ಸನ್ನೆ ಮೂಲಕ ನ್ಯಾಶನಲ್ ಕ್ರಶ್ ಅಂತಾ ಕರೆಸಿಕೊಳ್ಳುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಫೋಟೋ ನೋಡಿದವರು ಕ್ಯೂಟ್ ಅಂತಾ ಕಮೆಂಟ್ ಮಾಡುತ್ತಿದ್ದಾರೆ.

    ಫೋಟೋ ಅಪ್ಲೋಡ್ ಮಾಡಿಕೊಂಡ 14 ಗಂಟೆಯಲ್ಲಿ 2.4 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಫೋಟೋ ಜೊತೆಗೆ ‘ಫೋಸ್ ನೀಡೋದು ಶಾಶ್ವತವಾಗಿ ಬದಲಾದ ಹಾಗಿದೆ’ ಎಂಬ ಸಾಲುಗಳನ್ನು ಸಹ ಪ್ರಿಯಾ ಬರೆದುಕೊಂಡಿದ್ದಾರೆ. ಪ್ರಿಯಾ ಅಭಿಮಾನಿಗಳಂತೂ ಫೋಟೋ ನೋಡಿದ ಕೂಡಲೇ ತುಂಬಾ ಮುದ್ದಾಗಿ ಕಾಣುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ.

    ‘ಓರು ಅಡಾರ್ ಲವ್’ ಮಲಯಾಳಂ ಸಿನಿಮಾದಲ್ಲಿ ಸದ್ಯ ಪ್ರಿಯಾ ನಟಿಸುತ್ತಿದ್ದು, ಚಿತ್ರ ತೆರೆಕಾಣಬೇಕಿದೆ. ಈಗಾಗಲೇ ಚಿತ್ರದ ಎರಡು ಟ್ರೇಲರ್‍ಗಳು ಸೂಪರ್ ಹಿಟ್ ಆಗಿದ್ದು, ದೇಶಾದ್ಯಂತ ಸಂಚಲನ ಮೂಡಿಸಿವೆ. ಓರು ಅಡಾರ್ ಲವ್ ಸಿನಿಮಾ ಸೆಪ್ಟೆಂಬರ್ 14ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ.

    ಪ್ರಿಯಾ ಕಣ್ಸನ್ನೆ ಮತ್ತು ಕ್ಲಾಸ್ ರೂಮ್ ನಲ್ಲಿ ಶೂಟ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಬಾಲಿವುಡ್ ನಿಂದಲೂ ಆಫರ್ ಗಳು ಬರುತ್ತಿವೆ ಎಂದು ವರದಿಯಾಗಿದೆ. ಇತ್ತ ಕನ್ನಡ ‘ಯೋಗಿ ಲವ್ಸ್ ಸುಪ್ರಿಯಾ’ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಯುವ ನಿರ್ದೇಶಕ ಯೋಗಿ ಈ ಚಿತ್ರದ ಮೂಲಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ನಿರ್ದೇಶಕರಾದ ಓಂ ಪ್ರಕಾಶ್ ರಾವ್, ರಾಘವ್ ಲೋಕಿ, ಎಸ್. ಮಹೇಂದರ್, ಕಿರಣ್ ಗೋವಿ ಸೇರಿದಂತೆ ಸಾಕಷ್ಟು ಜನರ ಜೊತೆ ಕೆಲಸ ಮಾಡಿ ಅನುಭವವನ್ನು ಯೋಗಿ ಹೊಂದಿದ್ದಾರೆ.

    https://www.instagram.com/p/BlVrRS3DrIu/?taken-by=priya.p.varrier

  • ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್‍ರನ್ನು ಇಮಿಟೇಟ್ ಮಾಡಿದ ಅಂಬಿ!

    ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್‍ರನ್ನು ಇಮಿಟೇಟ್ ಮಾಡಿದ ಅಂಬಿ!

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಸೆಟ್‍ನಲ್ಲಿ ಶೂಟಿಂಗ್ ಸಮಯದ ಬಿಡುವಿನ ವೇಳೆ ಕಣ್ಸನ್ನೆ  ಬೆಡಗಿ ಪ್ರಿಯಾ ಪ್ರಕಾಶ್‍ರನ್ನು ಇಮಿಟೇಟ್ ಮಾಡಿದ್ದಾರೆ.

    ನಾಯಕನಿಗೆ ಕಣ್ಣು ಹೊಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಿಯಾ ಅವರನ್ನು ಇವರೆಗೂ ಸಿನಿಮಾ ನಟರು, ಅಭಿಮಾನಿಗಳು ಸೇರಿದಂತೆ ಹಲವಾರು ಮಂದಿ ಅವರನ್ನು ಇಮಿಟೇಟ್ ಮಾಡಿದ್ದರು.

    ಸದ್ಯ ಈಗ ಅಂಬರೀಶ್ ಪ್ರಿಯ ಪ್ರಕಾಶ್ ಅವರನ್ನು ಇಮಿಟೇಟ್ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಅಂಬಿ ನಿಂಗ್ ವಯಸ್ಸಾಯ್ತೋ’ ಶೂಟಿಂಗ್ ಬಿಡುವಿನ ಸಮಯದಲ್ಲಿ ಅಂಬರೀಶ್ ಹಾಸ್ಯದ ರೀತಿಯಲ್ಲಿ ಪ್ರಿಯಾ ಅವರ ರೀತಿ ಮಾಡಿದ್ದಾರೆ.

    ಸದ್ಯ ಅಂಬರೀಶ್ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಜೂನಿಯರ್ ಅಂಬಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕಿಚ್ಚ ಸುದೀಪ್ ಗೆ ಜೋಡಿ ಆಗಿ ಮುಗೂತಿ ಸುಂದರಿ ಶೃತಿ ಹರಿಹರನ್ ಅಭಿನಯಿಸುತ್ತಿದ್ದಾರೆ. ಜಾಕ್ ಮಂಜು ನಿರ್ಮಾಣದಲ್ಲಿ ಗುರುದತ್ತ್ ಗಾನಿಗ ಕಲ್ಪನೆಯಲ್ಲಿ ಚಿತ್ರ ಮೂಡಿಬರುತ್ತಿದೆ.

  • ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿಕೊಂಡ ಕಣ್ಸನ್ನೆಯ ಮ್ಯಾಜಿಕ್ ಬೆಡಗಿ

    ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿಕೊಂಡ ಕಣ್ಸನ್ನೆಯ ಮ್ಯಾಜಿಕ್ ಬೆಡಗಿ

    ತಿರುವನಂತಪುರ: ಓರು ಆಡಾರ್ ಲವ್ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕೇವಲ ತಮ್ಮ ಒಂದು ಕಣ್ಸನ್ನೆಯ ಮೂಲಕವೇ ನ್ಯಾಶನಲ್ ಕ್ರಷ್ ಆಗಿದ್ದರು. ಆ ಒಂದು ಝಲಕ್ ಮೂಲಕವೇ ದೇಶಾದ್ಯಂತ ಮನೆ ಮಾತಾಗಿರುವ ಪ್ರಿಯಾ ಸಹನಟ ರೋಶನ್ ಅಬ್ದುಲ್ ರವೂಫ್ ಜೊತೆಗಿನ ಮತ್ತೊಂದು ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಪ್ರಿಯಾ ಮತ್ತು ರೋಶನ್ ಇಬ್ಬರ ಕೆಮಿಸ್ಟ್ರಿಯ ಎರಡು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನಡುವೆ ಪ್ರಿಯಾ ಮತ್ತು ರೋಶನ್ ಇಬ್ಬರು ಸೆಲ್ಫಿ ವಿಡಿಯೋ ಮಾಡಿದ್ದಾರೆ.

    ಕಪ್ಪು ಬಣ್ಣದ ಸ್ಕರ್ಟ್ ಮತ್ತು ಬಿಳಿ ಬಣ್ಣದ ಟಾಪ್ ತೊಟ್ಟು ಮುದ್ದು ಮುದ್ದಾಗಿ ಕಾಣುತ್ತಿರುವ ಪ್ರಿಯಾರನ್ನು ವಿಡಿಯೋದಲ್ಲಿ ನೋಡಬಹುದು. ಇತ್ತ ರೋಶನ್ ಕೂಡ ಬ್ಲ್ಯಾಕ್ ಆ್ಯಂಡ ಬ್ಲ್ಯಾಕ್ ನಲ್ಲಿ ಮಿಂಚಿದ್ದಾರೆ. ಈ ವಿಡಿಯೋದಲ್ಲಿ ಇಬ್ರೂ ಸಿನಿಮಾದ ಟ್ರೇಲರ್ ನಲ್ಲಿ ಇದ್ದಂತೆ ವೇಗವಾಗಿ ಹುಬ್ಬುಗಳ ಮೇಲಿಂದ ಕೆಳಕ್ಕೆ ಮಾಡಿದ್ದಾರೆ. ಓರು ಆಡಾರ್ ಲವ್ ಟ್ರೇಲರ್ ಕೇವಲ ಒಂದು ಕಣ್ಸನ್ನೆಯ ಮಾಡಿದ್ದ ಜೋಡಿ ಈಗ ಅದೇ ಶೈಲಿಯಲ್ಲಿ ವೇಗವಾಗಿ ಮಾಡಿದ್ದಾರೆ.

    ಕ್ಯಾಂಪಸ್ ಕ್ಯೂಟ್ ಲವ್ ಸ್ಟೋರಿಯನ್ನು ಹೊಂದಿರುವ ಓರು ಆಡಾರ್ ಲವ್ ಜೂನ್ 14ರಂದು ತೆರೆಕಾಣಲಿದೆ. ಇನ್ನು ಪ್ರಿಯಾ ಪ್ರಕಾಶ್‍ಗೆ ಬಾಲಿವುಡ್ ನಿಂದ ಆಫರ್‍ಗಳು ಬರುತ್ತಿವೆ ಅಂತಾ ಹೇಳಲಾಗುತ್ತಿದೆ.

    https://twitter.com/priyapvarrier/status/984625817081724929

  • ರಣವೀರ್ ಸಿಂಗ್ ಜೊತೆ ಕಣ್ ಸನ್ನೆ ಸುಂದರಿ ಪ್ರಿಯಾ ವಾರಿಯರ್ ಬಾಲಿವುಡ್‍ಗೆ ಎಂಟ್ರಿ ಕೊಡ್ತಾರಾ?

    ರಣವೀರ್ ಸಿಂಗ್ ಜೊತೆ ಕಣ್ ಸನ್ನೆ ಸುಂದರಿ ಪ್ರಿಯಾ ವಾರಿಯರ್ ಬಾಲಿವುಡ್‍ಗೆ ಎಂಟ್ರಿ ಕೊಡ್ತಾರಾ?

    ಮುಂಬೈ: ತನ್ನ ಕಣ್ ಸನ್ನೆಯಿಂದ ಇಡೀ ದೇಶವನ್ನೇ ಸೆಳೆದ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಬಾಲಿವುಡ್‍ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾ, ತನಗೆ ರಣವೀರ್ ಸಿಂಗ್, ಶಾರೂಖ್ ಖಾನ್ ಮತ್ತು ಸಿದ್ದಾರ್ಥ್ ಮಲ್ಹೊತ್ರ ಜೊತೆ ನಟಿಸುವ ಆಸೆಯನ್ನ ವ್ಯಕ್ತ ಪಡಿಸಿದ್ದಾರೆ.

    ಮೂಲಗಳ ಪ್ರಕಾರ ಪ್ರಿಯಾ ಪ್ರಕಾಶ್ ವಾರಿಯರ್ ಬಾಲಿವುಡ್‍ನ `ಚೆನೈ ಎಕ್ಸೆಪ್ರೆಸ್’ ಖ್ಯಾತಿಯ ರೋಹಿತ್ ಶೆಟ್ಟಿ ನಿರ್ದೇಶನದ `ಸಿಂಬಾ’ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ಕೂಡ ನಟಿಸಲಿರುವ ಪ್ರಿಯಾ, ಕರಣ್ ಜೋಹಾರ್ ನಿರ್ಮಾಣದ `ಗೋಲ್‍ಮಾಲ್ ಅಗೈನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

    ಕಣ್ ಸನ್ನೆಯಿಂದ ಫೇಮಸ್ ಆದ ಪ್ರಿಯಾ ಪ್ರಕಾಶ್ ಅವರು ನಟಿಸುತ್ತಿರುವ `ಒರು ಅಡಾರ್ ಲವ್’ ಮಲಯಾಳಂ ಸಿನಿಮಾವು ಜೂನ್ 14 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದೆ.

  • ನ್ಯಾಷನಲ್ ಕ್ರಶ್ ಪ್ರಿಯಾ ಪ್ರಕಾಶ್‍ಗೆ ಸೆಡ್ಡು ಹೊಡೆಯಲು ಇಂಟರ್ ನ್ಯಾಷನಲ್ ಕ್ರಶ್‍ರನ್ನು ಕರೆತರಲಿದ್ದಾರೆ ಪ್ರಥಮ್!

    ನ್ಯಾಷನಲ್ ಕ್ರಶ್ ಪ್ರಿಯಾ ಪ್ರಕಾಶ್‍ಗೆ ಸೆಡ್ಡು ಹೊಡೆಯಲು ಇಂಟರ್ ನ್ಯಾಷನಲ್ ಕ್ರಶ್‍ರನ್ನು ಕರೆತರಲಿದ್ದಾರೆ ಪ್ರಥಮ್!

    ಬೆಂಗಳೂರು: ಒಂದೇ ಒಂದು ಕಣ್ಣಸನ್ನೆಗೆ ಪ್ರಿಯಾ ಪ್ರಕಾಶ್ ನ್ಯಾಷನಲ್ ಕ್ರಶ್ ಆಗಿದ್ದು, ಇದೀಗ ಬಿಗ್ ಬಾಸ್ ವಿಜೇತ ಪ್ರಥಮ್ ಪ್ರಿಯಾ ಅವರಿಗೆ ಸೆಡ್ಡು ಹೊಡೆಯಲು ಇಂಟರ್ ನ್ಯಾಷನಲ್ ಕ್ರಶ್‍ರನ್ನು ಕರೆತರಲಿದ್ದಾರೆ.

    ಒಂದು ಹಾಡಿನ ಮೂಲಕ ಖ್ಯಾತಿ ಪಡೆದ ಪ್ರಿಯಾ ಪ್ರಕಾಶ್ ಅವರನ್ನು ಕನ್ನಡಕ್ಕೆ ಕರೆತರಲು ಯೋಚಿಸುತ್ತಿದ್ದಾರೆ. ಹೀಗಿರುವಾಗ ಬಿಗ್ ಬಾಸ್ ವಿಜೇತ ಪ್ರಥಮ್ ತಮ್ಮ ಫೇಸ್ ಬುಕ್ ಅಕೌಂಟ್‍ ನಲ್ಲು ನ್ಯಾಶನಲ್ ಕ್ರಶ್ ಪ್ರಿಯಾ ಎಂದು ಬರೆದುಕೊಂಡು ಅದಕ್ಕೆ, “ನಮಸ್ಕಾರ. ನಾನು ನೋಡುತ್ತಾನೆ ಇದೀನಿ ಪ್ರಿಯಾ ಪ್ರಕಾಶ್ ವಾರಿಯರ್ ನ ನ್ಯಾಷನಲ್ ಕ್ರಶ್ ಎಂದು ಕೊಂಡಾಡಿದ್ದೇ ಕೊಂಡಾಡಿದ್ದು.. ಸ್ವಲ್ಪ ಕಾಯಿರಿ ನಾಳಿದ್ದು ನನ್ನ ಹುಟ್ಟುಹಬ್ಬ. ಅದಕ್ಕೆ ಇಂಟರ್ ನ್ಯಾಷನಲ್ ಕ್ರಶ್ ನ ಕರೆದುಕೊಂಡು ಬರುತ್ತೀನಿ. ಎಲ್ಲಾ ಹುಡುಗರು ಎದೆ ಹೊಡೆದುಕೊಂಡು ಸಾಯೋದು ಗ್ಯಾರಂಟಿ” ಎಂದು ಪ್ರಥಮ್ ತಿಳಿಸಿದ್ದಾರೆ.

    ಈ ಹಿಂದೆ ಪ್ರಥಮ್ ಈ ರೀತಿ ಸಾಕಷ್ಟು ಬಾರಿ ಮಾಡಿದ್ದಾರೆ. ತನ್ನ ‘ಬಿಲ್ಡಪ್’ ಚಿತ್ರಕ್ಕೆ ದೇಶದ ಪ್ರಮುಖ ವ್ಯಕ್ತಿಯ ಹತ್ತಿರ ಸಿನಿಮಾ ಕ್ಲಾಪ್ ಮಾಡಿಸುತ್ತೇನೆ ಎಂದು ಹೇಳಿದ್ದರು. ನಂತರ ಹಾಗೆಯೇ ಮಾಡಿ ತೋರಿಸಿದ್ದಾರೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರ ಹತ್ತಿರ ಕ್ಲಾಪ್ ಮಾಡಿಸಿ, ಚಿತ್ರವನ್ನು ಶುಭಾರಂಭ ಮಾಡಿದ್ದರು. ಹೀಗಾಗಿ ಪ್ರಥಮ್ ಈ ಬಾರಿ ಯಾವ ಇಂಟರ್‍ ನ್ಯಾಷನಲ್ ಕ್ರಶ್ ಕರೆತಲಿದ್ದಾರೆಂದು ಕಾದು ನೋಡಬೇಕಿದೆ.

  • ಕಣ್ಸನ್ನೆ ಬೆಡಗಿ ಪ್ರಿಯಾಗೆ ಬಾಲಿವುಡ್ ನಿಂದ ಆಫರ್ ಗಳ ಸುರಿಮಳೆ!

    ಕಣ್ಸನ್ನೆ ಬೆಡಗಿ ಪ್ರಿಯಾಗೆ ಬಾಲಿವುಡ್ ನಿಂದ ಆಫರ್ ಗಳ ಸುರಿಮಳೆ!

    ಮುಂಬೈ: ತನ್ನ ಕೇವಲ ಒಂದು ಕಣ್ಣ ಸನ್ನೆಯಿಂದ ನ್ಯಾಷನಲ್ ಕ್ರಷ್ ಆಗಿರೋ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್‍ಗೆ ಬಾಲಿವುಡ್ ಅಂಗಳದಿಂದ ಆಫರ್ ಗಳು ಹರಿದು ಬರುತ್ತಿವೆ ಎಂದು ವರದಿಯಾಗಿದೆ.

    ಪ್ರಿಯಾ ಮಲಯಾಳಂನ ‘ಓರು ಅಡಾರ್ ಲವ್’ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಓರು ಅಡಾರ್ ಲವ್ ಚಿತ್ರವನ್ನು ಪ್ರಿಯಾರಿಗಾಗಿಯೇ ನೋಡಲು ಚಿತ್ರಮಂದಿರಗಳಿಗೆ ತೆರಳಲು ಜನರು ಕಾತುರರಾಗಿದ್ದಾರೆ. ಈ ಮೊದಲು ಸಾಮನ್ಯ ನಟಿಯಾಗಿದ್ದ ಪ್ರಿಯಾ ಒಂದು ಕಣ್ಣ ಸನ್ನೆಯ ಮೂಲಕ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದುಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

    ಮೂಲಗಳ ಪ್ರಕಾರ, ಈಗಾಗಲೇ ಬಾಲಿವುಡ್‍ನ ಹಲವು ನಿರ್ಮಾಪಕರು ಪ್ರಿಯಾರನ್ನು ಸಂಪರ್ಕಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಿಯಾ ಮಲಯಾಳಂ ಜೊತೆ ಹಿಂದಿಯನ್ನು ಸ್ಪಷ್ಟವಾಗಿ ಮಾತನಾಡಬಲ್ಲವರಾಗಿದ್ದು, ಬಾಲಿವುಡ್ ನ ನಿರ್ಮಾಪಕರು ಪ್ರಿಯಾರನ್ನ ಸಂಪರ್ಕ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

    ಚಿತ್ರತಂಡ 1.32 ಸೆಕೆಂಡ್ ನ ಹಾಡಿನ ವಿಡಿಯೋ ಬಿಡುಗಡೆ ಮಾಡಿದ್ದು, ಪ್ರಿಯಾ ಅವರ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಈ ಹಾಡನ್ನು ತನ್ನ ಹಳೆಯ ಪ್ರೀತಿಯನ್ನು ನೆನಪು ಮಾಡಿಕೊಳ್ಳುವ ಸನ್ನಿವೇಶದಲ್ಲಿ ಮೂಡಿಬಂದಿದೆ. ಹೈಸ್ಕೂಲ್ ನಲ್ಲಿ ಉಂಟಾದ ಮೊದಲ ಲವ್ ಕುರಿತಾಗಿ ಮುಗ್ಧವಾಗಿ ಹಾಡನ್ನು ಚಿತ್ರೀಕರಿಸಲಾಗಿದೆ. ಚಿತ್ರದ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ಕಂಡ ಚಿತ್ರದ ನಿರ್ದೇಶಕರು, ಚಿತ್ರ ತಂಡ ಮತ್ತು ಅಭಿಮಾನಿಗಳಿಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದರು.

    ಒಂದು ಹಾಡಿನ ವಿಡಿಯೋ ಮೂಲಕ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿರೋ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದಿದ್ದಾರೆ. ಇನ್  ಸ್ಟಾಗ್ರಾಮ್ ನಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ಪ್ರಿಯಾ ಅವರ ಇನ್ ಸ್ಟಾಗ್ರಾಮ್ ಖಾತೆಯನ್ನ ಕೇವಲ ಒಂದೇ ದಿನದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಫಾಲೋ ಮಾಡಿದ್ದರು. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಫಾಲೋ ಆಗಿರುವ ವಿಶ್ವದ ಮೂರನೇ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆಗೆ ಪ್ರಿಯಾ ಪಾತ್ರರಾಗಿದ್ದರು.