Tag: ಪ್ರಿಯಾ ಆನಂದ್

  • ಬಲರಾಮನ ದಿನಗಳು – ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ವಿನೋದ್‌ ಪ್ರಭಾಕರ್

    ಬಲರಾಮನ ದಿನಗಳು – ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ವಿನೋದ್‌ ಪ್ರಭಾಕರ್

    ವಿನೋದ್ ಪ್ರಭಾಕರ್ ಅವರ ಅಭಿನಯದ “ಮಾದೇವ” ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಆ ಚಿತ್ರದ ನಂತರ ವಿನೋದ್ ಪ್ರಭಾಕರ್ (Vinod Prabhakar ಅವರು ನಾಯಕರಾಗಿ ನಟಿಸುತ್ತಿರುವ “ಬಲರಾಮನ ದಿನಗಳು” (Balaramana Dinagalu) ಚಿತ್ರ ಸಹ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಸ್ತುತ ಬಹು ನಿರೀಕ್ಷಿತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಸಕಲೇಶಪುರ ಮುಂತಾದ ಕಡೆ 80 ದಿನಗಳ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ.

    ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರ ಚೊಚ್ಚಲ ನಿರ್ಮಾಣದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರವನ್ನು “ಆ ದಿನಗಳು” ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶಿಸುತ್ತಿದ್ದಾರೆ. ಟೈಗರ್ ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪ್ರಿಯಾ ಆನಂದ್ (Priya Anand) ಅಭಿನಯಿಸುತ್ತಿದ್ದಾರೆ. ಹೆಸರಾಂತ ಕಲಾವಿದರಾದ ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ ಅವರಂತಹ ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. “ಬಿಗ್ ಬಾಸ್” ಖ್ಯಾತಿಯ ವಿನಯ್ ಗೌಡ ಸಹ ಈ ಚಿತ್ರದಲ್ಲ ನಟಿಸಿದ್ದಾರೆ. ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿರುವ ಖ್ಯಾತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದು, ಮುಂದಿನ ದಿನಗಳಲ್ಲಿ ಚಿತ್ರತಂಡ ಈ ಕುರಿತು ವಿವರ ನೀಡಲಿದೆ. ಇದನ್ನೂ ಓದಿ: ಹಾಲಿವುಡ್‍ನಲ್ಲಿ ಫ್ಯಾಮಿಲಿ ಜೊತೆ ಐಕಾನ್‍ಸ್ಟಾರ್ ಜಾಲಿ ಜಾಲಿ..!

    1980ರ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ. ಇದು ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿರುವ ಮೊದಲ ಕನ್ನಡ ಚಿತ್ರವಾಗಿದೆ. ವೇಣು “ಬಲರಾಮನ ದಿನಗಳು” ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಇದನ್ನೂ ಓದಿ: ಹಾಲಿವುಡ್‍ನಲ್ಲಿ ಫ್ಯಾಮಿಲಿ ಜೊತೆ ಐಕಾನ್‍ಸ್ಟಾರ್ ಜಾಲಿ ಜಾಲಿ..!

    .

  • ಕನ್ನಡದ ಹೊಸ ಸಿನಿಮಾದಲ್ಲಿ ‘ಜೇಮ್ಸ್’ ನಟಿ ಪ್ರಿಯಾ ಆನಂದ್

    ಕನ್ನಡದ ಹೊಸ ಸಿನಿಮಾದಲ್ಲಿ ‘ಜೇಮ್ಸ್’ ನಟಿ ಪ್ರಿಯಾ ಆನಂದ್

    ಸೌತ್ ಬ್ಯೂಟಿ ಪ್ರಿಯಾ ಆನಂದ್ (Priya Anand) ಕನ್ನಡದ ಸಿನಿಮಾಗಳಲ್ಲಿ ನಟಿಸುತ್ತಾ ಕನ್ನಡವರಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ಕನ್ನಡ ಸಿನಿಪ್ರೇಕ್ಷಕರಿಗೆ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ನಟಿಸಲು ಮತ್ತೆ ‘ಜೇಮ್ಸ್’ (James) ನಟಿ ಪ್ರಿಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ರಾಜಕುಮಾರ, ಜೇಮ್ಸ್, ಆರೆಂಜ್, ಕರಟಕ ದಮನಕ ಸಿನಿಮಾಗಳಲ್ಲಿ ನಟಿಸಿ ಪ್ರಿಯಾ ಸೈ ಎನಿಸಿಕೊಂಡಿದ್ದಾರೆ. ಇದೀಗ ವಿನೋದ್ ಪ್ರಭಾಕರ್‌ಗೆ (Vinod Prabhakar) ನಾಯಕಿಯಾಗಿ ಬಲರಾಮನ ಅಡ್ಡಾಗೆ ಅವರು ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್‌ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

    ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರಕ್ಕೆ ‘ಬಲರಾಮನ ದಿನಗಳು’ ಎಂದು ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರದಲ್ಲಿ ಪ್ರಿಯಾ ನಾಯಕಿಯಾಗಿದ್ದು, ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಈ ಕುರಿತು ಚಿತ್ರತಂಡ ಕೂಡ ಅಧಿಕೃತವಾಗಿ ತಿಳಿಸಿದೆ. 80ರ ಕಾಲಘಟ್ಟದ ಭೂಗತಲೋಕದ ಹಿನ್ನೆಲೆಯುಳ್ಳ ವಿಭಿನ್ನ ಕಥೆ ಇದಾಗಿದೆ. ಇದಕ್ಕೆ ‘ಆ ದಿನಗಳು’ ನಿರ್ದೇಶಕ ಕೆ.ಎಂ ಚೈತನ್ಯ ನಿರ್ದೇಶನ ಮಾಡಲಿದ್ದಾರೆ.

    ಅಂದಹಾಗೆ, ‘ರಾಜಕುಮಾರ’ ಮತ್ತು ‘ಜೇಮ್ಸ್’ ಈ ಎರಡು ಸಿನಿಮಾಗಳಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಪ್ರಿಯಾ ನಾಯಕಿಯಾಗಿದ್ರು. ಈ ಹಿಂದೆ ಹಲವು ಸಂದರ್ಶನಗಳಲ್ಲಿ ನನ್ನ ನೆಚ್ಚಿನ ನಟ ಅಪ್ಪು ಎಂದು ನಟಿ ಹೇಳಿದ್ದರು. ಅಪ್ಪು ಮೇಲಿನ ಅವರು ತೋರೋ ಗೌರವ ಮತ್ತು ಕನ್ನಡ ಸಿನಿಮಾ ಮೇಲಿನ ಅವರ ಪ್ರೀತಿಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ಶಿವಣ್ಣ -ಪ್ರಭುದೇವ ಹೊಸ ಪ್ರಾಜೆಕ್ಟ್‌ಗೆ ಈ ನಾಯಕಿಯರು ಫಿಕ್ಸ್

    ಶಿವಣ್ಣ -ಪ್ರಭುದೇವ ಹೊಸ ಪ್ರಾಜೆಕ್ಟ್‌ಗೆ ಈ ನಾಯಕಿಯರು ಫಿಕ್ಸ್

    ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸೌಂಡ್ ಮಾಡುತ್ತಿರುವ `ಗಾಳಿಪಟ -2′ ಸಿನಿಮಾದ ಸಕ್ಸಸ್ ನಂತರ ನಿರ್ದೇಶಕ ಯೋಗರಾಜ್ ಭಟ್, ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್ ಸಿನಿಮಾಗೆ ಡೈರೆಕ್ಷನ್ ಮಾಡಲು ಸಜ್ಜಾಗಿದ್ದಾರೆ. ಈ ಸ್ಟಾರ್ ನಟರಿಗೆ ನಾಯಕಿಯರನ್ನ ಕೂಡ ಯೋಗರಾಜ್ ಭಟ್ ಹುಡುಕಿದ್ದಾರೆ.

    yogaraj bhat (3)ಇತ್ತೀಚೆಗಷ್ಟೇ ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್‌ನಲ್ಲಿ ನಿರ್ದೇಶನ ಮಾಡುವುದಾಗಿ ಭಟ್ರು ಅಧಿಕೃತವಾಗಿ ಹೇಳಿದ್ದರು. ಇದೀಗ ಈ ಸಿನಿಮಾಗಾಗಿ ತೆರೆಮರೆಯಲ್ಲಿ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಚಿತ್ರಕ್ಕೆ ಚಂದನವನದ ಪ್ರತಿಭಾವಂತ ನಾಯಕಿಯರನ್ನೇ ಭಟ್ರು ಹುಡುಕಿದ್ದಾರೆ.

    `ಕುಲದಲ್ಲಿ ಕೀಳ್ಯಾವುದೋ’ ತಾತ್ಕಲಿಕ ಟೈಟಲ್‌ನ ಈ ಚಿತ್ರದಲ್ಲಿ ನಾಯಕಿಯರಾಗಿ ರಾಜಕುಮಾರ ಮತ್ತು ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ ಶಿವಣ್ಣಗೆ ಜೋಡಿಯಾಗಿ ಕಾಣಿಸಿಕೊಂಡ್ರೆ, ಇತ್ತ ಪ್ರಭುದೇವಗೆ ನಾಯಕಿಯಾಗಿ ಸಖತ್ ಬ್ಯೂಟಿ ನಿಶ್ವಿಕಾ ನಾಯ್ಡು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ತಂದೆಯ ಹುಟ್ಟು ಹಬ್ಬದ ನೆನಪಿಗೆ ಹುಟ್ಟೂರಿನ ಆಸ್ಪತ್ರೆಗೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್

    ಬಿಗ್ ಸ್ಟಾರ್‌ಗಳಿರುವ ಈ ಪ್ರಾಜೆಕ್ಟ್ ಮೇಲೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಇದೇ ಆಗಸ್ಟ್ 20ಕ್ಕೆ ಸಿನಿಮಾ ಕೂಡ ಸೆಟ್ಟೇರಲಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಹೇಗೆ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಿತ್ಯಾನಂದನನ್ನ ಮದುವೆ ಆಗೋಕೆ ರೆಡಿ ಎಂದ ನಟಿ: ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ ಪ್ರಿಯಾ ಆನಂದ್

    ನಿತ್ಯಾನಂದನನ್ನ ಮದುವೆ ಆಗೋಕೆ ರೆಡಿ ಎಂದ ನಟಿ: ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ ಪ್ರಿಯಾ ಆನಂದ್

    ಲಯಾಳಂ ಸ್ಟಾರ್ ನಟಿ ಪುನೀತ್ ನಾಯಕಿ ಪ್ರಿಯಾ ಆನಂದ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಮೆರಿಕಾದಲ್ಲಿ ಬೆಳೆದ ಈ ಚೆಲುವೆ ಬಹುಭಾಷಾ ನಟಿ ಎಂದೇ ಫೇಮಸ್ ಆಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರೊಂದಿಗೆ `ಜೇಮ್ಸ್’ ಸೇರಿದಂತೆ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರದ್ದು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಿಯಾ ಆನಂದ್ ತಮ್ಮ ಮದುವೆಯ ಬಗ್ಗೆ ಕೆಲವು  ಮಾತುಗಳನ್ನು ಆಡಿದ್ದಾರೆ.

    ತಮ್ಮ ಮದುವೆ ಕುರಿತಂತೆ ಮಾತನಾಡಿರುವ ಪ್ರಿಯಾ, ದೇಶಬಿಟ್ಟು, ತಮ್ಮದೇ ದೇಶವೊಂದನ್ನು ನಿರ್ಮಿಸಿರುವ, ಬಿಡದಿಯ ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದೇನೆ ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಿತ್ಯಾನಂದ ಸ್ವಾಮಿಯನ್ನು ಸಾವಿರಾರು ಭಕ್ತರು ಪೂಜಿಸುತ್ತಾರೆ. ನಾನು ಅವರನ್ನು ಮದುವೆಯಾದರೆ, ನಾನು ನನ್ನ ಹೆಸರನ್ನು ಸಹ ಬದಲಾಯಿಸಬೇಕಾಗಿಲ್ಲ ಎಂದಿದ್ದಾರೆ. ಈ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಜೇಮ್ಸ್ ನಾಯಕಿ ಈ ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ ‘ಜೇಮ್ಸ್’ ಚೆಲುವೆ ಪ್ರಿಯಾ ಆನಂದ್

    ನಾನು ಈ ಹೇಳಿಕೆ ನೀಡಿ ಒಂದು ವಾರ ಕಳೆದಿದೆ. ಆದರೆ, ನಾನು ಹೇಳಿಕೆ ನೀಡಿರುವುದು ಕೇವಲ ತಮಾಷೆಗಾಗಿ ಅಷ್ಟೇ ನಿತ್ಯಾನಂದ ಬಗ್ಗೆ ಮಾಡೋ ಟ್ರೋಲ್ಸ್, ಮಿಮ್ಸ್, ವಿಡಿಯೋಗಳು ನನಗೆ ತುಂಬಾ ಇಷ್ಟ. ನಾನು ಮದುವೆ ಆಗುತ್ತೀನಿ ಎಂದಿದ್ದು ಜಸ್ಟ್ ಕಾಮಿಡಿ ಎಂದು ಪ್ರಿಯಾ ಆನಂದ್ ಸ್ಪಷ್ಟನೆ ನೀಡಿದ್ದಾರೆ. ಇದನ್ನು ದೊಡ್ಡದು ಮಾಡೋ ಅಗತ್ಯವಿಲ್ಲ ಎಂದು ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿತ್ಯಾನಂದ  ಸ್ವಾಮಿಯನ್ನು ಮದುವೆಯಾಗಲು ಬಯಸಿದ ‘ಜೇಮ್ಸ್’ ಚೆಲುವೆ ಪ್ರಿಯಾ ಆನಂದ್

    ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ ‘ಜೇಮ್ಸ್’ ಚೆಲುವೆ ಪ್ರಿಯಾ ಆನಂದ್

    ಲಯಾಳಂನ ಖ್ಯಾತ ನಟಿ ಪ್ರಿಯಾ ಆನಂದ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.  ಅಮೆರಿಕಾದಲ್ಲಿ ಬೆಳೆದ ಈ ಚೆಲುವೆ ಬಹುಭಾಷಾ ನಟಿ ಎಂದೇ ಖ್ಯಾತಿಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಜೇಮ್ಸ್ ಸೇರಿದಂತೆ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರದ್ದು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಿಯಾ ಆನಂದ್ ತಮ್ಮ ಮದುವೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾತುಗಳನ್ನು ಆಡಿದ್ದಾರೆ.

    ತಮ್ಮ ಮದುವೆ ಕುರಿತಂತೆ ಮಾತನಾಡಿರುವ ಪ್ರಿಯಾ, ದೇಶಬಿಟ್ಟು, ತಮ್ಮದೇ ದೇಶವೊಂದನ್ನು ನಿರ್ಮಿಸಿರುವ, ಬಿಡದಿಯ ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದೇನೆ ಎಂದಿದ್ದಾರೆ. ನಿತ್ಯಾನಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಅವರು ಸತ್ತಿದ್ದಾರೆ ಎಂಬ ವದಂತಿಯಿರುವ ಸಮಯದಲ್ಲಿ ಈ ಹೇಳಿಕೆ ನೀಡಿರುವುದು ಆಸಕ್ತಿದಾಯಕವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿತ್ಯಾನಂದ ಸ್ವಾಮಿಯನ್ನು ಸಾವಿರಾರು ಭಕ್ತರು ಪೂಜಿಸುತ್ತಾರೆ. ನಾನು ಅವರನ್ನು ಮದುವೆಯಾದರೆ, ನಾನು ನನ್ನ ಹೆಸರನ್ನು ಸಹ ಬದಲಾಯಿಸಬೇಕಾಗಿಲ್ಲ ಎಂದಿದ್ದಾರೆ.

    ನಿತ್ಯಾನಂದ ಮೇಲೆ ಈಗಾಗಲೇ ಭಾರತದಲ್ಲಿ ಹಲವು ಕೇಸುಗಳಿವೆ. ಅವುಗಳಿಂದ ತಪ್ಪಿಸಿಕೊಳ್ಳಲು ದೇಶ ತೊರೆದು ಈಕ್ವೆಡಾರ್ ಬಳಿಯ ಒಂದು ದ್ವೀಪದಲ್ಲಿ ತಮ್ಮದೇ ದೇಶ ಕಟ್ಟಿಕೊಂಡಿದ್ದಾರೆ.  ತಮ್ಮದೆ ಆದ ವಿಶೇಷ ಕರೆನ್ಸಿಯನ್ನು ಸಹ ಮುದ್ರಿಸಿದ್ದಾರೆ. ತಮ್ಮ ದೇಶಕ್ಕೆ ಬರುವ ಭಕ್ತರು ನೇರವಾಗಿ ಶಿವನ ದರ್ಶನ ಮಾಡಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಆದರೆ, ಸದ್ಯ ನಿತ್ಯನಂದನ ಬಗ್ಗೆ ಸುದ್ದಿಯೇ ಇಲ್ಲ. ಕೆಲವು ತಿಂಗಳ ಹಿಂದೆ, ನಿತ್ಯಾನಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಗಳು ಬಂದಿದ್ದವು. ಇದರ ನಡುವೆ ಖ್ಯಾತ ನಟಿ ಪ್ರಿಯಾ ಅವರ ಈ ಹೇಳಿಕೆಗಳು ಅಭಿಮಾನಗಳಲ್ಲಿ ಅಚ್ಚರಿ ಮೂಡಿಸಿದೆ. ನಿತ್ಯಾನಂದ ಅವರಿಗೆ ಈ ವಿಷಯವನ್ನು ತಲುಪಿಸುವುದು ಹೇಗೆ ಎಂಬ ಚರ್ಚೆ ಕೂಡ ನಡೆದಿದೆ. ಇದೊಂದು ತಮಾಷೆಯ ಮಾತಾಗಿದ್ದರೂ, ಪ್ರಿಯಾ ಆನಂದ್ ಗೆ ನಿತ್ಯಾನಂದನ ಮೇಲೆ ಅದು ಹೇಗೆ ಪ್ರೀತಿ ಮೂಡಿತು ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ನೆನೆದು ನಟಿ ಪ್ರಿಯಾ ಆನಂದ್ ಕಣ್ಣೀರು

    ಅಪ್ಪು ನೆನೆದು ನಟಿ ಪ್ರಿಯಾ ಆನಂದ್ ಕಣ್ಣೀರು

    ಬೆಂಗಳೂರು: ಡಾ. ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾ ಜೇಮ್ಸ್ ಇಂದು ರಾಜ್ಯಾದ್ಯಂತ ತೆರೆ ಕಂಡು ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಅಪ್ಪು ನೆನೆದು ಕಾಲಿವುಡ್ ನಟಿ ಪ್ರಿಯಾ ಆನಂದ್ ಬಿಕ್ಕಿ, ಬಿಕ್ಕಿ ಅತ್ತಿದ್ದಾರೆ.

    ಇಂದು ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಜೇಮ್ಸ್ ಸಿನಿಮಾ ರಿಲೀಸ್ ಮಾಡಿ ಅಭಿಮಾನಿಗಳಿಗೆ ಚಿತ್ರತಂಡ ರಸದೌತಣ ನೀಡಿದೆ. ಈ ನಡುವೆ ಜೇಮ್ಸ್ ಸಿನಿಮಾ ವೀಕ್ಷಿಸಲು ಜನ ಚಿತ್ರಮಂದಿರಗಳಿಗೆ ಮುಗಿಬೀಳುತ್ತಿದ್ದಾರೆ. ಸದ್ಯ ಅಭಿಮಾನಿಗಳೊಂದಿಗೆ ಕುಳಿತು ಸಿನಿಮಾ ವೀಕ್ಷಿಸಲು ನವರಂಗ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಜೇಮ್ಸ್ ಸಿನಿಮಾದ ನಟಿ ಪ್ರಿಯಾ ಆನಂದ್ ಕಾರಿನಲ್ಲಿ ಕುಳಿತು ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ. ಅಪ್ಪು ಮೇಲೆ ಅಭಿಮಾನಿಗಳು ಹೊಂದಿರುವ ಅಪಾರ ಪ್ರೀತಿ ಹಾಗೂ ಅಭಿಮಾನವನ್ನು ನೋಡಿ ಮಾರುಹೋಗಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

    ಈ ಹಿಂದೆ ರಾಜಕುಮಾರ ಸಿನಿಮಾದಲ್ಲಿ ಪುನೀತ್‍ಗೆ ಜೋಡಿಯಾಗಿದ್ದ ಪ್ರಿಯಾ ಆನಂದ್ ಅಭಿನಯಿಸಿದ್ದರು. ಈ ಸಿನಿಮಾ ಪ್ರಿಯಾ ಆನಂದ್ ಅವರಿಗೆ ದೊಡ್ಡ ಬ್ರೇಕ್ ತಂದು ಕೊಟ್ಟಿತ್ತು. ಇದಾದ ಬಳಿಕ ಅಪ್ಪು ಜೊತೆ ಜೇಮ್ಸ್ ಸಿನಿಮಾದಲ್ಲಿ ಪ್ರಿಯಾ ಆನಂದ್ ಮತ್ತೊಮ್ಮೆ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

  • ರಾಜಕುಮಾರ ಬೆಡಗಿಯ ದುಡ್ಡಿನ ಗಮ್ಮತ್ತು- ನೋಟಿನ ಹಾರ ಹಾಕ್ಕೊಂಡು ಫೋಟೋ ಶೂಟ್

    ರಾಜಕುಮಾರ ಬೆಡಗಿಯ ದುಡ್ಡಿನ ಗಮ್ಮತ್ತು- ನೋಟಿನ ಹಾರ ಹಾಕ್ಕೊಂಡು ಫೋಟೋ ಶೂಟ್

    ಬೆಂಗಳೂರು: ನಟ, ನಟಿಯರಿಗೆ ಫೋಟೋ ಶೂಟ್ ಎಂದರೆ ಹಬ್ಬವಿದ್ದಂತೆ. ಹಲವರು ವಿವಿಧ ರೀತಿಯ, ಇನ್ನೂ ಹಲವರು ಅಚ್ಚರಿ ಪಡುವ ರೀತಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಇದೀಗ ರಾಜಕುಮಾರ ಸಿನಿಮಾ ಮೂಲಕ ಪರಿಚಿತರಾಗಿರುವ ತಮಿಳು ನಟಿ ಪ್ರಿಯಾ ಆನಂದ್ ಫೋಟೋ ತಮ್ಮ ವಿಭಿನ್ನ ಫೋಟೋ ಶೂಟ್ ಮೂಲಕ ಸುದ್ದಿಯಾಗಿದ್ದಾರೆ.

     

    View this post on Instagram

     

    A post shared by Priya Anand (@priyawajanand)

    ರಾಜಕುಮಾರ ಸಿನಿಮಾ ಬಳಿಕ ಜೇಮ್ಸ್ ಸಿನಿಮಾ ಮೂಲಕ ಪುನೀತ್ ರಾಜ್‍ಕುಮಾರ್ ಜೊತೆಗೆ ಪ್ರಿಯಾ ಆನಂದ್ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಜೇಮ್ಸ್ ಚಿತ್ರೀಕರಣ ಭರದಿಂದ ಸಾಗಿದ್ದು, ಅಪ್ಪು, ಅನುಪ್ರಭಾಕರ್, ಪ್ರಿಯಾ ಆನಂದ್ ಸೇರಿದಂತೆ ಚಿತ್ರತಂಡ ಶೂಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದೆ. ಇತ್ತೀಚೆಗೆ ಬಳ್ಳಾರಿಯ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಪಸಿದ್ದಾರೆ.

     

    View this post on Instagram

     

    A post shared by Priya Anand (@priyawajanand)

    ಜೇಮ್ಸ್ ಮಾತ್ರವಲ್ಲದೆ ಪ್ರಿಯಾ ಆನಂದ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಮಾತ್ರವಲ್ಲದೆ ಶಿವರಾಜ್‍ಕುಮಾರ್ ಅವರ ಆರ್‍ಡಿಎಕ್ಸ್ ಸಿನಿಮಾಗೆ ಸಹ ಆಯ್ಕೆಯಾಗಿದ್ದಾರೆ.

    ಇದೀಗ ಎರಡು ಸಾವಿರ ರೂ.ಗಳ ಗರಿ ಗರಿ ನೋಟುಗಳ ಹಾರವನ್ನು ಕುತ್ತಿಗೆಗೆ ಹಾಕಿಕೊಂಡು ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ. ಅಂದಹಾಗೆ ಈ ಫೋಟೋಗಳನ್ನು ಲಾಕ್‍ಡೌನ್ ವೇಳೆ ಹಿಂದಿಯ ‘ಎ ಸಿಂಪಲ್ ಮರ್ಡರ್ ‘ ವೆಬ್ ಸಿರೀಸ್ ಚಿತ್ರೀಕರಣದ ವೇಳೆ ತೆಗೆಯಲಾಗಿದೆ ಎನ್ನಲಾಗಿದೆ.

    ಜೇಮ್ಸ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವ ಕುರಿತು ಈ ಹಿಂದೆ ರಾಜಕುಮಾರ ಬೆಡಗಿ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಮೂಲಕ ಅಪ್ಪು ಜೊತೆ ಎರಡನೇ ಸಿನಿಮಾದಲ್ಲಿ ನಟಿಸುತ್ತಿರುವುದನ್ನು ಖಚಿತಪಡಿಸಿದ್ದರು. ಈ ಮೂಲಕ ಕನ್ನಡದಲ್ಲಿ ನಾಲ್ಕನೇ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಜೇಮ್ಸ್ ಚಿತ್ರ ನಿರ್ದೇಶಿಸುತ್ತಿದ್ದು, ಅನು ಪ್ರಭಾಕರ್, ತೆಲುಗು ನಟ ಆದಿತ್ಯ ಮೆನನ್ ಜೇಮ್ಸ್ ಚಿತ್ರ ತಂಡವನ್ನು ಸೇರಿರುವುದು ಕುತೂಹಲ ಕೆರಳಿಸಿದೆ. ಯಾವ ರೀತಿ ಪಾತ್ರ ನಿರ್ವಹಿಸಲಿದ್ದಾರೆ, ಚಿತ್ರ ಯಾವ ರೀತಿ ಮೂಡಿ ಬರಲಿದೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

  • ಜೇಮ್ಸ್ ಸಿನಿಮಾ ನಾಯಕಿ ಫಿಕ್ಸ್- ಮತ್ತೆ ಒಂದಾಗುತ್ತಿದೆ ರಾಜಕುಮಾರ ಜೋಡಿ

    ಜೇಮ್ಸ್ ಸಿನಿಮಾ ನಾಯಕಿ ಫಿಕ್ಸ್- ಮತ್ತೆ ಒಂದಾಗುತ್ತಿದೆ ರಾಜಕುಮಾರ ಜೋಡಿ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಪುನೀತ್ ರಾಜ್‍ಕುಮಾರ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರ ತಂಡದಿಂದ ಸಿಹಿ ಸುದ್ದಿ ಹೊರ ಬಿದ್ದಿದ್ದು, ಹೀರೋಯಿನ್ ಆಯ್ಕೆ ಮಾಡಲಾಗಿದೆ.

    ಅನ್‍ಲಾಕ್ ಬಳಿಕ ಬಹುತೇಕ ಚಿತ್ರಗಳ ಶೂಟಿಂಗ್ ಚುರುಕುಗೊಂಡಿದ್ದು, ಯುವರತ್ನ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಮೊನ್ನೆಯಷ್ಟೇ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಅಪ್ಪು ಜೇಮ್ಸ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಲಾಕ್‍ಡೌನ್ ವೇಳೆ ಫುಲ್ ರೆಸ್ಟ್ ಮೂಡ್‍ನಲ್ಲಿದ್ದ ಅಪ್ಪು ಇದೀಗ ಸಖತ್ ಬ್ಯುಸಿಯಾಗಿದ್ದಾರೆ. ಯುವರತ್ನ ಚಿತ್ರೀಕರಣ ಪೂರ್ಣಗೊಳಿಸಿ ಸದ್ಯ ಜೇಮ್ಸ್ ಶೂಟಿಂಗ್ ಶುರು ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಜೇಮ್ಸ್ ಸಿನಿಮಾ ಸದ್ದು ಮಾಡುತ್ತಿದ್ದು, ಇದೀಗ ಚಿತ್ರೀಕರಣ ಆರಂಭವಾಗಿದೆ. ಭರ್ಜರಿ ಚೇತನ್ ಕುಮಾರ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.

    ಚಿತ್ರೀಕರಣ ಆರಂಭವಾಗುತ್ತಿದ್ದಂತೆ ಚಿತ್ರದ ಕುರಿತು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದ್ದು, ತಾರಾಗಣದ ಬಗ್ಗೆ ಸಹ ಪ್ರಶ್ನಿಸುತ್ತಿದ್ದಾರೆ. ಪ್ರಮುಖವಾಗಿ ಪುನೀತ್ ಜೊತೆ ಯಾರು ರೊಮಾನ್ಸ್ ಮಾಡಲಿದ್ದಾರೆ, ನಾಯಕಿ ಯಾರಾಗಬಹುದು ಎಂಬ ಚರ್ಚೆ ನಡೆಯುತ್ತಿತ್ತು. ಇದಕ್ಕೆ ಇದೀಗ ತೆರೆ ಬಿದ್ದಿದ್ದು, ಹಿರೋಯಿನ್ ಹೆಸರು ಬಹಿರಂಗವಾಗಿದೆ. ಜೇಮ್ಸ್ ಚಿತ್ರದಲ್ಲಿ ಅಪ್ಪು ಜೊತೆ ತಮಿಳು ನಟಿ ಪ್ರಿಯಾ ಆನಂದ್ ರೊಮ್ಯಾನ್ಸ್ ಮಾಡಲಿದ್ದಾರೆ.

    ಹೌದು ಈ ಕುರಿತು ಟ್ವಿಟ್ಟರ್ ಮೂಲಕ ಸ್ವತಃ ಪ್ರಿಯಾ ಅವರೇ ಈ ಕುರಿತು ಸ್ಪಷ್ಟಪಡಿಸಿದ್ದು, ಸಂತಸ ವಿಚಾರವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಇದರಿಂದಾಗಿ ಪ್ರಿಯಾ ಆನಂದ್, ಅಪ್ಪು ಜೊತೆ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈ ಹಿಂದೆ ಸೂಪರ್ ಹಿಟ್ ರಾಜಕುಮಾರ ಚಿತ್ರದಲ್ಲಿ ಸಹ ಪ್ರಿಯಾ ತೆರೆ ಹಂಚಿಕೊಂಡಿದ್ದಾರೆ.

    ರಾಜಕುಮಾರ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟಿರುವ ನಟಿ ಪ್ರಿಯಾ ಇದೀಗ ನಾಲ್ಕನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ರಾಜಕುಮಾರ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಆರೆಂಜ್ ಸಿನಿಮಾ ಮಾಡಿದ್ದು, ಬಳಿಕ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಆರ್‍ಡಿಎಕ್ಸ್ ಸಿನಿಮಾಗೆ ಸಹ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೀಗ ಜೇಮ್ಸ್ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ.

    ಇನ್ನೂ ವಿಶೇಷ ಎಂಬಂತೆ ಈ ಸಿನಿಮಾದಲ್ಲಿ ಅನು ಪ್ರಭಾಕರ್ ಸಹ ನಟಿಸುತ್ತಿದ್ದು, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. 55ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನು ಪ್ರಭಾಕರ್ ಇದೀಗ ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ ಜೊತೆ ಬಣ್ಣ ಹಚ್ಚುತ್ತಿದ್ದಾರೆ. ಅನು ಪ್ರಭಾಕರ್ ಚಿತ್ರ ತಂಡ ಸೇರಿರುವುದು ಅಭಿಮಾನಿಗಳಲ್ಲಿ ಇನ್ನೂ ಕುತೂಹಲ ಹೆಚ್ಚಿಸಿದ್ದು, ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

    ಇತ್ತೀಚೆಗೆ ತೆಲುಗು ನಟ ಆದಿತ್ಯ ಮೆನನ್ ಸಹ ಚಿತ್ರ ತಂಡ ಸೇರಿಕೊಂಡಿದ್ದು ಚಿತ್ರೀಕರಣ ಭರದಿಂದ ಸಾಗಿದೆ. ಪ್ರಸ್ತುತ ಬಳ್ಳಾರಿಯ ಹೊಸಪೇಟೆ ತಾಲೂಕಿನ ಕಮಲಾಪುರದ ಆರೆಂಜ್ ಕೌಂಟಿಯಲ್ಲಿ ಶೂಟಿಂಗ್ ನಡೆಯುತ್ತಿದ್ದು, ಬುಧವಾರ ಅಪ್ಪು ಸಹ ಶೂಟಿಂಗ್ ಸೆಟ್‍ಗೆ ಆಗಮಿಸಿದ್ದರು. ಆರಂಭದ ನಾಲ್ಕು ದಿನ ರೆಸಾರ್ಟ್‍ನಲ್ಲಿ ಬಳಿಕ ಗಂಗಾವತಿಯ ಸುತ್ತಮುತ್ತ ಶೂಟಿಂಗ್ ನಡೆಯಲಿದೆ. ಇದಕ್ಕಾಗಿಯೇ ಗಂಗಾವತಿಯಲ್ಲಿ ಭವ್ಯ ಸೆಟ್ ಹಾಕಲಾಗಿದೆ.

  • ಟ್ರೋಲ್‍ಗಳಿಗೆ ಚಾಟಿ ಬೀಸಿದ ‘ರಾಜಕುಮಾರ’ ನಟಿ – ಕ್ಷಮೆ ಕೇಳಿದ ಅಭಿಮಾನಿ

    ಟ್ರೋಲ್‍ಗಳಿಗೆ ಚಾಟಿ ಬೀಸಿದ ‘ರಾಜಕುಮಾರ’ ನಟಿ – ಕ್ಷಮೆ ಕೇಳಿದ ಅಭಿಮಾನಿ

    ಮುಂಬೈ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜೊತೆ ‘ರಾಜಕುಮಾರ’ ಚಿತ್ರದಲ್ಲಿ ನಟಿಸಿದ ಪ್ರಿಯಾ ಆನಂದ್ ಟ್ರೋಲ್‍ಗಳಿಗೆ ಚಾಟಿ ಬೀಸಿದ್ದಾರೆ. ಸದ್ಯ ಪ್ರಿಯಾ ಖಡಕ್ ಪ್ರತಿಕ್ರಿಯೆಗೆ ಅಭಿಮಾನಿ ಕ್ಷಮೆ ಕೇಳಿದ್ದಾನೆ.

    ಟ್ವಿಟ್ಟರಿನಲ್ಲಿ ವ್ಯಕ್ತಿಯೊಬ್ಬ, “ಶ್ರೀದೇವಿ, ನಟಿ ಪ್ರಿಯಾ ಆನಂದ್ ಜೊತೆ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ಶ್ರೀದೇವಿ ನಿಧನರಾಗಿದ್ದಾರೆ. ಜಿಕೆ ರಿತೇಶ್, ಪ್ರಿಯಾ ಆನಂದ್ ಜೊತೆ ನಟಿಸಿದ್ದರು. ಈಗ ಜಿಕೆ ರಿತೇಶ್ ಕೂಡ ನಿಧನರಾಗದ್ದಾರೆ. ಪ್ರಿಯಾ ಆನಂದ್ ಜೊತೆ ನಟಿಸುತ್ತಿರುವವರು ನಿಧನರಾಗುತ್ತಿದ್ದಾರೆ. ಪ್ರಿಯಾ ಆನಂದ್ ತನ್ನ ಸಹನಟರಿಗೆ ಬ್ಯಾಡ್ ಲಕ್ ಆಗಿದ್ದಾರಾ” ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದನು.

    https://twitter.com/lovel0velove143/status/1119809955610054656

    ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಪ್ರಿಯಾ ಆನಂದ್, “ನಾನು ನಿನ್ನಂತಹ ವ್ಯಕ್ತಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಇದು ತುಂಬಾ ಸೂಕ್ಷ್ಮವಾದ ವಿಚಾರ. ಹಾಗಾಗಿ ನಾನು ಪ್ರತಿಕ್ರಿಯಿಸುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯಲು ಇದು ಸುಲಭವಾದ ಕೆಲಸ. ಆದರೆ ನಾನು ನಿನ್ನ ಪ್ರಶ್ನೆಗೆ ಉತ್ತರ ಕೊಡುವ ಮೂಲಕ ಕೀಳು ಮಟ್ಟಕ್ಕೆ ಇಳಿಯುವುದಕ್ಕೆ ಇಷ್ಟಪಡುವುದಿಲ್ಲ” ಎಂದು ರೀ-ಟ್ವೀಟ್ ಮಾಡುವ ಮೂಲಕ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ, “ನನ್ನನ್ನು ಕ್ಷಮಿಸಿ. ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ನಾನು ಇಂದು ನಿಮ್ಮ ‘ಎಲ್‍ಕೆಜಿ’ ಹಾಗೂ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರ ವೀಕ್ಷಿಸುತ್ತಿದ್ದೆ. ಎರಡು ಚಿತ್ರದಲ್ಲೂ ನೀವು ಒಂದೇ ರೀತಿ ಇರುವ ಕಾರಣ ನನಗೆ ಈ ಪ್ರಶ್ನೆ ಕೇಳಬೇಕು ಅನಿಸಿತ್ತು. ಹಾಗಾಗಿ ನಾನು ನಿಮ್ಮನ್ನು ಟ್ವೀಟ್ ಮಾಡಿದೆ. ನೀವು ಟ್ವೀಟ್‍ಗಳನ್ನು ಓದುತ್ತೀರಾ ಎಂದು ನಾನು ಅಂದುಕೊಂಡಿರಲಿಲ್ಲ. ನಿಮ್ಮನ್ನು ನೋವು ಮಾಡಿದ್ದಕ್ಕೆ ನನ್ನನ್ನು ಕ್ಷಮಿಸಿ” ಎಂದು ಟ್ವೀಟ್ ಮಾಡಿದ್ದಾನೆ.

    https://twitter.com/lovel0velove143/status/1119830944565747712

    ವ್ಯಕ್ತಿ ಕ್ಷಮೆ ಕೇಳಿದ ನಂತರ ಪ್ರಿಯಾ, “ನೀನು ಕ್ಷಮೆ ಕೇಳಿದಕ್ಕೆ ಧನ್ಯವಾದಗಳು. ನಾನು ಇದನ್ನು ಮೆಚ್ಚಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

    ಪ್ರಿಯಾ ಆನಂದ್ ಅವರ ಖಡಕ್ ಪ್ರತಿಕ್ರಿಯೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಿಪಡಿಸುತ್ತಿದ್ದಾರೆ. ಪ್ರಿಯಾ ಆನಂದ್ ಕನ್ನಡದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ‘ರಾಜಕುಮಾರ’ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ‘ಆರೆಂಜ್’ ಚಿತ್ರದಲ್ಲಿ ನಟಿಸಿದ್ದಾರೆ.

  • ಎಲ್ಲರನ್ನೂ ಸಂತೃಪ್ತಗೊಳಿಸೋ ಫ್ರೆಶ್ ಆರೆಂಜ್!

    ಎಲ್ಲರನ್ನೂ ಸಂತೃಪ್ತಗೊಳಿಸೋ ಫ್ರೆಶ್ ಆರೆಂಜ್!

    ಬೆಂಗಳೂರು: ನಿರ್ದೇಶಕ ಪ್ರಶಾಂತ್ ರಾಜ್ ಚಿತ್ರದಿಂದ ಚಿತ್ರಕ್ಕೆ ಭಿನ್ನ ಆಲೋಚನೆಗಳಿಂದಲೇ ಪ್ರೇಕ್ಷಕರಿಗೆ ಹತ್ತಿರಾಗಿರುವವರು. ಆ ಕಾರಣದಿಂದಲೇ ಅವರು ನಿರ್ದೇಶಿಸಿ ಗಣೇಶ್ ನಟಿಸಿದ್ದ ಝೂಮ್ ಪ್ರೇಕ್ಷಕರನ್ನು ಮುದಗೊಳಿಸಿತ್ತು. ಅದೇ ಜೋಡಿ ಇದೀಗ ಆರೆಂಜ್ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಮುದಗೊಳಿಸಿದೆ.

    ಪ್ರಶಾಂತ್ ರಾಜ್ ಫ್ಯಾಮಿಲಿ ಸಮೇತ ಕೂತು ನೋಡುವಂಥಾ ಫ್ರೆಶ್ ಆರೆಂಜನ್ನು ಸಿದ್ಧಗೊಳಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಗಣೇಶ್ ಅವರದ್ದಿಲ್ಲಿ ಸಂತೋಷ್ ಎಂಬ ಕಳ್ಳತನವನ್ನೇ ಬಂಡವಾಳ ಮಾಡಿಕೊಂಡ ಹುಡುಗನ ಪಾತ್ರ.

    ಕಳ್ಳತನವೊಂದರಲ್ಲಿ ಜೈಲುಪಾಲಾಗಿದ್ದ ನಾಯಕ ಬಿಡುಗಡೆಯಾಗಿ ಟ್ರೈನಿನಲ್ಲಿ ಹೋಗುತ್ತಿರುವಾಗಲೇ ಆರೆಂಜು ಬಣ್ಣದ ಸೀರೆಯುಟ್ಟ ನಾಯಕಿ ಎದುರಾಗ್ತಾಳೆ. ಆಕೆ ಆರೆಂಜ್ ಕೊಡೋ ಮೂಲಕ ಸಂತೋಷ್ ಗೆ ಪರಿಚಿತಳಾಗುತ್ತಾಳೆ. ಇದೆಲ್ಲ ಆಗೋ ಹೊತ್ತಿಗೆ ಟ್ವಿಸ್ಟು ಸಂಭವಿಸಿ ಟ್ರೈನ್ ಮಿಸ್ ಆಗಿ ನಾಯಕಿಯ ವಸ್ತುವೊಂದು ನಾಯಕನ ಬಳಿಯೇ ಉಳಿದು ಬಿಡುತ್ತೆ. ಅದನ್ನು ತಲುಪಿಸಲೆಂದು ನಾಯಕಿಯ ಮನೆಗೆ ಹೋದಾಗ ಅಲ್ಲೊಂದು ಸುಂದರ ಸಂಸಾರ ತೆರೆದುಕೊಳ್ಳುತ್ತೆ. ನಾಯಕನೂ ಕೂಡಾ ಆ ಸುಂದರ ಕುಟುಂಬದಲ್ಲಿ ಒಬ್ಬನಾಗಿ ಸೇರಿಕೊಳ್ಳುತ್ತಾನೆ.

    ಆದರೆ ನಾಯಕಿಯ ಕುಟುಂಬಕ್ಕೆ ಈತನ ಕಳ್ಳತನದ ಹಿಸ್ಟರಿ ಗೊತ್ತಾಗದಿರುತ್ತಾ? ಮುಂದೇನಾಗುತ್ತೆ ಎಂಬುದರ ಸುತ್ತಾ ಮಜವಾಗಿ ಕಥೆಯನ್ನು ಕೊಂಡೊಯ್ಯಲಾಗಿದೆ. ದೊಡ್ಡ ಕ್ಯಾನ್ವಾಸಿನ ತುಂಬಾ ಸಾಕಷ್ಟು ಪಾತ್ರಗಳು ಹರಡಿಕೊಂಡಿದ್ದರೂ ಕೂಡಾ ಅದೆಲ್ಲವನ್ನು ಮ್ಯಾನೇಜು ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಗಣೇಶ್ ಅವರೂ ಚೆಂದಗೆ ನಟಿಸಿದ್ದಾರೆ. ಪ್ರಿಯಾ ಆನಂದ್ ನಟನೆಯೂ ಮನ ಸೆಳೆಯುವಂತಿದೆ. ಸಂತೋಷ್ ಪಾತಾಜೆ ಛಾಯಾಗ್ರಹಣ ಆರೆಂಜಿಗೆ ಹೊಸಾ ಸ್ವಾದವನ್ನೇ ತುಂಬಿದೆ. ಸಂಗೀತವೂ ಒಟ್ಟಾರೆ ಕಥೆಗೆ ಸಾಥ್ ಕೊಟ್ಟಿದೆ. ಒಟ್ಟಾರೆಯಾಗಿ ಈ ಆರೆಂಜ್ ಫ್ರೆಶ್ ಆದ ಸ್ವಾದದಿಂದಲೇ ಎಲ್ಲರನ್ನೂ ತೃಪ್ತವಾಗಿಸುತ್ತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv