Tag: ಪ್ರಿಯಾಮಣಿ

  • ರಸ್ತೆಬದಿಯಲ್ಲಿ ಸ್ಟಿಕ್ಕರ್, ಹೇರ್ ಬ್ಯಾಂಡ್  ಮಾರಿದ ಪಂಚಭಾಷಾ ತಾರೆ ಪ್ರಿಯಾಮಣಿ

    ರಸ್ತೆಬದಿಯಲ್ಲಿ ಸ್ಟಿಕ್ಕರ್, ಹೇರ್ ಬ್ಯಾಂಡ್ ಮಾರಿದ ಪಂಚಭಾಷಾ ತಾರೆ ಪ್ರಿಯಾಮಣಿ

    ಬೆಂಗಳೂರು: ಪಂಚಾಭಾಷಾ ತಾರೆಯಾಗಿ ಮಿನುಗುತ್ತಿರುವ ಪ್ರಿಯಾಮಣಿಯವರು ರಸ್ತೆಬದಿಯಲ್ಲಿ ನಿಂತು ಸ್ಟಿಕ್ಕರ್, ಹೇರ್ ಬ್ಯಾಂಡ್ ಹಾಗೂ ಕ್ಲಿಪ್‍ಗಳನ್ನು ಮಾರಾಟ ಮಾಡುತ್ತಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

    ಅಭಿಮಾನಿಗಳಲ್ಲಿ ಈ ಕುರಿತು ಯಾವ ಸಿನಿಮಾದ ಚಿತ್ರೀಕರಣ ಎಂಬ ಗೊಂದಲ ಮೂಡಬಹುದು. ಆದರೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಇದೀಗ ಪ್ರಿಯಾಮಣಿ ಅವರ ಸರದಿ ಬಂದಿದೆ. ಈ ಹಿಂದೆ ಸ್ಯಾಂಡಲ್ ವುಡ್ ನಟರು ಮಾರಾಟ ಮಾಡಿ ಸಹಾಯ ಮಾಡಿದರು. ಈ ಬಾರಿ ಪ್ರಿಯಾಮಣಿಯವರು ಒಂದು ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದಾರೆ.

    ಮಂಜುಳಾ-ಸಿದ್ದರಾಜು ಕುಟುಂಬಕ್ಕಾಗಿ ಪ್ರಿಯಾಮಣಿ ಖಾಸಗಿ ವಾಹಿನಿಯ ಕಾರ್ಯಕ್ರಮದ ಮೂಲಕ ಸಹಾಯಕ್ಕೆ ಮುಂದಾಗಿದ್ದು, ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದ ರಸ್ತೆ ಬದಿಯಲ್ಲಿ ಅಲಂಕಾರಿಕ ವಸ್ತುಗಳಾದ ಬಳೆ, ಕ್ಲಿಪ್, ಸ್ಟಿಕ್ಕರ್, ಹೇರ್ ಬ್ಯಾಂಡ್ ಅನ್ನು ಮಾರಾಟ ಮಾಡಿದರು. ಅಷ್ಟೇ ಅಲ್ಲದೇ ದೇವಸ್ಥಾನದ ಸುತ್ತ ಅಭಿಮಾನಿಗಳು ತುಂಬಿಕೊಂಡಿದ್ದು, ಅವರೊಂದಿಗೆ ಕುಣಿದು ಕುಪ್ಪಳಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.

    ಮಂಜುಳಾ ಅವರಿಗೆ ಕಿಡ್ನಿ ಸಮಸ್ಯೆ ಇದ್ದು, ಮಗನು ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪತಿ ಸಿದ್ದರಾಜು ಅವರು ಧೋಬಿ ಕೆಲಸ ನಿರ್ವಹಿಸುತ್ತಿದ್ದು, ದುಡಿದ ಹಣದಿಂದ ಸಂಸಾರವನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಮಗ ಮತ್ತು ಮಂಜುಳಾ ಅವರ ಚಿಕಿತ್ಸೆಗೆ ಈಗಾಗಲೇ ಸಾಲವನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರಿಯಾಮಣಿ ಈ ಕುಟುಂಬಕ್ಕೆ ಸಹಾಯ ಮಾಡುವ ಮನಸ್ಸು ಮಾಡಿದ್ದಾರೆ.

    ಈ ಹಿಂದೆ ಸ್ಟಾರ್ ನಟ, ನಟಿಯರಾದ ಶ್ರೀಮುರುಳಿ, ಉಪೇಂದ್ರ, ರಶ್ಮಿಕಾ ಮಂದಣ್ಣ, ಸೃಜನ್ ಲೋಕೇಶ್ ಹಾಗೂ ಪ್ರಿಯಾಂಕ ಉಪೇಂದ್ರ ಇದೇ ರೀತಿ ಕೆಲಸ ಮಾಡಿ ಈ ಕಾರ್ಯಕ್ರಮದ ಮೂಲಕ ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪ್ರಿಯಾಮಣಿ!

    ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪ್ರಿಯಾಮಣಿ!

    ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಿಯಾಮಣಿ ಇತ್ತೀಚಿಗೆ ಒಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೋಡಿದ ಅಭಿಮಾನಿಗಳು ಪ್ರಿಯಾಮಣಿ ತಾಯಿ ಆಗುತ್ತಿದ್ದಾರೆ ಎಂದು ಅವರಿಗೆ ಶುಭ ಕೋರುತ್ತಿದ್ದಾರೆ.

    “ನಾನು ಮತ್ತು ನನ್ನ ಪತಿ ಮುಸ್ತಾಫ್ ರಾಜ್ ಕಡೆಯಿಂದ ಸಮ್‍ಥಿಂಗ್ ಇಂಟ್ರೆಸ್ಟಿಂಗ್ ಹಾಗೂ ಫನ್ ಸಂಗತಿಯೊಂದು ನಿಮ್ಮ ಮುಂದೆ ಬರಲಿದೆ. ವೇಟ್ ಆಂಡ್ ವಾಚ್” ಎಂದು ಪ್ರಿಯಾಮಣಿ ತಮ್ಮ ಪತಿ ಜೊತೆಯಿರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಪ್ರಿಯಾಮಣಿ ಅವರ ಟ್ವೀಟ್ ನೋಡಿ ಅವರು ತಾಯಿ ಆಗುತ್ತಿದ್ದಾರಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ಕೂಡ ಅವರ ಟ್ವೀಟ್ ನೋಡಿ ಪ್ರಿಯಾಮಣಿ ಅಮ್ಮ ಆಗುತ್ತಿದ್ದಾರೆ ಎಂದು ತಿಳಿದು ಅವರಿಗೆ ಶುಭ ಕೋರುತ್ತಿದ್ದಾರೆ.

    https://twitter.com/priyamani6/status/1023587440018243590

    ಪ್ರಿಯಾಮಣಿ 2017 ಅಗಸ್ಟ್ 23ರಂದು ಮುಸ್ತಾಫ್ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಈ ಟ್ವೀಟ್ ನೋಡಿ ಅಭಿಮಾನಿಗಳು ಪ್ರಿಯಾಮಣಿಗೆ ರೀ-ಟ್ವೀಟ್ ಮಾಡುವ ಮೂಲಕ ಜೂನಿಯರ್ ಪ್ರಿಯಾಮಣಿ ಬರುತ್ತಿರಬಹುದು ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ಚೋಟಾ ಪ್ರಿಯಾಮಣಿ ಎಂದು ಟ್ವೀಟ್ ಮಾಡಿದ್ದಾರೆ.

    ಇತ್ತ ಪ್ರಿಯಾಮಣಿ ಟ್ವೀಟ್‍ಗೆ ನಟಿ ಪರೂಲ್ ಯಾದವ್ ಸಹ ಮಗು ಐಸ್ ಕ್ರೀಂ ತಿನ್ನುವ ಜಿಫ್ ಹಾಕುವ ಮೂಲಕ ಶುಭಾಶಯ ಕೋರಿದ್ದಾರೆ. ಪರೂಲ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಪ್ರಿಯಾಮಣಿ ಲವ್ ಸೂಚಕದ ಎಮೋಜಿ ಹಾಕಿ ಉತ್ತರಿಸಿದ್ದಾರೆ. ಸದ್ಯ ಪ್ರಿಯಾಮಣಿ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಆ ಟ್ವೀಟ್ ನೋಡಿದ ಅಭಿಮಾನಿಗಳು ಪ್ರಿಯಾಮಣಿ ತಾಯಿ ಆಗುತ್ತಿದ್ದಾರೆ ಎಂದು ತಿಳಿದು ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ. ಸದ್ಯ ಪ್ರಿಯಾಮಣಿ ಅವರ ಸ್ಪೆಷಲ್ ಸುದ್ದಿ ಏನು ಎಂಬುದು ಕಾದು ನೋಡಬೇಕಿದೆ.

  • ಜನಶಕ್ತಿ ಪಕ್ಷದಿಂದ ಪ್ರಿಯಾಮಣಿ ರಾಜಕೀಯಕ್ಕೆ ಎಂಟ್ರಿ !

    ಜನಶಕ್ತಿ ಪಕ್ಷದಿಂದ ಪ್ರಿಯಾಮಣಿ ರಾಜಕೀಯಕ್ಕೆ ಎಂಟ್ರಿ !

    ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಸ್ಯಾಂಡಲ್‍ವುಡ್ ತಾರೆಯರು ರಾಜಕೀಯದತ್ತ ಮುಖ ಮಾಡುತ್ತಿದ್ದಾರೆ. ಈಗ ದಕ್ಷಿಣ ಭಾರತದಲ್ಲಿ ತಮ್ಮ ನಟನೆಯ ಮೂಲಕ ಹೆಸರು ಮಾಡಿರುವ ನಟಿ ಪ್ರಿಯಾಮಣಿ ಜನಶಕ್ತಿ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ.

    ಪ್ರಿಯಾಮಣಿ ಮದುವೆಯ ಬಳಿಕ ಲಾಂಗ್ ಗ್ಯಾಪ್ ನಂತರ ‘ಧ್ವಜ’ ಎಂಬ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಾಜಕೀಯ ದೃಶ್ಯಗಳನ್ನು ಒಳಗೊಂಡಿದ್ದು, ಚಿತ್ರದಲ್ಲಿ ಜನಶಕ್ತಿ ಎಂಬ ಪಕ್ಷದ ರಾಜಕೀಯ ಮಹಿಳೆಯಾಗಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಇದೇ ಸನ್ನಿವೇಶ ಚಿತ್ರೀಕರಣದ ಕೆಲವು ಫೋಟೋಗಳು ಫೇಸ್‍ಬುಕ್, ವಾಟ್ಸಪ್ ಸೇರಿದಂತೆ ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪ್ರಿಯಾಮಣಿ ತಮ್ಮ ಟ್ವಿಟರ್ ನಲ್ಲಿ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೈ ಮುಗಿದು ಹೇಳುತ್ತಿರುವ ಫೋಟೋ ವೈರಲ್ ಆಗಿದೆ.

    ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷವೊಂದನ್ನು ಹಟ್ಟು ಹಾಕುವ ಮೂಲಕ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಇತ್ತ ಸ್ಯಾಂಡಲ್‍ವುಡ್ ಮಾಣಿಕ್ಯ ಸುದೀಪ್ ಸಹ ಜೆಡಿಎಸ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿದೆ. ಇತ್ತ ಹಾಸ್ಯ ನಟ ಸಾಧು ಕೋಕಿಲ ಮತ್ತು ಕನಸಿನ ಕನ್ಯೆ ಮಾಲಾಶ್ರೀ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ಪ್ರಿಯಾಮಣಿ ಅವರ ಶೂಟಿಂಗ್ ಫೋಟೋ ನೋಡಿದವ್ರು ರಾಜಕೀಯಕ್ಕೆ ಸೇರ್ತಾರೆ ಅಂತಾ ಹೇಳುತ್ತಿದ್ದಾರೆ.

    https://twitter.com/maheshsiva101/status/934621819839176706

  • ಪ್ರಿಯಾಮಣಿ, ಮುಸ್ತಫಾ ರಾಜ್ ಸಿಂಪಲ್ ಮ್ಯಾರೇಜ್ ವಿಡಿಯೋ ನೋಡಿ

    ಪ್ರಿಯಾಮಣಿ, ಮುಸ್ತಫಾ ರಾಜ್ ಸಿಂಪಲ್ ಮ್ಯಾರೇಜ್ ವಿಡಿಯೋ ನೋಡಿ

    ಬೆಂಗಳೂರು: ಕನ್ನಡ, ತೆಲುಗು, ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿ ಪ್ರಿಯಾಮಣಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಜೊತೆ ಸರಳವಾಗಿ ರಿಜಿಸ್ಟರ್ ಮದುವೆ ಆಗಿದ್ದಾರೆ.

    ಜಯನಗರದ ರಿಜಿಸ್ಟರ್ ಕಛೇರಿಯಲ್ಲಿ ಸಹಿ ಹಾಕಿ, ಹಾರ ಬದಲಾಯಿಸಿಕೊಂಡು ಸಿಹಿ ಹಂಚಿ ದಾಂಪತ್ಯ ಜೀವನವನ್ನು ಪ್ರಿಯಾಮಣಿ, ಮುಸ್ತಫಾ ರಾಜ್ ಶುರು ಮಾಡಿದರು.

    ಹಸಿರು ಸೀರೆ, ಹಳದಿ ಕಲರ್ ಬ್ಲೌಸ್‍ನಲ್ಲಿ ಪ್ರಿಯಾಮಣಿ ಕಂಗೊಳಿಸಿದರೆ, ಬಿಳಿ ಬಣ್ಣದ ಕುರ್ತಾ ಪೈಜಾಮ ತೊಟ್ಟು ಮದುಮಗ ಮುಸ್ತಫಾ ರಾಜ್ ರಿಜಿಸ್ಟರ್ ಆಫೀಸ್‍ಗೆ ಬಂದರು. 15 ರಿಂದ 20 ನಿಮಿಷ ನಡೆದ ಮದುವೆ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಆಪ್ತರು ಮಾತ್ರ ಹಾಜರಾಗಿದ್ದರು.

    ಗುರುವಾರ ಜೆ ಪಿ ನಗರದ ‘ಇಲಾನ್ ಕನ್ವೆನ್ಷನ್ ಹಾಲ್’ ನಲ್ಲಿ ಆರತಕ್ಷತೆ ನಡೆಯಲಿದ್ದು ಸಮಾರಂಭಕ್ಕೆ ಕೆಲವೇ ಕೆಲ ಸಿನಿಮಾ ಗಣ್ಯರನ್ನ ಹಾಗೂ ಸ್ನೇಹಿತರನ್ನು ಆಹ್ವಾನಿಸಲಾಗಿದೆ. ಕಳೆದ ವರ್ಷ ಮೇ 27ಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ದಾಂಪತ್ಯ ಜೀವನದ ವಸಂತಗೀತೆ ಶುರುಮಾಡಿದ್ದಾರೆ.

     

  • ಇಂದು ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟಿ ಪ್ರಿಯಾಮಣಿ- ಮುಸ್ತಫಾ ರಾಜ್ ಜೊತೆ ಸಿಂಪಲ್ ಮ್ಯಾರೇಜ್

    ಇಂದು ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟಿ ಪ್ರಿಯಾಮಣಿ- ಮುಸ್ತಫಾ ರಾಜ್ ಜೊತೆ ಸಿಂಪಲ್ ಮ್ಯಾರೇಜ್

    ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಇಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಬಹುಕಾಲದ ಗೆಳೆಯ ಮುಂಬೈ ಮೂಲದ ಉದ್ಯಮಿ ಮುಸ್ತಫಾ ರಾಜ್ ಜೊತೆ ಪ್ರಿಯಾ ಕಳೆದ ವರ್ಷ ಉಂಗುರ ಬದಲಾಯಿಸಿಕೊಂಡಿದ್ದರು. ಪರಸ್ಪರ ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಇಂದು ವಿವಾಹವಾಗಲಿದ್ದಾರೆ.

    ಬೆಂಗಳೂರಿನಲ್ಲಿ ಮದುವೆ ನೊಂದಣಿ ಮಾಡಿಸಿಕೊಳ್ಳುವುದರ ಮೂಲಕ ಸರಳವಾಗಿ ಮದುವೆಯಾಗಲಿರುವ ಪ್ರಿಯಾಮಣಿ ಗುರುವಾರ ಬೆಂಗಳೂರಿನ ಜೆ ಪಿ ನಗರದ ಬಳಿ ಇರುವ `ಇಲಾನ್ ಕನ್ವೆಂಷನ್ ಹಾಲ್ ‘ನಲ್ಲಿ ಆರತಕ್ಷತೆ ಮಾಡಿಕೊಳ್ಳಲಿದ್ದಾರೆ. ಸಂಜೆ 7 ಗಂಟೆಯಿಂದ 10 ಗಂಟೆಯವರೆಗೆ ನಡೆಯುವ ಆರತಕ್ಷತೆ ಸಮಾರಂಭಕ್ಕೆ ಕೆಲವೇ ಕೆಲ ಸಿನಿಮಾ ಗಣ್ಯರನ್ನ ಹಾಗೂ ಸ್ನೇಹಿತರನ್ನು ಆಹ್ವಾನಿಸಲಾಗಿದೆ.

    `ರಾಮ್’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ಪ್ರಿಯಾಮಣಿ ಹತ್ತಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಪ್ರಿಯಾಮಣಿ ಇದೀಗ ಗೆಳೆಯ ಮುಸ್ತಫಾ ರಾಜ್‍ರನ್ನ ಜೀವನ ಸಂಗಾತಿಯಾಗಿ ಸ್ವೀಕರಿಸುತ್ತಿದ್ದಾರೆ.

     

  • ನಟಿ ಪ್ರಿಯಾಮಣಿ- ಮುಸ್ತಫಾ ಮದುವೆ ಡೇಟ್ ಫಿಕ್ಸ್

    ನಟಿ ಪ್ರಿಯಾಮಣಿ- ಮುಸ್ತಫಾ ಮದುವೆ ಡೇಟ್ ಫಿಕ್ಸ್

    ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಮದುವೆ ಡೇಟ್ ಫಿಕ್ಸ್ ಆಗಿದೆ. ತಮ್ಮ ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಜೊತೆ ಇದೇ ತಿಂಗಳು 23 ರಂದು ವಿವಾಹವಾಗಲಿದ್ದಾರೆ.

    ಕಳೆದ ವರ್ಷ ಮೇ 27ರಂದು ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಪ್ರಿಯಾಮಣಿ ತನ್ನ ಬಹುಕಾಲದ ಗೆಳೆಯ ಹಾಗೂ ಮುಂಬೈ ಮೂಲದ ಮುಸ್ತಫಾ ಜೊತೆ ಉಂಗುರ ಬದಲಿಸಿಕೊಂಡಿದ್ದರು. ಇದೀಗ ಅದ್ಧೂರಿಯಾಗಿ ಮದುವೆಯಾಗದೆ ರಿಜಿಸ್ಟ್ರರ್ ಮ್ಯಾರೇಜ್ ಆಗೋದಕ್ಕೆ ನಿರ್ಧರಿಸಿದ್ದಾರೆ.

    ಆಗಸ್ಟ್ 23 ಕ್ಕೆ ವಿವಾಹ ನೊಂದಣಿ ಮಾಡಿಸಿ 24 ರಂದು ಬೆಂಗಳೂರಿನ ಹೊಟೇಲ್ ಒಂದರಲ್ಲಿ ಚಿತ್ರರಂಗದ ಗಣ್ಯರಿಗೆ ಮತ್ತು ಎರಡೂ ಕುಟುಂಬದ ಬಂಧುಗಳಿಗೆ ಪಾರ್ಟಿ ಕೊಡುವ ಸಾಧ್ಯತೆ ಇದೆ ಎಂಬುವುದಾಗಿ ತಿಳಿದುಬಂದಿದೆ.

    ಮೂಲತಃ ಬೆಂಗಳೂರಿನವರಾದ ಪ್ರಿಯಾಮಣಿ, ಅರಬಿಂದೋ ಮೆಮೋರಿಯಲ್ ಸ್ಕೂಲ್, ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದರು. ಸಿಸಿಎಲ್ ಪಂದ್ಯಾವಳಿಯ ಸಂದರ್ಭದಲ್ಲಿ ಪ್ರಿಯಾಮಣಿ ಅವರಿಗೆ ಮುಸ್ತಫಾ ರಾಜಾ ಜೊತೆ ಪರಿಚಯವಾಗಿ ಬಳಿಕ ಪ್ರೀತಿಗೆ ತಿರುಗಿತ್ತು.