ಬೆಂಗಳೂರಿನ ಬ್ಯೂಟಿ, ಕನ್ನಡತಿ ಪ್ರಿಯಾಮಣಿ (Priyamani) ಅವರು ಭಾರತೀಯ ಸಿನಿಮಾರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿ ಗಮನ ಸೆಳೆಯುತ್ತಿದ್ದಾರೆ. ಬಹುಭಾಷೆಗಳಲ್ಲಿ ನಟಿಸುವ ಮೂಲಕ ಪ್ರಿಯಾಮಣಿ ಚಾರ್ಮ್ ಉಳಿಸಿಕೊಂಡಿದ್ದಾರೆ. ಸದ್ಯ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟು 20 ವರ್ಷಗಳಾಗಿದೆ. ಇದುವೆರೆಗೂ ಕಿಸ್ಸಿಂಗ್ ಸೀನ್‌ಗೆ ನಟಿ ನೋ ಎನ್ನುತ್ತಾರೆ. ಯಾಕೆ? ಈ ಬಗ್ಗೆ ಪ್ರಿಯಾಮಣಿ ಅವರ ಅಭಿಪ್ರಾಯವೇನು ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಕನ್ನಡದ ರಾಮ್, ಅಣ್ಣಾ ಬಾಂಡ್, ಕೋ ಕೋ, ವಿಷ್ಣುವರ್ಧನ, ಲಕ್ಷ್ಮಿ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ‘ದಿ ಫ್ಯಾಮಿಲಿ ಮ್ಯಾನ್’ (The Family Man ) ವೆಬ್ ಸಿರೀಸ್‌ನಲ್ಲಿ ಪ್ರಿಯಾ ನಟಿಸಿದ್ದಾರೆ. ’ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾದಲ್ಲಿನ ಹಾಡಿಗೆ ಶಾರುಖ್ ಖಾನ್ ಜೊತೆ ಪ್ರಿಯಾಮಣಿ ಹೆಜ್ಜೆ ಹಾಕಿದ್ದಾರೆ. 20 ವರ್ಷಗಳಲ್ಲಿ ಭಿನ್ನ ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರೋ ಪ್ರಿಯಾಮಣಿ, ಕೋಟಿ ಸಂಭಾವನೆ ಕೊಟ್ರು ಹಾಟ್ ದೃಶ್ಯ, ಲಿಪ್ ಲಾಕ್ ಸೀನ್‌ಗಳಲ್ಲಿ ನಟಿಸೋದಿಲ್ಲವಂತೆ. ಇದನ್ನೂ ಓದಿ:RRR ಹೀರೋ ಮಗಳಿಗೆ KKK ಹೆಸರು ನಾಮಕರಣ: ಲಲಿತ ಸಹಸ್ರನಾಮದಿಂದ ಹೆಸರು ಆಯ್ಕೆ
ಸಿನಿಮಾದಲ್ಲಿ ನಟಿಸುವಾಗ ಅದು ಕೇವಲ ಒಂದು ಪಾತ್ರ ಆಗಿರುತ್ತದೆ. ಈ ಕಾರಣಕ್ಕೆ ಕೆಲವರು ಎಂತಹುದೇ ದೃಶ್ಯ ಇದ್ದರೂ ನಟಿಸುತ್ತಾರೆ. ಆದರೆ, ಕೆಲವರು ಮಡಿವಂತಿಕೆ ಕಾಪಾಡಿಕೊಂಡಿದ್ದಾರೆ. ಕಿಸ್ ದೃಶ್ಯಗಳಲ್ಲಿ, ಹಸಿಬಿಸಿ ದೃಶ್ಯಗಳಲ್ಲಿ ನಟಿಸೋಕೆ ನೋ ಎನ್ನುತ್ತಾರೆ. ಪ್ರಿಯಾಮಣಿ ಅವರು ಎರಡನೇ ಸಾಲಿಗೆ ಸೇರುತ್ತಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತೆರೆಮೇಲೆ ನಾನು ಕಿಸ್ ಮಾಡಲ್ಲ. ಅದಕ್ಕೆ ನಾನು ಯಾವಾಗಲೂ ನೋ ಎನ್ನುತ್ತೇನೆ. ನನಗೆ ಗೊತ್ತು ಅದು ಕೇವಲ ಪಾತ್ರ ಮತ್ತು ಅದು ನನ್ನ ಕೆಲಸ. ಆದರೆ, ಬೇರೆ ಪುರುಷನೊಂದಿಗೆ ತೆರೆಮೇಲೆ ಕಿಸ್ ಮಾಡಲು ನನಗೆ ಇರಿಸುಮುರುಸು ಉಂಟಾಗುತ್ತದೆ. ನಾನು ಉತ್ತರ ಕೊಡಬೇಕಾಗಿರುವುದು ನನ್ನ ಗಂಡನಿಗೆ ಮಾತ್ರ ಎಂದಿದ್ದಾರೆ.
2017ರಲ್ಲಿ ಮುಸ್ತಫಾ ರಾಜ್ ಅವರನ್ನು ಪ್ರಿಯಾಮಣಿ ಮದುವೆ ಆದರು. ಮದುವೆ ನಂತರ ಪಾತ್ರಗಳನ್ನು ಮಾಡುತ್ತಿಲ್ಲ. ಆ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳದೇ ಇರೋದು ನನ್ನ ಜವಾಬ್ದಾರಿ ಎನಿಸುತ್ತದೆ. ಇತ್ತೀಚೆಗೆ ನಿರ್ದೇಶಕರೊಬ್ಬರು ಬಂದು ಸಿನಿಮಾ ಕಥೆ ಹೇಳಿದರು. ಅದರಲ್ಲಿ ಕಿಸ್ ದೃಶ್ಯ ಇತ್ತು. ನಾನು ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ನಟಿ ಮಾತನಾಡಿದ್ದಾರೆ.
ಅನ್ಯ ಧರ್ಮೀಯರನ್ನು ಇಷ್ಟಪಟ್ಟು ಮದುವೆ ಆಗುವುದೇ ತಪ್ಪು ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ನಾನು ಯಾರನ್ನು ಇಷ್ಟಪಟ್ಟೆನೋ ಅವರನ್ನು ಮದುವೆಯಾಗಿದ್ದೇನೆ. ಪ್ರೀತಿಯಲ್ಲಿ ಜಾತಿ, ಧರ್ಮಗಳು ಇರುವುದಿಲ್ಲ. ಬೇರೆ ಧರ್ಮ ಅಥವಾ ಜಾತಿಯವರನ್ನು ಮದುವೆಯಾದರೆ ಏನು ತಪ್ಪು? ಎಂದು ಪ್ರಶ್ನೆ ಮಾಡಿದ್ದಾರೆ ಪ್ರಿಯಾಮಣಿ.
ನನ್ನ ಮದುವೆಯನ್ನು ಹಲವರು ವಿರೋಧಿಸಿದರು. ಕೆಲವರು ಒಪ್ಪಿದರು. ನಾನು ನನ್ನ ಹುಡುಗನನ್ನು ಮತ್ತು ಮದುವೆಯನ್ನು ಒಪ್ಪಿಕೊಳ್ಳಿ ಎಂದು ಯಾವತ್ತೂ ಹೇಳಿಲ್ಲ. ಒಪ್ಪುವುದು ಮತ್ತು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ, ಮುಸ್ಲಿಂ ವ್ಯಕ್ತಿಯನ್ನು ಮದುವೆ ಆಗಿದ್ದೇನೆ ಎನ್ನುವ ಕಾರಣಕ್ಕಾಗಿ ಹಿಂಸೆ ನೀಡುವುದು ಸರಿಯಲ್ಲ. ನಾನು ಆಧುನಿಕ ಭಾರತದಲ್ಲಿ ಬದುಕುತ್ತಿದ್ದೇವೆ. ಭಾರತ ಜಾತ್ಯತೀತ ರಾಷ್ಟ್ರ ಎಂದಿದ್ದಾರೆ. ಈ ಮೂಲಕ ಮಸ್ಲಿಂರೆಲ್ಲಾ ಐಸಿಸ್ ಆಗಲ್ಲ, ಮುಸ್ಲಿಂ ವ್ಯಕ್ತಿಯನ್ನು ಮದುವೆ ಆಗಿದ್ದೇ ತಪ್ಪಾ ಎಂದು ಇತ್ತೀಚಿಗೆ ನಟಿ ಮಾತನಾಡಿದ್ದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]







ಕನ್ನಡ,ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಮಿಂಚ್ತಿರುವ ನಟಿ ಪ್ರಿಯಾಮಣಿ ಸದ್ಯ ಮುಸ್ತಫಾ ರಾಜ್ ಜೊತೆ ವೈವಾಹಿಕ ಬದುಕಿನಲ್ಲಿ ಖುಷಿಯಾಗಿದ್ದಾರೆ. 2017ರಲ್ಲಿ ಉದ್ಯಮಿ ಮುಸ್ತಫಾ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗಿರುವಾಗ ಸಂದರ್ಶನವೊಂದರಲ್ಲಿ ಇದೀಗ ತಮ್ಮ ಮೊದಲ ಲವ್ ಲೈಫ್ ಬಗ್ಗೆ ನಟಿ ಮಾತನಾಡಿದ್ದಾರೆ.






ಕನ್ನಡ ಸೇರಿದಂತೆ ಬಹುಭಾಷಾ ಚಿತ್ರಗಳಲ್ಲಿ ಬ್ಯುಸಿಯಿರುವ ಬ್ಯೂಟಿ ಕ್ವೀನ್ ಪ್ರಿಯಾಮಣಿ ಸದ್ಯ `ಪುಷ್ಪ 2′ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ವಿಜಯ್ ಸೇತುಪತಿ ಅವರ ಪತ್ನಿಯ ಪಾತ್ರದಲ್ಲಿ ಪ್ರಿಯಾಮಣಿ ಬಣ್ಣ ಹಚ್ಚಲಿದ್ದಾರೆ. ವಿಜಯ್ ಈ ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾರೆ. ಪುಷ್ಪ ಪಾರ್ಟ್ 2 ಚಿತ್ರದಲ್ಲಿ ದಿನದಿಂದ ದಿನಕ್ಕೆ ಕಲಾವಿದರ ದಂಡೇ ಸೇರ್ಪಡೆಯಾಗುತ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.







