Tag: ಪ್ರಿಯಾಂಕ

  • ಕ್ಯಾಪ್ಟನ್ ರೂಮ್‍ನಲ್ಲಿ ಪಾಸ್ ಆಗಿದ್ದೇನು ಶಮಂತ್ ಬಿಚ್ಚಿಟ್ರು ಸತ್ಯ..!

    ಕ್ಯಾಪ್ಟನ್ ರೂಮ್‍ನಲ್ಲಿ ಪಾಸ್ ಆಗಿದ್ದೇನು ಶಮಂತ್ ಬಿಚ್ಚಿಟ್ರು ಸತ್ಯ..!

    ಹಲವು ದಿನಗಳ ನಂತರ ಶಮಂತ್ ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ರೂಂನಲ್ಲಿ ತಮಗಾದ ಅನುಭವವನ್ನು ಬಾಯ್ಬಿಟ್ಟಿದ್ದಾರೆ.

    ಪ್ರಿಯಾಂಕ ತಿಮ್ಮೇಶ್‍ರನ್ನು ಬಾತ್ ರೂಮ್ ಏರಿಯಾಗೆ ಕರೆದುಕೊಂಡು ಹೋಗಿ ವೈಷ್ಣವಿ ಒಮ್ಮೆ ಕುಳಿತುಕೊಂಡಿದ್ದರು, ಬೆಡ್ ರೂಮ್ ಒಳಗೆ ಹೋದಾಗ ಡಿಎಸ್ ಮಲಗುವ ಜಾಗದಲ್ಲಿ ಡಿಯು ಮಲದ್ದಳು. ನಾನು ಪ್ರಶಾಂತ್‍ರವರ ಬೆಡ್ ಮೇಲೆ ಕುಳಿತುಕೊಂಡಿದ್ದೆ, ರಘು ಭೂತ ಕೋಲ ಎಂದು ಮಾತನಾಡುತ್ತಿದ್ದರು. ಆಗ ಕ್ಯಾಪ್ಟನ್ ರೂಮ್‍ನಲ್ಲಿ ಬ್ಲಾಕ್ ಕಲರ್ ಮಾದರಿ ಹೋಯಿತು. ಅದನ್ನು ನೋಡಿ 5 ನಿಮಿಷ ನಾನು ತಲೆ ಕೆಡಿಸಿಕೊಂಡು ಬಿಟ್ಟೆ ಎಂದಿದ್ದಾರೆ.

    ಇದಕ್ಕೆ ಪ್ರಿಯಾಂಕ ಇದನ್ನು ನೀವು ಯಾರ ಬಳಿಯು ಹೇಳಲಿಲ್ಲವಾ ಎಂದು ಕೇಳಿದಾಗ, ಇಲ್ಲಿಯವರೆಗೂ ಇದನ್ನು ನಾನು ಯಾರಿಗೂ ಹೇಳಿಲ್ಲ. ನಿನಗೆ ಮೊದಲ ಬಾರಿಗೆ ಬಂದು ಹೇಳುತ್ತಿದ್ದೇನೆ. ಪ್ರಶಾಂತ್‍ರವರ ಬೆಡ್ ಮೇಲೆ ಕುಳಿತುಕೊಂಡು ವೈಷ್ಣವಿ, ಡಿಯುರನ್ನು ನೋಡುತ್ತಾ, ಬಾಟಲ್ ಇದ್ಯಾ ಎಂದು ನೋಡುತ್ತೇನೆ. ಆಗ ಕ್ಯಾಪ್ಟನ್ ರೂಮ್‍ನಿಂದ ಬ್ಲಾಕ್ ಕಲರ್‍ನಲ್ಲಿ ಹೀಗೆ ಏನೋ ಹೋಯಿತು ಇದನ್ನು ನಾನು ಯಾರಿಗೂ ಕೂಡ ಹೇಳಿಲ್ಲ ಎಂದು ಹೇಳಿದ್ದಾರೆ.

    ನಂತರ ಪ್ರಿಯಾಂಕ ಹಾಗಾದರೆ ಇದನ್ನು ನನಗೆ ಯಾಕೆ ಹೇಳಿದ್ರಿ, ನಿಜವಾಗಲೂ ಹಾಗೆ ಹೋಯಿತಾ? ಹೆಂಗಿತ್ತು, ರೌಂಡ್ ಹಾಕಿಕೊಂಡು ಹೋಯಿತಾ ಎಂದು ಕೂತೂಹಲದಿಂದ ಕೇಳುತ್ತಾರೆ. ಆಗ ಶಮಂತ್ ರೌಂಡ್ ಅಲ್ಲ. ಏನೋ ಬ್ಲಾಕ್ ಕಲರ್ ಒಂದಿಷ್ಟು ನನ್ನ ಭುಜದಷ್ಟು ಎತ್ತರ ಇತ್ತು, ಒಳಗಡೆ ಪಾಸ್ ಆಯಿತು ಎನ್ನುತ್ತಾರೆ. ಇದು ಫ್ರ್ಯಾಂಕ್ ಅಲ್ಲ ತಾನೇ ದೇವರಾಣೆ ನಿನಗೆ ಹಾಗೆ ಅನಿಸಿತಾ ಎಂದು ಪ್ರಶ್ನಿಸಿದಾಗ, ಅನಿಸಿತಾ ಅಲ್ಲ, ನೋಡ್ದೆ ಎಂದು ಸತ್ಯ ಬಾಯ್ಬಿಟ್ಟಿದ್ದಾರೆ.

    ಇದಕ್ಕೆ ಹೆದರಿ ಪ್ರಿಯಾಂಕ ಅಯ್ಯೋ ನಾನು ಸ್ನಾನ ಮಾಡಲು ಅಲ್ಲಿಗೆ ಹೋಗಿದ್ದೆ, ನನ್ನ ಪ್ರಕಾರ ಅಲ್ಲಿ ಇರುವ ಮೀರರ್‍ರನ್ನು ಯಾರೋ ಸರಿಸಿರಬಹುದು ಎಂದಾಗ ಶಮಂತ್ ಮೀರರ್ ಎಲ್ಲೋ ಇದೆ. ಆದರೆ ಒಂದು ಗ್ಲಾಸ್ ಡೋರ್ ಮುಚ್ಚಿತ್ತು, ಇನ್ನೊಂದು ಡೋರ್‍ನಿಂದ ಏನೋ ಬಾತ್ ರೂಂ ಕಡೆಗೆ ಪಾಸ್ ಆಯ್ತು. ನಾನು ಕ್ಯಾಪ್ಟನ್ ಆಗಿದ್ದಾಗಲು ಅಲ್ಲಿ ಮಲಗಿಕೊಂಡಾಗ ನಿದ್ದೆ ಬರುತ್ತಿರಲಿಲ್ಲ ಅಂದಾಗ, ಪ್ರಿಯಾಂಕ ತಿಮ್ಮೇಶ್ ಕೂಡ ಕ್ಯಾಪ್ಟನ್ ರೂಮ್‍ನಲ್ಲಿ ಯಾರಿಗೂ ನಿದ್ದೆ ಬರಲ್ಲ ಎನ್ನುತ್ತಾರೆ.

    ಅದಕ್ಕೆ ಮಾತು ಜೋಡಿಸಿದ ಶಮಂತ್, ಹೌದು ಹಾಗಾದರೆ ಪಕ್ಕಾ ಎಂದು ಹೇಳುತ್ತಾ, ಈ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದು ಪ್ರಿಯಾಂಕರನ್ನು ಗಾರ್ಡನ್ ಏರಿಯಾಗೆ ಕರೆದುಕೊಂಡು ಹೋಗುತ್ತಾರೆ.

  • ಎಲ್ಲರೂ ಸಾಲಾಗಿ ಮಲಗಿಕೊಂಡು ಕನಸು ಕಂಡ ಮಹಿಳಾ ಮಣಿಗಳು

    ಎಲ್ಲರೂ ಸಾಲಾಗಿ ಮಲಗಿಕೊಂಡು ಕನಸು ಕಂಡ ಮಹಿಳಾ ಮಣಿಗಳು

    ಬಿಗ್‍ಬಾಸ್‍ಮನೆಯ ಸ್ಪರ್ಧಿಗಳಿಗೆ ಇತ್ತೀಚೆಗೆ ನಿದ್ದೆ ಹೆಚ್ಚಾಗುತ್ತಿದೆ. ಬಿಗ್‍ಬಾಸ್ ಮನೆಯ ರೂಲ್ಸ್ ಪ್ರಕಾರ ಹಗಲು ಮಲಗುವಂತಿಲ್ಲ. ಬಿಗ್‍ಬಾಸ್ ಮನೆಯ ಲೈಟ್ ಆಫ್ ಆದ್ಮೇಲೆನೇ ನಿದ್ದೆ ಮಾಡಬೇಕು. ಹಾಗೇ ಲೈಟ್ ಆನ್ ಆಗುತ್ತಿದ್ದಂತೆ ಸ್ಪರ್ಧಿಗಳು ಎದ್ದು ಅವರ ಪ್ರತಿನಿತ್ಯದ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಆದರೆ ಸ್ಪರ್ಧಿಗಳು ಮಾತ್ರ ನಿದ್ದೆ ಮಾಡಲು ಪ್ರಾರಂಭಿಸಿದ್ದಾರೆ. ಅದರಲ್ಲಿಯೂ ಮಹಿಳಾ ಸ್ಪರ್ಧಿಗಳು ಅತಿ ಹೆಚ್ಚಾಗಿ ನಿದ್ದೆ ಮಾಡುತ್ತಿದ್ದಾರೆ.

    ಇಂದು ಬೆಳಗ್ಗೆ ಬಿಗ್‍ಬಾಸ್ ವೇಕ್ ಅಪ್ ಸಾಂಗ್ ಹಾಕಿದರೂ ಕೂಡ ಶುಭಾ, ನಿಧಿ ಎದ್ದೇಳದೆ ಹಾಗೇ ಮಲಗಿದ್ದರು. ಆಗ ಬಿಗ್‍ಬಾಸ್ ಎದ್ದೇಳು ಮಂಜುನಾಥ ಎದ್ದೇಳು ಎಂದು ಸಾಂಗ್ ಹಾಕಿದ್ದಾರೆ. ಈ ವೇಳೆ ಶುಭಾ, ಬಿಗ್‍ಬಾಸ್ ನಾನು ಎದ್ದೇಳುವುದಿಲ್ಲ. ಗೇಮ್ ಪ್ರಾಪರ್ಟಿ ಆಟದ ನಂತರ ಮುಟ್ಟಿರುವುದಕ್ಕೆ ನೀವು ಟೀ, ಕಾಫಿ ಕೊಡದೆ ಇದ್ದೀರಾ. ನನಗೆ ಟಿ, ಕಾಫಿ ಬೇಕು ಬಿಗ್‍ಬಾಸ್ ಎಂದು ಹಠ ಮಾಡಿದ್ದಾರೆ. ಬಿಗ್‍ಬಾಸ್ ಮಾತ್ರ ಏನು ಮಾತನಾಡದೇ ಸುಮ್ಮನಾಗಿದ್ದಾರೆ.

    ವೈಷ್ಣವಿ ನಿದ್ದೆ ಮಾಡುತ್ತಾ ಜ್ಞಾನ ಮಾಡುತ್ತಾರೆ ಎಂದು ಮನೆಮಂದಿ ತಮಾಷೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅದರಂತೆ ವೈಷ್ಣವಿ ಮತ್ತೆ ಜ್ಞಾನ ಮಾಡುತ್ತೇನೆ ಎಂದು ಕುಳಿತುಕೊಂಡಿದ್ದಾರೆ. ಆಗ ಮಂಜು ಮಾತ್ರ ವೈಷ್ಣವಿಗೆ ಕಣ್ಣು ಬಿಟ್ಟು ಜ್ಞಾನ ಮಾಡು ನೋಡೋಣ, ಕಂಡಿದ್ದೇವೆ ನಿನ್ನ ಜ್ಞಾನವನ್ನು ಎಂದು ಹೇಳುತ್ತಾ ತಮಾಷೆ ಮಾಡಿದ್ದಾರೆ.

    ಇತ್ತ ಬಿಗ್‍ಬಾಸ್ ಮನೆಯಲ್ಲಿ ನಿಧಿ, ಶುಭಾ, ಪ್ರಿಯಾಂಕ, ವೈಷ್ಣವಿ ಮನೆಯ ಹಾಲ್‍ನಲ್ಲಿ ಕುಳಿತು ನಿದ್ದೆಗೆ ಜಾರಿದ್ದಾರೆ. ಇದನ್ನು ಕಂಡ ಮಂಜು ಮತ್ತು ಶಮಂತ್ ನಿದ್ದೆ ಮಾಡುತ್ತಿದ್ದಾರೆ ಬಿಗ್‍ಬಾಸ್ ಈಗ ಹೇಳುತ್ತಾರೆ ಎಂದು ಮಾತನಾಡಿಕೊಳ್ಳುತ್ತಿರುವಾಗ ಬಿಗ್‍ಬಾಸ್ ಮತ್ತೆ ಎದ್ದೇಳು ಮಂಜುನಾಥ ಎದ್ದೇಳು ಎಂದು ಸಾಂಗ್ ಹಾಕಿದ್ದಾರೆ. ಆಗ ನಿದ್ದೆಗೆ ಜಾರಿರುವ ಮಹಿಳಾ ಮಣಿಗಳು ಎದ್ದು ಕುಳಿತಿದ್ದಾರೆ. ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಇತ್ತೀಚೆಗೆ ಅತಿ ಹೆಚ್ಚು ನಿದ್ದೆ ಮಾಡುತ್ತಿರುವ ದೃಶ್ಯಗಳು ಕಾಣುತ್ತಿವೆ.

  • ‘ನುಸುಳಿದ ಚೆಂಡು’ – ಗೆದ್ದವರು ಯಾರು? ಬಿಸಿ ಬಿಸಿ ಚರ್ಚೆ

    ‘ನುಸುಳಿದ ಚೆಂಡು’ – ಗೆದ್ದವರು ಯಾರು? ಬಿಸಿ ಬಿಸಿ ಚರ್ಚೆ

    ಬಿಗ್ ಬಾಸ್ ಮನೆಯಲ್ಲಿ 60ನೇ ದಿನ ನಡೆದ ‘ನುಸುಳಿದ ಚೆಂಡು’ ಟಾಸ್ಕ್ ವಿಚಾರದಲ್ಲಿ ಅರವಿಂದ್ ಗೆದ್ದ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತದೆ.

    ಮೂವರು ಸ್ಪರ್ಧಿಗಳ ಕೈ ಮತ್ತು ಕಾಲನ್ನು ಕಟ್ಟಲಾಗುತ್ತದೆ. ಸ್ಪರ್ಧಿಗಳು ತಲೆಯಿಂದ ಚೆಂಡನ್ನು ಗೆರೆ ದಾಟಿಸಬೇಕು. ಚೆಂಡಿನ ಜೊತೆಗೆ ಮೊದಲು ಗೆರೆ ಮುಟ್ಟಿದ ಸದಸ್ಯ ಮೊದಲ ಬೋಗಿಗೆ ಹೋಗುತ್ತಾರೆ ಎನ್ನುವುದು ಈ ಆಟದ ನಿಯಮವಾಗಿತ್ತು.

    ಚಕ್ರವರ್ತಿ ಚಂದ್ರಚೂಡ್ ಈ ನಿಯಮವನ್ನು ಹೇಳಿದ ಕೂಡಲೇ ಪ್ರಿಯಾಂಕ ಅವರು, ಒಂದು ವೇಳೆ ಬಾಲ್ ಹಳದಿ ಗೆರೆಯನ್ನು ದಾಟಿದರೆ ಔಟ್ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮಂಜು, ಔಟ್ ಆಗಲ್ಲ, ಆದರೆ ಚೆಂಡನ್ನು ತಲೆಯ ಸಹಾಯದಿಂದ ಮುಂದಕ್ಕೆ ತಳ್ಳಬೇಕು ಎಂದು ಉತ್ತರ ನೀಡುತ್ತಾರೆ.

     

    ಅರವಿಂದ್, ಪ್ರಶಾಂತ್ ಸಂಬರಗಿ ಮೂವರು ಸಿದ್ಧವಾಗಿ ಆಟ ಆಡಲು ಪ್ರಾರಂಭಿಸುತ್ತಾರೆ. ಆರಂಭದಲ್ಲಿ ಅರವಿಂದ್ ಬಾಲ್ ಹಳದಿ ಗೆರೆ ದಾಟಿ ಪ್ರಶಾಂತ್ ಸಂಬರಗಿ ಟ್ರ್ಯಾಕ್‍ಗೆ ಬರುತ್ತದೆ. ಈ ವೇಳೆ ಮುನ್ನುಗ್ಗುವ ಬರದಲ್ಲಿ ಪ್ರಶಾಂತ್ ಸಂಬರಗಿ ತಲೆ ಅರವಿಂದ್ ಚೆಂಡಿಗೆ ತಾಗಿದ ಕಾರಣ ಅರವಿಂದ್ ಚೆಂಡು ಪ್ರಿಯಾಂಕ ಟ್ರ್ಯಾಕ್‍ಗೆ ಹೋಗುತ್ತದೆ. ಈ ಚೆಂಡನ್ನು ಪಡೆಯುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದ್ದಾಗ ಪ್ರಿಯಾಂಕ ಅವರ ಟ್ರ್ಯಾಕ್‍ನಲ್ಲಿದ್ದ ಚೆಂಡಿಗೆ ಅರವಿಂದ್ ಕಾಲು ಆಕಸ್ಮಾತ್ ಆಗಿ ಸಿಕ್ಕಿದ ಪರಿಣಾಮ ಪಿಂಕ್ ಚೆಂಡು ಟ್ರ್ಯಾಕ್‍ನಿಂದ ದೂರ ಹೋಗುತ್ತದೆ. ನಂತರ ಅರವಿಂದ್ ಪ್ರಿಯಾಂಕ ಟ್ರ್ಯಾಕ್‍ನಲ್ಲಿ ಮುಂದಕ್ಕೆ ಹೋಗಿ ಬಾಲನ್ನು ಕೆಂಪು ಗೆರೆ ದಾಟಿಸುತ್ತಾರೆ.

    ಆರಂಭದಲ್ಲಿ ಪ್ರಶಾಂತ್ ಸಂಬರಗಿ ಜಯಗಳಿಸಿದ್ದಾರೆ ಎಂದು ಮಂಜು ಹೇಳಿದ್ದರೂ ನಂತರ ಅರವಿಂದ್, ನನ್ನ ಚೆಂಡು ರೆಡ್‍ಲೈನ್ ಕ್ರಾಸ್ ಆಗಿದೆ. ಜೊತೆಗೆ ಆಚೆ ಕಡೆಯಿಂದ ನಾನು ಲೈನ್ ಕ್ರಾಸ್ ಮಾಡಿದ್ದೇನೆ. ಒಮ್ಮೆ ಯೋಚನೆ ಮಾಡಿ ಎಂದು ಹೇಳುತ್ತಾರೆ. ಕೊನೆಗೆ ಹಲವು ಚರ್ಚೆಗಳು ನಡೆದು ಮಂಜು, ವೈಷ್ಣವಿ, ಚಂದ್ರಚೂಡ್ ಅವರು ಅರವಿಂದ್ ಗೆದ್ದಿದ್ದಾರೆ. ಪ್ರಶಾಂತ್ ಸಂಬರಗಿ ಎರಡನೇ ಸ್ಥಾನ, ಪ್ರಿಯಾಂಕಗೆ ಮೂರನೇ ಸ್ಥಾನ ಘೋಷಿಸುತ್ತಾರೆ.

    ಈಗ ಅರವಿಂದ್ ಗೆದ್ದ ಬಗ್ಗೆ ಭಾರೀ ಚರ್ಚೆ ನಡೆಯುತ್ತದೆ. ಕೆಲವರು ಪ್ರಿಯಾಂಕ ಗೆದ್ದಿದ್ದಾರೆ ಎಂದು ಹೇಳಿದ್ದರೆ ಇನ್ನೂ ಕೆಲವರು ಅರವಿಂದ್ ಗೆದ್ದಿದ್ದಾರೆ ಎಂದು ವಾದಿಸುತ್ತಾರೆ.

    ಕ್ರೀಡಾ ನಿಯಮದ ಪ್ರಕಾರ ಅರವಿಂದ್ ಮಾಡಿದ್ದು ತಪ್ಪು ಇರಬಹುದು. ಆದರೆ ಬಿಗ್ ಬಾಸ್ ನಿಯಮದ ಪ್ರಕಾರ ಇದು ತಪ್ಪಲ್ಲ. ಯಾಕೆಂದರೆ ಸ್ಪರ್ಧೆ ಆರಂಭಕ್ಕೂ ಮೊದಲೇ ಪ್ರಿಯಾಂಕ, ಚೆಂಡು ಒಂದು ವೇಳೆ ಹಳದಿ ಗೆರೆ ದಾಟಿದರೆ ಆಗ ಏನು ಎಂದು ಪ್ರಶ್ನೆ ಕೇಳಿದ್ರು. ಆಗಲೇ ಔಟ್ ಎಂದು ಹೇಳಿದ್ದರೆ ವಿವಾದವೇ ಇರುತ್ತಿರಲಿಲ್ಲ. ಆರಂಭದಲ್ಲಿ ಈ ನಿಯಮವನ್ನು ಮೂವರು ಒಪ್ಪಿದ ಕಾರಣ ನಂತರ ಟಾಸ್ಕ್ ನಡೆದಿದೆ. ಟಾಸ್ಕ್ ನಡೆದ ಬಳಿಕ ಸರಿಯಲ್ಲ ಎಂದು ಹೇಳುವುದು ತಪ್ಪು ಎಂದು ಹೇಳುತ್ತಿದ್ದಾರೆ.

    ಇನ್ನು ಕೆಲವರು ಈ ಟಾಸ್ಕ್ ನಲ್ಲಿ  ಪ್ರಶಾಂತ್ ಸಂಬರಗಿ ಜಯಗಳಿಸಿದ್ದಾರೆ. ಆದರೆ ಪ್ರಶಾಂತ್ ಅವರನ್ನು ಇಷ್ಟಪಡದ ಕಾರಣ ಮಂಜು ಅವರು ಅರವಿಂದ್ ಅವರನ್ನು ಸಪೋರ್ಟ್ ಮಾಡಿದ್ದಾರೆ. ಇದು ಮಂಜು ಮಾಡಿದ ಕುತಂತ್ರ ಎಂದು ದೂರುತ್ತಿದ್ದಾರೆ. ಇದಕ್ಕೆ ಅರವಿಂದ್ ಅಭಿಮಾನಿಗಳು, ಆರಂಭದಲ್ಲಿ ಅರವಿಂದ್ ಚೆಂಡು ಸಂಬರಗಿ ಟ್ರ್ಯಾಕ್‍ಗೆ ಬಂದಾಗ ಸಂಬರಗಿ ತಲೆಗೆ ಸಿಕ್ಕಿ ಅದು ಪ್ರಿಯಾಂಕ ಟ್ರ್ಯಾಕ್‍ಗೆ ಹೋಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದೋ ಅಥವಾ ಅಕಸ್ಮಾತ್ ಆಗಿದ್ದೋ ಎಂದು ಪ್ರಶ್ನಿಸುತ್ತಿದ್ದಾರೆ.

    ಪ್ರಶಾಂತ್ ಸಂಬರಗಿ ಅವರು ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್‍ನಲ್ಲಿ ರಾಘುಗೆ ಎಲ್ಲ ಹೂಗಳನ್ನು ನೀಡಿದ್ದರು. ಇದು ಟಾಸ್ನ್ ನಲ್ಲಿ ಇತ್ತಾ? ರಾಜೀವ್ ವಿನ್ ಆಗಬಾರದು ಎಂಬ ಒಂದೇ ಕಾರಣಕ್ಕೆ ಈ ತಂತ್ರ ಮಾಡಿದ್ದರು. ಇಲ್ಲಿ ಅರವಿಂದ್ ಉದ್ದೇಶಪೂರ್ವಕವಾಗಿ ಮಾಡಿದ್ದರೆ ಇದು ತಪ್ಪು ಎಂದು ಹೇಳಬಹುದಿತ್ತು. ಆದರೆ ಇಲ್ಲಿ ಆಕಸ್ಮತ್ ಆಗಿರುವ ಕಾರಣ ಬಾಲ್ ಟ್ರ್ಯಾಕ್‍ನಿಂದ ಹೊರಗಡೆ ಹೋಗಿದ್ದು ನಿಜ. ಹೊರಗಡೆ ಹೋದರೂ ಕುಗ್ಗದೇ ಪ್ರಯತ್ನ ಬಿಡದೇ ಬಾಲನ್ನು ಕೆಂಪು ಗೆರೆಯನ್ನು ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪ್ರಿಯಾಂಕ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ವಾದಿಸುತ್ತಿದ್ದಾರೆ.

    ಇನ್ನು ಕೆಲವರು ಮೊದಲೇ ನಿಯಮಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿತ್ತು. ನಿಯಮ ಸ್ಪಷ್ಟವಾಗಿ ತಿಳಿಯದ ಆಟ ಆಡಿದ್ದರಿಂದ ಈ ಗೊಂದಲವಾಗಿದೆ. ಅಂತಿಮವಾಗಿ ನಾಯಕರು ಏನು ಹೇಳುತ್ತಾರೋ ಅದೇ ಫೈನಲ್. ಅದನ್ನು ಎಲ್ಲರೂ ಒಪ್ಪಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಚರ್ಚೆ ಈಗ ಜೋರಾಗಿ ನಡೆಯುತ್ತಿದ್ದು, ನಿಮ್ಮ ಪ್ರಕಾರ ಈ ಟಾಸ್ಕ್ ನಲ್ಲಿ ವಿನ್ ಯಾರು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.

  • ವೈಷ್ಣವಿ ಧ್ಯಾನ ನೋಡಿ ಕೈ ಮುಗಿದು ನಕ್ಕ ಮನೆಮಂದಿ!

    ವೈಷ್ಣವಿ ಧ್ಯಾನ ನೋಡಿ ಕೈ ಮುಗಿದು ನಕ್ಕ ಮನೆಮಂದಿ!

    – ವೈಶು ಕಾಲಿಗೆ ನಮಸ್ಕರಿಸಿದ ರಾಜೀವ್

    ಬೆಂಗಳೂರು: ಪ್ರತಿದಿನ ಬೆಳಗ್ಗೆ ಆಗುತ್ತಿದ್ದಂತೆಯೇ ದೊಡ್ಮನೆ ಮಂದಿ ವಾಕಿಂಗ್, ಜಾಗಿಂಗ್ ಅಂತಾ ಬ್ಯುಸಿಯಾಗುತ್ತಾರೆ. ಅದರಲ್ಲೂ ವೈಷ್ಣವಿ ಡಿಫರೆಂಟ್ ಆಗಿ ಯೋಗ, ಧ್ಯಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಆದ್ರೆ ಇಷ್ಟು ದಿನ ವೈಷ್ಣವಿ ಪ್ರತಿನಿತ್ಯ ಧ್ಯಾನ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದ ಮನೆಮಂದಿಗೆ ವೈಷ್ಣವಿಯ ಕಳ್ಳಾಟ ಬಹಿರಂಗಗೊಂಡಿದೆ.

    ಹೌದು ನಿನ್ನೆ ಲಿವಿಂಗ್ ಏರಿಯಾದ ಬಳಿ ಕುಳಿತುಕೊಂಡಿದ್ದ ವೈಷ್ಣವಿ ಇದ್ದಕ್ಕಿದಂತೆ ಧ್ಯಾನ ಮಾಡಲು ಶುರುಮಾಡುತ್ತಾರೆ. ಇದನ್ನು ನೋಡಿ ಪ್ರಿಯಾಂಕ, ಶಮಂತ್‍ಗೆ ಈ ರೀತಿಯ ಜಗಳ, ಗದ್ದಲದ ಮಧ್ಯೆ ಇವರು ಹೇಗೆ ಧ್ಯಾನ ಮಾಡುತ್ತಾರೆ ಎಂದು ಕೇಳುತ್ತಾರೆ. ಆಗ ಶಮಂತ್ ಮೊದಲಿಗೆ ಅವರು ಎಷ್ಟೇ ಗಲಾಟೆ ಇದ್ದರೂ ಏಕಾಗ್ರತೆ ಹೊಂದಿರುತ್ತಾರೆ. ಆದ್ರೆ ನಿಜವಾಗಿಯೂ ಅವರು ನಿದ್ದೆಯೇ ಮಾಡುತ್ತಾರೋ ಧ್ಯಾನವೇ ಮಾಡುತ್ತಾರೋ ಗೊತ್ತಿಲ್ಲ. ಮುಖ ಯಾವಗಲೂ ಹಸನ್ಮುಖಿಯಾಗಿಯೇ ಇರುತ್ತದೆ ಎನ್ನುತ್ತಾರೆ.

    ಬಳಿಕ ಬಿಗ್‍ಬಾಸ್ ಈ ವೈಷ್ಣವಿಯವರು ಧ್ಯಾನದ ಹೆಸರಿನಲ್ಲಿ ನಿದ್ದೆ ಮಾಡುತ್ತಿದ್ದಾರೆ. ಬೇಕಾದರೆ ಅವರ ಮುಖದ ಹಾವ-ಭಾವ ನೋಡಿ ಬಿಗ್‍ಬಾಸ್, ತೂಗಡಿಸುತ್ತಿದ್ದಾರೆ ಎಂದು ಹೇಳುತ್ತಾರೆ.

    ನಂತರ ವೈಷ್ಣವಿ ನಿದ್ದೆ ಮಾಡುತ್ತಿರುವುದನ್ನು ಕಂಡು ಎಂತಾ ನಾಟಕ ಎಂದು ಮನೆಮಂದಿಯೆಲ್ಲಾ ರೇಗಿಸುತ್ತಾರೆ. ಈ ವೇಳೆ ಶಮಂತ್, ರಾಜೀವ್ ಎದ್ದು ಬಂದು ವೈಷ್ಣವಿಗೆ ನಮಸ್ಕಾರ ಮಾಡಿ, ನಮಗೂ ಹೇಳಿದ್ದರೆ ಇಷ್ಟು ದಿನ ನಾವು ಹೀಗೆ ಮಾಡುತ್ತಿದ್ವಿ ಎಂದರೆ, ರಾಜೀವ್ ದೇವರೇ ಈ ರೀತಿಯ ಮೆಡಿಟೇಷನ್ ನಮಗೂ ಕಲಿಸಪ್ಪಾ ಎಂದಿದ್ದಾರೆ.

    ಈ ವೇಳೆ ಮಂಜು ಬಿಗ್‍ಬಾಸ್ ಈ ಯಮ್ಮ ಮೋಸ ಮಾಡ್ತಿದ್ದಾಳೆ. ರಾತ್ರಿಯೆಲ್ಲಾ ಈ ಯಮ್ಮಾ ಅದೇ ಮಾಡುವುದು, ಬೆಳಗ್ಗೆ ಎದ್ದು ಯೋಗದ ಹೆಸರಿನಲ್ಲಿ ಮತ್ತೆ ನಿದ್ದೆ ಮಾಡಿ ನಿಮಗೆ ಯಾಮಾರಿಸುತ್ತಿದ್ದಾಳೆ ನೋಡಿಕೊಳ್ಳಿ ಅಂತಾರೆ. ಈ ವೇಳೆ ವೈಷ್ಣವಿ ಮನೆಯವರ ಮಾತನ್ನು ಕೇಳಿ ನಗುತ್ತಾರೆ.

  • ಮಂಜು, ದಿವ್ಯಾ ಸುರೇಶ್ ಸಂಬಂಧದ ಬಗ್ಗೆ ಪ್ರಿಯಾಂಕ ಹೇಳಿದ್ದೇನು ಗೊತ್ತಾ?

    ಮಂಜು, ದಿವ್ಯಾ ಸುರೇಶ್ ಸಂಬಂಧದ ಬಗ್ಗೆ ಪ್ರಿಯಾಂಕ ಹೇಳಿದ್ದೇನು ಗೊತ್ತಾ?

    ಬಿಗ್‍ಬಾಸ್ ಮನೆಯ ಸದಸ್ಯರಿಗೆ ಪ್ರತಿ ನಿತ್ಯ ಒಂದಲ್ಲಾ ಒಂದು ಚುಟುವಟಿಕೆ ನೀಡುತ್ತಿರುತ್ತಾರೆ. ಸದ್ಯ ಹೊರಗಿನಿಂದ ಬಂದ ಸ್ಪರ್ಧಿಗಳು ಮನೆ ಒಳಗಿರುವ ಸದಸ್ಯರನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಯಲು, ಪೆಟ್ಟಿಗೆಯೊಂದರಲ್ಲಿ ಕೆಲವು ವಸ್ತುಗಳಿದ್ದು, ಅವುಗಳನ್ನು ಸೂಕ್ತ ಕಾರಣಗಳೊಂದಿಗೆ ಮನೆಯ ಸದಸ್ಯರಿಗೆ ನೀಡುವಂತೆ ಸೂಚಿಸಿದ್ದರು.

    ಅದರಂತೆ ಈ ಚಟುವಟಿಕೆ ವೇಳೆ ಪ್ರಿಯಾಂಕ ತಿಮ್ಮೇಶ್, ಯಾವಾಗಲೂ ದಿವ್ಯಾ ಸುರೇಶ್, ಮಂಜು ಜೊತೆಗೆ ಇರುತ್ತಾರೆ. ಇದು ಒಬ್ಬರಿಗೆ ಮೀಸಲಾಗಿರುವಂತೆ ಕಾಣಿಸುತ್ತದೆ. ಹಾಗಾಗಿ ನೀವು ಎಲ್ಲರ ಜೊತೆಗೂ ಬೆರೆಯಬೇಕು ಎಂದು ಬಕೆಟ್ ನೀಡಿದರು. ಇದಾದ ನಂತರ ದಿವ್ಯಾ ಸುರೇಶ್, ಪ್ರಿಯಾಂಕ ಬಳಿ ಹೋಗಿ, ನಾನು ಮಂಜು ಜೊತೆಗೆ ಇರುತ್ತೇನೆ ಎಂದು ಹೇಳಿದ್ರಲ್ಲಾ, ನಿಮಗೆ ಯಾಕೆ ಹಾಗೆ ಅನಿಸಿತು? ನೀವು ಯಾವ ರೀತಿ ನೋಡುತ್ತಿದ್ದೀರಾ ಎಂಬುವುದನ್ನು ಹೇಳುತ್ತೀರಾ ಎಂದು ಕೇಳುತ್ತಾರೆ.

    ಆಗ ಪ್ರಿಯಾಂಕ ನಾನು ನಿಮ್ಮೆಲ್ಲರನ್ನು ಹೊರಗಿನಿಂದಲೇ ಪರಿಚಯ ಮಾಡಿಕೊಂಡಿದ್ದೇನೆ. ನೀವು ಯಾವಾಗಲೂ ಮಂಜು ಜೊತೆಯಲ್ಲಿಯೇ ಇರುತ್ತೀರಾ ಅದು ತಪ್ಪೋ, ಸರಿಯೋ ನನಗೆ ಗೊತ್ತಿಲ್ಲ. ನೀವು ಬೇರೆಯವರೊಂದಿಗೆ ಬೆರೆಯದೇ ಇರುವುದು ಕಾಣಿಸುತ್ತಿದೆ.

    ನಿಮಗೆ ಅವರ ಜೊತೆಯಲ್ಲಿಯೇ ಮಾತನಾಡಲು, ಕಂಫರ್ಟ್ ಎಂದು ಅನಿಸಿದರೆ, ಪ್ರೀತಿ, ವಿಶ್ವಾಸವಿದ್ದರೆ ಅವರೊಂದಿಗೆಯೇ ಇರಿ ತೊಂದರೆ ಏನು ಇಲ್ಲ. ನಾವು ಸಾವಿರ ತರ ನೋಡಿಕೊಳ್ಳುತ್ತೇವೆ. ಎಲ್ಲರ ದೃಷ್ಟಿ ಒಂದೇ ರೀತಿ ಇರುವುದಿಲ್ಲ. ನಾನು ನನ್ನ ವೀವ್‍ನಲ್ಲಿ ಹೇಳುತ್ತೇನೆ. ನೀವು ನಿಮ್ಮ ವೀವ್‍ನಲ್ಲಿ ಯೋಚನೆ ಮಾಡಿಕೊಳ್ಳಿ ಅಷ್ಟೇ ಎಂದು ಹೇಳುತ್ತಾರೆ.

    ನಂತರ ದಿವ್ಯಾ ಸುರೇಶ್ ಬೇರೆ ರೀತಿ ಏನಾದರೂ ಹೊರಗಡೆ ಬಿಂಬಿಸುತ್ತಿದ್ದಿಯಾ ಎಂದು ಕೇಳಿದಾಗ, ಪ್ರಿಯಾಂಕ ಹಾಗೇ ಏನೆಲ್ಲ. ನೀವಿಬ್ಬರು ಒಳ್ಳೆಯ ಫ್ರೆಂಡ್ಸ್, ಮಂಜು ಅವರು ಕೂಡ ಯಾವತ್ತು ಕೆಟ್ಟ ರೀತಿ ನಡೆದುಕೊಂಡಿಲ್ಲ. ನೀವು ಕೂಡ ಯಾವತ್ತು ಹಾಗೇ ನಡೆದುಕೊಂಡಿಲ್ಲ. ನನಗೆ ನೀವಿಬ್ಬರು ಕಪಲ್ ರೀತಿ ಕಾಣಿಸಿಲ್ಲ. ನೀವಿಬ್ಬರು ಬೆಸ್ಟ್ ಫ್ರೆಂಡ್ಸ್ ರೀತಿ ಇದ್ದೀರಾ ಎಂದು ಪ್ರಿಯಾಂಕ ಅಭಿಪ್ರಾಯ ತಿಳಿಸಿದ್ದಾರೆ.

  • ಪ್ರಿಯಾಂಕ ಎಂಟ್ರಿಯಾಗ್ತಿದ್ದಂತೆ ಪಂಚಿಂಗ್ ಡೈಲಾಗ್ ಹೊಡೆದ ಶಮಂತ್!

    ಪ್ರಿಯಾಂಕ ಎಂಟ್ರಿಯಾಗ್ತಿದ್ದಂತೆ ಪಂಚಿಂಗ್ ಡೈಲಾಗ್ ಹೊಡೆದ ಶಮಂತ್!

    ಬಿಗ್‍ಬಾಸ್ ಶೋನಲ್ಲಿ ದಿನೇ ದಿನೆ ಕಾಂಪಿಟೇಷನ್ ಹೆಚ್ಚಾಗುತ್ತಿದೆ. ಕಳೆದ ವಾರ ಬಿಗ್‍ಬಾಸ್ ಮನೆಗೆ ವೈಲ್ಡ್‍ಕಾರ್ಡ್ ಮೂಲಕ ಚಕ್ರವರ್ತಿ ಚಂದ್ರಚೂಡರವರು ಆಗಮಿಸಿದ್ದರು. ಇದೀಗ ದೊಡ್ಮನೆ ಸ್ಪರ್ಧಿಗಳಿಗೆ ಕಾಂಪಿಟೇಷನ್ ನೀಡಲು ಮತ್ತೋರ್ವ ಹೊಸ ಸ್ಪರ್ಧಿ ಎಂಟ್ರಿ ಕೊಟ್ಟಿದ್ದಾರೆ.

    ಇಷ್ಟು ದಿನ ಎಷ್ಟೇ ಟ್ರೈ ಮಾಡಿದರೂ ಒಂದು ಹುಡುಗಿಯೂ ಬೀಳದ ಶಮಂತ್ ಇನ್ನೂ ಸೈಲೆಂಟ್ ಆಗಿದ್ದರೆ ನಡೆಯುವುದಿಲ್ಲ ಎಂದು ನಿನ್ನೆ ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ವಾಯ್ಸ್ ರೈಸ್ ಮಾಡಿದ್ದಾರೆ. ಹೌದು ಶಮಂತ್, ನಿನ್ನೆ ಮನೆಗೆ ಬಂದ ಪ್ರಿಯಾಂಕಗೆ ಎಲ್ಲರ ಮುಂದೆ ನಿಮ್ಮ ಊಟ ಆಯಿತಾ? ಎಂದು ಕೇಳುತ್ತಾರೆ. ಆಗ ಇಲ್ಲ ಎಂದು ಪ್ರಿಯಾಂಕ ಹೇಳಿದಾಗ, ಡಿಫರೆಂಟ್ ಅಂದರೆ ‘ಚಿಕ್ಕು ಚಿಕನ್’ ಎರಡು ಮನೆಗೆ ಬಂದಿದ್ದಾರೆ ಎಂದು ಡೈಲಾಗ್ ಹೊಡೆದಿದ್ದಾರೆ.

    ಆನ್ ದಿ ಸ್ಪಾರ್ಟ್ ಶಮಂತ್ ಹೊಡೆದ ಪಂಚಿಂಗ್ ಡೈಲಾಗ್ ಕೇಳಿ ಅಚ್ಚರಿಗೊಂಡ ಮನೆಯ ಮಂದಿ ಕಮಾನ್ ಶಮಂತ್, ಕಮಾನ್ ಶಮಂತ್ ಎಂದು ಎದ್ದು ನಿಂತು ಜೋರಾಗಿ ಚಪ್ಪಾಳೆ ಹೊಡೆಯುತ್ತಾ ಹಾಸ್ಯ ಮಾಡಿದ್ದಾರೆ.

    ನಿನ್ನೆ ಬಿಗ್‍ಬಾಸ್ ಮನೆಗೆ ಚಿಕನ್ ಹಿಡಿದುಕೊಂಡು ವೈಲ್ಡ್ ಕಾರ್ಡ್ ಮೂಲಕ ಪ್ರಿಯಾಂಕ ತಿಮ್ಮೇಶ್ ಎಂಟ್ರಿ ನೀಡಿದ್ದಾರೆ. ಮೊದಲಿಗೆ ಬಂದ ಕೂಡಲೇ, ನನ್ನ ಹೆಸರು ಪ್ರಿಯಾಂಕ ತಿಮ್ಮೇಶ್, ನಾನು ಭದ್ರಾವತಿ ಹುಡುಗಿ. ನನ್ನ ವೃತ್ತಿ ಜೀವನ ಆರಂಭವಾಗಿದ್ದು ಪ್ರೀತಿಯಿಂದ ಸಿರಿಯಲ್‍ನಿಂದ ಬಳಿಕ ನಾನು ಮೊದಲ ಬಾರಿಗೆ ಗಣಪ ಸಿನಿಮಾದಲ್ಲಿ ಅಭಿನಯಿಸಿದೆ. ನಂತರ ಪಟಾಕಿ, ಭೀಮ ಸೇನಾ ನಳ ಮಹಾರಾಜ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಶುಗರ್ ಲೇಸ್ ಹಾಗೂ ಅರ್ಜುನ್ ಗೌಡ ನನ್ನ ಮುಂದಿನ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ ಎಂದು ಮನೆಯ ಸದಸ್ಯರೊಂದಿಗೆ ತಮ್ಮ ಪರಿಚಯ ಮಾಡಿಕೊಂಡರು.

    ನಿಮ್ಮೆಲ್ಲರನ್ನು ಇಷ್ಟು ದಿನ ನಾನು ಟಿವಿಯಲ್ಲಿ ನೋಡುತ್ತಿದ್ದೆ. ಇದೀಗ ಏಕ್ಸೈಟ್ ಆಗಿದ್ದೇನೆ. ಮುಂದೆ ಏನು ಎಂಬುವುದು ನನಗೆ ಗೊತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

  • ನಾನು ಬೆತ್ತಲೆಯಾಗಿ ಮದುವೆಯಾಗ್ತೀನಿ, ನನ್ನ ಮದುವೆಗೆ ಬರುವವರಿಗೆ ಒಂದ್ ಕಂಡೀಷನ್- ರಾಖಿ ಸಾವಂತ್

    ನಾನು ಬೆತ್ತಲೆಯಾಗಿ ಮದುವೆಯಾಗ್ತೀನಿ, ನನ್ನ ಮದುವೆಗೆ ಬರುವವರಿಗೆ ಒಂದ್ ಕಂಡೀಷನ್- ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ಎಂದೇ ಹೆಸರು ಪಡೆದಿರುವ ನಟಿ ರಾಖಿ ಸಾವಂತ್ ನಾನು ಬೆತ್ತಲೆಯಾಗಿ ಮದುವೆಯಾಗುತ್ತೀನಿ. ನನ್ನ ಮದುವೆಗೆ ಬರುವವರೂ ಬೆತ್ತಲೆಯಾಗೇ ಬರಬೇಕೆಂದು ಕಂಡೀಷನ್ ಹಾಕುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾಳೆ.

    ಹೌದು, ಸದಾ ಒಂದಿಲ್ಲೊಂದು ಸುದ್ದಿಗಳನ್ನು ಸೋಶಿಯಲ್ ಮಿಡಿಯಾಗಳಲ್ಲಿ ಹಾಕುವ ಮೂಲಕ ಸುದ್ದಿಯಲ್ಲಿರುವ ರಾಖಿ ಈಗ ಮತ್ತೊಂದು ವಿಡಿಯೋ ಮೂಲಕ ಸುದ್ದಿಯಲ್ಲಿದ್ದಾಳೆ. ತನ್ನ ಭಾವಿ ಪತಿ ದೀಪಕ್ ಲಾಲ್ ನೊಂದಿಗೆ ಡಿಸೆಂಬರ್ 31 ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಪತಿಯ ಆಶಯದಂತೆ ಬೆತ್ತಲೆಯಾಗಿ ಮದುವೆಯಾಗಲು ತೀರ್ಮಾನಿಸಿದ್ದಾಳೆ. ಅಲ್ಲದೇ ಮದುವೆಗೆ ಬರುವವರಿಗೂ ಬೆತ್ತಲೆಯಾಗೇ ಬರುವಂತೆ ಕಂಡೀಷನ್ ಹಾಕಿದ್ದಾಳೆ.

    https://www.instagram.com/p/BqzxZs_hnFw/?utm_source=ig_embed

    ರಾಖಿ ತನ್ನ ಮದುವೆ ಕುರಿತು ವಿಡಿಯೋ ಒಂದರಲ್ಲಿ ಮಾತನಾಡಿ, ಹಾಯ್ ಪ್ರಿಯಾಂಕಾ ನಾನೂ ಕೂಡ ಮದುವೆಯಾಗುತ್ತಿದ್ದೀನಿ. ನನ್ನ ಭಾವಿ ಪತಿ ದೀಪಕ್ ತುಂಬಾ ಚಿಕ್ಕ ವಯಸ್ಸಿನವರು. ನಿನ್ನ ಪತಿ ನಿಕ್ ಜೋನ್ಸ್‍ಗಿಂತಲೂ ಇವರೇ ಚಿಕ್ಕವರು. ಹೀಗಾಗಿ ಮದುವೆ ವಿಚಾರದಲ್ಲಿ ನನಗೂ ನಿನಗೂ ಸ್ಪರ್ಧೆ ಇದೆ. ನೀನು ಅಮೆರಿಕದಲ್ಲಿದ್ದು, ಭಾರತದಲ್ಲಿ ಮದುವೆ ಮಾಡಿಕೊಂಡೆ. ನಾನು ಭಾರತದಲ್ಲಿದ್ದು ಅಮೆರಿಕದಲ್ಲಿ ಮದುವೆಯಾಗುತ್ತಿದ್ದೇನೆ. ನಿನಗೆ ಗೊತ್ತಾ ಇತ್ತೀಚೆಗೆ ನನಗೆ ತುಂಬಾ ದೃಷ್ಟಿಯಾಗುತ್ತಿದೆ ಎಂದು ಹೇಳಿದ್ದಾರೆ.

    ನನ್ನ ಮದುವೆಗೆ ಶಾರುಖ್, ಸಲ್ಮಾನ್, ಅಮೀರ್ ಖಾನ್, ಸವ್ಯಸಾಚಿ ಸೇರಿದಂತೆ ಎಲ್ಲಾ ಸ್ಟಾರ್ ನಟ-ನಟಿಯರು ಬರುತ್ತಿದ್ದಾರೆ. ಇದರಿಂದಾಗಿ ನಾನು ತುಂಬಾನೇ ಎಕ್ಸೈಟ್ ಆಗಿದ್ದೇನೆ. ನನ್ನ ಮದುವೆಯ ವಿಶೇಷತೆ ಏನೆಂದರೆ, ಮದುವೆಯಲ್ಲಿ ಪಾಲ್ಗೊಳ್ಳುವವರು ಎಲ್ಲರೂ ಬೆತ್ತಲೆಯಾಗಿಯೇ ಬರಬೇಕು. ನಾನು ಸಹ ಬೆತ್ತಲೆಯಾಗಿಯೇ ಈ ಮಾತುಗಳನ್ನು ಆಡುತ್ತಿದ್ದೇನೆ. ನನ್ನ ಮದುವೆಯಲ್ಲಿ ಬಟ್ಟೆ ತೊಟ್ಟು ಬರಲು ಅವಕಾಶವಿಲ್ಲವೆಂದು ಹೇಳಿದ್ದಾಳೆ.

    ಇತ್ತೀಚೆಗೆ ರಾಖಿ ತನ್ನ ಕನ್ಯತ್ವದ ಪ್ರಮಾಣಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಸಖತ್ ಸುದ್ದಿಯಲ್ಲಿದ್ದಳು. ಅಭಿಮಾನಿಗಳು ಸಹ ರಾಖಿಗೆ ಭರಪೂರ ಕಾಮೆಂಟ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಮಿಳು ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣು!

    ತಮಿಳು ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣು!

    ಚೆನ್ನೈ: ತಮಿಳಿನ ಫೇಮಸ್ ನಟಿ ಪ್ರಿಯಾಂಕ ರವರು ಬುಧವಾರ ಅವರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬುಧವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯ ಕೆಲಸದವಳು ಬಾಗಿಲು ಬಡಿದರೂ ತೆಗೆಯುವುದಿಲ್ಲ. ಹಾಗಾಗಿ ಕಿಟಕಿಯಲ್ಲಿ ನೋಡಿದಾಗ ನಟಿ ಪ್ರಿಯಾಂಕರವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದೆ. ಕೂಡಲೇ ಕೆಲಸದವಳು ನೆರೆಹೊರೆಯವರಿಗೆ ತಿಳಿಸಿದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪ್ರಿಯಾಂಕರವರು ತಮಿಳು ಟಿವಿ ಯಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದು, ಸದ್ಯಕ್ಕೆ ‘ವಂಶಂ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಅದರಲ್ಲಿ ಬಾಹುಬಲಿ ಖ್ಯಾತಿಯ ನಟಿ ರಮ್ಯಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳಲು ಸಾಂಸರಿಕ ಕಲಹ ಕಾರಣವೆಂದು ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರು ಆತ್ಮಹತ್ಯೆಗೆ ಶರಣಾದ ವೇಳೆ ಪತಿ ಬಾಲಾ ಸ್ಥಳದಲ್ಲಿ ಇರಲಿಲ್ಲ. ಅವರಿಬ್ಬರಿಗೂ ಮೂರು ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಇಬ್ಬರ ನಡುವೆ ಆಗಾಗ ಕಲಹಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.