Tag: ಪ್ರಿಯಾಂಕ ಚೋಪ್ರಾ

  • ಹಾಲಿವುಡ್‌ನ ಮತ್ತೊಂದು ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಗ್ರೀನ್ ಸಿಗ್ನಲ್

    ಹಾಲಿವುಡ್‌ನ ಮತ್ತೊಂದು ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಗ್ರೀನ್ ಸಿಗ್ನಲ್

    ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್ ನಟಿಯಾಗಿ ಮಿಂಚ್ತಿದ್ದಾರೆ. ಒಂದೊಂದೇ ಚಿತ್ರಗಳಲ್ಲಿ ನಟಿಸುತ್ತಾ ಹಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈಗ ಹಾಲಿವುಡ್‌ನ ಮತ್ತೊಂದು ಪ್ರಾಜೆಕ್ಟ್ಗೆ ಪ್ರಿಯಾಂಕಾ ಚೋಪ್ರಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಬಿಟೌನ್‌ನ ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ, ಅದ್ಯಾವಾಗ ಹಾಲಿವುಡ್ ಚಿತ್ರರಂಗದಿಂದ ಬುಲಾವ್ ಬಂತೋ ಅಲ್ಲಿನ ಚಿತ್ರಗಳಲ್ಲಿ ನಟಿಸುತ್ತಾ ಅಲ್ಲಿನ ಹಾಲಿವುಡ್ ಸ್ಟಾರ್ ನಿಕ್ ಜೋನಸ್ ಅವರನ್ನ ಮದುವೆಯಾಗಿ ಅಲ್ಲಿಯೇ ಸೆಟೆಲ್ ಆಗಿಬಿಟ್ಟಿದ್ದಾರೆ. ಸಾಲು ಸಾಲು ಇಂಗ್ಲೀಷ್ ಚಿತ್ರಗಳ ಅಪರೂಪಕ್ಕೆ ಹಿಂದಿ ಚಿತ್ರಗಳಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಈಗ ಹಾಲಿವುಡ್‌ನ ಮತ್ತೊಂದು ಚಿತ್ರಕ್ಕೆ ನಟಿ ಸೈನ್ ಮಾಡಿದ್ದಾರೆ. ಇದನ್ನೂ ಓದಿ:ಅಹೋರಾತ್ರ ಮತ್ತು ಶಿಷ್ಯ ಚರಣ್ ವಿರುದ್ಧ ಕ್ರಮಕ್ಕಾಗಿ ಸುದೀಪ್ ಪರ ದೂರು ದಾಖಲಿಸಿದ ಫಿಲ್ಮ್ ಚೇಂಬರ್

    ಮಿಂಡಿ ಕಾಳಿಂಗ್ ನಿರ್ಮಾಣದ ಹೊಸ ಪ್ರಾಜೆಕ್ಟ್ ಕಥೆಯಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತೀಯ ಜೋಡಿಯ ಅದ್ದೂರಿ ಕಥೆಯಾಗಿದ್ದು, ಅಮೆರಿಕಾದಲ್ಲಿ ಸೆಟೆಲ್ ಆದ ಭಾರತೀಯ ಮಹಿಳೆ ಪಾತ್ರದಲ್ಲಿ ಮಿಂಡಿ ಕಾಳಿಂಗ್ ನಟಿಸಲಿದ್ದಾರೆ. ಚಿತ್ರದ ಪ್ರಮುಖ ಪಾತ್ರ ಪಂಜಾಬಿ ಮಹಿಳೆಯ ಪಾತ್ರದಲ್ಲಿ ಪ್ರಿಯಾಂಕಾ ಜೀವ ತುಂಬಲಿದ್ದಾರೆ. ಇನ್ನು ಹಿಂದಿಯ ಒಂದಿಷ್ಟು ಪ್ರಾಜೆಕ್ಟ್‌ನಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗಳು ಬಂದ ಮೇಲೆ ಜೀವನ ಬದಲಾಗಿದೆ: ನಿಕ್ ಜೋನಸ್

    ಮಗಳು ಬಂದ ಮೇಲೆ ಜೀವನ ಬದಲಾಗಿದೆ: ನಿಕ್ ಜೋನಸ್

    ಹಾಲಿವುಡ್‌ನ ಸ್ಟಾರ್ ಗಾಯಕ ನಿಕ್ ಜೋನಸ್ ಇದೀಗ ತಮ್ಮ ಮಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮುದ್ದು ಮಗಳ ಎಂಟ್ರಿಯಿಂದ ಜೀವನ ಹೇಗೆಲ್ಲಾ ಬದಲಾವಣೆ ಆಗಿದೆ ಅಂತಾ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

    ೨೦೧೮ರಲ್ಲಿ ಪ್ರಿಯಾಂಕ ಚೋಪ್ರಾ, ಹಾಲಿವುಡ್ ಸ್ಟಾರ್ ಗಾಯಕ ನಿಕ್ ಅವರನ್ನ ಪ್ರೀತಿಸಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈ ವರ್ಷದ ಆರಂಭದಲ್ಲಿ ಮನೆಗೆ ಮುದ್ದು ಮಗಳ ಎಂಟ್ರಿಯಾಗಿದೆ. ಬಾಡಿಗೆ ತಾಯಿಯ ಮೂಲಕ ಮಗಳನ್ನ ಪಡೆದಿದ್ದಾರೆ. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರಿಡಲಾಗಿದೆ. ಇದೀಗ ಸಂದರ್ಶನವೊಂದರಲ್ಲಿ ಮಗಳು ಬಂದ ಜೀವನ ಹೇಗಿದೆ ಎಂಬುನ್ನ ನಿಕ್ ಜೋನಸ್ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?

    ತಂದೆಯಾದ ಮೇಲೆ ಜವಾಬ್ದಾರಿ ಹೆಚ್ಚಿದೆ, ಅವಳ ಪಾಲನೆಯಲ್ಲಿ ಖುಷಿಯಿದೆ. ಮಗಳು ಬಂದ ಜೀವನ ಬದಲಾಗಿದೆ. ಮಗು ಆರೋಗ್ಯದಲ್ಲಿ ಹೇಗೆಲ್ಲಾ ಬದಲಾವಣೆ ಆಗುತ್ತದೆ ಎಂದು ಕೂಡ ತಿಳಿಸಿದ್ದಾರೆ. ಎಲ್ಲಾ ಚೆನ್ನಾಗಿದೆ ಮಗಳು ಬಂದ ಮೇಲೆ ಖುಷಿ ಇನ್ನೂ ಜಾಸ್ತಿಯಾಗಿದೆ ಎಂದು ಮುದ್ದು ಮಗಳ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೋಲ್ಡನ್ ಕಲರ್ ಗೌನ್‌ನಲ್ಲಿ ಮಿಂಚಿದ ಪ್ರಿಯಾಂಕ ಚೋಪ್ರಾ

    ಗೋಲ್ಡನ್ ಕಲರ್ ಗೌನ್‌ನಲ್ಲಿ ಮಿಂಚಿದ ಪ್ರಿಯಾಂಕ ಚೋಪ್ರಾ

    ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್‌ನಲ್ಲೂ ಬ್ಯುಸಿಯಿರೋ ನಟಿ,  ಕೈ ತುಂಬಾ ಆಫರ್ಸ್‌ಗಳ ಮಧ್ಯೆ ಕಥೆಯ ಆಯ್ಕೆಯ ವಿಚಾರದಲ್ಲೂ ಸಖತ್ ಚ್ಯೂಸಿ ಆಗಿದ್ದಾರೆ. ಇನ್ನು ಈಗ ಮಗುವಿನ ಪೋಷಣೆಯಲ್ಲಿ ಬ್ಯುಸಿಯಿರೋ ಪ್ರಿಯಾಂಕಾ, ಕೊಂಚ ಬಿಡುವು ಮಾಡಿಕೊಂಡು ಫಿಲ್ಮಂಫೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರೋ ಪ್ರಿಯಾಂಕಾ ಫೋಟೋ ಸಖತ್ ವೈರಲ್ ಆಗುತ್ತಿದೆ.

    ಹಿಂದಿ ಚಿತ್ರರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಪ್ರಿಯಾಂಕ ಚೋಪ್ರಾ, ಬೇಡಿಕೆ ಇರೋವಾಗಲೇ ನಿಕ್ ಜೊನಸ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮನೆಗೆ ಮುದ್ದು ಮಗಳ ಆಗಮನದ ನಂತರ ಪೋಷಣೆಯಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕ ಈಗ ತುಸು ಬಿಡುವು ಮಾಡಿಕೊಂಡು ಫಿಲ್ಮಂಫೇರ್‌ನಲ್ಲಿ ಭಾಗಿಯಾಗಿದ್ದಾರೆ. ಈ ಸಮಾರಂಭದಲ್ಲಿ ಡಿಫರೆಂಟ್ ಸ್ಟೈಲ್‌ನಿಂದ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಗಲಿಕೆಗೆ ಎರಡು ವರ್ಷ : ಕುಟುಂಬದಿಂದ ಇಂದು ವಿಶೇಷ ಪೂಜೆ

    ಫಿಲ್ಮಂಫೇರ್‌ನಲ್ಲಿ, ಗೋಲ್ಡನ್ ಕಲರ್ ಗೌನ್‌ನಲ್ಲಿ ಮಿರ ಮಿರ ಅಂತಾ ಪ್ರಿಯಾಂಕಾ ಚೋಪ್ರಾ ಮಿಂಚಿದ್ದಾರೆ. ಅಮೆರಿಕನ್ ನಟಿಯರಾದ ಆನ್ನೆ ಹ್ಯಾಥ್‌ವೇ ಮತ್ತು ಲೀಸಾ ಜತೆ ಒಳ್ಳೆಯ ಸಮಯವನ್ನು ಕಳೆದಿದ್ದಾರೆ. ಸದ್ಯ ಪ್ರಿಯಾಂಕ ಅವರ ನಯಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಪ್ರಿಯಾಂಕಾ ಚೋಪ್ರಾ ರಕ್ತ ಸಿಕ್ತ ಮುಖ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್: ಅಷ್ಟಕ್ಕೂ ಆಗಿದ್ದೇನು?

    ಪ್ರಿಯಾಂಕಾ ಚೋಪ್ರಾ ರಕ್ತ ಸಿಕ್ತ ಮುಖ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್: ಅಷ್ಟಕ್ಕೂ ಆಗಿದ್ದೇನು?

    ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ಈ ನಟಿ, ರಕ್ತ ಸಿಕ್ತ ಆಗಿರುವ ಮುಖದ ಫೋಟೋ ಶೇರ್‌ ಮಾಡಿದ್ದು, ಫೋಟೋ ನೋಡಿ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಬ್ಯೂಟಿ ಜತೆ ಪ್ರತಿಭೆ ಇರುವ ನಟಿ ಪ್ರಿಯಾಂಕ ಚೋಪ್ರಾ, ಸದ್ಯ ಹಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ದೈನಂದಿನ ಬದುಕಿನ ಪ್ರತಿಯೊಂದು ಅಪ್‌ಡೇಟ್‌ಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುವ ನಟಿ ಪ್ರಿಯಾಂಕಾ, ಇದೀಗ ಅವರು ಹಂಚಿಕೊಂಡಿರುವ ಫೋಟೋವೊಂದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

    ಹಾಲಿವುಡ್‌ನ `ಸಿಟಾಡೆಲ್’ ಚಿತ್ರೀಕರಣದಲ್ಲಿರುವ ನಟಿ ಪ್ರಿಯಾಂಕ, ಶೂಟಿಂಗ್ ಸೆಟ್‌ನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಿಯಾಂಕಾ ಮುಖಕ್ಕೆ ಏಟು ಬಿದ್ದಂತಿದೆ ಜತೆಗೆ ರಕ್ತಸಿಕ್ತವಾಗಿದೆ. `ನಿಮಗೂ ಇದು ಕಠಿಣ ದಿನವಾಗಿದೆಯೇ’ ಎಂದು ಕ್ಯಾಷ್ಯನ್ ನೀಡಿದ್ದಾರೆ. ಹಾಗೆಯೇ ಹ್ಯಾಶ್ ಟ್ಯಾಗ್‌ನಲ್ಲಿ ಕಲಾವಿದರ ಜೀವನ, `ಸಿಟಾಡೆಲ್’ ಎಂದು ಬರೆದುಕೊಂಡಿದ್ದಾರೆ. ಒಟ್ನಲ್ಲಿ ನೆಚ್ಚಿನ ನಟಿಯ ಮುಖ ನೋಡಿ ನಿಜವಾಗಲೂ ಪ್ರಿಯಾಂಕಾಗೆ ಏನೋ ಆಗಿದೆ ಎಂದು ಆತಂಕಗೊಂಡಿದ್ದಾರೆ. ಜತೆಗೆ ನಟಿಯ ಯೋಗಕ್ಷೇಮ ವಿಚಾರಿಸಿದ್ದಾರೆ.

     

    View this post on Instagram

     

    A post shared by Priyanka (@priyankachopra)

    `ಸಿಟಾಡೆಲ್’ ಇದೊಂದು ಸೈನ್ಸ್ ಫಿಕ್ಷನ್ ಸೀರೀಸ್ ಆಗಿದ್ದು, ರಿಚರ್ಡ್ ಮ್ಯಾಡೆನ್ ಜತೆ ಪ್ರಿಯಾಂಕಾ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿಯ ಸಾಲು ಸಾಲು ಸಿನಿಮಾಗಳ ಜತೆಗೆ ಬಾಲಿವುಡ್‌ಗೆ ಪ್ರಿಯಾಂಕಾ ಕಮ್ ಬ್ಯಾಕ್ ಆಗುತ್ತಿದ್ದಾರೆ.

  • ನಿಕ್ ಜೊತೆಗಿನ ವಿಚ್ಛೇದನ ಗಾಸಿಪ್​ಗೆ ಬ್ರೇಕ್ ಹಾಕಿದ ಪ್ರಿಯಾಂಕಾ ಚೋಪ್ರಾ

    ನಿಕ್ ಜೊತೆಗಿನ ವಿಚ್ಛೇದನ ಗಾಸಿಪ್​ಗೆ ಬ್ರೇಕ್ ಹಾಕಿದ ಪ್ರಿಯಾಂಕಾ ಚೋಪ್ರಾ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಪತಿ ನಿಕ್ ಜೋನಾಸ್‍ನಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಕೊನೆಗೂ ಪ್ರಿಯಾಂಕಾ ಚೋಪ್ರಾ ಮೌನ ಮುರಿದಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದ ಪತಿ ನಿಕ್ ಜೋನಾಸ್ ಅವರ ಹೆಸರನ್ನು ತೆಗೆದುಹಾಕಿದ್ದರು. ಇದರಿಂದ ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಇದನ್ನೂ ಓದಿ: ಪತಿಯಿಂದ ವಿಚ್ಛೇದನ ಪಡೆಯುತ್ತಾರಾ ಪ್ರಿಯಾಂಕಾ ಚೋಪ್ರಾ?

    ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಆದರೆ ಇದ್ದಕ್ಕಿದಂತೆ ಸೋಮವಾರ ಜೋನಾಸ್ ಹೆಸರನ್ನು ತೆಗೆದುಹಾಕಿರುವುದು ತೀವ್ರ ಕುತೂಹಲಕ್ಕಿಡುಮಾಡಿದೆ. ಅಲ್ಲದೇ ಪ್ರಿಯಾಂಕಾ ಅವರ ಈ ದಿಢೀರ್ ಬದಲಾವಣೆ ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿತ್ತು. ಇದನ್ನೂ ಓದಿ: ದುನಿಯಾ ವಿಜಯ್ ಬರದಿದ್ದರೆ ತಾಳಿ ಕಟ್ಟಿಸಿಕೊಳ್ಳಲ್ಲ – ಯುವತಿ ಪಟ್ಟು

     

    View this post on Instagram

     

    A post shared by Nick Jonas (@nickjonas)

    ಸದ್ಯ ವರ್ಕೌಟ್ ಮಾಡುತ್ತಿರುವ ವೀಡಿಯೋವೊಂದನ್ನು ನಿಕ್ ಜೋನಾಸ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದರು. ಈ ವೀಡಿಯೋಗೆ ಪ್ರಿಯಾಂಕಾ ಚೋಪ್ರಾ ರೋಮ್ಯಾಟಿಕ್ ಆಗಿ ಕಾಮೆಂಟ್ ಮಾಡುವ ಮೂಲಕ ಗಾಸಿಪ್‍ಗಳಿಗೆ ಬ್ರೇಕ್ ಹಾಕಿದ್ದಾರೆ. ವೀಡಿಯೋದಲ್ಲಿ ನಿಕ್ ಜೋನಾಸ್ ಡಂಬಲ್ಸ್ ಎತ್ತುತ್ತಿರುವುದನ್ನು ಕಾಣಬಹುದಾಗಿದೆ. ಇನ್ನೂ ಈ ವೀಡಿಯೋ ನೋಡಿ ಫುಲ್ ಫಿದಾ ಆದ ಪ್ರಿಯಾಂಕಾ ನಿನ್ನ ತೋಳಿನಲ್ಲಿ ನಾನು ಸಾಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

  • ಮುಂಬೈ, ಗೋವಾದಲ್ಲಿನ ಆಸ್ತಿ ಮಾರಿ ವಿದೇಶದಲ್ಲಿ ಸೆಟಲ್ ಆದ ದೇಸಿ ಗರ್ಲ್

    ಮುಂಬೈ, ಗೋವಾದಲ್ಲಿನ ಆಸ್ತಿ ಮಾರಿ ವಿದೇಶದಲ್ಲಿ ಸೆಟಲ್ ಆದ ದೇಸಿ ಗರ್ಲ್

    ಮುಂಬೈ: ವಿವಾಹದ ಬಳಿಕ ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ಮತ್ತು ಮುಂಬೈನಿಂದ ದೂರ ಉಳಿದಿದ್ದಾರೆ. ಸದ್ಯ ಹಾಲಿವುಡ್ ಸಿನಿಮಾಗಳತ್ತ ಹೆಚ್ಚು ಮುಖ ಮಾಡಿರುವ ಪ್ರಿಯಾಂಕ ಹಿಂದಿಯಲ್ಲಿ ಕೆಲವು ಆಯ್ದ ಸಿನಿಮಾಗಳಲ್ಲಿ ಮಾತ್ರ ಅಭಿನಯಿಸುತ್ತಿದ್ದಾರೆ.

    ಮುಂಬೈ ಮತ್ತು ಗೋವಾದಲ್ಲಿ ಅನೇಕ ಪ್ರಾಪರ್ಟಿಗಳನ್ನು ಹೊಂದಿರುವ ಪ್ರಿಯಾಂಕ ಚೋಪ್ರಾ ಇದೀಗ ತಮ್ಮ ಎರಡು ಅಪಾರ್ಟ್‍ಮೆಂಟ್‍ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಸುದ್ದಿ ವೈರಲ್ ಆಗುತ್ತಿದೆ. ಸದ್ಯ ಎಂಜಲೀಸ್‍ನಲ್ಲಿ ವಾಸಿಸುತ್ತಿರುವ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಜುಲೈ 19ರಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.

    ಸದ್ಯ ಪ್ರಿಯಾಂಕ ಚೋಪ್ರಾ ಇದೀಗ ಮುಂಬೈನಲ್ಲಿರುವ ತಮ್ಮ 2 ಅಪಾರ್ಟ್‍ಮೆಂಟ್‍ನನ್ನು ಮಾರಾಟ ಮಾಡುತ್ತಿದ್ದು, ಅಂಧೇರಿ ಪಶ್ಚಿಮದ ಒಶಿವಾರಾದ ವಾಸ್ತು ಪ್ರೆಸಿಂಕ್ಟ್ ನಲ್ಲಿ ತಮ್ಮ ಕಚೇರಿಗಾಗಿ 2.11 ಲಕ್ಷಕ್ಕೆ ಭೋಗ್ಯ ನೀಡಿದ್ದಾರೆ. ಇನ್ನೂ ಈ ಎಲ್ಲಾ ವ್ಯವಹಾರಗಳನ್ನು ಪ್ರಿಯಾಂಕ ಚೋಪ್ರಾರವರ ತಾಯಿ ಮಧು ಚೋಪ್ರಾ ನಿಭಾಯಿಸುತ್ತಿದ್ದಾರೆ.

    ಪ್ರಿಯಾಂಕ ಚೋಪ್ರಾ ಅಂಧೇರಿ ವೆಸ್ಟ್ ನ ರಾಜ್ ಕ್ಲಾಸಿಕ್ ವರ್ಸೊವಾದಲ್ಲಿರುವ ತಮ್ಮ ಎರಡು ಅಪಾರ್ಟ್‍ಮೆಂಟ್‍ಗಳನ್ನು 7 ಕೋಟಿ ರೂ.ಗೆ ಮಾರಿದ್ದು, ಈ ಕುರಿತು 2021ರ ಮಾರ್ಚ್ 26ರಂದು ಒಪ್ಪಂದ ಮಾಡಿಕೊಟ್ಟಿದ್ದರು. ಕಳೆದ ವರ್ಷ ಕೂಡ ಮುಂಬೈನ ಅಂಧೇರಿಯ ಲೋಖಂಡ್ವಾಲಾ ಕಾಂಪ್ಲೆಕ್ಸ್‌ನಲ್ಲಿರುವ ಕರಣ್ ಅಪಾರ್ಟ್‍ಮೆಂಟ್‍ನನ್ನು ಸಹ ಮಾರಿದ್ದರು.

    ಜುಹುವಿನಲ್ಲಿಯೂ ಕೂಡ ಪ್ರಿಯಾಂಕ ಮನೆಯನ್ನು ಹೊಂದಿದ್ದು, 2018ರಲ್ಲಿ ರೋಕಾ ಕಾರ್ಯಕ್ರಮ ಇಲ್ಲಿಯೇ ನಡೆದಿತ್ತು. ಗೋವಾದ ಬಾಗಾ ಬೀಚ್ ಬಳಿ ಕೂಡ ಪ್ರಿಯಾಂಕ ಮನೆ ಹೊಂದಿದ್ದಾರೆ. ಇದನ್ನೂ ಓದಿ:407 ಸಿನಿಮಾ ಹೆಸರನ್ನು ಬಳಸಿ ಸ್ಟಾರ್ ನಟನ ಭಾವಚಿತ್ರ – ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಅಭಿಮಾನಿ ಹೆಸರು

  • ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಪ್ರಿಯಾಂಕಾ ಚೋಪ್ರಾ

    ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಪ್ರಿಯಾಂಕಾ ಚೋಪ್ರಾ

    ವಾಷಿಂಗ್ಟನ್: ಬಾಲಿವುಡ್‍ ನಟಿ ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‍ನಲ್ಲಿ ರೆಸ್ಟೋರೆಂಟ್ ಒಂದನ್ನು ಆರಂಭಿಸಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by SONA (@sonanewyork)

    ಈ ಹೋಟೆಲ್‍ಗೆ ಸೋನಾ ಎಂದು ಪ್ರಿಯಾಂಕಾ ಹೆಸರು ಇಟ್ಟಿದ್ದಾರೆ. ಇದು ಕೇವಲ ರೆಸ್ಟೋರೆಂಟ್ ಮಾತ್ರವಲ್ಲ, ನನ್ನ ಕನಸು ಕೂಡ. ನಾನು ಸೋನಾದಲ್ಲಿದ್ದೇನೆ ಎಂಬುದನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ. 3 ವರ್ಷದ ಪ್ಲ್ಯಾನಿಂಗ್‍ನಿಂದ ಈ ರೆಸ್ಟೋರೆಂಟ್ ಸಿದ್ಧಗೊಂಡಿದೆ. ಕಿಚನ್‍ಗೆ ತೆರಳಿ ತಂಡವನ್ನು ಮೀಟ್ ಮಾಡೋಕೆ ನಾನು ಉತ್ಸುಕಳಾಗಿದ್ದೇನೆ. ಸೋನಾ ಒಂದು ಅದ್ಭುತ ಅನುಭವ. ನನಗಾಗಿ ವಿಶೇಷ ಡೈನಿಂಗ್ ಹಾಲ್ ಮಾಡಿಕೊಂಡಿದ್ದೇನೆ. ಇಲ್ಲಿ ಅದ್ಭುತ ಆಹಾರ ಸಿಗಲಿದೆ ಸೋನಾದ ಅನುಭವ ಭಿನ್ನವಾಗಿರಲಿದೆ ಎಂದು ಬರೆದುಕೊಂಡು ಹೋಟೆಲ್ ಎದುರು ನಿಂತು ಫೋಟೋವನ್ನು ಕ್ಲಿಕ್ಕಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಅಮೆರಿಕದ ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಕೂಡ ಅಮೆರಿಕದಲ್ಲೇ ಸೆಟ್ಲ್ ಆಗಿದ್ದಾರೆ. ಭಾರತಕ್ಕಿಂತಲೂ ಅವರು ಅಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಬಾಲಿವುಡ್‍ಗಿಂತಲೂ ಹೆಚ್ಚಾಗಿ ಹಾಲಿವುಡ್ ಮಂದಿಯ ಜೊತೆ ಅವರ ಒಡನಾಟ ಬೆಳೆದಿದೆ. ಹಾಗೆಯೇ ಅಮೆರಿಕದ ಜನರ ಜೊತೆಗೆ ಅವರು ಬೆರೆತುಹೋಗಿದ್ದಾರೆ. ಈಗ ಅವರು ಹೋಟೆಲ್ ಕೂಡ ಆರಂಭಿಸಿದ್ದಾರೆ. ನಟ ಸೋನು ಸೂದ್ ಸೇರಿ ಸಾಕಷ್ಟು ಸ್ಟಾರ್‍ಗಳು ಹೋಟೆಲ್ ಉದ್ಯಮ ಹೊಂದಿದ್ದಾರೆ. ಈ ಸಾಲಿಗೆ ಈಗ ಪ್ರಿಯಾಂಕಾ ಕೂಡ ಸೇರ್ಪಡೆಯಾಗಿದ್ದಾರೆ.

  • ಕೊಹ್ಲಿ, ಸಲ್ಲುವನ್ನು ಮೀರಿಸಿದ ಪ್ರಿಯಾಂಕ, ಸನ್ನಿ- ಗೂಗಲ್‍ನಲ್ಲಿ ನಂ.1 ಯಾರು ಗೊತ್ತಾ?

    ಕೊಹ್ಲಿ, ಸಲ್ಲುವನ್ನು ಮೀರಿಸಿದ ಪ್ರಿಯಾಂಕ, ಸನ್ನಿ- ಗೂಗಲ್‍ನಲ್ಲಿ ನಂ.1 ಯಾರು ಗೊತ್ತಾ?

    – ಪಟ್ಟಿಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಹೆಸರು

    ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರಿಗಿಂತ ಜಾಸ್ತಿ ಗೂಗಲ್‍ನಲ್ಲಿ ಬಾಲಿವುಡ್‍ನ ಹಾಟ್ ಬೆಡಗಿಯರಾದ ಪ್ರಿಯಾಂಕ ಚೋಪ್ರಾ ಮತ್ತು ಸನ್ನಿ ಲಿಯೋನ್ ಅವರನ್ನು ಸರ್ಚ್ ಮಾಡಲಾಗಿದೆ.

    ಭಾರತದಲ್ಲಿ ಗೂಗಲ್‍ನಲ್ಲಿ ಯಾರು ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಎಂಬ ಪಟ್ಟಿಯನ್ನು ಎಸ್‍ಇಎಂ ರಶ್ ಸ್ಟಡಿ (ಗ್ಲೋಬಲ್ ಡಾಟಾ ವಿಶ್ಲೇಷಣಾ ಸಂಸ್ಥೆ) ಬಿಡುಗಡೆ ಮಾಡಿದೆ. ಇದರ ಪ್ರಕಾರ ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪೈಕಿ ಪ್ರಿಯಾಂಕ ಚೋಪ್ರಾ ನಂಬರ್ ಒನ್ ಸ್ಥಾನದಲ್ಲಿ ಇದ್ದಾರೆ. ನಂತರ ಎರಡನೇ ಸ್ಥಾನದಲ್ಲಿ ಸನ್ನಿ ಲಿಯೋನ್ ಇದ್ದಾರೆ.

    ಕಳೆದ ಕೆಲ ವರ್ಷದಿಂದಲೂ ಸನ್ನಿ ಲಿಯೋನ್ ಅವರು ಗೂಗಲ್‍ನಲ್ಲಿ ಹೆಚ್ಚು ಹುಡುಕಲ್ಪಟ್ಟ ತಾರೆಯಾಗಿ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಮಾತ್ರ ಗ್ಲೋಬಲ್ ಸ್ಟಾರ್ ಆಗಿರುವ ಪ್ರಿಯಾಂಕ ಚೋಪ್ರಾ ಅವರು ಈ ಪಟ್ಟಿಯಲ್ಲಿ ನಂಬರ್ ಒನ್ ಆಗಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಹಿಂದಕ್ಕಿದ್ದಾರೆ. ಈ ಬಾರಿ ಸ್ವಲ್ಪ ಕಡಿಮೆ ಸರ್ಚ್ ಆಗಿರುವ ಸನ್ನಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

    ಬಾಲಿವುಡ್‍ನಲ್ಲಿ ರಾಣಿಯಾಗಿ ಮೆರೆದು ಈಗ ಹಾಲಿವುಡ್‍ನಲ್ಲೂ ನಟಿಸಿ ಸೈ ಅನಿಸಿಕೊಂಡಿರುವ ಪ್ರಿಯಾಂಕ ಕಳೆದ ವರ್ಷ ಮದುವೆಯಾಗಿದ್ದರು. ಅವರ ಮದುವೆಯ ಸುದ್ದಿ ಸಖತ್ ವೈರಲ್ ಆಗಿತ್ತು ಈ ಕಾರಣದಿಂದ ಅವರನ್ನು ಹೆಚ್ಚು ಸರ್ಚ್ ಮಾಡಲಾಗಿದೆ ಎಂದು ಹೇಳಲಾಗಿದೆ. ಪ್ರಿಯಾಂಕ ಚೋಪ್ರಾ ಅವರನ್ನು ಈ ವರ್ಷ ಸುಮಾರು 39 ಲಕ್ಷ ಬಾರಿ ಗೂಗಲ್‍ನಲ್ಲಿ ಸರ್ಚ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಪ್ರಿಯಾಂಕ ನಂತರ ಎರಡನೇ ಸ್ಥಾನದಲ್ಲಿರುವ ಸನ್ನಿ ಕಳೆದ ಕೆಲ ವರ್ಷಗಳಿಂದ ಈ ಪಟ್ಟಿಯಲ್ಲಿ ಟಾಪ್‍ನಲ್ಲಿ ಇದ್ದರು. ಪಡ್ಡೆ ಹುಡುಗರ ಹಾಟ್ ಫೇವರೆಟ್ ಸನ್ನಿಯನ್ನು ಅವರ ಅಭಿಮಾನಿಗಳು ಗೂಗಲ್‍ನಲ್ಲಿ ಬಹಳ ಸರ್ಚ್ ಮಾಡುತ್ತಿರುತ್ತಾರೆ. ಅಂತೆಯೇ ಈ ಬಾರಿ ಕೂಡ ಅವರನ್ನು ಸುಮಾರು 31 ಲಕ್ಷ ಬಾರಿ ಹುಡುಕಿದ್ದಾರೆ. ಆದರೆ ಇವರಗಿಂತ ಹೆಚ್ಚು ಪ್ರಿಯಾಂಕ ಅವರನ್ನು ಸರ್ಚ್ ಮಾಡಿದ್ದು, ಸನ್ನಿ ಲಿಯೋನ್ ಅವರು ಒಂದು ಸ್ಥಾನ ಕೆಳಗೆ ಇಳಿದಿದ್ದಾರೆ.

    ಈ ಇಬ್ಬರನ್ನು ಬಿಟ್ಟರೆ ಸಲ್ಮಾನ್ ಖಾನ್ ಅವರು ಮೂರನೇ ಸ್ಥಾನದಲ್ಲಿ ಇದ್ದು, ಇವರನ್ನು 21 ಲಕ್ಷ ಬಾರಿ ಗೂಗಲ್‍ನಲ್ಲಿ ಹುಡುಕಲಾಗಿದೆ. ನಂತರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಅವರನ್ನು 20 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ. ಇವರನ್ನು ಬಿಟ್ಟರೆ ಪುರಷರ ಪೈಕಿ ಈ ಪಟ್ಟಿಯಲ್ಲಿ, ರೋಹಿತ್ ಶರ್ಮಾ, ಅಲ್ಲು ಅರ್ಜುನ್, ಶಾರುಖ್ ಖಾನ್, ಟೈಗರ್ ಶ್ರಾಫ್, ವಿಜಯ್ ದೇವರಕೊಂಡ, ಎಂ.ಎಸ್.ಧೋನಿ, ಮತ್ತು ಮಹೇಶ್ ಬಾಬು ಇದ್ದಾರೆ.

    ಸನ್ನಿ ಮತ್ತು ಪ್ರಿಯಾಂಕ ಅವರನ್ನು ಬಿಟ್ಟರೆ ಮಹಿಳೆಯರ ಪೈಕಿ ಕತ್ರಿನಾ ಕೈಫ್ ಅವರನ್ನು ಹೆಚ್ಚು ಸರ್ಚ್ ಮಾಡಲಾಗಿದೆ. ಇವರನ್ನು 19 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ. ಈ ಮೂವರನ್ನು ಬಿಟ್ಟರೆ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್, ದಿಶಾ ಪಟಾನಿ, ಸಾರಾ ಅಲಿ ಖಾನ್, ಕರೀನಾ ಕಪೂರ್ ಖಾನ್, ಶ್ರದ್ಧಾ ಕಪೂರ್, ಮತ್ತು ರಶ್ಮಿಕಾ ಮಂದಣ್ಣ ಇದ್ದಾರೆ.

  • ಗಂಡನ ತುಟಿಗೆ ಮುತ್ತಿಟ್ಟು  ಲಿಪ್‍ಸ್ಟಿಕ್ ಒರೆಸಿದ ಪ್ರಿಯಾಂಕ – ವಿಡಿಯೋ

    ಗಂಡನ ತುಟಿಗೆ ಮುತ್ತಿಟ್ಟು ಲಿಪ್‍ಸ್ಟಿಕ್ ಒರೆಸಿದ ಪ್ರಿಯಾಂಕ – ವಿಡಿಯೋ

    ವಾಷಿಂಗ್ಟನ್: ಬಾಲಿವುಡ್ ಬ್ಯೂಟಿಫುಲ್ ಜೋಡಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಪರಸ್ಪರ ಲಿಪ್‍ಲಾಕ್ ಮಾಡಿಕೊಂಡಿದ್ದು, ಕೊನೆಯಲ್ಲಿ ಪ್ರಿಯಾಂಕ ಪತಿಯ ತುಟಿ ಒರೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಇತ್ತೀಚೆಗೆ ಅಮೆರಿಕದಲ್ಲಿ ನಡೆದ 77 ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕ ಮತ್ತು ನಿಕ್ ಜೋಡಿ ನಿರೂಪಕರು ಹೇಳಿದಂತೆ ಲಿಪ್ ಲಾಕ್ ಮಾಡಿದ್ದಾರೆ. ಈ ವೇಳೆ ಪ್ರಿಯಾಂಕ ಹಾಕಿದ್ದ ರೆಡ್ ಕಲರ್ ಲಿಪ್‍ಸ್ಟಿಕ್ ನಿಕ್ ತುಟಿಗೆ ಅಂಟಿಕೊಂಡಿದ್ದು, ಇದನ್ನು ಸ್ವತಃ ಪ್ರಿಯಾಂಕ ಅವರೇ ಒರೆಸಿದ್ದಾರೆ.

    https://www.instagram.com/p/B690uF7peSI/?utm_source=ig_embed

    77 ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪಿಂಕ್ ಕಲರ್ ಗೌನ್ ತೊಟ್ಟು ಬಂದಿದ್ದ ಪ್ರಿಯಾಂಕ ಸಖತ್ ಸ್ಟೈಲಿಶ್ ಲುಕ್‍ನಲ್ಲಿ ಮಿಂಚುತ್ತಿದ್ದರು. ಜೊತೆಗೆ ಬಂದಿದ್ದ ಪತಿ ನಿಕ್ ಜೊನಸ್ ಕಪ್ಪು ಬಣ್ಣದ ಸೂಟ್ ಧರಿಸಿ ಬಂದಿದ್ದರು. 77 ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಅತ್ಯುತ್ತಮ ಟಿವಿ ಸರಣಿ – ಸಂಗೀತ ಅಥವಾ ಹಾಸ್ಯ ಪ್ರಶಸ್ತಿಯನ್ನು ನೀಡಿದರು.

    ಈ ಸಮಾರಂಭಕ್ಕೆ ಆಗಮಿಸಿದ ಪ್ರಿಯಾಂಕ ಮತ್ತು ನಿಕ್ ಜೋಡಿಯನ್ನು ಆರಂಭದಲ್ಲೇ ರೆಡ್ ಕಾರ್ಪೆಟ್ ನಿರೂಪಕರು ಅಡ್ಡಗಟ್ಟಿ ಮಾತನಾಡಿಸಿದರು. ಈ ವೇಳೆ ನಿರೂಪಕನೋರ್ವ ನೀವು ಈಗ ನಿಮ್ಮ ಪತಿಗೆ ಇಲ್ಲಿಯೇ ಮುತ್ತು ಕೊಡಿ ಎಂದು ಹೇಳುತ್ತಾರೆ. ಆಗ ನಿಕ್ ಮುತ್ತು ಕೊಡಲು ಮುಂದೆ ಬರುತ್ತಾರೆ. ಆಗ ಹಿಂದೆ ಹೋದ ಪ್ರಿಯಾಂಕ ನಂತರ ಪತಿಯ ತುಟಿಗೆ ಮುತ್ತು ನೀಡುತ್ತಾರೆ. ಆಗ ಪ್ರಿಯಾಂಕ ಹಾಕಿದ್ದ ಕೆಂಪು ಬಣ್ಣದ ಲಿಪ್‍ಸ್ಟಿಕ್ ನಿಕ್ ಅವರ ತುಟಿಗೆ ಅಂಟಿಕೊಳ್ಳುತ್ತದೆ. ಆಗ ಪ್ರಿಯಾಂಕ ಅವರು ಅದನ್ನು ಒರೆಸುತ್ತಾರೆ.

    https://www.instagram.com/p/B691iIXAE6D/?utm_source=ig_embed

    ಈ ಜೊಡಿ 2018 ಡೆಸೆಂಬರ್ ಒಂದರಲ್ಲಿ ಮದುವೆಯಾಗಿತ್ತು. ಕಳೆದ ಡಿಸೆಂಬರ್ 1 ಗೆ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವನ್ನು ಆಚರಿಸಿಕೊಂಡಿದ್ದ ನಿಕ್ ಪ್ರಿಯಾಂಕ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಪರಸ್ಪರ ಶುಭಾಶಯ ಕೋರಿಕೊಂಡಿದ್ದರು.

  • ‘ನಿಕ್’ಗೆ ದೇಸಿ ನೇಮ್ ಇಟ್ಟ ಪ್ರಿಯಾಂಕ

    ‘ನಿಕ್’ಗೆ ದೇಸಿ ನೇಮ್ ಇಟ್ಟ ಪ್ರಿಯಾಂಕ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಸ್ ಗೆ ಹೊಸ ದೇಸಿ ಹೆಸರಿಟ್ಟಿದ್ದಾರೆ.

    ದೇಸಿ ಗರ್ಲ್ ಎಂದೇ ಕರೆಸಿಕೊಳ್ಳುವ ಪ್ರಿಯಾಂಕ ಚೋಪ್ರಾ 2018ರಲ್ಲಿ ವಿದೇಶಿ ಹುಡುಗನನ್ನು ಮದುವೆಯಾದರು. ಕೆಲವೇ ದಿನಗಳಲ್ಲಿ ಜೋಡಿ ಮೊದಲ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದೆ. ಪ್ರಿಯಾಂಕ ವಾರ್ಷಿಕೋತ್ಸವ ಮುನ್ನವೇ ಪತಿಗೆ ಗಿನೋ ಹೆಸರಿನ ಜರ್ಮನ್ ಶೆಫರ್ಡ್ ನಾಯಿಯನ್ನು ಗಿಫ್ಟ್ ನೀಡಿದ್ದಾರೆ.

    https://www.instagram.com/p/B5WDDuNH0Bs/

    ಗಿಫ್ಟ್ ಪಡೆದಿರುವ ನಿಕ್ ಜೋನಸ್ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಕಮೆಂಟ್ ಮಾಡಿರುವ ಪ್ರಿಯಾಂಕ ವಾರ್ಷಿಕೋತ್ಸವದ ಶುಭಾಶಯಗಳು ಬಾಬು. ನಿಮ್ಮ ಮುಖ ಮಸ್ತ್ ಆಗಿದೆ ಬಾಬು ಎಂದು ಉತ್ತರಿಸಿದ್ದಾರೆ. ಕಮೆಂಟ್ ಮೂಲಕ ಪತಿಗೆ ತಾವು ಪ್ರೀತಿಯಿಂದ ಬಾಬು ಎಂದು ಕರೆಯೋದನ್ನು ಪ್ರಿಯಾಂಕ ರಿವೀಲ್ ಮಾಡಿದ್ದಾರೆ.