Tag: ಪ್ರಿಯಾಂಕ ಚೋಪ್ರ

  • Femina Miss India 2023: 19ರ ಯುವತಿ ನಂದಿನಿ ಗುಪ್ತಾಗೆ ಮಿಸ್ ಇಂಡಿಯಾ ಕಿರೀಟ

    Femina Miss India 2023: 19ರ ಯುವತಿ ನಂದಿನಿ ಗುಪ್ತಾಗೆ ಮಿಸ್ ಇಂಡಿಯಾ ಕಿರೀಟ

    ಇಂಫಾಲ್: ರಾಜಸ್ಥಾನದ ಮೂಲದ 19ರ ಹರೆಯದ ನಂದಿನಿ ಗುಪ್ತಾ (Nandini Gupta) ಅವರು ಈ ಬಾರಿಯ ʻಫೆಮಿನಾ ಮಿಸ್ ಇಂಡಿಯಾ 2023ʼ (Femina Miss India 2023) ಕಿರೀಟ ಧರಿಸಿದ್ದಾರೆ.

     

    View this post on Instagram

     

    A post shared by Femina Miss India (@missindiaorg)

    ದೆಹಲಿ ಮೂಲದ ಶ್ರೇಯಾ ಪೂಂಜಾ (Shreya Poonja) ಅವರು ಮೊದಲ ರನ್ನರ್ ಅಪ್ ಆಗಿದ್ದರೆ, ಮಣಿಪುರ ಮೂಲದ ತೌನೊಜಮ್ ಸ್ಟ್ರೆಲಾ ಅವರು 2ನೇ ರನ್ನರ್ ಅಪ್ ಸ್ಥಾನಕ್ಕೆ ಭಾಜನರಾಗಿದ್ದಾರೆ. ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – ನಾಲ್ವರು ಭಾರತೀಯರು ಸೇರಿದಂತೆ 16 ಮಂದಿ ಸಾವು

    ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮಿಸ್ ಇಂಡಿಯಾ ಆಯೋಜಕರು ಮಾಹಿತಿ ಹಂಚಿಕೊಂಡಿದ್ದು, ‘ಈ ಎಲ್ಲ ಮಹಿಳೆಯರು ತುಂಬಾ ಪವರ್‌ಫುಲ್ ಆದ ದನಿ ಹೊಂದಿದ್ದಾರೆ. ಅವರು ನಂಬುವ ಎಲ್ಲಾ ವಿಚಾರಗಳನ್ನ ಸಾಕಾರಗೊಳಿಸಲು ಈ ವೇದಿಕೆಯನ್ನು ಅವರು ಬಳಸಿಕೊಂಡಿದ್ದಾರೆ ಅನ್ನೋದು ನಮಗೆ ಖಚಿತವಾಗಿದೆ. ಈ ಸ್ಥಾನಗಳಿಗೆ ಅವರು ಬರಲು ಪಟ್ಟ ಶ್ರಮವನ್ನ ನಾವು ನೋಡಿದ್ದೇವೆ. ಇವರೆಲ್ಲರಿಗೂ ಶುಭಾಶಯಗಳು. ಇದು ಸಂಭ್ರಮವನ್ನು ಸೆಲೆಬ್ರೇಟ್ ಮಾಡುವ ಸಮಯ.. ಎಂದು ಬರೆದುಕೊಂಡಿದೆ.

    ಯಾರಿದು ನಂದಿನಿ ಗುಪ್ತಾ?
    ನಂದಿನಿ ಮೂಲತಃ ರಾಜಸ್ಥಾನದ ಕೋಟ ನಗರದವರು. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನಂದಿನಿ, ಬ್ಯುಸಿನೆಸ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ ಕೂಡ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

    ನಂದಿನಿ ಗುಪ್ತಾ ಅವರ ಬದುಕಿಗೆ ಹಿರಿಯ ಉದ್ಯಮಿ ರತನ್ ಟಾಟಾ (Ratan Tata) ಅವರು ಸಾಕಷ್ಟು ಸ್ಫೂರ್ತಿಯಾಗಿದ್ದಾರೆ. ಅವರ ಹಾದಿಯಲ್ಲೇ ಮುಂದೆ ಉದ್ಯೋಗಾವಕಾಶಗಳನ್ನ ಸೃಷ್ಟಿಸುವ ಗುರಿ ಹೊಂದಿದ್ದಾರೆ. ಅವರ ಮಾನವೀಯತೆ ಹಾಗೂ ದಾನ ಮಾಡುವ ಗುಣಗಳನ್ನ ಹೆಚ್ಚು ಇಷ್ಟಪಡುತ್ತಾರೆ.

    ಅಲ್ಲದೇ ನಟಿ ಹಾಗೂ ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ (Priyanka Chopra) ಅವರ ಸಾಧನೆಗಳು ಹಾಗೂ ಸಮಾಜಕ್ಕೆ ಏನು ಕೊಡಬೇಕೆಂಬ ಬಗ್ಗೆ ಅವರಿಗಿರುವ ಬದ್ಧತೆಗಳಿಂದಲೂ ನಂದಿನಿ ಹೆಚ್ಚು ಸ್ಫೂರ್ತಿ ಪಡೆದುಕೊಂಡಿದ್ದಾರೆ ಎಂದು ಮಿಸ್‌ ಇಂಡಿಯಾ ಆಯೋಜಕರು ತಿಳಿಸಿದ್ದಾರೆ.

  • ಪ್ರಿಯಾಂಕ-ನಿಕ್ ಮದ್ವೆಗೆ ಪೇಟಾ ಆಕ್ರೋಶ

    ಪ್ರಿಯಾಂಕ-ನಿಕ್ ಮದ್ವೆಗೆ ಪೇಟಾ ಆಕ್ರೋಶ

    ನವದೆಹಲಿ: ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈಗ ಅವರ ವಿರುದ್ಧ ಪೇಟಾ(ಪೀಪಲ್ ಫಾರ್ ಎಥಿಕಲ್ ಟ್ರೀಟ್‍ಮೆಂಟ್ ಆಫ್ ಎನಿಮಲ್ಸ್) ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.

    ಪ್ರಿಯಾಂಕ ತನ್ನ ಗೆಳೆಯ ನಿಕ್ ಜೋನಸ್ ಜೊತೆ ಡಿ.1 ಹಾಗೂ 2ರಂದು ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯದ ಪ್ರಕಾರ ಜೋಧ್‍ಪುರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರಿಯಾಂಕ ಹಾಗೂ ನಿಕ್ ತಮ್ಮ ಮದುವೆಗೆ ಆನೆ ಹಾಗೂ ಕುದುರೆಯನ್ನು ಮೆರವಣಿಗೆಯಲ್ಲಿ ಬಳಸಿದಕ್ಕೆ ಪೇಟಾ ಆಕ್ರೋಶ ವ್ಯಕ್ತಪಡಿಸಿದೆ.

    ಪೇಟಾ ತನ್ನ ಟ್ವಿಟ್ಟರ್ ಖಾತೆಯಲ್ಲಿ, “ಪ್ರೀತಿಯ ಪ್ರಿಯಾಂಕ ಹಾಗೂ ನಿಕ್. ಮದುವೆಗಾಗಿ ಆನೆಗಳನ್ನು ಹಾಗೂ ಕುದುರೆ ಬಳಸುವುದು ಸರಿಯಲ್ಲ. ಏಕೆಂದರೆ ಪ್ರಾಣಿಗಳನ್ನು ಚಾಟಿಯಿಂದ ನಿಯಂತ್ರಿಸಬೇಕಾಗುತ್ತದೆ. ನಿಮ್ಮ ಮದುವೆಗೆ ನಮ್ಮ ಕಡೆಯಿಂದ ಶುಭಾಶಯಗಳು. ಆದರೆ ಈ ದಿನ ಪ್ರಾಣಿಗಳನ್ನು ಬಳಕೆ ಮಾಡಿದ್ದು ಸರಿಯಿಲ್ಲ” ಎಂದು ಟ್ವೀಟ್ ಮಾಡಿದೆ.

    ಪೇಟಾ ಅವರ ಈ ಟ್ವೀಟ್‍ಗೆ ಅಭಿಮಾನಿಯೊಬ್ಬರು ಪ್ರಿಯಾಂಕ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿಲ್ಲ. ಈ ಮೊದಲೇ ನೀವು ಈ ರೀತಿ ಹೇಳುವುದು ಸರಿಯಲ್ಲ ಎಂದು ರೀ-ಟ್ವೀಟ್ ಮಾಡಿದರೆ, ಮತ್ತೊಬ್ಬರು ಭಾರತದಲ್ಲಿ 80% ಜನರು ಮದುವೆ ಮೆರವಣಿಗೆಯಲ್ಲಿ ಕುದುರೆ ಬಳಸುತ್ತಾರೆ ಎಂದು ರೀ-ಟ್ವೀಟ್ ಮಾಡಿದ್ದಾರೆ.

    ಡಿ. 1ರಂದು ಹಾಗೂ 2ರಂದು ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಲ್ಲಿ ಮದುವೆಯಾದ ಬಳಿಕ ಪ್ರಿಯಾಂಕ ತಮ್ಮ ಮದುವೆಯ ಫೋಟೋಗಳನ್ನು ಮೊದಲ ಬಾರಿಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಂಗಳವಾರ ನವದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‍ನಲ್ಲಿ ಪ್ರಿಯಾಂಕ ಹಾಗೂ ನಿಕ್ ಆರತಕ್ಷತೆ ನಡೆದಿದೆ.

    ಆರತಕ್ಷತೆಯಲ್ಲಿ ಪ್ರಿಯಾಂಕ ಸಿಲ್ವರ್ ಬಣ್ಣದ ಲೆಹೆಂಗಾ ಧರಿಸಿದ್ದರೆ, ನಿಕ್ ಕಪ್ಪು ಬಣ್ಣದ ಉಡುಪನ್ನು ಧರಿಸಿ ಮಿಂಚಿದ್ದಾರೆ. ಇವರಿಬ್ಬರ ಆರತಕ್ಷತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿ ನವಜೋಡಿಯನ್ನು ಶುಭ ಕೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದೇಶಿ ಹುಡ್ಗನನ್ನು ವರಿಸಿದ ದೇಸಿ ಹುಡುಗಿ

    ವಿದೇಶಿ ಹುಡ್ಗನನ್ನು ವರಿಸಿದ ದೇಸಿ ಹುಡುಗಿ

    -ಸತಿಪತಿಗಳಾದ ನಿಕ್-ಪ್ರಿಯಾಂಕ

    ಜೋಧ್‍ಪುರ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಗಾಯಕ ನಿಕ್ ಜೋನ್ಸ್ ಕೊನೆಗೂ ಸತಿಪತಿಗಳಾಗಿದ್ದಾರೆ. ಜೋಧಪುರದ ಉಮೈದ್ ಭವನದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದ ಜೋಡಿ ಇಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ.

    ಜೋಧ್‍ಪುರದ ಉಮೇದ್ ಭವನ್ ಅರಮನೆಯ ಹೋಟೆಲ್‍ನಲ್ಲಿ ಶನಿವಾರ ಉಂಗುರ ಬದಲಿಸಿಕೊಳ್ಳುವ ಮೂಲಕ ನಿಕ್-ಪ್ರಿಯಾಂಕ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ರು. 36 ವರ್ಷದ ಪ್ರಿಯಾಂಕ ಮಧುಮಗಳ ರಾಲ್ಪ್ ಗೌನ್‍ನಲ್ಲಿ ಮಿಂಚುತ್ತಿದ್ರೆ, ನಿಕ್ ಜೋನ್ಸ್ ಅದೇ ಡಿಸೈನರ್ ಲೇಬಲ್ ಇರೋ ಉಡುಗೆ ಧರಿಸಿದ್ರು.. ಇಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಲಿರುವ ಜೋಡಿಗೆ ಈಗಾಗಲೇ ಗಣ್ಯಾತಿಗಣ್ಯರು ಶುಭ ಹಾರೈಸಿದ್ದಾರೆ.. ಮದುವೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗಿಯಾಗಲಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಹಾಗೂ ಅಭಿಮಾನಿಗಳಿಗಾಗಿ ಮೆಹೆಂದಿ ಹಾಗೂ ಸಂಗೀತ ಕಾರ್ಯಕ್ರಮದ ಫೋಟೋವನ್ನು ಇನ್‍ಸ್ಟ್ರಾಗಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ನಿಕ್ ಜೋನ್ಸ್ ಕೂಡ ಟ್ವಿಟ್ಟರ್ ನಲ್ಲಿ ಮದುವೆ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಮದುವೆಯಲ್ಲಿ ಕಲ್ಯಾಣ ಮಂಟಪಕ್ಕೆ ಹೆಲಿಕಾಪ್ಟರ್ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರಂತೆ. ಮದುವೆಗೆ ಆಗಮಿಸುವ ಅತಿಥಿಗಳನ್ನು ಸಹ ಹೆಲಿಕಾಪ್ಟರ್ ಮೂಲಕವೇ ಉಮೈದ್ ಭವನಕ್ಕೆ ಕರೆತರಲು ಪ್ರಿಯಾಂಕ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆಗೆ ಆಗಮಿಸಲಿರುವ ಅತಿಥಿಗಳಿಗೆ ಬೆಳ್ಳಿ ನಾಣ್ಯ ನೀಡಲಾಗುತ್ತಿದ್ದು, ಇದನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ನಾಣ್ಯದ ಒಂದು ಬದಿಯಲ್ಲಿ ಇಂಗ್ಲಿಷ್ ವರ್ಣಮಾಲೆಯ ಎನ್‍ಪಿ ಎಂದು ಬರೆಯಲಾಗಿದೆ. ಮತ್ತೊಂದು ಮುಖದ ಮೇಲೆ ಲಕ್ಷ್ಮಿ ಹಾಗೂ ಗಣೇಶನ ಚಿತ್ರ ಬಿಡಿಸಲಾಗಿದೆ

    ಇತ್ತೀಚೆಗೆ ಬಾಲಿವುಡ್ ಜೋಡಿ ದೀಪಿಕಾ, ರಣವೀರ್ ಇಟಲಿಯಲ್ಲಿ ಮದುವೆಯಾಗಿದ್ದರು. ಅವರ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ ಆತ್ಮೀಯರಿಗೆ ದೀಪ್‍ವೀರ್ ಜೋಡಿ ಬೆಳ್ಳಿ ಲೇಪಿತ ಫೋಟೋ ಫ್ರೇಮ್‍ನಲ್ಲಿ ಇಬ್ಬರ ಫೋಟೋ ಹಾಕಿ ಉಡುಗೊರೆ ನೀಡಿದ್ದರು.

  • ಪ್ರಿಯಾಂಕ ಮನೆಯಲ್ಲಿ ಮದುವೆ ಸಂಭ್ರಮ

    ಪ್ರಿಯಾಂಕ ಮನೆಯಲ್ಲಿ ಮದುವೆ ಸಂಭ್ರಮ

    ಮುಂಬೈ: ಬಾಲಿವುಡ್ ಅಂಗಳದಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಿದೆ. ಪ್ರಿಯಾಂಕ ಚೋಪ್ರ ಅಮೆರಿಕ ಗಾಯಕ ನಿಕ್ ಜೋನ್ಸ್ ಅವರನ್ನು ಇದೇ ತಿಂಗಳಲ್ಲಿ ಮದುವೆ ಆಗಲಿದ್ದಾರೆ. ಹೀಗಾಗಿ ಮುಂಬೈನಲ್ಲಿರುವ ಪ್ರಿಯಾಂಕ ಮನೆ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿದೆ.

    ಪ್ರಿಯಾಂಕ ಮತ್ತು ನಿಕ್ ಈಗಾಗಲೇ ಬ್ಯಾಚೂಲರ್ ಪಾರ್ಟಿಯಲ್ಲಿ ಬ್ಯುಸಿಯಾಗಿದ್ದಾರೆ. ನಿಕ್ ಜೋನ್ಸ್ ಸಹ ತನ್ನ ಕುಟುಂಬಸ್ಥರೊಂದಿಗೆ ಮುಂಬೈ ತಲುಪಿದ್ದು, ಹಿಂದೂ ಸಂಪ್ರದಾಯದಂತೆ ಡಿಸೆಂಬರ್ 2ರಂದು ಮದುವೆ ನಡೆಯಲಿದೆ.

    ಜೋಧ್‍ಪುರದ ಉಮೈದ್ ಭವನದಲ್ಲಿ ಪ್ರಿಯಾಂಕ ಮತ್ತು ನಿಕ್ ಸಾಂಸರಿಕಾ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಯಲ್ಲಿ ಕಲ್ಯಾಣ ಮಂಟಪಕ್ಕೆ ಹೆಲಿಕಾಪ್ಟರ್ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರಂತೆ. ಮದುವೆಗೆ ಆಗಮಿಸುವ ಅತಿಥಿಗಳನ್ನು ಸಹ ಹೆಲಿಕಾಪ್ಟರ್ ಮೂಲಕವೇ ಉಮೈದ್ ಭವನಕ್ಕೆ ಕರೆತರಲು ಪ್ರಿಯಾಂಕ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯಾಂಕ ಚೋಪ್ರಾ-ನಿಕ್ ಜೋನ್ಸ್ ಮದುವೆ ಫಿಕ್ಸ್

    ಪ್ರಿಯಾಂಕ ಚೋಪ್ರಾ-ನಿಕ್ ಜೋನ್ಸ್ ಮದುವೆ ಫಿಕ್ಸ್

    -ಜೋಧ್‍ಪುರನಲ್ಲಿ ಮದ್ವೆ ಫಿಕ್ಸ್ ಆಗಿದ್ದೇಕೆ?

    ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ನವೆಂಬರ್ 30ರಂದು ಇಂದೋರ್‍ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಅಮೆರಿಕದ ಸಿಂಗರ್ ನಿಕ್ ಜೋನ್ಸ್ ಜೊತೆ ಪ್ರಿಯಾಂಕ ಮದುವೆ ನಡೆಯಲಿದ್ದು, ಸಮಾರಂಭಕ್ಕೆ ಕೇವಲ 200 ಅತಿಥಿಗಳು ಮಾತ್ರ ಭಾಗವಹಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    ಆಗಸ್ಟ್ 18ಕ್ಕೆ ಪ್ರಿಯಾಂಕ ಮತ್ತು ನಿಕ್ ಮುಂಬೈನ ನಿವಾಸದಲ್ಲಿ ಹಿಂದೂ ಸಂಪ್ರದಾಯದಂತೆ ಉಂಗುರ ಬದಲಿಸಿಕೊಂಡಿದ್ದರು. ನಿಶ್ಚಿತಾರ್ಥಕ್ಕೂ ಮೊದಲು ಎಲ್ಲರಂತೆ ಪ್ರಿಯಾಂಕ ಮತ್ತು ನಿಕ್ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಂತಾ ಹೇಳಿಕೊಂಡಿದ್ದರು.

    ಜೋಧ್‍ಪುರನಲ್ಲಿಯೇ ಮದ್ವೆ ಏಕೆ?
    ಇತ್ತೀಚೆಗೆ ಸೆಲೆಬ್ರೆಟಿಗಳು ತಮ್ಮ ಮದುವೆಯನ್ನು ವಿದೇಶದಲ್ಲಿ ಆಗಲು ಪ್ಲಾನ್ ಮಾಡುತ್ತಿದ್ದಾರೆ. ಆದ್ರೆ ಪ್ರಿಯಾಂಕ ಮತ್ತು ನಿಕ್ ಜೋಧಪುರ ನಗರದ ಉಮೈದ್ ಭವನದಲ್ಲಿ ಮದುವೆ ಆಗಲಿದ್ದಾರೆ. ನವೆಂಬರ್ 20ರಿಂದ ಡಿಸೆಂಬರ್ 2ರವರೆಗೆ ಮೂರು ದಿನಗಳವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ನಿಶ್ಚಿತಾರ್ಥಕ್ಕೂ ಮುನ್ನ ಜೋಧ್‍ಪುರ ನಗರಕ್ಕೆ ಭೇಟಿ ನೀಡಿದ್ದಾಗ ನಿಕ್ ಸ್ಥಳವನ್ನು ಮೆಚ್ಚಿಕೊಂಡಿದ್ದರು. ಹಾಗಾಗಿ ನಿಕ್ ಅಂದೇ ತಮ್ಮ ಮದುವೆ ಜೋಧ್‍ಪುರದಲ್ಲಿಯೇ ನಡೆಯಬೇಕೆಂದು ನಿರ್ಧರಿಸಿದ್ದರಂತೆ.

    ನವೆಂಬರ್ 30ರಂದು ಅದ್ಧೂರಿಯಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ವಿಧಿವಿಧಾನಗಳು ನಡೆಯಲಿವೆ. ಮದುವೆ ಬಳಿಕ ನ್ಯೂಯಾರ್ಕ್ ನಲ್ಲಿ ಪ್ರಿಯಾಂಕ ಮತ್ತು ನಿಕ್ ಔತಣಕೂಟವನ್ನು ಏರ್ಪಡಿಸಲಿದ್ದಾರೆ. ನಿಕ್ ಅಪಾರ ಕುಟುಂಬಸ್ಥರು ಮತ್ತು ಸ್ನೇಹಿತರ ಬಳಗ, ಪ್ರಿಯಾಂಕ ಸಿನಿಮಾ ಸ್ನೇಹಿತರಿಗಾಗಿಯೇ ಈ ವಿಶೇಷ ಔತಣಕೂಟ ಆಯೋಜಿಸಲಾಗಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಂಗುರ ಬದಲಿಸಿಕೊಂಡ ಪ್ರಿಯಾಂಕ ಚೋಪ್ರಾ-ನಿಕ್ ಜೋನ್ಸ್

    ಉಂಗುರ ಬದಲಿಸಿಕೊಂಡ ಪ್ರಿಯಾಂಕ ಚೋಪ್ರಾ-ನಿಕ್ ಜೋನ್ಸ್

    ಮುಂಬೈ: ಬಾಲಿವುಡ್ ನ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕಾದ ಗಾಯಕ ನಿಕ್ ಜೋನ್ಸ್ ಜೊತೆ ಇಂದು ಉಂಗುರ ಬದಲಿಸಿಕೊಂಡಿದ್ದಾರೆ.

    ಪ್ರಿಯಾಂಕರ ಮುಂಬೈನ ನಿವಾಸದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಇಂದು ನಡೆದಿದೆ. ಭಾರತೀಯ ಸಂಪ್ರದಾಯದಂತೆ ನಡೆದ ಕಾರ್ಯಕ್ರಮದಲ್ಲಿ ಪ್ರಿಯಾಂಕ ಹಳದಿ ಬಣ್ಣದ ಡ್ರೆಸ್ ಧರಿಸಿ ಮಿಂಚಿದ್ರೆ, ನಿಕ್ ಶ್ವೇತ ವರ್ಣದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತುಂಬಾ ಖಾಸಗಿಯಾಗಿ ನಡೆದ ಸಮಾರಂಭದಲ್ಲಿ ಕೇವಲ ಆಪ್ತ ಬಂಧುಗಳು ಹಾಗು ಸ್ನೇಹಿತರು ಭಾಗಿಯಾಗಿದ್ದರು ಎಂದು ಮಾಧ್ಯಮಗಳು ಪ್ರಕಟಿಸಿವೆ.

    ಕಳೆದ 6 ತಿಂಗಳನಿಂದ ಪ್ರಿಯಾಂಕ ಮತ್ತು ನಿಕ್ ಜೊತೆ ಜೊತೆಯಾಗಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮಾಧ್ಯಮಗಳು ಈ ಕುರಿತು ಪ್ರಶ್ನಿಸಿದಾಗ ಇಬ್ಬರು ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದರು. ಇಂದು ಅಧಿಕೃತವಾಗಿ ವಿವಾಹದ ಮೊದಲ ಹೆಜ್ಜೆಯನ್ನ ಇರಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ನಟಿಗೆ ಶುಭಕೋರುತ್ತಿದ್ದಾರೆ.

    ಕಳೆದ ಕೆಲವು ದಿನಗಳಿಂದ ಅಮೆರಿಕಾದ ಗಾಯಕ ನಿಕ್ ಜೋನ್ಸ್ ಜೊತೆ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕ ಎಲ್ಲಿಯೂ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿರಲ್ಲ. ಆದರೆ ತಮ್ಮ ಇಬ್ಬರು ಒಬ್ಬರನ್ನೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎಂಬುವುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿತ್ತು. ಇದೇ ವರ್ಷ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಪ್ರಿಯಾಂಕ ಮತ್ತು ನಿಕ್ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು.

    ಸೆಪ್ಟೆಂಬರ್ 16ರಂದು ನಿಕ್ ಹುಟ್ಟು ಹಬ್ಬದ ದಿನದಂದೇ ಇಬ್ಬರು ತಾರೆಯರು ವೈವಾಹಿಕ ಬಂಧನಕ್ಕೆ ಒಳಗಾಗಲಿದ್ದಾರೆ ಎಂಬ ಮತ್ತೊಂದು ಸುದ್ದಿ ಸದ್ಯ ಚಾಲ್ತಿಯಲ್ಲಿದೆ. ತನಗಿಂತ 10 ವರ್ಷ ಚಿಕ್ಕವನಾದ ನಿಕ್‍ರನ್ನು ಪ್ರಿಯಾಂಕ ಮದುವೆ ಆಗತ್ತಾರೆ ಎಂಬ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಮೂಡಿದೆ. ಇತ್ತ ಮದುವೆ ಕೆಲಸಗಳಲ್ಲಿ ಬ್ಯೂಸಿಯಾದ ಕಾರಣವೇ ಸಲ್ಮಾನ್ ನಟಿಸುತ್ತಿರುವ `ಭಾರತ್’ ಸಿನಿಮಾದಿಂದ ಪ್ರಿಯಾಂಕ ಹೊರ ಬಂದಿದ್ದಾರೆ.

    ಆಗಸ್ಟ್ ಮೊದಲ ವಾರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೆಹಲಿಗೆ ಬಂದಿಳಿದ ಪ್ರಿಯಾಂಕ ವಿಮಾನ ನಿಲ್ದಾಣದ ಹೊರಗಡೆ ಮಾಧ್ಯಮಗಳನ್ನು ಕಂಡ ಕೂಡಲೇ ಬೆರಳಲ್ಲಿರುವ ಉಂಗುರವನ್ನು ಮರೆ ಮಾಡಿ ಜೇಬಿನಲ್ಲಿ ಇರಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಅಭಿಮಾನಿಯೊಬ್ಬರ ಮೊಬೈಲ್ ನಲ್ಲಿ ಎಲ್ಲ ದೃಶ್ಯಗಳು ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಹಿಂದೆ ಸಂದರ್ಶನ ಒಂದರಲ್ಲಿ ನನ್ನ ಬೆರಳಲ್ಲಿ ಎಲ್ಲಿಯವರೆಗೂ ಉಂಗುರ ಇರೋದಿಲ್ಲವೋ ಅಂದಿನವರೆಗೆ ನಾನು ಸಿಂಗಲ್ ಎಂದರ್ಥ ಎಂದಿದ್ದ ಪ್ರಿಯಾಂಕ ಈಗ ಉಂಗರವನ್ನು ಮೆರೆ ಮಾಚಿದ್ದು ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಿಯಾಂಕ ಮಿಡ್ ನೈಟ್ ಫೋಟೋ ನೋಡಿದ್ರೆ ಆಶ್ಚರ್ಯ ಪಡ್ತೀರಾ!

    ಪ್ರಿಯಾಂಕ ಮಿಡ್ ನೈಟ್ ಫೋಟೋ ನೋಡಿದ್ರೆ ಆಶ್ಚರ್ಯ ಪಡ್ತೀರಾ!

    ಮುಂಬೈ: ಬಾಲಿವುಡ್‍ನಿಂದ ಹಾಲಿವುಡ್‍ಗೆ ಹೋದ ಪ್ರಿಯಾಂಕ ಚೋಪ್ರ ಕೆಲವು ದಿನಗಳ ಹಿಂದೆ ಮುಂಬೈಗೆ ಬಂದಿದ್ದಾರೆ. ಪ್ರಿಯಾಂಕ ಮತ್ತು ಆಕೆಯ ಸ್ನೇಹಿತರು ಮರೀನ್ ಡ್ರೈವ್‍ಯಲ್ಲಿ ಕೆಲವು ಗಂಟೆಗಳ ಕಾಲ ಕಳೆದಿದ್ದಾರೆ. ಈ ವೇಳೆ ಗೆಳೆಯರೊಂದಿಗೆ ತೆಗೆದುಕೊಂಡಿರುವ ಫೋಟೋ ವೈರಲ್ ಆಗಿದೆ.

    ಪ್ರಿಯಾಂಕ ತೆಗೆದುಕೊಂಡಿರುವ ಫೋಟೋದಲ್ಲಿ ತುಂಬಾ ಸಾದಾರಣ ಹುಡುಗಿಯಂತೆ ಕಾಣಿಸಿಕೊಂಡಿದ್ದು, ಎಲ್ಲರನ್ನು ಚಕಿತಗೊಳಿಸಿದ್ದಾರೆ. ಮುಂಬೈನ ಪ್ರಸಿದ್ಧ ಲಾಲ್‍ಬಾಗ್‍ನ ರಾಜಾ ಗಣೇಶನ ದೇವರ ದರ್ಶನ ಮಾಡಿದ್ದಾರೆ. ಲಾಲ್‍ಬಾಗ್‍ನಲ್ಲಿ ದೇವರ ದರ್ಶನ ಆದ ನಂತರ ಪ್ರಿಯಾಂಕ ಮತ್ತು ಆಕೆಯ ಸ್ನೇಹಿತರು ಮರೀನ್ ಡ್ರೈವ್‍ಯಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದರು.

    ಮರೀನ್ ಡ್ರೈವ್‍ಯಲ್ಲಿ ಪ್ರಿಯಾಂಕ ಮತ್ತು ಅವರ ಸ್ನೇಹಿತರು ಕೆಲ ಹೊತ್ತು ಕಾಲ ಕಳೆಯಲು ಹಾಗೂ ಜನರ ಕಣ್ಣಿಗೆ ಕಾಣಿಸದಿರಲು ಮಧ್ಯ ರಾತ್ರಿಯಲ್ಲಿ ಹೋಗಲು ನಿರ್ಧರಿಸಿದ್ದರು. ನಮಗೆಲ್ಲ ಗೊತ್ತಿರೋ ಹಾಗೆ ಮುಂಬೈ ಯಾವತ್ತೂ ಮಲಗುವುದಿಲ್ಲ. ಮರೀನ್ ಡ್ರೈವ್‍ಯಲ್ಲಿ ಪ್ರಿಯಾಂಕ ಅಂತಹ ದೊಡ್ಡ ನಟಿ ಕಾಲ ಕಳೆಯುವುದು ಕಷ್ಟ ಅಲ್ಲ ಅಸಾಧ್ಯ. ಆದರೆ ಪ್ರಿಯಾಂಕ ಮತ್ತು ಆಕೆಯ ಸ್ನೇಹಿತರಾದ ಮುಶ್‍ತಕ್ ಶೇಕ್ ಮತ್ತು ತಮನ್ನಾ ದತ್ತ್ ಜೊತೆ ಮಧ್ಯರಾತ್ರಿಯಲ್ಲಿ ಸಮುದ್ರದ ದಡದಲ್ಲಿ ಕಾಲ ಕಳೆದಿದ್ದಾರೆ.

    ಪ್ರಿಯಾಂಕ ಮತ್ತು ಸ್ನೇಹಿತರು ಮೊದಲು ಲಾಲ್‍ಬಾಗ್ ಚಾರಾಜಾದಲ್ಲಿ ಗಣೇಶನ ದರ್ಶನ ಆದ ನಂತರ ತಮ್ಮ ಪ್ಲಾನ್‍ನ ಪ್ರಕಾರ ಮರೀನ್ ಡ್ರೈವ್‍ಗೆ ಹೋಗಿದ್ದರು. ಮೊದಲು ಅವರು ಕುಫೀಯಾ ಮಿಷನ್‍ನಿಂದ ಮರೀನ್ ಡ್ರೈವ್‍ಗೆ ಹೋಗಲು ನಿರ್ಧರಿಸಿದ್ದರು. ಮರೀನ್ ಡ್ರೈವ್‍ಗೆ ಹೋಗಿದ್ದಾಗ ನನಗಾಗಿ ಜನರು ಇಲ್ಲದ ಜಾಗವನ್ನು ಹುಡುಕಿದ್ದರು. ನಾನು ನನ್ನ ಮುಖವನ್ನು ಮುಚ್ಚಿಕೊಳ್ಳಲು ದುಪ್ಪಟಾವನ್ನು ಉಪಯೋಗಿಸಿದ್ದೆ. ಆ ಕ್ಷಣ ತುಂಬಾನೇ ಸ್ಪೇಷಲ್ ಆಗಿತ್ತು ಏಕೆಂದರೆ ಬೇರೆ ವೇಶದಲ್ಲಿ ಹೋಗುವುದು ನನಗೆ ಇಷ್ಟವಿರಲಿಲ್ಲ. ಗೆಳೆಯರೊಂದಿಗೆ ಕಳೆದರೂ ಸಮಯ ನನಗೆ ಸಂತೋಷವನ್ನು ತಂದಿದೆ ಎಂದು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    https://www.instagram.com/p/BYT7LXPgzvQ/?taken-by=priyankachopra

    https://www.instagram.com/p/BYT5adIAy1w/?taken-by=priyankachopra

    https://www.instagram.com/p/BYTlSABAppM/?taken-by=priyankachopra

    https://www.instagram.com/p/BYVF2YWjqIu/?taken-by=mushtaqshiekh

    https://www.instagram.com/p/BYT4ohdHksl/?taken-by=sudeepdutt