Tag: ಪ್ರಿಯಾಂಕ ಚತುರ್ವೇದಿ

  • ಪ್ರತಿಪಕ್ಷ ನಾಯಕರನ್ನು ಪ್ರಾಂಕ್‌ ಮಾಡಿರಬಹುದು – ಪಿಯೂಷ್ ಗೋಯಲ್ ವ್ಯಂಗ್ಯ

    ಪ್ರತಿಪಕ್ಷ ನಾಯಕರನ್ನು ಪ್ರಾಂಕ್‌ ಮಾಡಿರಬಹುದು – ಪಿಯೂಷ್ ಗೋಯಲ್ ವ್ಯಂಗ್ಯ

    ನವದೆಹಲಿ: ಕೇಂದ್ರ ಸರ್ಕಾರಕ್ಕೆ (Union Government) ಫೋನ್‌ ಕದ್ದಾಲಿಕೆ ಮಾಡುವ ಅವಶ್ಯಕತೆಯಿಲ್ಲ. ಬಹುಶಃ ವಿರೋಧ ಪಕ್ಷಗಳ ನಾಯಕರನ್ನು ಯಾರಾದರೂ ಪ್ರಾಂಕ್‌ ಮಾಡಿರಬಹುದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ವ್ಯಂಗ್ಯವಾಡಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಕೆಲ ಪ್ರತಿಪಕ್ಷ ನಾಯಕರಿಗೆ ಆಪಲ್‌ನಿಂದ (Apple) ಸರ್ಕಾರಿ ಪ್ರಾಯೋಜಕತ್ವದ ದಾಳಿ ನಡೆಯುತ್ತಿದೆ ಎಂಬ ಆರೋಪವನ್ನ ತಳ್ಳಿಹಾಕಿದ್ದಾರೆ. ಬಹುಶಃ ವಿರೋಧ ಪಕ್ಷಗಳ ನಾಯಕರನ್ನು ಯಾರಾದರೂ ಪ್ರಾಂಕ್‌ ಮಾಡಿರಬಹುದು, ಅವರು ಅಧಿಕೃತವಾಗಿ ದೂರು ನೀಡಿದ್ರೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

    ಹ್ಯಾಕರ್ಸ್‌ ಸಕ್ರೀಯವಾಗಿದ್ದಾರೆ: ಪ್ರತಿಪಕ್ಷಗಳು ದುರ್ಬಲ ಸ್ಥಿತಿಯನ್ನು ಎದುರಿಸುತ್ತಿವೆ, ಎಲ್ಲದರಲ್ಲೂ ಪಿತೂರಿಯನ್ನ ಹುಡುಕುತ್ತಿದ್ದಾರೆ. ಆಪಲ್‌ ಕಂಪನಿ ಸ್ವತಃ ಸ್ಪಷ್ಟಪಡಿಸಿದೆ. ಸುಮಾರು 150 ದೇಶಗಳ ವ್ಯಕ್ತಿಗಳಿಗೆ ನೋಟಿಫಿಕೇಶನ್‌ ಹೋಗಿದೆ. ಉಗಾಂಡದ ರಾಜಕೀಯ ನಾಯಕರ ಐಫೋನಿಗೆ ಈ ರೀತಿಯ ಎಚ್ಚರಿಕೆ ಸಂದೇಶ ಬಂದಿದೆ. ಈ ದಾಳಿಯನ್ನ ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಹೇಳಿದೆ. ವಿಶ್ವದಾದ್ಯಂತ ಹ್ಯಾಕರ್‌ಗಳು ಸಕ್ರಿಯರಾಗಿದ್ದಾರೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಪ್ರತಿಪಕ್ಷಗಳ ನಾಯಕರು ತಮ್ಮ ಆಂತರಿಕ ಕಚ್ಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಪರಿಸ್ಥಿತಿ ಹೇಗಿದೆ ಎಂಬುದು ದೇಶದ ಜನರಿಗೆ ತಿಳಿದಿದೆ. ಮೊದಲು ಅವರು ತಮ್ಮ ದೌರ್ಬಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಫೋನ್‌ಗಳನ್ನು ಕದ್ದಾಲಿಕೆ ಮಾಡುವ ಅವಶ್ಯಕತೆಯೂ ಸರ್ಕಾರಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಏನಿದು ಆರೋಪ?
    ತಮ್ಮ ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಕತ್ವದ ದಾಳಿ ನಡೆಯುತ್ತಿದೆ, ಕೇಂದ್ರದಿಂದ ಫೋನ್‌ ಕದ್ದಾಲಿಕೆ ನಡೆಯುತ್ತಿದೆ ಎಂದು ಪ್ರತಿಪಕ್ಷಗಳ ವಿವಿಧ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ಶಶಿ ತರೂರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ (ಉದ್ಧವ್ ಬಣ) ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಐ-ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಟಾರ್ಗೆಟ್ ಮಾಡುತ್ತಿರಬಹುದು ಎಂದು ಆಪಲ್ ಕಂಪೆನಿಯಿಂದ ಫೋನ್ ಹಾಗೂ ಇ-ಮೇಲ್‌ಗಳಿಗೆ ಎಚ್ಚರಿಕೆ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.

    ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯಲ್ಲಿನ ಕೆಲವರಿಗೂ ಈ ಸಂದೇಶ ಬಂದಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಈ ಸಂದೇಶಗಳ ಬಗ್ಗೆ ಅರಿವಿದೆ. ಐಫೋನ್‌ಗಳಲ್ಲಿ ಬೆದರಿಕೆ ಪತ್ತೆ ಮಾಡುವ ತಂತ್ರಜ್ಞಾನವು ಕೆಲವೊಮ್ಮೆ ಅಸಮಗ್ರ ಹಾಗೂ ಅಪೂರ್ಣವಾಗಿರುತ್ತದೆ ಎಂದು ಹೇಳಿದೆ.

    ಆಪಲ್‌ನಿಂದ ಬಂದ ಸಂದೇಶದಲ್ಲಿ ಏನಿತ್ತು?
    ನೀವು ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ಗುರಿಯಾಗುತ್ತಿದ್ದೀರಿ. ಅವರು ನಿಮ್ಮ ಆಪಲ್ ಐಡಿಗೆ ಸಂಬಂಧಿಸಿದ ಐಫೋನ್‌ಗೆ ದೂರದಿಂದ ಕದ್ದಾಲಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪಲ್‌ನ ಸಂದೇಶ ಹೇಳಿದೆ.

    ಈ ದಾಳಿಕೋರರು ನೀವು ಯಾರು ಅಥವಾ ನೀವು ಏನು ಮಾಡುತ್ತೀರಿ ಎಂಬ ಆಧಾರದಲ್ಲಿ ನಿಮ್ಮನ್ನು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡುತ್ತಿರುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸೂಕ್ಷ್ಮ ಡೇಟಾ, ಸಂಹವನಗಳು ಅಥವಾ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳನ್ನು ಕದಿಯಲು ಅವರಿಗೆ ಸಾಧ್ಯವಾಗಲಿದೆ. ಇದು ಸುಳ್ಳು ಎಚ್ಚರಿಕೆಯಾಗುವ ಸಾಧ್ಯತೆ ಇದ್ದರೂ, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಂದೇಶದಲ್ಲಿದೆ.

    ಆಪಲ್‌ ಪ್ರತಿಕ್ರಿಯೆ ಏನು ಹೇಳಿಕೆಯಲ್ಲಿ ಏನಿದೆ?
    ರಾಜ್ಯ ಪ್ರಾಯೋಜಿತ ದಾಳಿ ಕಾಲಾನಂತರದಲ್ಲಿ ವಿಕಸನಗೊಳ್ಳುತ್ತದೆ. ಈ ದಾಳಿಗಳನ್ನು ಪತ್ತೆಹಚ್ಚುವುದು ಕಷ್ಟ. ಅಪೂರ್ಣವಾಗಿರುವ ಬೆದರಿಕೆ ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ. ಆಪಲ್‌ನ ಕೆಲವೊಂದು ಬೆದರಿಕೆ ಸೂಚನೆಗಳು ತಪ್ಪು ಅಲಾರಂಗಳಾಗಿರಬಹುದು. ಈ ದಾಳಿಗಳು ಪತ್ತೆಯಾಗದಿರುವ ಸಾಧ್ಯತೆಯಿದೆ. ಈ ದಾಳಿಗಳನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ನಾವು ಬೆದರಿಕೆ ಅಧಿಸೂಚನೆಗಳನ್ನು ನೀಡಲು ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾವುದೇ ಧರ್ಮವೂ ಕೆಲವರ ಮಾತಿನಿಂದ ನಂಬಿಕೆ ಕೆಡಿಸುವಷ್ಟು ದುರ್ಬಲವಲ್ಲ: ಪ್ರಿಯಾಂಕ ಚತುರ್ವೇದಿ

    ಯಾವುದೇ ಧರ್ಮವೂ ಕೆಲವರ ಮಾತಿನಿಂದ ನಂಬಿಕೆ ಕೆಡಿಸುವಷ್ಟು ದುರ್ಬಲವಲ್ಲ: ಪ್ರಿಯಾಂಕ ಚತುರ್ವೇದಿ

    ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಬಿಜೆಪಿ ವಕ್ತಾರೆ ನೀಡಿದ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಶಿವಸೇನಾ ಸಂಸದೆ ಪ್ರಿಯಾಂಕ ಚತುರ್ವೇದಿ, ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳ ಬೆದರಿಕೆಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಎಂದು ಕರೆ ನೀಡಿದ್ದಾರೆ.

    ಧಾರ್ಮಿಕ ಭಾವನೆಗಳ ಮೇಲಿನ ಗೌರವ ಮತ್ತು ಅದರ ಆಧಾರದ ಮೇಲೆ ಬೆದರಿಕೆಯೊಡ್ಡುತ್ತಿರುವುದರ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಿದ ಚತುರ್ವೇದಿ, ಯಾವುದೇ ಧರ್ಮವು ಕೆಲವೇ ಕೆಲವರ ಮಾತುಗಳಿಂದ ಅವರ ನಂಬಿಕೆ ಕೆಡಿಸುವಷ್ಟು ದುರ್ಬಲವಾಗಿರುವುದಿಲ್ಲ. ಹಾಗಾಗಿ ಅಲ್-ಖೈದಾದಂತಹ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳ ಬೆದರಿಕೆಗಳನ್ನು ಮಧ್ಯಪ್ರಾಚ್ಯ ರಾಷ್ಟ್ರಗಳು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ಒಂದು ಬಗೆ, ಅದರ ಆಧಾರದ ಮೇಲೆಯೇ ಬೆದರಿಕೆಗಳನ್ನು ನೀಡುವುದು ಇನ್ನೊಂದು ಬಗೆ. ಆದರೆ ಕೆಲವರ ಮಾತುಗಳು ಧರ್ಮದ ಮೇಲಿನ ನಂಬಿಕೆಯನ್ನೇ ಕೆಡಿಸಬಹುದು ಎನ್ನುವಷ್ಟು ಯಾವುದೇ ಧರ್ಮವೂ ದುರ್ಬಲವಾಗಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಭಯೋತ್ಪಾದಕ ಸಂಘಟನೆ ಅಲ್-ಖೈದಾ ಗುಜರಾತ್, ಉತ್ತರ ಪ್ರದೇಶ, ಮುಂಬೈ ಮತ್ತು ದೆಹಲಿಯಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಪತ್ರವನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ನಮ್ಮ ಪ್ರವಾದಿಯ ಘನತೆಗಾಗಿ ಹೋರಾಡಿ ಎಂದು ಪತ್ರದಲ್ಲಿ ಬರೆದಿದ್ದಾರೆ. ಅಲ್ ಖೈದಾ ಅಂಗಸಂಸ್ಥೆಯು ಕೇಸರಿ ಭಯೋತ್ಪಾದಕರು ಈಗ ದೆಹಲಿ, ಮುಂಬೈ, ಉತ್ತರಪ್ರದೇಶ ಹಾಗೂ ಗುಜರಾತ್‌ನಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕು ಎಂದೂ ಎಚ್ಚರಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪತ್ರವನ್ನು ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರು ಅಪ್‌ಲೋಡ್ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖಾದಳ ಕಾರ್ಯೋನ್ಮುಖವಾಗಿವೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‍ ಕುರಿತು ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅಮಾನತು

    ಈಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ವಿಶ್ವದಾದ್ಯಂತ ಅನೇಕ ಮುಸ್ಲಿಮರ ಹೃದಯಗಳು ರಕ್ತಸಿಕ್ತಗೊಂಡಿದ್ದು, ಪ್ರತಿಕಾರದ ಜ್ವಾಲೆಯಿಂದ ಉರಿಯುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ನಮ್ಮ ಪ್ರವಾದಿಗೆ ಅವಮಾನಿಸಿರುವವರನ್ನು ನಾವು ಕೊಲ್ಲುತ್ತೇವೆ. ಅವರನ್ನು ಸ್ಫೋಟಿಸಲು ನಮ್ಮ ಮಕ್ಕಳ ದೇಹದೊಂದಿಗೆ ಸ್ಫೋಟಕಗಳನ್ನು ಬಂಧಿಸಿಡುತ್ತೇವೆ. ಇದರಲ್ಲಿ ಯಾವುದೇ ಕ್ಷಮಾದಾನವಿಲ್ಲ ಎಂದು ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.