Tag: ಪ್ರಿಯಾಂಕ ಉಪೇಂದ್ರ

  • ಚೇತನ್ ಫೈರ್ ಸಂಸ್ಥೆಯಿಂದ ಪ್ರಿಯಾಂಕ ಉಪೇಂದ್ರ ಎಕ್ಸಿಟ್!

    ಚೇತನ್ ಫೈರ್ ಸಂಸ್ಥೆಯಿಂದ ಪ್ರಿಯಾಂಕ ಉಪೇಂದ್ರ ಎಕ್ಸಿಟ್!

    ಬೆಂಗಳೂರು: ನಟ ಚೇತನ್ ಒಡೆತನದ ಫೈರ್ ಸಂಸ್ಥೆಯಲ್ಲಿ ಫೈರ್ ಆಗಿದೆ. ಸ್ಯಾಂಡಲ್‍ವುಡ್‍ನಲ್ಲಿ ಕಳೆದ ವಾರದಿಂದ ನಡೆಯುತ್ತಿರುವ ವಿವಾದದಿಂದಾಗಿ, ನಟಿ ಪ್ರಿಯಾಂಕ ಉಪೇಂದ್ರ ಅವರು ಚೇತನ್ ಒಡೆತನದ ಸಂಸ್ಥೆಗೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ.

    ಸಂಸ್ಥೆಯಲ್ಲಿ ಆಂತರಿಕ ಸಮಸ್ಯೆ ಉಂಟಾಗಿದ್ದು ಪ್ರಿಯಾಂಕ ಉಪೇಂದ್ರ ಜೊತೆ, ಹಲವು ಸದಸ್ಯರು ಸಂಸ್ಥೆಯಿಂದ ಹೊರಬರುವುದಕ್ಕೆ ನಿರ್ಧರಿಸಿದ್ದಾರೆ. ಜೊತೆಗೆ ನಟಿ ರೂಪಾ ಅಯ್ಯರ್ ರೇಖಾರಾಣಿ ಕೂಡ ಸಂಸ್ಥೆಯಿಂದ ಹೊರಬರುತ್ತಾರೆ ಅನ್ನುವ ಸುದ್ದಿ ಹಬ್ಬಿದೆ. ಮಹಿಳೆಯರ ಒಳಿತಿಗಾಗಿ ಹುಟ್ಟಿಕೊಂಡ ಫೈರ್ ಸಂಸ್ಥೆ ರಾಜಕೀಯ, ಜಾತಿಪರ ತಳುಕು ಹಾಕಿಕೊಂಡಿದೆ. ಹೀಗಾಗಿ ಪ್ರಿಯಾಂಕ ಉಪೇಂದ್ರ ಜೊತೆ, ಇತರೇ ಸದಸ್ಯರು ವಾಪಸ್ ಆಗೋಕೆ ನಿರ್ಧರಿಸಿದ್ದಾರೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ, ಹೆಣ್ಣು ಮಕ್ಕಳಿಗೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಧನಿ ಎತ್ತಲು ನಾವು ಈ ಸಂಸ್ಥೆಯನ್ನು ಶುರು ಮಾಡಿದ್ದೆವು. ಆದರೆ ಮುಂದಿನ ದಿನಗಳಲ್ಲಿ ಈ ಸಂಸ್ಥೆ ಬೇರೆ ರೂಪವನ್ನು ತಾಳುತ್ತಿವೆ. ಹೀಗಾಗಿ ನಾನು ಅಧ್ಯಕ್ಷೆಯಾಗಿ ಪೂರ್ತಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಶೃತಿ ಹರಿಹರನ್ ಅವರು ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಬರೆದು ಮಾರನೆ ದಿನವೇ ಪತ್ರಿಕಾಗೋಷ್ಠಿ ಕರೆದಿದ್ದಾರೆ. ನಾವು ಇಲ್ಲದ ವೇಳೆ ಪತ್ರಿಕಾಗೋಷ್ಠಿ ಮಾಡಿದ್ದಾರೆ ಇದು ನನಗೆ ಸರಿ ಅನ್ನಿಸುತ್ತಿಲ್ಲ. ಹೀಗಾಗಿ ನಾನು ರಾಜೀನಾಮೆ ಕೊಡಬೇಕೆಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಯಾಂಡಲ್‍ವುಡ್ ನಟರ ಮನೆಯಲ್ಲಿ ರಾರಾಜಿಸುತ್ತಿದ್ದಾನೆ ಗಣಪ!

    ಸ್ಯಾಂಡಲ್‍ವುಡ್ ನಟರ ಮನೆಯಲ್ಲಿ ರಾರಾಜಿಸುತ್ತಿದ್ದಾನೆ ಗಣಪ!

    ಬೆಂಗಳೂರು: ಗಣೇಶ ಹಬ್ಬ ಬಂದರೆ ಸಾಕು ಬೀದಿ ಬೀದಿಯಲ್ಲೂ ಗಣಪನನ್ನು ಕೂರಿಸಿ ಪೂಜೆ ಮಾಡಿ ಗಣೇಶ ಎಲ್ಲರಿಗೂ ಒಳ್ಳೇಯದನ್ನ ಮಾಡಪ್ಪ ಅಂತಾ ಬೇಡಿಕೊಳ್ಳತ್ತಾರೆ. ಹಾಗೆಯೇ ನಮ್ಮ ಸ್ಯಾಂಡಲ್‍ವುಡ್ ಸ್ಟಾರ್‍ಗಳು ಸಹ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಮಾಡಿದ್ದಾರೆ.

    ಹೌದು, ನಮ್ಮ ಚಂದನವನದ ಸ್ಟಾರ್ ದಂಪತಿಗಳ ಮನೆಯಲ್ಲೂ ಗಣಪನ ಆರಾಧನೆ ಜೋರಾಗಿಯೇ ನಡೆದಿದೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿದೇರ್ಶಕ ಪ್ರೇಮ್ ಮನೆಯಲ್ಲಿ ಗಣೇಶ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ.

    ಉಪೇಂದ್ರ ನಿವಾಸದಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಸ್ಥಾಪಿಸಿ ಉಪೇಂದ್ರ ದಂಪತಿ ಒಟ್ಟಿಗೆ ಪೂಜೆ ಮಾಡಿದರು. ಮನೆ ಮಂದಿಯಲ್ಲಾ ಸೇರಿ ಈ ಹಬ್ಬವನ್ನ ನಾವು ಮಾಡುತ್ತೇವೆ. ನನಗೆ ಗಣೇಶ ಅಂದರೆ ತುಂಬಾ ಪ್ರೀತಿ. ನಾಡಿನ ಜನತೆಗ ಗಣಪ ಒಳ್ಳೆಯದನ್ನ ಮಾಡಲಿ ಅಂತಾ ಉಪ್ಪಿ ಶುಭಾಶಯಯವನ್ನು ಕೋರಿದ್ದಾರೆ. ಗಣೇಶ ಹಬ್ಬ ಮಾಡೋದಕ್ಕೆ ಬಹಳ ಖುಷಿಯಾಗುತ್ತೆ. ಮನೆ ಮಕ್ಕಳೆಲ್ಲ ಸೇರಿ ಹಬ್ಬವನ್ನ ಮಾಡ್ತಿವಿ ಅಂತಾ ಹಬ್ಬದ ಸಂಭ್ರಮದಲ್ಲಿದ್ದ ಪ್ರಿಯಾಂಕಾ ಉಪೇಂದ್ರ ತಿಳಿಸಿದರು.

    ಜೋಗಿ ಪ್ರೇಮ್ ಮನೆಯಲ್ಲೂ ಗಣೇಶನ ಸಂಭ್ರಾಮಚರಣೆ ಅದ್ಧೂರಿಯಾಗಿಯೇ ನಡೆದಿದ್ದು, ಪರಿಸರ ಸ್ನೇಹಿ ಗಣೇಶನಿಗೆ ರಕ್ಷಿತಾ ಪ್ರೇಮ್ ದಂಪತಿ ಗಣೇಶನಿಗೆ ಪೂಜೆ ಮಾಡಿದರು. ಜೊತೆಗೆ ಬಹು ನಿರೀಕ್ಷೆ ಹುಟ್ಟಿಸಿರೋ `ದಿ ವಿಲನ್’ ಸಿನಿಮಾ ರಿಲೀಸ್ ಡೇಟ್ ಅನ್ನ ವಿನಾಯಕನ ಸಮ್ಮುಖ ಅನೌನ್ಸ್ ಮಾಡಿದ ಜೋಗಿ ಪ್ರೇಮ್ ಅಕ್ಟೋಬರ್ 18 ರಂದು ರಾಜ್ಯಾದ್ಯಂತ ದಿ ವಿಲನ್ ಬಿಡುಗಡೆಯಾಗುತ್ತೆ. ಅಷ್ಟೇ ಅಲ್ಲದೇ ಕನ್ನಡ, ತೆಲುಗು, ತಮಿಳು, ಭಾಷೆಯಲ್ಲಿ ಏಕಕಾಲಕ್ಕೆ ತೆರಗೆ ಬರಲಿದೆ ಅಂತಾ ಅಭಿಮಾನಿಗಳಿಗೆ ಖುಷಿ ವಿಚಾರವನ್ನು ನೀಡಿದ್ದಾರೆ.

    ತೆರೆ ಮೇಲೆ ಮಿಂಚುವ ಸಿನಿ ನಟರು ತಮ್ಮ ಮನೆಯಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಸ್ಥಾಪಿಸಿ, ಅಲಾಂಕರ ಮಾಡಿ ಪೂಜೆ ಪುನಸ್ಕಾರ, ಹೋಮ ಹವನ ಮಾಡಿ ಭಗವಂತನ ಕೃಪೆಗೆ ಪಾತ್ರರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಿಯಾಂಕ ಉಪೇಂದ್ರ ಡಬಲ್ ಆಕ್ಟಿಂಗ್!

    ಪ್ರಿಯಾಂಕ ಉಪೇಂದ್ರ ಡಬಲ್ ಆಕ್ಟಿಂಗ್!

    ಬೆಂಗಳೂರು: ಮಮ್ಮಿ ಚಿತ್ರದ ಯಶಸ್ಸಿನ ನಂತರ ಹೌರಾ ಬ್ರಿಡ್ಜ್ ಚಿತ್ರದಲ್ಲಿ ನಟಿಸುತ್ತಿರೋ ಪ್ರಿಯಾಂಕ ಉಪೇಂದ್ರ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದು ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕ ಹೊಂದಿರೋ ಚಿತ್ರ. ವಿಶೇಷವೆಂದರೆ ಈ ಚಿತ್ರದಲ್ಲಿ ಮತ್ತಿಬ್ಬರು ಸ್ಯಾಂಡಲ್ ವುಡ್ ನಟಿಯರು ಪ್ರಿಯಾಂಕಗೆ ಜೊತೆಯಾಗಲಿದ್ದಾರೆ.

    ಭುವನ್ ನಿರ್ದೇಶನದ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ತಾಂತ್ರಿಕ ವರ್ಗ ಮತ್ತು ತಾರಾಗಣದ ಆಯ್ಕೆ ಕಾರ್ಯ ಚಾಲ್ತಿಯಲ್ಲಿದೆ. ಆದರೆ ಪ್ರಿಯಾಂಕ ಉಪೇಂದ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಇದರ ಜೊತೆಗೇ ಮತ್ತೆರಡು ಮುಖ್ಯ ಪಾತ್ರಗಳಿಗೂ ಇಬ್ಬರು ಆಯ್ಕೆಯಾಗಿದ್ದಾರೆ. ಭಾವನಾ ರಾವ್ ಮತ್ತು ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ಪ್ರಿಯಾಂಕ ಸ್ನೇಹಿತೆಯರಾಗಿ ಕಾಣಿಸಿಕೊಳ್ಳಲಿದ್ದಾರೆ.

    ಭುವನ್ ಇದೀಗ ಗಮ್ಯ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರ ಮುಗಿಯುತ್ತಿದ್ದಂತೆಯೇ ಹೊಸಾ ಥ್ರಿಲ್ಲರ್ ಕಥೆ ಶುರುವಾಗಲಿದೆ. ಸೈಕಾಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರೋ ಈ ಚಿತ್ರವನ್ನು ಪ್ರಿಯಾಂಕಾ ಕೂಡಾ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಒಂದಷ್ಟು ಕಾಲದಿಂದ ಮರೆಯಾದಂತಿದ್ದ ಶರ್ಮಿಳಾ ಮಾಂಡ್ರೆ ಮತ್ತು ಭಾವನಾ ರಾವ್ ಈ ಚಿತ್ರದ ಮುಖ್ಯ ಪಾತ್ರಗಳ ಮೂಲಕ ವಾಪಾಸಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತಿಯ ಹೊಸ ಪಕ್ಷ ಸ್ಥಾಪನೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೀಗಂದ್ರು

    ಪತಿಯ ಹೊಸ ಪಕ್ಷ ಸ್ಥಾಪನೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೀಗಂದ್ರು

    ಬೆಂಗಳೂರು: ತಾನು ಸ್ಥಾಪಿಸಿದ ಕೆಪಿಜೆಪಿ ಪಕ್ಷಕ್ಕೆ ನಟ ಉಪೇಂದ್ರ ಅವರು ಈಗಾಗಲೇ ರಾಜೀನಾಮೆ ನೀಡಿದ್ದು, ಈ ಕುರಿತು ಪತ್ನಿ ಪ್ರಿಯಾಂಕಾ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಘಟನೆಯಿಂದ ಸಾಕಷ್ಟು ಬೇಸರವಾಗಿದೆ. ಉಪೇಂದ್ರರವರ ಇಮೇಜ್ ಗೆ ಧಕ್ಕೆ ಆಗುತ್ತೇನೋ ಅನ್ನೋ ಬೇಸರವಾಗಿತ್ತು. ಉಪ್ಪಿ ಹೊಸ ಪಕ್ಷದ ನಿರ್ಧಾರ ಒಳ್ಳೆಯದೇ ಆಯ್ತು. ಮಹೇಶ್ ಗೌಡ ಚೆನ್ನಾಗಿಯೇ ಇದ್ರು. ನಮ್ಮ ಕುಟುಂಬದವರ ಜೊತೆ ಇದ್ದು, ಉಪ್ಪಿಗೆ ಹಾಗೂ ನನಗೆ ಜೀವನದಲ್ಲಿ ದೊಡ್ಡ ಪಾಠ ಕಲಿಸಿದ್ರು ಅಂತ ಬೇಸರ ವ್ಯಕ್ತಪಡಿಸಿದ್ರು.

    ಉಪ್ಪಿ ಸೇರಿದಕ್ಕೆ ಕೆಪಿಜೆಪಿ ಪಕ್ಷದ ಹೆಸರಿಗೆ ಪಬ್ಲಿಸಿಟಿ ಸಿಕ್ತು. ಉಪ್ಪಿ ಇಲ್ಲದೇ ಇದ್ರೆ ಆ ಪಕ್ಷದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಬಿಡಿ. ಸಜೆಷನ್ ಕೊಟ್ಟಿದ್ದನ್ನೇ ಸರ್ವಾಧಿಕಾರಿ ಅಂತಾ ತಿಳ್ಕೊಂಡ್ರೇ ಹೇಗೆ? ಎಲೆಕ್ಷನ್ ಹತ್ರ ಬರುವ ದಿನಗಳಲ್ಲಿಯೇ ಈ ರೀತಿ ವರ್ತನೆ ಎಷ್ಟರ ಮಟ್ಟಿಗೆ ಸರಿ? ಉಪ್ಪಿ ಅಭ್ಯರ್ಥಿಗಳನ್ನ ಪಕ್ಷೇತರವಾಗಿ ನಿಲ್ಲಿಸುವ ಯೋಚನೆ ಕೂಡ ಮಾಡಿದ್ದರು. ಅಭ್ಯರ್ಥಿಗಳು ಈಗಾಗಲೇ ರೆಡಿಯಾಗಿದ್ದಾರೆ ಅಂತ ಅವರು ತಿಳಿಸಿದ್ರು. ಇದನ್ನೂ ಓದಿ: ಕೆಪಿಜೆಪಿಗೆ ನಟ ಉಪೇಂದ್ರ ರಾಜೀನಾಮೆ – ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ

    ನಾನು ಕಂಟೆಸ್ಟ್ ಮಾಡಲ್ಲ: ಉಪ್ಪಿಗೆ ಎಲ್ಲಾ ರಾಷ್ಟ್ರೀಯ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಕಾಂಗ್ರೆಸ್, ಬಿಜೆಪಿಯಿಂದಲೂ ಆಹ್ವಾನ ಇತ್ತು. ಆದ್ರೆ ಹೊಸ ಪಕ್ಷದ ಕನಸು ಅವರಿಗಿದೆ. ಇನ್ನು ಮುಂದೆ ನಾವು ಕೇರ್ ಫುಲ್ ಆಗಿರ್ತೀವಿ. ನಾನು ಕಂಟೆಸ್ಟ್ ಮಾಡಲ್ಲ, ಹೊಸ ಪಕ್ಷಕ್ಕೆ ಎಲ್ಲ ಸಪೋರ್ಟ್ ಕೊಡ್ತೀನಿ ಅಂತ ಪ್ರಿಯಾಂಕಾ ಸ್ಪಷ್ಟಪಡಿಸಿದ್ರು.

    https://www.youtube.com/watch?v=RBF3GyZURh4

  • ಕನ್ನಡ ಸೆಲೆಬ್ರಿಟಿಗಳ ಟ್ವಿಟ್ಟರ್ ಖಾತೆಗಳ ಫಾಲೋ ಮಾಡೋ ಮುನ್ನ ಈ ಸ್ಟೋರಿ ಓದಿ

    ಕನ್ನಡ ಸೆಲೆಬ್ರಿಟಿಗಳ ಟ್ವಿಟ್ಟರ್ ಖಾತೆಗಳ ಫಾಲೋ ಮಾಡೋ ಮುನ್ನ ಈ ಸ್ಟೋರಿ ಓದಿ

    ಬೆಂಗಳೂರು: ಈಗಿನ ಕಾಲದಲ್ಲಿ ಎಲ್ಲ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಆದರೆ ಈಗ ಅಭಿಮಾನಿಗಳು ಸ್ಯಾಂಡಲ್‍ವುಡ್‍ನ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ ಉತ್ತಮ ಪ್ರಜಾ ಪಾರ್ಟಿ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದಾರೆ.

    ತಮ್ಮ ಅಭಿಮಾನಿಗಳಿಗೆ ಹತ್ತಿರ ಆಗೋದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕಲಾವಿದರು ತಮ್ಮದೇ ಆದ ಖಾತೆಗಳನ್ನು ತೆರೆಯುತ್ತಾರೆ. ಆದರೆ ಕೆಲವು ಅಪರಿಚಿತ ವ್ಯಕ್ತಿಗಳು ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಜನರು ನಂಬುವ ಹಾಗೇ ಮಾಡುತ್ತಿದ್ದಾರೆ.

    ಅಂಬರೀಶ್ ಅವರ ಪುತ್ರ ಅಭಿಷೇಕ್ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದಿದ್ದಾರೆ. ಇದನ್ನು ನೋಡಿದ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಶ್ ಇರುವ ಫೋಟೋ ಖಾತೆಯನ್ನು ನಿರ್ಲಕ್ಷಿಸಿ. ಏಕೆಂದರೆ ಅಭಿಷೇಕ್ ಯಾವುದೇ ಟ್ವಿಟ್ಟರ್ ಅಕೌಂಟ್ ಬಳಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನೂ ಉಪೇಂದ್ರ ಅವರ ರಾಜಕೀಯ ಪಕ್ಷದ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದು, ಪ್ರಿಯಾಂಕ ಉಪೇಂದ್ರ ಇದ್ದಕ್ಕೆ ಪ್ರತಿಕ್ರಿಸಿದ್ದಾರೆ. ಉಪೇಂದ್ರ ಅವರ ಪ್ರಜಾಕೀಯ ಪಕ್ಷಕ್ಕಾಗಿ ಅಧಿಕೃತವಾಗಿ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ. ಈ ಖಾತೆ ನಕಲಿ ಎಂದು ಟ್ವೀಟ್ ಮಾಡಿದ್ದಾರೆ.

  • ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಸಿಹಿ ಸುದ್ದಿ

    ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಸಿಹಿ ಸುದ್ದಿ

    ಬೆಂಗಳೂರು: ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ. ಉಪೇಂದ್ರರ ಮಗಳು ಐಶ್ವರ್ಯ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುವುದು ಪಕ್ಕಾ ಆಗಿದೆ.

    ಈ ತಿಂಗಳ 12ರಂದು ಉಪೇಂದ್ರ ನಾನು ಇನ್ನು ಮುಂದೆ ಜನರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಂಡು ಪ್ರಜಾಕಾರಣದ ಮೂಲಕ ಜನರ ಏಳಿಗೆಗಾಗಿ ನಾನು ಪ್ರಯತ್ನಿಸುತ್ತಿದ್ದೇನೆ ಅಂತಾ ಹೇಳಿದ್ದರು. ಉಪ್ಪಿಯವರ ಹೊಸ ನಿಲುವಿನಿಂದ ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಉಂಟಾಗಿತ್ತು. ಉಪೇಂದ್ರ ಅವರು ರಾಜಕಾರಣಕ್ಕೆ ಎಂಟ್ರಿ ನೀಡಿದರೆ, ನಾವುಗಳು ನಮ್ಮ ನೆಚ್ಚಿನ ನಟನನ್ನು ಬೆಳ್ಳಿ ಪರದೆಯಲ್ಲಿ ಕಾಣಲಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

    ಉಪೇಂದ್ರ ಅವರು ಸಿನಿಮಾ ರಂಗಕ್ಕೆ ಗುಡ್ ಬೈ ಹೇಳುವ ಚಾನ್ಸ್ ಗಳಿವೆ. ಆದರೆ ಉಪ್ಪಿ ಕುಟುಂಬ ಮಾತ್ರ ಚಿತ್ರರಂಗದ ನಂಟನ್ನು ಬಿಟ್ಟಿಲ್ಲ. ಉಪೇಂದ್ರರ ಪತ್ನಿ ಪ್ರಿಯಾಂಕ ನಟನೆಯ `ಹೌರಾ ಬ್ರಿಡ್ಜ್’ ಸಿನಿಮಾದಲ್ಲಿ ತಾಯಿಯೊಂದಿಗೆ ಐಶ್ವರ್ಯಾ ಬಣ್ಣ ಹಚ್ಚಲಿದ್ದಾರೆ. ಈ ಮೊದಲು `ಮಮ್ಮಿ’ ಎಂಬ ಹಾರರ್ ಸಿನಿಮಾ ಮಾಡಿ ಗೆದ್ದಿದ್ದ ಲೋಹಿತ್.ಎಚ್ `ಹೌರ ಬಿಡ್ಜ್’ನ ನಿರ್ಮಿಸಲಿದ್ದಾರೆ.

    ಐಶ್ವರ್ಯ ಉಪೇಂದ್ರ ಬಾಲ ನಟಿಯಾಗಿ `ಹೌರಾ ಬ್ರಿಡ್ಜ್’ನಲ್ಲಿ ಪ್ರಯಾಣ ಮಾಡುವುದು ಕನ್ಫರ್ಮ್ ಆಗಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾದ ಬಗ್ಗೆ ಹೇಳೋದು ಬಾಕಿ ಇದೆ. ಹೌರಾ ಬ್ರಿಡ್ಜ್ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಮೂಡಿಬರಲಿದೆ. ಇತ್ತೀಚಿಗೆ ಉಪ್ಪಿಯವರ ಸಹೋದರನ ಮಗ ಕೂಡ ರಂಗಿನ ದುನಿಯಾ ಪಾದಾರ್ಪಣೆ ಮಾಡಿದ್ದಾರೆ.