ನಟ ಉಪೇಂದ್ರ (Actor Darshan) ಹಾಗೂ ಪ್ರಿಯಾಂಕ ಉಪೇಂದ್ರ (Priyank Upendra) ಅವರಿಗೆ ಸೈಬರ್ ವಂಚಕರಿಂದ ಸಂಕಷ್ಟ ಎದುರಾಗಿದೆ. ಪ್ರಿಯಾಂಕ ಉಪೇಂದ್ರ ಅವರು ಆನ್‌ಲೈನ್ ವಸ್ತುಗಳನ್ನ ಆರ್ಡರ್ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಡಿಜಿಟಲ್ ವಂಚಕರು ಪ್ರಿಯಾಂಕ ಅವರಿಗೆ ಕರೆಮಾಡಿ ಕೋಡ್ ನಂಬರ್ ಕಳಿಸಿದ್ದಾರೆ. ಈ ಕೋಡ್ ಡಯಲ್ ಮಾಡಿ ಎಂದು ಹೇಳಿದ್ದಾರೆ. ಡಿಜಿಟಲ್ ಧೂತರು ಹೇಳಿದಂತೆ ಮಾಡಿದ ಪ್ರಿಯಾಂಕ ಫೋನ್ ಹ್ಯಾಕ್ ಆಗಿದೆ. ಬಳಿಕ ಪ್ರಿಯಾಂಕ ಅವರ ಫೋನ್ ನಂಬರ್ ಬಳಸಿ ವಂಚಕರು ಹಲವರಿಗೆ ಹಣವನ್ನು ಕಳುಹಿಸುವಂತೆ ಹೇಳಿದ್ದಾರೆ.
ಕೆಲವರು ಅನುಮಾನಗೊಂಡು ಹಣ ಕಳುಹಿಸಿಲ್ಲ, ಇನ್ನು ಕೆಲವರು, ಆಪ್ತರು ಹಣದ ತುರ್ತಿರಬಹುದು ಎಂದು ಹಣ ವರ್ಗಾವಣೆ ಮಾಡಿದ್ದಾರೆ. ಉಪೇಂದ್ರ ಅವರ ಮಗ ಆಯುಷ್ ಸೇರಿ ಮೂವರು ತಲಾ 55000 ರೂ.ಗಳಂತೆ ಹಣವನ್ನ ಪ್ರಿಯಾಂಕ ಉಪೇಂದ್ರ ಅವರೇ ಎಂದುಕೊಂಡು ಕಳುಹಿಸಿ ಮೋಸ ಹೋಗಿದ್ದಾರೆ. ಒಟ್ಟು 1,65,000 ಹಣವನ್ನು ಹ್ಯಾಕರ್‌ಗಳು ಎಗರಿಸಿದ್ದಾರೆ.ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಬುದ್ಧಿವಂತನಿಗೂ ಹ್ಯಾಕರ್ ಕಾಟ – ವಿಡಿಯೋ ಹಂಚಿಕೊಂಡ ಉಪ್ಪಿ ದಂಪತಿ
ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರ ಕುಟುಂಬಕ್ಕೆ ಡಿಜಿಟಲ್ ಧೂತರು ಬೆಳಗ್ಗೆ ಬೆಳಗ್ಗೆನೇ ಸಂಕಷ್ಟ ತಂದೊಡ್ಡಿದ್ದಾರೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ ಉಪೇಂದ್ರ ದಂಪತಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಹಣ ಎಗರಿಸಿದ ಕಿರಾತಕರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ರೀತಿಯ ಪರಿಚಿತರಿಂದ ಸಂದೇಶಗಳು, ಫೋನ್‌ಕಾಲ್‌ಗಳು ಬಂದಾಗ ಎಚ್ಚರಿಕೆ ವಹಿಸಿ ಎಂದು ಸಂದೇಶ ನೀಡಿದೆ ಉಪೇಂದ್ರ ಕುಟುಂಬ.
ನವರಾತ್ರಿಯು (Navaratri) ದುರ್ಗಾ ದೇವಿಗೆ ಸಮರ್ಪಿತವಾದ ಮಂಗಳಕರ ಹಿಂದೂ ಹಬ್ಬವಾಗಿದೆ. ಇದು ಒಂಬತ್ತು ರಾತ್ರಿಗಳ ಸಾಂಕೇತಿಕ ಆಚರಣೆಯಾಗಿದೆ ಮತ್ತು ಉತ್ತರ ಮತ್ತು ಪೂರ್ವ ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಇನ್ನೂ ಕನ್ನಡ ಚಿತ್ರರಂಗದ ತಾರೆಯರು ಕೂಡ ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಮನೆಯಲ್ಲೂ ‘ನವ’ರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಚೆಂದದ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ:ವಕೀಲ್ ಸಾಬ್ ಗೆಟಪ್‌ನಲ್ಲಿ ರಾಕಿ ಭಾಯ್- ಇದು ‘ಟಾಕ್ಸಿಕ್’ ಚಿತ್ರದಲ್ಲಿನ ಯಶ್ ಕ್ಯಾರೆಕ್ಟರ್?
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನವರಾತ್ರಿ ಹಬ್ಬವನ್ನು ಆಚರಣೆಯನ್ನು ಸರಳವಾಗಿ ಪ್ರಿಯಾಂಕಾ (Priyanka) ಆಚರಿಸಿದ್ದಾರೆ. ಆಚರಣೆಯ ಕೆಲ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದು ಅಭಿಮಾನಿಗಳ ಗಮನ ಸೆಳೆದಿದೆ.
ಸಾಂಪ್ರದಾಯಿಕ ಲುಕ್‌ನಲ್ಲಿ ಲೈಟ್ ಬಣ್ಣ ಸೀರೆಯುಟ್ಟು ನಟಿ ಮಿಂಚಿದ್ದಾರೆ. ದೀಪ ಮತ್ತು ಶಂಕವಿಟ್ಟಿರುವ ಬೆಳ್ಳಿ ತಟ್ಟೆಯನ್ನು ಹಿಡಿದು ನಿಂತಿರುವ ಕೆಲ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಪ್ರತಿ ಹಬ್ಬವನ್ನು ಕೂಡ ನಟಿ ಮನೆಯಲ್ಲಿ ಆಚರಿಸುತ್ತಾರೆ. ಸದ್ಯ ಈ ಫೋಟೋ ನೋಡಿ ಅಭಿಮಾನಿಗಳು ನವರಾತ್ರಿ ಹಬ್ಬಕ್ಕೆ ನಟಿಗೆ ಶುಭಕೋರಿದ್ದಾರೆ.
ಅಂದಹಾಗೆ, ನವರಾತ್ರಿ ಆಚರಣೆಯ ಹಿಂದೆ ಹಲವು ವಿಚಾರಗಳಿವೆ. ದಂತಕಥೆಯ ಪ್ರಕಾರ, ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಒಂಬತ್ತು ದಿನಗಳ ಕಾಲ ಹೋರಾಡಿದಳು ಮತ್ತು ನಂತರ ನವಮಿಯ ರಾತ್ರಿ ಅವನನ್ನು ಕೊಂದಳು ಎಂದು ಕಥೆಯಲ್ಲಿ ಹೇಳಲಾಗಿದೆ. ಅಂದಿನಿಂದ ದೇವಿಯನ್ನು ‘ಮಹಿಷಾಸುರಮರ್ದಿನಿ’ ಎಂದು ಕರೆಯುತ್ತಾರೆ. ಅಂದಿನಿಂದ, ತಾಯಿ ದುರ್ಗೆಯ ಶಕ್ತಿಗೆ ಸಮರ್ಪಿತವಾದ ನವರಾತ್ರಿಯ ಉಪವಾಸವನ್ನು ಆಚರಿಸುವಾಗ ಅವಳ 9 ರೂಪಗಳನ್ನು ಪೂಜಿಸಲಾಗುತ್ತದೆ.
‘ಕಮರೊಟ್ಟು ಚೆಕ್ ಪೋಸ್ಟ್’ ಕಥೆ ಹೇಳಿ ಸಿನಿ ಪ್ರೇಮಿಗಳನ್ನು ರಂಜಿಸಿದ್ದ ನಿರ್ದೇಶಕ ಪರಮೇಶ್ ನಾಲ್ಕು ವರ್ಷದ ಬಳಿಕ ಸೀಕ್ವೆಲ್ ಕಥೆ ಹೇಳುವುದಕ್ಕೆ ಬರುತ್ತಿದ್ದಾರೆ. ‘ಕಮರೊಟ್ಟು 2’ (Kamarottu 2) ಸಿನಿಮಾದ ಟ್ರೈಲರ್ (Trailer) ರಿಲೀಸ್ ಆಗಿದ್ದು ನೋಡುಗರನ್ನು ಸೀಟಿನ ತುದಿಗೆ ಕೂರಿಸಿದೆ. ಬೆಂಗಳೂರಿನ ಲೂಲು ಮಾಲ್ನಲ್ಲಿ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿರ್ದೇಶಕ ಪರಮೇಶ್ಅ (Paramesh)ವರ ಪ್ರಯತ್ನಕ್ಕೆ ಗೆಳೆಯ ಅಜಯ್ ರಾವ್ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ N.M.ಸುರೇಶ್ ರವರು ಸಾತ್ ಕೊಟ್ಟು ‘ಕಮರೊಟ್ಟು 2’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಅಜಯ್ ರಾವ್ ಅವರು ನನ್ನ ಪ್ರೀತಿಯ ಗೆಳೆಯನಗೋಸ್ಕರ ಇವತ್ತು ನಾನು ಇಲ್ಲಿ ಬಂದಿದ್ದು ಸಿನಿಮಾವನ್ನು ನಾನು ನೋಡಿದ್ದು ಟೆಕ್ನಿಕಲ್ ಆಗಿ ಸಿನಿಮಾ ಅದ್ಬುತವಾಗಿ ಮೂಡಿ ಬಂದಿದೆ. ಪ್ರೇಕ್ಷಕರು ನೋಡುವಂತಹ ಥ್ರಿಲ್ಲರ್ ಸಿನಿಮಾ ಇದಾಗಿದೆ, ಕೆಲವೊಂದು ದೃಶ್ಯಗಳು ಟೆಕ್ನಿಕಲಿ ಅದ್ಭುತವಾಗಿ ಮೂಡಿ ಬಂದಿದ್ದು ಇದನ್ನು ಹೇಗೆ ಚಿತ್ರಣ ಮಾಡಿದ್ದಾರೆ ಎಂಬ ಕುತೂಹಲ ನನಗೆ ಮೂಡಿದೆ. ಹಾಗಾಗಿ ಪರಮೇಶ್ ಒಳ್ಳೆಯ ನಿರ್ದೇಶಕ ಎಂದು ಪ್ರತಿಯೊಂದು ದೃಶ್ಯದಲ್ಲೂ ಕಾಣುತ್ತದೆ. ಸಿನಿಮಾ ಬಹಳ ಇಷ್ಟವಾಗಿದೆ.
ಈ ಒಂದು ಸಂದರ್ಭದಲ್ಲಿ ಅಜಯ್ ರಾವ್ ಅವರು ಸಿನಿಮಾವನ್ನು ನೋಡಿದ ಮೇಲೆ ಪ್ರಿಯಾಂಕಾ (Priyanka Upendra) ಮೇಡಂ ರವರು ಅದ್ಭುತವಾಗಿ ಕಾಣುತ್ತಿದ್ದು ನಾನು ಅವರ ದೊಡ್ಡ ಅಭಿಮಾನಿಯಾದೆ ಎಷ್ಟೋ ಜನ ಸುಂದರ ನಟಿಯರಲ್ಲಿ ಪ್ರಿಯಾಂಕ ಮೇಡಂ ಮೊದಲಿಗರಲ್ಲಿ ನಿಲ್ಲುತ್ತಾರೆ ಎಂದರು. ಒಟ್ಟಾರೆ ಕಮರೊಟ್ಟು 2 ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು ಜನರ ಮನಸ್ಸನ್ನು ಗೆದ್ದೇ ಗೆಲ್ಲುತ್ತದೆ, ಈ ಚಿತ್ರಕ್ಕೆ ಜನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ. ಹೀರೋ ಬೇಗ ಪ್ರಚಾರಕ್ಕೆ ಬರುತ್ತೇವೆ ಆದರೆ ತೆರೆ ಹಿಂದೆ ಕೆಲಸ ಮಾಡುವ ಇಂತಹ ಟೆಕ್ನಿಷಿಯನ್ ಗಳು ಮುಂದೆ ಬರುವುದಿಲ್ಲ ಪರಮೇಶ್ ಅವರಲ್ಲಿ ಸಿನಿಮಾ ಪ್ರೀತಿ ಹೆಚ್ಚಿದೆ ಅವರು ಒಬ್ಬ ರೈತರು ಕೂಡ ಯಾವುದೇ ಬೆಂಬಲವಿಲ್ಲದೆ ಅವರು ಬೆಳೆದು ಬಂದಿದ್ದಾರೆ ಇಂದು ಈ ಚಿತ್ರ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಡುತ್ತದೆ ಎಂಬ ನಂಬಿಕೆ ನನಗಿದೆ ನನ್ನ ಗೆಳೆಯ ಪರಮೇಶ್ ಗೆ ಶುಭವನ್ನು ಹಾರೈಸುತ್ತಿದ್ದೇನೆ ಎಂದಿದ್ದಾರೆ.
ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ N.M.ಸುರೇಶ್ ರವರು ಸಿನಿಮಾದ ಟ್ರೈಲರ್ ನೋಡಿ ಒಂದೊಂದು ದೃಶ್ಯವು ಹಾಲಿವುಡ್ ಸಿನಿಮಾದಂತೆ ಕಾಣುತ್ತಿದ್ದು ಪರಮೇಶ್ ಕೆಲಸ ಮನಮುಟ್ಟುವಂತಿದೆ ಅವರಿಗೆ ಯಶಸ್ವಿಗಲಿ ಎಂದು ಹಾರೈಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ಈ ಸಿನಿಮಾದಲ್ಲಿ ನನಗೆ ಸೂಕ್ತವಾದ ಪಾತ್ರ ಮಾಡಿಸಿದ್ದಾರೆ ಎಷ್ಟರ ಮಟ್ಟಿಗೆ ಮಾಡಿದ್ದೇನೆ ಅನ್ನೋದನ್ನ ನೀವು ನೋಡಿ ಹೇಳಬೇಕು. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ನಮ್ಮ ನಿರ್ದೇಶಕ ಪರಮೇಶ್ ನನ್ನ ಮನಸ್ಸಿಗೆ ಯಾಕೆ ಹತ್ತಿರ ಅಂದರೆ, ನಮ್ಮ ತಂದೆ ತೀರಿ ಹೋದಾಗ ಅವತ್ತಿನ ದಿನ ಹೇಗಿತ್ತು ಅನ್ನೋದು ನಿಮಗೆ ಗೊತ್ತು. ಸೆಕ್ಷನ್ 144 ಜಾರಿಯಲ್ಲಿತ್ತು ಅಲ್ಲಿ ಸೆರೆ ಹಿಡಿಯಲು ಕ್ಯಾಮೆರಾ ಮ್ಯಾನ್ ಆಗಿ ಬಂದಿದ್ದರು, ಆಗ ನನಗೆ ಪರಿಚಯ ಆದರು. ಇಂದು ಇಡೀ ನಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದಾರೆ ನನ್ನ ಗೆಳೆಯನು ಹೌದು. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು.
ಪ್ರಿಯಾಂಕ ಉಪೇಂದ್ರ ರವರು ಮಾತನಾಡಿ ಅಜಯ್ ಅವರು ತುಂಬಾ ಪಾಸಿಟಿವ್ ಆಗಿ ಇರ್ತಾರೆ ಅವರು ಟ್ರೈಲರ್ ಲಾಂಚ್ ಗೆ ಬಂದಿದ್ದು ಖುಷಿ ಕೊಟ್ಟಿದೆ ನಾನು ಜಾಸ್ತಿ ಮಾತಾಡಲ್ಲ ನನ್ನ ಮೂವಿಗಳನ್ನು ನೋಡಿರ್ತೀರ ನಾನು ಒಪ್ಪಿಕೊಂಡಾದ ಮೇಲೆ ಎಲ್ಲರೂ ಕುಟುಂಬದ ತರ ಇರುತ್ತೇವೆ, ನೀವು ಹೇಳಬೇಕು ಟ್ರೈಲರ್ ಹೇಗಿದೆ ಎಂದು ಈ ಚಿತ್ರ ಒಪ್ಪಲು ನಿರ್ದೇಶಕ ಪರಮೇಶ್ ಅವರು ಕಾರಣ ನನಗೆ 3 ಗಂಟೆ ನರೇಷನ್ ಕೊಟ್ಟರು ಡೀಟೇಲ್ ಆಗಿ ನನ್ನ ಪಾತ್ರದ ಬಗ್ಗೆ ಹೇಳಿ ಕೊಟ್ಟರು ಅವರಲ್ಲಿ ಒಬ್ಬ ಅದ್ಭುತವಾದ ನಿರ್ದೇಶಕನನ್ನು ನೋಡಿದೆ, ಫೈನಲ್ ಔಟ್ಪುಟ್ ನೋಡಿ ನನಗೆ ಬಹಳ ಖುಷಿಯಾಗಿದೆ.
ಚಿತ್ರದ ನಿರ್ದೇಶಕರಾದ ಪರಮೇಶ್ ಅವರು ಮಾತನಾಡಿ. ಕನಸು ಪಿಕ್ಚರ್ಸ್ ಸಂಸ್ಥೆಯ ನಿರ್ಮಾಪಕರಾದ ಪವನ್ ಗೌಡ ಅವರು ನನ್ನ ಗೆಳೆಯರು ಆಗಿದ್ದರಿಂದ ನನ್ನ ಈ ಸಿನಿಮಾ ಕಥೆಗೆ ಸಾತ್ ಕೊಟ್ಟಿದ್ದಾರೆ ಮತ್ತು ‘ಕಮರೊಟ್ಟು 2’ cinema ಕಂಟೆಂಟ್, ಥ್ರಿಲ್ಲರ್, ಸಸ್ಪೆನ್ಸ್, ಪ್ಯಾರ ನಾರ್ಮಲ್ ಆಗಿರುತ್ತದೆ ಎನ್ನುತ್ತಾ, ಚಿತ್ರದ ಕಥೆಗೆ ತ್ರೀ ಡೈಮೆನ್ಷನ್ ರೂಪವಿದ್ದು, ಪ್ರೇಕ್ಷಕರಿಗೆ ಚಿತ್ರದ ಸ್ಕ್ರೀನ್ ಪ್ಲೇ ವಿನೂತನವಾದ ಅನುಭವವನ್ನು ಕೊಡುತ್ತದೆ. ‘ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರವನ್ನು ನೋಡಿ ಗೆಲ್ಲಿಸಿದ ನನಗೆ ಈ ಚಿತ್ರ ಅದಕ್ಕೂ ಮೂರು ಪಟ್ಟು ಮೀರಿ ಅದ್ಬುತವಾಗಿ ಮೂಡಿ ಬಂದಿದೆ. ಸದ್ಯಕ್ಕೆ ಸಿನಿಮಾದ ಟ್ರೈಲರ್ ಎ2 ಮ್ಯೂಸಿಕ್ ನಲ್ಲಿ ಇದ್ದು, ಪ್ರೇಕ್ಷಕರಿಗಾಗಿ ಆದಷ್ಟು ಬೇಗ ಚಿತ್ರಮಂದಿರಕ್ಕೆ ಬರುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರನ ಪುತ್ರ ಗೌತಮ್ ವಿಮಲ್ ನಿರ್ದೇಶನದ ‘ಕೈಮರ’ ಚಿತ್ರದ ಪ್ರಮುಖಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ನವೆಂಬರ್ 12, ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ “ಕೈಮರ” ಚಿತ್ರತಂಡ ಪ್ರಿಯಾಂಕ ಉಪೇಂದ್ರ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬ ಶುಭಾಶಯ ತಿಳಿಸಿದೆ.
ವಿ.ಮತ್ತಿಯಳಗನ್ ನಿರ್ಮಾಣದ ಈ ಚಿತ್ರದ ಪ್ರಮುಖಪಾತ್ರಗಳಲ್ಲಿ ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್, ಮತ್ತಿಯಳಗನ್ ಮುಂತಾದವರು ನಟಿಸುತ್ತಿದ್ದಾರೆ. ಇದೊಂದು ಅಪರೂಪದ ತಾರಾಗಣವಾಗಿದ್ದು, ಅನುಭವಿ ಕಲಾವಿದರನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ಅಷ್ಟೂ ಕಲಾವಿದರಿಗೂ ವಿಶೇಷ ಪಾತ್ರವನ್ನು ನೀಡಿದ್ದು ವಿಶೇಷ. ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ
‘ಕೈಮರ’ ಚಿತ್ರದ ಕಥೆಯನ್ನು ಪಿ. ವಿಮಲ್ ಬರೆದಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನ, ಮಣಿಕಂಠನ್ ಛಾಯಾಗ್ರಹಣ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನ “ಕೈಮರ” ದಲ್ಲಿರಲಿದೆ.
Live Tv
[brid partner=56869869 player=32851 video=960834 autoplay=true]
ಟೂರ್ನಿವಲ್ (First indian international celebrbrity tournament and carnival) ನ ಉದ್ಘಾಟನಾ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ANYELP Entertainment ಹಾಗೂ White lotus entertainment ಸಂಸ್ಥೆ ಆಯೋಜಿಸಿರುವ ಸಮಾರಂಭದಲ್ಲಿ ಶ್ರೀಲಂಕಾ ಪ್ರವಾಸೋದ್ಯಮ ಸಚಿವರಾದ ಡಯಾನ ಗ್ಯಾಮೇಜ್, ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರಾದ ಇಬ್ರಾಹಿಂ ರಷೀದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಟಿ ಪ್ರಿಯಾಂಕ ಉಪೇಂದ್ರ, ಜಾಕಿರ್ ಹುಸೇನ್, ನಟ ರುದ್ರ, ನಾಗತಿಹಳ್ಳಿ ಚಂದ್ರಶೇಖರ್, ನಟ ಅಜಯ್ ರಾವ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
“ಟೂರ್ನಿವಲ್” ಎಂದರೆ ಸೌತ್ ಏಷ್ಯಾ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯ. ನಮ್ಮ ರಾಜ್ಯದ ಸಿನಿತಾರೆಯರು ಹಾಗೂ ಮಾಲ್ಡೀವ್ಸ್ ನ ಸಿನಿತಾರೆಯರ ನಡುವೆ ಫುಟ್ಬಾಲ್ ಟೂರ್ನಮೆಂಟ್ ಆಯೋಜಿಸಲಾಗುವುದು. ಬರೀ ಕ್ರೀಡೆ ಅಷ್ಟೇ ಅಲ್ಲ. ಬೇರೆಬೇರೆ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದೇಶಗಳಲ್ಲೂ ನಡೆಸುವ ಉದ್ದೇಶವಿದೆ. ಇಲ್ಲಿನ ಚಿತ್ರ ಸಹ ಮಾಲ್ಡೀವ್ಸ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದ “ಟೂರ್ನಿವಲ್” ನ ಮ್ಯಾನೇಜಿಂಗ್ ಡೈರೆಕ್ಟರ್ ಪೂಜಾಶ್ರೀ, ಉದ್ಘಾಟನೆಗೆ ಆಗಮಿಸಿದ್ದ ಶ್ರೀಲಂಕಾ ಹಾಗೂ ಮಾಲ್ಡೀವ್ಸ್ ದೇಶದ ಪ್ರವಾಸೋದ್ಯಮ ಸಚಿವರಿಗೆ, ಇಲ್ಲಿನ ಗಣ್ಯರಿಗೆ ಧನ್ಯವಾದ ತಿಳಿಸಿದರು. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ
ಈ ಸಂಸ್ಥೆಯವರು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವರಿಗೆ ಬೇಕಾದ ಸಹಕಾರ ನೀಡಲು ನಾವು ಸಿದ್ದ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರಾದ ಇಬ್ರಾಹಿಂ ರಷೀದ್ ಹಾಗೂ ಶ್ರೀಲಂಕಾ ಪ್ರವಾಸೋದ್ಯಮ ಸಚಿವರಾದ ಡಯನಾ ಗ್ಯಾಮೇಜ್ ತಿಳಿಸಿದರು. ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಯಿತು. ಪ್ರಸಿದ್ದ ಕಲಾವಿದರೊಬ್ಬರ ಭರತನಾಟ್ಯ, ಖ್ಯಾತ ಶ್ರೀಲಂಕಾ ಗಾಯಕಿ ಯೋಹಾನಿ ಅವರ ಗಾಯನ ಹಾಗೂ ಫ್ಯಾಷನ್ ಶೋ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಕಣ್ಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ “Life of cockroach” ಚಿತ್ರದ ಶೀರ್ಷಿಕೆ ಅನಾವರಣ ಸಹ ನಡೆಯಿತು.
]Live Tv
[brid partner=56869869 player=32851 video=960834 autoplay=true]
ಗೌತಮ್ ವಿಮಲ್ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪ್ರಿಯಾಂಕ ಉಪೇಂದ್ರ (Priyanka Upendra), ಪ್ರಿಯಮಾಣಿ ಹಾಗೂ ಛಾಯಾಸಿಂಗ್ (Chhayasingh) ನಟನೆ. ವಿಜಯ ದಶಮಿಯ ಶುಭದಿನದಂದು ವಿ.ಮತ್ತಿಯಳಗನ್ ನಿರ್ಮಾಣದ, ಗೌತಮ್ ವಿಮಲ್ ನಿರ್ದೇಶನದ ಹಾಗೂ ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್ ಪ್ರಮುಖಪಾತ್ರಗಳಲ್ಲಿ ನಟಿಸುತ್ತಿರುವ ” ಕೈಮರ” (Kaimara) ಚಿತ್ರದ ಮುಹೂರ್ತ (Muhurta) ಸಮಾರಂಭ ರಾಜರಾಜೇಶ್ವರಿ ನಗರದಲ್ಲಿ ನೆರವೇರಿತು.
ವಿಜಯ ದಶಮಿ ಶುಭದಿನದಂದು “ಕೈಮರ” ಚಿತ್ರ ಆರಂಭವಾಗಿದೆ. ಖ್ಯಾತ ನಿರ್ದೇಶಕ ಪಿ.ವಾಸು ಅವರ ತಮ್ಮನ ಮಗ ಗೌತಮ್ ವಿಮಲ್ (Gautam Vimal) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮತ್ತಿಯಳಗನ್ ಅವರು ನಿರ್ಮಾಣದೊಂದಿಗೆ ನಟನೆಯನ್ನು ಮಾಡುತ್ತಿದ್ದಾರೆ. ನಾನು ಈ ಹಿಂದೆ ಸಾಕಷ್ಟು ಹಾರಾರ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. “ಕೈಮರ” ಚಿತ್ರದಲ್ಲಿ ನಾನು ಈ ತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರಿಯಾಮಣಿ, ಛಾಯಾಸಿಂಗ್ ಅವರೊಟ್ಟಿಗೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ಕನ್ನಡದಲ್ಲಿ “ಕೆ.ಜಿ.ಎಫ್”, “ಕಾಂತಾರ ” ದಂತಹ ಡಿಫರೆಂಟ್ ಜಾನರ್ ನ ಚಿತ್ರಗಳು ಜನರ ಮೆಚ್ಚುಗೆ ಪಡೆಯುತ್ತಿದೆ. ನಮ್ಮ “ಕೈಮರ” ಚಿತ್ರದ ಕಥೆ ಸಹ ಡಿಫರೆಂಟ್ ಆಗಿದ್ದು, ನೋಡುಗರ ಮನ ಗೆಲ್ಲುವ ವಿಶ್ವಾಸವಿದೆ ಎಂದು ನಟಿ ಪ್ರಿಯಾಂಕ ಉಪೇಂದ್ರ ತಿಳಿಸಿದರು.
ಇದೊಂದು ಹಾರಾರ್ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ಚಿತ್ರ. ನನ್ನ ನಿರ್ದೇಶನದ ಮೊದಲ ಚಿತ್ರ ಸಹ. ಕಳೆದ ಮೂರುವರ್ಷಗಳಿಂದ “ಕೈಮರ” ಕುರಿತಾದ ಕೆಲಸಗಳು ನಡೆಯುತ್ತಿದ್ದವು. ಕೊರೋನ ಕಾರಣದಿಂದ ಚಿತ್ರೀಕರಣ ಆರಂಭವಾಗುವು ಸ್ವಲ್ಪ ತಡವಾಯಿತು. ಈಗ ದಸರಾದ ಶುಭದಿನದಲ್ಲಿ ಮುಹೂರ್ತ ನಡೆದಿದೆ. ಅಕ್ಟೋಬರ್ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು ನಿರ್ದೇಶನ ಗೌತಮ್ ವಿಮಲ್. ಇದನ್ನೂ ಓದಿ:ರೂಪೇಶ್‌ಗೆ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡುತ್ತೀನಿ ಎಂದ ಸಾನ್ಯ
“ಕೈಮರ” ಚಿತ್ರ ಮಾಮೂಲಿ ಚಿತ್ರಗಳಿಗಿಂತ ಸ್ವಲ್ಪ ಭಿನ್ನವಾಗಿರಲಿದೆ. ನಿರ್ದೇಶಕ ಗೌತಮ್ ಈ ಚಿತ್ರ ಉತ್ತಮವಾಗಿ ಬರಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಪಿ. ವಿಮಲ್ ಕಥೆ ಬರೆದಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನ, ಮಣಿಕಂಠನ್ ಛಾಯಾಗ್ರಹಣ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನ “ಕೈಮರ” ದಲ್ಲಿರಲಿದೆ. ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್ ಮುಖ್ಯಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನಾನು ಹಾಗೂ ವಿನಯ್ ಗೌಡ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದೇವೆ. ಇದೇ ಹತ್ತನೇ ತಾರೀಖಿನಿಂದ ಚಿತ್ರೀಕರಣ ಆರಂಭಿಸುತ್ತಿದ್ದೇವೆ. “ಕೈಮರ” 2023 ರ ಉತ್ತಮ ಚಿತ್ರವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ನಿರ್ಮಾಪಕ ಹಾಗೂ ನಟ ವಿ.ಮತ್ತಿಯಳಗನ್ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಭಕ್ತಿಪ್ರದಾನ ಚಿತ್ರಗಳಿಗೆ ಹೆಸರಾದವರು. ಈಗಾಗಲೇ ಹಲವಾರು ಭಕ್ತಿರಸ ಸಾರುವ ಚಿತ್ರಗಳನ್ನು ನಿರ್ದೇಶಿಸಿರುವ ಅವರೀಗ ಭಕ್ತರನ್ನು ಸದಾ ಕಾಯುವ ತಾಯಿ ಶ್ರೀಹುಲಿಗೆಮ್ಮ ದೇವಿಯ ಕಥೆಯನ್ನು ಹೇಳಹೊರಟಿದ್ದಾರೆ. ‘ವಿಶ್ವರೂಪಿಣಿ ಹುಲಿಗೆಮ್ಮ’ ಹೆಸರಿನ ಈ ಚಿತ್ರದ ಮುಹೂರ್ತ ಸಮಾರಂಭ ಕೊಪ್ಪಳ ತಾಲ್ಲೂಕಿನ ಶ್ರೀಹುಲಿಗೆಮ್ಮ ದೇವಸ್ಥಾನದಲ್ಲಿ ನೆರವೇರಿತು.
ಚಿತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅವರು ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದು, ಈ ಕುರಿತಂತೆ ಮಾತನಾಡಿದ ಅವರು, ಹುಲಿಗೆಮ್ಮ ದೇವಿಯ ಮಹಿಮೆ ಬಹಳ ದೊಡ್ಡದು, ಭಕ್ತರು ಬೇಡಿದ್ದನ್ನು ಕರುಣಿಸುವ ಆ ತಾಯಿಯ ಚಿತ್ರಕ್ಕೆ ನನ್ನನ್ನು ಆಯ್ಕೆಮಾಡಿದ್ದು ತುಂಬಾ ಸಂತೋಷವಾಗಿದೆ, ಮೊದಲಬಾರಿಗೆ ನಾನು ಭಕ್ತಿಪ್ರದಾನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದೂ ಸಾಯಿಪ್ರಕಾಶ್ ಅವರು ಚಿತ್ರವನ್ನು ನಿರ್ದೇಶಿಸುತ್ತಿರುವುದು ಇನ್ನೂ ಖುಷಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ
ನಂತರ ನಿರ್ದೇಶಕ ಸಾಯಿಪ್ರಕಾಶ್ ಮಾತನಾಡುತ್ತ ಇದು ನನ್ನ ನಿರ್ದೇಶನದ ೧೦೫ನೇ ಚಿತ್ರ. ಕಲ್ಯಾಣ ಕರ್ನಾಟಕದ ಜನರ ಮಾತೆ ಶ್ರೀಹುಲಿಗೆಮ್ಮ ದೇವಿಯ ಚರಿತ್ರೆಯನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇನೆ. ಸಂಜಯಕುಮಾರ್ ಅವರು ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ಭಾವನಾ ಪ್ರೊಡಕ್ಷನ್ಸ್ ಮೂಲಕ ಗೌರಮ್ಮ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹುಲಿಗೆಮ್ಮ ದೇವಿಯ ಚರಿತ್ರೆಯನ್ನು ಇಡೀ ವಿಶ್ವಕ್ಕೆ ತೋರಿಸುವಂತಹ ಕಾರ್ಯವನ್ನು ಈ ತಂಡ ಮಾಡುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಗೌರಮ್ಮ, ನಟಿ ಭಾವನಾ, ಹಾಸ್ಯನಟ ಸಂಜು ಬಸಯ್ಯ, ನಟಿ ಕವಿತಾ ಅಪೂರ್ವ ಸೇರಿದಂತೆ ಚಿತ್ರತಂಡದ ಎಲ್ಲರೂ ಉಪಸ್ಥಿತರಿದ್ದರು. ಅಣಜಿ ನಾಗರಾಜ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್‌ವುಡ್‌ನಲ್ಲಿ ಆ್ಯಕ್ಷನ್ ಪಾತ್ರಗಳ ಮೂಲಕ ಗಮನ ಸೆಳೆದಿರೋ ನಟಿ ಪ್ರಿಯಾಂಕ ಉಪೇಂದ್ರ ಕನ್ನಡದ ಜತೆ ಪರಭಾಷಾ ಚಿತ್ರಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳು ನಟಿಯ ಕೈಯಲ್ಲಿದೆ. ಇದರ ಬೆನ್ನಲ್ಲೇ `ಡಿಟೆಕ್ಟೀವ್ ತೀಕ್ಷ್ಣʼ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಲ್ಲೂ ಪ್ರಿಯಾಂಕ ನಟನೆಯ 50ನೇ ಚಿತ್ರಕ್ಕೆ ವಿಭಿನ್ನ ಪಾತ್ರದ ಮೂಲಕ ಬರುತ್ತಿದ್ದಾರೆ.
ಪ್ರಿಯಾಂಕ ಅಭಿನಯದ `ಡಿಟೆಕ್ಟೀವ್ ತೀಕ್ಷ್ಣʼ 50ನೇ ಚಿತ್ರವಾಗಿದ್ದು, ಇದೊಂದು ಬಿಗ್ ಬಜೆಟ್‌ನ ಪ್ಯಾನ ಇಂಡಿಯಾ ಚಿತ್ರವಾಗಿದೆ. ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತ್ರಿವಿಕ್ರಮ ರಾಘು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಪ್ರಿಯಾಂಕ ಉಪೇಂದ್ರ `ಡಿಟೆಕ್ಟೀವ್ ತೀಕ್ಷ್ಣʼ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
ಎಂದೂ ಮಾಡಿರದ ಡಿಫರೆಂಟ್ ಪಾತ್ರದಲ್ಲಿ ಪ್ರಿಯಾಂಕ ಕಾಣಿಸಿಕೊಳ್ತಿದ್ದು, ಮೇ 12ರಂದು ಮಗ ಆಯುಷ್ ಹುಟ್ಟು ಹಬ್ಬದಂದು ಆಯುಷ್ ಮತ್ತು ನಟ ಉಪೇಂದ್ರ ಚಿತ್ರದ ಮೋಷನ್ ಪೋಸ್ಟರ್ ಜತೆ ಶೀರ್ಷೀಕೆ ಅನಾವರಣ ಮಾಡಲಿದ್ದಾರೆ. ರಘು ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಚಿತ್ರಕ್ಕೆ ಪುರುಷೋತ್ತಮ ಬಿ ಕೊಯೂರು ಬಂಡವಾಳ ಹೂಡುತ್ತಿದ್ದಾರೆ. ಇದನ್ನೂ ಓದಿ: ಆರ್‌ಜೆ ಆಗಿ `ಆನ್ ಏರ್’ ಆಗ್ತಿದ್ದಾರೆ `ಓಲ್ಡ್ ಮಾಂಕ್’ ಶ್ರೀನಿ
ಆ್ಯಕ್ಷನ್ ಕ್ವೀನ್‌ಗೆ ಟಕ್ಕರ್ ಕೊಡಲು ದಕ್ಷಿಣ ಭಾರದ ಖ್ಯಾತ ವಿಲನ್‌ರೊಬ್ಬರು ಬಣ್ಣ ಹಚ್ಚಲಿದ್ದಾರೆ. ಎರಡು ಭಾಗಗಳಲ್ಲಿ ಬರುತ್ತಿರೋ `ಡಿಟೆಕ್ಟೀವ್ ತೀಕ್ಷ್ಣʼ ಇದೇ ಜೂನ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಕೇರಳ, ರಾಜಸ್ತಾನ, ಗೋವಾ ಸೇರಿದಂತೆ ಹಲವೆಡೆ 120 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ನಟಿ ಪ್ರಿಯಾಂಕ ಉಪೇಂದ್ರ ಅವರನ್ನ ಡಿಟೆಕ್ಟೀವ್ ಅವತಾರದಲ್ಲಿ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಹುಬ್ಬಳಿಯ ದಂಪತಿ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹುಬ್ಬಳ್ಳಿ ಮೂಲದ ಗೋಪಿ ದಂಪತಿ ವಿಡಿಯೋ ಮೂಲಕ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಕೆಲಸ ಕೇಳಿಕೊಂಡು ಉಪೇಂದ್ರ ಮನೆಗೆ ನಾವು ಹೋಗಿದ್ದೇವೆ. ಈ ವೇಳೆ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ತಮ್ಮನ್ನು ಸರಿಯಾದ ರೀತಿಯಲ್ಲಿ ನೋಡಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಮೂರನೇ ವ್ಯಕ್ತಿಯೋರ್ವ ದಂಪತಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕೆಲಸಕ್ಕೆ ಬನ್ನಿ ಅಂತ ತಾವೇ ಕರೆದು ನಮ್ಮನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ ಎಂಬುದಾಗಿ ದಂಪತಿ ಹೇಳಿದ್ದಾರೆ.
ಈ ಬಗ್ಗೆ ಉಪೇಂದ್ರ ಆಪ್ತ ಕಾರ್ಯದರ್ಶಿ ಶ್ರೀರಾಮ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ದಂಪತಿ ರೆಸಾರ್ಟ್‍ನಲ್ಲಿ ಕೆಲಸ ಕೇಳಿದ್ದರು. ಇಬ್ಬರು ಮಕ್ಕಳಿದ್ದಾಗ ಅಲ್ಲಿ ಹತ್ತಿರದಲ್ಲೆಲ್ಲೂ ಆಸ್ಪತ್ರೆಯ ಅನುಕೂಲವಿಲ್ಲ. ಮುಂದಿನ ಆಗು ಹೋಗುಗಳ ಬಗ್ಗೆ ಯೋಚಿಸಿಯೇ ನಾವು ಕೆಲಸ ನೀಡುವುದಿಲ್ಲ ಎಂದು ತಿಳಿಸಿದ್ದೇವು. ಅಷ್ಟೇ ಅಲ್ಲದೇ ಕೆಲಸಕ್ಕೆ ಬನ್ನಿ ಎಂದು ಯಾರನ್ನೂ ನಾವು ಕರೆದಿಲ್ಲ. ಆದರೆ ದಂಪತಿ ಅವರಾಗಿಯೇ ಬಂದಿದ್ದರು. ದಿನ ದಿನ ಹೀಗೆ ಅನೇಕ ಜನ ಬರುತ್ತಿರುತ್ತಾರೆ ಎಂದು ತಿಳಿಸಿದರು.
ಬೆಂಗಳೂರು: ಫೈರ್ ಸಂಸ್ಥೆ ಕೆಲಸ ಮಾಡುವ ರೀತಿ ನನಗೆ ಇಷ್ಟವಾಗುತ್ತಿರಲಿಲ್ಲ. ನಾನು 6 ತಿಂಗಳ ಹಿಂದೆಯೇ ಸಂಸ್ಥೆ ಬಿಡಲು ಯೋಚಿಸುತ್ತಿದ್ದೆ ಎಂದು ನಟಿ ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾನು ವಿದೇಶದಲ್ಲಿ ಇರುವಾಗ ಚೇತನ್ ಫೈರ್ ತಂಡದಲ್ಲಿ ಬಹಳಷ್ಟು ಬದಲಾವಣೆ ಮಾಡಿದ್ದಾರೆ. ಇದು ನನಗೆ ಬಹಳ ನೋವಾಗಿದೆ. ಹೀಗಾಗಿ ನಾನು ಫೈರ್ ಸಂಸ್ಥೆಯಿಂದ ಹೊರಗಡೆ ಬಂದಿದ್ದೇನೆ ಎಂದು ತಿಳಿಸಿದರು.
ಫೈರ್ ಉದ್ದೇಶ ಚೆನ್ನಾಗಿದೆ ಎನ್ನುವ ಕಾರಣಕ್ಕೆ ನಾನು ಸೇರಿದ್ದೆ. ಯಾವುದೇ ಸಮಸ್ಯೆಯಾದಾಗ ಮೊದಲು ನಮ್ಮಲ್ಲಿ ಚರ್ಚೆಯಾಗಿ ಅದನ್ನು ಬಗೆ ಹರಿಸುವ ಪ್ರಯತ್ನ ಮಾಡಬೇಕಿತ್ತು. ಒಂದು ವೇಳೆ ನಾಲ್ಕು ಗೋಡೆಯ ಮಧ್ಯೆ ಪರಿಹಾರವಾಗದೇ ಇದ್ದಾಗ ಕೋರ್ಟ್, ಮಾಧ್ಯಮದ ಮುಂದೆ ಹೋಗಬೇಕು. ಆದರೆ ಈ ಪ್ರಕರಣದಲ್ಲಿ ಆರಂಭದಲ್ಲೇ ಮಾಧ್ಯಮಕ್ಕೆ ಹೋಗಿದ್ದು ಸರಿ ಕಾಣಲಿಲ್ಲ. ಈ ಕಾರಣಕ್ಕೆ ನಾನು ಫೈರ್ ನಿಂದ ಹೊರ ಬಂದಿದ್ದೇನೆ ಎಂದು ವಿವರಿಸಿದರು.
ನಾನು ಶ್ರೀಲಂಕಾದಲ್ಲಿ ಇದ್ದಾಗಲೇ ಫೈರ್ ಕುರಿತಂತೆ ಕರೆಗಳು ಬಂದಿತ್ತು. ನಮಗೆ ತಿಳಿಯದೇ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ನನ್ನ ಜೊತೆ ಇನ್ನು ಕೆಲವರು ಹೊರ ಫೈರ್ ನಿಂದ ಹೊರ ಬಂದಿದ್ದಾರೆ ಎಂದು ತಿಳಿಸಿದರು.
ಮೀಟೂ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ, ಮೀಟೂ ಒಂದು ಉತ್ತಮ ವೇದಿಕೆ. ಇನ್ನು ಮುಂದೆಯಾದರೂ ಈ ರೀತಿಯ ಕಿರುಕುಳಗಳು ಆಗದಂತೆ ತಡೆಯಬಹುದು. ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಇಬ್ಬರು ನನಗೆ ಪರಿಚಯ. ಈ ಪ್ರಕರಣದಲ್ಲಿ ನಾನು ಯಾರ ಪರ ಇಲ್ಲ. ಇಬ್ಬರು ಆರೋಪ ಮಾಡಿದ್ದಾರೆ. ಕೋರ್ಟ್ ಏನು ಹೇಳುತ್ತದೋ ಆ ತೀರ್ಪಿಗೆ ನಾನು ಬದ್ಧ. ತಿಳಿಯದ ವಿಚಾರಗಳಿಗೆ ಪ್ರತಕ್ರಿಯಿಸುವುದಿಲ್ಲ ಎಂದರು.
ಮುಂದೆ ಏನು ಮಾಡುತ್ತೀರಿ ಎನ್ನುವ ಪ್ರಶ್ನೆಗೆ, ಉಪ್ಪಿ ಫೌಂಡೇಶನ್ ಇದೆ. ಪ್ರಜಾಕೀಯ ಇದೆ. ಅದರಲ್ಲೂ ಸಮಾಜ ಕಾರ್ಯ ಮಾಡಬಹುದು ಎಂದು ಉತ್ತರಿಸಿದರು.