Tag: ಪ್ರಿಯಾಂಕಾ

  • ಡಬಲ್ ಎಲಿಮಿನೇಟ್ -ಗಳಗಳನೇ ಅತ್ತ ಪ್ರಿಯಾಂಕಾ, ಭೂಮಿ

    ಡಬಲ್ ಎಲಿಮಿನೇಟ್ -ಗಳಗಳನೇ ಅತ್ತ ಪ್ರಿಯಾಂಕಾ, ಭೂಮಿ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ 90 ದಿನಗಳನ್ನು ಮುಗಿಸಿದೆ. ಈ ಕಾರ್ಯಕ್ರಮ ಮುಗಿಯಲು ಇನ್ನೂ ಕೆಲವು ದಿನಗಳು ಇರುವಾಗಲೇ ಭಾನುವಾರ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಡಬಲ್ ಎಲಿಮಿನೇಟ್ ಆಗಿದ್ದಾರೆ.

    ಹೌದು.ಭಾನುವಾರ ನಟ ಸುದೀಪ್ ಅವರು ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಇಬ್ಬರನ್ನು ಎಲಿಮಿನೇಟ್ ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರಿಗೂ ಸರ್ಪ್ರೈಸ್ ಕೊಟ್ಟಿದ್ದಾರೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ಇದೆ. ಹೀಗಾಗಿ ಈ ವಾರ ಎಲಿಮಿನೇಟ್ ಇರಲಿಲ್ಲ. ಈ ವಿಚಾರ ಮನೆಯ ಸದಸ್ಯರಿಗೆ ಗೊತ್ತಿರಲಿಲ್ಲ. ಹೀಗಾಗಿ ಮನೆಯವರ ಮನಸ್ಥಿತಿ ತಿಳಿದುಕೊಳ್ಳಲು ನಾಮಿನೇಟ್ ಪ್ರಕ್ರಿಯೆ ಮಾಡಲಾಗಿತ್ತು.

    ಅದರ ಅನುಸಾರ ಪ್ರಿಯಾಂಕಾ, ಭೂಮಿ ಶೆಟ್ಟಿ, ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಈ ನಾಲ್ವರಲ್ಲಿ ಭಾನುವಾರ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿಯನ್ನು ಸುದೀಪ್ ಎಲಿಮಿನೇಟ್ ಮಾಡಿದ್ದಾರೆ.

    ಇವರಲ್ಲಿ ದೀಪಿಕಾ ದಾಸ್ ಅವರನ್ನು ಸೇಫ್ ಎಂದು ಸುದೀಪ್ ಹೇಳಿದರು. ಉಳಿದ ಮೂವರಲ್ಲಿ ಇಂದು ಇಬ್ಬರು ಎಲಿಮಿನೇಟ್ ಆಗುತ್ತಾರೆ. ಭೂಮಿ ಶೆಟ್ಟಿ ಈ ವಾರ ಮೊದಲು ಎಲಿಮಿನೇಟ್ ಆಗುತ್ತಿರುವವರು ಎಂದು ಹೇಳಿದರು. ಇಂದು ಯಾರೇ ಎಲಿಮಿನೇಟ್ ಆದರೂ ವೇದಿಕೆಯ ಮೇಲೆ ಬರಲ್ಲ ಎಂದು ಇಷ್ಟು ದಿನ ಬಿಗ್‍ಬಾಸ್ ಮನೆಯಲ್ಲಿ ಕಳೆದ ಭೂಮಿ ಶೆಟ್ಟಿಯ ಜರ್ನಿಯ ವಿಡಿಯೋವನ್ನು ಪ್ಲೇ ಮಾಡಿದರು.

    ವಿಡಿಯೋ ನೋಡಿದ ಭೂಮಿ, ಮನೆಯಿಂದ ಹೊರ ಹೋಗಲು ತುಂಬಾ ನೋವಾಗುತ್ತಿದೆ. ಬಿಗ್‍ಬಾಸ್ ವಾಯ್ಸ್, ಮನೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಅದ್ಭುತವಾದ ಅನುಭವ, ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ, ಒಳ್ಳೆಯ ಫ್ರೆಂಡ್ಸ್ ಸಿಕ್ಕಿದ್ದಾರೆ. ಖುಷಿಯಿಂದ ಹೋಗುತ್ತೇನೆ ಎಂದು ಗಳಗಳನೇ ಅತ್ತಿದ್ದಾರೆ.

    ಮನೆಯಿಂದ ಹೊರ ಹೋಗುತ್ತಿರುವ ಎರಡನೇ ಸ್ಪರ್ಧಿ ಪ್ರಿಯಾಂಕಾ ಎಂದು ಸುದೀಪ್ ಹೇಳಿದರು. ಬಳಿಕ ಪ್ರಿಯಾಂಕಾ ಅವರ ಬಿಗ್‍ಬಾಸ್ ಜರ್ನಿಯ ವಿಡಿಯೋ ಪ್ಲೇ ಮಾಡಿದರು.

    ವಿಡಿಯೋ ನೋಡಿ ಮಾತನಾಡಿದ ಪ್ರಿಯಾಂಕಾ, ನಿಮ್ಮ ಜೊತೆ ಮಾತನಾಡೋಕೆ ಆಗುತ್ತಿಲ್ಲ ಎಂದು ತುಂಬಾ ನೋವಾಗುತ್ತಿದೆ. ನಾನು ಅತ್ತಾಗ ಮನೆಯ ಎಲ್ಲರೂ ಸಮಾಧಾನ ಮಾಡಿದ್ದಾರೆ. ಹೀಗಾಗಿ ನಾನು ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಎಂದು ಮನೆಯವರ ಬಳಿ ಕ್ಷಮೆ ಕೇಳಿದರು. ನಂತರ ನನಗೆ ತಿಳಿದ ಹಾಗೆ ಆಟವಾಡಿದ್ದೇನೆ ತಪ್ಪಾಗಿದ್ದರೆ ಸಾರಿ ಸರ್ ಎಂದು ಸುದೀಪ್ ಬಳಿಯೂ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದಾರೆ.

    ಕೊನೆಯ ಕ್ಷಣದಲ್ಲಿ ಸುದೀಪ್ ಇಬ್ಬರಿಗೂ ಸರ್ಪ್ರೈಸ್ ಕೊಟ್ಟಿದ್ದಾರೆ. ನೀವಿಬ್ಬರು ಮನೆಯಿಂದ ಹೊರಗೆ ಬರದೆ ಮನೆಯಲ್ಲಿಯೇ ಇರಿ. ಮುಂದಿನ ಶನಿವಾರ ಮತ್ತೆ ಸಿಗೋಣ ಎಂದು ಹೇಳಿ ಸುದೀಪ್ ಹೋಗಿದ್ದಾರೆ. ಇದನ್ನು ಕೇಳಿದ ತಕ್ಷಣ ಪ್ರಿಯಾಂಕಾ ಮತ್ತು ಭೂಮಿ ಒಂದು ಕ್ಷಣ ಅಚ್ಚರಿ ಪಟ್ಟಿದ್ದಾರೆ. ನಂತರ ಮನೆಯ ಎಲ್ಲಾ ಸ್ಪರ್ಧಿಗಳು ಅವರಿಬ್ಬರನ್ನು ಅಪ್ಪಿಕೊಂಡು ಸಂತಸಪಟ್ಟಿದ್ದಾರೆ.

  • ನಂಗೆ ವಯಸ್ಸು 30, ಇಬ್ಬರು ಮಕ್ಕಳಿದ್ದಾರೆ ಎಂದ ಪ್ರಿಯಾಂಕಾ

    ನಂಗೆ ವಯಸ್ಸು 30, ಇಬ್ಬರು ಮಕ್ಕಳಿದ್ದಾರೆ ಎಂದ ಪ್ರಿಯಾಂಕಾ

    ಬೆಂಗಳೂರು: ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ಪ್ರಿಯಾಂಕಾ ನನಗೆ ವಯಸ್ಸು 30 ಆಗಿದೆ. ಜೊತೆಗೆ ನನಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಅಚ್ಚರಿ ಹೇಳಿಕೆಯನ್ನು ಕೊಟ್ಟಿದ್ದಾರೆ.

    ಹೌದು..ಬಿಗ್‍ಬಾಸ್ ನೀಡಿದ್ದ ಒಂದು ವಿಶೇಷ ಚಟುವಟಿಕೆಗಾಗಿ ಪ್ರಿಯಾಂಕಾ ಈ ರೀತಿ ಸುಳ್ಳು ಹೇಳಿದ್ದಾರೆ. ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಬಿಗ್‍ಬಾಸ್ ಮನೆಯ ಸದಸ್ಯರಿಗೆ ಒಂದು ವಿಶೇಷ ಚಟುವಟಿಕೆಯನ್ನು ನೀಡಿತ್ತು. ಅದೇನೆಂದರೆ ಮನೆಯ ಕ್ಯಾಪ್ಟನ್ ಹರೀಶ್ ರಾಜ್ ಒಂದು ಚಾಟ್ ಶೋ ನಡೆಸಿಕೊಡಬೇಕಿತ್ತು. ಅದರಲ್ಲಿ ಹರೀಶ್ ರಾಜ್ ನಿರೂಪಕರಾಗಿದ್ದು, ಮನೆಯ ಇತರೆ ಸದಸ್ಯರಿಗೆ ಪ್ರಶ್ನೆ ಕೇಳಬೇಕಿತ್ತು. ಆ ಪ್ರಶ್ನೆಗಳಿಗೆ ಮನೆಯ ಸದಸ್ಯರು ಸುಳ್ಳು ಉತ್ತರವನ್ನೇ ನೀಡಬೇಕಿತ್ತು.

    ಆಗ ಪ್ರಿಯಾಂಕಾಗೆ, ನೀವು ತುಂಬಾ ಒಳ್ಳೆಯ ನಟಿ ಎಂದು ಹರೀಶ್ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರಿಯಾಂಕಾ, ಅಯ್ಯೋ ನಾನು ಇಲ್ಲಿಯವರೆಗೂ ಏನೂ ಮಾಡೇ ಇಲ್ಲ ಎಂದಿದ್ದಾರೆ. ಇನ್ನೂ ನಿಮಗೆ ಮದುವೆನೇ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, ನನ್ನ ವಯಸ್ಸು 30, ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ.

    ಇದೇ ವೇಳೆ ನಿಮಗೆ ಹುಬ್ಬು ಏರಿಸುವುದು ತುಂಬಾನೇ ಇಷ್ಟ ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರಿಯಾಂಕಾ, ನನಗೆ ಹುಬ್ಬು ಏರಿಸಲು ಸ್ವಲ್ಪನೂ ಇಷ್ಟವಿಲ್ಲ. ನನಗೆ ನಟನೆ ಮಾಡಲು ಬರಲ್ಲ. ಆದರೆ ವಿಲನ್ ಪಾತ್ರ ಮಾಡಬೇಕಿತ್ತು. ಹೀಗಾಗಿ ಹುಬ್ಬು ಏರಿಸುತ್ತೀನಿ ಎಂದು ಸುಳ್ಳಿನ ಕಥೆಯನ್ನೇ ಹೇಳಿದ್ದಾರೆ.

  • ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಕಿಶನ್

    ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಕಿಶನ್

    ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಕಿಶನ್ ವ್ಯಕ್ತಿಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ರಹಸ್ಯವನ್ನು ಕಿರುತೆರೆ ನಟಿ ಪ್ರಿಯಾಂಕಾ ಬಿಚ್ಚಿಟ್ಟಿದ್ದಾರೆ.

    ಕಿಶನ್ ವ್ಯಕ್ತಿಯಿಂದ 16ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು. ಸೋಮವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್‍ವೊಂದನ್ನು ನೀಡಿದ್ದರು. ಈ ಟಾಸ್ಕ್‍ನಲ್ಲಿ ಜೋಡಿಗಳಗಾಗಿ ಸ್ಪರ್ಧಿಗಳು ಭಾಗವಹಿಸಿದ್ದರು. ಅಲ್ಲದೆ ಬಿಗ್ ಬಾಸ್ ತಮ್ಮ ಜೋಡಿಯ ವೈಯಕ್ತಿಕ ಜೀವನದ ಬಗ್ಗೆ ಮನೆ ಮಂದಿಗೆಲ್ಲಾ ತಿಳಿಸಬೇಕು ಎಂದು ಹೇಳಿದ್ದರು. ಆಗ ಕಿಶನ್‍ಗೆ ಜೋಡಿಯಾಗಿದ್ದ ಪ್ರಿಯಾಂಕಾ ಮನೆ ಮಂದಿ ಮುಂದೆ ರಹಸ್ಯ ಬಿಚ್ಚಿಟ್ಟಿದ್ದಾರೆ.

    ಕಿಶನ್‍ಗೆ ಡ್ಯಾನ್ಸರ್ ಆಗಬೇಕು ಎಂಬ ಆಸೆ ಯಾವತ್ತೂ ಇರಲಿಲ್ಲ. ಆದರೆ ಅವರು ಡ್ಯಾನ್ಸರ್ ಆಗಬೇಕು ಎಂಬುದು ಅವರ ತಾಯಿಯ ಆಸೆ. ಕಿಶನ್ ಶಾಲೆಗೆ ಹೋಗುವ ಸಂದರ್ಭದಲ್ಲಿ ಅವರ ತಾಯಿ ನೀನು ಡ್ಯಾನ್ಸರ್ ಆಗಬೇಕು ಎಂದು ಬಾಂಬೆಗೆ ಕಳುಹಿಸಿದ್ದರು. ಹಾಗೆಯೇ ಕಿಶನ್ ತಮ್ಮ ತಾಯಿಗೋಸ್ಕರ ತಮ್ಮ ಎಲ್ಲ ಆಸೆಯನ್ನು ಬಿಟ್ಟು 16ನೇ ವಯಸ್ಸಿಗೆ ಬಾಂಬೆಗೆ ಹೋಗುತ್ತಾರೆ. ಆ ಸಮಯದಲ್ಲಿ ಯಾರೇ ಡ್ಯಾನ್ಸರ್, ಆ್ಯಕ್ಟರ್ ಆಗುತ್ತೇನೆ ಎಂದರೆ ಕಿಶನ್ ಅವರ ಜೊತೆ ಹೋಗುತ್ತಿದ್ದರು ಎಂದು ಪ್ರಿಯಾಂಕಾ ಹೇಳಿದರು.

    ಹೀಗೆ ಒಬ್ಬ ವ್ಯಕ್ತಿ ನಿನ್ನನ್ನು ಡ್ಯಾನ್ಸರ್ ಮಾಡುತ್ತೇನೆ ಎಂದು ಕಿಶನ್‍ನನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅವರು ಕಿಶನ್‍ಗೆ ಲೈಂಗಿಕ ಕಿರುಕುಳಕ್ಕೆ ನೀಡಿದ್ದರು. ಆದರೆ ಆ ವಯಸ್ಸಿನಲ್ಲಿ ಕಿಶನ್ ಗೆ ಅದನ್ನು ಹೇಗೆ ತಡೆಯಬೇಕು ಎಂಬುದು ಗೊತ್ತಿರಲಿಲ್ಲ. ಪ್ರತಿ ಬಾರಿ ಆ ವ್ಯಕ್ತಿಯ ಕಿರುಕುಳ ನೀಡುತ್ತಿದ್ದಾಗ ಕಿಶನ್ ತಪ್ಪಿಸಿಕೊಂಡಿದ್ದರು. ಕಳೆದ ವರ್ಷವೂ ಕಿಶನ್ ಗೆ ಹೀಗೆ ಆಗಿದ್ದು, ಅದನ್ನು ತಡೆದರು ಎಂದರು.

    ಕಿಶನ್ ಈ ವಿಷಯವನ್ನು ತಮ್ಮ ಲಾಸ್ಟ್ ಗರ್ಲ್ ಫ್ರೆಂಡ್ ಜೊತೆ ಹಂಚಿಕೊಂಡಿದ್ದರು. ಕಿಶನ್ ತುಂಬಾ ಹುಡುಗಿಯರೊಂದಿಗೆ ಡೇಟ್ ಮಾಡಿದ್ದು, ಅದರಲ್ಲಿ ಇಬ್ಬರು ನಿನ್ನ ಬಳಿ ಏನು ಇದೆ ಎಂದು ಅವಮಾನ ಮಾಡಿದ್ದರು. ಕಿಶನ್ ಈ ಮನೆಗೆ ಬಂದ ಮೇಲೆ ಶೈನ್, ವಾಸುಕಿ ಹಾಗೂ ಚಂದನಾ ಜೊತೆ ಕ್ಲೋಸ್ ಆಗಿದ್ದರು. ಹೀಗಿದ್ದರೂ ಅವರು ಏಕಾಂಗಿ ಆಗಿಯೇ ಇರುತ್ತಾರೆ ಎಂದು ಪ್ರಿಯಾಂಕಾ ಮನೆ ಮಂದಿಗೆ ತಿಳಿಸಿದರು.

  • ಪ್ರಿಯಾಂಕಾ ಜೊತೆ ನನ್ನ ಮದುವೆ ಆಗಿದೆ: ಶೈನ್ ಶೆಟ್ಟಿ

    ಪ್ರಿಯಾಂಕಾ ಜೊತೆ ನನ್ನ ಮದುವೆ ಆಗಿದೆ: ಶೈನ್ ಶೆಟ್ಟಿ

    ಬೆಂಗಳೂರು: ಬಿಗ್ ಬಾಸ್ ಸೀಸನ್-7 ಸ್ಪರ್ಧಿ ಶೈನ್ ಶೆಟ್ಟಿ ನನ್ನ ಹಾಗೂ ಪ್ರಿಯಾಂಕಾ ಮದುವೆ ಆಗಿದೆ ಎಂಬ ಹೇಳಿಕೆಯೊಂದನ್ನು ನೀಡಿದ್ದಾರೆ.

    ಬುಧವಾರ ಟಾಸ್ಕ್ ಮುಗಿದ ನಂತರ ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್, ಪ್ರಿಯಾಂಕಾ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಶೈನ್, ಪ್ರಿಯಾಂಕಾ ಜೊತೆ ನನ್ನ ಮದುವೆ ಆಗಿದ್ದು, ಮಗು ಕೂಡ ಇದೆ. ನಮ್ಮ ಮಗುವನ್ನು ನಮ್ಮ ತಾಯಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

    ಇದನ್ನು ಕೇಳಿಸಿಕೊಂಡ ಪ್ರಿಯಾಂಕಾ, ಶೈನ್ ಸುಳ್ಳು ಹೇಳುತ್ತಿದ್ದಾರೆ. ನಮ್ಮಿಬ್ಬರ ಮದುವೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಸ್ವಲ್ಪ ಹೊತ್ತಿನ ನಂತರ ಮತ್ತೆ ಶೈನ್, ಪ್ರಿಯಾಂಕಾ ಅವರಿಗೆ ರೇಗಿಸಲು ಶುರು ಮಾಡಿದ್ದರು. ಈ ವೇಳೆ ಗಾಯಕ ವಾಸುಕಿ ವೈಭವ್ ಕೂಡ ಪ್ರಿಯಾಂಕಾಗೆ, ಶೈನ್ ಹೆಸರು ಹೇಳುವ ಮೂಲಕ ರ‍್ಯಾಗ್ ಮಾಡುತ್ತಿದ್ದರು.

    ಶೈನ್ ಹಾಗೂ ವಾಸುಕಿ ರೇಗಿಸುವುದನ್ನು ಜಾಸ್ತಿ ಮಾಡಿದ್ದಾಗ ಪ್ರಿಯಾಂಕಾ ಕ್ಯಾಮೆರಾ ಮುಂದೆ ಹೋಗಿ ಬಿಗ್ ಬಾಸ್ ಮನೆ ಹೊರಗೆ ನನಗೊಂದು ಜೀವನ ಇದೆ. ಅದನ್ನು ಇವರು ಹಾಳು ಮಾಡುತ್ತಿದ್ದಾರೆ. ದಯವಿಟ್ಟು ಇದನ್ನು ನಿಲ್ಲಿಸಲು ಹೇಳಿ ಬಿಗ್ ಬಾಸ್ ಬಳಿಕ ಮನವಿ ಮಾಡಿಕೊಂಡಿದ್ದಾರೆ.

    ಇದಾದ ಬಳಿಕವೂ ಶೈನ್, ಪ್ರಿಯಾಂಕಾ ಅವರನ್ನು ರೇಗಿಸಲು ಶುರು ಮಾಡಿದ್ದರು. ಆಗ ಪ್ರಿಯಾಂಕಾ, ಈಗ ಶೈನ್ ನನ್ನ ಅಣ್ಣ. ನಾನು ಅವರಿಗೆ ರಾಖಿ ಕಟ್ಟುತ್ತೇನೆ ಎಂದು ಹೇಳುವ ಮೂಲಕ ಕೈಯಲ್ಲಿದ್ದ ಬ್ಯಾಂಡ್ ಅನ್ನು ಶೈನ್‍ಗೆ ಕಟ್ಟಲು ಪ್ರಯತ್ನಿಸುತ್ತಾರೆ. ಆದರೆ ಶೈನ್ ರಾಖಿ ಕಟ್ಟಿಸಿಕೊಳ್ಳಲಿಲ್ಲ.

    ಶೈನ್ ತಮಾಷೆಗಾಗಿ ಪ್ರಿಯಾಂಕಾ ಅವರ ಜೊತೆ ಮದುವೆ ಆಗಿದ್ದೇನೆ ಎಂದು ಹೇಳಿದ್ದಾರೆ. ಈ ಮೊದಲು ಪ್ರಿಯಾಂಕಾ ಸ್ನಾನಕ್ಕೆ ಹೋಗಬೇಕು ಎಂದಾಗ ಕುರಿ ಪ್ರತಾಪ್ ಹಾಗೂ ಶೈನ್ ಅವರಿಗೆ ಹೋಗಲು ಬಿಡದೇ ಸತಾಯಿಸುತ್ತಿದ್ದರು.

  • ಮದ್ವೆಗೆ ಬರೋ ಅತಿಥಿಗಳಿಗೆ ಸ್ಪೆಷಲ್ ಗಿಫ್ಟ್ ನೀಡ್ತಾರೆ ಪ್ರಿಯಾಂಕ

    ಮದ್ವೆಗೆ ಬರೋ ಅತಿಥಿಗಳಿಗೆ ಸ್ಪೆಷಲ್ ಗಿಫ್ಟ್ ನೀಡ್ತಾರೆ ಪ್ರಿಯಾಂಕ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಹಾಗೂ ಅಮೆರಿಕ ಗಾಯಕ ನಿಕ್ ಜೋನ್ಸ್ ಅವರ ಮದುವೆ ಸಿದ್ಧತೆ ಜೋರಾಗಿದೆ. ಈ ತಾರಾ ಜೋಡಿಯ ಮದುವೆಗೆ ಬರುವ ಅತಿಥಿಗಳಿಗೆ ವಿಶೇಷ ಗಿಫ್ಟ್ ಸಿಗಲಿದೆ.

    ಮದುವೆ ನಿಮಿತ್ತ ನಿಕ್ ಜೋನ್ಸ್ ಸಹೋದರ ಜೋ ಜೋನ್ಸ್ ಮತ್ತು ಆತನ ಗೆಳತಿ ಸೋಫಿ ಟರ್ನರ್ ಮುಂಬೈಗೆ ಬಂದಿದ್ದಾರೆ. ಈ ಇಬ್ಬರೂ ಸೇರಿ ವಿಶೇಷ ಉಡುಗೊರೆ ಆಯ್ಕೆ ಮಾಡಿದ್ದಾರಂತೆ. ಮದುವೆಗೆ ಆಗಮಿಸಲಿರುವ ಅತಿಥಿಗಳಿಗೆ ಬೆಳ್ಳಿ ನಾಣ್ಯ ನೀಡಲಾಗುತ್ತಿದ್ದು, ಇದನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ನಾಣ್ಯದ ಒಂದು ಬದಿಯಲ್ಲಿ ಇಂಗ್ಲಿಷ್ ವರ್ಣಮಾಲೆಯ ಎನ್‍ಪಿ ಎಂದು ಬರೆಯಲಾಗಿದೆ. ಮತ್ತೊಂದು ಮುಖದ ಮೇಲೆ ಲಕ್ಷ್ಮಿ ಹಾಗೂ ಗಣೇಶನ ಚಿತ್ರ ಬಿಡಿಸಲಾಗಿದೆ.

    ಮುಂಬೈನ ಪ್ರಿಯಾಂಕ ಮನೆಯಲ್ಲಿ ಈಗಾಗಲೇ ಮದುವೆಯ ಸಂಭ್ರಮ ಮನೆ ಮಾಡಿದೆ. ಉಮೈದ್ ಭವನದಲ್ಲಿ ಹಿಂದೂ ಸಂಪ್ರದಾಯದಂತೆ ಇಂದಿನಿಂದ ಮದುವೆ ಕಾರ್ಯಕ್ರಮ ಆರಂಭವಾಗಲಿವೆ. ಹೀಗಾಗಿ ಮನೆ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿದ್ದು, ಸಂಭ್ರಮ ಮನೆ ಮಾಡಿದೆ. ಪ್ರಿಯಾಂಕ ನಿಕ್ ಜೋನ್ಸ್ ಡಿಸೆಂಬರ್ 2ರಂದು ಮದುವೆ ನಡೆಯಲಿದೆ.

    ಇತ್ತೀಚೆಗೆ ಬಾಲಿವುಡ್ ಜೋಡಿ ದೀಪಿಕಾ, ರಣವೀರ್ ಇಟಲಿಯಲ್ಲಿ ಮದುವೆಯಾಗಿದ್ದರು. ಅವರ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ ಆತ್ಮೀಯರಿಗೆ ದೀಪ್‍ವೀರ್ ಜೋಡಿ ಬೆಳ್ಳಿ ಲೇಪಿತ ಫೋಟೋ ಫ್ರೇಮ್‍ನಲ್ಲಿ ಇಬ್ಬರ ಫೋಟೋ ಹಾಕಿ ಉಡುಗೊರೆ ನೀಡಿದ್ದರು. ಈ ಉಡುಗೊರೆಯ ಫೋಟೋ ಕ್ಲಿಕ್ಕಿಸಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಖುಷಿ ಹಂಚಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv