Tag: ಪ್ರಿಯಾಂಕಾ ತಿಮ್ಮೇಶ್

  • ನಿಮ್ಮPASSION ಹುಡುಕಲು ವಯಸ್ಸು ಮುಖ್ಯವಲ್ಲ: ಪ್ರಿಯಾಂಕಾ ತಿಮ್ಮೇಶ್

    ನಿಮ್ಮPASSION ಹುಡುಕಲು ವಯಸ್ಸು ಮುಖ್ಯವಲ್ಲ: ಪ್ರಿಯಾಂಕಾ ತಿಮ್ಮೇಶ್

    ಬೆಂಗಳೂರು: ನಟಿ ಪ್ರಿಯಾಂಕಾ ತಿಮ್ಮೇಶ್ ಬಿಗ್‍ಬಾಸ್ ಕಾರ್ಯಕ್ರಮ ಮುಗಿಸುತ್ತಿದ್ದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಈ ಮಧ್ಯೆ ಕ್ಯಾಮೆರಾಕ್ಕೆ ಪೋಸ್ ಕೊಡುವ ಮೂಲಕವಾಗಿ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.

    ಹೌದು ಪ್ರಿಯಾಂಕಾ ಬೇಬಿ ಪಿಂಕ್ ಬಟ್ಟೆಯನ್ನು ತೊಟ್ಟು, ಕಿವಿಗೆ ಹೂವಿ ಓಲೆಯನ್ನು ತೊಟ್ಟು ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ನಿಮ್ಮ PASSION ಹುಡುಕಲು ವಯಸ್ಸು ಮುಖ್ಯವಲ್ಲ ಬರೆದುಕೊಂಡಿದ್ದಾರೆ. ಪ್ರಿಯಾಂಕಾ ಅವರ ಫೋಟೋಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಇದನ್ನೂ ಓದಿ: ಮದುವೆ ಬಳಿಕ ಸತ್ಯ ಹೇಳಿದ ಯಾಮಿ ಗೌತಮ್

    ಪ್ರಿಯಾಂಕಾ ಅವರ ಫೋಟೋಗಳಿಗೆ ನೆಟ್ಟಿಗರು ಸುಂದರ, ಕ್ಯೂಟ್, ಹಾಟ್, ನೀವು ಎಂದರೆ ನಮಗೆ ತುಂಬಾ ಇಷ್ಟ ಎಂದು ಕಾಮೆಂಟ್ ಮಾಡುತ್ತಾ ಮೆಟ್ಟುಗೆಯನ್ನು ಸೂಚಿಸುತ್ತಿದ್ದಾರೆ. ಬಿಗ್‍ಬಾಸ್‍ನಿಂದ ಪ್ರಿಯಾಂಕಾ ತಿಮ್ಮೇಶ್‍ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರ ಅಭಿಮಾನಿ ಬಳಗ ಈಗ ಮೊದಲಿಗಿಂತಲೂ ಹಿರಿದಾಗಿದೆ. ಹೀಗಿರುವಾಗಲೇ ಪ್ರಿಯಾಂಕಾ ತಿಮ್ಮೇಶ್ ಹೊಸ ಫೋಟೋಶೂಟ್‍ನಲ್ಲಿ ಮಿಂಚುತ್ತಿದ್ದಾರೆ. ಇದನ್ನೂ ಓದಿ:   ಸಮಂತಾ, ನಾಗ ಚೈತನ್ಯ DIVORCEಗೆ ಅಸಲಿ ಕಾರಣ ಬಯಲು

    ವೈಲ್ಡ್ ಕಾರ್ಡ್ ಮೂಲಕ ಕನ್ನಡ ಬಿಗ್ ಬಾಸ್ ಸೀಸನ್ 8 ಪ್ರವೇಶ ಪಡೆದ ಪ್ರಿಯಾಂಕಾ ತಿಮ್ಮೇಶ್ ಸಾಕಷ್ಟು ಮಿಂಚಿದರು. ತಮ್ಮ ನೇರನುಡಿಗಳಿಂದ ಅವರು ಹೆಸರು ಮಾಡಿದರು. ಬಿಗ್‍ಬಾಸ್ ಪ್ರಿಯಾಂಕಾ ತಿಮ್ಮೇಶ್‍ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಪ್ರಿಯಾಂಕಾ ಒಂದು ಸಿನಿಮಾಕ್ಕಾಗಿ ತೂಕವನ್ನು ಹೆಚ್ಚು ಮಾಡಿಕೊಂಡಿದ್ದಾರೆ. ಪಾತ್ರಕ್ಕೆ ಹೊಂದುವ ಹಾಗೆ ತೆರೆ ಮೇಲೆ ಕಾಣುವ ಉದ್ದೇಶದಿಂದ ನನ್ನ ದೇಹದ ತೂಕ ಹೆಚ್ಚಾಗಿದೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  • ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ

    ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ

    ಬಿಗ್‍ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಚಕ್ರವರ್ತಿ ಚಂದ್ರಚೂಡ್ ಕೊಂಚ ಡಿಫರೆಂಟ್ ಆಗಿದ್ದಾರೆ. ಆದರೆ ಈ ಬಾರಿ ಚಕ್ರವರ್ತಿ ಮಾಡಿರುವ ಒಂದು ಸನ್ನೆಯಿಂದ ಬಿಗ್‍ಬಾಸ್ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಬಿಗ್‍ಬಾಸ್‍ನಲ್ಲಿ ಚಕ್ರವರ್ತಿ ಚಂದ್ರಚೂಡ್ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಅವರು ಅಶ್ಲೀಲ ಪದ ಬಳಕೆ ಮಾಡಿದ್ದರಿಂದ ಬೀಪ್ ಸೌಂಡ್ ಹಾಕಲಾಗಿತ್ತು. ಇದಕ್ಕೆ ಕಿಚ್ಚ ಸುದೀಪ್ ಅಸಮಾಧಾನ ಹೊರ ಹಾಕಿದ್ದರು. ಚಕ್ರವರ್ತಿ ಅವರೇ ನಿಮಗೆ ಇರುವ ಜ್ಞಾನಕ್ಕೆ ಇದು ಸಲ್ಲುವುದಿಲ್ಲ ಎಂದಿದ್ದರು. ಅದಾದ ನಂತರದಲ್ಲಿ ನಾನು ತಪ್ಪನ್ನು ತಿದ್ದಿಕೊಳ್ಳುತ್ತೇನೆ ಎಂದಿದ್ದರು ಚಕ್ರವರ್ತಿ. ಇದಾದ ಒಂದೇ ವಾರದಲ್ಲಿ ಅವರು ಮತ್ತೆ ಅದೇ ತಪ್ಪನ್ನು ಮಾಡಿದ್ದಾರೆ.

    ಪ್ರಿಯಾಂಕಾ ಹಾಗೂ ಚಕ್ರವರ್ತಿ ನಡುವೆ ಒಂದು ಗೆಳೆತನ ಬೆಳೆದಿತ್ತು. ಆದರೆ ಬಿಗ್‍ಬಾಸ್ ಮನೆಯಲ್ಲಿ ಅದು ದಿಕ್ಕು ಬದಲಿಸಿಕೊಂಡಿತ್ತು. ಪ್ರಿಯಾಂಕಾ, ಶಮಂತ್ ಅನ್ಯೋನ್ಯವಾಗಿದ್ದಾರೆ ಎನ್ನುವುದೇ ಚಕ್ರವರ್ತಿ ಬೇಸರಕ್ಕೆ ಕಾರಣವಾಗಿತ್ತು. ಈ ಘಟನೆ ನಂತರದಲ್ಲಿ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡುತ್ತಿರಲಿಲ್ಲ. ಈ ಜಗಳ ವಿಚಾರ ಸುದೀಪ್ ಮುಂದೆ ಕೂಡಾ ಪ್ರಸ್ತಾಪವಾಗಿತ್ತು. ಸುದೀಪ್ ಅವರು ಇಬ್ಬರಿಗೂ ಬುದ್ಧವಾದವನ್ನು ಹೇಳಿ ರಾಜಿ ಮಾಡಿಸಿದ್ದರು. ಆದರೆ ಮತ್ತೆ ಅದೇ ಮುನಿಸು, ಜಗಳ ಮತ್ತೆ ಮಂದುವರಿದಿತ್ತು.

    ಪ್ರಿಯಾಂಕಾ ತಿಮ್ಮೇಶ್ ಔಟ್ ಆಗಿದ್ದು ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅವರಿಗೆ ಬಿಗ್‍ಬಾಸ್ ವಿಶೇಷ ಅಧಿಕಾರ ಒಂದನ್ನು ನೀಡಿದ್ದರು. ಅದರನ್ವಯ ಒಬ್ಬರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಬೇಕು. ಆಗ ಪ್ರಿಯಾಂಕಾ ತೆಗೆದುಕೊಂಡ ಹೆಸರು ಚಕ್ರವರ್ತಿ ಚಂದ್ರಚೂಡ್ ಅವರದ್ದು. ಇದು ಚಕ್ರವರ್ತಿ ಚಂದ್ರಚೂಡ್‍ಗೆ ಅಸಮಾಧಾನ ತರಿಸಿದೆ. ಹೀಗಾಗಿ ಪ್ರಿಯಾಂಕಾಗೆ ಅವರು ಮಧ್ಯದ ಬೆರಳು ತೋರಿಸಿ ಅಶ್ಲೀಲ ಸನ್ನೆ ಮಾಡಿದ್ದಾರೆ.

    ಚಕ್ರವರ್ತಿ ಚಂದ್ರಚೂಡ್ ಎಷ್ಟೇ ಹೇಳಿದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಕಾಣುತ್ತಿಲ್ಲ. ಪದೇ ಪದೇ ಬಿಗ್‍ಬಾಸ್ ಚೌಕಟ್ಟನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಈ ಬಾರಿ ಬಿಗ್‍ಬಾಸ್ ನಿಯಮವನ್ನು ಮತ್ತೆ ಮೀರಿದ್ದಾರೆ. ಅಷ್ಟೇ ಅಲ್ಲ ವೀಕ್ಷಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈ ವಾರದ ವೀಕೆಂಡ್‍ನಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ.

  • ಚಕ್ರವರ್ತಿಗೆ ಶಾಕ್ ಕೊಟ್ಟ ಪ್ರಿಯಾಂಕಾ

    ಚಕ್ರವರ್ತಿಗೆ ಶಾಕ್ ಕೊಟ್ಟ ಪ್ರಿಯಾಂಕಾ

    ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಪ್ರಿಯಾಂಕಾ ತಿಮ್ಮೇಶ್ ಬರಹಗಾರ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಕೊನೆಯಲ್ಲಿ ಶಾಕ್ ಕೊಟ್ಟಿದ್ದಾರೆ.

    ಪ್ರಿಯಾಂಕಾ ತಿಮ್ಮೇಶ್ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರು ಮಧ್ಯ ಭಾಗದಲ್ಲಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದರು. ಹೀಗಾಗಿ ಇವರಿಬ್ಬರ ಮಧ್ಯೆ ಆರಂಭದಲ್ಲಿ ಉತ್ತಮವಾಗಿ ಮಾತುಕತೆ ನಡೆಯುತ್ತಿತ್ತು.

    ನಂತರದ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದಿತ್ತು. ಈ ಮಧ್ಯೆ ಬಿಗ್ ಬಾಸ್ ಸ್ಥಗಿತಗೊಂಡು ಆರಂಭಗೊಂಡ ವಾರದಲ್ಲೂ ಇಬ್ಬರ ನಡುವೆ ಮಾತುಕತೆ ನಡೆಯಿತಿತ್ತು. ಆದರೆ ನಂತರದ ದಿನಗಳಲ್ಲಿ ಚಕ್ರವರ್ತಿ ಅವರಿಂದ ಪ್ರಿಯಾಂಕಾ ತಿಮ್ಮೇಶ್ ಅಂತರ ಕಾಯ್ದುಕೊಂಡು ದಿವ್ಯಾ ಸುರೇಶ್, ಶಮಂತ್, ಶುಭ ಪೂಂಜಾ ಅವರ ಜೊತೆ ಹೆಚ್ಚು ಬೆರೆಯುತ್ತಿದ್ದರು.

    ಎರಡನೇ ಇನ್ನಿಂಗ್ಸ್‍ನ ಮೂರನೇ ವಾರದಲ್ಲಿ ಚಕ್ರವರ್ತಿ ಮತ್ತು ಪ್ರಿಯಾಂಕ ತಿಮ್ಮೇಶ್ ಮಧ್ಯೆ ಜಾಸ್ತಿ ಮಾತುಕತೆ ನಡೆದಿರಲಿಲ್ಲ. ಆದರೆ ಚಕ್ರವರ್ತಿಯವರು ನೇರವಾಗಿ ನನ್ನ ಹೆಸರು ತೆಗೆಯದೇ ಟಾಂಗ್ ನೀಡುತ್ತಿದ್ದಾರೆ ಎಂದು ಪ್ರಿಯಾಂಕಾ ಇತರೇ ಸ್ಪರ್ಧಿಗಳ ಜೊತೆ ಹೇಳುತ್ತಿದ್ದರು. ಇದನ್ನೂ ಓದಿ : ವೈಷ್ಣವಿ ಬಗ್ಗೆ ಸುದೀಪ್‍ಗಿದ್ದ ಅಭಿಪ್ರಾಯ ಚೇಂಜ್

    ಮೊದಲೇ ಚಕ್ರವರ್ತಿ ಅವರು ಪ್ರಿಯಾಂಕಾ ಬಗ್ಗೆ ಅಸಮಾಧಾನಗೊಂಡಿದ್ದರು. ಇದರ ಜೊತೆ ಕಳಪೆಗೆ ನೀಡಿದ ಕಾರಣ ಸರಿಯಿಲ್ಲ ಎಂದು ಹೇಳಿ ಪ್ರಿಯಾಂಕಾ ವಿರುದ್ಧ ಜೈಲಿನಲ್ಲೂ ಪ್ರತಿಭಟನೆ ಮಾಡಿದ್ದರು.

    ಅರವಿಂದ್ ಟೀಂ ಸೋತ ಹಿನ್ನೆಲೆಯಲ್ಲಿ ನಾಯಕ ಅರವಿಂದ್ ಬಿಟ್ಟು ವೈಷ್ಣವಿ, ಪ್ರಶಾಂತ್, ಶುಭಾ ಪುಂಜಾ, ಪ್ರಿಯಾಂಕಾ ತಿಮ್ಮೇಶ್ ನಾಮಿನೆಟ್ ಆಗಿದ್ದರು. ಹೀಗಾಗಿ ಕಡಿಮೆ ವೋಟ್ ಬಿದ್ದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಮನೆಯಿಂದ ಔಟ್ ಆಗಿದ್ದಾರೆ.

    ಈ ಮೊದಲು ನಿಧಿ ಔಟಾದಾಗ ಅರವಿಂದ್ ಅವರನ್ನು ನಾಮಿನೆಟ್ ಮಾಡಿದ್ದರು. ನಂತ್ರ ರಘು ಶಮಂತ್ ಅವರನ್ನು ಸೇವ್ ಮಾಡಿದ್ದರು. ಈ ಬಾರಿ ಪ್ರಿಯಾಂಕಾ ಅವರು ನೇರವಾಗಿ ಚಂದ್ರಚೂಡ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಈ ಮೂಲಕ ಕೊನೆಗೆ ಮನೆಯಿಂದ ತೆರಳುವಾಗ ಪ್ರಿಯಾಂಕಾ ಶಾಕ್ ನೀಡಿದ್ದಾರೆ.

  • ಬಾಯಿ ಮುಚ್ಚಿದರೆ ಸರಿ- ಚಕ್ರವರ್ತಿಗೆ ಪ್ರಿಯಾಂಕಾ ಅವಾಜ್

    ಬಾಯಿ ಮುಚ್ಚಿದರೆ ಸರಿ- ಚಕ್ರವರ್ತಿಗೆ ಪ್ರಿಯಾಂಕಾ ಅವಾಜ್

    ಬಿಗ್‍ಬಾಸ್ ಮನೆಲಿ ಸೈಲೆಂಟ್ ಆಗಿದ್ದ ಪ್ರಿಯಾಂಕ ತಿಮ್ಮೇಶ್ ಇದೀಗ ಜೋರು ಧ್ವನಿಯಲ್ಲಿ ಚಕ್ರವರ್ತಿ ಅವರಿಗೆ ಅವಾಜ್ ಹಾಕಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಜಗಳದ ಬೆಂಕಿ ಹೊತ್ತಿ ಉರಿಯುತ್ತಿದೆ.

    ಅವರು ನೇರವಾಗಿಲ್ಲ. ನಾಟಕೀಯ, ಸ್ಕೋಪ್ ತಗೆದುಕೂಳ್ಳುತ್ತಿದ್ದೀಯಾ? ಎಂದು ನನಗೆ ಹೇಗೆ ಹೇಳುತ್ತಿರುತ್ತಿರಾ ಎಂದು ಪ್ರಿಯಾಂಕಾ ಸುದೀಪ್ ಮುಂದೆ ಹೇಳಿಕೊಂಡಿದ್ದರು. ಕಟ್ಟೆಪಂಚಾಯ್ತಿಯಲ್ಲಿ ಈ ವಿಷಯನ್ನು ಇತ್ಯರ್ಥಮಾಡಿ ಸುದೀಪ್ ರಾಜಿ ಮಾಡಿದ್ದರು. ಈ ಹಿಂದೆ ಚಕ್ರವರ್ತಿ ಮತ್ತು, ಪ್ರಿಯಾಂಕಾ ನಡುವೆ ಹಲವು ಸಣ್ಣ ಸಣ್ಣ ವಿಚಾರಗಳಿಗೆ ಜಗಳವಾಗಿತ್ತು. ಆದರೆ ಇದೇ ವಿಷಯಗಳನ್ನು ಮತ್ತೇ ಕೆದಕಿಕೊಂಡು ಇಬ್ಬರು ಕಿತ್ತಾಟ ನಡೆಸಿದ್ದಾರೆ. ಕಾಲು ಕೆದರಿಕೊಂಡು ಜಗಳ ಮಾಡುವ ಚಕ್ರವರ್ತಿ ವಿರುದ್ಧವಾಗಿ ಪ್ರಿಯಾಂಕ ತಿರುಗಿ ಬಿದ್ದಿದ್ದಾರೆ.

    ಸಾಧ್ಯವಾದಷ್ಟು ಸೈಲೆಂಟ್ ಆಗಿಯೇ ಇದ್ದ ಪ್ರಿಯಾಂಕಾ ಯಾರು ಏನೇ ಹೇಳಿದರೂ ಅದನ್ನು ತಾಳ್ಮೆಯಿಂದ ನಿಭಾಯಿಸಿಕೊಂಡು ಸಾಗುತ್ತಿದ್ದರು. ಚಕ್ರವರ್ತಿ ಅವರ ಮಾತಿನಿಂದ ಆಗಾಗ ಪ್ರಿಯಾಂಕಾ ಅವರನ್ನು ಕೆಣಕುತ್ತಿದ್ದರು. ಇದೇ ಮೊದಲ ಬಾರಿಗೆ ಪ್ರಿಯಾಂಕಾ ತಿಮ್ಮೇಶ್ ಅವರು ದೊಡ್ಮನೆಯೊಳಗೆ ಉಗ್ರಾವತಾರ ತೋರಿದ್ದಾರೆ. ತಮ್ಮ ಬಗ್ಗೆ ಇಲ್ಲಸಲ್ಲದ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್‍ಗೆ ಖಡಕ್ ಆಗಿ ವಾನಿರ್ಂಗ್ ನೀಡಿದ್ದಾರೆ.

    ಪ್ರಿಯಾಂಕಾ ಕಣ್ಣೀರು ಹಾಕುತ್ತಾ ನಾನು ಮತ್ತು ಶಮಂತ್ ಏನೇ ಮಾಡಿದರೂ ಅದನ್ನು ಕೇಳೋಕೆ ಇವರು ಯಾರು? ಎಂದು ಅಳುತ್ತಲೇ ತಮ್ಮ ನೋವನ್ನು ಪ್ರಶಂತ್, ಶಮಂತ್ ಬಳಿ ಹೇಳಿಕೊಳ್ಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಚಕ್ರವರ್ತಿ ಮತ್ತೆ ಪ್ರತ್ಯುತ್ತರ ನೀಡಲು ಬಂದಾಗ ಅವರ ಪ್ರಿಯಾಂಕಾ ತಾಳ್ಮೆಯ ಕಟ್ಟೆ ಒಡೆದಿದೆ. ಜೋರಾಗಿ ಕಿರುಚಾಡಿ ಪ್ರಿಯಾಂಕಾ ಚಕ್ರವರ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಕಣ್ಣಲ್ಲಿ ನೀರು ಹಾಕಿಕೊಂಡು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದೆಲ್ಲ ನಿಜವಾಗುವುದಿಲ್ಲ ಎಂದು ಚಕ್ರವರ್ತಿ ಏರು ಧ್ವನಿಯಲ್ಲಿ ಮಾತನಾಡಿದರು. ಅದಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ, ನಾನು ಕಣ್ಣೀರು ಹಾಕಿಕೊಂಡು ನಾಟಕ ಮಾಡುತ್ತಿಲ್ಲ. ಬಾಯಿ ಮುಚ್ಚಿದರೆ ಸರಿ ಎಂದು ಕಿರುಚಾಡಿ ಹಾಗೇ ಸಿಟ್ಟಿನಿಂದ ಚಕ್ರವರ್ತಿ ಅವರ ಬಳಿ ಹೋಗಿದ್ದಾರೆ. ಆಗ ಮನೆ ಮಂದಿ ತಡೆದು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ.

  • ಪ್ರಶಾಂತ್ ಸಂಬರಗಿಯವರು ನನ್ನಿಂದ ಏನು ಕಿತ್ಕೊಳ್ಳೊಕೆ ಆಗಲ್ಲ: ಶಮಂತ್

    ಪ್ರಶಾಂತ್ ಸಂಬರಗಿಯವರು ನನ್ನಿಂದ ಏನು ಕಿತ್ಕೊಳ್ಳೊಕೆ ಆಗಲ್ಲ: ಶಮಂತ್

    ಬೆಂಗಳೂರು: ಬಿಗ್‍ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟು ಸ್ಪರ್ಧಿಗಳು ಆಟ ಶುರು ಮಾಡಿದ್ದಾರೆ. ಸದ್ಯ ಪ್ರಶಾಂತ್ ಸಂಬರಗಿ, ಪ್ರಿಯಾಂಕಾ ತಿಮ್ಮೇಶ್, ಚಕ್ರವರ್ತಿ ಒಟ್ಟಿಗೆ ಕುಳಿತು ಚರ್ಚೆ ನಡೆಸುತ್ತಿದ್ದಾಗ, ಶಮಂತ್ ಪ್ರಶಾಂತ್ ಸಂಬರಗಿಗೆ ಚಿಕ್ಕಪ್ಪ ಎಂದು ಕರೆಯುತ್ತಾರೆ. ಇದಕ್ಕೆ ಪ್ರಶಾಂತ್ ಇನ್ನೊಮ್ಮೆ ನೀನು ನನ್ನನ್ನು ಚಿಕ್ಕಪ್ಪ ಎಂದರೆ ಎಂದು ವಾರ್ನ್ ಮಾಡುತ್ತಾರೆ. ಆಗ ಶಮಂತ್ ಚಿಕ್ಕಪ್ಪ, ಚಿಕ್ಕಪ್ಪ ಎಂದು ಮತ್ತೆ ರೇಗಿಸುತ್ತಾರೆ.

    ಈ ವೇಳೆ ಪ್ರಿಯಾಂಕಾ ತಿಮ್ಮೇಶ್, ಪ್ರಶಾಂತ್ ಅವರಿಗೇನಾದರೂ ಮಗಳಿದ್ದಿದ್ದರೆ ಇಷ್ಟೊತ್ತಿಗೆ ಎಂಗೇಜ್‍ಮೆಂಟ್ ಆಗಿರುತ್ತಿತ್ತು ಎಂದು ಶಮಂತ್ ಹೇಳುತ್ತಿದ್ದರು ಎಂದಿದ್ದಾರೆ. ಇದರ ಅರ್ಥ ಇಷ್ಟು ಒಳ್ಳೆಯ ಮಾವ ಸಿಕ್ಕಿದ್ದಾರೆ ಮಗಳನ್ನು ಬಿಡಬಾರದು ಎಂದು ಪ್ರಿಯಾಂಕಾ ತಿಮ್ಮೇಶ್ ವಿವರಿಸುತ್ತಾರುವಾಗ, ಶಮಂತ್ ಮಾವ ಕೆಟ್ಟವರು. ಆದರೆ ನನಗೆ ಒಳ್ಳೆಯವರಷ್ಟೇ ಮಾವ ಬ್ರಿಲಿಯಂಟ್ ಎಂದು ಹೇಳುತ್ತಾರೆ.

    ನಂತರ ಚಕ್ರವರ್ತಿ ಚಂದ್ರಚೂಡ್‍ರವರು ನಿನಗೆ ಪ್ರಶಾಂತ್ ಏನು ಅನಿಸುತ್ತಾರೆ, ನಿನಗೆ ಅವರ ಮೇಲೆ ಏನು ಫೀಲಿಂಗ್ ಇದೆ ಎಂದು ಪ್ರಶ್ನಿಸಿದಾಗ, ಶಮಂತ್ ಪ್ರಶಾಂತ್‍ರವರು ನನಗೆ ಒಂದು ರೀತಿ ಅಂಕಲ್ ಮಾದರಿ, ಚಿಕ್ಕಪ್ಪ ನನ್ನ ಹತ್ತಿರ ಏನು ಕಿತ್ತಿಕೊಳ್ಳುವುದಕ್ಕೆ ಆಗುವುದಿಲ್ಲ. ಬರೆದು ಕೊಂಡುತ್ತೇನೆ ಪ್ರಶಾಂತ್ ಸಂಬರ್ಗಿಯವರು ಶಮಂತ್ ಅವರಿಂದ ಏನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ತುಂಬಾ ಜನ ನನ್ನ ಮೇಲೆ ದೃಷ್ಟಿ ಹಾಕಿದ್ದಾರೆ ಅಂದ ಶಮಂತ್

  • ಮುಂದಿನ ವಾರವೇ ಹೊರಗೆ ಹೋಗು ನೀನು- ಪ್ರಿಯಾಂಕಾ

    ಮುಂದಿನ ವಾರವೇ ಹೊರಗೆ ಹೋಗು ನೀನು- ಪ್ರಿಯಾಂಕಾ

    ಪ್ರಿಯಾಂಕಾ ಮನೆಯೊಳಗೆ ಹೋದ ಮೇಲೆ ಯಾರೊಂದಿಗೆ ಅಷ್ಟಾಗಿ ಬೆರೆಯುತ್ತಿಲ್ಲ ಎಂಬ ಆರೋಪವನ್ನು ಮನೆಮಂದಿ ಆಗಾಗ ಹೇಳುತ್ತಿರುತ್ತಾರೆ. ಈ ವಾರ ಇದೀಗ ಕಳಪೆ ಪಟ್ಟಿಯನ್ನು ನೀಡಿ ಜೈಲಿಗೆ ಕಳುಹಿಸಿದ್ದಾರೆ.

    ಪ್ರಿಯಾಂಕಾ ತಿಮ್ಮೇಶ್ ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಾಲಿಟ್ಟಿದ್ದಾರೆ. ಮನೆಗೆ ಬಂದು ಮೂರು ವಾರ ಕಳೆಯುವುದರೊಳಗೆ ಸಾಕಷ್ಟು ಕಿರಿಕ್, ಜಗಳಗಳು, ಮನಸ್ತಾಪಗಳು ನಡೆದಿವೆ. ಗೇಮ್‍ನಲ್ಲಿ ಸರಿಯಾದ ತೀರ್ಪು ಸಿಗದೇ ಇದ್ದಾಗ, ತೀರ್ಪುಗಾರರ ವಿರುದ್ಧವೇ ಗರಂ ಆಗಿದ್ದಾರೆ. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಶಮಂತ್ ಜೊತೆಗೆ ಒಂಚೂರು ಕ್ಲೋಸ್ ಆಗಿ ಇರ್ತಾರೆ. ಆದರೆ ಇವಾಗ ಶಮಂತ್‍ಗೆ, ನಿಂಗೆ ನಾಚಿಕೆ ಆಗ್ಬೇಕು, ಮುಂದಿನ ವಾರವೇ ಹೊರಗೆ ಹೋಗು ನೀನು ಅಂತ ಶಾಪ ಹಾಕಿದ್ದಾರೆ.

     ಶಮಂತ್ ಜೈಲಿನಲ್ಲಿರುವ ಪ್ರಿಯಾಂಕಳ ಜೊತೆಗೆ ಮಾತನಾಡಲು ಬಂದಿದ್ದಾರೆ. ಆಗ ಪ್ರಿಯಾಂಕ ನಾನಿಲ್ಲಿಂದ ಹೊರಗೆ ಬಂದಮೇಲೆ ನಿನ್ನ ಜೊತೆ ನಯಾಪೈಸೆಯೂ ಸೇರುವುದಿಲ್ಲ. ಯಾಕೆಂದರೆ ನನಗೆ ಇಷ್ಟಬಂದವರ ಜೊತೆಗೆ ನಾನು ಸೇರುತ್ತೇನೆ. ನಾನಿಲ್ಲಿಗೆ ಸಂಬಂಧಗಳನ್ನು ಹುಟ್ಟುಹಾಕೋಕೆ, ಎಲ್ಲರೊಂದಿಗೆ ಬೆರೆಯುವುದಕ್ಕೆ ಬಂದಿಲ್ಲ. ನಾನು ಆಟ ಆಡಬೇಕು, ನಾನೇನೂ ಅಂತ ಸಾಬೀತು ಮಾಡಬೇಕು ಎಂದು ಸಿಟ್ಟಿನಿಂದ ಶಮಂತ್ ಬಳಿ ಹೇಳಿದ್ದಾರೆ.

     ಹಾಗಾದರೆ ಯಾರು ಜೊತೆ ಮಾತಾಡಲ್ವಾ? ಎಂದು ಶಮಂತ್ ಪ್ರಿಯಾಂಕಾಗೆ ಪ್ರಶ್ನಿಸಿದ್ದಾರೆ. ನಾನಾಗಿಯೇ ಮಾತನಾಡಲ್ಲ. ಮಾತಾಡಿದ್ರೆ, ಮಾತಾಡಿಸ್ತೀನಿ. ಅವರಿಗೂ ನನ್ನ ಜೊತೆ ಮಾತನಾಡಬೇಕು ಅಂತ ಇರಬೇಕಪ್ಪ. ಇಲ್ಲಿಂದ ಹೊರಗೆ ಹೋದಮೇಲೆಯೂ ನೀನೊಬ್ಬ ಬೆಸ್ಟ್ ಫ್ರೆಂಡ್ ಆಗ್ತೀಯಾ ಅಂತ ನಾನು ಅಂದ್ಕೊಂಡಿದ್ದೆ. ಇನ್ನೊಬ್ಬರ ಜೊತೆ ಇನ್ವಾಲ್ಮೆಂಟ್ ಇಲ್ಲ ನೀನು ಯಾಕ್ ಯೋಚನೆ ಮಾಡ್ತೀಯಾ. ನಿನ್ನ ಜೊತೆ ನಾನು ಮಾತಾಡಲ್ವಾ? ಹೇಳು ಎಂದು ಪ್ರಿಯಾಂಕ ಶಮಂತ್‍ಗೆ ಹೇಳಿದ್ದಾರೆ. ಬಿಗ್‍ಬಾಸ್ ಹತ್ರ ನನಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ ಎಂದು ಶಮಂತ್ ಹೇಳಿದ್ದಾರೆ.

    ಮುಂದಿನ ವಾರವೇ ಈ ಮನೆಯಿಂದ ಹೊರಗೆ ಹೋಗು ನೀನು. ನಂದೇ ಶಾಪ. ನಾಚಿಕೆ ಆಗ್ಬೇಕು. ಕಳಪೆ ಅಂತ ಹೇಳಿಬಿಟ್ಟು, ಕಳಪೆ ಜಾಗದಲ್ಲಿ ಬಂದು ಮಾತಾಡ್ತಾ ಇದಿಯಲ್ಲ. ನೀನು ಬಂದು ಹತ್ತು ವಾರ ಆಗಿದೆ. ಈಗ ಇನ್ನೊಬ್ಬರ ಬಾಯಲ್ಲಿ ಇವಾಗ ಚೆನ್ನಾಗಿ ಆಡ್ತಾ ಇದ್ದಾನೆ ಪರವಾಗಿಲ್ಲ ಅಂತ ಅನ್ನಿಸ್ಕೋತಿಯಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ. ಅಂದ್ರೆ ಇವಾಗಲೇ ಬಿಗ್ ಬಾಸ್ ಕಪ್ ಕೊಟ್ಟು ಕಳಿಸಬೇಕಾಗಿತ್ತಾ? ಎಂದು ಶಮಂತ್ ಹೇಳಿದ್ದಾರೆ. ಮೂರು ವಾರದಲ್ಲೇ ನಿನ್ನನ್ನ ನೀನು ಸಾಬೀತು ಮಾಡ್ಕೋಬೇಕಿತ್ತು. 10 ವಾರದವರೆಗೂ ಕಾಯಬೇಕಿತ್ತಾ? ಅದೇನು ಮಾಡುತ್ತೀಯಾ ನಾನು ನೋಡುತ್ತೇನೆ ಎಂದು ಶಮಂತ್ ಎಂದು ಪ್ರಿಯಾಂಕ ಹೇಳಿದ್ದಾರೆ.

    ಮನೆಮಂದಿ ಪ್ರಿಯಾಂಕಾಗೆ ಜೈಲಿಗೆ ಹಾಕಿರುವುದು ಕೋಪಕ್ಕೆ ಕಾರಣವಾಗಿದೆ. ಮನೆಮಂದಿ ಮೇಲೆ ಇರುವ ಸಿಟ್ಟನ್ನು ಪ್ರಿಯಾಂಕಾ ಅಮಾಯಕ ಶಮಂತ್ ಮೇಲೆ ಹಾಕಿದ್ದಾರೆ. ಶಮಂತ್ ಮಾತ್ರ ಏನೂ ಮಾತನಾಡದೆ ಸುಮ್ನೆ ಆಗಿದ್ದಾರೆ.

  • ಕ್ಯಾಪ್ಟನ್ ಆದ್ರೆ ಎರಡು ಕೊಂಬು ಇರಲ್ಲ : ಪ್ರಿಯಾಂಕಾ

    ಕ್ಯಾಪ್ಟನ್ ಆದ್ರೆ ಎರಡು ಕೊಂಬು ಇರಲ್ಲ : ಪ್ರಿಯಾಂಕಾ

    ಬಿಗ್‍ಬಾಸ್ ಮನೆಯಲ್ಲಿ ಕಳಪೆ ಮತ್ತು ಅತ್ಯುತ್ತಮ ಸ್ಪರ್ಧಿ ಯಾರೆಂಬ ಆಯ್ಕೆ ಪ್ರತಿವಾರದಂತೆ ಈ ವಾರವೂ ನಡೆದಿದೆ. ಈ ಮಧ್ಯೆ ಕ್ಯಾಪ್ಟನ್ ರಘು ಗೌಡ ಮೇಲೆ ಪ್ರಿಯಾಂಕಾ ತಿಮ್ಮೇಶ್ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಜೊತೆಗೆ ಕ್ಯಾಪ್ಟನ್ ಆದ್ರೆ ಎರಡು ಕೊಂಬು ಇರಲ್ಲ ಅಂತಲೂ ಅವರು ಹೇಳಿದ್ದಾರೆ. ಇಷ್ಟದಿನ ಸುಮ್ಮನೆ ಇದ್ದಪ್ರಿಯಾಂಕಾ ಇದೀಗ ತಮ್ಮ ಆಟವನ್ನು ಪ್ರಾರಂಭಿಸಿದ್ದಾರೆ.

    ಈ ವೇಳೆ ಕ್ಯಾಪ್ಟನ್ ರಘು, ಪ್ರಿಯಾಂಕಾಗೆ ಕಳಪೆ ವೋಟ್ ನೀಡಿದರು. ಅದಕ್ಕೆ ಪ್ರಿಯಾಂಕಾ ಮನೆಯಲ್ಲಿ ತಪ್ಪುಗಳೇನು ಮಾಡಿಲ್ಲ. ಆದರೆ, ಜಾಸ್ತಿ ಬೆರೆಯುತ್ತಿಲ್ಲ ಎಂದು ನನಗೆ ಅನ್ನಿಸುತ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿ ಅಂದಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿರುತ್ತದೆ. ಅವರನ್ನು ಗೇಮ್ ಚೇಂಜರ್ ಅಂತಲೇ ನಾವು ಭಾವಿಸುತ್ತೇವೆ. ಅವರು ಕೊಟ್ಟಿರುವ ಕೆಲಸ ಎಲ್ಲ ಚೆನ್ನಾಗಿ ಮಾಡ್ತಾ ಇದ್ದಾರೆ. ಆದರೆ, ಇರುವಿಕೆ, ಇಲ್ಲದಿರುವಿಕೆ ಬಗ್ಗೆ ನನಗೇನೂ ಅನ್ನಿಸುತ್ತಿಲ್ಲ ಎಂದು ರಘು ಪ್ರಿಯಾಂಕ ಅವರಿಗೆ ಹೇಳಿದ್ದರು.

    ನಾನಿಲ್ಲಿ ಎಲ್ಲರ ಜೊತೆಯಲ್ಲಿ ಬೆರೆಯುತ್ತಿದ್ದೇನೆ. ಅಡುಗೆ ಅಂತ ಬಂದಾಗ ಮುಂದೆ ಇರುತ್ತೇನೆ. ಆಟದಲ್ಲಿ ಒಂದು ಕೈ ಮುಂದೆ ಇರುತ್ತೇನೆ. ವೈಲ್ಡ್ ಕಾರ್ಡ್ ಮೂಲಕ ಬಂದಿದ್ದಕ್ಕೆ ನಾನು ವೈಲ್ಡ್ ಆಗಿರೋಕೆ ಸಾಧ್ಯ ಇಲ್ಲ. ಮುಂದೆ ಅದಕ್ಕೂ ನನ್ನನ್ನೂ ಕಳಪೆ ಅಂತೀರಾ? ಅದಕ್ಕೆ ನಿಮ್ಮ ಮಾತನ್ನು ನಾನು ಒಪ್ಪಲ್ಲ. ನಾನಿಲ್ಲಿ ಬಂದು ಎರಡು ವಾರ ಆದ್ರೂ, ಐದು ವಾರದ ಥರ ಆಡ್ತಾ ಇದ್ದೇನೆ ಎಂದು ಪ್ರಿಯಾಂಕ ರಘು ಹೇಳಿಕೆಗೆ  ತಿರುಗೇಟು ನೀಡಿದ್ದಾರೆ.

     ರಘು ದೊಡ್ಡ ಕಳಪೆ!

    ರಘು ದೊಡ್ಡ ಕಳಪೆ. ತನ್ನ ಸ್ವಂತ ಬುದ್ಧಿಯಿಂದ, ಶ್ರಮ ಹಾಕಿ ಅವನು ಕ್ಯಾಪ್ಟನ್ ಆಗಿಲ್ಲ. ಒಬ್ಬರ ಬಗ್ಗೆ ಮಾತನಾಡೋಕು ಮುಂಚೆ ಯೋಚನೆ ಮಾಡಬೇಕು. ನಾನು ಎರಡು ವಾರದಿಂದ ಅರವಿಂದ್, ಪ್ರಶಾಂತ್ ಅವರ ವರ್ತನೆಯನ್ನು ನೋಡಿದ್ದೇನೆ. ಕ್ಯಾಪ್ಟನ್ ಆದಕೂಡಲೇ ಎರಡು ಕೊಂಬು ಬರಲ್ಲ. ಮುಂದೆ ಇಲ್ಲಿ ಯಾವ ಥರ ಇರಬೇಕು ಅನ್ನೋದು ಗೊತ್ತಾಗಿದೆ ಎಂದು ದಿವ್ಯಾ ಸುರೇಶ್ ಜೊತೆ ಚರ್ಚೆ ಮಾಡಿದ ಪ್ರಿಯಾಂಕಾ ಹೇಳಿದ್ದಾರೆ.

     ಹುಚ್ಚುನ ತರಾ ಮಾತಾಡ್ತಾಇದ್ದಾನೆ. ಏನು ಇಲ್ಲದೆ ಕ್ಯಾಪ್ಟನ್ ಆಗಿದ್ದಾನೆ. ತನ್ನ ಕಳಪೆ ಮಾಡಿರುವ ಕುರಿತಾಗಿ ಪ್ರಿಯಾಂಕ ಚಕ್ರವರ್ತಿ ಅವರ ಬಳಿ ಹೇಳಿದ್ದಾರೆ. ಪ್ರಿಯಾಂಕ ತನ್ನ ಕಳಪೆ ಮಾಡಿರುವ ಕುರಿತಾಗಿ ಕೋಪಗೊಂಡಿದ್ದಾರೆ.

  • ಪ್ರಿಯಾಂಕ ತಿಮ್ಮೇಶ್ ಬಗ್ಗೆ ಚಕ್ರವರ್ತಿ, ಸಂಬರಗಿ ಗುಸು ಗುಸು

    ಪ್ರಿಯಾಂಕ ತಿಮ್ಮೇಶ್ ಬಗ್ಗೆ ಚಕ್ರವರ್ತಿ, ಸಂಬರಗಿ ಗುಸು ಗುಸು

    ಹೊಸ ಸ್ಪರ್ಧಿ ಪ್ರಿಯಾಂಕ ಆಟ ಹೇಗೆ ಆಡ್ತಾರೆ ಅನ್ನೋದರ ಬಗ್ಗೆ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ ಮಾತಾಡಿಕೊಳ್ಳುತ್ತಿದ್ದರು. ಈ ವೇಳೆ ಪ್ರಿಯಾಂಕ ಚಾರ್ಮಿಂಗ್ ಗರ್ಲ್ ಹೇಗೆ ಆಡಬೇಕು ಅನ್ನೋದು ಗೊತ್ತಿದೆ ಅಂದ್ರು ಪ್ರಶಾಂತ್ ಸಂಬರಗಿ.

    ಮಂಜುಗೆ ಬಿಳಿ ಕೂದಲು ತೆಗೆಯೋದೇನು? ಶಮಂತ್‍ಗೆ ಲವ್ ಪ್ರಪೋಸ್ ಮಾಡದೇನು? ರಘು ತಲೆಗೆ ಎಣ್ಣೆ ಹಚ್ಚೋದೇನು? ಇದೆಲ್ಲ ಪ್ರಿಯಾಂಕಾ ಆರ್ಟಿಪಿಶಿಯಲ್ ಅನ್ನೋದು ಗೊತ್ತಾಗುತ್ತೆ ಅಲ್ಲವಾ ಎಂದು ಚಕ್ರವರ್ತಿ ಚಂದ್ರಚೂಡ ಕೇಳಿದರು. ಚೆನ್ನಾಗಿದೆ, ಮನೆಯಲ್ಲಿ ಎಲ್ಲರೂ ಬೇಕು. ಫಸ್ಟ್ ಡೇ ಬಂದಾಗ ಕೈ ನೋಯ್ತಾ ಇದೆ. ಮಸಾಜ್ ಮಾಡಿ ಅಂದಾಗ ಶಾಕ್ ಆದೆ. ಒಂದು ಕ್ಷಣ ಡಗ್ ಅನ್ನಿಸಿತು ಎಂದು ಸಂಬರಗಿ ಹೇಳಿದರು.

    ಮನೆಯಲ್ಲಿ ಯಾರನ್ನ ಹೇಗೆ ಸೆಟ್ ಮಾಡ್ಕೊಬೇಕು ಅನ್ನೋದು ಆ ಹುಡುಗಿಗೆ ತಿಳಿದಿದೆ ಎಂದು ಚಕ್ರವರ್ತಿ ಹೇಳಿದ್ರು. ಇದಕ್ಕೆ ಪ್ರತಿಯಾಗಿ ಅದು ಅವಳ ಗೇಮ್ ಪ್ಲಾನ್ ಮಾಡಿಕೊಳ್ಳಲಿ ಬಿಡು ಎಂದು ಪ್ರಶಾಂತ್ ಸಂಬರಗಿ ಮಾತು ಬದಲಿಸಿದರು.

    ಇದೇ ವೇಳೆ ದಿವ್ಯಾ ಸುರೇಶ್ ವಿಚಾರದಲ್ಲಿ ಯಾವುದೋ ಒಂದು ನಿಲುವಿಗೆ ಬದ್ಧವಾಗಿರು. ಬೈದ ಮೇಲೆ ಅವಳನ್ನ ಸಮಾಧಾನ ಮಾಡೋಕೆ ಏನೇನೂ ಕಸರತ್ತು ಮಾಡೋದು ಬೇಕಿರಲ್ಲ. ಬೈದಿದ್ರೆ ಆ ನಿಲುವಿಗೆ ನೀನು ಬದ್ಧ ಆಗಿರಬೇಕು ಎಂದು ಸಂಬರಗಿಗೆ ಚಕ್ರವರ್ತಿ ಸಲಹೆ ನೀಡಿದರು.

  • ಬಿಗ್ ಬಾಸ್ ಮನೆಯಲ್ಲಿ ನಡೆಯಿತು ಜಡೆ ಜಗಳ

    ಬಿಗ್ ಬಾಸ್ ಮನೆಯಲ್ಲಿ ನಡೆಯಿತು ಜಡೆ ಜಗಳ

    ಬಿಗ್ ಬಾಸ್ ಮನೆಯಲ್ಲಿ ಜಡೆ ಜಗಳ ಆರಂಭವಾದಂತೆ ಕಾಣುತ್ತಿದೆ. ನಿಧಿ ಸುಬ್ಬಯ್ಯ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ನೀಡಿರುವ ಪ್ರಿಯಾಂಕಾ ತಿಮ್ಮೇಶ್ ಅವರ ನಡುವೆ ಮನಸ್ತಾಪವಾಗಿದೆ. ಇಬ್ಬರು ಟಾಸ್ಕ್ ವಿಚಾರವಾಗಿ ಮಾತಿಗೆ ಮಾತು ಬೆಳೆಸಿದ್ದಾರೆ.

    ಹಾಸ್ಟೆಲ್ ಟಾಸ್ಕ್ ವೇಳೆ ಪ್ರೇಮಪತ್ರವನ್ನು ಕೊಡಲು ಒಪ್ಪದಿದ್ದಕ್ಕೆ ನಿಧಿ ಸುಬ್ಬಯ್ಯ ಅವರು ಪ್ರಿಯಾಂಕಾಗೆ ಸ್ಟುಪ್ಪಿಡ್ ಅಂತ ಬೈಯ್ದಿದ್ದರು. ಪ್ರಿಯಾಂಕಾ ಹಾಗೂ ನಿಧಿ ನಡುವೆ ಸಣ್ಣ ಮನಸ್ತಾಪ ಆಗಲೇ ಶುರುವಾಗಿತ್ತು. ಈಗ ಟಾಸ್ಕ್ ವೇಳೆ ಹೆಚ್ಚಾಗಿದೆ. ಯಾಕೆ ಮನಸ್ತಾಪ ಆಗುತ್ತಿದೆ ಅಂತ ನಿಧಿ ಸುಬ್ಬಯ್ಯ ಹಾಗೂ ಪ್ರಿಯಾಂಕಾ ತಿಮ್ಮೇಶ್ ಬೇರೆ ಬೇರೆ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ.

    ಗೇಮ್ ವಿಷಯ ಬಂದಾಗ ದಿವ್ಯಾ ಮತ್ತಿರರು ನಾನು ನಾನು ಅಂತ ಕೈ ಎತ್ತುತ್ತಾರೆ, ನಾನು ಗೇಮ್ ಆಡುತ್ತೇನೆ ಎಂದು ಹೇಳಿದರೆ, ಬೇರೆನೆ ಹೇಳುತ್ತಾರೆ. ನಾವು ಹಾಗಾದ್ರೆ ಸ್ಟ್ರಾಂಗ್ ಇಲ್ವಾ? ಅದಕ್ಕೆ ನಾನು ಪ್ರಶ್ನೆ ಮಾಡಿದೆ. ಆಮೇಲೆ ಆಸಕ್ತಿಯೇ ಇಲ್ಲದಂತೆ ತೋರಿಸ್ತಾರೆ, ಆಗ ನಾನು ಏನು ಮಾಡಲಿ ಎಂದು ಪ್ರಿಯಾಂಕಾ ತಿಮ್ಮೇಶ್ ಅವರು ಚಕ್ರವರ್ತಿ ಚಂದ್ರಚೂಡ್ ಜೊತೆ ಹೇಳಿಕೊಂಡಿದ್ದಾರೆ.

    ಬೇಕು ಬೇಕು ಅಂತ ನನ್ನ ಜೊತೆ ಜಗಳ ಮಾಡೋದಾ? ವೈಲ್ಡ್ ಕಾರ್ಡ್‍ದೇ ಒಂದು ಉದ್ದೇಶ ಇರತ್ತೆ ಎಂದು ನಿಧಿ ಸುಬ್ಬಯ್ಯ ಅವರು ದಿವ್ಯಾ ಉರುಡುಗ ಜೊತೆ ಚರ್ಚೆ ಮಾಡಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ನಿಧಿ ಬಿಗ್ ಬಾಸ್ ಮನೆಯಲ್ಲಿ ಅನೇಕರ ಜೊತೆ ಮನಸ್ತಾಪ ಮಾಡಿಕೊಂಡು, ಜಗಳ ಆಡಿದ್ದರು. ಅವರ ನೇರನುಡಿಯನ್ನು ಕಿಚ್ಚ ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮೆಚ್ಚಿದ್ದರು. ಇದೀಗ ಮತ್ತೆ ಜಗಳದ ಮೂಲಕವಾಗಿಯೇ ಸುದ್ದಿಯಾಗಿದ್ದಾರೆ.

    ಗೇಮ್ ಆಡುವಾಗ ಪ್ರಿಯಾಂಕ ನಾನು ಆಡುತ್ತೇನೆ ಎಂದಾಗ ನಿಧಿ ಸ್ಟ್ರಾಂಗ್ ಇರುವವರು ಬೇಕು ಎಂದು ಹೇಳಿದ್ದರು. ಈ ವಿಚಾರವಾಗಿ ಪ್ರಿಯಾಂಕ ನೊಂದುಕೊಂಡಿದ್ದರು. ನಾನು ಸ್ಟ್ರಾಂಗ್ ಇಲ್ಲ ಅಂತಾ ಹೇಗೆ ಹೇಳುತ್ತೀರಾ? ನನ್ನ ಆಟದ ಬಗ್ಗೆ ನಿಮಗೆ ಗೊತ್ತಿಲ್ಲ ಅದಕ್ಕೆ ನಾನು ಆಡ್ತೀನಿ ಅಂತಾ ಹೇಳಿದೆ ಅಷ್ಟೇ ಅದನ್ನು ಬಿಟ್ಟು ನಾನು ಹೇಳುತ್ತಿಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ. ನಿಧಿ ಅವರು ಅವರದ್ದೇ ಶೈಲಿಯಲ್ಲಿ ಕೆಲವು ಕಾರಣಗಳನ್ನು ಕೊಟ್ಟು ಅರ್ಥ ಮಾಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅದರೆ ಪ್ರಿಯಾಂಕ ಮಾತ್ರ ನಾನು ಜಗಳ ಆಡಲು ಆಗಲ್ಲ. ಹಾಗಾಗಿ ನಾನು ನನಗೆ ಅನ್ನಿಸಿದ್ದನ್ನು ಹೇಳುತ್ತೇನೆ ಎಂದು ಹೇಳಿದ್ದಾರೆ. ಇಬ್ಬರ ನಡುವಿನ ಮನಸ್ತಾಪ ಮಾತ್ರ ಸರಿ ಆದಂತಿಲ್ಲ. ಮುಂದಿನ ದಿನಗಳಲ್ಲಿ ಇವರ ಜಗಳ ಯಾವ ತಿರುವು ಪಡೆಯಲಿದೆ? ಅಥವಾ ಇವರಿಬ್ಬರು ರಾಜಿ ಮಾಡಿಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಾಗಿದೆ.