Tag: ಪ್ರಿಯಾಂಕಾ ಚೋಪ್ರಾ

  • ನಿದ್ದೆಗಳಿಲ್ಲದ ರಾತ್ರಿ ಕಳೆಯಲು ಸಿದ್ಧರಾಗಿ – ಪ್ರಿಯಾಂಕಾಗೆ ಅನುಷ್ಕಾ ಶರ್ಮಾ ವಿಶ್

    ನಿದ್ದೆಗಳಿಲ್ಲದ ರಾತ್ರಿ ಕಳೆಯಲು ಸಿದ್ಧರಾಗಿ – ಪ್ರಿಯಾಂಕಾಗೆ ಅನುಷ್ಕಾ ಶರ್ಮಾ ವಿಶ್

    ಮುಂಬೈ: ನಿದ್ದೆಗಳಿಲ್ಲದ ರಾತ್ರಿಗಳನ್ನು ಕಳೆಯಲು ಸಿದ್ಧರಾಗಿ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಪ್ರಿಯಾಂಕಾ ಚೋಪ್ರಾಗೆ ವಿಶ್ ಮಾಡಿದ್ದಾರೆ.

    ಇತ್ತೀಚೆಗೆ ಬಾಡಿಗೆ ತಾಯ್ತನದ ಮೂಲಕ ಮೊದಲ ಮಗುವನ್ನು ಸ್ವಾಗತಿಸಿದ ಪ್ರಿಯಾಂಕಾ ಚೋಪ್ರಾ ಸಂತೋಷದಲ್ಲಿದ್ದಾರೆ. ಈ ವೇಳೆ ಅನುಷ್ಕಾ ತನ್ನ ತಾಯ್ತನದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಅನುಷ್ಕಾ ಸ್ಟೋರಿಯಲ್ಲಿ, ಅಭಿನಂದನೆಗಳು ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ. ನೀವು ನಿದ್ದೆಗಳಿಲ್ಲದ ರಾತ್ರಿಗಳನ್ನು ಕಳೆಯಲು ಸಿದ್ಧರಾಗಿರಿ. ಆ ಕಷ್ಟದ ಜೊತೆಯಲ್ಲಿಯೂ ಸಾಟಿಯಿಲ್ಲದ ಸಂತೋಷ ಮತ್ತು ಪ್ರೀತಿಗಾಗಿ ಸಿದ್ಧರಾಗಿ. ನಿಮ್ಮ ಮಗುವಿಗೆ ಸಾಕಷ್ಟು ಪ್ರೀತಿ ಸಿಗಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  6 ತಿಂಗಳಿಗೆ ಹುಟ್ಟಿದ ಹೆಣ್ಣು ಮಗುವಿನ ಪೋಷಕರಾದ ಪ್ರಿಯಾಂಕಾ

    ಸರೋಗಸಿ ಮೂಲಕ ಪ್ರಿಯಾಂಕಾ ಚೋಪ್ರಾ ತಾಯಿಯಾಗಿದ್ದು, ಈ ಕುರಿತು ಅವರು ನಾವು ಮಗುವನ್ನು ಸ್ವಾಗತಿಸಿದ್ದೇವೆ. ನಾವು ಕುಟುಂಬದ ಕಡೆಗೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿರೋದರಿಂದ ನಮಗೆ ಪ್ರೈವಸಿ ಬೇಕಿದೆ. ಧನ್ಯವಾದಗಳು ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಗೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭಾಶಯ ತಿಳಿಸಿದ್ದರು.

     

    View this post on Instagram

     

    A post shared by Priyanka (@priyankachopra)

    ಬಾಡಿಗೆ ತಾಯಿ 27 ವಾರಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪೋಷಕರಾಗಿ ಬಡ್ತಿ ಪಡೆದ ಸಂತಸದಲ್ಲಿದ್ದಾರೆ. ಏಪ್ರಿಲ್‍ನಲ್ಲಿ ಪ್ರಿಯಾಂಕಾ ತಾಯಿ ಆಗುವ ನಿರೀಕ್ಷೆಯಲ್ಲಿದ್ದರು. ಆದರೆ 12 ವಾರಗಳ ಮೊದಲೇ ಹೆಣ್ಣು ಮಗು ಅಮೆರಿಕದ ಲಾಸ್ ಎಂಜಲೀಸ್ ಆಸ್ಪತ್ರೆಯಲ್ಲಿ ಜನಿಸಿದೆ. 6 ತಿಂಗಳಿಗೆ ಹುಟ್ಟಿದ ಪ್ರೀ-ಮೆಚ್ಯೂರ್ ಬೇಬಿಯಾಗಿರುವುದರಿಂದ ಮಗು ಮತ್ತು ಬಾಡಿಗೆ ತಾಯಿ ವಾರ ಆಸ್ಪತ್ರೆಯಲ್ಲೇ ವೈದ್ಯರ ನಿಗಾದಲ್ಲಿ ಇರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ

    ಅನುಷ್ಕಾ ಸಹ ತಾಯಿಯಾಗಿದ್ದು, ಆಕೆಗೂ ಒಂದು ವರ್ಷದ ಹೆಣ್ಣು ಮಗು ಇದೆ. ಆ ಮಗುವಿಗೆ ಇವರು ‘ವಮಿಕಾ’ ಎಂದು ಹೆಸರಿಟ್ಟಿದ್ದಾರೆ. ಆದರೆ ಒಂದು ವರ್ಷದಿಂದ ಮಗಳ ಫೋಟೋ ಮತ್ತು ಮುಖವನ್ನು ಎಲ್ಲಿಯೂ ಇವರಿಬ್ಬರು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇತ್ತೀಚೆಗೆ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಆ ಅರ್ಧಶತಕವನ್ನು ಮಗಳು ವಮಿಕಾಗೆ ಸಮರ್ಪಿಸಿದ್ದರು. ಆಗ ಅರ್ಧಶತಕ ಸಿಡಿಸುತ್ತಿದ್ದಂತೆ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದರು. ಈ ವೇಳೆ ಪುತ್ರಿ ವಮಿಕಾ ಕಿರುನಗೆ ಬೀರುತ್ತಾ ಕೊಹ್ಲಿಯನ್ನು ನೋಡಿದ್ದಳು. ಕೊಹ್ಲಿ ತನ್ನ ಬ್ಯಾಟ್‍ನ್ನು ಮಗುವಿನಂತೆ ಎತ್ತಿ ಆಡಿಸಿದಂತೆ ಮಾಡಿ ನನ್ನ ಅರ್ಧಶತಕ ನನ್ನ ಮಗಳಿಗೆ ಎಂಬಂತೆ ಸನ್ನೆ ಮಾಡಿ ಸಂಭ್ರಮಿಸಿದ್ದರು. ಈ ವೀಡಿಯೋದಲ್ಲಿ ಮಗಳ ವಮಿಕಾ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಳು. ಆಗ ವೀಡಿಯೋ ವೈರಲ್ ಆಗಿತ್ತು.

  • 6 ತಿಂಗಳಿಗೆ ಹುಟ್ಟಿದ ಹೆಣ್ಣು ಮಗುವಿನ ಪೋಷಕರಾದ ಪ್ರಿಯಾಂಕಾ

    6 ತಿಂಗಳಿಗೆ ಹುಟ್ಟಿದ ಹೆಣ್ಣು ಮಗುವಿನ ಪೋಷಕರಾದ ಪ್ರಿಯಾಂಕಾ

    ಮುಂಬೈ: ಬಾಡಿಗೆ ತಾಯ್ತನದ ಮೂಲಕ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಆರೂವರೆ ತಿಂಗಳಿಗೆ ಹುಟ್ಟಿದ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

    ಬಾಡಿಗೆ ತಾಯಿ 27 ವಾರಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪೋಷಕರಾಗಿ ಬಡ್ತಿ ಪಡೆದ ಸಂತಸದಲ್ಲಿದ್ದಾರೆ. ಏಪ್ರಿಲ್‍ನಲ್ಲಿ ಪ್ರಿಯಾಂಕ ತಾಯಿ ಆಗುವ ನಿರೀಕ್ಷೆಯಲ್ಲಿದ್ದರು. ಆದರೆ 12 ವಾರಗಳ ಮೊದಲೇ ಹೆಣ್ಣು ಮಗು ಅಮೆರಿಕದ ಲಾಸ್ ಎಂಜಲೀಸ್ ಆಸ್ಪತ್ರೆಯಲ್ಲಿ ಜನಿಸಿದೆ.

    6 ತಿಂಗಳಿಗೆ ಹುಟ್ಟಿದ ಪ್ರೀ-ಮೆಚ್ಯೂರ್ ಬೇಬಿಯಾಗಿರುವುದರಿಂದ ಮಗು, ಬಾಡಿಗೆ ತಾಯಿ ವಾರ ಆಸ್ಪತ್ರೆಯಲ್ಲೇ ವೈದ್ಯರ ನಿಗಾದಲ್ಲಿ ಇರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.


    ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಮಗುವನ್ನು ಹೊಂದಲು ಬಯಸಿದ್ದರು. ಆದರೆ ಅವರಿಬ್ಬರ ಬ್ಯುಸಿ ಶೆಡ್ಯೂಲ್ ಅಡ್ಡಿಯುಂಟು ಮಾಡಿತ್ತು. ದಂಪತಿಗೆ ಯಾವುದೇ ಸಮಸ್ಯೆಗಳು ಇರಲಿಲ್ಲ. ಆದರೆ ಪ್ರಿಯಾಂಕಾ ಅವರಿಗೀಗ ವಯಸ್ಸು 39. ಹೀಗಾಗಿ ಸುಲಭವಾಗಿಯೂ ಇರಲಿಲ್ಲ. ಬಿಡುವಿಲ್ಲದ ಕೆಲಸದ ಮಧ್ಯೆ ಗರ್ಭ ಧರಿಸುವುದು ಕಷ್ಟ ಎಂದು ಅರಿತ ಬಳಿಕ ಅವರು ಪ್ರಿಯಾಂಕಾ ದಂಪತಿ ಬಾಡಿಗೆ ತಾಯ್ತನದ ಮೊರೆ ಹೋಗಿ ಇದೀಗ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

    ಬಾಡಿಗೆ ತಾಯ್ತನದ ಮೂಲಕವಾಗಿ ಮಗುವನ್ನು ಪಡೆಯಲು ಒಬ್ಬ ಮಹಿಳೆಯನ್ನು ಭೇಟಿಯಾದರು. ಇದು ಆ ಮಹಿಳೆಗೆ ಐದನೇ ಸರೋಗಸಿಯಾಗಿತ್ತು. ಏಪ್ರಿಲ್‍ನಲ್ಲಿ ಮಗು ಪಡೆಯಲು ಪ್ರಿಯಾಂಕಾ ಚೋಪ್ರಾ ಪ್ಲಾನ್ ಮಾಡಿದ್ದರು. ಇದನ್ನೂ ಓದಿ: ತಂದೆ-ತಾಯಿಯಾದ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್!

    ಸರೋಗಸಿ ಮೂಲಕ ನಾವು ಮಗುವನ್ನು ಸ್ವಾಗತಿಸಿದ್ದೇವೆ. ನಾವು ಕುಟುಂಬದ ಕಡೆಗೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿರೋದರಿಂದ ನಮಗೆ ಪ್ರೈವಸಿ ಬೇಕಿದೆ. ಧನ್ಯವಾದಗಳು ಎಂದು ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ:ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ

    ಮಗುವಿನ ವಿಚಾರ ಹೇಳಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಯಾವ ಮಗು ಎಂದು ಮಾತ್ರ ಹೇಳಿಲ್ಲ. ಒಟ್ಟಿನಲ್ಲಿ ಇಷ್ಟುದಿನಗಳ ಕಾಲವೂ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿ ಮಗುವಿನ ವಿಚಾರವಾಗಿ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಸಂದರ್ಶನವೊಂದರಲ್ಲಿ, ಭವಿಷ್ಯದಲ್ಲಿ ತಾವು ತಾಯಿಯಾಗುವ ಬಯಕೆ ವ್ಯಕ್ತಪಡಿಸಿದ್ದರು. ಈ ಮೂಲಕ ಮೊದಲೇ ಮಗು ಕುರಿತಾಗಿ ಸುಳಿವು ನೀಡಿದ್ದರು.

    ಮಗು ಪಡೆದುಕೊಳ್ಳಬೇಕೆಂಬುದು ನಮ್ಮ ಜೀವನದ ಅತಿ ದೊಡ್ಡ ಕನಸಾಗಿದೆ. ದೇವರ ದಯೆಯಿಂದ ಅದು ಯಾವಾಗ ಸಂಭವಿಸುತ್ತದೋ ಆಗಲೇ ಸಂಭವಿಸಲಿ. ನಾನು ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ನಮ್ಮ ಜೀವನದಲ್ಲಿ ಮಗು ಆಗಮನವಾಗುವ ಸಂದರ್ಭದಲ್ಲಿ ನಾನು ಚಿತ್ರರಂಗದಿಂದ ನಿಧಾನವಾಗಿ ಬ್ರೇಕ್ ತೆಗೆದುಕೊಳ್ಳಲು ಆರಂಭಿಸುತ್ತೇವೆ ಎಂದು ಪ್ರಿಯಾಂಕಾ ಈ ಹಿಂದೆಯೇ ಹೇಳಿದ್ದರು.

    2018ರಲ್ಲಿ ನಿಕ್ ಜೋನಾಸ್, ಪ್ರಿಯಾಂಕಾ ಚೋಪ್ರಾ ಅವರು ಜೋಧಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್‍ನಲ್ಲಿ ಬ್ಯುಸಿಯಾಗಿದ್ದಾರೆ. ಪತಿ ಜೊತೆ ಅಮೆರಿಕದಲ್ಲಿ ನೆಲೆಸಿರುವ ಪ್ರಿಯಾಂಕಾ ಚೋಪ್ರಾ ಅವರು ಅಲ್ಲಿಯೇ ಭಾರತೀಯ ರೆಸ್ಟೋರೆಂಟ್ ಕೂಡ ಆರಂಭಿಸಿದ್ದಾರೆ.

  • ತಂದೆ-ತಾಯಿಯಾದ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್!

    ತಂದೆ-ತಾಯಿಯಾದ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್!

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ದಂಪತಿ ಸರೋಗಸಿ (ಬಾಡಿಗೆ ತಾಯ್ತನ) ಮೂಲಕವಾಗಿ ಪೋಷಕರಾಗಿ ಬಡ್ತಿಯನ್ನು ಪಡೆದಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸರೋಗಸಿ ಮೂಲಕ ನಾವು ಮಗುವನ್ನು ಸ್ವಾಗತಿಸಿದ್ದೇವೆ. ನಾವು ಕುಟುಂಬದ ಕಡೆಗೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿರೋದರಿಂದ ನಮಗೆ ಪ್ರೈವಸಿ ಬೇಕಿದೆ. ಧನ್ಯವಾದಗಳು ಎಂದು ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭಾಶಯ ತಿಳಿಸಿದ್ದಾರೆ.ಇದನ್ನೂ ಓದಿ:ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ

     

    View this post on Instagram

     

    A post shared by Priyanka (@priyankachopra)

    ಮಗುವಿನ ವಿಚಾರ ಹೇಳಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಯಾವ ಮಗು ಎಂದು ಮಾತ್ರ ಹೇಳಿಲ್ಲ. ಒಟ್ಟಿನಲ್ಲಿ ಇಷ್ಟುದಿನಗಳ ಕಾಲವೂ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿ ಮಗುವಿನ ವಿಚಾರವಾಗಿ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಸಂದರ್ಶನವೊಂದರಲ್ಲಿ, ಭವಿಷ್ಯದಲ್ಲಿ ತಾವು ತಾಯಿಯಾಗುವ ಬಯಕೆ ವ್ಯಕ್ತಪಡಿಸಿದ್ದರು. ಈ ಮೊದಲೇ ಮಗು ಕುರಿತಾಗಿ ಸುಳಿವು ನೀಡಿದ್ದರು. ಇದನ್ನೂ ಓದಿ: ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಕನಸು: ಪ್ರಿಯಾಂಕಾ ಚೋಪ್ರಾ

    ಮಗು ಪಡೆದುಕೊಳ್ಳಬೇಕೆಂಬುದು ನಮ್ಮ ಜೀವನದ ಅತಿ ದೊಡ್ಡ ಕನಸಾಗಿದೆ. ದೇವರ ದಯೆಯಿಂದ ಅದು ಯಾವಾಗ ಸಂಭವಿಸುತ್ತದೋ ಆಗಲೇ ಸಂಭವಿಸಲಿ. ನಾನು ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ನಮ್ಮ ಜೀವನದಲ್ಲಿ ಮಗು ಆಗಮನವಾಗುವ ಸಂದರ್ಭದಲ್ಲಿ ನಾನು ಚಿತ್ರರಂಗದಿಂದ ನಿಧಾನವಾಗಿ ಬ್ರೇಕ್ ತೆಗೆದುಕೊಳ್ಳಲು ಆರಂಭಿಸುತ್ತೇವೆ ಎಂದು ಪ್ರಿಯಾಂಕಾ ಈ ಹಿಂದೆಯೇ ಹೇಳಿದ್ದರು.

    2018ರಲ್ಲಿ ನಿಕ್ ಜೋನಾಸ್, ಪ್ರಿಯಾಂಕಾ ಚೋಪ್ರಾ ಅವರು ಜೋಧಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್‍ನಲ್ಲಿ ಬ್ಯುಸಿಯಾಗಿದ್ದಾರೆ. ಪತಿ ಜೊತೆ ಅಮೆರಿಕದಲ್ಲಿ ನೆಲೆಸಿರುವ ಪ್ರಿಯಾಂಕಾ ಚೋಪ್ರಾ ಅವರು ಅಲ್ಲಿಯೇ ಭಾರತೀಯ ರೆಸ್ಟೋರೆಂಟ್ ಕೂಡ ಆರಂಭಿಸಿದ್ದಾರೆ.

  • ಮಂಗಳಸೂತ್ರ ಧರಿಸಿದಾಗ ಆದ ಅನುಭವ ಹಂಚಿಕೊಂಡ ಪ್ರಿಯಾಂಕಾ

    ಮಂಗಳಸೂತ್ರ ಧರಿಸಿದಾಗ ಆದ ಅನುಭವ ಹಂಚಿಕೊಂಡ ಪ್ರಿಯಾಂಕಾ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮಂಗಳಸೂತ್ರ ಧರಿಸಿದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಒಬ್ಬ ಅದ್ಭುತ ನಟಿ ಮಾತ್ರವಲ್ಲದೇ ಫ್ಯಾಶನ್‌ಗೆ ಬಹಳಷ್ಟು ಒತ್ತು ಕೊಡುವ ಮಾಡರ್ನ್ ಮಹಿಳೆಯೂ ಹೌದು. ನಟಿ 2018ರಲ್ಲಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾಗಿದ್ದು, ಇವರಿಬ್ಬರ ಪ್ರೇಮಮಯ ಜೀವನಕ್ಕೆ ಮೂಕವಿಸ್ಮಿತರಾದವರೇ ಇಲ್ಲ.

    ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಒಂದು ಬ್ರಾಂಡ್ ಶೂಟ್‌ನಲ್ಲಿ ತಮ್ಮ ಮದುವೆಯ ಸಂದರ್ಭದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅವರು ಮೊದಲ ಬಾರಿಗೆ ಮಂಗಳ ಸೂತ್ರವನ್ನು ಧರಿಸಿದಾಗ ಏನನ್ನಿಸಿತು ಎಂಬುವುದರ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಕನಸು: ಪ್ರಿಯಾಂಕಾ ಚೋಪ್ರಾ

    ನಾನು ಮಂಗಳಸೂತ್ರವನ್ನು ಮೊದಲ ಬಾರಿಗೆ ಧರಿಸಿದ ಸಂದರ್ಭ ನನಗಿನ್ನೂ ನೆನಪಿದೆ. ಏಕೆಂದರೆ ಮಂಗಳಸೂತ್ರದ ಅರ್ಥ ಏನು ಎಂಬುದರ ಬಗ್ಗೆ ಕಲ್ಪನೆ ಮಾಡಿಕೊಂಡೇ ಬೆಳೆದಿದ್ದೇನೆ. ಆ ಕ್ಷಣ ನನಗೆ ಬಹಳ ವಿಶೇಷವಾಗಿತ್ತು. ಅದೇ ಸಂದರ್ಭದಲ್ಲಿ ನಾನೊಬ್ಬ ಆಧುನಿಕ ಮಹಿಳೆಯಾಗಿ ಇದರ ಅರ್ಥದ ಪರಿಣಾಮ ಏನು ಎಂಬುದರ ಬಗ್ಗೆ ನನಗೂ ಅರಿವಿತ್ತು ಎಂದರು.

    ನಾನು ಮಂಗಳಸೂತ್ರ ಧರಿಸಲು ಇಷ್ಟಪಡುತ್ತೇನೋ ಅಥವಾ ಪಿತೃಪ್ರಧಾನಕ್ಕೆ ಒಳಗಾಗುತ್ತೇನೋ? ಆದರೆ ಅದೇ ಸಂದರ್ಭದಲ್ಲಿ ನನಗನ್ನಿಸಿದ್ದು ನಾನು ಇವೆರಡೂ ತಲೆಮಾರಿನ ಮಧ್ಯದಲ್ಲಿರುತ್ತೇನೆ ಎಂದು. ಸಂಪ್ರದಾಯವನ್ನು ಕಾಪಾಡಿಕೊಳ್ಳಬೇಕು. ಆದರೆ ನೀವು ಯಾರು ಹಾಗೂ ಯಾವ ಕಾರಣಕ್ಕೆ ಇಲ್ಲಿ ನಿಂತಿರುವಿರಿ ಎಂಬುದನ್ನೂ ತಿಳಿದುಕೊಳ್ಳಬೇಕು. ಮುಂದಿನ ಪೀಳಿಗೆಯ ಹುಡುಗಿಯರು ಭಿನ್ನವಾಗುವುದನ್ನು ನಾವು ನೋಡುತ್ತೇವೆ ಎಂದು ಪ್ರಿಯಾಂಕಾ ಹೇಳಿದರು. ಇದನ್ನೂ ಓದಿ: ಮಾಲ್ಡೀವ್ಸ್ ಕಡಲ ತೀರದಲ್ಲಿ ಕಿಯಾರಾ ಅಡ್ವಾನಿ ಹಾಟ್ ಅವತಾರ

    ನಂತರದಲ್ಲಿ ಪ್ರಿಯಾಂಕಾ ಮಂಗಳಸೂತ್ರದ ಕಪ್ಪು ಮಣಿಗಳ ಪ್ರಾಮುಖ್ಯತೆಯ ಬಗ್ಗೆಯೂ ತಿಳಿಸಿದ್ದಾರೆ. ಕಪ್ಪು ಎನ್ನುವುದು ದುಷ್ಟತನವನ್ನು ತೊಡೆದು ಹಾಕುತ್ತದೆ ಹಾಗೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.

  • ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಕನಸು: ಪ್ರಿಯಾಂಕಾ ಚೋಪ್ರಾ

    ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಕನಸು: ಪ್ರಿಯಾಂಕಾ ಚೋಪ್ರಾ

    ಮುಂಬೈ: ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಬಯಕೆಯಾಗಿದೆ ಎಂದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

    ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಭವಿಷ್ಯದಲ್ಲಿ ತಾವು ತಾಯಿಯಾಗುವುದರ ಬಗ್ಗೆ ಮಾತನಾಡಿದ್ದಾರೆ. ವರದಿಗಾರರ ಪ್ರಶ್ನೆಗೆ ಪ್ರಿಯಾಂಕಾ ನೇರವಾಗಿ ಉತ್ತರ  ಕೊಟ್ಟಿದ್ದಾರೆ. ಇದನ್ನೂ ಓದಿ:ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ

    ಪ್ರಿಯಾಂಕಾಗೆ ತಮ್ಮ ತಾಯಿ ಮಧು ಚೋಪ್ರಾ ಅಜ್ಜಿಯಾಗಬೇಕೆಂದು ಆಶಿಸುತ್ತಿದ್ದಾರೇ ಎಂಬ ಪ್ರಶ್ನೆಯನ್ನು ಸಂದರ್ಶನವೊಂದರಲ್ಲಿ ಕೇಳಲಾಗಿತ್ತು. ಆಗ ಪ್ರಿಯಾಂಕಾ ನಗುತ್ತಲೇ, ಮಗು ಪಡೆದುಕೊಳ್ಳಬೇಕೆಂಬುದು ನಮ್ಮ ಜೀವನದ ಅತಿ ದೊಡ್ಡ ಕನಸಾಗಿದೆ. ದೇವರ ದಯೆಯಿಂದ ಅದು ಯಾವಾಗ ಸಂಭವಿಸುತ್ತದೋ ಆಗಲೇ ಸಂಭವಿಸಲಿ. ನಾನು ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆನೆ. ನಮ್ಮ ಜೀವನದಲ್ಲಿ ಮಗು ಆಗಮನವಾಗುವ ಸಂದರ್ಭದಲ್ಲಿ ನಾನು ಚಿತ್ರರಂಗದಿಂದ ನಿಧಾನವಾಗಿ ಬ್ರೇಕ್ ತೆಗೆದುಕೊಳ್ಳಲು ಆರಂಭಿಸುತ್ತೇವೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

     

    ಪ್ರಿಯಾಂಕಾ ಅವರು ಪಾಪ್ ಸ್ಟಾರ್ ನಿಕ್ ಜೋನಾಸ್ ಅವರನ್ನು 2018 ಡಿಸೆಂಬರ್ 1ರಂದು ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರಿಯಾಂಕಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಇತ್ತೀಚೆಗಷ್ಟೆ ಹೊಸ ಮನೆಯನ್ನು ಖರೀದಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‍ನಲ್ಲಿ ರೆಸ್ಟೋರೆಂಟ್ ಒಂದನ್ನು ಆರಂಭಿಸಿದ್ದಾರೆ. ಈ ಹೋಟೆಲ್‍ಗೆ ಸೋನಾ ಎಂದು ಪ್ರಿಯಾಂಕಾ ಹೆಸರು ಇಟ್ಟಿದ್ದಾರೆ.

  • ದಳಪತಿ ವಿಜಯ್‍ರಿಂದ ಪ್ರಿಯಾಂಕಾ ಚೋಪ್ರಾ ಕಲಿತ ಪಾಠವೇನು ಗೊತ್ತಾ?

    ದಳಪತಿ ವಿಜಯ್‍ರಿಂದ ಪ್ರಿಯಾಂಕಾ ಚೋಪ್ರಾ ಕಲಿತ ಪಾಠವೇನು ಗೊತ್ತಾ?

    ಚೆನ್ನೈ: ಕಾಲಿವುಡ್ ನಟ ದಳಪತಿ ವಿಜಯ್ ಅವರಿಂದ ಕಲಿತ ಪಾಠವನ್ನು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ರಿವೀಲ್ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2000ರಲ್ಲಿ ನಾನು ಮಿಸ್ ವರ್ಲ್ಡ್ ಅವಾರ್ಡ್ ಗೆದ್ದ ನಂತರ ಸಿನಿಮಾಕ್ಕೆ ನಾನು ಇನ್ನೂ ಹೊಸಬಳಾಗಿದ್ದೆ. ಮೊದಲಿಗೆ ತಮಿಝನ್ ಎಂಬ ತಮಿಳು ಚಿತ್ರ ಹಾಗೂ ಅಂದಾಜ್ ಮತ್ತು ದಿ ಹೀರೋ ಎಂಬ ಎರಡು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದೆ. ನನಗೆ ಈಗಲೂ ನೆನಪಿದೆ ಸೆಟ್‍ಗೆ ಹೋದಾಗ ನನಗೆ ಏನು ಸಹ ತಿಳಿದಿರಲಿಲ್ಲ. ನಟನೆ ಎಂಬುದು ನಿಜವಾಗಿಯೂ ನೀವು ಧರಿಸುವ ಡ್ರೆಸ್ ಹಾಗೂ ಮೇಕಪ್ ಗೆ  ಸಂಬಂಧಿಸುತ್ತದೆ. ನಾನು ಸೆಟ್‍ಗೆ ಹೋದಾಗ ಕಾಗದದ ಮೇಲೆ ನೀಡಿರುವ ಡೈಲಾಂಗ್ ತೆಗೆದುಕೊಂಡು ಪಾತ್ರಕ್ಕೆ ಜೀವ ತುಂಬಿಸುವುದು ಹೇಗೆ ಎಂದು ಯೋಚಿಸುತ್ತಿದ್ದೆ. ಈ ಅನುಭವ ಬಹಳ ಕಷ್ಟಕರವಾಗಿತ್ತು.

    ನಾನು ಡೈಲಾಗ್ ಫೋನೆಟಿಕ್ ಆಗಿ ಕಲಿಯುತ್ತಿದ್ದೆ. ನಂತರ ಅದನ್ನು ಕಂಠಪಾಠ ಮಾಡುತ್ತಿದ್ದೆ. ಅದರ ಹಿಂದಿನ ಅರ್ಥವನ್ನು ಅರ್ಥಮಾಡಿಕೊಳ್ಳುತ್ತಿದ್ದೆ ಮತ್ತು ನಂತರ ನನ್ನ ಸಾಲುಗಳನ್ನು ಹೇಳುತ್ತಿದ್ದೆ. ಈ ವೇಳೆ ನನ್ನ ನನ್ನ ಕೋ ಸ್ಟಾರ್ ವಿಜಯ್ ಅವರನ್ನು ನೋಡಿದೆ. ನನ್ನ ಜೀವನದ ಪ್ರಮುಖ ವ್ಯಕ್ತಿಗಳಲ್ಲಿ ಅವರು ಸಹ ಒಬ್ಬರು. ಅವರು ವಿಶಾಲವಾದ ಹೃದಯವನ್ನು ಹೊಂದಿದ್ದಾರೆ. ಒಂದು ಬಾರಿ ಸೆಟ್‍ಗೆ ಅವರು ಬಂದರೆ ಮತ್ತೆ ಸೆಟ್‍ನಿಂದ ಹೊರಹೋಗುತ್ತಿರಲಿಲ್ಲ. ನಾನು ಕೂಡ ಅದನ್ನು ಪಾಲಿಸುತ್ತೇನೆ. ಚಿತ್ರೀಕರಣದ ವೇಳೆ ನನ್ನ ಟ್ರೇಲರ್‌ಗೆ ನಾನು ಹೋಗುವುದು ಬಹಳ ಕಡಿಮೆ. ಇಲ್ಲದಿದ್ದರೆ ಬಹಳಷ್ಟು ಹೊತ್ತು ಕಾಯಬೇಕಾಗುತ್ತದೆ. ನಾನು ಸಾಮಾನ್ಯವಾಗಿ ಸೆಟ್‍ನಲ್ಲಿಯೇ ಸುತ್ತಾಡುತ್ತಿರುತ್ತೇನೆ. ನಾವು ಏಕೆ ಡಿಫರೆಂಟ್ ಶಾಟ್‍ಗಳನ್ನು ತೆಗೆದುಕೊಳ್ಳುತ್ತಿರುತ್ತೇವೆ ಎಂದು ತಿಳಿಯಲು ಹೆಚ್ಚಾಗಿ ಯೋಚಿಸುತ್ತಿರುತ್ತೇನೆ. ನಾನು ಸಿಬ್ಬಂದಿಯೊಂದಿಗೆ ಮಾತನಾಡಲು ಬಯಸುತ್ತೇನೆ. ನಾನು ಯಾವಾಗಲೂ ಎಲ್ಲರ ಮಧ್ಯೆ ಇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಊ ಅಂತಾವಾ’ ವಿವಾದದ ಕುರಿತು ಮೌನ ಮುರಿದ ದೇವಿ ಶ್ರೀ ಪ್ರಸಾದ್

    ಪ್ರಿಯಾಂಕಾ ಚೋಪ್ರಾ ಅವರು ದಳಪತಿ ವಿಜಯ್ ಜೊತೆಗೆ ತಮಿಝನ್ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದರು. ನಟನೆ ಅಷ್ಟೇ ಅಲ್ಲದೇ ಡಿ ಇಮ್ಮಾನ್ ಸಂಯೋಜಿಸಿರುವ ಉಲ್ಲತೈ ಕಿಲ್ಲಾತೆ ಎಂಬ ಹಾಡನ್ನು ಸಹ ಹಾಡಿದ್ದಾರೆ. ಇದನ್ನೂ ಓದಿ:  ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!

  • ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ಸಿಂಗರ್ ನಿಕ್ ಜೋನಾಸ್ 3ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.

    ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್‍ನಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ನಿಕ್ ಜೋನಾಸ್ ವರ್ಕೌಟ್ ಮಾಡುತ್ತಿದ್ದ ವೀಡಿಯೋಗೆ ರೋಮ್ಯಾಂಟಿಕ್ ಆಗಿ ಕಾಮೆಂಟ್ ಮಾಡುವ ಮೂಲಕ ಪ್ರಿಯಾಂಕಾ ಚೋಪ್ರಾ ವಿಚ್ಛೇದನ ಗಾಸಿಪ್‍ಗೆ ಬ್ರೇಕ್ ಹಾಕಿದ್ದರು. ಇದನ್ನೂ ಓದಿ: ಪತ್ನಿ ಡ್ರೆಸ್ ಸರಿಪಡಿಸೋದ್ರಲ್ಲಿ ಬ್ಯುಸಿಯಾದ ನಿಕ್ – ಪರ್ಫೆಕ್ಟ್ ಜಂಟಲ್ ಮ್ಯಾನ್ ಅಂದ ನೆಟ್ಟಿಗರು

    ಇದೀಗ ಪ್ರಿಯಾಂಕಾ ಹಾಗೂ ನಿಕ್ ಡಿಸೆಂಬರ್ 1 ರಂದು ಲಂಡನ್‍ನಲ್ಲಿ ಮದುವೆ ವಾರ್ಷಿಕೋತ್ಸವನ್ನು ಸಖತ್ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಇನ್ನೂ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೆಶನ್ ವೀಡಿಯೋವನ್ನು ನಿಕ್ ಜೋನಾಸ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಫಾರ್ ಎವರ್(ಎಂದೆಂದಿಗೂ) ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

     

    View this post on Instagram

     

    A post shared by Nick Jonas (@nickjonas)

    ವೀಡಿಯೋದಲ್ಲಿ ಪತ್ನಿಗೆ ಇಷ್ಟವಾಗುವಂತೆ ಫಾರ್ ಎವರ್ ಜೋಡಿಸಿರುವ ಅಕ್ಷರ, ಕ್ಯಾಡಲ್ ಲೈಟ್‍ಗಳನ್ನು ಹಾಗೂ ಡೇಬಲ್ ಮೇಲೆ ಬಣ್ಣ, ಬಣ್ಣದ ಹೂವಿಗಳಿಂದ ಅಲಂಕರಿಸಿರುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಈ ವೀಡಿಯೋದಲ್ಲಿ ಟೇಬಲ್ ಮೇಲೆ ಕುಳಿತು ಪ್ರಿಯಾಂಕಾ ಚೋಪ್ರಾ ಹಾಯ್ ಮಾಡುತ್ತಾ ಕ್ಯೂಟ್ ಆಗಿ ಸ್ಮೈಲ್ ಮಾಡಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ನಿಕ್ ಜೊತೆಗಿನ ವಿಚ್ಛೇದನ ಗಾಸಿಪ್​ಗೆ ಬ್ರೇಕ್ ಹಾಕಿದ ಪ್ರಿಯಾಂಕಾ ಚೋಪ್ರಾ

     

    View this post on Instagram

     

    A post shared by Priyanka (@priyankachopra)

    ಪ್ರಿಯಾಂಕಾ ಚೋಪ್ರಾ ಕೂಡ ಸೆಲೆಬ್ರೆಶನ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ಟೇಬಲ್ ಮೇಲೆ ನಿಮ್ಮನ್ನು ಕಂಡುಕೊಂಡೆ, ಮದುವೆಯಾದೆ, ನಿಮ್ಮನ್ನು ಉಳಿಸಿಕೊಂಡೆ ಎಂಬ ಕಾರ್ಡ್ ಇರುವುದನ್ನು ಕಾಣಬಹುದಾಗಿದೆ.

  • ಪತ್ನಿ ಡ್ರೆಸ್ ಸರಿಪಡಿಸೋದ್ರಲ್ಲಿ  ಬ್ಯುಸಿಯಾದ ನಿಕ್ – ಪರ್ಫೆಕ್ಟ್ ಜಂಟಲ್ ಮ್ಯಾನ್ ಅಂದ ನೆಟ್ಟಿಗರು

    ಪತ್ನಿ ಡ್ರೆಸ್ ಸರಿಪಡಿಸೋದ್ರಲ್ಲಿ ಬ್ಯುಸಿಯಾದ ನಿಕ್ – ಪರ್ಫೆಕ್ಟ್ ಜಂಟಲ್ ಮ್ಯಾನ್ ಅಂದ ನೆಟ್ಟಿಗರು

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಡ್ರೆಸ್ಸನ್ನು ಪತಿ ನಿಕ್ ಜೋನಾಸ್ ಸರಿಪಡಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್‍ನಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ನಿಕ್ ಜೋನಾಸ್ ವರ್ಕೌಟ್ ಮಾಡುತ್ತಿದ್ದ ವೀಡಿಯೋಗೆ ರೋಮ್ಯಾಂಟಿಕ್ ಆಗಿ ಕಾಮೆಂಟ್ ಮಾಡುವ ಮೂಲಕ ಪ್ರಿಯಾಂಕಾ ಚೋಪ್ರಾ ವಿಚ್ಛೇದನ ಗಾಸಿಪ್‍ಗೆ ಬ್ರೇಕ್ ಹಾಕಿದ್ದರು. ಇದನ್ನೂ ಓದಿ: ಪತಿಯಿಂದ ವಿಚ್ಛೇದನ ಪಡೆಯುತ್ತಾರಾ ಪ್ರಿಯಾಂಕಾ ಚೋಪ್ರಾ?

     

    View this post on Instagram

     

    A post shared by Priyanka (@priyankachopra)

    ಇದೀಗ ಲಂಡನ್‍ನ ರಾಯಲ್ ಆಲ್ಬರ್ಟ್ ಹಾಲ್‍ನಲ್ಲಿ ನಡೆದ ಬ್ರಿಟಿಷ್ ಫ್ಯಾಶನ್ ಅವಾರ್ಡ್ಸ್ 2021ರ ಸಮಾರಂಭಕ್ಕೆ ಆಗಮಿಸಿದ್ದ ಪ್ರಿಯಾಂಕಾ ಹೂವಿನ ಡಿಸೈನ್ ಇರುವ ಜಂಪ್ ಸೂಟ್ ಧರಿಸಿದ್ದರೆ, ನಿಕ್ ಜೋನಾಸ್ ರೆಡ್ ಕಲರ್ ಟಿ-ಶರ್ಟ್ ಮತ್ತು ಬ್ಲಾಕ್ ಕಲರ್ ಸೂಟ್ ತೊಟ್ಟು ಮಿಂಚಿದ್ದರು. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

     

    View this post on Instagram

     

    A post shared by Jerry x Mimi ???? (@jerryxmimi)

    ಕಾರ್ಯಕ್ರಮದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಈ ಜೋಡಿ ರೆಡ್ ಕಾರ್ಪೆಟ್ ಮೇಲೆ ಕ್ಯಾಮೆರಾಗೆ ಪೋಸ್ ನೀಡಲು ನಿಂತಾಗ ನಿಕ್ ಜೋನಾಸ್ ಪ್ರಿಯಾಂಕಾ ಅವರ ಜಂಪ್ ಸೂಟ್ ಅನ್ನು ಸರಿ ಮಾಡಿ ನಂತರ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ನಿಕ್ ಜೋನಾಸ್ ನಿಜವಾದ ಪರ್ಫೆಕ್ಟ್ ಜಂಟಲ್ ಮ್ಯಾನ್, ಪತ್ನಿಯನ್ನು ಬಹಳ ಪ್ರೀತಿಸುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. ಹೀಗೆ ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ನಿಕ್ ಜೊತೆಗಿನ ವಿಚ್ಛೇದನ ಗಾಸಿಪ್​ಗೆ ಬ್ರೇಕ್ ಹಾಕಿದ ಪ್ರಿಯಾಂಕಾ ಚೋಪ್ರಾ

  • ಪತಿಯಿಂದ ವಿಚ್ಛೇದನ ಪಡೆಯುತ್ತಾರಾ ಪ್ರಿಯಾಂಕಾ ಚೋಪ್ರಾ?

    ಪತಿಯಿಂದ ವಿಚ್ಛೇದನ ಪಡೆಯುತ್ತಾರಾ ಪ್ರಿಯಾಂಕಾ ಚೋಪ್ರಾ?

    ವಾಷಿಂಗ್ಟನ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದ ಪತಿ ನಿಕ್ ಜೋನಾಸ್ ಅವರ ಹೆಸರನ್ನು ತೆಗೆದುಹಾಕಿದ್ದಾರೆ. ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೊಂದು ಬಾಲಿವುಡ್‌ ಅಂಗಳಲದಲ್ಲಿ ಹರಿದಾಡುತ್ತಿದೆ.

    ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಇನ್‍ಸ್ಟಾಗ್ರಾಮ್‌ನಲ್ಲಿ  ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಇಂದು ಜೋನಾಸ್ ಹೆಸರನ್ನು ತೆಗೆದುಹಾಕಿರುವುದು ತೀವ್ರ ಕುತೂಹಲಕ್ಕಿಡುಮಾಡಿದೆ. ಅಲ್ಲದೆ ಪ್ರಿಯಾಂಕಾ ಅವರ ಈ ದಿಢೀರ್ ಬದಲಾವಣೆ ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಕುರಿತಾಗಿ ಚರ್ಚೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಪ್ರಿಯಾಂಕಾ ಚೋಪ್ರಾ

     

    ಪ್ರಿಯಾಂಕಾ ಅವರು ಪಾಪ್ ಸ್ಟಾರ್ ನಿಕ್ ಜೋನಾಸ್ ಅವರನ್ನು 2018 ಡಿಸೆಂಬರ್ 1ರಂದು ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರಿಯಾಂಕಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಇತ್ತೀಚೆಗಷ್ಟೆ ಹೊಸ ಮನೆಯನ್ನು ಖರೀದಿಸಿದ್ದಾರೆ. ಅಲ್ಲಿ ಪ್ರಿಯಾಂಕಾ ದೀಪಾವಳಿಯನ್ನು ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪತಿಯ ಜೊತೆ  ಫೋಟೋ ಕ್ಲಿಕ್ಕಿಸಿಕೊಂಡು ಈ ಬಾರಿಯ ದೀಪಾವಳಿ ತುಂಬಾ ಸ್ಪೆಷಲ್ ಎನ್ನುವ ಸಂದೇಶವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಇದನ್ನೂ ಓದಿ:ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ

    ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‍ನಲ್ಲಿ ರೆಸ್ಟೋರೆಂಟ್ ಒಂದನ್ನು ಆರಂಭಿಸಿದ್ದಾರೆ. ಈ ಹೋಟೆಲ್‍ಗೆ ಸೋನಾ ಎಂದು ಪ್ರಿಯಾಂಕಾ ಹೆಸರು ಇಟ್ಟಿದ್ದಾರೆ. ಇದು ಕೇವಲ ರೆಸ್ಟೋರೆಂಟ್ ಮಾತ್ರವಲ್ಲ, ನನ್ನ ಕನಸು ಕೂಡ. ನಾನು ಸೋನಾದಲ್ಲಿದ್ದೇನೆ ಎಂಬುದನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ. 3 ವರ್ಷದ ಪ್ಲ್ಯಾನಿಂಗ್‍ನಿಂದ ಈ ರೆಸ್ಟೋರೆಂಟ್ ಸಿದ್ಧಗೊಂಡಿದೆ. ಪ್ರಿಯಾಂಕಾ ಚೋಪ್ರಾ ಅವರು ಪತಿಯಿಂದ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ ಎನ್ನುವ ವದಂತಿಯೊಂದು ಹರಿದಾಡುತ್ತಿದೆ. ಈ ಕುರಿತಾಗಿ ಅವರೇ ಸ್ಪಷ್ಟನೆ ನೀಡಬೇಕಾಗಿದೆ.

  • ಪ್ರಿಯಾಂಕಾಗೆ ಸ್ವರ್ಗ ಎನಿಸುವ ಸ್ಥಳ ಯಾವುದು ಗೊತ್ತಾ?

    ಪ್ರಿಯಾಂಕಾಗೆ ಸ್ವರ್ಗ ಎನಿಸುವ ಸ್ಥಳ ಯಾವುದು ಗೊತ್ತಾ?

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬರೋಬ್ಬರಿ 2.1 ಕೋಟಿ ಮೊತ್ತದ ಎಂಗೇಜ್‍ಮೆಂಟ್ ರಿಂಗ್ ಹಾಗೂ ಅವರಿಗೆ ಸ್ವರ್ಗ ಎಂದು ಅನಿಸುವ ಸ್ಥಳದ ಕುರಿತಾಗಿ ಕುತೂಹಲಕರ ವಿಚಾರ ಹಂಚಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ಲಾಸ್ ಏಂಜಲೀಸ್‍ನಲ್ಲಿ ಪತಿ ನಿಕ್ ಜೋನಾಸ್ ಜೊತೆ ಭರ್ಜರಿಯಾಗಿ ದೀಪಾವಳಿಯನ್ನು ಆಚರಿಸಿದ್ದ ಪ್ರಿಯಾಂಕಾ, ಪ್ರಸ್ತುತ ಕೆಲಸದ ಕಾರಣಕ್ಕೆ ದುಬೈಗೆ ತೆರಳಿದ್ದಾರೆ. ಅಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ತಮ್ಮ ವೈಯಕ್ತಿಯ ಜೀವನದ ಹಲವು ಕುತೂಹಲಕರ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಸಂದರ್ಶನದಲ್ಲಿ ಇದುವರೆಗೆ ಸ್ವೀಕರಿಸಿದ ಅದ್ಭುತವಾದ ಆಭರಣ ಯಾವುದು ಎಂಬ ಪ್ರಶ್ನೆಗೆ ಪ್ರಿಯಾಂಕಾ ತಮಾಷೆ ಮಾಡುತ್ತಲೇ ಉತ್ತರ ಹೇಳಿದ್ದಾರೆ. ಇದನ್ನೂ ಓದಿ:   ಅಪ್ಪು ಸರ್ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇವೆ: ರಾಧಿಕಾ ಪಂಡಿತ್

    ನನಗೆ ನಿಶ್ಚಿತಾರ್ಥದ ಉಂಗುರ ಬಹಳ ವಿಶೇಷವಾದದ್ದು. ಅದು ನನಗೆ ಬಹಳ ಅನಿರೀಕ್ಷಿತವಾಗಿತ್ತು. ಜೊತೆಗೆ ಜೀವನದ ವಿಶೇಷಗಳಿಗೆಯ ನೆನಪಾಗಿದೆ. ಆದ್ದರಿಂದ ಅದು ತನಗೆ ಬಹಳ ಅತ್ಯಮೂಲ್ಯವಾದದ್ದಾಗಿದೆ. ಇದೇ ವೇಳೆ ನಿಮಗೆ ಯಾವ ಸ್ಥಳ ಸ್ವರ್ಗ ಎಂದೆನಿಸುತ್ತದೆ ಎಂಬ ಪ್ರಶ್ನೆಗೆ, ತಮ್ಮ ಮನೆಯೇ ಸ್ವರ್ಗ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ನೆಚ್ಚಿನವರ ಜೊತೆ ಇರುವುದು, ಮನೆಯಲ್ಲಿ ಇರುವುದು ನನಗೆ ಸ್ವರ್ಗದ ರೀತಿ ಭಾಸವಾಗುತ್ತದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

    ನಿಕ್ ಹಾಗೂ ಪ್ರಿಯಾಂಕಾ 2018ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ್ದರು. ನಿಕ್ ರೇಡಿಯೋವೊಂದಕ್ಕೆ ಸಂದರ್ಶನ ನೀಡುತ್ತಾ, ಪ್ರಿಯಾಂಕಾಗೆ ನೀಡಿದ್ದ ಉಂಗುರದ ಬಗ್ಗೆ ಪ್ರಸ್ತಾಪಿಸಿದ್ದರು. ಅದನ್ನು ನೀಡಲು ತಮ್ಮ ಸೋದರರು ಬಹಳ ಸಹಾಯ ಮಾಡಿದ್ದರು ಎಂದು ಅವರು ತಿಳಿಸಿದ್ದರು. ಆ ಉಂಗುರದ ಬೆಲೆ ಸುಮಾರು 2.1 ಕೋಟಿ ರೂಪಾಯಿ ಎಂದು ಸುದ್ದಿಯಾಗಿದೆ.