Tag: ಪ್ರಿಯಾಂಕಾ ಚೋಪ್ರಾ

  • ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಸಂದರ್ಶಿಸಿದ ಬಾಲಿವುಡ್ ನಟಿ ಪಿಗ್ಗಿ

    ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಸಂದರ್ಶಿಸಿದ ಬಾಲಿವುಡ್ ನಟಿ ಪಿಗ್ಗಿ

    ಬಾಲಿವುಡ್ (Bollywood) ಸಿನಿಮಾ ರಂಗದಿಂದಲೇ ದೂರ ಉಳಿದಿರುವ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಜಾಗತಿಕ ಮಟ್ಟದ ವಾಹಿನಿಯೊಂದಕ್ಕೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಅಮೆರಿಕನ್ (America) ಟಿವಿ ಶೋ ಕ್ವಾಂಟಿಕೋದಲ್ಲಿ ಪ್ರಸಿದ್ಧ ವ್ಯಕ್ತಿಗಳನ್ನು ಸಂದರ್ಶಿಸುತ್ತಾರೆ. ಈ ಬಾರಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಅವರನ್ನು ಸಂದರ್ಶಿಸಿದ್ದಾರೆ (Interview). ಆ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಶುಕ್ರವಾರ ಈ ಕಾರ್ಯಕ್ರಮ ನಡೆದಿದ್ದು, ಯುಎಸ್.ಎ ಬಂದೂಕು ಹಕ್ಕು, ವೇತನ ಸಮಾನತೆ ಸೇರಿದಂತೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಮ್ಮ ಬದುಕಿನಲ್ಲೂ ನಡೆದ ಹಲವು ಘಟನೆಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದು, ತಾವೂ ಕೂಡ ವೇತ ತಾರತಮ್ಯವನ್ನು ಎದುರಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಎರಡು ದಶಕದ ನಂತರ ತಾವು ಸಹ ನಟನ ಸಮಾನ ವೇತನವನ್ನು ಪಡೆದಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಖ್ಯಾತ ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಕಮಲಾ ಹ್ಯಾರಿಸ್ ಜೊತೆ ಗರ್ಭಪಾತ ಕಾನೂನುಗಳ ಬಗ್ಗೆಯೂ ಮಾತನಾಡಿರುವ ಪ್ರಿಯಾಕಾ, ಇತ್ತೀಚೆಗಷ್ಟೇ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೇ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಿರುವ ಭಾರತದ ಸುಪ್ರೀಂ ಕೋರ್ಟ್ ತೀರ್ಪನ್ನು ಅವರು ಸ್ವಾಗತಿಸಿ, ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಶನದ ಫೋಟೋಗಳನ್ನು ಮತ್ತು ವೈಟ್ ಹೌಸ್ ನ ಚಿತ್ರಗಳನ್ನು ಅವರು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ.

    ಸದ್ಯ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ಸಿನಿಮಾ ರಂಗದಲ್ಲಿ ಸಕ್ರೀಯರಾಗಿಲ್ಲ. ಆದರೂ, ಅವರು ಟಿವಿ ಶೋನಿಂದಾಗಿ ಜಗತ್ತಿನ ಅನೇಕ ದಿಗ್ಗಜರ ಜೊತೆ ಒಡನಾಟ ಬೆಳೆಸಿದ್ದಾರೆ. ಪತಿ ನಿಕ್ ಜೋನಾಸ್ ಮತ್ತು ಮಗುವಿನ ಜೊತೆ ಕ್ವಾಲಿಟಿ ಟೈಮ್ ಅನ್ನು ಕಳೆಯುತ್ತಿದ್ದಾರೆ. ಮತ್ತೆ ಸಿನಿಮಾ ರಂಗಕ್ಕೆ ಬರುವ ಆಸೆಯನ್ನು ಪಿಗ್ಗಿ ವ್ಯಕ್ತ ಪಡಿಸಿದ್ದು, ಫರ್ಹಾನ್ ಅಖ್ತರ್ ನಟನೆಯ ಚಿತ್ರದ ಮೂಲಕ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಲಾಸ್ ಏಂಜಲೀಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಐಷಾರಾಮಿ ಮನೆ ಹೇಗಿದೆ ಗೊತ್ತಾ.?

    ಲಾಸ್ ಏಂಜಲೀಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಐಷಾರಾಮಿ ಮನೆ ಹೇಗಿದೆ ಗೊತ್ತಾ.?

    ಟಿ ಪ್ರಿಯಾಂಕಾ ಚೋಪ್ರಾ ಸದ್ಯ ಮಗಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅಮೆರಿಕಾದಲ್ಲಿ ಪತಿ ನಿಕ್ ಜೊತೆ ಪ್ರಿಯಾಂಕಾ ಸೆಟಲ್ ಆಗಿದ್ದಾರೆ. ಸದ್ಯ ತಮ್ಮ ಐಷರಾಮಿ ಮನೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಬಾಲಿವುಡ್‌ನ ಸಿನಿಮಾಗಳ ಮೂಲಕ ಮೋಡಿ ಮಾಡುತ್ತಾ, ಹಾಲಿವುಡ್‌ನಲ್ಲಿ ಮಿಂಚ್ತಿರುವ ಪ್ರಿಯಾಂಕಾ ಚೋಪ್ರಾ ತಮ್ಮ ವಿವಾಹದ ಬಳಿಕ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿ ಪ್ರಿಯಾಂಕಾ ದಂಪತಿ ಭವ್ಯವಾದ ಮನೆ ಖರೀದಿಸಿದ್ದಾರೆ. ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ಸಾರಾ ಶರೀಫ್ ಪ್ರಿಯಾಂಕಾ ಮನೆಗೆ ಭೇಟಿ ನೀಡಿದ್ದರು. ಇದನ್ನೂ ಓದಿ:ನಾನು ಅಂಬರೀಶ್ ಅಣ್ಣನ ಅಭಿಮಾನಿ, ಅವರ ಮಗನಿಗೆ ಸಿನಿಮಾ ಮಾಡುತ್ತಿರುವುದು ಹೆಮ್ಮೆ : ನಿರ್ದೇಶಕ ಮಹೇಶ್ ಕುಮಾರ್

     

    View this post on Instagram

     

    A post shared by SS (@iamsarahshareef)

    ಇತ್ತೀಚೆಗಷ್ಟೇ ಲಾಸ್ ಏಂಜಲೀಸ್‌ನಲ್ಲಿರುವ ಪ್ರಿಯಾಂಕಾ ಮನೆಗೆ ಸಾರಾ ಶರೀಫ್ ಭೇಟಿ ನೀಡಿ, ಸುಂದರ ಕ್ಷಣಗಳನ್ನ ಕಳೆದಿದ್ದಾರೆ. ಪ್ರಿಯಾಂಕಾ ಅವರ ಐಷರಾಮಿ ಮನೆಯ ಒಳ ಭಾಗದಲ್ಲಿ ನಿಂತು ನಟಿಯ ಜತೆ ಸಾರಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸುತ್ತಲು ಬಿಳಿ ಗೋಡೆ ಮಧ್ಯೆ ಬೃಹತ್ ಪೈಟಿಂಗ್ ಇಡಲಾಗಿದೆ. ಫೋಟೋಗಳನ್ನ ಗಾಜಿನ ಟೈಬಲ್ ಮೇಲೆ ಇಡಲಾಗಿದೆ. ಒಟ್ನಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಐಷಾರಾಮಿ ಮನೆ ನೋಡಿ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

    ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ, ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮಗಳ ಜತೆ ಚಿಲ್ ಮಾಡುತ್ತಿರುವ ಚೆಂದದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಹಿಂದಿ, ಹಾಲಿವುಡ್ ಸಿನಿಮಾಗಳಲ್ಲಿ ಮಿಂಚ್ತಿರುವ ಪ್ರಿಯಾಂಕಾ ಸಿನಿಮಾಗಳ ಜೊತೆ ತಮ್ಮ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಮುದ್ದು ಮಗಳ ಫೋಟೋವನ್ನ ಪ್ರಿಯಾಂಕಾ ಶೇರ್ ಮಾಡಿದ್ದಾರೆ. ಮಗಳ ಜೊತೆ ಖುಷಿಯಾಗಿ ಚಿಲ್ ಮಾಡುತ್ತಿರುವ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

     

    View this post on Instagram

     

    A post shared by Priyanka (@priyankachopra)

    ನಿಕ್ ಜತೆ ದಾಂಪತ್ಯ ಜೀವನವನ್ನ ಖುಷಿಯಾಗಿ ನಿಭಾಯಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಸದ್ಯ ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳಿಗೆ ಮಾಲ್ತಿ ಮೇರಿ ಎಂದು ಪ್ರಿಯಾಂಕಾ ದಂಪತಿ ಹೆಸರಿಟ್ಟಿದ್ದಾರೆ. ಸದ್ಯ ತಮ್ಮ ಹೊಸ ಫೋಟೋಶೂಟ್‌ ಮೂಲಕ ಪ್ರಿಯಾಂಕಾ ಸೌಂಡ್‌ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿ ನಿಕ್ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ

    ಪತಿ ನಿಕ್ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿ ನಿಕ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾರೆ. ಸದ್ಯ ಕಡಲ ಕಿನಾರೆಯಲ್ಲಿ ಕಳೆದ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ ಇದರ ಬೆನ್ನಲ್ಲೇ ಇತ್ತಿಚೆಗೆ ಸೋನಾ ಎನ್ನುವ ಹೊಸ ರೆಸ್ಟೋರೆಂಟ್ ಕೂಡ ಓಪನಿಂಗ್ ಮಾಡಿದ್ದಾರೆ. ಸಿನಿಮಾ ನಂತರ ಬಿಸಿನೆಸ್ ಕ್ಷೇತ್ರಕ್ಕೂ ಪತಿ ನಿಕ್ ಜತೆ ಪ್ರಿಯಾಂಕಾ ಹೆಜ್ಜೆ ಇಟ್ಟಿದ್ದಾರೆ. ಕೈತುಂಬಾ ಕೆಲಸಗಳ ಮಧ್ಯೆ ಈಗ ವಯಕ್ತಿಕ ಜೀವನಕ್ಕೆ ಟೈಮ್ ಕೊಟ್ಟು ಬೀಚ್‌ನಲ್ಲಿ ಪತಿ ಜೊತೆ ಏಂಜಾಯ್ ಮಾಡ್ತಿದ್ದಾರೆ. ಈ ಚೆಂದದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸಂಜನಾ ಗಲ್ರಾನಿ ಮಗು `ಅಲಾರಿಕ್’ ಹೆಸರಿನ ಅರ್ಥವೇನು ಗೊತ್ತಾ?

    View this post on Instagram

     

    A post shared by Priyanka (@priyankachopra)

    ಕೆಲ ತಿಂಗಳ ಹಿಂದೆ ಬಾಡಿಗೆ ತಾಯಿಯ ಮೂಲಕ ಮುದ್ದು ಮಗಳನ್ನ ಬರಮಾಡಿಕೊಂಡರು. ಈಗ ಮಗಳ ಆರೈಕೆ, ಸಿನಿಮಾ, ಬಿಸಿನೆಸ್‌ ಕ್ಷೇತ್ರ ಅಂತಾ ಪ್ರಿಯಾಂಕಾ ಚೋಪ್ರಾ ಬ್ಯುಸಿಯಾಗಿದ್ದಾರೆ. ಸದ್ಯ ಪತಿ ಜತೆಗಿನ ರೊಮ್ಯಾಂಟಿಕ್‌ ಲುಕ್‌ನಿಂದ ಸೌಂಡ್‌ ಮಾಡುತ್ತಿದ್ದಾರೆ.

    Live Tv

  • ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಮಿಂಚಿದ ಪ್ರಿಯಾಂಕ ಚೋಪ್ರಾ

    ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಮಿಂಚಿದ ಪ್ರಿಯಾಂಕ ಚೋಪ್ರಾ

    ಹಿಂದಿ ಚಿತ್ರರಂಗದ ಟಾಪ್ ನಟಿ ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್‌ನಲ್ಲೂ ಬ್ಯುಸಿಯಿರೋ ನಟಿ, ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಿರೋ ಬ್ಯೂಟಿ ಈಗ ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಕೊಂಚ ಬಿಡುವು ಮಾಡಿಕೊಂಡು ಫಿಲ್ಮಂಫೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಹಾಟ್ ಆಗಿ ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಪ್ರಿಯಾಂಕಾ ಮಿಂಚಿದ್ದಾರೆ.

    ಬಾಲಿವುಡ್‌ನಲ್ಲಿ ಬ್ಯೂಟಿ ಜತೆ ಪ್ರತಿಭೆಯಿರೋ ನಟಿ ಪ್ರಿಯಾಂಕ ಚೋಪ್ರಾ, ಬೇಡಿಕೆ ಇರೋವಾಗಲೇ ನಿಕ್ ಜೊನಸ್ ಅವರನ್ನು ಮದುವೆಯಾಗಿ ಖುಷಿಯಾಗಿ ಬಾಳುತ್ತಿದ್ದಾರೆ. ಮನೆಗೆ ಮುದ್ದು ಮಗಳ ಆಗಮನದಿಂದ ಪೋಷಣೆಯಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕ ಈಗ ತುಸು ಬಿಡುವು ಮಾಡಿಕೊಂಡು ಫಿಲ್ಮಂಫೇರ್‌ನಲ್ಲಿ ಭಾಗಿಯಾಗಿದ್ದಾರೆ. ಯಾವಾಗಲೂ ಯೂನಿಕ್ ಸ್ಟೈಲಿನಲ್ಲಿ ಕಾಣಿಸಿಕೊಳ್ಳುವ ಪ್ರಿಯಾಂಕ, ಈಗ ಸಮಾರಂಭದಲ್ಲಿ ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಡಿಫರೆಂಟ್ ಸ್ಟೈಲ್‌ನಿಂದ ಗಮನ ಸೆಳೆದಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

     

    View this post on Instagram

     

    A post shared by Priyanka (@priyankachopra)

    ಫಿಲ್ಮಂಫೇರ್‌ನಲ್ಲಿ ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಮಿರ ಮಿರ ಅಂತಾ ಪ್ರಿಯಾಂಕಾ ಚೋಪ್ರಾ ಮಿಂಚಿದ್ದಾರೆ. 39ರ ಹರೆಯದಲ್ಲೂ ಫಿಟ್‌ ಆಗಿ ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುವ ಪ್ರಿಯಾಂಕಾ ನಯಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಮನೆಗೆ ಕರೆತಂದಿದ್ದರು. ಆಸ್ಕರ್ ಸಮಯದಲ್ಲಿ ಪ್ರಿಯಾಂಕಾ ತನ್ನ ಮಗಳ ಬಗ್ಗೆ ಹೇಳಿಕೊಂಡಿದ್ದು ಬಿಟ್ಟರೇ ಬೇರೆ ಯಾವುದೇ ವಿಷಯ, ಫೋಟೋಗಳನ್ನು ಅವರು ಶೇರ್ ಮಾಡಿರಲಿಲ್ಲ. ಆದರೆ ಭಾನುವಾರ ತಾಯಂದಿರ ದಿನವಾದ ಹಿನ್ನೆಲೆ ಮೊದಲ ಬಾರಿಗೆ ತನ್ನ ಮುದ್ದು ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಮಗಳ ಫೋಟೋ ಶೇರ್ ಮಾಡಿದ ದಂಪತಿ ಮುದ್ದಾದ ಸಾಲು ಬರೆದು ಪೋಸ್ಟ್ ಮಾಡಿದ್ದಾರೆ.

    ನಿಕ್ ಜೋನಾಸ್ ಇನ್‌ಸ್ಟಾದಲ್ಲಿ ಮಗಳು ಮಾಲ್ಟಿ ಮೇರಿ ಮತ್ತು ಪತ್ನಿ ಪ್ರಿಯಾಂಕಾ ಚೋಪ್ರಾ ಫೋಟೋ ಶೇರ್ ಮಾಡಿ ವಿಶೇಷ ಸಾಲು ಬರೆದು ವಿಶ್ವತಾಯಂದಿರ ದಿನಕ್ಕೆ ಅರ್ಪಿಸಿದ್ದಾರೆ. ಇನ್‌ಸ್ಟಾದಲ್ಲಿ ಅವರು, ವಿಶ್ವದ ಅದ್ಭುತ ತಾಯಂದಿರಿಗೆ ಮತ್ತು ಎಲ್ಲರನ್ನು ಪ್ರೀತಿಯಿಂದ ಆರೈಕೆ ಮಾಡುವವರಿಗೆ ತಾಯಂದಿರ ದಿನದ ಶುಭಾಶಯಗಳು. ಆದರೆ ನನ್ನ ಅದ್ಭುತ ಪತ್ನಿ ಪ್ರಿಯಾಂಕಾ ಚೋಪ್ರಾ ಅವರ ಮೊದಲ ತಾಯಂದಿರ ದಿನವಾಗಿರುವುದರಿಂದ ಅವರಿಗೆ ವಿಶೇಷ ತಾಯಂದಿರ ದಿನದ ಶುಭಾಶಯ ಹೇಳುವ ಮುನ್ನ ಆಕೆಯ ಬಗ್ಗೆ ಸ್ವಲ್ಪ ಹೇಳಿಕೊಳ್ಳಬೇಕು. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್ 

     

    View this post on Instagram

     

    A post shared by Nick Jonas (@nickjonas)

    ಬೇಬ್, ನೀವು ನನಗೆ ಎಲ್ಲ ರೀತಿಯಲ್ಲೂ ಸ್ಫೂರ್ತಿ ನೀಡುತ್ತೀರಿ. ನೀವು ಈ ಹೊಸ ರೂಲ್ ತುಂಬಾ ಸುಲಭವಾಗಿ ನಿಭಾಯಿಸುತ್ತಿದ್ದೀರ. ನಿಮ್ಮೊಂದಿಗೆ ಈ ಪ್ರಯಾಣದಲ್ಲಿರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನೀವು ಈಗಾಗಲೇ ನಂಬಲಾಗದ ತಾಯಿಯಾಗಿದ್ದೀರಿ. ತಾಯಂದಿರ ದಿನದ ಶುಭಾಶಯಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರಿಯಾಂಕಾ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

    ಪ್ರಿಯಾಂಕ ಸಹ ಇನ್ಸ್ಟಾದಲ್ಲಿ ಫೋಟೋ ಶೇರ್ ಮಾಡಿದ್ದು, ಈ ತಾಯಂದಿರ ದಿನದಂದು ನಾವು ಕಳೆದ ಕೆಲವು ತಿಂಗಳುಗಳಿಂದ ಅನುಭವಿಸುತ್ತಿರುವ ಪ್ರಯಾಣವನ್ನು ತಿಳಿಸಲು ಮಾತುಗಳೇ ಬರುತ್ತಿಲ್ಲ. ಈ ವೇಳೆ ನಮಗೆ ಅನೇಕರು ಸಹಾಯ ಮಾಡಿದ್ದಾರೆ. ನಮ್ಮ ಪುಟ್ಟ ಹುಡುಗಿ ಅಂತಿಮವಾಗಿ ಮನೆಗೆ ಬಂದಿದ್ದಾಳೆ. ಇದರಿಂದ ನಮ್ಮ ಕುಟುಂಬದ ಪ್ರಯಾಣವು ವಿಶಿಷ್ಟವಾಗಿದೆ. ಹಲವು ತಿಂಗಳಿಂದ ನಾವು ಅನುಭವಿಸುತ್ತಿರುವ ಪ್ರತಿ ಕ್ಷಣವೂ ಅಮೂಲ್ಯ ಮತ್ತು ಪರಿಪೂರ್ಣವಾಗಿದೆ. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ ಫೋಟೋ ಶೇರ್ ಮಾಡಿದ ಸಿಂಡ್ರೆಲಾ 

    ನಮ್ಮ ಪುಟ್ಟ ಹುಡುಗಿ ಕೊನೆಗೂ ಮನೆಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪ್ರತಿ ಹೆಜ್ಜೆಯಲ್ಲೂ ನಿಸ್ವಾರ್ಥವಾಗಿದ್ದ ರಾಡಿ ಚಿಲ್ಡ್ರನ್ಸ್ ಲಾ ಜೊಲ್ಲಾ ಮತ್ತು ಲಾಸ್ ಏಂಜಲೀಸ್‌ನ ಸೀಡರ್ ಸಿನಾಯ್ನಲ್ಲಿರುವ ಪ್ರತಿಯೊಬ್ಬ ವೈದ್ಯರು, ನರ್ಸ್ ಮತ್ತು ತಜ್ಞರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ನಮ್ಮ ಮುಂದಿನ ಅಧ್ಯಾಯ ಈಗ ಪ್ರಾರಂಭವಾಗುತ್ತದೆ. ಮಮ್ಮಿ ಮತ್ತು ಡ್ಯಾಡಿ ನಿನ್ನನ್ನು ಪ್ರೀತಿಸುತ್ತಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ದಂಪತಿ ಪೋಸ್ಟ್ ನೋಡಿದ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ. ಕ್ಯೂಟ್ ಫ್ಯಾಮಿಲಿ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.

  • ಸ್ವಿಮಿಂಗ್ ಪೂಲ್‌ನಲ್ಲಿ ಕೂತು ಉರಿವ ಸೂರ್ಯನಿಗೆ ಚಾಲೆಂಜ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಸ್ವಿಮಿಂಗ್ ಪೂಲ್‌ನಲ್ಲಿ ಕೂತು ಉರಿವ ಸೂರ್ಯನಿಗೆ ಚಾಲೆಂಜ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಗ್ಲೋಬಲ್ ಸ್ಟಾರ್ ನ್ಯೂ ಮಮ್ಮಿ ಪ್ರಿಯಾಂಕಾ ಚೋಪ್ರಾ ಬ್ಯುಸಿ ನಟಿಯರಲ್ಲಿ ಒಬ್ಬರು. ಅವರು ಇತ್ತೀಚೆಗೆ ಬಾಡಿಗೆ ತಾಯಿಯಿಂದ ತಾಯ್ತನದ ಸುಖವನ್ನು ಅನುಭವಿಸುತ್ತಿದ್ದು, ಇಲ್ಲಿವರೆಗೂ ತಮ್ಮ ಮಗಳ ಫೋಟೋ, ವೀಡಿಯೋ ಯಾವುದನ್ನು ಶೇರ್ ಮಾಡದೆ ಅಭಿಮಾನಿಗಳನ್ನು ಕಾಯಿಸುತ್ತಿದ್ದಾರೆ. ಮನೆಗೆ ಮಗು ಬಂದ ಬಳಿಕ ಈ ನಟಿ ಬಿ’ಟೌನ್ ಮತ್ತು ಹಾಲಿವುಡ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ತುಂಬಾ ಕಡಿಮೆಯಾಗಿದೆ. ಈಗ ಈ ನಟಿ ಪೂಲ್‌ನಲ್ಲಿ ಬಿಕಿನಿ ತೊಟ್ಟು ಕ್ಯಾಮೆರಾ ಪೋಸ್ ನೀಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾನಲ್ಲಿ ಶೇರ್ ಮಾಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಅವರು ಇತ್ತೀಚೆಗೆ ತಮ್ಮ ‘ಲಾ’ ಮನೆಯಲ್ಲಿ ಸಮಯ ಕಳೆಯುತ್ತಿದ್ದು, ಈ ವೇಳೆ ಅವರು ಜನರು ಬೆರಗುಗೊಳಿಸುವಂತಹ ಫೊಟೋ ಶೇರ್ ಮಾಡಿದ್ದು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪ್ರಿಯಾಂಕಾ ನ್ಯೂ ಫೋಟೋ ಶೇರ್ ಮಾಡಿದ್ದು, ತಮ್ಮ ‘ಲಾ’ ಮನೆಯಲ್ಲಿರುವ ಪೂಲ್‌ನಲ್ಲಿ ಸಮಯ ಕಳೆಯುತ್ತಿರುವುದನ್ನು ಫೋಟೋದಲ್ಲಿ ನೋಡಬಹುದು. ಇದನ್ನೂ ಓದಿ: ನಿಮಗೆ ಹಿಂದಿ ಬರದಿದ್ದರೆ ದೇಶ ಬಿಟ್ಟು ತೊಲಗಿ: ಯುಪಿ ಸಚಿವ

     

    View this post on Instagram

     

    A post shared by Priyanka (@priyankachopra)

    ಇನ್ಸ್ಟಾಗ್ರಾಮ್‌ನಲ್ಲಿ ವಿಶೇಷ ಫೋಟೋವನ್ನು ಶೇರ್ ಮಾಡಿರುವ ಈ ನಟಿ ಎರಡು ನ್ಯೂ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಪ್ರಿಯಾಂಕ, ‘ಇನ್ಸ್ಟಾಗ್ರಾಮ್ ವ್ಸ್ ರಿಯಾಲಿಟಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಪೂಲ್ನಲ್ಲಿ ಪ್ರಿಯಾಂಕಾ ಬಿಕಿನಿ ಹಾಕಿಕೊಂಡು ಕೂಲ್ ಆಗಿ ಸೂರ್ಯನಿಗೆ ಮುಖ ತೋರಿಸಿದ್ದಾರೆ. ಈ ವೇಳೆ ಫೋಟೋವನ್ನು ಕ್ಲಿಕ್ ಮಾಡಲಾಗಿದೆ. ಕ್ಯೂಟ್ ಅಂಡ್ ಹಾಟ್ ಆಗಿ ಕಾಣುತ್ತಿರುವ ಪ್ರಿಯಾಂಕಾರನ್ನು ನೋಡಿದ ಜನರು ಫಿದಾ ಆಗಿದ್ದಾರೆ. ಒಂದು ಮಗುವಾಗಿದ್ರೂ ಪ್ರಿಯಾಂಕ ಸೂಪರ್ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.

    ಬಿಕಿನಿಯಲ್ಲಿ ಕೂಲ್ ಆಗಿ ಕುಳಿತಿರುವ ಪ್ರಿಯಾಂಕಾ ಕೂದಲನ್ನು ಕಟ್ಟಿಕೊಂಡಿದ್ದು, ಸೂರ್ಯನಿಗೆ ಮುಖ ತೋರಿಸುತ್ತಿದ್ದಾರೆ. ಪ್ರಿಯಾಂಕಾ ಫ್ಯಾಮಿಲಿಗೆ ಫುಲ್ ಸಮಯ ಕೊಡುತ್ತಿದ್ದು, ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು 

  • ಪ್ರಿಯಾಂಕಾ ಚೋಪ್ರಾ ಮಗಳಿಗೆ ನಾಮಕರಣ: ಹೆಸರೇನು ಗೊತ್ತಾ?

    ಪ್ರಿಯಾಂಕಾ ಚೋಪ್ರಾ ಮಗಳಿಗೆ ನಾಮಕರಣ: ಹೆಸರೇನು ಗೊತ್ತಾ?

    ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯ ನಂತರವೂ ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಾ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಮೊದಲ ಮಗುವನ್ನ ಬರಮಾಡಿಕೊಂಡ ಸಂತಸದ ಸುದ್ದಿಯನ್ನ ಫ್ಯಾನ್ಸ್‌ಗೆ ತಿಳಿಸಿದ್ದರು. ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಪಡೆದಿರುವ ನಟಿ ಪ್ರಿಯಾಂಕ ಈಗ ಮಗುವಿಗೆ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

    ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಕೆಲ ತಿಂಗಳ ಹಿಂದೆ ಮೊದಲ ಮಗುವನ್ನ ಬರಮಾಡಿಕೊಂಡಿದ್ದರು. ಈವರೆಗೂ ತಮ್ಮ ಮಗುವಿನ ಫೋಟೋ ತೋರಿಸದೇ ಖಾಸಗಿತನ ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ತಮ್ಮ ಮಗಳಿಗೆ ಮಾಲತಿ ಮೇರಿ ಚೋಪ್ರಾ ಜೋನಸ್ ಅಂತಾ ಹೆಸರು ಇಡಲಾಗಿದೆ ಎಂದು ತಿಳಿದು ಬಂದಿದೆ.

    ಹಾಲಿವುಡ್ ಸ್ಟಾರ್ ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ನಟಿ ಪ್ರಿಯಾಂಕಾ ಅಮೆರಿಕಾದಲ್ಲೇ ನೆಲೆಸಿದ್ದಾರೆ. ಹೊರದೇಶದ ಸಂಸ್ಕೃತಿಯ ನಡುವೆ ಜೀವನ ನಡೆಸುತ್ತಿದ್ದರು. ತಮ್ಮ ತಾಯ್ನಾಡಿನ ಮೇಲೆ ಪ್ರೀತಿ, ಗೌರವ ಹೊಂದಿದ್ದಾರೆ. ಇದೀಗ ಪ್ರಿಯಾಂಕಾ ಅವರು ತಮ್ಮ ಮುದ್ದಾದ ಮಗಳಿಗೆ ಮಾಲತಿ ಎಂದು ಸಂಸ್ಕೃತ ಮೂಲದ ಹೆಸರನ್ನ ನಾಮಕರಣ ಮಾಡಿರುವುದು ವಿಶೇಷ. ಇದನ್ನೂ ಓದಿ:ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

    ಒಟ್ನಲ್ಲಿ ಸಿನಿಮಾಗಳ ಜತೆಗೆ ಸಂಸಾರಿಕ ಜೀವನವನ್ನ ಬ್ಯಾಲೆನ್ಸ್ ಮಾಡುತ್ತಾ ತಮ್ಮ ಚಿತ್ರಗಳ ಮೂಲಕ ಸಿನಿಪ್ರಿಯರನ್ನ ರಂಜಿಸುತ್ತಿರೋ ನಟಿಯ ಚಿತ್ರಕ್ಕಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • ಪ್ರಿ ಆಸ್ಕರ್ ಪಾರ್ಟಿಯಲ್ಲಿ ಮೊದಲಬಾರಿ ಮಗಳ ಬಗ್ಗೆ ಮಾತನಾಡಿದ ದೇಸಿ ಗರ್ಲ್ ಪಿಗ್ಗಿ

    ಪ್ರಿ ಆಸ್ಕರ್ ಪಾರ್ಟಿಯಲ್ಲಿ ಮೊದಲಬಾರಿ ಮಗಳ ಬಗ್ಗೆ ಮಾತನಾಡಿದ ದೇಸಿ ಗರ್ಲ್ ಪಿಗ್ಗಿ

    ಬಾಲಿವುಡ್ ಮತ್ತು ಹಾಲಿವುಡ್ನಲ್ಲಿ ಮಿಂಚುತ್ತಿರುವ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ನಟನೆ ಜೊತೆಗೆ ಸಿನಿಮಾ ನಿರ್ಮಾಪಕಿ, ಉದ್ಯಮಿಯಾಗಿ ಹೆಚ್ಚು ಹೆಸರು ಮಾಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರವೂ ತಮ್ಮ ವೃತ್ತಿ ಜೀವನದ ಜೊತೆ ವೈಯಕ್ತಿಕ ಜೀವನವನ್ನೂ ಪ್ರಿಯಾಂಕಾ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಇತ್ತೀಚೆಗೆ ಬಾಡಿಗೆ ತಾಯಿಯಿಂದ ತಾಯ್ತನ ಆನಂದಿಸುತ್ತಿರುವ ಪ್ರಿಯಾಂಕಾ ಆಸ್ಕರ್ ಪ್ರೀ ಪಾರ್ಟಿಯಲ್ಲಿ ಮೊದಲ ಬಾರಿಗೆ ತನ್ನ ಮಗಳ ಬಗ್ಗೆ ಮಾತನಾಡಿದ್ದಾರೆ.

    ಆಸ್ಕರ್ 2022 ಮಾರ್ಚ್ 28 ಪ್ರಾರಂಭವಾಗಲಿದೆ. ಈ ಮೆಗಾ ಸ್ಟಾರ್-ಸ್ಟಡ್ಡ್ ಈವೆಂಟ್‌ಗೆ ಮುಂಚಿತವಾಗಿ, ಪ್ರಿ-ಆಸ್ಕರ್ ಪಾರ್ಟಿ ಬುಧವಾರ ಬೆವರ್ಲಿ ಹಿಲ್ಸ್ನಲ್ಲಿ ನಡೆಯಿತು. ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಈವೆಂಟ್‌ನಲ್ಲಿ ಹೋಸ್ಟ್ ಮಾಡುವವರಲ್ಲಿ ಒಬ್ಬರಾಗಿದ್ದರು. ಈ ವೇಳೆಯೂ ಅವರು ತಮ್ಮ ದೇಸಿತನವನ್ನು ಬಿಟ್ಟುಕೊಡದೆ ಸೀರೆಯುಟ್ಟು ಕಾರ್ಯಕ್ರಮವನ್ನು ಪ್ರಾರಂಭ ಮಾಡಿದರು. ಕಪ್ಪು ಬಣ್ಣದ ಸೀರೆಯುಟ್ಟ ಪ್ರಿಯಾಂಕಾ ಕಂಗೊಳಿಸುತ್ತಿದ್ದರು. ಇದನ್ನೂ ಓದಿ:  ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ 

    ಈ ಪಾರ್ಟಿಯಲ್ಲಿ ಪ್ರಿಯಾಂಕಾ ತನ್ನ ಸಿನಿ ಪ್ರಯಾಣ, ನಿಕ್ ಜೋನಾಸ್ ಮತ್ತು ಹಾಲಿವುಡ್‌ ಸಿನಿಮಾಗಳ ಬಗ್ಗೆ ಮಾತನಾಡಿದರು. ಈ ವೇಳೆ ಪ್ರಿಯಾಂಕಾ ತಮ್ಮ ತಾಯಿಯ ಕರ್ತವ್ಯಗಳ ಬಗ್ಗೆಯೂ ಮಾತನಾಡಿದ್ದು ಎಲ್ಲರ ಗಮನ ಸೆಳೆಯಿತು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

     

    View this post on Instagram

     

    A post shared by unfinished (@mrs_pcj)

    ತನ್ನ ಭಾಷಣದಲ್ಲಿ, ಚೋಪ್ರಾ ಅವರು ಮತ್ತು ನಿಕ್ ಅವರು ಈಗ ಎಲ್ಲಿಯೂ ಹೊರಗೆ ಹೋಗದೇ ತಮ್ಮ ಮಗುವಿನ ಜೊತೆ ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ಹಾಸ್ಯ ಮಾಡುತ್ತ ಹೇಳಿದರು. ಇತ್ತೀಚೆಗೆ ನಾವು ಮನೆಬಿಟ್ಟು ಎಲ್ಲಿಯೂ ಹೋಗಿಲ್ಲ. ಇದನ್ನು ಹೇಳಲು ಇಂದು ರಾತ್ರಿ ಇಲ್ಲಿಗೆ ಬರಬೇಕಾಯಿತು. ನಿಮ್ಮೆಲ್ಲರೊಂದಿಗೆ ಊಟ ಮಾಡಿ ಎಲ್ಲರನ್ನು ಪ್ರೋತ್ಸಾಹಿಸಲು ನಾನು ತುಂಬಾ ಹೆಮ್ಮೆಪಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಇನ್‌ಸ್ಟಾದಿಂದ ನಾಗಚೈತನ್ಯನನ್ನು ಅನ್‍ಫಾಲೋ ಮಾಡಿದ ಸಮಂತಾ

  • ಕಾದಂಬರಿ ಆಧರಿತ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ

    ಕಾದಂಬರಿ ಆಧರಿತ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ

    ಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್, ಹಾಲಿವುಡ್‍ನಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಕಾದಂಬರಿ ಆಧರಿತ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಸಿಕ್ರೇಟ್ ಡಾಟರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶಿಲ್ಪ ಸೋಮಯ್ಯ ಗೌಡ ಬರೆದಿರುವ ಸೀಕ್ರೆಟ್ ಡಾಟರ್ ಕಾದಂಬರಿಯಾಧರಿತ ಸಿನಿಮಾ ಇದಾಗಿದೆ. ಈ ಚಿತ್ರವನ್ನು ಆಂಟೋನಿ ಚೆನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಕಾದಂಬರಿಯಲ್ಲಿ ಬರುವ ಪ್ರಮುಖ ಪಾತ್ರದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಪಂಚರ್ ಹಾಕಿಲ್ಲ ಅಂದ್ರೆ ಗಾಡಿ ಓಡ್ಸೋದಾದ್ರೂ ಹೇಗೆ : ಡಿಕೆಶಿ ಪ್ರಶ್ನೆ

    ಈ ಸಿನಿಮಾ ಭಾರತದ ಹಿನ್ನೆಲೆಯಕಲ್ಲಿ ಸಾಗುವ ಕಥೆಯಾಗಿದೆ. ಎರಡು ಪ್ರಮುಖ ಮಹಿಳಾ ಪಾತ್ರಗಳಾಗಿದ್ದು, ಕಥೆ ಅಮೆರಿಕಾ ಮತ್ತು ಭಾರತದಲ್ಲಿ ಸಾಗುತ್ತದೆ ಎನ್ನಲಾಗಿದೆ. ಪ್ರಿಯಾಂಕಾ ಅವರು ಈ ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲದೇ, ಪರ್ಪಲ್ ಪೆಬ್ಬಲ್ ಪಿಕ್ಚರ್ಸ್ ಜೊತೆ ಸೇರಿ ನಿರ್ಮಾಣವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಪ್ರೀ ಪ್ರೊಡೆಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಚಿತ್ರಿಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 6.75 ಲಕ್ಷಕ್ಕೆ ಹರಾಜಾಯಿತು ಸಂಗೀತ ಮಾಂತ್ರಿಕ ರೆಹಮಾನ್ ಡ್ರೆಸ್ಸು

    ಇಂದು ಐತಿಹಾಸಿಕ, ಪೌರಾಣಿಕ, ಕಾದಂಬರಿ ಆಧರಿತ ಸಿನಿಮಾಗಳು ಹೆಚ್ಚಾಗಿ ಕ್ಲಿಕ್ ಆಗುತ್ತವೆ ಮತ್ತು ಅಭಿಮಾನಿಗಳಿಗೆ ಹತ್ತಿರವಾಗುತ್ತವೆ. ಹೀಗಾಗಿ ಪ್ರಿಯಾಂಕಾ ಚೋಪ್ರಾ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸಿನಿಮಾ ತೆರೆ ಮೇಳೆ ಹೇಗೆ ಮೂಡಿ ಬರಲಿದೆ ಎನ್ನುವುದನ್ನು ಅಭಿಮಾನಿಗಳು ಕಾದು ನೋಡಬೇಕಾಗಿದೆ.