Tag: ಪ್ರಿಯಾಂಕಾ ಚೋಪ್ರಾ

  • ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್

    ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್

    ಬಾಲಿವುಡ್ (Bollywood) ನಟಿ ಸನ್ನಿ ಲಿಯೋನ್ (Sunny Leone) ಅವರು ಸಿನಿಮಾಗಳಿಗಷ್ಟೇ ಸೀಮಿತರಲ್ಲ ಸಮಾಜಮುಖಿ ಕಾರ್ಯಗಳ ಮೂಲಕ ಕೂಡ ಗುರುತಿಸಿಕೊಂಡಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ ಭೀಕರ ಭೂಕಂಪ (Earthquake) ಸಂಭವಿಸಿದ್ದು, ಇದೀಗ ನೆರವಿಗೆ ಸನ್ನಿ ಲಿಯೋನ್ ನಿಂತಿದ್ದಾರೆ. ಜೊತೆಗೆ ಸಂಕಷ್ಟದಲ್ಲಿರುವವರಿಗೆ ಸಹಾಯಕ್ಕೆ ನಿಲ್ಲಿ ಎಂದು ನಟಿ ಮನವಿ ಮಾಡಿದ್ದಾರೆ.

    ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್

    ಇತ್ತೀಚಿಗೆ ಟರ್ಕಿ ಮತ್ತು ಸಿರಿಯಾದಲ್ಲಿ (Turkey- Syria) ಭೀಕರ ಭೂಕಂಪ ಸಂಭವಿಸಿದೆ. ಸಾವು- ನೋವಿನ ಮಧ್ಯೆ ಜನರು ಹೋರಾಡುತ್ತಿದ್ದಾರೆ. ಫೆ.6ರಂದು 7.8ರಷ್ಟು ತೀವ್ರತೆಯ ಭೂಕಂಪ ಅಲ್ಲಿ ಸಂಭವಿಸಿತ್ತು. ಸಾವಿನ ಸಂಖ್ಯೆ 40000 ಸಾವಿರ ದಾಟಿದೆ. ಇಂದಿಗೂ ಅವಶೇಷಗಳಡಿ ಬದುಕುಳಿದವರ ರಕ್ಷಣೆ ಮಾಡಲಾಗತ್ತಿದೆ. ಇಂಥದ್ದೊಂದು ಪ್ರಬಲ ಭೂಕಂಪಕ್ಕೆ ತುತ್ತಾಗಿರುವ ಟರ್ಕಿ ಮತ್ತು ಸಿರಿಯಾ ದೇಶಗಳು ಮತ್ತೆ ಚೇತರಿಸಿಕೊಳ್ಳಲು ಇನ್ನೂ ಸಾಕಷ್ಟು ಸಮಯ ಬೇಕಾಗಿದೆ. ಇಂತಹ ಸಂಕಷ್ಟದ ವೇಳೆಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ದಂಪತಿ ಕೂಡ ಟರ್ಕಿ ಮತ್ತು ಸಿರಿಯಾಕ್ಕೆ ನೆರವು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ:ʻಮಾರ್ಟಿನ್‌ʼ ಹೀರೋ ಧ್ರುವ ಸರ್ಜಾ ಮನೆ ಮುಂದೆ ಜನ ಜಾತ್ರೆ

    ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಳಿಕ ಸನ್ನಿ ಲಿಯೋನ್ , ಸಿರಿಯಾ ಮತ್ತು ಟರ್ಕಿ ಜನರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಯಾವುದಾರೂ ರೂಪದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ನಿಮ್ಮ ನೆರವಿನ ಅವಶ್ಯಕತೆ ಅವರಿಗಿದೆ ಎಂದು ನಟಿ ತಿಳಿಸಿದ್ದಾರೆ. ಈಗ ಸನ್ನಿ ಲಿಯೋನ್ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊನೆಗೂ ಮಗಳ ಮುಖ ರಿವೀಲ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಕೊನೆಗೂ ಮಗಳ ಮುಖ ರಿವೀಲ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್‌ನಲ್ಲಿ (Hollywood) ಸೆಟೆಲ್ ಆಗಿದ್ದಾರೆ. ಜೊತೆಗೆ ಮುದ್ದು ಮಗಳ ಆರೈಕೆಯಲ್ಲಿ ಕೂಡ ನಟಿ ಬ್ಯುಸಿಯಾಗಿದ್ದಾರೆ. ಈಗ ಮೊದಲ ಬಾರಿಗೆ ಮುದ್ದು ಮಗಳು ಮಾಲ್ತಿ ಮುಖವನ್ನ ರಿವೀಲ್ ಮಾಡಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ‌ ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್

    ಹಿಂದಿ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ನಟಿ ಪ್ರಿಯಾಂಕಾ, ನಿಕ್ (Nick Jonas) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಸಂಸಾರ, ಮಗಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. ಇನ್ನೂ ಕ್ಯಾಮೆರಾ ಕಣ್ಣಿಂದ ಮಗಳು ಮಾಲ್ತಿ ಮುಖವನ್ನು ಇದುವರೆಗೂ ಬಹಿರಂಪಡಿಸಿರಲಿಲ್ಲ.

     

    View this post on Instagram

     

    A post shared by Priyanka (@priyankachopra)

    ಹಾಲಿವುಡ್ `ವಾಕ್ ಆಫ್ ಫೇಮ್ ಸ್ಟಾರ್’ ಕಾರ್ಯಕ್ರಮದಲ್ಲಿ ಪತಿ ನಿಕ್ ಜೋನಾಸ್ ಮತ್ತು ಸಹೋದರರ ಜೊತೆ ಪಿಗ್ಗಿ ರೆಡ್ ಕಾರ್ಪೆಟ್ ವಾಕ್ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಮೊದಲ ಸಾಲಿನಲ್ಲಿ ಕಾಣಿಸಿಕೊಂಡಿದ್ದು ಮಡಿಲಿನಲ್ಲಿ ಮಗಳಿದ್ದಳು. ಕ್ರೀಮ್ ಬಣ್ಣದ ಔಟ್ ಫಿಟ್‌ಗೆ ಮ್ಯಾಚ್ ಆಗುವ ಬಿಳಿ ಬಣ್ಣದ ಹೇರ್‌ಬ್ಯಾಂಡ್‌ನಲ್ಲಿ ಮಾಲ್ತಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಸಣ್ಣ ಕಿವಿ ಓಲೆ ನೆಟ್ಟಿಗರ ಗಮನ ಸೆಳೆದಿದೆ.

    ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಪ್ರಿಯಾಂಕಾ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಗಳ ಮುಖವನ್ನು ಸ್ಪಷ್ಟವಾಗಿ ರಿವೀಲ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

    ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್‌ನಲ್ಲಿ (Hollywood) ಬ್ಯುಸಿಯಾಗಿದ್ದಾರೆ. ಜೊತೆಗೆ ಮುದ್ದು ಮಗಳ ಆರೈಕೆಯತ್ತ ಕೂಡ ಗಮನ ಕೊಡುತ್ತಿದ್ದಾರೆ. ಇನ್ನೂ ಪ್ರಿಯಾಂಕ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿರುವುದಕ್ಕೆ ಸಾಕಷ್ಟು ಬಾರಿ ಪರ ವಿರೋಧ ಚರ್ಚೆಯಾಗುತ್ತಿತ್ತು. ಈಗ ಈ ಬಗ್ಗೆ ಸ್ವತಃ ನಟಿಯೇ ಮೌನ ಮುರಿದಿದ್ದಾರೆ. ಇದನ್ನೂ ಓದಿ: ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ

    ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಬರಮಾಡಿಕೊಂಡಿದ್ದ ನಟಿ ಪ್ರಿಯಾಂಕ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದ್ದರು. ಹಾಲಿವುಡ್‌ನಲ್ಲಿ ನಟಿಗೆ ಭಾರಿ ಬೇಡಿಕೆಯಿದೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡಲು ಶುರುವಾಗಿತ್ತು. ಪ್ರಿಯಾಂಕಾಗೆ ವಯಸ್ಸಾಗಿದೆ ಎಂದು ಹಲವು ಟೀಕೆಗಳನ್ನು ನಟಿಯ ವಿರುದ್ಧ ಮಾಡಲಾಗಿತ್ತು. ಈಗ ಈ ಎಲ್ಲಾ ವದಂತಿಗಳಿಗೂ ಪ್ರಿಯಾಂಕಾ ಚೋಪ್ರಾ ಉತ್ತರ ನೀಡಿದ್ದಾರೆ.

    ಈ ಮಗು ನಿಗದಿತ ಸಮಯಕ್ಕಿಂತ ಮೂರು ತಿಂಗಳು ಮೊದಲೇ ಜನಿಸಿತ್ತು ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಇದನ್ನು ನಟಿ ಒಪ್ಪಿಕೊಂಡಿದ್ದಾರೆ. ಮಾಲ್ತಿ ಜನಿಸುವಾಗ ನಾನು ಆಪರೇಷನ್ ರೂಮ್‌ನಲ್ಲಿದ್ದೆ. ಅವಳು ತುಂಬಾನೇ ಚಿಕ್ಕವಳಾಗಿದ್ದಳು. ನನ್ನ ಕೈಗಿಂತ ಚಿಕ್ಕವಳಿದ್ದಳು. ಮನೆಗೆ ಕರೆತರುವುದಕ್ಕೂ ಮುನ್ನ ಅವಳನ್ನು ನಾವು ಆಸ್ಪತ್ರೆಯಲ್ಲಿ ನೋಡಿಕೊಂಡಿದ್ದೇವೆ. ನಿತ್ಯ ನಾವು ಆಸ್ಪತ್ರೆಗೆ ತೆರಳುತ್ತಿದ್ದೆವು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

    ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆಗೆ ನಟಿ ಉತ್ತರಿಸಿದ್ದಾರೆ. ನನಗೆ ನನ್ನದೇ ಆದ ಆರೋಗ್ಯ ಸಮಸ್ಯೆಗಳು (Health Issue) ಇದೆ. ಈ ಮೂಲಕ ಜನರ ಟೀಕೆಗಳಿಗೆ ನಟಿ ತೆರೆ ಎಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ರಿಸ್‌ಮಸ್ ಆಚರಣೆಗಾಗಿ ಮಗಳ ಜೊತೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚೋಪ್ರಾ

    ಕ್ರಿಸ್‌ಮಸ್ ಆಚರಣೆಗಾಗಿ ಮಗಳ ಜೊತೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ಬ್ಯೂಟಿ (Bollywood) ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಹಾಲಿವುಡ್ ಲೆವೆಲ್‌ನಲ್ಲಿ ಮಿಂಚ್ತಿರುವ ಮಹಾನ್ ನಟಿ, ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಯ ಸಿನಿಮಾದಲ್ಲೂ ನಟಿ ಸಕ್ರಿಯರಾಗಿದ್ದಾರೆ. ಸದ್ಯ ಕ್ರಿಸ್‌ಮಸ್ ಹಬ್ಬ ಆಚರಿಸಲು ಮಗಳ ಜೊತೆ ವಿದೇಶಕ್ಕೆ ಪ್ರಿಯಾಂಕಾ ಹಾರಿದ್ದಾರೆ.

    ಹಾಲಿವುಡ್ (Hollywood) ಸ್ಟಾರ್ ಗಾಯಕ ನಿಕ್ ಜೊತೆ ವೈವಾಹಿಕ ಜೀವನಕದಲ್ಲಿ ನಟಿ ಪ್ರಿಯಾಂಕಾ ಖುಷಿಯಾಗಿದ್ದಾರೆ. ಸಂಸಾರ, ಮಗಳ ಆರೈಕೆಯ ನಡುವೆ ಸಿನಿಮಾಗಳಲ್ಲಿ ಪ್ರಿಯಾಂಕಾ ಮಿಂಚ್ತಿದ್ದಾರೆ. ಇನ್ನೂ ಡಿ.25ಕ್ಕೆ ಕ್ರಿಸ್‌ಮಸ್ ಹಬ್ಬ ಹತ್ತಿರ ಬರುತ್ತಿದ್ದಂತೆ, ಹಬ್ಬದ ಆಚರಣೆಯ ತಯಾರಿ ಕೂಡ ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ. ಕ್ರಿಸ್‌ಮಸ್ (Chirstmas) ಸೆಲೆಬ್ರೇಟ್ ಮಾಡಲು ವಿಮಾನದಲ್ಲಿ ಮುದ್ದು ಮಗಳ ಜೊತೆ ಪ್ರಿಯಾಂಕಾ ಪ್ರಯಾಣ ಬೆಳೆಸಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಮಗ ರೂಪಿಗಾಗಿ, ಮಗುವಿನಂತೆ ಗಳಗಳನೇ ಅತ್ತ ಆರ್ಯವರ್ಧನ್‌ ಗುರೂಜಿ

    View this post on Instagram

     

    A post shared by Priyanka (@priyankachopra)

    ವಿಮಾನದಲ್ಲಿ ಕುಳಿತಿರುವ ತಮ್ಮ ಫೋಟೋಗೆ `ನಾವು ಹೋಗುತ್ತಿದ್ದೇವೆ’ ಎಂದು ಅಡಿಬರಹ ನೀಡಿ ಪ್ರಿಯಾಂಕಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ತಾವು ಎಲ್ಲಿಗೆ ಟ್ರಾವೆಲ್ ಮಾಡ್ತಿದ್ದೇವೆ ಎಂದು ಮಾತ್ರ ಹೇಳಿಲ್ಲ. ಒಟ್ನಲ್ಲಿ ಈ ಜೋಡಿಗೆ, ಕ್ರಿಸ್‌ಮಸ್‌ಗೆ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

    ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ನಟಿ(Bollywood) ಪ್ರಿಯಾಂಕಾ ಚೋಪ್ರಾ ತಾಯ್ತನದ ಖುಷಿಯಲ್ಲಿದ್ದಾರೆ. ಸಿನಿಮಾಗಳ ಜೊತೆಗೆ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಹಿಂದಿ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra), ಮದುವೆ, ಮಗಳು, ಸಂಸಾರ ಅಂತಾ ಬ್ಯುಸಿಯಾಗಿದ್ದಾರೆ. ಹಾಲಿವುಡ್(Hollywood) ಚಿತ್ರಗಳನ್ನ ಮಾಡ್ತಾ, ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ. ಇತ್ತೀಚೆಗಷ್ಟೇ ಭಾರತಕ್ಕೆ ಪಿಗ್ಗಿ ಬಂದಿದ್ದರು. ಕೆಲವೇ ದಿನಗಳಿದ್ದು, ಪತಿಯ ಮನೆ ವಿದೇಶಕ್ಕೆ ಹಾರಿದ್ದರು. ಇದೀಗ ಮುದ್ದು ಮಗಳ ಫೋಟೋ ಶೇರ್ ಮಾಡುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

    ಮುದ್ದು ಮಗಳು ನಿದ್ದೆ ಮಾಡಿರುವ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಇದುವೆರೆಗೂ ಮಗಳ ಮುಖ ತೋರಿಸದೇ ನಟಿ ಫೋಟೋ ಹಾಕುತ್ತಿದ್ದರು. ಆದರೆ ಇದೀಗ ಪ್ರಿಯಾಂಕಾ ಮಗಳ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾವು ನಟರಿಗೆ ಹೆಚ್ಚು ಕ್ರೆಡಿಟ್ ನೀಡುತ್ತೇವೆ: ಪ್ರಿಯಾಂಕಾ ಚೋಪ್ರಾ

    ನಾವು ನಟರಿಗೆ ಹೆಚ್ಚು ಕ್ರೆಡಿಟ್ ನೀಡುತ್ತೇವೆ: ಪ್ರಿಯಾಂಕಾ ಚೋಪ್ರಾ

    ಬಾಲಿವುಡ್(Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ಕೊಟ್ಟು ಹೋಗಿದ್ದರು. ಈ ಬೆನ್ನಲ್ಲೇ ಚಿತ್ರರಂಗದ ನಟರ ಬಗ್ಗೆ ಪ್ರಿಯಾಂಕಾ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ.

    ಪ್ರಿಯಾಂಕಾ ಚೋಪ್ರಾ ಸದ್ಯ ಮಗಳ ಪಾಲನೆಯ ಜೊತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಸ್‌ಮಸ್ ಆಚರಣೆಗೂ ಕೂಡ ಈಗಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಈ ಮಧ್ಯೆ ಪ್ರಿಯಾಂಕಾ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ. ಚಿತ್ರರಂಗದಲ್ಲಿ ನಟರಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಅಷ್ಟಕ್ಕೂ ಅವರು ಏನೂ ಮಾಡುವುದೇ ಇಲ್ಲಾ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಲೈಗರ್’ ಸಿನಿಮಾಗೆ ಹಣ ಎಲ್ಲಿಂದ ಬಂತು?: ನಟಿ, ನಿರ್ದೇಶಕನಿಗೆ ‘ಇಡಿ’ ಗ್ರಿಲ್

    ಚಿತ್ರರಂಗದಲ್ಲಿ ನಟರಿಗೆ ಹೆಚ್ಚಿನ ಕ್ರೆಡಿಟ್ ಕೊಡಲಾಗುತ್ತದೆ. ನಟರು ಏನನ್ನು ಮಾಡುವುದಿಲ್ಲ. ನಟರು ಬೇರೆಯವರು ಬರೆದ ಕಥೆಯಲ್ಲಿ ನಟನೆ ಮಾಡುತ್ತಾರೆ. ಹಾಗೆಯೇ ಬೇರೆಯವರ ನೃತ್ಯ ಸಂಯೋಜನೆಯ ಹೆಜ್ಜೆಗಳಿಗೆ ನೃತ್ಯ ಮಾಡುತ್ತಾರೆ. ಹೇರೆ ಸೆಟಪ್, ಮೇಕಪ್ ಕೂಡ ಯಾರೋ ಮಾಡುತ್ತಾರೆ. ಹಾಗಾದ್ರೆ ನಾವು ಏನೂ ಮಾಡುತ್ತಿದ್ದೇವೆ ಎಂದು ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

    ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

    ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಮತ್ತೆ ಲಾಸ್ ಏಂಜಲೀಸ್‌ಗೆ ಹಿಂದಿರುಗಿದ್ದಾರೆ. ಇತ್ತೀಚೆಗೆ ಭಾರತಕ್ಕೆ(India) ಬಂದಿದ್ದ ಪಿಗ್ಗಿ ಮತ್ತೆ ಪತಿಯ ಮನೆಗೆ ಹಿಂದಿರುಗಿದ್ದಾರೆ. ಈನ ಬೆನ್ನಲ್ಲೇ ಮುದ್ದು ಮಗಳ ಜೊತೆಗೆ ಈಗಿಂದಲೇ ಕ್ರಿಸ್‌ಮಸ್‌ಗಾಗಿ(Christmas) ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಈ ಕುರಿತ ಪ್ರಿಯಾಂಕಾ ಫೋಟೋಸ್, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಪ್ರಿಯಾಂಕಾ ಚೋಪ್ರಾ, ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಜೊತೆಗೆ ಮಗಳ ಆರೈಕೆಯಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಮುಂಬೈಗೆ ಪ್ರಿಯಾಂಕಾ ಬಂದಿದ್ದರು. ಮೂರು ವರ್ಷಗಳ ನಂತರ ಭಾರತಕ್ಕೆ ಬಂದ ಸಂಭ್ರಮವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳ ಮೂಲಕ ಖುಷಿಯನ್ನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿ ಜೊತೆ ತೆಲುಗು ಸ್ಟಾರ್ ನಾಗ ಶೌರ್ಯ ಮದುವೆ

    ಇದೀಗ ಮತ್ತೆ ಲಾಸ್ ಏಂಜಲೀಸ್‌ಗೆ ಬಂದಿಳಿದಿದ್ದಾರೆ. ಮಗಳನ್ನು ಮುದ್ದಾಡಿದ್ದಾರೆ. ಜೊತೆಗೆ ಕ್ರಿಸ್‌ಮಸ್‌ಗೆ ಭರ್ಜರಿ ತಯಾರಿ ನಡೆಯುತ್ತಿರೋದರ ಬಗ್ಗೆ ಪ್ರಿಯಾಂಕಾ ಫೋಟೋ ಶೇರ್ ಮಾಡಿದ್ದಾರೆ.

    ಲಾಸ್ ಏಂಜಲೀಸ್‌ಗೆ ಬರುತ್ತಿದ್ದಂತೆ (ಡಿ.25)ರ ಕ್ರಿಸ್‌ಮಸ್ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. ಮಗಳೊಂದಿಗೆ ತಯಾರಿ ಮಾಡುತ್ತಿರುವ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಈಗಿಂದಲೇ ಕ್ರಿಸ್‌ಮಸ್‌ಗೆ ತಯಾರಿ ಮಾಡುತ್ತಿದ್ದಾರೆ. ಕ್ರಿಸ್‌ಮಸ್ ಟ್ರೀ ಕೂಡ ಮನೆಗೆ ಎಂಟ್ರಿಯಾಗಿದ್ದು, ಪ್ರಿಯಾಂಕಾ ಮನೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಾಂಕಾ ಚೋಪ್ರಾ ಪತಿಯಿಂದ ಮಾಜಿ ಲವರ್ ಒಲಿವಿಯಾಗೆ ಮಹಾಮೋಸ

    ಪ್ರಿಯಾಂಕಾ ಚೋಪ್ರಾ ಪತಿಯಿಂದ ಮಾಜಿ ಲವರ್ ಒಲಿವಿಯಾಗೆ ಮಹಾಮೋಸ

    ಬಾಲಿವುಡ್ ಹೆಸರಾಂತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಪತಿ, ಅಮೆರಿಕಾದ ಗಾಯಕ ನಿಕ್ ಜೋಸನ್ ಬಗ್ಗೆ ಗುರುತರ ಆರೋಪವೊಂದು ಕೇಳಿ ಬಂದಿದ್ದು, ನಿಕ್ ಅವರ ಮಾಜಿ ಲವರ್ ಒಲಿವಿಯಾ ಕಲ್ಪೋ ಮೊದಲ ಬಾರಿಗೆ ಈ ಆರೋಪ ಮಾಡಿದ್ದಾರೆ. ಪ್ರಿಯಾಂಕಾ ಮತ್ತು ನಿಕ್ ಮದುವೆಯ ಹೊತ್ತಿನಲ್ಲಿ ಕೆಲ ಹುಡುಗಿಯರು ನಿಕ್ ಬಗ್ಗೆ ಮಾತನಾಡಿದ್ದರು. ತಮ್ಮೊಂದಿಗೆ ಅವರಿಗೆ ಅಫೇರ್ ಇದೆ ಎಂದು ಹೇಳಿಕೊಂಡಿದ್ದರು. ಆ ಲಿಸ್ಟ್ ನಲ್ಲಿ ಒಲಿವಿಯಾ ಕಲ್ಫೋ (Olivia Culfo) ಮೊದಲಿಗರಾಗಿದ್ದರು.

    ಸತತ ಮೂರು ವರ್ಷಗಳ ಕಾಲ ನಿಕ್ ಜೊತೆ ತಾವು ಡೇಟಿಂಗ್ ಮಾಡಿರುವುದಾಗಿ ಒಲಿವಿಯಾ ಹೇಳಿಕೊಂಡಿದ್ದಾರೆ. ತಮ್ಮಿಬ್ಬರ ಸಂಬಂಧ ಎಷ್ಟೊಂದು ಗಾಢವಾಗಿತ್ತು ಎಂದೂ ಅವರು ವಿವರಿಸಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ತಾವಿಬ್ಬರೂ ಮದುವೆ ಆಗಬೇಕಿತ್ತು. ಆದರೆ, ನಿಕ್ (Nick Johnson) ಮೋಸದಿಂದಾಗಿ ನಾನು ದೂರವಾದೆ, ಪ್ರಿಯಾಂಕಾ ಮದುವೆ ಆಗಿದ್ದಾರೆ ಎಂದು ನೇರವಾಗಿಯೇ ಮಾಜಿ ಲವರ್ ಬಗ್ಗೆ ಆರೋಪ ಮಾಡಿದ್ದಾರೆ ಒಲವಿಯಾ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಗಾಢವಾಗಿ ಪ್ರೀತಿಸುತ್ತಿದ್ದವರು ಮತ್ತು ಮೂರ್ನಾಲ್ಕು ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದಾಗ, ಅದೊಂದು ಅದ್ಭುತ ಅನುಭವವಾಗಿತ್ತು ಎಂದು ಹೇಳಿಕೊಂಡಿರುವ ಒಲಿವಿಯಾ, ನಿಕ್ ಬಿಟ್ಟು ಹೋದ ಸಮಯದಲ್ಲಿ ತಮ್ಮೊಂದಿಗೆ ಹಣವಿರಲಿಲ್ಲ. ಬಾಡಿಗೆ ಕಟ್ಟಲೂ ದುಡ್ಡಿರಲಿಲ್ಲ. ರೇಷನ್ ತರಲು ಪರದಾಡಿದ್ದೇನೆ. ಅಷ್ಟೊಂದು ಪ್ರೀತಿಸುತ್ತಿದ್ದ ನಿಕ್, ಸಡನ್ನಾಗಿ ದೂರವಾದರು. ನನ್ನ ಹೆಸರು ಕೂಡ ಎಲ್ಲಿಯೂ ಕೇಳಿ ಬರದಂತೆ ಹತ್ತಿಕ್ಕಿದರು. ಅದೊಂದು ನರಕಯಾತನೆಯ ಸಮಯ ಎಂದು ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    ಬಾಲಿವುಡ್, ಹಾಲಿವುಡ್ ಸಿನಿಮಾ ಅಂತಾ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸದ್ದು ಮಾಡುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra), ಇದೀಗ ಮೂರು ವರ್ಷಗಳ ನಂತರ ಅಮೆರಿಕಾದಿಂದ ಭಾರತಕ್ಕೆ ಮರಳಿದ್ದಾರೆ. ಈ ಬೆನ್ನಲ್ಲೇ ಪ್ರಿಯಾಂಕಾ, 22 ವರ್ಷಗಳ ಹಿಂದಿನ ಮಿಸ್ ವರ್ಲ್ಡ್ ಮುಡಿಗೇರಿಸಿಕೊಂಡಿರುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. `ಮಿಸ್ ವರ್ಲ್ಡ್ 2000′(Miss World 2000) ಪ್ರಿಯಾಂಕಾ ಚೋಪ್ರಾ ಗೆದ್ದಿದ್ದು ಪಕ್ಷಪಾತದಿಂದ ಎಂದು ಸಹಸ್ಪರ್ಧಿ ಗಂಭೀರ ಆರೋಪ ಮಾಡಿದ್ದಾರೆ.

    ಬಾಲಿವುಡ್‌ನಲ್ಲಿ ಮಿಂಚಿ, ನಿಕ್ ಜೊತೆ ಅಮೆರಿಕಾದಲ್ಲಿ ಸೆಟೆಲ್ ಆದ ಮೇಲೆ ಹಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಪ್ರಿಯಾಂಕಾ, ಮೂರು ವರ್ಷಗಳ ಗ್ಯಾಪ್ ನಂತರ ಇದೀಗ ಭಾರತಕ್ಕೆ ಮರಳಿದ್ದಾರೆ. ಮುಂಬೈ ಮಹಾನಗರಿಯಲ್ಲಿ ಎಂಜಾಯ್ ಮಾಡುತ್ತಿರುವ ಪಿಗ್ಗಿಗೆ ಹೊಸ ವಿವಾದವೊಂದು ಸುತ್ತಿಕೊಂಡಿದೆ. ಫ್ಯಾಷನ್ ಲೋಕದಲ್ಲಿ ಈಗ ಮಿಸ್ ಯುಎಸ್‌ಎ 2022 ಸ್ಪರ್ಧೆಯಲ್ಲಿ ಪಕ್ಷಪಾತ ಮಾಡಲಾಗಿದೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಲೆಲಾನಿ ಮೆಕೊನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿದ್ದು 2000ನೇ ಇಸವಿಯ ಮಿಸ್ ವರ್ಲ್ಡ್ ಸ್ಪರ್ಧೆಯ ಬಗ್ಗೆಯೂ ಟೀಕೆ ಮಾಡಿದ್ದಾರೆ. ಪ್ರಿಯಾಂಕ ವಿರುದ್ಧ ಮಾತನಾಡಿದ್ದಾರೆ.

    `ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ಲೆಲಾನಿ ಮೆಕೊನಿ ಕೂಡ ಭಾಗವಹಿಸಿದ್ದರು. ಆದರೆ ಪ್ರಿಯಾಂಕಾ ಚೋಪ್ರಾ ಅವರು ಆ ವರ್ಷ ಕಿರೀಟ ಗೆದ್ದಿದ್ದು ಪಕ್ಷಪಾತದಿಂದ ಎಂದು ಹೇಳಿದ್ದಾರೆ. ಹೇಗೆ ಮೋಸ ನಡೆದಿದೆ, ಪ್ರಿಯಾಂಕಾ ಪರ ಹೇಗಿತ್ತು ಎನ್ನುವ ಬಗ್ಗೆ ಲೆಲಾನಿ ಮೆಕೊನಿ ಅವರು ಮಾತನಾಡಿದ್ದಾರೆ. ಅಂದಿನ ದಿನದಂದು ಪ್ರಿಯಾಂಕಾ ಅವರ ಗೌನ್‌ಗಳನ್ನು ಚೆನ್ನಾಗಿ ವಿನ್ಯಾಸ ಮಾಡಲಾಗಿತ್ತು. ಅವರಿಗೆ ವಿಶೇಷ ಸೌಕರ್ಯಗಳನ್ನು ನೀಡಲಾಗಿತ್ತು. ಪತ್ರಿಕೆಯಲ್ಲಿ ಪ್ರಿಯಾಂಕಾ ಪಬ್ಲಿಸಿಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಇನ್ನುಳಿದ ಸ್ಪರ್ಧಿಗಳ ಗ್ರೂಪ್ ಫೋಟೋ ಹಾಕಲಾಗಿತ್ತು. ಜೊತೆಗೆ 2000 ಇಸವಿಯ ಮಿಸ್ ವರ್ಲ್ಡ್ ಪ್ರಯೋಜಕರು ಭಾರತದವರೇ ಆಗಿದ್ದರು ಎಂದು ಲೆಲಾನಿ ಮೆಕೊನಿ ಆರೋಪ ಮಾಡಿದ್ದಾರೆ. ಇದನ್ನೂ ಓದಿ:`ಅವತಾರ್ 2′ ಟ್ರೈಲರ್‌ ಟ್ರೆಂಡಿಂಗ್‌ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಕನ್ನಡಿಗರು ಗರಂ

    22 ವರ್ಷಗಳ ಹಿಂದಿನ ಮಿಸ್ ವರ್ಲ್ಡ್ ಕಿರೀಟದ ಬಗ್ಗೆ ಇದೀಗ ಸಾಕಷ್ಟು ಚರ್ಚೆ ಆಗುತ್ತಿದೆ. ಪಿಗ್ಗಿ ವಿರುದ್ಧ ಸಹಸ್ಪರ್ಧಿಯ ಸಾಲು ಸಾಲು ಆರೋಪಗಳನ್ನ ಮಾಡಿದ್ದಾರೆ. ಇದಕ್ಕೆಲ್ಲ ಪ್ರಿಯಾಂಕಾ ಚೋಪ್ರಾ, ಉತ್ತರ ನೀಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ. ಸದ್ಯ ನಟಿ ಕೂಡ ಮದುವೆ, ಮಗಳು, ಸಿನಿಮಾಗಳು ಅಂತಾ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೂರು ವರ್ಷಗಳ ಬಳಿಕೆ ತಾಯ್ನಾಡಿಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ

    ಮೂರು ವರ್ಷಗಳ ಬಳಿಕೆ ತಾಯ್ನಾಡಿಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮದುವೆಯಾದ ಬಳಿಕ ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ (America) ನೆಲೆಸಿದ್ದರು. ಅಲ್ಲಿಂದಲೇ ಅವರು ಅನೇಕ ಕಾರ್ಯಕ್ರಮಗಳಿಗೂ ಭಾಗಿಯಾದರು. ಮಗುವಾದ ನಂತರ ಬಹುತೇಕ ಅಮೆರಿಕಾದಲ್ಲೇ ಉಳಿದರು. ಇದೀಗ ಬರೋಬ್ಬರಿ ಮೂರು ವರ್ಷಗಳ ಬಳಿಕ ತವರಿಗೆ ಬಂದಿಳಿದಿದ್ದಾರೆ ನಟಿ. ಮುಂಬೈಗೆ (Mumbai) ಬಂದಿಳಿದ ಬೋರ್ಡಿಂಗ್ ಪಾಸ್ ಸಮೇತ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮಗಳ ಜೊತೆ ಭಾರತಕ್ಕೆ ಬಂದಿಳಿದಿರುವ ಪ್ರಿಯಾಂಕಾ, ಅಂತಿಮವಾಗಿ ಮನೆಗೆ ಹೋಗುತ್ತಿದ್ದೇನೆ ಎಂದು ಮಗಳೊಂದಿಗೆ ಇರುವ ಫೋಟೋವನ್ನು ಅವರು ಶೇರ್ ಮಾಡಿದ್ದಾರೆ. ಮೊಮ್ಮಗಳನ್ನು ನೋಡಲು ಅಮೆರಿಕಾಗೆ ಹೋಗಿದ್ದ ಪ್ರಿಯಾಂಕಾ ತಾಯಿ, ಇದೀಗ ಮೊಮ್ಮಗಳನ್ನು ಮನೆ ತುಂಬಿಸಿಕೊಂಡು ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್

    ಗಾಯಕ ನಿಕ್ ಜೋನಸ್ (Nick Jonas) ಜೊತೆ ಪ್ರಿಯಾಂಕಾ ಮದುವೆಯಾದ ನಂತರ ಬಾಲಿವುಡ್ ಸಿನಿಮಾ ರಂಗದಿಂದಲೇ ದೂರ ಉಳಿದಿದ್ದರು. ಹಾಲಿವುಡ್ ನಲ್ಲಿ ಸಿನಿಮಾ, ವೆಬ್ ಸೀರಿಸ್ ಹಾಗೂ ಶೋ ಗಳನ್ನು ನಡೆಸಿಕೊಡುತ್ತಿದ್ದರು. ಮೂರು ವರ್ಷಗಳ ಬಳಿಕ ಮುಂಬೈಗೆ ವಾಪಸ್ಸಾಗಿದ್ದರಿಂದ ಬಾಲಿವುಡ್ ಸಿನಿಮಾದಲ್ಲಿ ಅವರು ಮುಂದೆ ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಆ ಕುರಿತು ಅವರು ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ.

    Live Tv
    [brid partner=56869869 player=32851 video=960834 autoplay=true]