Tag: ಪ್ರಿಯಾಂಕಾ ಚೋಪ್ರಾ

  • ದೆಹಲಿಯಲ್ಲಿ ನಡೆಯಲಿದೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ನಿಶ್ಚಿತಾರ್ಥ

    ದೆಹಲಿಯಲ್ಲಿ ನಡೆಯಲಿದೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ನಿಶ್ಚಿತಾರ್ಥ

    ಬಾಲಿವುಡ್ (Bollywood)  ಬ್ಯೂಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ರಾಜಕಾರಣಿ ರಾಘವ್ ಚಡ್ಡಾ (Raghav Chadha) ಲವ್ವಿ-ಡವ್ವಿ ವಿಚಾರ ಸದ್ಯದ ಹಾಟ್ ಟಾಪಿಕ್ ಆಗಿದೆ. ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಿರುವ ಈ ಜೋಡಿ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ದೆಹಲಿಯಲ್ಲಿ ಈ ವಾರ ಅದ್ದೂರಿ ನಿಶ್ಚಿತಾರ್ಥ ನಡೆಯಲಿದೆ.

    ಪ್ರಿಯಾಂಕಾ ಚೋಪ್ರಾ (Priyanka Chopra) ಸಂಬಂಧಿ ನಟಿ ಪರಿಣಿತಿ ಚೋಪ್ರಾ ಕಳೆದ ಕೆಲ ದಿನಗಳಿಂದ ರಾಘವ್ ಚಡ್ಡಾ ಜೊತೆಗಿನ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಲಂಡನ್ ಮತ್ತು ಮುಂಬೈ ಏರ್‌ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರ ಮದುವೆ ಬಗ್ಗೆ ಅದೆಷ್ಟೇ ಚರ್ಚೆ ನಡೆಯುತ್ತಾ ಇದ್ದರೂ ಇಬ್ಬರೂ ಸೈಲೆಂಟ್ ಆಗಿದ್ದಾರೆ.

    ಹೀಗಿರುವಾಗ ಈ ವಾರವೇ ದೆಹಲಿಯಲ್ಲಿ ರಾಜಕಾರಣಿ ರಾಘವ್ ಜೊತೆ ಪರಿಣಿತಿ ಎಂಗೇಜ್‌ಮೆಂಟ್ ಫಿಕ್ಸ್ ಆಗಿದೆ. ಅದಕ್ಕಾಗಿ ಈಗಾಗಲೇ ಪರಿಣಿತಿ ಚೋಪ್ರಾ ದೆಹಲಿಗೆ (Dehli) ತೆರಳಿದ್ದಾರೆ. ನಿಶ್ಚಿತಾರ್ಥದ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕುಟುಂಬದ ಆಪ್ತರಷ್ಟೇ ಈವೆಂಟ್‌ನಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಇಬ್ರಾಹಿಂ ಅಲಿ ಖಾನ್ ಜೊತೆಗಿನ ಡೇಟಿಂಗ್ ಸುದ್ದಿ ನಿಜಾನಾ? ಪಾಲಕ್ ತಿವಾರಿ ಸ್ಪಷ್ಟನೆ

    ಪರಿಣಿತಿ ಚೋಪ್ರಾ ಎಂಗೇಜ್‌ಮೆಂಟ್‌ಗೆ ಭಾಗಿಯಾಗಲು ಈಗಾಗಲೇ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್ ಮತ್ತು ಮೀರಾ ಚೋಪ್ರಾ ಕೂಡ ದೆಹಲಿಯಲ್ಲಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಹೇಳದೇ ಇದ್ದರೂ ಕೂಡ ಪರಿಣಿತಿ-ರಾಘವ್ ನಿಶ್ಚಿತಾರ್ಥದ ಸಿದ್ಧತೆ ತೆರೆಮರೆಯಲ್ಲಿ ಭರದಿಂದ ನಡೆಯುತ್ತಿದೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ.

  • ಪತಿಯೊಡನೆ ಆಟೋ ಏರಿ ಬಂದ ನಟಿ ಪ್ರಿಯಾಂಕಾ ಚೋಪ್ರಾ

    ಪತಿಯೊಡನೆ ಆಟೋ ಏರಿ ಬಂದ ನಟಿ ಪ್ರಿಯಾಂಕಾ ಚೋಪ್ರಾ

    ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಮುಂಬೈನಲ್ಲಿದ್ದಾರೆ. ಇತ್ತೀಚಿಗೆ ನೀತಾ ಮುಖೇಶ್ ಅಂಬಾನಿ ಅವರ ಖಾಸಗಿ ಕಾರ್ಯಕ್ರಮದಲ್ಲಿ ನಟಿ ಮಿಂಚಿದ್ದಾರೆ. ಈವೆಂಟ್‌ಗೆ ಎಂಟ್ರಿ ಕೊಡುವಾಗ ಪತಿಯೊಡನೆ ಆಟೋ ಏರಿ ಬಂದಿದ್ದಾರೆ ಪ್ರಿಯಾಂಕಾ ಚೋಪ್ರಾ.

    ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್‌ನಲ್ಲಿ ಆಕ್ಟೀವ್ ಆಗಿದ್ದಾರೆ. `ಸಿಟಾಡೆಲ್’ (Citadel) ವೆಬ್ ಸಿರೀಸ್ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಪಕ್ಕಾ ಆ್ಯಕ್ಷನ್ ಅವತಾರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಮಂತಾ ಕೈಬಿಟ್ಟ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ

     

    View this post on Instagram

     

    A post shared by Viral Bhayani (@viralbhayani)

    ಪತಿ ನಿಕ್ ಜೋನಸ್ (Nick Jonas) ಮತ್ತು ಮಗಳ ಜೊತೆ ಪ್ರಿಯಾಂಕಾ ಜೊತೆ ಮುಂಬೈನಲ್ಲಿ ಏಂಜಾಯ್ ಮಾಡ್ತಿದ್ದಾರೆ. ಐಷಾರಾಮಿ ಜೀವನ ಸಾಗಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಸದ್ಯ ಸಾಮಾನ್ಯರಂತೆ ಪತಿ ಜೊತೆ ಆಟೋ ಏರಿ ಬಂದಿದ್ದಾರೆ. ಈ ಕುರಿತ ಫೋಟೋವನ್ನ ನಟಿಯೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Priyanka (@priyankachopra)

    ಆಟೋದಲ್ಲಿ ಬಂದಿಲ್ಲ, ಬದಲಾಗಿ ಆಟೋದ ಮುಂದೆ ನಿಂತು ನಿಕ್- ಪ್ರಿಯಾಂಕಾ ಜೋಡಿ ಫೋಟೋಶೂಟ್ ಮಾಡಿಸಿದ್ದಾರೆ. ಆಟೋದಿಂದ ಇಳಿದಿರುವಂತೆ ಪೋಸ್ ಕೊಟ್ಟಿರುವ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ನಟಿಯ ನ್ಯೂ ಲುಕ್ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

    65 ವರ್ಷದ ಹಳೆಯದಾದ ಬನಾರಸಿ ಪಟೇಲಾ ಸೀರೆಯಲ್ಲಿ ಡಿಸೈನ್ ಮಾಡಲಾದ ಉಡುಗೆಯಲ್ಲಿ ಪ್ರಿಯಾಂಕಾ ಮಿಂಚಿದ್ದಾರೆ. ನಿಕ್ ಜೋನಸ್ ನೀಲಿ ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ.

  • ಗ್ಲಾಮರಸ್ ಲುಕ್‌ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಮಿಂಚಿಂಗ್‌

    ಗ್ಲಾಮರಸ್ ಲುಕ್‌ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಮಿಂಚಿಂಗ್‌

    ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra)  ಮದುವೆಯ (Wedding) ನಂತರ ಮತ್ತಷ್ಟು ಬೋಲ್ಡ್ & ಫಿಟ್ ಆಗಿದ್ದಾರೆ. ಸದ್ಯ ಮುಂಬೈಗೆ ಬಂದಿರುವ ಪ್ರಿಯಾಂಕಾ ದಂಪತಿ ಕಾರ್ಯಕ್ರಮವೊಂದರಲ್ಲಿ ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    ಹಿಂದಿ ಸಿನಿಮಾರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾ, ನಿಕ್ ಜೋನಸ್ (Nick Jonas) ಜೊತೆ ಮದುವೆಯಾದ್ಮೇಲೆ ಹಾಲಿವುಡ್‌ನತ್ತ (Hollywood) ಮುಖ ಮಾಡಿದ್ದಾರೆ. ಸದ್ಯ ಮುಂಬೈಗೆ ಬಂದಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಹೊಸ ಫೋಟೋಶೂಟ್‌ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

     

    View this post on Instagram

     

    A post shared by Priyanka (@priyankachopra)

    ಈಚೆಗೆ ನೀತಾ ಮುಖೇಶ್ ಅಂಬಾನಿ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿಕ್ ಜೋನಸ್- ಪ್ರಿಯಾಂಕಾ ದಂಪತಿ ಕೂಡ ಭಾಗಿಯಾಗಿದ್ದರು. ಸಮಾರಂಭದಲ್ಲಿ ಮಸ್ತ್ ಆಗಿ ಡ್ಯಾನ್ಸ್ ಮಾಡಿರೋದಲ್ಲದೇ, ಕಲರ್‌ಫುಲ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಸದ್ಯ ನಟಿ ಶೇರ್ ಮಾಡಿರುವ ಚೆಂದದ ಫೋಟೋಶೂಟ್ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ವೇದಿಕೆ ಮೇಲೆ ವಿದೇಶಿ ಮಾಡೆಲ್‌ಗೆ ಮುತ್ತಿಟ್ಟ ವರುಣ್ ಧವನ್‌ಗೆ ನೆಟ್ಟಿಗರಿಂದ ತರಾಟೆ

     

    View this post on Instagram

     

    A post shared by Viral Bhayani (@viralbhayani)

    ಪ್ರಿಯಾಂಕಾ ಸಹೋದರ ಸಂಬಂಧಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆ ಸುದ್ದಿ ಬಿಟೌನ್‌ನಲ್ಲಿ ಗಾಸಿಪ್ ಪ್ರಿಯರ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಕೂಡ ಅಮೆರಿಕದಿಂದ ಮುಂಬೈಗೆ ಬಂದಿರೋದು ಪರಿಣಿತಿ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.

  • ಕರಣ್ ಜೋಹಾರ್ ನ ತಬ್ಬಿಕೊಂಡ ಪ್ರಿಯಾಂಕಾ : ಕಂಗನಾ ಈಗ ಏನ್ ಹೇಳ್ಬೋದು?

    ಕರಣ್ ಜೋಹಾರ್ ನ ತಬ್ಬಿಕೊಂಡ ಪ್ರಿಯಾಂಕಾ : ಕಂಗನಾ ಈಗ ಏನ್ ಹೇಳ್ಬೋದು?

    ದ್ಯ ಹಾಲಿವುಡ್ ನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ಬಿಡುವುದಕ್ಕೆ ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ (Karan Johar) ಕಾರಣ ಎಂದು ಮೊನ್ನೆಯಷ್ಟೇ ಕಂಗನಾ ರಣಾವತ್ (Kangana Ranaut) ಹೇಳಿದ್ದರು. ಇದಕ್ಕೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಧ್ವನಿಗೂಡಿಸಿದ್ದರು. ಈ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ಕಂಗನಾ ಹಚ್ಚಿರುವ ಬೆಂಕಿ ಇನ್ನೂ ಉರಿಯುತ್ತಿರುವಾಗಲೇ ಬಾಲಿವುಡ್ ಗೆ ಬಂದಿಳಿದಿದ್ದಾರೆ ಪ್ರಿಯಾಂಕಾ ಚೋಪ್ರಾ.

    ಅಂಬಾನಿ (Ambani) ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮೊದಲ ಬಾರಿಗೆ ಮಗಳ ಜೊತೆ ಆಗಮಿಸಿರುವ ಪ್ರಿಯಾಂಕಾ ಚೋಪ್ರಾಗೆ ಅಚ್ಚರಿಯ ಕ್ಷಣವೊಂದು ಎದುರಾಯಿತು. ಕಂಗನಾ ಯಾರು ಮೇಲೆ ಆರೋಪ ಮಾಡಿದ್ದರೋ, ಅವರೇ ಪ್ರಿಯಾಂಕಾಗೆ ಎದುರಾಗಿ ತಬ್ಬಿಕೊಂಡ ಘಟನೆ ನಡೆಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರಣ್ ಜೋಹಾರ್ ಮತ್ತು ಪ್ರಿಯಾಂಕಾ ಪರಸ್ಪರ ತಬ್ಬಿಕೊಂಡು ಮತ್ತೊಂದು ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಹಿಂದಿ ಚಿತ್ರರಂಗದಲ್ಲಿ ಸೌತ್‌ನಷ್ಟು ಶಿಸ್ತಿಲ್ಲ: ಕಾಜಲ್ ಅಗರ್‌ವಾಲ್

    ಈ ದೃಶ್ಯವನ್ನು ಕ್ಯಾಮೆರಾಗಳು ಕೂಡ ಅಚ್ಚರಿಯಿಂದಲೇ ಸೆರೆ ಹಿಡಿದಿವೆ. ಆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿವೆ. ಅಲ್ಲದೇ, ಈ ದೃಶ್ಯಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೆಲವರು ಕಂಗನಾ ರಣಾವತ್ ಅವರಿಗೆ ಕಾಲೆಳೆದಿದ್ದಾರೆ. ಈ ವಿಡಿಯೋ ಕುರಿತಾಗಿ ಈವರೆಗೂ ಕಂಗನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏನು ಹೇಳುತ್ತಾರೆ ಎನ್ನುವ ಕುತೂಹಲವಂತೂ ಇದ್ದೇ ಇದೆ.

    ನಿನ್ನೆ ನಡೆದ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ನ ಅನೇಕ ಗಣ್ಯರು ಹಾಜರಿದ್ದರು. ದೀಪಿಕಾ ಪಡುಕೋಣೆ, ರಣವೀರ್ ಸೇರಿದಂತೆ ಇಡೀ ಚಿತ್ರೋದ್ಯಮವೇ ಈ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಈ ಕಾರ್ಯಕ್ರಮದ ಸಲುವಾಗಿಯೇ ಪತಿ ಮತ್ತು ಮಗಳ ಜೊತೆ ಪ್ರಿಯಾಂಕಾ ಚೋಪ್ರಾ ಕೂಡ ಆಗಮಿಸಿದ್ದರು.

  • ಪ್ರಿಯಾಂಕಾ ಚೋಪ್ರಾನ ತರಾಟೆಗೆ ತೆಗೆದುಕೊಂಡ ನಟಿ ರಾಖಿ ಸಾವಂತ್

    ಪ್ರಿಯಾಂಕಾ ಚೋಪ್ರಾನ ತರಾಟೆಗೆ ತೆಗೆದುಕೊಂಡ ನಟಿ ರಾಖಿ ಸಾವಂತ್

    ಳೆದ ಎರಡು ವಾರಗಳಿಂದ ಬಾಲಿವುಡ್ ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರದ್ದೇ ಸುದ್ದಿ. ಸದ್ಯ ಅಮೆರಿಕಾದಲ್ಲಿ ಬೀಡುಬಿಟ್ಟು, ಹಾಲಿವುಡ್ ಸಿನಿಮಾಗಳನ್ನು ಮಾಡುತ್ತಿರುವ ಪ್ರಿಯಾಂಕಾ ಮೊನ್ನೆಯಷ್ಟೇ ಬಾಲಿವುಡ್ ಬಗ್ಗೆ ಮಾತನಾಡಿದ್ದರು. ಇಲ್ಲಿನ ರಾಜಕಾರಣದ ಬಗ್ಗೆ ಕಿಡಿಕಾರಿದ್ದರು. ತಾರತಮ್ಯದ ಪಟ್ಟಿಯನ್ನೇ ಬಿಚ್ಚಿಟ್ಟಿದ್ದರು. ಅವರ ಮಾತು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

    ಪ್ರಿಯಾಂಕಾ ಚೋಪ್ರಾಗೆ ಬಾಲಿವುಡ್ ನಲ್ಲಿ ಆದ ಅನ್ಯಾಯಗಳ ಪಟ್ಟಿ ಒಂದೊಂದೇ ಹೊರ ಬರುತ್ತಿದ್ದಂತೆಯೇ ಬಾಲಿವುಡ್ ಮೌನಕ್ಕೆ ಜಾರಿತು. ಹಾಗಂತ ಕಂಗನಾ ರಣಾವತ್ (Kangana Ranaut) ಸುಮ್ಮನಿರಲಿಲ್ಲ. ಪ್ರಿಯಾಂಕಾಗೆ ಅನ್ಯಾಯವಾಗಿದ್ದು ಕರಣ್ ಜೋಹರ್‌ನಿಂದ ಎಂದು ನೇರವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡರು. ಈ ವಿಚಾರದಲ್ಲಿ ಪ್ರಿಯಾಂಕಾ ಪರ ಇರುತ್ತೇನೆ ಎಂದು ಘೋಷಿಸಿದರು. ಅಲ್ಲಿಗೆ ಚರ್ಚೆ ಮತ್ತೊಂದು ಹಾದಿ ಹಿಡಿಯಿತು. ಇದನ್ನೂ ಓದಿ: Exclusive: ರಾಜಕೀಯ ಅಖಾಡಕ್ಕೆ ನಿರ್ಮಾಪಕ ಕೆ.ಮಂಜು

    ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಖಿ ಸಾವಂತ್ (Rakhi Sawant) ಕೂಡ ಮಾತನಾಡಿದ್ದಾರೆ. ಪ್ರಿಯಾಂಕಾ ಚೋಪ್ರಾನ ತರಾಟೆಗೆ ತೆಗೆದುಕೊಂಡಿರುವ ರಾಖಿ, ಎಲ್ಲಿಂದಲೋ ಬರುತ್ತೀರಿ, ಸಿಹಿ ಸವಿಯುತ್ತೀರಿ. ಮತ್ತೆ ಅದೇ ರಂಗದ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತೀರಿ. ಇದು ಸರಿಯಲ್ಲ. ಯಾವಾಗ ನಿಮಗೆ ನೋವಾಗಿತ್ತೋ, ಅವತ್ತೇ ಆ ಕುರಿತು ಮಾತನಾಡಬೇಕು ಎಂದು ರಾಖಿ ಹೇಳಿದ್ದಾರೆ. ನೀವು ಬಾಲಿವುಡ್ ಬಿಟ್ಟು ತುಂಬಾ ವರ್ಷಗಳೇ ಆಗಿವೆ. ಈ ಕುರಿತು ನೀವು ಮಾತನಾಡಬಾರದು ಎಂದಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಆಡಿದ ಮಾತುಗಳು ಸುಳ್ಳು. ಇಲ್ಲಿ ಯಾರಿಗೂ ಮೋಸ ಆಗುವುದಿಲ್ಲ. ಅನೇಕರು ಬದುಕನ್ನು ಕಟ್ಟಿಕೊಂಡಿದ್ದಾರೆ. ಪ್ರಿಯಾಂಕಾ ಯಾಕೆ ಆ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ. ಅವರ ತಾಯಿ ನನಗೆ ತುಂಬಾ ಪರಿಚಯ. ಹಾಗಾಗಿ ಈ ವಿಷಯದಲ್ಲಿ ನಾನು ತಟಸ್ಥ ರೀತಿಯಲ್ಲಿ ನಿಂತು ಮಾತನಾಡುತ್ತೇನೆ ಎಂದಿದ್ದಾರೆ ರಾಖಿ.

  • ಪ್ರಿಯಾಂಕಾ ಬಾಲಿವುಡ್ ಬಿಡೋಕೆ ಕರಣ್ ಜೋಹಾರ್ ಕಾರಣ: ಬಾಂಬ್ ಸಿಡಿಸಿದ ಕಂಗನಾ

    ಪ್ರಿಯಾಂಕಾ ಬಾಲಿವುಡ್ ಬಿಡೋಕೆ ಕರಣ್ ಜೋಹಾರ್ ಕಾರಣ: ಬಾಂಬ್ ಸಿಡಿಸಿದ ಕಂಗನಾ

    ಬಾಲಿವುಡ್ (Bollywood) ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ವಿದೇಶದಲ್ಲಿ ನೆಲೆಸಲು ಹಾಗೂ ಬಾಲಿವುಡ್ ನಿಂದ ದೂರವಾಗಲು ಕಾರಣ ಕರಣ್ ಜೋಹಾರ್ ಎಂದು ಹೇಳುವ ಮೂಲಕ ಬಿಟೌನ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ ನಟಿ ಕಂಗನಾ ರಣಾವತ್ (Kangana Ranaut). ನೇರವಾಗಿ ಕಂಗನಾ ಸೋಷಿಯಲ್ ಮೀಡಿಯಾದಲ್ಲೇ ಈ ಕುರಿತು ಬರೆದುಕೊಂಡಿದ್ದಾರೆ. ಕರಣ್ ಜೋಹಾರ್ (Karan Johar) ಮೇಲೆ ಮಾಡಿರುವ ಗಂಭೀರ ಆರೋಪ ಬಾಲಿವುಡ್ ನಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ.

    ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕಾ, ‘ನಾನು ಬಾಲಿವುಡ್ ನಿಂದ ದೂರವಾಗಲು ಮತ್ತು ಅಲ್ಲಿನ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಕಾರಣ ರಾಜಕೀಯ. ಎಲ್ಲೋ ಒಂದು ಕಡೆ ನನ್ನನ್ನು ತುಳಿಯುವುದಕ್ಕೆ ಶುರು ಮಾಡಿದ್ದಾರೆ ಅನಿಸಿತು. ಅವಕಾಶ ಇಲ್ಲದಂತೆ ಮಾಡಲಾಗುತ್ತಿದೆ ಎನ್ನುವ ವಿಚಾರ ಗೊತ್ತಾಯಿತು. ಹೀಗಾಗಿ ನಾನು ಹಾಲಿವುಡ್ ಚಿತ್ರಗಳನ್ನು ಒಪ್ಪಿಕೊಂಡೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ:`ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್

    ಪ್ರಿಯಾಂಕಾ ಆಡಿದ ಮಾತುಗಳು ವೈರಲ್ ಆಗುತ್ತಿದ್ದಂತೆಯೇ ಈ ಅಖಾಡಕ್ಕೆ ಕಂಗನಾ ಇಳಿದಿದ್ದು, ನೇರವಾಗಿ ಕರಣ್ ಜೋಹಾರ್ ಬಗ್ಗೆಯೇ ಆರೋಪ ಮಾಡಿದ್ದಾರೆ. ‘ಕರಣ್ ಜೋಹಾರ್ ನಿಮ್ಮನ್ನು ಬ್ಯಾನ್ ಮಾಡಿದ್ದರು. ಹಲವರು ಗುಂಪು ಕಟ್ಟಿಕೊಂಡು ಓಡಿಸಿದರು. ಈ ಕಾರಣಕ್ಕಾಗಿಯೇ ಪ್ರಿಯಾಂಕಾ ಬಾಲಿವುಡ್ ಬಿಟ್ಟರು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಕಂಗನಾ ರಣಾವತ್.

    ನೇರ ಮಾತುಗಳಿಂದಾಗಿಯೇ ಕಂಗನಾ ಸುಖಾಸುಮ್ಮನೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಅದರಲ್ಲೂ ಕರಣ್ ಜೋಹಾರ್ ವಿಷಯದಲ್ಲಿ ಸದಾ ಆರೋಪ ಮಾಡುತ್ತಲೇ ಇದ್ದಾರೆ. ಈ ಬಾರಿಯೂ ಕರಣ್ ಮೇಲೆಯೇ ಆರೋಪ ಮಾಡಿರುವ ಕಂಗನಾ, ಒಂದು ಕಾಲದ ವಿರೋಧಿಯಾಗಿದ್ದ ಪ್ರಿಯಾಂಕಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

  • ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್‌ಗೆ ತಿರುಗೇಟು ಕೊಟ್ಟ ಪ್ರಿಯಾಂಕಾ ಚೋಪ್ರಾ

    ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್‌ಗೆ ತಿರುಗೇಟು ಕೊಟ್ಟ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿಕ್ ಜೋನಸ್ ಅವರನ್ನ ಮದುವೆಯಾಗಿ ಅಮೆರಿಕಾದಲ್ಲೇ ನಟಿ ಸೆಟಲ್ ಆಗಿದ್ದಾರೆ. ಹೀಗಿರುವಾಗ ಹಾಲಿವುಡ್ (Hollywood) ಎಂಟ್ರಿಯ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ.

    ಪ್ರಿಯಾಂಕಾ ನಟನೆಯ ಹಾಲಿವುಡ್‌ನ `ಸಿಟಾಡೆಲ್’ (Citadel) ಸಿನಿಮಾ ಮುಂದಿನ ಏಪ್ರಿಲ್ 28ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಇದೀಗ ತಮ್ಮ ಸಿಟಾಡೆಲ್ ವೆಬ್ ಸರಣಿ ಬಗ್ಗೆ ಮಾತನಾಡಿದ್ದಾರೆ.  ಶಾರುಖ್ ಖಾನ್‌ (Sharukh Khan) ಹಾಲಿವುಡ್‌ ಎಂಟ್ರಿ ಬಗ್ಗೆ ನೀಡಿದ್ದ ಹೇಳಿಕೆಗೆ ಪ್ರಿಯಾಂಕಾ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?

    ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಹೇಳಿಕೆಯ ಬಗ್ಗೆ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಶ್ನೆ ಮಾಡಲಾಯಿತು. ಶಾರುಖ್ ಈ ಹಿಂದೆ ತಾನು ಯಾಕೆ ಹಾಲಿವುಡ್‌ಗೆ ಹೋಗಲ್ಲ ಎಂದು ಬಹಿರಂಗಪಡಿಸಿದ್ದರು. ಹಾಲಿವುಡ್‌ಗೆ ಹೋಗುವ ಪ್ರಶ್ನೆ ಮಾಡಿದ್ದಕ್ಕೆ ಶಾರುಖ್, ನಾನೇಕೆ ಅಲ್ಲಿಗೆ ಹೋಗಬೇಕು. ನಾನು ಇಲ್ಲೇ ಆರಾಮಾಗಿ ಇದ್ದೀನಿ ಎಂದು ಹೇಳಿದರು. ಶಾರುಖ್ ಮಾತನ್ನು ಉಲ್ಲೇಖಿಸಿ ಪ್ರಿಯಾಂಕಾ ಅವರಿಗೆ ಪ್ರಶ್ನೆ ಮಾಡಲಾಯಿತು. ಉತ್ತರ ನೀಡಿದ ಪ್ರಿಯಾಂಕಾ ತನಗೆ ಆರಾಮಾಗಿ ಇರುವುದು ಬೋರಿಂಗ್ ಎಂದು ಹೇಳಿದ್ದಾರೆ.

    ಆರಾಮಾಗಿ ಇರುವುದು ನನಗೆ ಬೋರ್ ಆಗಿದೆ. ಹಾಗಂತ ನಾನು ಅಹಂಕಾರಿಯಲ್ಲ. ನಾನು ಸೆಟ್‌ಗೆ ಕಾಲಿಟ್ಟಾಗ ಏನು ಮಾಡುತ್ತೇನೆ ಎಂದು ಅರಿವಿದೆ. ನನಗೆ ಆತ್ಮವಿಶ್ವಾಸವಿದೆ. ನಾನು ಈಗಲೂ ಆಡಿಶನ್ ತೆಗೆದುಕೊಳ್ಳಲು ಸಿದ್ಧಳಿದ್ದೇನೆ. ನಾನು ಈಗಲೂ ಕೆಲಸ ಮಾಡಲು ಸಿದ್ಧ. ಇನ್ನೊಂದು ದೇಶಕ್ಕೆ ಕಾಲಿಟ್ಟಾಗ ನನ್ನ ಯಶಸ್ಸನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಪ್ರಿಯಾಂಕಾ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದು ಶಾರುಖ್ ಖಾನ್ ಅವರಿಗೆ ಕೊಟ್ಟ ತಿರುಗೇಟು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.

  • ಪ್ರಿ- ಆಸ್ಕರ್ ಇವೆಂಟ್‌ನಲ್ಲಿ ಭಾಗಿಯಾದ Priyanka Chopra ದಂಪತಿ

    ಪ್ರಿ- ಆಸ್ಕರ್ ಇವೆಂಟ್‌ನಲ್ಲಿ ಭಾಗಿಯಾದ Priyanka Chopra ದಂಪತಿ

    ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ – ನಿಕ್ ದಂಪತಿ ಇತ್ತೀಚಿಗೆ ಪ್ರಿ- ಆಸ್ಕರ್ (Pre-Oscar) ಇವೆಂಟ್‌ನಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಜೋಡಿ ಸುದ್ದಿ ಮಾಡಿದೆ.

     

    View this post on Instagram

     

    A post shared by Priyanka (@priyankachopra)

    ಪ್ರಿ-ಆಸ್ಕರ್ ಕಾರ್ಯಕ್ರಮ ಮಾರ್ಚ್ 8ರಂದು ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದು, ಪ್ರಿಯಾಂಕಾ- ನಿಕ್ ದಂಪತಿ ಭಾಗವಹಿಸಿದ್ದಾರೆ. ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಆಸ್ಕರ್ ಅಕಾಡೆಮಿ ಅವಾರ್ಡ್ ಇವೆಂಟ್ ಮಾರ್ಚ್ 12ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ.

    ಪ್ರಿಯಾಂಕಾ ಚೋಪ್ರಾ (Priyanka Chopra) ಹಾಲಿವುಡ್ (Hollywood) ವೆಬ್ ಸಿರೀಸ್ `ಸಿಟಾಡೆಲ್’ (Citadel) ರಿಲೀಸ್‌ಗಾಗಿ ಎದುರು ನೋಡ್ತಿದ್ದಾರೆ. ಈಗಾಗಲೇ ನಟಿಯ ಟ್ರೈಲರ್ ಬಿಡುಗಡೆಯಾಗಿದ್ದು, ಆ್ಯಕ್ಷನ್ ಅವತಾರದಲ್ಲಿ‌ ಪ್ರಿಯಾಂಕಾ ಮಿಂಚಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

     

    View this post on Instagram

     

    A post shared by Priyanka (@priyankachopra)

    `ಸಿಟಾಡೆಲ್’ ವೆಬ್ ಸರಣಿ ಅಮೆಜಾನ್ ಪ್ರೈಂ ವೀಡಿಯೋ ಮೂಲಕ ಪ್ರಸಾರವಾಗಲಿದೆ. ಇದೇ ಏಪ್ರಿಲ್ 28ಕ್ಕೆ ಸ್ಟ್ರೀಮ್ ಆಗಲಿದೆ. ಪ್ರಿಯಾಂಕಾ ನಟನೆಯ ಸಿಟಾಡೆಲ್ ಹಾಲಿವುಡ್ ಅಂಗಳದಲ್ಲಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಎಂಬುದನ್ನ ಕಾದುನೋಡಬೇಕಿದೆ.

  • ನನ್ನನ್ನು ಕರಿಬೆಕ್ಕು ಅಂತ ಹೀಯಾಳಿಸುತ್ತಿದ್ದರು: ಕಣ್ಣೀರಿಟ್ಟ ಪ್ರಿಯಾಂಕಾ ಚೋಪ್ರಾ

    ನನ್ನನ್ನು ಕರಿಬೆಕ್ಕು ಅಂತ ಹೀಯಾಳಿಸುತ್ತಿದ್ದರು: ಕಣ್ಣೀರಿಟ್ಟ ಪ್ರಿಯಾಂಕಾ ಚೋಪ್ರಾ

    ವಕಾಶ ಸಿಕ್ಕಾಗೆಲ್ಲ ಮಹಿಳಾ ದೌರ್ಜನ್ಯ, ಮಹಿಳಾಪರವಾದ ಮಾತುಗಳನ್ನು ಹೇಳುತ್ತಲೇ ಇರುತ್ತಾರೆ ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra). ಈ ಬಾರಿ ಅವರು ತಮ್ಮ ಬಗ್ಗೆ ತಾವೇ ಹೇಳಿಕೊಂಡಿದ್ದಾರೆ. ತಮಗಾದ ಅವಮಾನವನ್ನು ಭಾವುಕರಾಗಿ ಹಂಚಿಕೊಂಡಿದ್ದಾರೆ. ಸಿನಿಮಾ ರಂಗಕ್ಕೆ ಬಂದಾಗ ತಮ್ಮನ್ನು ಯಾರಿಗೆ ಹೋಲಿಸಿ ಮಾತನಾಡುತ್ತಿದ್ದರು ಎನ್ನುವುದರ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

    ಬಾಡಿ ಶೇಮಿಂಗ್ (Body Shaming) ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಸಿಲೆಬ್ರಿಟಿಗಳು ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ತಮಗಾದ ಕಹಿ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇದೀಗ ಆ ಸಾಲಿಗೆ ಪ್ರಿಯಾಂಕಾ ಚೋಪ್ರಾ ಕೂಡ ಸೇರಿಕೊಂಡಿದ್ದಾರೆ. ದಕ್ಷಿಣ ಏಷ್ಯಾಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿರುವ ಅವರು, ತಮ್ಮನ್ನು ಸಿನಿಮಾ ರಂಗಕ್ಕೆ ಬಂದಾಗ ಕರಿಬೆಕ್ಕಿಗೆ ಹೋಲಿಸುತ್ತಿದ್ದರು ಎಂದು ತುಸು ಭಾವುಕರಾಗಿಯೇ ಹೇಳಿದ್ದಾರೆ. ತಮ್ಮ ಮೈಬಣ್ಣದ ಬಗ್ಗೆ ಮಾತನಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

    ಸಿನಿಮಾ ರಂಗಕ್ಕೆ ಬಂದಾಗ ತುಸು ದಪ್ಪ ಇದ್ದೆ. ನನ್ನ ಮೈಬಣ್ಣ ಕೂಡ ಕಪ್ಪು. ಅವೆರಡನ್ನೂ ಅಸ್ತ್ರವಾಗಿ ಬಳಸಿಕೊಂಡು ನನ್ನನ್ನು ಹೀಯಾಳಿಸುತ್ತಿದ್ದರು. ಪ್ರಾಣಿಗಳಿಗೆ ಹೋಲಿಸಿ ತಮಾಷೆ ಮಾಡುತ್ತಿದ್ದರು. ನನಗೆ ತುಂಬಾ ನೋವಾಗುತ್ತಿತ್ತು. ಎಷ್ಟೋ ಬಾರಿ ಅತ್ತಿದ್ದೇನೆ. ಆ ಸಂಕಟವನ್ನು ದಾಟಿಕೊಳ್ಳಲು ನಾನು ಏನೆಲ್ಲ ಮಾಡಬೇಕಾಯಿತು ಎಂದು ಅವರು ಮಾತನಾಡಿದ್ದಾರೆ.

  • `ಸಿಟಾಡೆಲ್’ ಫಸ್ಟ್ ಲುಕ್ ಔಟ್: ಆ್ಯಕ್ಷನ್ ಅವತಾರದಲ್ಲಿ ಪ್ರಿಯಾಂಕಾ ಚೋಪ್ರಾ

    `ಸಿಟಾಡೆಲ್’ ಫಸ್ಟ್ ಲುಕ್ ಔಟ್: ಆ್ಯಕ್ಷನ್ ಅವತಾರದಲ್ಲಿ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಸದ್ಯ `ಸಿಟಾಡೆಲ್’  (Citadel) ಚಿತ್ರದ ಫಸ್ಟ್ ಲುಕ್‌ನಿಂದ ಪ್ರಿಯಾಂಕಾ ಗಮನ ಸೆಳೆಯುತ್ತಿದ್ದಾರೆ. ಆ್ಯಕ್ಷನ್ ಲುಕ್‌ನಲ್ಲಿ ಪಿಗ್ಗಿ ಮಿಂಚಿದ್ದಾರೆ.

    ಪತಿ ನಿಕ್ ಜೋನಸ್ ಮತ್ತು ಮುದ್ದು ಮಗಳ ಪಾಲನೆಯಲ್ಲಿ ಬ್ಯುಸಿಯಿರುವ ನಟಿ ಪ್ರಿಯಾಂಕಾ ಈಗ ಹಾಲಿವುಡ್ (Hollywood) ಚಿತ್ರಗಳ (Films) ಮೂಲಕ ಛಾಪು ಮೂಡಿಸಲು ರೆಡಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳಿಗೆ ಬೈ ಹೇಳಿ, ಇಂಗ್ಲೀಷ್ ಸಿನಿಮಾಗಳತ್ತ ನಟಿ ಮುಖ ಮಾಡಿದ್ದಾರೆ.

     

    View this post on Instagram

     

    A post shared by Priyanka (@priyankachopra)

    ಸದ್ಯ ಪ್ರಿಯಾಂಕಾ ಚೋಪ್ರಾ ನಟನೆಯ ನಟನೆಯ `ಸಿಟಾಡೆಲ್’ ಫಸ್ಟ್ ಲುಕ್ ರಿವೀಲ್ ಆಗಿದೆ. ಟ್ರೈಲರ್‌ನ ಸಣ್ಣ ತುಣುಕನ್ನ ನಟಿ ಹಂಚಿಕೊಂಡಿದ್ದಾರೆ. ಸಿಟಾಡೆಲ್‌ನಲ್ಲಿ ಪ್ರಿಯಾಂಕಾ ಖಡಕ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಅವತಾರದಲ್ಲಿರುವ ಪಿಗ್ಗಿ ನ್ಯೂ ಲುಕ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇನ್ನೂ ಸದ್ಯದಲ್ಲೇ ಚಿತ್ರದ ಟ್ರೈಲರ್ ಕೂಡ ರಿವೀಲ್ ಆಗಲಿದೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಹುಡುಗಿಗೆ ಹೊಡೆದ ಲವರ್‌ಗೆ ಜಾಡಿಸಿದ ನಟ ನಾಗಶೌರ್ಯ

     

    View this post on Instagram

     

    A post shared by Priyanka (@priyankachopra)

    ಸಿಟಾಡೆಲ್ ವೆಬ್ ಸರಣಿಯನ್ನು ಭಾರತದಲ್ಲೂ ನಿರ್ಮಾಣ ಮಾಡಲಾಗುತ್ತಿದೆ. ಇಂಡಿಯನ್ ವರ್ಷನ್‌ನಲ್ಲಿ ಸಮಂತಾ (Samantha) ಅವರು ನಟಿಸುತ್ತಿದ್ದಾರೆ. ಅವರು ಕೂಡ ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.