Tag: ಪ್ರಿಯಾಂಕಾ ಚೋಪ್ರಾ

  • ಎರಡು ವರ್ಷಗಳ ನಂತರ ಪಿ.ಟಿ.ಉಷಾ ಪಾತ್ರಕ್ಕೆ ರೆಡಿಯಾದ್ರು ಈ ನಟಿ

    ಎರಡು ವರ್ಷಗಳ ನಂತರ ಪಿ.ಟಿ.ಉಷಾ ಪಾತ್ರಕ್ಕೆ ರೆಡಿಯಾದ್ರು ಈ ನಟಿ

    ಮುಂಬೈ: ಚಿನ್ನದ ಹುಡುಗಿ, ಅಥ್ಲೆಟಿಕ್ಸ್ ಪ್ರತಿಭೆ ಪಿ.ಟಿ.ಉಷಾ ಜೀವನಾಧರಿತ ಸಿನಿಮಾ ಬಾಲಿವುಡ್ ಬರಲು ರೆಡಿಯಾಗುತ್ತಿದೆ. ಎರಡು ವರ್ಷಗಳ ಬಳಿಕ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ.

    ಪ್ರಿಯಾಂಕಾ ಸಿನಿಮಾದಲ್ಲಿ ನಟಿಸಲು ಈ ಹಿಂದೆಯೇ ಒಪ್ಪಿಕೊಂಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಹಾಲಿವುಡ್ ನಲ್ಲಿ ಬ್ಯೂಸಿ ಆಗಿದ್ದರು. ಸದ್ಯ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ. ಉಷಾರ ಪಾತ್ರ ನಿರ್ವಹಿಸಲು ಪ್ರಿಯಾಂಕಾ ತರಬೇತಿ ಮತ್ತು ವಿಶೇಷ ತಯಾರಿಗಳನ್ನು ನಡೆಸಬೇಕಾಗಿದ್ದು, ಅದಕ್ಕಾಗಿ ಒಂದು ವರ್ಷ ಸಮಯ ಬೇಕಾಗುತ್ತದೆ ಎಂದು ಸಿನಿಮಾದ ನಿರ್ದೇಶಕಿ ರೇವತಿ ಹೇಳಿದ್ದಾರೆ.

    ಸಿನಿಮಾ ಒಟ್ಟು ಮೂರು ಹಂತಗಳಲ್ಲಿ ಮೂಡಿ ಬರಲಿದೆ. ಒಂದು ಉಷಾರ ಬಾಲ್ಯ, ಕ್ರೀಡಾಪಟು ಮತ್ತು ತಾಯಿಯಾಗಿ ಕೋಚ್ ಆಗಿರುವುದನ್ನು ತೋರಿಸಲಿದೆ. ಹಳೆಯದನ್ನು ಮತ್ತೊಮ್ಮೆ ತೆರೆಯ ಮೇಲೆ ತರಬೇಕಾಗಿರುವುದರಿಂದ ಸಿನಿಮಾದಲ್ಲಿ ಸಾಕಷ್ಟು ಗ್ರಾಫಿಕ್ಸ್ ಬಳಕೆಯಾಗಲಿದೆ. ಸಿನಿಮಾ ಅಂದಾಜು 100 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಲಿದೆ.

    ಇನ್ನೂ ಸಿನಿಮಾದಲ್ಲಿ ಮೂರು ವಿಶೇಷ ಪಾತ್ರಗಳು ಸಹ ಬರಲಿದೆ. ಮೊದಲನೇಯದು ಉಷಾರ ತಂದೆ, ಎರಡನೇಯದು ಕೋಚ್ ಮತ್ತು ಮೂರನೇಯ ಪಾತ್ರದಲ್ಲಿ ಪತಿಯನ್ನು ಸಿನಿಮಾದಲ್ಲಿ ನೋಡಬಹುದಾಗಿದೆ. ಆದರೆ ಈ ವಿಶೇಷ ಪಾತ್ರಗಳನ್ನು ಯಾವ ನಟರೂ ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

    ಪಿ.ಟಿ.ಉಷಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕಾರಣ ಮಲೆಯಾಳಂ, ಹಿಂದಿ, ಇಂಗ್ಲಿಷ್, ರಷ್ಯೀಯನ್ ಚೈನೀಸ್ ಭಾಷೆಗಳಲ್ಲಿ ಮೂಡಿಬರಲಿದೆ. ಈ ಮೊದಲು ಬಾಕ್ಸರ್ ಮೇರಿಕೋಮ್ ಜೀವನಾಧರಿತ ಸಿನಿಮಾದಲ್ಲಿ ಪ್ರಿಯಾಂಕಾ ಎಲ್ಲರಿಂದಲೂ ಭೇಷ್ ಅಂತಾ ಅನ್ನಿಸಿಕೊಂಡಿದ್ದರು. ಉಷಾರ ಪಾತ್ರವನ್ನು ಮಾಡಲು ನಟಿ ಸೋನಂ ಕಪೂರ್ ಕೂಡ ಒಲವು ತೋರಿಸಿದ್ದರು.

    ಇತ್ತೀಚಿಗೆ ಬಾಲಿವುಡ್‍ನಲ್ಲಿ ಜೀವನಾಧರಿತ ಕಥೆ ಆಧಾರಿತ ಸಿನಿಮಾಗಳು ಸೆಟ್ಟೇರುತ್ತಿವೆ. ಕೆಲವು ಸಿನಿಮಾಗಳು ಬಿಡುಗಡೆಗೊಂಡು ಅಭೂತಪೂರ್ವ ಯಶಸ್ಸನ್ನು ಪಡೆದುಕೊಂಡಿವೆ. ಹೀಗಾಗಿ ಒಂದರ ನಂತರ ಜೀವನಾಧರಿತ ಸಿನಿಮಾಗಳು ಬಾಲಿವುಡ್ ನಲ್ಲಿ ಬರುತ್ತಿವೆ.

  • ಬ್ಲ್ಯಾಕ್ ಸ್ವಿಮ್ ಸೂಟ್‍ ನಲ್ಲಿ ಗೆಳತಿಯರೊಂದಿಗೆ ಪ್ರಿಯಾಂಕಾ ಮಸ್ತಿ-ವಿಡಿಯೋ ನೋಡಿ

    ಬ್ಲ್ಯಾಕ್ ಸ್ವಿಮ್ ಸೂಟ್‍ ನಲ್ಲಿ ಗೆಳತಿಯರೊಂದಿಗೆ ಪ್ರಿಯಾಂಕಾ ಮಸ್ತಿ-ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಸ್ವಿಮ್ ಸೂಟ್ ಧರಿಸಿ ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡಿರುವ ಫೋಟೋ ಮತ್ತು ಕೆಲ ವಿಡಿಯೋಗಳನ್ನು ತಮ್ಮ ಇನ್ಸ್‍ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಸದಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರುವ ಪ್ರಿಯಾಂಕಾ, ಸೆಪ್ಟಂಬರ್ 30 ರಂದು ತಮ್ಮ ಗೆಳತಿಯರೊಂದಿಗೆ ಕೆಲ ಸಮಯವನ್ನು ಕಳೆದಿದ್ದಾರೆ. ಬಾಲಿವುಡ್ ನಿಂದ ದೂರವಾದ ನಂತರ ಹೆಚ್ಚಾಗಿ ಹಾಲಿವುಡ್ ಸಿನಿಮಾಗಳಲ್ಲಿ ಪ್ರಿಯಾಂಕಾ ಕಾಣಿಸಕೊಳ್ಳುತ್ತಿದ್ದಾರೆ. ಸದ್ಯ ಅಮೆರಿಕದ ಟಿವಿ ಶೋ `ಕ್ವಾಂಟಿಕೋ’ದಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಕಾರ್ಯಕ್ರಮದ ಶೂಟಿಂಗ್ ಸಹ ಆರಂಭಗೊಳ್ಳಲಿದೆ.

    ಕ್ವಾಂಟಿಕೋ ಶೋ ಟೀಮ್ ನಲ್ಲಿ ಪ್ರಿಯಾಂಕಾ ಸೇರಿಕೊಂಡಿದ್ದಾರೆ. ಶೂಟಿಂಗ್ ಆರಂಭಕ್ಕೂ ಮುನ್ನ ಟೀಮ್ ಜೊತೆಯಲ್ಲಿರುವ ತನ್ನ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    https://www.instagram.com/p/BZnpHwMgAfw/?taken-by=priyankachopra

    https://www.instagram.com/p/BZnIOBNAA9T/?taken-by=priyankachopra

    https://www.instagram.com/p/BZm44SrgMRZ/?taken-by=priyankachopra

    https://www.instagram.com/p/BZnLt0ghbfl/?taken-by=jazmasri

    https://www.instagram.com/p/BZoFhVQB6oK/?taken-by=jazmasri

  • ಟಿವಿ ಮೂಲಕ ಅತಿ ಹೆಚ್ಚು ಆದಾಯ: ವಿಶ್ವದಲ್ಲೇ 8 ನೇ ಸ್ಥಾನ ಪಡೆದ ಪಿಗ್ಗಿ

    ಟಿವಿ ಮೂಲಕ ಅತಿ ಹೆಚ್ಚು ಆದಾಯ: ವಿಶ್ವದಲ್ಲೇ 8 ನೇ ಸ್ಥಾನ ಪಡೆದ ಪಿಗ್ಗಿ

    ಮುಂಬೈ: ಫೋರ್ಬ್ಸ್ ಇತ್ತೀಚೆಗೆ ವಿಶ್ವದಲ್ಲಿ ಅತಿ ಹೆಚ್ಚು ವಾರ್ಷಿಕ ಆದಾಯ ಗಳಿಸುವ ಟಾಪ್ ಟೆನ್ ನಟ-ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ 8 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಜೂನ್ 1, 2016 ರಿಂದ ಜೂನ್ 1, 2017 ರವರೆಗೆ ಯಾರು ವಿಶ್ವದಲ್ಲಿ ವಾರ್ಷಿಕವಾಗಿ ಅತಿ ಹೆಚ್ಚು ಸಂಭಾವನೆಯ ಪಡೆಯುವ ಟಿವಿ ನಟಿಯರ ಪಟ್ಟಿಯನ್ನು ಫೋಬ್ರ್ಸ್ ಮಂಗಳವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸೋಫಿಯಾ ವರ್ಗರಾ ಮೊದಲ ಸ್ಥಾನ ಪಡೆದಿದ್ದಾರೆ. ಇವರು ಸತತವಾಗಿ ಆರು ವರ್ಷಗಳಿಂದ ಮೊದಲನೇ ಸ್ಥಾನದಲ್ಲಿದ್ದಾರೆ. ವಾರ್ಷಿಕವಾಗಿ ಸುಮಾರು 272 ಕೋಟಿ ರೂ. (41.5 ಮಿಲಿಯನ್ ಡಾಲರ್) ಆದಾಯವನ್ನು ಗಳಿಸುತ್ತಾರೆ. ನಟಿ ಪ್ರಿಯಾಂಕಾ ಚೋಪ್ರಾ 8 ನೇ ಸ್ಥಾನದಲ್ಲಿದ್ದು, ವಾರ್ಷಿಕವಾಗಿ ಅಂದಾಜು 65.65 ಕೋಟಿ ರೂ. (10 ಮಿಲಿಯನ್ ಡಾಲರ್) ಆದಾಯವನ್ನು ಗಳಿಸುತ್ತಾರೆ.

    ಪ್ರಿಯಾಂಕಾ 2016 ರಲ್ಲಿ ಮೊದಲ ಬಾರಿಗೆ ಫೋರ್ಬ್ಸ್  ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅಮೆರಿಕನ್ ಬ್ರಾಡ್‍ಕಾಸ್ಟಿಂಗ್ ಕಂಪೆನಿ ನಡೆಸುವ ಕ್ವಾಂಟಿಕೋ ಸರಣಿಯಲ್ಲಿ ಅಭಿನಯಿಸಿದ್ದು, 2017 ರಲ್ಲಿ ಎರಡನೇಯ ಆವೃತ್ತಿಯಲ್ಲೂ ನಟಿಸಿದ್ದಾರೆ. ಜೊತೆಗೆ `ಬೇ ವಾಚ್’ ಸಿನಿಮಾದಲ್ಲಿ ಪಿಗ್ಗಿ ನಟಿಸಿದ್ದಾರೆ. 2016 ರಲ್ಲಿ ಟಿವಿ ಮೂಲಕ ಸುಮಾರು 72.30 ಕೋಟಿ ರೂ. (11 ಮಿಲಿಯಲ್ ಡಾಲರ್) ಸಂಭಾವನೆ ಗಳಿಸಿದ್ದರು.

    ಯಾರಿಗೆ ಎಷ್ಟು ಆದಾಯ

    1. ಸೋಫಿಯಾ ವರ್ಗರಾ –  272.55 ಕೋಟಿ ರೂ. (41.5 ಮಿಲಿಯನ್ ಡಾಲರ್)

    2. ಕ್ಯಾಲೀ ಕುಕೊಕೊ-  170.89 ಕೋಟಿ ರೂ.(26 ಮಿಲಿಯನ್ ಡಾಲರ್)

    3. ಎಲ್ಲೆನ್ ಪೊಂಪೆಯೊ –  85.43 ಕೋಟಿ ರೂ. (13 ಮಿಲಿಯನ್ ಡಾಲರ್)

    3. ಮಿಮಡಿ ಕಾಲಿಂಗ್ –  85.43 ಕೋಟಿ ರೂ. (13 ಮಿಲಿಯನ್ ಡಾಲರ್)

    5. ಮಾರಿಸ್ಕಾ ಹರ್ಗಿಟಾಯ್-  82.13 ಕೋಟಿ ರೂ. (12.5 ಮಿಲಿಯನ್ ಡಾಲರ್)

    6. ಜೂಲಿ ಬೋವೆನ್ –  78.86 ಕೋಟಿ ರೂ. (12 ಮಿಲಿಯನ್ ಡಾಲರ್)

    7. ಕೆರ್ರಿ ವಾಷಿಂಗ್ಟನ್ –  72.30 ಕೋಟಿ ರೂ.( 11 ಮಿಲಿಯನ್ ಡಾಲರ್)

    8. ಪ್ರಿಯಾಂಕಾ ಚೋಪ್ರಾ-  65.65 ಕೋಟಿ ರೂ. (10 ಮಿಲಿಯನ್ ಡಾಲರ್)

    9. ಹೌಸ್ ಆಫ್ ಕಾಡ್ರ್ಸ್ ರಾಬಿನ್ ರೈಟ್ –  59.13 ಕೋಟಿ ರೂ. (9 ಮಿಲಿಯನ್ ಡಾಲರ್)

    10. ಪಾಲೆ ಪೆರೆಟ್ಟೆ – 55.85 ಕೋಟಿ ರೂ. (8.5 ಮಿಲಿಯನ್ ಡಾಲರ್)

  • ನನಗೂ ಒಬ್ಬ ಬಾಯ್ ಫ್ರೆಂಡ್ ಇದ್ದಾರೆ: ಪ್ರಿಯಾಂಕಾ ಚೋಪ್ರಾ

    ನನಗೂ ಒಬ್ಬ ಬಾಯ್ ಫ್ರೆಂಡ್ ಇದ್ದಾರೆ: ಪ್ರಿಯಾಂಕಾ ಚೋಪ್ರಾ

    ಮುಂಬೈ: ಬಾಲಿವುಡ್‍ನ ಬಹು ಬೇಡಿಕೆಯ ನಟಿ ಹಾಗೂ  ಮಲ್ಟಿಟಾಸ್ಕ್ ಗಳನ್ನು ಪ್ರೀತಿಸುವ ಬೆಡಗಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ನನಗೂ ಒಬ್ಬ ಬಾಯ್ ಫ್ರೆಂಡ್ ಇದಾರೆ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

    ಇತ್ತೀಚಿಗೆ ಯುನಿಸೆಫ್ ರಾಯಭಾರಿಯಾಗಿ ಆಗಮಿಸಿದ್ದ ಅವರು ಸಿರಿಯಾದಿಂದ ನಿರಾಶ್ರಿತ ಮಕ್ಕಳನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ವಿಶ್ವದಲ್ಲಿ ಶಾಂತಿ ಕಾಪಾಡುವುದು ಬಹು ಮುಖ್ಯ, ಯುವಕರು ಇಂದು ಸ್ಪಷ್ಟ ಹಾಗೂ ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಮಕ್ಕಳಿಗೆ ನೀವು ಬಿಟ್ಟುಹೋಗುವ ಜಗತ್ತು ಯಾವುದು ಗೊತ್ತಾ? ಈ ಜಗತ್ತಿನಲ್ಲಿ ಏನು ನಡೆಯುತ್ತಿದೆ ನೋಡಿ. ಮನುಷ್ಯ ತನ್ನ ಧರ್ಮ, ಚರ್ಮದ ಬಣ್ಣಕ್ಕಾಗಿ ಪರಸ್ಪರ ಹೊಡೆದಾಡಿ ಕೊಳ್ಳುತ್ತಿದ್ದಾರೆ. ಇದರಿಂದ ಮುಗ್ಧ ಮಕ್ಕಳು, ಜನರು ಬಲಿಯಾಗುತ್ತಿದ್ದಾರೆ ಎಂದು ಜಗತ್ತಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದರು.

    ನಾನು ಶಾಂತಿ ಮತ್ತು ಸಂಭಾಷಣೆಯಿಂದ ವಿಶ್ವದ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಂಬಿದ್ದೇನೆ. ನಾನು ಯುದ್ಧವನ್ನು ನಂಬುವುದಿಲ್ಲ. ಆದರೆ ನಾನು ಹೋರಾಡುತ್ತೇನೆ ಸರಿಯಾದುದಕ್ಕೆ ಮಾತ್ರ ಹೋರಾಡುತ್ತೇನೆ ಎಂದು ಪ್ರಿಯಾಂಕಾ ಹೇಳಿದರು.

    ವೈಯಕ್ತಿಕ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ತಮ್ಮ ಗೆಳೆಯನ ಬಗ್ಗೆ ಕೇಳಿದಾಗ ದೊಡ್ಡ ಸುಳಿವನ್ನೇ ಬಿಚ್ಚಿಟ್ಟಿದ್ದಾರೆ. ಆದರೆ ಯಾರು ಆ ಅದೃಷ್ಟಶಾಲಿ ಎಂಬುದನ್ನು ಮಾತ್ರ ತಿಳಿಸಿಲ್ಲ. ಈ ಮಾಹಿತಿ ಪಡೆದ ಅಭಿಮಾನಿಗಳು ಯಾರು ಅದೃಷ್ಟಶಾಲಿ ಎಂದು ಗೆಸ್ ಮಾಡುತ್ತಾ ಚಿಂತಿಸುತ್ತಿದ್ದಾರೆ.

    ಪ್ರಸ್ತುತ ಚೋಪ್ರಾ ಭಾರತ ಹಾಗೂ ಅಮೆರಿಕದಲ್ಲಿ ಅನೇಕ ಶೂಟಿಂಗ್ ನಡುವೆ ನಿರಂತರವಾಗಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಹಲವು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ.

  • 2017ನೇ ಸಾಲಿನ ಜಗತ್ತಿನ 2ನೇ ಅತ್ಯಂತ ಸುಂದರ ಮಹಿಳೆ ಪ್ರಿಯಾಂಕಾ ಚೋಪ್ರಾ

    2017ನೇ ಸಾಲಿನ ಜಗತ್ತಿನ 2ನೇ ಅತ್ಯಂತ ಸುಂದರ ಮಹಿಳೆ ಪ್ರಿಯಾಂಕಾ ಚೋಪ್ರಾ

    ನವದೆಹಲಿ: ಕೇವಲ ನಟನೆಯಲ್ಲಿ ಮಾತ್ರವಲ್ಲದೇ ತನ್ನ ಸೌಂದರ್ಯದಿಂದಲೂ ನಟಿ ಪ್ರಿಯಾಂಕಾ ಚೋಪ್ರಾ ಎಲ್ಲರ ಮನಸೆಳೆದಿದ್ದಾರೆ.

    ಹೌದು. 34 ವರ್ಷದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 2017ನೇ ಸಾಲಿನ ಜಗತ್ತಿನ ಎರಡನೇ ಅತ್ಯಂತ ಸುಂದರ ಮಹಿಳೆ ಎಂದು ಲಾಸ್ ಏಂಜಲೀಸ್‍ನ ಬುಝ್‍ನೆಟ್ ಘೋಷಣೆ ಮಾಡಿದೆ.

    ಏಂಜಲೀನಾ ಜೂಲಿ, ಎಮ್ಮ ವಾಟ್ಸಾನ್, ಬ್ಲೇಕ್ ಲೈವ್‍ಲಿ ಹಾಗೂ ಮಿಶೆಲ್ ಒಬಾಮಾ ಇದ್ದರು. ಆದ್ರೆ ಇವರೆಲ್ಲರನ್ನೂ ಹಿಂದಿಕ್ಕಿ ಪ್ರಿಯಾಂಕಾ 2ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಮೊದಲ ಸ್ಥಾನವನ್ನು ಪಾಪ್ ತಾರೆ ಬಿಯೋನ್ಸ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಚೋಪ್ರಾ ಶನಿವಾರ ಟ್ವೀಟ್ ಮಾಡಿದ್ದು, ವೋಟ್ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ರು.

    ಸದ್ಯ ಪ್ರಿಯಾಂಕಾ ಚೋಪ್ರಾ `ಬೇ ವಾಚ್’ ಎಂಬ ಹಾಲಿವುಡ್ ಚಿತ್ರವೊಂದರಲ್ಲಿ ಅಭಿನಯಿಸಿದ್ದು, ಶೀಘ್ರವೇ ಚಿತ್ರ ರಿಲೀಸ್ ಆಗಲಿದೆ. ಸೇತ್ ಗೋರ್ಡನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಡ್ವೇಯ್ನ್ ಜಾನ್ಸನ್, ಝಾಕ್ ಎಫ್ರಾನ್, ಅಲೆಕ್ಸಾಂಡ್ರಾ ದಡ್ಡಾರಿಯೋ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವು ಮಾರ್ಚ್ 26ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.