Tag: ಪ್ರಿಯಾಂಕಾ ಚೋಪ್ರಾ

  • ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಡಿಂಪಲ್ ಬೆಡಗಿ ದೀಪಿಕಾ: ವಿಡಿಯೋ ನೋಡಿ

    ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಡಿಂಪಲ್ ಬೆಡಗಿ ದೀಪಿಕಾ: ವಿಡಿಯೋ ನೋಡಿ

    -ಸ್ಟನ್ನಿಂಗ್ ಲುಕ್‍ನಲ್ಲಿ ದೇಶಿ ಗರ್ಲ್

    ನ್ಯೂಯಾರ್ಕ್: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ‘ಮೆಟ್ ಗಾಲಾ 2019’ ಕಾರ್ಯಕ್ರಮಕ್ಕೆ ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಆಗಮಿಸಿದ್ದಾರೆ.

    ಸೋಮವಾರ ಸಂಜೆ ದೀಪಿಕಾ ‘ಕ್ಯಾಂಪ್: ಇದುವರೆಗೂ ಯಾರು ಮಾಡದ ಫ್ಯಾಶನ್’ ಎಂಬ ಥೀಮ್ ಇಟ್ಟುಕೊಂಡು ಕಾರ್ಯಕ್ರಮಕ್ಕೆ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ 400 ಕಸೂತಿ ತುಣುಕುಗಳೊಂದಿಗೆ ಅಲಂಕರಿಸಲ್ಪಟ್ಟ, ಝಾಕ ಪೊಸೆನ್ ವಿನ್ಯಾಸದ ಗುಲಾಬಿ ಬಣ್ಣದ ಲೋರೆಕ್ಸ್ ಜಾಕ್ವಾರ್ಡ್ ಗೌನ್ ಧರಿಸಿದ್ದರು.

    ದೀಪಿಕಾ ಮೂರನೇ ಬಾರಿಗೆ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಮೊದಲು ಎರಡು ಬಾರಿ ಅವರು ಸಿಂಪಲ್ ಗೌನ್ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಈ ಬಾರಿ ಗುಲಾಬಿ ಬಣ್ಣದ ಗೌನ್‍ನಲ್ಲಿ ದೀಪಿಕಾ ಡಿಸ್ನಿಯ ರಾಜಕುಮಾರಿಯಂತೆ ಕಾಣಿಸುತ್ತಿದ್ದು, ಎಲ್ಲರ ಗಮನ ತನ್ನತ್ತ ಸೆಳೆದುಕೊಂಡರು.

    ಈ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ, ಪಾಪ್ ಸಿಂಗರ್ ನಿಕ್ ಜೋನಸ್ ಜೊತೆ ಆಗಮಿಸಿದ್ದರು. ಪ್ರಿಯಾಂಕಾ ಈ ಕಾರ್ಯಕ್ರಮದಲ್ಲಿ ಸ್ಟನಿಂಗ್ ಲುಕ್‍ನಲ್ಲಿ ಆಗಮಿಸಿದ್ದರು. ಪ್ರಿಯಾಂಕಾ ಚೋಪ್ರಾ ಅವರ ಈ ಲುಕ್ ನೋಡಿ ಭಾರತದ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

  • ಪತಿ ಕಾನ್ಸರ್ಟ್‌ನಲ್ಲಿ ಒಳಉಡುಪು ಎಸೆದ ಅಭಿಮಾನಿ- ಖುಷಿಯಿಂದ ಎತ್ತಿಕೊಂಡು ಹೋದ ಪ್ರಿಯಾಂಕಾ: ವಿಡಿಯೋ

    ಪತಿ ಕಾನ್ಸರ್ಟ್‌ನಲ್ಲಿ ಒಳಉಡುಪು ಎಸೆದ ಅಭಿಮಾನಿ- ಖುಷಿಯಿಂದ ಎತ್ತಿಕೊಂಡು ಹೋದ ಪ್ರಿಯಾಂಕಾ: ವಿಡಿಯೋ

    ವಾಷಿಂಗ್ಟನ್: ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಸ್ ಮ್ಯೂಸಿಕ್ ಕಾನ್ಸರ್ಟ್‍ನಲ್ಲಿ ಮಹಿಳಾ ಅಭಿಮಾನಿಯೊಬ್ಬರು ಒಳುಉಡುಪನ್ನು ಎಸೆದಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಪ್ರಿಯಾಂಕಾ ಚೋಪ್ರಾ ಖುಷಿಯಿಂದ ಅದನ್ನು ಎತ್ತಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗುತ್ತಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ನಿಕ್ ಜೋನಸ್ ತನ್ನ ಸಹೋದರರ ಜೊತೆ ವೇದಿಕೆ ಮೇಲೆ ನಿಂತುಕೊಂಡಿದ್ದಾರೆ. ಪ್ರಿಯಾಂಕಾ, ನಿಕ್ ಅಭಿಮಾನಿಯಾಗಿ ಕಾನ್ಸರ್ಟ್ ಎಂಜಾಯ್ ಮಾಡುತ್ತಿದ್ದರು ಈ ಕಾನ್ಸರ್ಟ್ ಕೊನೆಯಲ್ಲಿ ನಿಕ್ ಜೋನಸ್ ಮೇಲೆ ಅವರ ಮಹಿಳಾ ಅಭಿಮಾನಿ ಒಳಉಡುಪನ್ನು ಎಸೆದಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ಇಷ್ಟು ಜನಪ್ರಿಯರಾಗಿದ್ದಾರೆ ಎಂದು ಆ ಒಳಉಡುಪನ್ನು ಖುಷಿಯಿಂದ ಎತ್ತಿಕೊಂಡು ಅಲ್ಲಿಂದ ಹೋಗಿದ್ದಾರೆ. ಅಲ್ಲದೆ ಆ ವಿಡಿಯೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು.

    ಪ್ರಿಯಾಂಕ ಹಾಗೂ ನಿಕ್ ಜೋಧಪುರದ ಉಮೈದ್ ಭವನದಲ್ಲಿ 2018 ಡಿಸೆಂಬರ್ 1 ಹಾಗೂ 2ರಂದು ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಪ್ರಿಯಾಂಕ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕಾದಲ್ಲಿ ಮಾಡಿಕೊಂಡಿದ್ದರು.

  • ಪ್ರಿಯಾಂಕ-ನಿಕ್ ಡಿವೋರ್ಸ್?

    ಪ್ರಿಯಾಂಕ-ನಿಕ್ ಡಿವೋರ್ಸ್?

    ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಪರಸ್ಪರ ಪ್ರೀತಿಸಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದಾರೆ. ಆದರೆ ಅಷ್ಟರಲ್ಲಿಯೇ ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಪ್ರಿಯಾಂಕ ಮತ್ತು ನಿಕ್ ಒಬ್ಬೊಬ್ಬರನ್ನು ಪ್ರೀತಿಸಿ ಆರು ತಿಂಗಳ ಡೇಟಿಂಗ್‍ನಲ್ಲಿ ಇದ್ದು ಕಳೆದ ವರ್ಷ ಡಿಸೆಂಬರ್ ನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ‘ಓಕೆ’ ಎಂಬ ಮ್ಯಾಗ್‍ಜೀನ್‍ನಲ್ಲಿ ಈಗಾಗಲೇ ಪ್ರಿಯಾಂಕ-ನಿಕ್ ಜೋಡಿ ವಿಚ್ಛೇದನಕ್ಕೆ ಮುಂದಾಗಿದೆ ಎಂದು ವರದಿ ಮಾಡಿದೆ.

    ಈ ವರದಿಯ ಪ್ರಕಾರ ಪ್ರಿಯಾಂಕ ಮತ್ತು ನಿಕ್ ಮಧ್ಯೆ ಸಣ್ಣ ಪುಟ್ಟ ಅಂದರೆ ಕೆಲಸ, ಪಾರ್ಟಿ ಮತ್ತು ಒಟ್ಟಿಗೆ ಸಮಯ ಕಳೆಯುವ ವಿಚಾರಗಳಿಗೂ ಜಗಳ ಮನಸ್ತಾಪ ವಾಗುತ್ತಿದೆಯಂತೆ. ಮದುವೆಗೂ ಮೊದಲು ಪ್ರಿಯಾಂಕ ತುಂಬಾ ಪ್ರೀತಿಯಿಂದ ಇರುತ್ತಿದ್ದು, ಈಗ ತುಂಬಾ ಕೋಪ ಮಾಡಿಕೊಳ್ಳುತ್ತಿದ್ದಾರಂತೆ. ಈ ಹಿನ್ನೆಲೆಯಲ್ಲಿ ನಿಕ್ ಜೋನಸ್ ಕುಟುಂಬದ ಸಂಬಂಧ ಕೂಡ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ.

    ಅಷ್ಟೇ ಅಲ್ಲದೇ ಇವರಿಬ್ಬರ ವಿಚ್ಛೇದನಕ್ಕೆ ಹಣಕಾಸು ವಿಚಾರವೇ ಪ್ರಮುಖ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಆದರೆ ಕುಟುಂಬಸ್ಥರು ಇದೆಲ್ಲಾ ಸುಳ್ಳು ಸುದ್ದಿ. ಇಬ್ಬರು ಪರಸ್ಪರ ಚೆನ್ನಾಗಿದ್ದಾರೆ. ಅವರ ದಾಂಪತ್ಯ ಜೀವನ ಉತ್ತಮವಾಗಿದೆ ಎಂದು ಅವರಿಬ್ಬರ ವಿಚ್ಛೇಧನ ವಿಚಾರವನ್ನು ತಳ್ಳಿಹಾಕಿದೆ.

    https://www.instagram.com/p/Bvh8zQzniPE/?utm_source=ig_embed

    ಇತ್ತೀಚೆಗಷ್ಟೆ ಪ್ರಿಯಾಂಕ ನಿಕ್ ಕುಟುಂಬದ ಜೊತೆ ಮಿಯಾಮಿಯಲ್ಲಿ ಸಂತೋಷದಿಂದ ಕಳೆದಿದ್ದು, ನಿಕ್, ಸೋಫಿ ಟರ್ನರ್, ಜೋ ಜೋನಸ್ ಮತ್ತು ಕೆವಿನ್ ಜೋನಸ್ ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಪತಿಯ ಜೊತೆ ಖುಷಿಯಿಂದಿದ್ದ ಫೋಟೋವನ್ನು ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

    https://www.instagram.com/p/BvmWYxpHDrx/

  • ಶೂಟಿಂಗ್ ಸೆಟ್‍ನಲ್ಲಿ ನಕ್ಕ ‘ಗರ್ಭಿಣಿ’ ಪ್ರಿಯಾಂಕ!

    ಶೂಟಿಂಗ್ ಸೆಟ್‍ನಲ್ಲಿ ನಕ್ಕ ‘ಗರ್ಭಿಣಿ’ ಪ್ರಿಯಾಂಕ!

    ಹೈದರಾಬಾದ್: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಗರ್ಭಿಣಿಯಾಗಿದ್ದಾರೆ ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಫೋಟೋ ಶೂಟ್‍ಗೆ ಪೋಸ್ ಕೊಟ್ಟು ಕೊಟ್ಟು ಪ್ರಿಯಾಂಕಾ ಚೋಪ್ರಾ ಸುಸ್ತಾಗಿದ್ದರು. ಈ ವೇಳೆ ಹೊಟ್ಟೆ ಉಬ್ಬಿದ್ದಂತೆ ನಿಂತಿದ್ದು, ಆಗ ಪ್ರಿಯಾಂಕಾ ಅವರ ಫೋಟೋ ಕ್ಲಿಕ್ ಆಗಿದೆ.

    ಆ ಫೋಟೋದಲ್ಲಿ ಪ್ರಿಯಾಂಕಾ ಅವರ ಹೊಟ್ಟೆ ಹುಬ್ಬಿದಂತೆ ಕಾಣುತ್ತಿತ್ತು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಖತ್ ವೈರಲ್ ಆಗಿ, ಪ್ರಿಯಾಂಕಾ ಅವರು ಗರ್ಭಿಣಿ ಆಗಿರಬಹುದು ಎಂದು ಕೆಲವು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

    ತನ್ನ ಫೋಟೋದ ಬಗ್ಗೆ ಸೆಟ್ ನಲ್ಲಿ ಮಾತನಾಡುವುದನ್ನು ಕೇಳಿ ಸ್ವತಃ ಪ್ರಿಯಾಂಕ ಅವರೇ ನಕ್ಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ತಾಯಿ ಸ್ಪಷ್ಟನೆ?
    ಸಾಮಾಜಿಕ ಜಾಲತಾಣಗಲ್ಲಿ ಸುದ್ದಿ ಹರಡುತ್ತಿದ್ದಂತೆ ನಾನೇ ನನ್ನ ಮಗಳಿಗೆ ಫೋನ್ ಮಾಡಿ ಕೇಳಿದೆ. ಆಗ ತುಂಬಾ ಸುಸ್ತಾಗಿತ್ತು. ಅದಕ್ಕೆ ಆ ರೀತಿ ನಿಂತುಕೊಂಡಿದ್ದೆ ಎಂದು ತಿಳಿಸಿದ್ದಾಳೆ. ಪ್ರಿಯಾಂಕ ಗರ್ಭಿಣಿ ಆಗಿಲ್ಲ. ಸದ್ಯಕ್ಕೆ ಪ್ರಿಯಾಂಕಾ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಿದ್ದಾಳೆ. ಸದ್ಯಕ್ಕೆ ಮಗು ಬೇಡ ಎಂದು ದಂಪತಿ ನಿರ್ಧರಿಸಿಕೊಂಡಿದ್ದಾರೆ ಎಂದು ಪ್ರಿಯಾಂಕ ತಾಯಿ ಮಧು ಚೋಪ್ರಾ ಸ್ಪಷ್ಟನೆ ಕೊಟ್ಟಿದ್ದಾರೆ.

    ಪ್ರಿಯಾಂಕಾ ಚೋಪ್ರಾ 2018 ಡಿಸೆಂಬರ್ ನಲ್ಲಿ ಅಮೆರಿಕಾದ ಪಾಪ್ ಗಾಯಕ ನಿಕ್ ಜೋನ್ಸ್ ಅವರನ್ನು ಮದುವೆ ಆಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ತಮ್ಮ ವೃತ್ತಿ ಜೀವನದಲ್ಲಿ ಪ್ರಿಯಾಂಕ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯಾಂಕಾಗೆ ಟಾಂಗ್ ಕೊಟ್ಟ ಡಿಜಿಪಿ ರೂಪಾ – ಅಭಿಮಾನಿಗಳಿಂದ ಅಪಾರ ಮೆಚ್ಚುಗೆ

    ಪ್ರಿಯಾಂಕಾಗೆ ಟಾಂಗ್ ಕೊಟ್ಟ ಡಿಜಿಪಿ ರೂಪಾ – ಅಭಿಮಾನಿಗಳಿಂದ ಅಪಾರ ಮೆಚ್ಚುಗೆ

    ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದರು. ಅವರ ಟ್ವೀಟ್ ಗೆ ಡಿಜಿಪಿ ಡಿ. ರೂಪಾ ಅವರು ಗರಂ ಆಗಿ ಉತ್ತರಿಸಿದ್ದರು. ಆದರೆ ಈಗ ಇವರ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ರೂಪಾ ಅವರ ಅಭಿಮಾನಿಗಳು ಅಪಾರ ಮೆಚ್ಚಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಫೆ.14 ರಂದು ನಡೆದಿದ್ದ ಉಗ್ರರ ದಾಳಿಗೆ ಅಂದು ನಟಿ ಪ್ರಿಯಾಂಕಾ ಚೋಪ್ರಾ ಅವರು, “ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿ ನಿಜಕ್ಕೂ ಶಾಕ್ ಆಗಿದೆ. ಆದರೆ ದ್ವೇಷಿಸುವುದು ಉತ್ತರವಲ್ಲ. ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಹಾಗೂ ಗಾಯಾಳು ಯೋಧರಿಗೆ ಶಕ್ತಿ ನೀಡಲಿ” ಎಂದು ಟ್ವೀಟ್ ಮಾಡಿದ್ದರು.

    ಪ್ರಿಯಾಂಕಾ ಅವರು ಟ್ವೀಟ್‍ಗೆ ಸಾಮಾಜಿಕ ಜಾಲತಾಣಗಲ್ಲಿ ಅಪಾರ ಟೀಕೆ ವ್ಯಕ್ತವಾಗುತ್ತಿತ್ತು. ಈ ಟ್ವೀಟ್ ಗೆ ಡಿಜಿಪಿ ರೂಪಾ ಅವರು, “ಯೋಧರ ಮೇಲಿನ ದಾಳಿ ಕೇವಲ ಪ್ರೀತಿ-ದ್ವೇಷದ ಕಥೆಯಲ್ಲ. ಇದೊಂದು ರಾಷ್ಟ್ರದ ಮೇಲಿನ ದಾಳಿಯಾಗಿದೆ. ರಾಷ್ಟ್ರದ ಹಕ್ಕಿನ ಅಧಿಕಾರ ವರ್ಸಸ್ ಶಾಂತಿಯುತ ದೇಶವನ್ನು ವಿಘಟನೆಗೊಳಿಸಲು ಅಕ್ರಮ ಶಕ್ತಿಗಳು ನಡೆಸುವ ದಾಳಿಯಾಗಿದೆ. ಇದೊಂದು ಅಧಿಕಾರದ ಸಮೀಕರಣ” ಎಂದು ರೀಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಡಿಜಿಪಿ ರೂಪಾ ಅವರು ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದುವರೆಗೂ 16.4 ಸಾವಿರ ಮಂದಿ ಲೈಕ್ಸ್ ಮಾಡಿದ್ದಾರೆ. ಇನ್ನೂ ರೂಪಾ ಅವರ ಟ್ವೀಟ್ ಗೆ 7 ಸಾವಿರ ನೆಟ್ಟಿಗರು ರೀಟ್ವೀಟ್ ಮಾಡುವ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಇಲ್ಲಿಯವರೆಗೆ ಕಲಾವಿದರ ಟ್ವೀಟ್ ಗಳನ್ನು ಖಂಡಿಸಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ಆದರೆ ಈ ಬಾರಿ ಐಪಿಎಸ್ ಅಧಿಕಾರಿಯೇ ಪ್ರಿಯಾಂಕಾ ಅವರನ್ನು ಟ್ರೋಲ್ ಮಾಡಿ ದೇಶಪ್ರೇಮ ತೋರಿದಿದ್ದಾರೆ ಎಂದು ಹೇಳಿ ಜನ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊದಲ ಕಿಸ್ ನೆನಪು ಮಾಡಿಕೊಂಡು ನಕ್ಕ ನಿಕ್!

    ಮೊದಲ ಕಿಸ್ ನೆನಪು ಮಾಡಿಕೊಂಡು ನಕ್ಕ ನಿಕ್!

    -ಪಂಚತಾರಾ ಹೋಟೆಲ್ ಬಾಲ್ಕನಿಯಲ್ಲಿ ಮೊದಲ ಚುಂಬನ

    ಮುಂಬೈ: ಕಳೆದ ವರ್ಷ ಅದ್ಧೂರಿಯಾಗಿ ಮದುವೆಯಾಗಿದ್ದ ಬಾಲಿವುಡ್‍ನ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾದ ಗಾಯಕ ನಿಕ್ ಜೋನ್ಸ್ ಒಂದಲ್ಲ ಒಂದು ಸುದ್ದಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಿಕ್ ಲವ್ ಸ್ಟೋರಿ ಬಗ್ಗೆ ಹೇಳುತ್ತ, ಮೊದಲ ಕಿಸ್ ನೆನಸಿಕೊಂಡು ಮುಗುಳ್ನಕ್ಕಿದ್ದು ಸದ್ಯ ಎಲ್ಲೆಡೆ ಸುದ್ದಿಯಾಗಿದೆ.

    ಇತ್ತೀಚೆಗೆ ನಿಕ್ ಜೋನ್ಸ್ ಹಾಗೂ ಪ್ರಿಯಾಂಕ ಚೋಪ್ರಾ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಇಬ್ಬರಿಗೂ ಆಟವೊಂದನ್ನು ಆಡಿಸಲಾಗಿತ್ತು. ಈ ಆಟದ ವಿಶೇಷ ಏನಪ್ಪಾ ಅಂದ್ರೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಬಿಟೌನ್ ಕ್ಯೂಟ್ ಕಪಲ್ಸ್ ಬಿಳಿ ಬೋರ್ಡ್ ಮೇಲೆ ಉತ್ತರ ಬರೆಯಬೇಕಿತ್ತು. ಹೀಗೆ ಆಟವಾಡುತ್ತ, ಪ್ರಿಯಾಂಕ ಚೋಪ್ರಾ ನಮ್ಮ ಮೊದಲ ಕಿಸ್ ಬಗ್ಗೆ ನೆನಪಿದೆಯಾ ಎಂದು ಪ್ರಶ್ನಿಸಿದಾಗ ನಿಕ್ ಮುಗುಳ್ನಗುತ್ತ ರೊಮ್ಯಾಂಟಿಕ್ ಆಗಿ ಉತ್ತರ ನೀಡಿದರು.

    ಮುದ್ದಿನ ಪತ್ನಿ ಪ್ರಶ್ನೆ ಕೇಳಿದ ತಕ್ಷಣವೇ ತಡಮಾಡದೆ ನಿಕ್ ಬೋರ್ಡ್ ಮೇಲೆ ತಾವು ಮೊದಲ ಬಾರಿಗೆ ಕಿಸ್ ಮಾಡಿದ ಸ್ಥಳವನ್ನು ಬರೆದರು. ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಮೊದಲ ಬಾರಿಗೆ ಕ್ಯಾಲಿಫೋರ್ನಿಯಾದ 5 ಸ್ಟಾರ್ ಹೋಟೆಲ್‍ನಲ್ಲಿ ಕಿಸ್ ಮಾಡಿದ್ದರಂತೆ. ಹೌದು, ಕ್ಯಾಲಿಫೋರ್ನಿಯಾದ ಬೆವರ್ಲಿ ಬೆಟ್ಟದ ಮೇಲಿರುವ ಹೋಟೆಲ್‍ನ ಬಾಲ್ಕನಿಯಲ್ಲಿ ಕ್ಯೂಟ್ ಕಪಲ್ಸ್ ಮೊದಲ ಬಾರಿ ಚುಂಬಿಸಿದ್ದರು. ಆ ರೊಮ್ಯಾಂಟಿಕ್ ಕ್ಷಣವನ್ನು ನಿಕ್ ನೆನಪಿಸಿಕೊಂಡರು.

    ಕಳೆದ ವರ್ಷ ಡಿಸೆಂಬರ್ 1 ಮತ್ತು 2ರಂದು ಪ್ರಿಯಾಂಕಾ ಹಾಗೂ ನಿಕ್ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಅಲ್ಲದೆ ನವ ದಂಪತಿ ದೆಹಲಿ ಹಾಗೂ ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆಯನ್ನೂ ಕೂಡ ಮಾಡಕೊಂಡಿದ್ರು. ಇವರ ಈ ಸಂಭ್ರಮದಲ್ಲಿ ಬಾಲಿವುಡ್ ತಾರೆಯರು ಹಾಗೂ ಗಣ್ಯಾತಿ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮದ್ವೆ ದಿನ ಅಮ್ಮ ಮುನಿಸಿಕೊಂಡಿದ್ರು: ಪ್ರಿಯಾಂಕ ಚೋಪ್ರಾ

    ಮದ್ವೆ ದಿನ ಅಮ್ಮ ಮುನಿಸಿಕೊಂಡಿದ್ರು: ಪ್ರಿಯಾಂಕ ಚೋಪ್ರಾ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ 2018 ಡಿಸೆಂಬರ್ ನಲ್ಲಿ ತಮ್ಮ ಗೆಳೆಯ ನಿಕ್ ಜೋನಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಆದ 2 ತಿಂಗಳ ಬಳಿಕ ನನ್ನ ತಾಯಿ ಮದುವೆಯಲ್ಲಿ ಬೇಸರದಿಂದ ಇದ್ದರು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

    ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ತಮ್ಮ ಮದುವೆಯ ಅನುಭವವನ್ನು ಹೇಳಿಕೊಂಡಿದ್ದಾರೆ. ಭಾರತದ ಮದುವೆಯಲ್ಲಿ ಸಾವಿರಾರೂ ಮಂದಿ ಸೇರುತ್ತಾರೆ. ಆದರೆ ನನ್ನ ಮದುವೆಯಲ್ಲಿ ಕುಟುಂಬದ ಆಪ್ತರಿಗೆ ಮಾತ್ರ ನಾನು ಆಹ್ವಾನಿಸಲಾಗಿತ್ತು. ನನ್ನ ಹಾಗೂ ನಿಕ್ ಇಬ್ಬರ ಕುಟುಂಬದವರು ಸೇರಿ ಕೇವಲ 200 ಮಂದಿ ಮದುವೆಯಲ್ಲಿ ಭಾಗಿಯಾಗಿದ್ದರು. ನನ್ನ ಮದುವೆಯಲ್ಲಿ ಕೇವಲ ಆಪ್ತರು ಮಾತ್ರ ಆಗಮಿಸಬೇಕು ಎಂದು ನಾನು ನಿರ್ಧರಿಸಿದ್ದರಿಂದ ಅಮ್ಮ ಕೋಪಗೊಂಡಿದ್ದರು ಎಂದು ಪ್ರಿಯಾಂಕ ಎಂದು ಹೇಳಿಕೊಂಡಿದ್ದಾರೆ.

    ಮದುವೆಗೆ ಕೇವಲ 200 ಮಂದಿಗೆ ಆಹ್ವಾನ ಮಾಡಿದ್ದು, ನನ್ನ ತಾಯಿಗೆ ಇಷ್ಟವಿರಲಿಲ್ಲ. ತನ್ನ ಮಗಳ ಮದುವೆಗೆ ಎಲ್ಲರನ್ನು ಕರೆಯಲು ಸಾಧ್ಯವಾಗಲಿಲ್ಲ ಎಂಬ ಬೇಸರ ನನ್ನ ತಾಯಿಗಿದೆ. ನನ್ನ ಮದುವೆ ಸಂದರ್ಭದಲ್ಲಿ ಅವರು ನನ್ನ ಮೇಲೆ ಬೇಸರಗೊಂಡಿದ್ದರು. ಅಲ್ಲದೇ 1,50,000 ಮಂದಿಗೆ ನಾನು ಮತ್ತೊಂದು ಪಾರ್ಟಿಯನ್ನು ಆಯೋಜಿಸಬೇಕೇ, ನನ್ನ ಮಗಳ ಮದುವೆಗೆ ನನ್ನ ಜಿವೆಲರ್ಸ್, ನನ್ನ ಹೇರ್ ಡ್ರೆಸ್ಸರ್ ನ ನಾನು ಹೇಗೆ ಆಹ್ವಾನಿಸದೇ ಇರಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಪ್ರಿಯಾಂಕ ತಿಳಿಸಿದ್ದಾರೆ.

    ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಗಾಯಕ ನಿಕ್ ಜೋಧಪುರದ ಉಮೈದ್ ಭವನದಲ್ಲಿ 2018 ಡಿಸೆಂಬರ್ 1 ಹಾಗೂ 2ರಂದು ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಪ್ರಿಯಾಂಕ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕಾದಲ್ಲಿ ಮಾಡಿಕೊಂಡಿದ್ದರು. ದೆಹಲಿಯಲ್ಲಿ ನಡೆದ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಆಗಮಿಸಿ ನವದಂಪತಿಗೆ ಶುಭಕೋರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಗುರುವಾರದ ಆರತಕ್ಷತೆಗೆ ಬಾಲಿವುಡ್ ನಟಿಗೆ ಮೊದಲ ಆಮಂತ್ರಣ ಪತ್ರಿಕೆ ಕೊಟ್ಟ ಪ್ರಿಯಾಂಕ

    ಗುರುವಾರದ ಆರತಕ್ಷತೆಗೆ ಬಾಲಿವುಡ್ ನಟಿಗೆ ಮೊದಲ ಆಮಂತ್ರಣ ಪತ್ರಿಕೆ ಕೊಟ್ಟ ಪ್ರಿಯಾಂಕ

    ಮುಂಬೈ: ಇಂಟರ್ ನ್ಯಾಷನಲ್ ಜೋಡಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಜೋಧ್‍ಪುರ್ ನಲ್ಲಿ ಮದುವೆಯಾದ ಬಳಿಕ ಬುಧವಾರ ಮುಂಬೈನಲ್ಲಿ ತಮ್ಮ ಎರಡನೇ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡಿದ್ದಾರೆ.

    ಪ್ರಿಯಾಂಕ ತನ್ನ ಗೆಳೆಯ ನಿಕ್ ಜೋನಸ್ ಜೊತೆ ಡಿ.1 ಹಾಗೂ 2ರಂದು ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯದ ಪ್ರಕಾರ ಜೋಧ್‍ಪುರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಡಿಸೆಂಬರ್ 4ರಂದು ನವದೆಹಲಿಯಲ್ಲಿ ಅದ್ಧೂರಿಯಾಗಿ ಮೊದಲ ಆರತಕ್ಷತೆ ನಡೆದಿತ್ತು.

    ಪ್ರಿಯಾಂಕಾ ಮತ್ತು ನಿಕ್ ತಮ್ಮ ಸ್ನೇಹಿತರು, ಕುಟುಂಬಸ್ಥರು ಹಾಗೂ ಸಂಬಂಧಿಕರಿಗಾಗಿ ಬುಧವಾರ ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಲಾಗಿತ್ತು. ಈ ಆರತಕ್ಷತೆಯಲ್ಲಿ ಪ್ರಿಯಾಂಕಾ ನೇವಿ ಬ್ಲೂ ಲೆಹೆಂಗಾ ಧರಿಸಿದರೆ, ನಿಕ್ ಗ್ರೇ ಬಣ್ಣದ ಬ್ಲೇಜರ್ ಧರಿಸಿ ಮಿಂಚಿದರು.

    ತಮ್ಮ ಆರತಕ್ಷತೆಯಲ್ಲಿ ಭಾಗಿಯಾಗಿದ್ದ ಎಲ್ಲ ಗಣ್ಯರಿಗೂ ಪ್ರಿಯಾಂಕ ಹಾಗೂ ನಿಕ್ ಧನ್ಯವಾದ ತಿಳಿಸಿದರು. ಇಂದು ಮತ್ತೆ ಪ್ರಿಯಾಂಕಾ ತಮ್ಮ ಹಿಂದಿ ಚಿತ್ರರಂಗದ ಸ್ನೇಹಿತರಿಗೆ ಮುಂಬೈನಲ್ಲಿ ಮತ್ತೊಂದು ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಪ್ರಿಯಾಂಕಾ ಈ ಆರತಕ್ಷತೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ನಟಿ ದೀಪಿಕಾ ಪಡುಕೋಣೆಗೆ ನೀಡಿದ್ದಾರೆ.

    ಡಿ. 4ರಂದು ದೆಹಲಿಯಲ್ಲಿ ನಡೆದ ಮೊದಲ ಆರತಕ್ಷತೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎರಡು ಸಂಪ್ರದಾಯದಂತೆ ಮದ್ವೆಯಾಗ್ತಾರಂತೆ ಪ್ರಿಯಾಂಕಾ, ನಿಕ್ ಜೋಡಿ

    ಎರಡು ಸಂಪ್ರದಾಯದಂತೆ ಮದ್ವೆಯಾಗ್ತಾರಂತೆ ಪ್ರಿಯಾಂಕಾ, ನಿಕ್ ಜೋಡಿ

    ಮುಂಬೈ: ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿಂಗರ್ ನಿಕ್ ಜೋನಸ್ ಜೊತೆ ನಿಶ್ಚಿತಾರ್ಥ ನಡೆದು ತಿಂಗಳು ಕಳೆದಿದೆ. ಈಗ ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿರುವ ಪೀಸಿ, ತಮ್ಮ ವಿವಾಹವನ್ನ ಎರಡು ಸಂಪ್ರದಾಯದಂತೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

    ಬಾಲಿವುಡ್‍ನ ಫೇವೆರೆಟ್ ಕಪಲ್ ಆಗಿರುವ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಇದೇ ನವೆಂಬರ್ 14 ಮತ್ತು 15 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಪೀಸಿ-ನಿಕ್ ಜೋಡಿಯೂ ಕೂಡ ತಮ್ಮ ಮದುವೆ ತಯಾರಿಯನ್ನ ಭರ್ಜರಿಯಾಗಿ ನಡೆಸುತ್ತಿದ್ದಾರೆ.

    ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ ವಿವಾಹವು ಇದೇ ತಿಂಗಳಲ್ಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಇವರು 3 ದಿನದ ವಿವಾಹ ಸಮಾರಂಭವನ್ನು ಏರ್ಪಡಿಸಿದ್ದು, ನವೆಂಬರ್ 30ರಿಂದ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ ಎನ್ನಲಾಗಿದೆ.

    ಮೂಲಗಳ ಪ್ರಕಾರ ಇಬ್ಬರೂ ಪರಸ್ಪರ ಧಾರ್ಮಿಕ ಭಾವನೆಗಳಿಗೆ ಗೌರವ ಕೊಡುವ ನಿಟ್ಟಿನಲ್ಲಿ ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಲು ನಿಶ್ಚಯಿಸಿದ್ದಾರೆ ಎಂದು ಹೇಳಲಾಗಿದೆ. ಹಿಂದೂ ಸಂಪ್ರದಾಯದಂತೆ ಡಿಸೆಂಬರ್ 2ರಂದು ರಾಜಸ್ಥಾನದ ಜೋಧ್ಪುರದಲ್ಲಿ ಹಮ್ಮಿಕೊಂಡಿದ್ದು, ಅಲ್ಲಿನ ಉಮೀದ್ ಭವನ್ ಪ್ಯಾಲೇಸ್ ಹೋಟೆಲ್ ನಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು 1500 ರಿಂದ 2000 ಮಂದಿ ಅತಿಥಿಗಳು ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನ್ಯೂಯಾರ್ಕ್ ರಸ್ತೆಯಲ್ಲಿ ಪ್ರಿಯಾಂಕ ಚೋಪ್ರಾ ಮನಬಂದಂತೆ ಡ್ಯಾನ್ಸ್: ವಿಡಿಯೋ ನೋಡಿ

    ನ್ಯೂಯಾರ್ಕ್ ರಸ್ತೆಯಲ್ಲಿ ಪ್ರಿಯಾಂಕ ಚೋಪ್ರಾ ಮನಬಂದಂತೆ ಡ್ಯಾನ್ಸ್: ವಿಡಿಯೋ ನೋಡಿ

    ನ್ಯೂಯಾಕ್: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನ್ಯೂಯಾರ್ಕ್ ರಸ್ತೆಯಲ್ಲಿ ಮನಬಂದಂತೆ ಡ್ಯಾನ್ಸ್ ಮಾಡಿದ್ದಾರೆ.

    ಪ್ರಿಯಾಂಕ ಹಾಲಿವುಡ್‍ನ ‘ಇಸಂಟ್ ಇಟ್ ರೊಮ್ಯಾಂಟಿಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಭಾಗವಾಗಿ ನ್ಯೂಯಾರ್ಕ್ ನ ಬೀದಿಯಲ್ಲಿ ತನ್ನ ಸಹ-ಕಲಾವಿದರಾದ ಲಿಯಮ್ ಹಮ್ಸ್ ವರ್ತ್, ರೆಬೆಲ್ ವಿಲ್ಸನ್ ಹಾಗೂ ಸಹ ನಟರ ಜೊತೆ ನ್ಯೂಯಾರ್ಕ್ ನ ಕಾರ್ನರ್ 40 ಸ್ಟ್ರೀಟ್ ಹಾಗೂ ಮನ್ಹತನ್ ನ ಪಾರ್ಕ್ ಆವೆನ್ಯೂ ರಸ್ತೆಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ.

    ಇಸ್‍ಂಟ್ ಇಟ್ ರೋಮ್ಯಾಂಟಿಕ್ ಚಿತ್ರ ಹಾಸ್ಯಪ್ರಧಾನ ಚಿತ್ರವಾಗಿದ್ದು, ಈ ಚಿತ್ರದಲ್ಲಿ ರೆಬೆಲ್ ವಿಲ್ಸನ್, ಆಡಮ್ ಡೀವೈನ್, ಲಿಯಮ್ ಹಮ್ಸ್ ವರ್ತ್, ಹಾಗೂ ಬೆಟ್ಟಿ ಗಿಲ್ಪಿನ್ ಕಾಣಿಸಿಕೊಳ್ಳಲಿದ್ದಾರೆ. ಟಾಡ್ ಸ್ಟ್ರಾಸ್- ಶುಲ್ಸನ್ ನಿರ್ದೇಶನ ಮಾಡುತ್ತಿದ್ದು, ಎರಿನ್ ಕಾರ್ಡಿಲ್ಲೊ ಚಿತ್ರಕಥೆಯನ್ನು ಬರೆದಿದ್ದಾರೆ.

    ಪ್ರೀತಿಯನ್ನು ನಂಬದೇ ಇರದ ಯುವತಿಯ ಜೀವನದಲ್ಲಿ ರೊಮ್ಯಾಂಟಿಕ್ ಕಾಮಿಡಿಗಳನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಇಸಾಬೆಲ್ಲಾ ಪಾತ್ರ ನಿರ್ವಹಿಸುತ್ತಿದ್ದು, ಯೋಗ ರಾಯಭಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

    ಸದ್ಯ ಪ್ರಿಯಾಂಕ ತಮ್ಮ ಚಿತ್ರತಂಡದ ಜೊತೆಯಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ, “ಈಗ ಇಲ್ಲಿ ಒಂದು ಫೋಟೋ ಇದೆ. ನಿಮ್ಮ ಜೊತೆ ಶೂಟಿಂಗ್ ಮಾಡಿದ್ದು ಸಾಕಷ್ಟು ಖುಷಿ ನೀಡಿದೆ” ಎಂದು ಬರೆದುಕೊಂಡಿದ್ದಾರೆ.

    ಪ್ರಿಯಾಂಕ ಡ್ಯಾನ್ಸ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಿಯಾಂಕ ಗುಲಾಬಿ ಬಣ್ಣದ ಸಿಲ್ಟ್ ಡ್ರೆಸ್ ಧರಿಸಿದರೆ, ಲಿಯಾಮ್ ಕಪ್ಪು-ಬಿಳುಪಿನ ಬ್ಲೇಜರ್ ಧರಿಸಿದ್ದಾರೆ. ರೆಬೆಲ್ ವಿಲ್ಸನ್ ಕೆಂಪು ಬಣ್ಣದ ಸ್ಕರ್ಟ್ ಸೂಟ್‍ನಲ್ಲಿ ಕಾಣಿಸಿಕೊಂಡಿದ್ದಾರೆ.