Tag: ಪ್ರಿಯಾಂಕಾ ಚೋಪ್ರಾ

  • ನಾನು ಕಪಟಿಯಲ್ಲ ದೇಶಭಕ್ತೆ- ಪಾಕ್ ಮಹಿಳೆಗೆ ಪ್ರಿಯಾಂಕಾ ತಿರುಗೇಟು

    ನಾನು ಕಪಟಿಯಲ್ಲ ದೇಶಭಕ್ತೆ- ಪಾಕ್ ಮಹಿಳೆಗೆ ಪ್ರಿಯಾಂಕಾ ತಿರುಗೇಟು

    ಲಾಸ್ ಎಂಜಲೀಸ್: ಪಾಕಿಸ್ತಾನದ ಮಹಿಳೆಯೊಬ್ಬರು ನಟಿ ಪ್ರಿಯಾಂಕಾ ಚೋಪ್ರಾರ ಜೈ ಹಿಂದ್ ಟ್ವೀಟ್ ಬಗ್ಗೆ ಪ್ರಶ್ನಿಸಿ, ಕಪಟಿ ಎಂದು ಕಿಡಿಕಾರಿದ್ದರು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ನಾನು ಕಪಟಿಯಲ್ಲಿ ದೇಶಭಕ್ತೆ ಎಂದು ತಿರುಗೇಟು ನೀಡಿದ್ದಾರೆ.

    ಶನಿವಾರದಂದು ಲಾಸ್ ಎಂಜಲೀಸ್‍ನಲ್ಲಿ ನಡೆದ ಬ್ಯೂಟಿಕಾನ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕೂತು ಪ್ರಿಯಾಂಕಾ ಜನರೊಂದಿಗೆ ಸಂವಾದ ಮಾಡುತ್ತಿದ್ದ ವೇಳೆ ಪಾಕಿಸ್ತಾನಿ ಮಹಿಳೆಯೊಬ್ಬರು ಅವರ ವಿರುದ್ಧ ವಾಗ್ದಾಳಿ ನಡೆಸಿದರು. ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿ ನೀವು ಭಾರತ ಪಾಕ್ ಮೇಲೆ ದಾಳಿ ನಡೆಸಿದಾಗ ‘ಜೈ ಹಿಂದ್ ಇಂಡಿಯನ್ ಆಮ್ರ್ಡ್ ಫೋರ್ಸ್’ ಎಂದು ಟ್ವೀಟ್ ಮಾಡಿದ್ದೀರಿ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಗಳ ನಡುವೆ ಶಾಂತಿಯನ್ನು ಕಾಪಾಡುವ ಬದಲು ಪಾಕಿಸ್ತಾನದ ಮೇಲೆ ನಡೆದ ಪರಮಾಣು ಯುದ್ಧಕ್ಕೆ ಪೋತ್ಸಾಹ ನೀಡಿದ್ದೀರಿ. ನಮ್ಮಂತ ಲಕ್ಷಾಂತರ ಮಂದಿ ಪಾಕಿಸ್ತಾನಿಯರು ನಿಮ್ಮ ಕೆಲಸಕ್ಕೆ ಪ್ರೋತ್ಸಾಹಿಸಿದ್ದರು. ಆದರೆ ನೀವು ಹೀಗೆ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿ ಹರಿಹಾಯ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ನನಗೆ ಸಾಕಷ್ಟು ಮಂದಿ ಪಾಕಿಸ್ತಾನಿ ಸ್ನೇಹಿತರು ಇದ್ದಾರೆ. ಆದರೆ ನಾನು ಭಾರತದವಳು. ಯುದ್ಧ ನಿಜಕ್ಕೂ ನನಗೆ ಇಷ್ಟವಾದ ವಿಷಯವಲ್ಲ ಆದರೆ ನಾನು ದೇಶಭಕ್ತೆ. ನನ್ನನ್ನು ಪ್ರೀತಿಸುವ ಜನರ ಭಾವನೆಗಳಿಗೆ ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದರು. ಹಾಗೆಯೇ ನನ್ನ ಪ್ರಕಾರ ನಾವೆಲ್ಲರು ಒಂದು ರೀತಿಯ ಮಧ್ಯಮ ನೆಲವನ್ನು ಹೊಂದಿದ್ದೇವೆ. ನೀವು ಬಹುಶಃ ಹಾಗೆ ತಿಳಿದಿರಬಹುದು. ನೀವು ನನ್ನ ಬಳಿ ಬಂದು ದಯವಿಟ್ಟು ಕೂಗಬೇಡಿ. ನಾವೆಲ್ಲರು ಇಲ್ಲಿ ಪ್ರೀತಿ ಸಂದೇಶ ಸಾರಲು ಸೇರಿದ್ದೇವೆ ಎಂದು ಪಾಕ್ ಮಹಿಳೆಗೆ ತಿರುಗೇಟು ನೀಡಿದರು.

    ಜೈಷ್ ಉಗ್ರರು ಫೆ. 14ರಂದು ಪುಲ್ವಾಮದಲ್ಲಿ ಭಾರತೀಯ ಸಿಆರ್‌ಪಿಎಫ್ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಫೆ. 26ರಂದು ಪಾಕಿಸ್ತಾನದ ಜೈಷ್ ಉಗ್ರ ಸಂಘಟನೆಯ ತರಬೇತಿ ನೆಲಗಳ ಮೇಲೆ ಭಾರತ ಏರ್‌ಸ್ಟ್ರೈಕ್  ನಡೆಸಿತ್ತು. ಹೀಗಾಗಿ ಅಂದು ಪ್ರಿಯಾಂಕಾ ‘ಜೈ ಹಿಂದ್ ಇಂಡಿಯನ್ ಆಮ್ರ್ಡ್ ಫೋರ್ಸ್’ ಎಂದು ಬರೆದು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಭಾರತೀಯರು ಮೆಚ್ಚುಗೆ ಸೂಚಿಸಿದ್ದರು.

  • ಸ್ವಿಮ್ ಸೂಟಿನಲ್ಲಿ ಪ್ರಿಯಾಂಕಾ ಹಾಟ್ ಲುಕ್

    ಸ್ವಿಮ್ ಸೂಟಿನಲ್ಲಿ ಪ್ರಿಯಾಂಕಾ ಹಾಟ್ ಲುಕ್

    ಫ್ಲೋರಿಡಾ: ಬಾಲಿವುಡ್ ದೇಸಿ ಗರ್ಲ್, ನಟಿ ಪ್ರಿಯಾಂಕಾ ಚೋಪ್ರಾ ಅವರು ತಾವು ಧರಿಸುವ ಉಡುಪು, ಫೋಟೋಶೂಟ್, ಪ್ರವಾಸ ಹೀಗೆ ತಮ್ಮ ಜೀವನ ಶೈಲಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಪ್ರಿಯಾಂಕಾ ಅವರು ಸ್ವಿಮ್ ಸೂಟಿನಲ್ಲಿ ಹಾಟಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

    ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿದ್ದು, ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಪ್ರಿಯಾಂಕಾ ಮಿಯಾಮಿ ಸಿಟಿಯಲ್ಲಿದ್ದು, ಪತಿ ನಿಕ್ ಜೋನಸ್ ಸಹೋದರನ ಪತ್ನಿಯಾದ ಸೋಫಿ ಟರ್ನರ್ ಹಾಗೂ ಆಕೆಯ ಗೆಳತಿಯರ ಜೊತೆಗೆ ಅಲ್ಲಿನ ಸ್ವಿಮ್ಮಿಂಗ್ ಪೂಲ್‍ಗೆ ಹೋಗಿದ್ದಾರೆ.

    https://www.instagram.com/p/B0uNY0JF-zo/

    ಪ್ರಿಯಾಂಕಾ ಅವರು ಮೆರೂನ್ ಸ್ವಿಮ್ ಸೂಟ್ ಹಾಕಿಕೊಂಡಿದ್ದು, ಹಾಟಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪ್ರಿಯಾಂಕಾ ಅವರ ಫೋಟೋಗಳನ್ನ ಕ್ಲಿಕ್ಕಿಸಿಕೊಂಡಿದ್ದು, ಇದೀಗ ಆ ಫೋಟೋಗಳನ್ನು ಪ್ರಿಯಾಂಕಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಕಿನಿ ತೊಟ್ಟ ಪ್ರಿಯಾಂಕಾ ಅವರ ಹಾಟ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಇತ್ತೀಚಿಗಷ್ಟೇ ಪ್ರಿಯಾಂಕಾ ಚೋಪ್ರಾ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಬರೋಬ್ಬರಿ 3.5 ಲಕ್ಷ ರೂ. ಬೆಲೆಯ ಕೇಕ್ ಕಟ್ ಮಾಡಿದ್ದರು. ಪ್ರೀತಿಯ ಪತ್ನಿಗಾಗಿ ಪತಿ ನಿಕ್ ಈ ಕೇಕ್ ಆರ್ಡರ್ ಮಾಡಿದ್ದು, ಅದನ್ನು ತಯಾರಿಸಲು ಸುಮಾರು 24 ಗಂಟೆಗಳು ತೆಗೆದುಕೊಳ್ಳಲಾಗಿತ್ತು. ಕೇಕನ್ನು ಕೆಂಪು ಮತ್ತು ಗೋಲ್ಡನ್ ಕಾಂಬಿನೇಷನ್‍ನ್ನಲ್ಲೇ ತಯಾರಿಸಲಾಗಿತ್ತು. ಯಾಕೆಂದರೆ ಹುಟ್ಟುಹಬ್ಬದ ದಿನ ಪ್ರಿಯಾಂಕಾ ಅವರು ಕೂಡ ಅದೇ ಬಣ್ಣದ ಡ್ರೆಸ್ ಧರಿಸಿದ್ದರು.

    https://www.instagram.com/p/B0trV8CDVPH/

  • ಹುಟ್ಟುಹಬ್ಬಕ್ಕೆ ಪ್ರಿಯಾಂಕಾ ಕತ್ತರಿಸಿದ ಕೇಕ್ ಬೆಲೆ ಬರೋಬ್ಬರಿ 3.5 ಲಕ್ಷ

    ಹುಟ್ಟುಹಬ್ಬಕ್ಕೆ ಪ್ರಿಯಾಂಕಾ ಕತ್ತರಿಸಿದ ಕೇಕ್ ಬೆಲೆ ಬರೋಬ್ಬರಿ 3.5 ಲಕ್ಷ

    ಮುಂಬೈ: ಇತ್ತೀಚಿಗಷ್ಟೇ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಕೊಂಡಿದ್ದಾರೆ. ಈ ಬಾರಿ ಹುಟ್ಟುಹಬ್ಬಕ್ಕೆ ಅವರು ಕತ್ತರಿಸಿದ ಕೇಕ್ ಬೆಲೆ ಬರೋಬ್ಬರಿ 3.5 ಲಕ್ಷ ರೂ. ಎಂಬುದು ತಿಳಿದುಬಂದಿದೆ.

    ಒಂದು ಕೇಕ್ ಬೆಲೆ ಇಷ್ಟೊಂದು ದುಬಾರಿನಾ ಎಂದು ಅಚ್ಚರಿ ಆಗೋದು ಸಹಜ. ಜುಲೈ 18ರಂದು ಮಿಯಾಮಿಯಲ್ಲಿ ಯಾಚ್ ನಲ್ಲಿ ಪ್ರಿಯಾಂಕಾ ಅವರು ಪತಿ ನಿಕ್ ಹಾಗೂ ಕುಟುಂಬಸ್ಥರೊಮದಿಗೆ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ನಿಕ್ ಜೋನಸ್‍ರನ್ನು ಮದುವೆಯಾದ ಬಳಿಕ ಇದು ಪ್ರಿಯಾಂಕಾ ಆಚರಿಸಿಕೊಂಡ ಮೊದಲ ಹುಟ್ಟುಹಬ್ಬವಾಗಿದೆ.

    ಸದಾ ವೇಷ ಭೂಷಣ, ಫೋಟೋಶೂಟ್, ಪ್ರವಾಸ ಹೀಗೆ ತಮ್ಮ ಜೀವನಶೈಲಿಯಿಂದ ಪಿಗ್ಗಿ ಸುದ್ದಿಯಾಗುತ್ತಿದ್ದರು. ಆದರೆ ಈ ಬಾರಿ ಪ್ರಿಯಾಂಕಾ ಹುಟ್ಟುಹಬ್ಬದ ಕೇಕ್ ಬಾರಿ ಸದ್ದು ಮಾಡುತ್ತಿದೆ. ಹುಟ್ಟುಹಬ್ಬ ಸಂಭ್ರಮದಲ್ಲಿ ಕಡುಕೆಂಪು ಬಣ್ಣದ ಡ್ರೆಸ್‍ನಲ್ಲಿ ಪ್ರಿಯಾಂಕಾ ಮಿಂಚುತ್ತಿದ್ದರು. ಅವರಿಗೆ ಮ್ಯಾಚಿಂಗ್ ಎಂಬಂತೆ ಹುಟ್ಟುಹಬ್ಬದ ಕೇಕ್ ಕೂಡ ಗೋಲ್ಡ್ ಹಾಗೂ ಕೆಂಪು ಬಣ್ಣದ ಕಾಂಬಿನೇಷನ್‍ನಲ್ಲೇ ತಯಾರಿಸಲಾಗಿತ್ತು.

    ಒಟ್ಟು ಐದು ಅಂತಸ್ತಿನ ಕೇಕನ್ನು ಪ್ರಿಯಾಂಕಾ ಕತ್ತರಿಸಿ ಖುಷಿಪಟ್ಟಿದ್ದು, ಇದರ ಬೆಲೆ ಬರೋಬ್ಬರಿ 3.45 ಲಕ್ಷ ರೂಪಾಯಿಯಾಗಿದೆ. ಈ ಬಗ್ಗೆ ಪಿಂಕ್ ವಿಲ್ಲಾ ವರದಿ ಮಾಡಿದ್ದು, ಮಿಯಾಮಿಯ ಡಿವೈನ್ ಡೆಲಿಕೆಸೀಸ್ ಈ ಕೇಕ್ ತಯಾರಿಸಿದ್ದಾರೆ. ಅಲ್ಲದೆ ಇದರೆ ಬೆಲೆ 5 ಸಾವಿರ ಯುಎಸ್ ಡಾಲರ್(ಅಂದಾಜು 3.45 ಲಕ್ಷ ರೂ.) ಎಂದು ತಿಳಿಸಿದೆ.

    ಪ್ರೀತಿಯ ಪತ್ನಿಗಾಗಿ ಪತಿ ನಿಕ್ ಈ ಕೇಕ್ ಆರ್ಡರ್ ಮಾಡಿದ್ದು, ಅದನ್ನು ತಯಾರಿಸಲು ಸುಮಾರು 24 ಗಂಟೆಗಳು ತೆಗೆದುಕೊಳ್ಳಲಾಗಿದೆ ಎಂದು ಡಿವೈನ್ ಡೆಲಿಕೆಸಿಯ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ಕೇಕ್ ಕೆಂಪು ಮತ್ತು ಗೋಲ್ಡನ್ ಕಾಂಬಿನೇಷನ್‍ನ್ನಲ್ಲೇ ತಯಾರಿಸುವಂತೆ ತಿಳಿಸಿದ್ದರು. ಏಕೆಂದರೆ ಹುಟ್ಟುಹಬ್ಬಕ್ಕೆ ಪ್ರಿಯಾಂಕಾ ಕೂಡ ಕೆಂಪು ಬಣ್ಣದ ಡ್ರೆಸ್ ಹಾಕುತ್ತಾರೆ. ಅವರಿಗೆ ಗೋಲ್ಡನ್ ಕಲರ್ ಡಿಟೇಲಿಂಗ್ ಅಂದರೆ ಇಷ್ಟವಾಗುತ್ತೆ ಎಂದು ಸಿಬ್ಬಂದಿಗೆ ನಿಕ್ ತಿಳಿಸಿದ್ದರು ಎಂದು ವರದಿಯಾಗಿದೆ.

    ಈ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಜತೆ ಪತಿ ನಿಕ್, ಅಮ್ಮ ಮಧು ಚೋಪ್ರಾ ಹಾಗೂ ಸಹೋದರಿ ಪರಿಣಿತಿ ಚೋಪ್ರಾ ಸಹ ಕಾಣಿಸಿಕೊಂಡಿದ್ದರು.

  • ಅಸ್ಸಾಂ ರಾಯಭಾರಿಯಾಗಿ ಜನ್ರಿಗೆ ಸಹಾಯ ಮಾಡ್ಬೇಕು, ಪತಿ ಜೊತೆ ರೊಮ್ಯಾನ್ಸ್ ಅಲ್ಲ: ಪ್ರಿಯಾಂಕಾ ಟ್ರೋಲ್

    ಅಸ್ಸಾಂ ರಾಯಭಾರಿಯಾಗಿ ಜನ್ರಿಗೆ ಸಹಾಯ ಮಾಡ್ಬೇಕು, ಪತಿ ಜೊತೆ ರೊಮ್ಯಾನ್ಸ್ ಅಲ್ಲ: ಪ್ರಿಯಾಂಕಾ ಟ್ರೋಲ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪತಿ, ಗಾಯಕ ನಿಕ್ ಜೋನಸ್ ಅವರ ಜೊತೆ ರೊಮ್ಯಾಂಟಿಕ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಇದೀಗ ಟ್ರೋಲ್ ಆಗುತ್ತಿದ್ದಾರೆ.

    ಪ್ರಿಯಾಂಕಾ ತಮ್ಮ ಹುಟ್ಟುಹಬ್ಬವನ್ನು ಮಿಯಾಮಿಯಲ್ಲಿ ಆಚರಿಸಿಕೊಂಡಿದ್ದಾರೆ. ಮಿಯಾಮಿಯಲ್ಲಿ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಅವರು ತಮ್ಮ ಪತಿ ನಿಕ್ ಜೊತೆಯಿರುವ ರೊಮ್ಯಾಂಟಿಕ್ ಫೋಟೋ ಪೋಸ್ಟ್ ಮಾಡಿ ಟ್ರೋಲ್ ಆಗುತ್ತಿದ್ದಾರೆ.

     

    View this post on Instagram

     

    My ????

    A post shared by Priyanka Chopra Jonas (@priyankachopra) on

    ಪ್ರಿಯಾಂಕಾ ನೀವು ಅಸ್ಸಾಂನ ರಾಯಭಾರಿ. ಅಸ್ಸಾಂನ ಜನರು ಈಗ ತೊಂದರೆಯಲ್ಲಿ ಇದ್ದಾರೆ. ಹೀಗಿರುವಾಗ ನೀವು ಬಹಿರಂಗವಾಗಿ ರೊಮ್ಯಾನ್ಸ್ ಮಾಡುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಕೆಲವರು ಕಮೆಂಟ್ ಮಾಡಿ ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಪ್ರಿಯಾಂಕಾ ಅವರ ಉಡುಪು ನೋಡಿ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಅಲ್ಲದೆ ಕೆಲವರು, “ನಿಮಗೆ ಸ್ವಲ್ಪ ಕೂಡ ನಾಚಿಕೆ ಆಗುವುದಿಲ್ವಾ? ಅಸ್ಸಾಂನಲ್ಲಿ ಪ್ರವಾಹ ಬಂದಿದೆ. ಅಸ್ಸಾಂನ ರಾಯಭಾರಿ ಆಗಿ ನೀವು ಅಲ್ಲಿನ ಜನರಿಗೆ ಸಹಾಯ ಮಾಡಬೇಕು. ಅದನ್ನು ಬಿಟ್ಟು ನೀವು ಧೂಮಪಾನ ಮಾಡುತ್ತಾ ಪತಿ ಜೊತೆ ಎಂಜಾಯ್ ಮಾಡುತ್ತಿದ್ದೀರಾ. ನೀವು ಅಸ್ಸಾಂನ ರಾಯಭಾರಿ ಆಗಿರಬಾರದು. ನಿಮ್ಮಗಿಂತ ಒಳ್ಳೆಯವರು ಇಲ್ಲಿ ತುಂಬಾ ಜನ ಇದ್ದಾರೆ ಎಂದು ಕಮೆಂಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಹಿಂದೆ ಪ್ರಿಯಾಂಕಾ ಪತಿ ನಿಕ್, ತಾಯಿ ಮಧು ಚೋಪ್ರಾ ಹಾಗೂ ಆತ್ಮೀಯ ಸ್ನೇಹಿತರ ಜೊತೆಗೆ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಫೋಟೋವನ್ನು ಶೇರ್ ಮಾಡುತ್ತಿರುವ ಟ್ವಿಟ್ಟರಿಗರು ಪ್ರಿಯಾಂಕಾ ಅವರ ಕಾಲೆಳೆದಿದ್ದರು. ಪ್ರಿಯಾಂಕಾ ಸಿಗರೇಟ್ ಸೇದುತ್ತಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡ ನೆಟ್ಟಿಗರು, ದೀಪಾವಳಿಯ ಪಟಾಕಿಯಿಂದ ಹೆಚ್ಚಾಗಿದ್ದ ಅಸ್ತಮಾವನ್ನು ಸಿಗರೇಟ್ ಸೇದುವ ಮೂಲಕ ಗುಣಪಡಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

  • ಪ್ರಿಯಾಂಕಾಳನ್ನು ಸಮುದ್ರಕ್ಕೆ ತಳ್ಳಿದ ಪತಿ ನಿಕ್

    ಪ್ರಿಯಾಂಕಾಳನ್ನು ಸಮುದ್ರಕ್ಕೆ ತಳ್ಳಿದ ಪತಿ ನಿಕ್

    ವಾಷಿಂಗ್ಟನ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಜುಲೈ 18 ರಂದು ತಮ್ಮ 37ನೇ ಹುಟ್ಟಹಬ್ಬವನ್ನು ಫ್ಲೋರಿಡಾದ ಮಿಯಾಮಿಯಲ್ಲಿ ಆಚರಿಸಿದ್ದರು. ಈ ವೇಳೆ ಅವರ ಪತಿ, ಗಾಯಕ ನಿಕ್ ಜೋನಸ್ ಅವರನ್ನು ಸಮುದ್ರಕ್ಕೆ ತಳ್ಳಿದ ಫೋಟೋ ವೈರಲ್ ಆಗುತ್ತಿದೆ.

    ಪ್ರಿಯಾಂಕಾ ತಮ್ಮ ಹುಟ್ಟುಹಬ್ಬವನ್ನು ಪತಿ, ತಾಯಿ, ಸಹೋದರಿ ಪರಿಣಿತಿ ಚೋಪ್ರಾ ಸೇರಿದಂತೆ ಹಲವು ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದರು. ಪ್ರಿಯಾಂಕಾ ಹುಟ್ಟುಹಬ್ಬದ ಫೋಟೋಗಳು ಒಂದೊಂದಾಗಿ ವೈರಲ್ ಆಗುತ್ತಿದ್ದು, ಈಗ ನಿಕ್ ತಮ್ಮ ಪತ್ನಿಯನ್ನು ಸಮುದ್ರಕ್ಕೆ ತಳ್ಳಿದ ಫೋಟೋ ಕೂಡ ವೈರಲ್ ಆಗುತ್ತಿದೆ.

    ನಿಕ್ ಜೋನಸ್ ತಮಾಷೆಗೆ ಎಂದು ತಮ್ಮ ಪತ್ನಿ ಪ್ರಿಯಾಂಕಾರನ್ನು ಸಮುದ್ರಕ್ಕೆ ತಳ್ಳಿದ್ದಾರೆ. ಜುಲೈ 18ರಂದು ಪ್ರಿಯಾಂಕಾ ಅವರ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬ ಮುಗಿದರೂ ಸಹ ಪ್ರಿಯಾಂಕ ತಮ್ಮ ಪತಿ, ಹಾಗೂ ಸ್ನೇಹಿತರ ಜೊತೆ ಮಿಯಾಮಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

    ಈ ಹಿಂದೆ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್, ತಾಯಿ ಮಧು ಚೋಪ್ರಾ ಹಾಗೂ ಆತ್ಮೀಯ ಸ್ನೇಹಿತರ ಜೊತೆಗೆ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಫೋಟೋವನ್ನು ಶೇರ್ ಮಾಡುತ್ತಿರುವ ಟ್ವಿಟ್ಟರಿಗರು ಪ್ರಿಯಾಂಕಾ ಅವರ ಕಾಲೆಳೆದಿದ್ದರು.

    ಪ್ರಿಯಾಂಕಾ ಸಿಗರೇಟ್ ಸೇದುತ್ತಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡ ನೆಟ್ಟಿಗರು, ದೀಪಾವಳಿಯ ಪಟಾಕಿಯಿಂದ ಹೆಚ್ಚಾಗಿದ್ದ ಅಸ್ತಮಾವನ್ನು ಸಿಗರೇಟ್ ಸೇದುವ ಮೂಲಕ ಗುಣಪಡಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

  • ಯಾಚ್‍ನಿಂದ ಸಮುದ್ರದಲ್ಲಿ ಬೀಳ್ತಿದ್ದ ಪ್ರಿಯಾಂಕಾಳನ್ನು ರಕ್ಷಿಸಿದ ನಿಕ್: ವಿಡಿಯೋ ನೋಡಿ

    ಯಾಚ್‍ನಿಂದ ಸಮುದ್ರದಲ್ಲಿ ಬೀಳ್ತಿದ್ದ ಪ್ರಿಯಾಂಕಾಳನ್ನು ರಕ್ಷಿಸಿದ ನಿಕ್: ವಿಡಿಯೋ ನೋಡಿ

    ಪ್ಯಾರೀಸ್: ವಿಹಾರ ನೌಕೆಯಿಂದ ಸಮುದ್ರಕ್ಕೆ ಬೀಳುತ್ತಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರನ್ನು ಅವರ ಪತಿ, ಗಾಯಕ ನಿಕ್ ಜೋನಸ್ ಕಾಪಾಡಿದ್ದಾರೆ. ನಿಕ್ ತಮ್ಮ ಪತ್ನಿ ಪ್ರಿಯಾಂಕಾಳನ್ನು ಕಾಪಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೊತೆ ಅವರ ಸಹೋದರನ ಮದುವೆಯಲ್ಲಿ ಭಾಗವಹಿಸಲು ಪ್ಯಾರೀಸ್‍ಗೆ ಹೋಗಿದ್ದಾರೆ. ಈ ವೇಳೆ ಪ್ರಿಯಾಂಕಾ ಮತ್ತು ನಿಕ್ ವಿಹಾರ ನೌಕೆಯಲ್ಲಿ ಎಂಜಾಯ್ ಮಾಡುತ್ತಿದ್ದರು.

    ವಿಹಾರ ನೌಕೆಯಲ್ಲಿ ಪ್ರಿಯಾಂಕ ತನ್ನ ಪತಿ ನಿಕ್ ಜೊತೆ ಡ್ಯಾನ್ಸ್ ಮಾಡುತ್ತಿದ್ದಾಗ ಬ್ಯಾಲೆನ್ಸ್ ತಪ್ಪಿ ಸಮುದ್ರದಲ್ಲಿ ಬೀಳುತ್ತಿದ್ದರು. ಈಗ ಪತಿ ನಿಕ್ ಜೋನಸ್ ಅವರು ಪ್ರಿಯಾಂಕಾರನ್ನು ಕಾಪಾಡಿದ್ದಾರೆ. ಈ ವೇಳೆ ಪ್ರಿಯಾಂಕಾ ಕೈಯಲ್ಲಿದ್ದ ಗ್ಲಾಸ್ ಸಮುದ್ರದಲ್ಲಿ ಬಿದಿದ್ದೆ. ನಿಕ್ ಕಾಪಾಡಿದ ನಂತರ ಪ್ರಿಯಾಂಕಾ ಅವರನ್ನು ನೋಡಿ ಮುಗಳುನಕ್ಕಿದ್ದಾರೆ.

    ಈ ಪಾರ್ಟಿಯಲ್ಲಿ ಪ್ರಿಯಾಂಕಾ ಥೈ ಹೈ ಸಿಲ್ಟ್ ನ ಮ್ಯಾಕ್ಸಿ ಉಡುಪು ಧರಿಸಿದ್ದರೆ, ನಿಕ್ ಜೀನ್ಸ್ ಜೊತೆ ಕ್ಯಾಶೂಯಲ್ ಶರ್ಟ್ ಧರಿಸಿದ್ದರು. ನಿಕ್ ತನ್ನ ಪತ್ನಿ ಪ್ರಿಯಾಂಕಾರನ್ನು ಕಾಪಾಡಿದ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಪ್ಯಾರೀಸ್‍ನಲ್ಲಿ ತಮ್ಮ ಪತಿ ನಿಕ್ ಜೊತೆ ಡ್ಯಾನ್ಸ್ ಮಾಡುತ್ತಿರುವ ಫೋಟೋವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  • ಪ್ರಿಯಾಂಕ ಚೋಪ್ರಾರನ್ನು ನೋಡಿ ಮೋದಿ ಎಂದ ಜನರು

    ಪ್ರಿಯಾಂಕ ಚೋಪ್ರಾರನ್ನು ನೋಡಿ ಮೋದಿ ಎಂದ ಜನರು

    ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರನ್ನು ನೋಡಿ ಅಲ್ಲಿದ್ದ ಜನರು ಜೋರಾಗಿ ಮೋದಿ ಮೋದಿ ಎಂದು ಕಿರುಚಲು ಶುರು ಮಾಡಿದ್ದಾರೆ.

    ಪ್ರಿಯಾಂಕ ಡೇಟಿಂಗ್ ವೆಬ್‍ಸೈಟ್ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ಕಾರ್ಯಕ್ರಮದಲ್ಲಿ ಅವರು ಸಂಪೂರ್ಣ ಕೇಸರಿ ಬಣ್ಣದ ಉಡುಪು ಧರಿಸಿದರು. ಇದನ್ನು ನೋಡಿದ ಜನರು ಜೋರಾಗಿ ಮೋದಿ ಮೋದಿ ಎಂದು ಕಿರುಚಲು ಶುರು ಮಾಡಿದ್ದಾರೆ.

    ಮುಂಬೈನ ಜೂಹು ತಾರಾ ರೋಡಿನಲ್ಲಿ ಇರುವ ಹೋಟೆಲಿನಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕ ಕೆಲವು ಆಯ್ದ ಪ್ರಭಾವಿ ಮಹಿಳೆಯರ ಜೊತೆ ಡಿನ್ನರ್ ಮಾಡಿದ್ದಾರೆ. ಪ್ರಿಯಾಂಕ ಈ ಡೇಟಿಂಗ್ ವೆಬ್‍ಸೈಟ್‍ನ ನಿರ್ವಹಣೆಯಲ್ಲಿ ಪಾಲುದಾರರಾಗಿ ಆಗಮಿಸಿದ್ದರು.

    ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಮ್ಯಾಗಜಿನ್‍ವೊಂದಕ್ಕೆ ಬ್ಲೌಸ್ ಹಾಕದೇ ಸೀರೆ ಧರಿಸಿ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದರು. ಪ್ರಿಯಾಂಕಾ ಗೋಲ್ಡನ್ ಬಣ್ಣದ ಸೀರೆ ಧರಿಸಿ ತಮ್ಮ ಬೆನ್ನನ್ನು ಎಕ್ಸ್ ಪೋಸ್ ಮಾಡಿದ್ದರು. ಈ ಫೋಟೋ ನೋಡಿ ಜನರು ಪ್ರಿಯಾಂಕ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

  • ಬ್ಲೌಸ್ ಹಾಕದೇ ಸೀರೆ – ಮತ್ತೆ ಪ್ರಿಯಾಂಕ ಚೋಪ್ರಾ ಟ್ರೋಲ್

    ಬ್ಲೌಸ್ ಹಾಕದೇ ಸೀರೆ – ಮತ್ತೆ ಪ್ರಿಯಾಂಕ ಚೋಪ್ರಾ ಟ್ರೋಲ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಉಡುಪಿನ ವಿಷಯಕ್ಕೆ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ಈಗ ಅವರು ಸೀರೆ ಧರಿಸಿ ಫೋಟೋಶೂಟ್ ಮಾಡಿಸಿದ್ದು, ಇದನ್ನು ನೋಡಿದ ಅಭಿಮಾನಿಗಳು ಮತ್ತೆ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಮ್ಯಾಗಜಿನ್‍ವೊಂದಕ್ಕೆ ಫೋಟೋಶೂಟ್ ಮಾಡಿಸಿದ್ದಾರೆ. ಪ್ರಿಯಾಂಕಾ ಬ್ಲೌಸ್ ಹಾಕದೇ ಸೀರೆ ಧರಿಸಿ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಪ್ರಿಯಾಂಕಾ ಗೋಲ್ಡನ್ ಬಣ್ಣದ ಸೀರೆ ಧರಿಸಿ ತಮ್ಮ ಬೆನ್ನನ್ನು ಎಕ್ಸ್ ಪೋಸ್ ಮಾಡಿದ್ದಾರೆ.

    ಈ ಫೋಟೋ ನೋಡಿ ಜನರು ಪ್ರಿಯಾಂಕಾ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಅಲ್ಲದೆ ಪ್ರಿಯಾಂಕಾ ಬ್ಲೌಸ್ ಏಕೆ ಧರಿಸಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಪ್ರಿಯಾಂಕಾ ಫೋಟೋಶೂಟ್ ಜೊತೆಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಿಯಾಂಕಾ ತಮ್ಮ ಬೆನ್ನು ತೋರಿಸುತ್ತಾ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ನೋಡಿ ಜನರು, ನೀವು ನಮ್ಮ ದೇಶದ ಸಂಸ್ಕೃತಿಯನ್ನು ಮರೆಯುತ್ತಿದ್ದೀರಾ? ಎಂದು ಕಮೆಂಟ್ ಮಾಡಿದರೆ ಮತ್ತೊಬ್ಬರು ನೀವು ಸುಂದರವಾಗಿ ಕಾಣುತ್ತಿದ್ದೀರಾ. ಆದರೆ ಸೀರೆ ದೇಹ ಮುಚ್ಚಿಕೊಳ್ಳುವುದಕ್ಕೆ ಇರುವುದು ಎಂದು ಕಮೆಂಟ್ ಮಾಡಿದ್ದಾರೆ.

    ಸೋಮವಾರ ಪ್ರಿಯಾಂಕಾ ತಮ್ಮ ಪತಿ ನಿಕ್ ಜೋನಸ್ ಜೊತೆ `ಚೇಸಿಂಗ್ ಹ್ಯಾಪಿನೆಸ್’ ಪ್ರೀಮಿಯರ್ ಗೆ ಹೋಗಿದ್ದರು. ಈ ಪ್ರೀಮಿಯರ್ ಗೆ ಪ್ರಿಯಾಂಕಾ ಕಪ್ಪು ಬಣ್ಣದ ಥೈ ಹೈ ಸಿಲ್ಟ್ ಪ್ಲಾಗಿಂನ್ ನೆಕ್‍ಲೈನ್ ಡ್ರೆಸ್ ಧರಿಸಿದ್ದರು. ಈ ಲುಕ್ ನೋಡಿದ ಅವರ ಅಭಿಮಾನಿಗಳು ಟ್ರೋಲ್ ಮಾಡಿದ್ದರು.

    ಈ ಹಿಂದೆ ಪ್ರಿಯಾಂಕಾ `ಮೆಟ್ ಗಾಲಾ 2019? ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ. ವೆಚ್ಚದ ಡಿಯೋರ್ ಗೌನ್ ಧರಿಸಿ ಅದಕ್ಕೆ ಬಿಳಿ ಬಣ್ಣದ ಐಬ್ರೋ ಹಾಗೂ ಐಲ್ಯಾಶಸ್ ಮಾಡಿಸಿದ್ದರು. ಪ್ರಿಯಾಂಕಾರ ಈ ಲುಕ್ ನೋಡಿ ಅಭಿಮಾನಿಗಳು ಅವರನ್ನು ಸಾಕಷ್ಟು ಟ್ರೋಲ್ ಹಾಗೂ ಹಲವಾರು ಮೀಮ್ಸ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

  • ಮತ್ತೆ ಡ್ರೆಸ್‍ನಿಂದ ಟ್ರೋಲ್ ಆದ ಪ್ರಿಯಾಂಕಾ ಚೋಪ್ರಾ

    ಮತ್ತೆ ಡ್ರೆಸ್‍ನಿಂದ ಟ್ರೋಲ್ ಆದ ಪ್ರಿಯಾಂಕಾ ಚೋಪ್ರಾ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತೆ ತಾವು ಧರಿಸಿದ ಬಟ್ಟೆಯಿಂದ ಟ್ರೋಲ್ ಆಗುತ್ತಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಸೋಮವಾರ ತಮ್ಮ ಪತಿ ನಿಕ್ ಜೋನಸ್ ಜೊತೆ ‘ಚೇಸಿಂಗ್ ಹ್ಯಾಪಿನೆಸ್’ ವಲ್ರ್ಡ್ ಪ್ರಿಮಿಯರ್ ಗೆ ಹೋಗಿದ್ದರು. ಈ ಪ್ರಿಮಿಯರ್ ಸೋಮವಾರ ಲಾಸ್ ಏಂಜಲೀಸ್‍ನಲ್ಲಿ ಲಾಂಚ್ ಆಗಿದ್ದು, ಇಡೀ ಜೋನಸ್ ಕುಟುಂಬ ಪ್ರಿಮಿಯರ್ ಗೆ ತೆರಳಿತ್ತು. ಈ ವೇಳೆ ಪ್ರಿಯಾಂಕಾ ಧರಿಸಿದ ಉಡುಪಿನಿಂದಾಗಿ ಮತ್ತೆ ಟ್ರೋಲ್ ಆಗುತ್ತಿದ್ದಾರೆ.

    ಪ್ರಿಯಾಂಕಾ ಈ ಪ್ರಿಮಿಯರ್ ಗೆ ಕಪ್ಪು ಬಣ್ಣದ ಥೈ ಹೈ ಸಿಲ್ಟ್ ಪ್ಲಾಗಿಂನ್ ನೆಕ್‍ಲೈನ್ ಡ್ರೆಸ್ ಧರಿಸಿದ್ದರು. ಅಲ್ಲದೆ ಇದಕ್ಕೆ ವಜ್ರದ ಕಿವಿಯೋಲೆ ಹಾಕಿದ್ದರು. ನ್ಯೂಡ್ ಮೇಕಪ್ ಹಾಗೂ ಬ್ರೌನ್ ಐಬ್ರೋ ಮಾಡಿಸಿದ್ದರು. ಈ ಲುಕ್ ಪ್ರಿಯಾಂಕಾ ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.

    ಪ್ರಿಯಾಂಕಾ ಪ್ರೀಮಿಯರ್ ಗೆ ಆಗಮಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಟ್ರೋಲ್ ಮಾಡಲಾಗುತ್ತಿದೆ. ಕೆಲವರು ಪ್ರಿಯಾಂಕಾ ನಿಮ್ಮ ಈ ಉಡುಪು ಚೆನ್ನಾಗಿಲ್ಲ. ಈ ಡ್ರೆಸ್ ಧರಿಸಿ ನೀವು ಸುಂದರವಾಗಿ ಕಾಣಿಸುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

    ಮತ್ತೆ ಕೆಲವರು ಪ್ರಿಯಾಂಕಾ ನಿರಂತರವಾಗಿ ಯಂಗ್ ಕಾಣಲು ಈ ರೀತಿ ಪ್ರಯತ್ನಿಸುತ್ತಾರೆ. ಹಾಗಾಗಿ ಅವರು ಈ ರೀತಿಯ ಉಡುಪುಗಳನ್ನು ಧರಿಸುತ್ತಾರೆ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

    ಪ್ರಿಯಾಂಕಾ `ಮೆಟ್ ಗಾಲಾ 2019′ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ. ವೆಚ್ಚದ ಡಿಯೋರ್ ಗೌನ್ ಧರಿಸಿ ಅದಕ್ಕೆ ಬಿಳಿ ಬಣ್ಣದ ಐಬ್ರೋ ಹಾಗೂ ಐಲ್ಯಾಶಸ್ ಮಾಡಿಸಿದ್ದರು. ಪ್ರಿಯಾಂಕಾ ಅವರ ಈ ಲುಕ್ ನೋಡಿ ಅಭಿಮಾನಿಗಳು ಅವರನ್ನು ಸಾಕಷ್ಟು ಟ್ರೋಲ್ ಹಾಗೂ ಹಲವಾರು ಮೀಮ್ಸ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

  • ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಧರಿಸಿದ ಗೌನ್ ಬೆಲೆ ರಿವೀಲ್

    ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಧರಿಸಿದ ಗೌನ್ ಬೆಲೆ ರಿವೀಲ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಮೆಟ್ ಗಾಲಾ 2019’ ಕಾರ್ಯಕ್ರಮದಲ್ಲಿ ಧರಿಸಿದ್ದ ಗೌನಿನ ಬೆಲೆ ರಿವೀಲ್ ಆಗಿದೆ. ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ. ವೆಚ್ಚದ ಗೌನ್ ಧರಿಸಿದ್ದಾರೆ.

    ಪ್ರಿಯಾಂಕಾ ಮೆಟ್ ಗಾಲಾ ಕಾರ್ಯಕ್ರಮಕ್ಕೆ ಡಿಯೋರ್ ವಿನ್ಯಾಸದ ಡ್ರಾಮಾಟಿಕ್ ಡಿಯೋರ್ ಗೌನ್ ಧರಿಸಿ ಅದಕ್ಕೆ ಬಿಳಿ ಬಣ್ಣದ ಐಬ್ರೋ ಹಾಗೂ ಐಲ್ಯಾಶಸ್ ಮಾಡಿಸಿದ್ದರು.

    ಪ್ರಿಯಾಂಕಾ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ.ಯ ಗೌನ್ ಧರಿಸಿದ್ದರು. 1500 ಗಂಟೆಗಳ ಕಾಲ ಶ್ರಮವಹಿಸಿ ಈ ಗೌನ್‍ನನ್ನು ಟುಲೆಯಿಂದ ತಯಾರಿಸಲಾಗಿದೆ. ಆ ಗೌನ್‍ಗೆ ಪ್ರಿಯಾಂಕಾ ಸುಮಾರು 10 ಲಕ್ಷ ರೂ. ಮೌಲ್ಯದ ವಜ್ರದ ಇಯರಿಂಗ್ ಹಾಕಿದ್ದರು.

    ಸದ್ಯ ಪ್ರಿಯಾಂಕಾ ಚೋಪ್ರಾ ಅವರ ಮೆಟ್ ಗಾಲಾ ಲುಕ್ ನೋಡಿ ಅಭಿಮಾನಿಗಳು ಅವರನ್ನು ಸಾಕಷ್ಟು ಟ್ರೋಲ್ ಹಾಗೂ ಹಲವಾರು ಮಿಮ್ಸ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಆದರೆ ಈಗ ಪ್ರಿಯಾಂಕ ಲುಕ್ ಬಗ್ಗೆ ಸ್ವತಃ ಅವರ ತಾಯಿ ಮಧು ಚೋಪ್ರಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರಿಯಾಂಕಾ ಲುಕ್ ಬಗ್ಗೆ ಅವರ ತಾಯಿ ಮಧು ಚೋಪ್ರಾ ಬಳಿ ಕೇಳಿದ್ದಕ್ಕೆ, “ಇಷ್ಟು ದೂರದಿಂದ ನಾನು ಏನೆಂದು ಪ್ರತಿಕ್ರಿಯಿಸಲಿ. ಪ್ರಿಯಾಂಕಾ ನನ್ನ ಮುಂದೆ ಇದ್ದಿದ್ದರೆ ನಾನು ಅವಳನ್ನು ತಬ್ಬಿಕೊಳ್ಳುತ್ತಿದೆ. ಏಕೆಂದರೆ ಅವಳು ಅಷ್ಟು ಸುಂದರವಾಗಿ ಹಾಗೂ ಸ್ಪೆಷಲ್ ಆಗಿ ಕಾಣಿಸುತ್ತಿದ್ದಳು” ಎಂದು ಹೇಳಿದ್ದಾರೆ.

    ಮೆಟ್ ಗಾಲಾ ಕಾರ್ಯಕ್ರಮಕ್ಕೆ ಪ್ರಿಯಾಂಕ ಪತಿ, ಅಮೆರಿಕದ ಗಾಯಕ ನಿಕ್ ಜೋನಸ್ ಪ್ರಿಸ್ಟಿನ್ ಬಿಳಿ ಬಣ್ಣದ ಸೂಟ್ ಧರಿಸಿ ಪತ್ನಿ ಜೊತೆ ಆಗಮಿಸಿದ್ದರು. ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕೂಡ ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ 400 ಕಸೂತಿ ತುಣುಕುಗಳೊಂದಿಗೆ ಅಲಂಕರಿಸಲ್ಪಟ್ಟ, ಝಾಕ ಪೊಸೆನ್ ವಿನ್ಯಾಸದ ಗುಲಾಬಿ ಬಣ್ಣದ ಲೋರೆಕ್ಸ್ ಜಾಕ್ವಾರ್ಡ್ ಗೌನ್ ಧರಿಸಿದ್ದರು.