Tag: ಪ್ರಿಯಾಂಕಾ ಚೋಪ್ರಾ

  • ಅಮೆರಿಕಾದಲ್ಲಿ ಲಕ್ಷ್ಮೀ ಪೂಜೆ ಮಾಡಿದ ಚೋಪ್ರಾ-ನಿಕ್

    ಅಮೆರಿಕಾದಲ್ಲಿ ಲಕ್ಷ್ಮೀ ಪೂಜೆ ಮಾಡಿದ ಚೋಪ್ರಾ-ನಿಕ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಜೋನಸ್ ಜೊತೆಗೆ ಅಮೆರಿಕಾದಲ್ಲಿ ಲಕ್ಷ್ಮೀ ಪೂಜೆ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನಟಿ ಪ್ರಿಯಾಂಕಾ ಚೋಪ್ರಾ ಖ್ಯಾತ ಪಾಪ್ ಸಿಂಗರ್ ನಿಕ್ ಜೋನಸ್ ಜೊತೆ ವಿವಾಹವಾದ ನಂತರ ಅಮೆರಿಕದಲ್ಲಿಯೇ ಸೆಟಲ್ ಆಗಿದ್ದಾರೆ. ಅವರು ಭಾರತ ತೊರೆದರೂ ಇಲ್ಲಿಯ ಸಂಸ್ಕೃತಿಯನ್ನು ಚೂರೂ ಮರೆತಿಲ್ಲ. ಇದಕ್ಕೆ ಸಾಕ್ಷಿ ಇವರು ಅಮೆರಿಕಾದಲ್ಲಿ ಇಂದು ಹಬ್ಬ ಆಚರಣೆ ಮಾಡಿರುವ ಫೋಟೋಗಳಾಗಿವೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

    ಮಹಾಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ ನಾವು ಅವಳ ಕೃಪೆ ಮತ್ತು ಸಮೃದ್ಧಿಯನ್ನು ನಮ್ಮ ಮನೆಗೆ ಆಹ್ವಾನಿಸುತ್ತೇವೆ. ದೀಪಾವಳಿಯ ಶುಭಾಶಯಗಳು ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಪ್ರಿಯಾಂಕಾ ಅವರ ದೇಶ ಪ್ರೇಮ ಮತ್ತು ಸಂಸ್ಕೃತಿ ಕುರಿತಾಗಿ ಇರುವ ಕಾಳಜಿಗೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಸಂಭ್ರಮ – ನಿಖಿಲ್, ರೇವತಿ ದಂಪತಿಗೆ ಗಂಡು ಮಗು

    ಪತಿ ನಿಕ್ ಜೋನಸ್ ಜೊತೆ ಸೇರಿಕೊಂಡು ಪ್ರಿಯಾಂಕಾ ಹಬ್ಬವನ್ನು ಆಚರಣೆ ಮಾಡಿದ್ದಾರೆ. ನಿಕ್ ಜೋನಸ್ ಬಿಳಿ ಕುರ್ತಾ ತೊಟ್ಟರೆ, ಪ್ರಿಯಾಂಕಾ ಹಳದಿ ಬಣ್ಣದ ಸೀರೆ ಉಟ್ಟಿದ್ದಾರೆ. ವಿದೇಶದಲ್ಲಿ ಇದ್ದುಕೊಂಡು ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಿದ್ದಾರೆ. ಈಗ ದೀಪಾವಳಿ ಹಬ್ಬದ ಸಂಭ್ರಮ. ಹಿಂದುಗಳ ಪಾಲಿಗೆ ಇದು ದೊಡ್ಡ ಹಬ್ಬ. ಇದನ್ನು ಪ್ರಿಯಾಂಕಾ ಚೋಪ್ರಾ ಸಂಭ್ರಮದಿಂದ ಆಚರಿಸಿದ್ದಾರೆ.

  • ಬಿಕಿನಿಯಲ್ಲಿ ಪ್ರಿಯಾಂಕಾ ಚೋಪ್ರಾ – ಚಾಕು ಹಿಡಿದ ನಿಕ್

    ಬಿಕಿನಿಯಲ್ಲಿ ಪ್ರಿಯಾಂಕಾ ಚೋಪ್ರಾ – ಚಾಕು ಹಿಡಿದ ನಿಕ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆ ಮೋಜು ಮಸ್ತಿ ಮಾಡುವುದನ್ನು ಎಂದಿಗೂ ಮಿಸ್ ಮಾಡಿಕೊಂಡಿಲ್ಲ. ಸದ್ಯ ಪ್ರಿಯಾಂಕಾ ಪತಿ ನಿಕ್ ಜೊತೆ ಬೀಚ್‍ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಇಷ್ಟು ದಿನ ಪ್ರಿಯಾಂಕಾ ಚೋಪ್ರಾ ತಮ್ಮ ಮುಂಬರುವ ಶೋ ಸಿಟಾಡೆಲ್ ಚಿತ್ರೀಕರಣದಲ್ಲಿ ನಿರತರಾಗಿದ್ದರು. ತಿಂಗಳುಗಳ ಕಾಲ ಚಿತ್ರೀಕರಣದ ನಂತರ ಇದೀಗ ಪ್ರಿಯಾಂಕಾ ಪತಿ ನಿಕ್ ಜೋನಾಸ್ ಜೊತೆ ಲಾಸ್ ಏಂಜಲೀಸ್ ನಿವಾಸದಲ್ಲಿ ಸುಂದರ ಸಮಯ ಕಳೆಯುತ್ತಿದ್ದಾರೆ. ಅಲ್ಲದೇ ಕಡಲ ತೀರದಲ್ಲಿ ಪ್ರಿಯಾಂಕಾ ನಿಕ್ ಜೊತೆ ಎಂಜಾಯ್ ಮಾಡುತ್ತಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಪ್ರಿಯಾಂಕಾ ಚೋಪ್ರಾ

    ಈ ಫೋಟೋದಲ್ಲಿ ಪ್ರಿಯಾಂಕಾ ಬಿಕಿನಿ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ನಿಕ್ ಜೋನಸ್ ಕೈಯಲ್ಲಿ ಫೋರ್ಕ್ ಮತ್ತು ಚಾಕು ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಈ ವೇಳೆ ಪ್ರಿಯಾಂಕಾ ಜೋರಾಗಿ ನಗುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಹಾರ್ಟ್ ಎಮೋಜಿ ಹಾಕಿ ಸ್ನ್ಯಾಕ್ ಎಂದು ಪ್ರಿಯಾಂಕಾ ಕ್ಯಾಪ್ಷನ್‍ನಲ್ಲಿ ಬರೆದಿದುಕೊಂಡಿದ್ದಾರೆ.

    ಸದ್ಯ ಈ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ಫೋಟೋದಲ್ಲಿ ಪ್ರಿಯಾಂಕಾ ಕಪ್ಪು ಮತ್ತು ಕೆಂಪು ಬಣ್ಣದ ಬಿಕಿನಿ ತೊಟ್ಟು ಮಲಗಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ:ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ

  • ನಿಕ್‍ಗೆ ಸಾರ್ವಜನಿಕ ಸ್ಥಳದಲ್ಲಿಯೇ ಕಿಸ್ ಕೊಟ್ಟ ಪ್ರಿಯಾಂಕಾ

    ನಿಕ್‍ಗೆ ಸಾರ್ವಜನಿಕ ಸ್ಥಳದಲ್ಲಿಯೇ ಕಿಸ್ ಕೊಟ್ಟ ಪ್ರಿಯಾಂಕಾ

    ಮುಂಬೈ: ಬಾಲಿವುಡ್‍ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೊನಾಸ್‍ಗೆ ಸಾರ್ವಜನಿಕ ಸ್ಥಳದಲ್ಲಿಯೇ ಮುತ್ತು ಕೊಟ್ಟಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ವೀಡಿಯೋದಲ್ಲಿ ಹೋಟೆಲ್ ಒಂದರಲ್ಲಿ ಕುಳಿತು, ಊಟ ಮಾಡುತ್ತಿದ್ದ ವೇಳೆ ಪ್ರಿಯಾಂಕಾ ನಿಕ್ ಅವರನ್ನು ಮುದ್ದು ಮಾಡುತ್ತಾ ಕಿಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಕೂಡಾ ಜೊತೆಯಲ್ಲಿದ್ದಾರೆ. ತಾರಾ ದಂಪತಿಯ ಈ ವೀಡಿಯೋ ಅಭಿಮಾನಿಗಳಿಗೆ ಖುಷಿ ನೀಡಿದ್ದು, ತಮ್ಮ ನೆಚ್ಚಿನ ಜೋಡಿ ಖುಷಿಯಿಂದ ದಿನ ಕಳೆಯುತ್ತಿರುವುದನ್ನು ನೋಡಿ ಪುಳಕಿತಗೊಂಡಿದ್ದಾರೆ.

     

    View this post on Instagram

     

    A post shared by Nick&Priyanka Jonas FC (@nickyanka18)

    ಪ್ರಿಯಾಂಕಾ ಇತ್ತೀಚೆಗೆ ಹಾಲಿವುಡ್ ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಿಯಾಂಕಾ ಅವರ ಪತಿ ನಿಕ್ ಜೊನಾಸ್ ಕೂಡಾ ತಮ್ಮದೇ ಕೆಲಸಗಳಲ್ಲಿದ್ದಿದ್ದರಿಂದ ಈ ಜೋಡಿ ಕೆಲ ಕಾಲ ಅನಿವಾರ್ಯವಾಗಿ ದೂರವಾಗಿದ್ದರು. ಈಗ ಲಂಡನ್‍ನಲ್ಲಿ ಈ ಜೋಡಿ ಖುಷಿಯಿಂದ ರಜೆಯ ದಿನಗಳನ್ನು ಕಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

    ಇತ್ತೀಚೆಗೆ ಪ್ರಿಯಾಂಕಾ ತಮ್ಮ ಪತಿಯೊಂದಿಗೆ ಖುಷಿಯಿಂದ ಕಳೆಯುತ್ತಿರುವ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದನ್ನು ಅವರ ಅಭಿಮಾನಿ ಪೇಜ್ ಒಂದು ಹಂಚಿಕೊಂಡಿದ್ದು, ವೈರಲ್ ಆಗಿದೆ.

  • 1.31 ಲಕ್ಷ ಬೆಲೆ ವೈನ್- ಪ್ರಿಯಾಂಕಾಗೆ ಪತಿಯಿಂದ ವಿಶೇಷ ಗಿಫ್ಟ್

    1.31 ಲಕ್ಷ ಬೆಲೆ ವೈನ್- ಪ್ರಿಯಾಂಕಾಗೆ ಪತಿಯಿಂದ ವಿಶೇಷ ಗಿಫ್ಟ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹುಟ್ಟುಹಬ್ಬಕ್ಕೆ ಪತಿ ನಿಕ್ ಜೋನಸ್ 1.31 ಲಕ್ಷ ಬೆಲೆಬಾಳುವ ವೈನ್ ಗಿಫ್ಟ್ ನೀಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಜುಲೈ 18ರಂದು 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಅವರ ಕುಟುಂಬದವರು, ಗೆಳೆಯರಿಂದ ಸಾಕಷ್ಟು ಗಿಫ್ಟ್ ಸಿಕ್ಕಿದೆ. ಇದರಲ್ಲಿ ಅವರ ಪತಿ ನೀಡಿದ ವೈನ್ ಬಾಟಲಿ ವಿಶೇಷವಾಗಿತ್ತು. ಪ್ರಿಯಾಂಕಾ ಸದ್ಯ ಲಂಡ್‍ನಲ್ಲಿದ್ದು, ನಿಕ್ ಅಮೆರಿಕದಲ್ಲಿದ್ದಾರೆ. ಪತ್ನಿಗೆ ವೀಶೆಷವಾದ ಗಿಫ್ಟ್ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ:  ಗ್ಲಾಸ್ ಮೇಲೆ ಬರೆದು ದಿವ್ಯಾ ಶಮಂತ್‍ಗೆ ಹೇಳಿದ್ದೇನು..?

    ನಿಕ್ 1982 ಶಟೊ ಮೂಟೌನ್ ರೋಥ್‍ಚೈಲ್ಡ್ ವೈನ್ ಬಾಟಲಿಯನ್ನು ಪ್ರಿಯಾಂಕಾಗೆ ನೀಡಿದ್ದಾರೆ. ಈ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿ ಸಂಭ್ರಮಿಸಿದ್ದಾರೆ. ಒಂದು ಗ್ಲಾಸ್‍ಗೆ ವೈನ್ ಹಾಕಲಾಗಿದೆ. ಟೇಬಲ್‍ಅನ್ನು ಹೂವು ಹಾಗೂ ಮೇಣದ ಬತ್ತಿ ಮೂಲಕ ಅಲಂಕರಿಸಲಾಗಿದೆ.

    1982 ಶಟೊ ಮೂಟೌನ್ ರೋಥ್‍ಚೈಲ್ಡ್ ವೈನ್ ತುಂಬಾನೇ ದುಬಾರಿ ಹಾಗೂ ಅಪರೂಪದ ವೈನ್ ಆಗಿದೆ. ಫ್ರಾನ್ಸ್‍ನಲ್ಲಿ ಇದು ಸಿದ್ಧಗೊಳ್ಳುತ್ತದೆ. 750 ಎಂಎಲ್ ಬಾಟಲಿಯ ಈ ವೈನ್‍ಗೆ 1,31,375 ರೂಪಾಯಿ. ಇದನ್ನು ಆಯ್ದ ಹಣ್ಣುಗಳಿಂದ ಮಾತ್ರ ಸಿದ್ಧಪಡಿಸಲಾಗುತ್ತದೆ. ಇದನ್ನು ತಯಾರಿಸುವ ವಿಧಾನ ಕೂಡ ಬೇರೆ. ಹೀಗಾಗಿ, ಈ ವೈನ್ ಬೆಲೆ ಇಷ್ಟೊಂದು ದುಬಾರಿಯಾಗಿದೆ.

    ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‍ನಲ್ಲಿ ಗುರುತಿಸಿಕೊಂಡು ನಂತರ ಹಾಲಿವುಡ್‍ಗೆ ಪರಿಚಯಗೊಂಡರು. ಅಮೆರಿಕದ ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು ವರಿಸಿದ ನಂತರದಲ್ಲಿ ಪ್ರಿಯಾಂಕಾ ಅಮೆರಿಕದಲ್ಲಿಯೇ ಸೆಟಲ್ ಆಗಿದ್ದಾರೆ. ಇತ್ತೀಚೆಗೆ ಅವರು ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್‍ನಲ್ಲಿ ರೆಸ್ಟೋರೆಂಟ್ ಒಂದನ್ನು ಆರಂಭಿಸಿದ್ದಾರೆ. ಇದರ ಫೋಟೋಗಳನ್ನು ಅವರು ಈ ಹಿಂದೆ ಹಂಚಿಕೊಂಡಿದ್ದರು.

  • ನನ್ನ ದೇಶ ಕಷ್ಟದಲ್ಲಿದೆ, ವ್ಯಾಕ್ಸಿನ್‍ ಕೊಡಿ- ಭಾರತಕ್ಕಾಗಿ ಮಿಡಿದ ಪ್ರಿಯಾಂಕಾ

    ನನ್ನ ದೇಶ ಕಷ್ಟದಲ್ಲಿದೆ, ವ್ಯಾಕ್ಸಿನ್‍ ಕೊಡಿ- ಭಾರತಕ್ಕಾಗಿ ಮಿಡಿದ ಪ್ರಿಯಾಂಕಾ

    ವಾಷಿಂಗ್ಟನ್: ಕೊರೊನಾ 2ನೇ ಅಲೆಗೆ ಭಾರತ ತತ್ತರಿಸಿತ್ತಿದೆ. ಭಾರತಕ್ಕೆ ಆಸ್ಟ್ರಾಜೆನೆಕಾ ಲಸಿಕೆಯನ್ನು ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಧ್ವನಿ ಎತ್ತಿದ್ದಾರೆ.

    ನನ್ನ ಹೃದಯ ಛಿದ್ರವಾಗುತ್ತಿದೆ. ಕೊರೊನಾದಿಂದ ಭಾರತ ಬಳಲುತ್ತಿದೆ. ಆದರೆ ಈ ಸಂದರ್ಭದಲ್ಲಿ ಅಮೆರಿಕ ತನಗೆ ಅವಶ್ಯಕತೆ ಇರುವುದಕ್ಕಿಂತಲೂ 55 ಕೋಟಿ ಹೆಚ್ಚುವರಿ ವ್ಯಾಕ್ಸಿನ್‍ಗಳನ್ನು ಪಡೆದುಕೊಂಡಿದೆ. ಜಗತ್ತಿನಾದ್ಯಂತ ಆಸ್ಟ್ರಾಜೆನೆಕಾವನ್ನು ಹಂಚಿಕೆ ಮಾಡಿದ್ದಕ್ಕೆ ಧನ್ಯವಾದಗಳು. ಆದರೆ ನನ್ನ ದೇಶ ಭಾರತಲ್ಲಿ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ತುರ್ತಾಗಿ ಭಾರತಕ್ಕೆ ವ್ಯಾಕ್ಸಿನ್ ನೀಡುತ್ತೀರಾ? ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಪ್ರಿಯಾಂಕಾ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ಪ್ರಿಯಾಂಕಾ ಅವರ ಈ ಟ್ವೀಟ್‍ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಲಾಕ್‍ಡೌನ್ ಸಮಯದಲ್ಲಿ ಸ್ಟಾರ್ ಸೆಲೆಬ್ರಿಟಿಗಳು ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಪ್ರಿಯಾಂಕಾ ಪತಿಯೊಂದಿಗೆ ಅಮೆರಿಕಾದಲ್ಲಿ ವಾಸವಾಗಿದ್ದರೂ ಭಾರತದ ಮೇಲಿರುವ ಪ್ರೀತಿ ಕಡಿಮೆಯಾಗಿಲ್ಲ ಎನ್ನುವುದನ್ನು ತೋರಿಸುತ್ತದೆ.

    ಭಾರತದ ಪರವಾಗಿ ಮಾತನಾಡಿ ಹಲವರ ಮೆಚ್ಚುಗೆ, ಪ್ರಶಂಸೆಗೆ ಪ್ರಿಯಾಂಕಾ ಅವರು  ಪಾತ್ರರಾಗಿದ್ದಾರೆ.

  • ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ

    ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ

    ಮುಂಬೈ: ಬಾಲಿವುಡ್‍ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ನಟನೆಯೊಂದಿಗೆ ಇದೀಗ ಹೋಟೆಲ್ ಉದ್ಯಮದತ್ತ ಮುಖ ಮಾಡಿದ್ದಾರೆ. ಪ್ರಿಯಾಂಕಾ ಸೋನಾ ಎಂಬ ನಾಮಂಕಿತ ರೆಸ್ಟೊರೆಂಟ್ ಒಂದನ್ನು ಅಮೆರಿಕಾದಲ್ಲಿ ತೆರೆಯಲು ತಯಾರಿ ನಡೆಸಿದ್ದಾರೆ.

    ಪ್ರಿಯಾಂಕ 2019ರಲ್ಲಿ ತನ್ನ ಪತಿ ಸಿಂಗರ್ ನಿಕ್ ಜೋನಸ್ ಹಾಗೂ ತಾಯಿ ಮಧು ಚೋಪ್ರಾ ಜೊತೆಗೆ ರೆಸ್ಟೊರೆಂಟ್ ಪೂರ್ವ ತಯಾರಿಯ ಭೂಮಿ ಪೂಜೆಯ ಫೋಟೋವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಇನ್ನು ಕೆಲವೇ ದಿನಗಳಲ್ಲಿ ಸೋನಾ ಎಂಬ ಹೆಸರಿನ ರೆಸ್ಟೊರೆಂಟ್ ಶುಭಾರಂಭಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.

    ಅಮೆರಿಕಾದಲ್ಲಿ ಭಾರತೀಯ ಮಾದರಿಯ ಅಡುಗೆ ತಯಾರಿಸಲು ರೆಸ್ಟೊರೆಂಟ್ ನಲ್ಲಿ ಪ್ರಸಿದ್ಧ ಶೆಫ್ ಹರಿ ನಾಯಕ್ ಅವರನ್ನು ಹೆಡ್ ಶೆಫ್ ಆಗಿ ನೇಮಿಸಿಕೊಳ್ಳಲಾಗಿದೆ. ಭಾರತದ ಖಾದ್ಯಗಳನ್ನು ಇಲ್ಲಿ ತಯಾರಿಸಿ ಇಲ್ಲಿನ ಜನರಿಗೆ ಉಣಬಡಿಸಲು ನಾವು ತಯಾರಾಗಿದ್ದೇವೆ. ಹೊಸ ಮಾದರಿಯ ರುಚಿ ಹಾಗೂ ಸ್ವಾದಭರಿತ ನೂತನ ಮೆನು ಕಾರ್ಡ್‍ನ್ನು ನಮ್ಮ ಪ್ರಸಿದ್ಧ ಶೆಫ್ ಹರಿ ನಾಯಕ್ ಅವರು ತಯಾರಿಸಲಿದ್ದಾರೆ ಎಂದು ವಿವರಿಸಿದ್ದಾರೆ.

    ಸೋನಾವನ್ನು ತೆರೆಯಲು ನಾನು ಕಾತರಳಾಗಿದ್ದು ಈ ರೆಸ್ಟೊರೆಂಟ್ ಸಿದ್ಧಗೊಳ್ಳಲು ನನ್ನ ಉತ್ತಮ ಸ್ನೇಹಿತರಾದ ಮನೀಶ್ ಗೋಯಲ್ ಮತ್ತು ಡೇವಿಡ್ ರಾಬಿನ್ ಅವರ ನಾಯಕತ್ವ ಮುಖ್ಯವಾಗಿತ್ತು ಅವರಿಗೆ ಕೃತಜ್ಞತೆಗಳು ಎಂದಿದ್ದಾರೆ.

    ಈ ಹಿಂದೆ ಪ್ರಿಯಾಂಕಾ ಕೊದಲು ಆರೈಕೆ ಗಾಗಿ ಆ್ಯನೋಮಲಿ ಎಂಬ ಬ್ರ್ಯಾಂಡ್ ನ್ನು ಬಿಡುಗಡೆಗೊಳಿಸಿದ್ದರು. ಇದೀಗ ಹೋಟೆಲ್ ಉದ್ಯಮದತ್ತ ಕಣ್ಣಾಯಿಸುತ್ತಿದ್ದಾರೆ.

  • ರೈತರು ಆಹಾರ ಸೈನಿಕರು, ಸಮಸ್ಯೆ ಪರಿಹರಿಸಿ: ನಟಿ ಪ್ರಿಯಾಂಕಾ ಚೋಪ್ರಾ

    ರೈತರು ಆಹಾರ ಸೈನಿಕರು, ಸಮಸ್ಯೆ ಪರಿಹರಿಸಿ: ನಟಿ ಪ್ರಿಯಾಂಕಾ ಚೋಪ್ರಾ

    ನವದೆಹಲಿ: ಕೆಂದ್ರದ ಹೊಸ ಕೃಷಿ ಕಾನೂನುಗಳ ಬಗ್ಗೆ ಇರುವ ಕಳವಳವನ್ನು ತುರ್ತಾಗಿ ಪರಿಹರಿಸಬೇಕು ಎಂದು ಬಾಲಿವುಡ್ ನಟಿ ಪ್ರಿಯಾಂಕ್ರಾ ಚೋಪ್ರಾ ಮನವಿ ಮಾಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಅವರು ಭಾನುವಾರ ರೈತರ ಪ್ರತಿಭಟನೆಯ ಸಂಬಂಧ ತಮ್ಮ ಟ್ವೀಟ್ ನಲ್ಲಿ ಹಂಚಿಕೊಂಡರು. ಗಾಯಕ-ನಟ ದಿಲ್ಜಿತ್ ದೋಸಾಂಜ್ ಅವರ ಟ್ವೀಟ್ ಅನ್ನು ಅನುಮೋದಿಸಿದರು ಮತ್ತು ಕೇಂದ್ರದ ಹೊಸ ಕೃಷಿ ಕಾನೂನುಗಳ ಬಗ್ಗೆ ತಮ್ಮ ಕಳವಳವನ್ನು ತುರ್ತಾಗಿ ಪರಿಹರಿಸಬೇಕೆಂದು ಎಂದು ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಗಾಯಕ-ನಟ ದಿಲ್ಜಿತ್ ದೋಸಾಂಜ್ ಅವರ ಟ್ವೀಟ್ ಅನ್ನು ಅನುಮೋದಿಸಿ ಪ್ರಿಯಾಂಕಾ ಚೋಪ್ರಾ ” ನಮ್ಮ ರೈತರು ಭಾರತದ ಸೈನಿಕರು. ಅವರ ಭಯವನ್ನು ಹೋಗಲಾಡಿಸಬೇಕಾಗಿದೆ. ಅವರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಈ ಬಿಕ್ಕಟ್ಟನ್ನು ಶೀಘ್ರದಲ್ಲೇ ಬಗೆಹರಿಸುವುದನ್ನು ರೈತರಿಗೆ ಖಚಿತ ಪಡಿಸಬೇಕು ಎಂದು ಉಲ್ಲೇಖಿಸಿ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಅವರು ರೈತರ ಪರವಾಗಿ ಮಾಡಿದ ಟ್ವೀಟ್, ಭಾರತದಿಂದ ಸಾಮಾಜಿಕ ವಿಷಯಗಳ ಬಗ್ಗೆ ಸೆಲೆಬ್ರಿಟಿಗಳು ಕೂಡ ನಿಲುವು ತಳೆಯುವ ಪ್ರವೃತ್ತಿಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಯುತ್ತದೆ.

  • ವಿರುಷ್ಕಾ ರೊಮ್ಯಾಂಟಿಕ್ ಫೋಟೋಗೆ ಕ್ಯೂಟ್ ಕಮೆಂಟ್ ಮಾಡಿದ ಪ್ರಿಯಾಂಕಾ

    ವಿರುಷ್ಕಾ ರೊಮ್ಯಾಂಟಿಕ್ ಫೋಟೋಗೆ ಕ್ಯೂಟ್ ಕಮೆಂಟ್ ಮಾಡಿದ ಪ್ರಿಯಾಂಕಾ

    – ಕೆಜಿಎಫ್ ನಟಿಯಿಂದಲೂ ಕೊಹ್ಲಿ ಅನುಷ್ಕಾಗೆ ಮೆಚ್ಚುಗೆ

    ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರ ರೊಮ್ಯಾಂಟಿಕ್ ಫೋಟೋಗೆ ಬಾಲಿವುಡ್ ಪಿಗ್ಗಿ ಪ್ರಿಯಾಂಕಾ ಚೋಪ್ರಾ ಅವರು ಕ್ಯೂಟ್ ಕಮೆಂಟ್ ಮಾಡಿದ್ದಾರೆ.

    ಗುರುವಾರ ವಿರಾಟ್ ಕೊಹ್ಲಿಯವರು ತಮ್ಮ 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಐಪಿಎಲ್‍ಗಾಗಿ ಯುಎಇಯಲ್ಲಿ ತಂಗಿರುವ ಕೊಹ್ಲಿ ಅಲ್ಲೇ ತಮ್ಮ ಆರ್‌ಸಿಬಿ ತಂಡ ಮತ್ತು ಪತ್ನಿ ಜೊತೆ ಬರ್ತಡೇ ಸಲೆಬ್ರೇಷನ್ ಮಾಡಿಕೊಂಡಿದ್ದಾರೆ. ಅಂತೆಯೇ ಪತಿಯ ಹುಟ್ಟುಹಬ್ಬಕ್ಕೆ ಅನುಷ್ಕಾ ಶರ್ಮಾ ಅವರು ರೊಮ್ಯಾಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದರು.

     

    View this post on Instagram

     

    ❤️

    A post shared by AnushkaSharma1588 (@anushkasharma) on

    ನಿನ್ನೆ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ವಿಚಾರವಾಗಿ ಮೂರು ಫೋಟೋಗಳನ್ನು ಅನುಷ್ಕಾ ಶರ್ಮಾ ಇಮ್ಮ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋಗೆ ಬಾಲಿವುಡ್‍ನ ಹಲವಾರು ನಟಿಯರು ಕಮೆಂಟ್ ಮಾಡಿದ್ದಾರೆ. ಇದರಲ್ಲಿ ಪ್ರಿಯಾಂಕ ಚೋಪ್ರಾ ಕೂಡ ಕಮೆಂಟ್ ಮಾಡಿದ್ದು, ಅಳುವ ಮತ್ತು ಹಾರ್ಟ್ ಇಮೋಜಿಯನ್ನು ಕಳುಹಿಸಿದ್ದಾರೆ. ಜೊತೆಗೆ ಹಿಂದಿ ಕೆಜಿಎಫ್-1ರಲ್ಲಿ ಗಲಿ ಗಲಿ ಹಾಡಿಗೆ ಯಶ್ ಜೊತೆ ಸೊಂಟ ಬಳುಕಿಸಿದ್ದ ಬಾಲಿವುಡ್‍ನ ನಟಿ ಮೌನಿ ರಾಯ್ ಕೂಡ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

    ತನ್ನ ಹುಟ್ಟುಹಬ್ಬವನ್ನು ಕೊಹ್ಲಿ ಅಬುಧಾಬಿಯ ಪ್ರೈವೇಟ್ ಬೋಟ್‍ನಲ್ಲಿ ಆರ್‌ಸಿಬಿ ಆಟಗಾರರು ಮತ್ತು ಗರ್ಭಿಣಿಯಾಗಿರುವ ಪತ್ನಿ ಅನುಷ್ಕಾರೊಂದಿಗೆ ಆಚರಿಸಿಕೊಂಡಿದ್ದರು. ಅನುಷ್ಕಾ ಕೊಹ್ಲಿಗೆ ಕೇಕ್ ತಿನ್ನಿಸಿ, ಅಪ್ಪುಗೆ ಕೊಟ್ಟು ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಜೊತೆಗೆ ಆರ್‌ಸಿಬಿ ತಂಡದ ಆಟಗಾರರು ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದರು. ಈ ಕುರಿತ ವಿಡಿಯೋ ಹಾಗೂ ಫೋಟೋಗಳನ್ನು ಆರ್‍ಸಿಬಿ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು.

    ಇಂದು ಅಬುಧಾಬಿಯಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಹಾಗೂ ಆರ್‌ಸಿಬಿ ತಂಡಗಳು ಎಲಿಮಿನೇಟರ್-1 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಐಪಿಎಲ್ 2020ರ ಟೂರ್ನಿಯಲ್ಲಿ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಕೊಹ್ಲಿ ಪಡೆ ಪ್ಲೇ ಆಫ್ ಪ್ರವೇಶ ಮಾಡಿದೆ. ನಾಲ್ಕು ವರ್ಷಗಳ ಬಳಿಕ ಪ್ಲೇ ಆಫ್ ತಲುಪಿರುವ ಕೊಹ್ಲಿ ಪಡೆಗೆ ಕಪ್ ಗೆಲ್ಲಲು ಇನ್ನು ಮೂರು ಗೆಲುವು ಬೇಕಿದೆ. 2020ರ ಟೂರ್ನಿಯಲ್ಲಿ ಕೊಹ್ಲಿ ಇದುವರೆಗೂ 122ರ ಸ್ಟ್ರೈಕ್ ರೇಟ್‍ನಲ್ಲಿ 460ರನ್ ಗಳಿಸಿದ್ದು, ಆರೆಂಜ್ ಕ್ಯಾಪ್ ರೇಸ್‍ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ 23 ಬೌಂಡರಿ, 11 ಸಿಕ್ಸರ್ ಸಿಡಿಸಿದ್ದು, 3 ಅರ್ಧ ಶತಕಗಳು ದಾಖಲಾಗಿದೆ.

  • ನಿಕ್-ಪ್ರಿಯಾಂಕಾ ಮನೆಗೆ ಹೊಸ ಅತಿಥಿಯ ಆಗಮನ

    ನಿಕ್-ಪ್ರಿಯಾಂಕಾ ಮನೆಗೆ ಹೊಸ ಅತಿಥಿಯ ಆಗಮನ

    ಮುಂಬೈ: ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ವಿದೇಶಿ ಹುಡುಗನನ್ನ ವರಸಿ ಅಲ್ಲಿಯೇ ನೆಲೆಸಿದ್ದಾರೆ. ಇದೀಗ ನಿಕ್-ಪ್ರಿಯಾಂಕಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

    ನಿಕ್-ಪ್ರಿಯಾಂಕಾ ಮನೆಗೆ ಹೊಸ ಮುದ್ದು ನಾಯಿಯನ್ನು ತಂದಿದ್ದಾರೆ, ಇನ್‍ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಜೋಡಿ, ನಮ್ಮ ಕುಟುಂಬಕ್ಕೆ ನಿನಗೆ ಸ್ವಾಗತ. ಪಂಡಾ ಆಸ್ಟ್ರೇಲಿಯಾದ ನಾಯಿಯಾಗಿದೆ. ನಾನು ನಿನ್ನನ್ನು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಫೋಟೋಗೆ 1.45 ಕೋಟಿಗೂ ಅಧಿಕ ಲೈಕ್ಸ್ ಬಂದಿವೆ.

    https://www.instagram.com/p/CDos38uDJ_D/?utm_source=ig_embed

    ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ವೈಯಕ್ತಿಕ ಮತ್ತು ವೃತ್ತಿಯ ವಿಷಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

    https://www.instagram.com/p/CCy-lV0jGr8/

  • ಪ್ರಿಯಾಂಕಾ ಬರ್ತ್ ಡೇಗೆ ಪ್ರೇಮಕವಿಯಾದ ನಿಕ್

    ಪ್ರಿಯಾಂಕಾ ಬರ್ತ್ ಡೇಗೆ ಪ್ರೇಮಕವಿಯಾದ ನಿಕ್

    -ರೊಮ್ಯಾಂಟಿಕ್ ಫೋಟೋ ಶೇರ್

    ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ವಿದೇಶಿ ಹುಡುಗನನ್ನ ಮದ್ವೆಯಾಗಿ ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ಜುಲೈ 18ರಂದು ಪ್ರಿಯಾಂಕಾ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಸೇರಿದಂತೆ ಸ್ಟಾರ್ ಕಲಾವಿದರನ್ನು ಪ್ರಿಯಾಂಂಕಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ಪತಿ ನಿಕ್ ಜೋನಸ್ ಮಡದಿಗಾಗಿ ಪ್ರೇಮ ಕವಿಯಾಗಿ ರೊಮ್ಯಾಂಟಿಕ್ ಸಾಲುಗಳನ್ನು ಪತ್ನಿಗೆ ವಿಶ್ ಮಾಡಿದ್ದಾರೆ.

    https://www.instagram.com/p/CCy-lV0jGr8/

    ಪತ್ನಿ ಜೊತೆಗಿರುವ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿರುವ ನಿಕ್ ಜೋನಸ್, ನಾನು ನಿನ್ನ ಕಣ್ಣುಗಳನ್ನು ಜೀವನಪೂರ್ತಿ ನೋಡಲು ಇಷ್ಟಪಡುತ್ತೇನೆ. ಐ ಲವ್ ಯೂ ಬೇಬಿ. ನಾನು ಇದುವರೆಗೂ ಭೇಟಿಯಾದ ಜನಗಳಲ್ಲಿ ನೀನು ತುಂಬಾ ಸ್ಪೆಷಲ್. ಆ ಜನಗಳಲ್ಲಿ ಅರ್ಥ ಮಾಡಿಕೊಳ್ಳುವ, ಕೇರ್ ಮಾಡುವ ಅದ್ಭುತ ಮಹಿಳೆ. ನಾವಿಬ್ಬರು ಒಂದಾಗಿರೋದಕ್ಕೆ ನಾನು ಅಭಾರಿಯಾಗಿದ್ದೇನೆ. ಹ್ಯಾಪಿ ಬರ್ತ್ ಡೇ ಬ್ಯೂಟಿಫುಲ್ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/CAoIhmvDboE/

    ನಿಕ್ ತಂದೆ ಸಹ ಸೊಸೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡಿರುವ ನಿಕ್ ತಂದೆ, ಹ್ಯಾಪಿ ಬರ್ತ್ ಡೇ ಪ್ರಿಯಾಂಕಾ ಚೋಪ್ರಾ. ನೀನು ನಮ್ಮ ಕುಟುಂಬಕ್ಕೆ ಖುಷಿ ತಂದಿದ್ದೀಯಾ. ಲವ್ ಯೂ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇತ್ತ ಪ್ರಿಯಾಂಕಾ ಸೋದರ ಸಿದ್ಧಾರ್ಥ ಬಾಲ್ಯದ ಫೋಟೋ ಹಂಚಿಕೊಂಡು ಸೋದರಿಗೆ ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ.

    https://www.instagram.com/p/CCxmxLsneKD/