Tag: ಪ್ರಿಯಾಂಕಾ ಖರ್ಗೆ

  • ಖರ್ಗೆ ಒಂದೇ ವಿಳಾಸಕ್ಕೆ ಮೂರು ಸೈಟು, ಸರ್ಕಾರಕ್ಕೆ 500 ಕೋಟಿ ನಷ್ಟ: ನಾರಾಯಣಸ್ವಾಮಿ

    ಖರ್ಗೆ ಒಂದೇ ವಿಳಾಸಕ್ಕೆ ಮೂರು ಸೈಟು, ಸರ್ಕಾರಕ್ಕೆ 500 ಕೋಟಿ ನಷ್ಟ: ನಾರಾಯಣಸ್ವಾಮಿ

    – ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಭೂಮಿ ನೀಡಲಾಗಿದೆ
    – ಜಾಸ್ತಿ ಮಾತನಾಡಿದ್ರೆ ಕೋರಮಂಗಲ, ಗುಲ್ಬರ್ಗಾದಲ್ಲಿರುವ ಆಸ್ತಿ ವಿವರ ಹೊರಗೆ ಬರುತ್ತೆ
    – ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ನೀಡಬೇಕು

    ಬೆಂಗಳೂರು: ಕೆಐಎಡಿಬಿಯಿಂದ ಸಿಎ ನಿವೇಶನ ಮಾರಾಟ ಪ್ರಕರಣದಲ್ಲಿ ಲೋಪವಾಗಿದೆ. ಒಂದೇ ವಿಳಾಸಕ್ಕೆ ಎರಡು ಮೂರು ಸೈಟು ಕೊಟ್ಟಿದ್ದಾರೆ. ಖರ್ಗೆ ಸ್ವಜನ ಪಕ್ಷಪಾತಕ್ಕೆ ಇದೇ ಸಾಕ್ಷಿ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಲ್ಲೇಶ್ವರದಲ್ಲಿರುವ ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖರ್ಗೆಯವರ ಟ್ರಸ್ಟ್‌ಗೆ ಭೂಮಿ ನೀಡುವ ವಿಚಾರದಲ್ಲಿ ಲೋಪ ಆಗಿದೆ. ಭೂಮಿ ಮೀಸಲಿಡುವಾಗ ನಿರ್ದಿಷ್ಟ ಉದ್ದೇಶವನ್ನು ಸ್ಪಷ್ಟಪಡಿಸಿರಲಿಲ್ಲ. ಕೆಐಎಡಿಬಿಯಿಂದ (KIADB) ಭೂಮಿ ಹಂಚಿಕೆಯಾದ ಕ್ರಮ ಸರಿಯಲ್ಲ ಎಂದಿದ್ದಾರೆ.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಭಾವ ಬೀರಿ ಇದನ್ನು ಪಡೆದುಕೊಂಡಿದ್ದಾರೆ. ಸೈಟು ಹಂಚಿಕೆ ಪ್ರಕ್ರಿಯೆ ಒಂದೇ ತಿಂಗಳಲ್ಲಿ ಮುಗಿದಿದೆ. ಒಂದೇ ಕುಟುಂಬದ ಐವರಿಗೆ ಸೈಟು ಹಂಚಿಕೆ ಆಗಿದೆ. ಹೀಗಾಗಿ ಅಧಿಕಾರ ದುರ್ಬಳಕೆ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ಇದನ್ನೂ ಓದಿ: ವಾಲ್ಮೀಕಿ ಹಗರಣ – ನಾಗೇಂದ್ರ ಆಪ್ತರ ಮನೆ ಮೇಲೆ ED ದಾಳಿ

    ಈ ವರ್ಷ ಫೆ.5 ರಂದು ಭೂಮಿ ನೀಡಲು ಕೆಐಎಡಿಬಿ ತೀರ್ಮಾನ ಮಾಡಿತ್ತು. ಅದೇ ತಿಂಗಳ 8 ರಂದು ಭೂಮಿ ನೀಡುವ ಪ್ರಕ್ರಿಯೆ ಆರಂಭ ಆಗಿತ್ತು. ಅದಾದ ಬಳಿಕ ಮಾ.5 ರಂದು ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಭೂಮಿ ನೀಡಲು ನಿರ್ಣಯ ಮಾಡಲಾಗಿತ್ತು. ಮಾ.6 ರಂದು ಭೂಮಿ ಹಂಚಿಕೆಗೆ ಆದೇಶ ನೀಡಲಾಗಿತ್ತು. ಹಂಚಿಕೆ ಮಾಡುವಾಗ ಎಸ್‌ಸಿಗಳಿಗೆ ಕಡಿಮೆ ಭೂಮಿ ನೀಡಲಾಗಿದೆ. ಸಚಿವರು ಸದಸ್ಯರಾಗಿರುವ ಟ್ರಸ್ಟ್‌ಗೆ ಹೆಚ್ಚು ಭೂಮಿ ಕೊಡಲಾಗಿದೆ. ಇಲ್ಲಿ ಅಧಿಕಾರ ದುರ್ಬಳಕೆ ಆಗಿದೆ. ಅದಕ್ಕೆ ಸಚಿವ ಪ್ರಿಯಾಂಕಾ ಖರ್ಗೆ (Priyank Kharge) ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಅಕ್ರಮ ಎಸಗಿದ್ದಕ್ಕೆ ರಾಜ್ಯಪಾಲರನ್ನು ನಾವು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಏರೋಸ್ಪೇಸ್ ಪಾರ್ಕ್‌ನಲ್ಲಿ 71 ಜನ ದಲಿತ ಉದ್ಯಮಿಗಳಿಗೆ 2022 ರಲ್ಲಿ ಭೂಮಿ ಹಂಚಿಕೆಯಾಗಿದೆ. ಎರಡೂವರೆ ವರ್ಷ ಕಳೆದರೂ ಅವರಿಗೆ ಭೂಮಿ ಕೊಟ್ಟಿಲ್ಲ. ಸಚಿವ ಪ್ರಿಯಾಂಕಾ ಖರ್ಗೆಯವರು ಸದಸ್ಯರಾಗಿರುವ ಟ್ರಸ್ಟ್‌ಗೆ ಭೂಮಿ ಶೀಘ್ರವಾಗಿ ಪಡೆದಿದ್ದಾರೆ. ಆದರೆ ದಲಿತ ಉದ್ಯಮಿಗಳಿಗೆ ಹಂಚಿಕೆಯಾದ ಭೂಮಿ ಕೊಡಲು ಹಿಂದೇಟು ಹಾಕುತ್ತಾರೆ. ಇವರಿಗೊಂದು ನ್ಯಾಯ? ಅವರಿಗೊಂದು ನ್ಯಾಯನಾ? ಕೆಐಎಡಿಬಿಯಿಂದ ಭೂಮಿ ಹಂಚಿಕೆಯಾದ ಕ್ರಮ ಸರಿಯಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೆ 500 ಕೋಟಿ ರೂ. ನಷ್ಟ ಆಗಿದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಭೂಮಿ ನೀಡಲಾಗಿದೆ. ಇವರೂ ಲೂಟಿ ಮಾಡುವ ದುರುದ್ದೇಶವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

    ಜೊತೆಗೆ ಎಸ್‌ಆರ್ ಬೆಲೆ ಕಟ್ಟುವಿಕೆಯಲ್ಲೂ ಸರ್ಕಾರಕ್ಕೆ ವಂಚನೆ ಆಗಿದೆ. ಹೀಗಾಗಿ ಈ ಸೈಟು ಹಂಚಿಕೆ ಅಕ್ರಮದ ರೂಪ ಪಡೆದಿದೆ. ಈ ಕಾರಣದಿಂದ ಈ ಸೈಟು ಹಂಚಿಕೆ ನೋಟಿಫಿಕೇಷನ್ ವಾಪಾಸ್ ಪಡೆಯಬೇಕು. ಮರು ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಜನ್‌ಧನ್ ಯೋಜನೆಯಿಂದ ಕೋಟ್ಯಂತರ ಜನರಿಗೆ ಅನುಕೂಲ – 10ರ ಸಂಭ್ರಮಕ್ಕೆ ಮೋದಿ ಹರ್ಷ

    ಪ್ರಿಯಾಂಕ್ ಖರ್ಗೆ ನನ್ನ ಸಹೋದರ. ಅವರು ಕೆಲವೊಮ್ಮೆ ನನ್ನ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ. ನನ್ನ ಬಗ್ಗೆ ಮಾತಾಡಲು ಬಿಜೆಪಿ ನಾರಾಯಣ ಸ್ವಾಮಿ ಅವರನ್ನು ನೇಮಿಸಿದ್ದಾರೆ ಎಂದಿದ್ದಾರೆ. ನೀವು ತಪ್ಪು ಮಾಡಿದ್ದೀರಿ, ಹಾಗಾಗಿ ನಾನು ಮಾತಾಡುತ್ತೇನೆ. ನನಗೆ ಇಂಗ್ಲೀಷ್ ಬರಲ್ಲ ಎಂದು ಹೇಳಿದ್ದೀರಿ. ಹೌದು ನನಗೆ ಇಂಗ್ಲಿಷ್ ಬರಲ್ಲ ನಿಜ. ನಮ್ಮಪ್ಪ ಕೂಲಿ ಮಾಡ್ತಿದ್ದವರು, ಇಂಗ್ಲಿಷ್ ಸ್ವಲ್ಪ ಕಲಿತಿದ್ದೇನೆ. ಇಂಗ್ಲಿಷ್ ಸಂವಹನಕ್ಕೆ ಅಷ್ಟೇ ಇರುವ ಭಾಷೆ. ನೀವು ಕಾನ್ವೆಂಟ್‌ನಲ್ಲಿ ಓದಿದವರು, ಇಂಗ್ಲಿಷ್ ಕಲಿತಿದ್ದೀರಿ. ಆದ್ರೆ ನೀವು ಎಷ್ಟು ಓದಿದ್ದೀರಿ, ಎಲ್ಲಿ ಫೇಲ್ ಆಗಿದ್ದೀರಿ ಅನ್ನೋದು ನಮಗೆ ಗೊತ್ತಿದೆ. ನಾನು ವಾಟಾಳ್ ನಾಗರಾಜ್, ನಾರಾಯಣಗೌಡ ಜೊತೆ ಕನ್ನಡಪರ ಹೋರಾಟ ಮಾಡಿಕೊಂಡು ಬಂದವನು. ನನ್ನ ವಿರುದ್ಧ ವೈಯಕ್ತಿಕ ದಾಳಿ ಮಾಡಿದ್ರೆ, ಸರಿ ಇರಲ್ಲ. ಮೈಂಡ್ ಯುವರ್ ಲಾಂಗ್ವೇಜ್ ಮಿಸ್ಟರ್ ಪ್ರಿಯಾಂಕ್ ಖರ್ಗೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ನನಗೂ ನಮ್ಮಪ್ಪನ ಹೆಸರು ನನ್ನ ಮುಂದಿದೆ ಅದನ್ನು ಬಳಸಿಕೊಂಡಿಲ್ಲ. ಆದ್ರೆ ನಿಮ್ಮ ಹೆಸರಿನ ಮುಂದೆ, ಮಲ್ಲಿಕಾರ್ಜುನ ಖರ್ಗೆ ಅಂತಿದೆ ಅದನ್ನು ಬಳಸಿಕೊಂಡು ಬೆಳೆದಿದ್ದೀರಿ. ನೀನು ಯಾವ ಹೋರಾಟ ಮಾಡಿ ಬೆಳೆದಿದ್ದೀಯಪ್ಪಾ? ನಾನು ಗೋಣೀಚೀಲ ಹೊದ್ದು ಮಲಗಿದವನು. ನೀನು ಯಾವ ಗೋಣೀಚೀಲ ಹೊದ್ದು ಮಲಗಿದ್ದೀಯಾ? ನಿನ್ನ ಹಾಗೆ ಗೋಲ್ಡ್ ಸ್ಪೂನ್ ಇಟ್ಟುಕೊಂಡು ಹುಟ್ಟಿಲ್ಲ. ನಿಮ್ಮ ಅಣ್ಣ ರಾಹುಲ್ ಖರ್ಗೆ ನಿಮ್ಮ ಹಾಗೆ ಅಲ್ಲ. ಅವರು ಚೆನ್ನಾಗಿ ಓದಿಕೊಂಡವರು, ಅವರ ಬಗ್ಗೆ ನಾನು ಮಾತಾಡಲ್ಲ. ಅವರು ಐಆರ್‌ಎಸ್ (IRS) ಮಾಡಿದವರು, ರಾಜಕಾರಣಕ್ಕೆ ಬರಲಿಲ್ಲ. ಪರ್ಸನಲ್ ಅಟ್ಯಾಕ್ ಮಾಡಿದ್ರೆ ನಾನು ಸುಮ್ಮನೇ ಕೂರಲ್ಲ. ದಾಳಿ ಮಾಡುತ್ತಾ ಹೋದ್ರೆ ಕೋರಮಂಗಲದಲ್ಲಿ ನಿಮ್ಮ ಆಸ್ತಿ ಎಲ್ಲಿದೆ? ಬೆಂಗಳೂರಿನ ಬೇರೆ ಕಡೆ ಎಲ್ಲಿದೆ, ಗುಲ್ಬರ್ಗಾದಲ್ಲಿ ಎಲ್ಲೆಲ್ಲಿದೆ ಎಲ್ಲವೂ ಹೊರಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ‘ಕೂಲಿ’ ಚಿತ್ರಕ್ಕಾಗಿ 30 ವರ್ಷಗಳ ನಂತರ ಒಂದಾದ ರಜನಿಕಾಂತ್, ಆಮೀರ್ ಖಾನ್

    5-2-2024 ರಂದು ತೀರ್ಮಾನ ಮಾಡಿ ಫೆ. 8ರಿಂದ ವೆಬ್ ಸೈಟಿನಲ್ಲಿ ಅರ್ಜಿ ಲಭಿಸುತ್ತದೆ, ಅದನ್ನು ಡೌನ್‍ಲೋಡ್ ಮಾಡಿ ಫೆ. 23ರೊಳಗೆ ಅರ್ಜಿಗಳನ್ನು ಹಾಕಲು ತಿಳಿಸಿದ್ದರು. ಒಂದು ತಿಂಗಳ ಬದಲಾಗಿ ಕೇವಲ 14 ದಿನಗಳನ್ನು ಕೊಟ್ಟಿದ್ದರು. ಇದು ಯಾರಿಗೂ ಗೊತ್ತಾಗಬಾರದೆಂಬ ಉದ್ದೇಶದಿಂದಲೇ ಕೇವಲ 14 ದಿನಗಳನ್ನು ನೀಡಿದ್ದರು ಎಂದು ಆರೋಪಿಸಿದ್ದಾರೆ.

    ಮಾ.4 ರಂದು ಸಿಂಗಲ್ ವಿಂಡೋ ಏಜೆನ್ಸಿಯಲ್ಲಿ ಪರಿಶೀಲನೆ ಮಾಡಲಾಗಿದೆ. ಒಂದೇ ದಿನ ಇಷ್ಟೂ ಅರ್ಜಿಗಳನ್ನು ಪರಿಶೀಲಿಸಿ, ಮರುದಿನವೇ ಸಂಜೆ 5 ಗಂಟೆಗೆ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಸಭೆ ಸೇರಿ ತೀರ್ಮಾನ ಮಾಡಿದ್ದಾರೆ. 6 ರಿಂದ ಮಂಜೂರಾತಿ ಪತ್ರ ನೀಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.

    ಅತ್ಯಂತ ದೊಡ್ಡ ಪ್ರಮಾದ…
    12 ಜಿಲ್ಲೆಗಳಲ್ಲಿ 193 ಸಿ.ಎ ಸೈಟ್‍ಗಳಿವೆ. ಒಟ್ಟು 377.69 ಎಕರೆ ಇದ್ದು, 283 ಅರ್ಜಿಗಳಿದ್ದವು. 30 ದಿನಗಳ ಕಾಲ ನೀಡಿದ್ದರೆ ಇನ್ನಷ್ಟು ಅರ್ಜಿ ಬರುತ್ತಿತ್ತು. ಅಧಿಸೂಚನೆ ಹೊರಡಿಸಿದ್ದೇ ಜನರಿಗೆ ಗೊತ್ತಿಲ್ಲ. 14 ದಿನಗಳಲ್ಲಿ ಅರ್ಜಿ ಸ್ವೀಕರಿಸಿ, 15ನೇ ದಿನ ಪರಿಶೀಲಿಸಿ, 16ನೇ ದಿನವೇ ಮಂಜೂರಾತಿ ಆಗಿದೆ. ಇದು ಕೆಐಎಡಿಬಿ ಚರಿತ್ರೆಯ ಬಹು ದೊಡ್ಡ ಪ್ರಮಾದ ಎಂದು ಟೀಕಿಸಿದ್ದಾರೆ.

    ವಿಜಯಪುರದ ಹಲಗನಿಯ ಈಶ್ವರ್ ಸಂಗಪ್ಪ ಬದ್ರಿ ಅವರ 3 ಸ್ಟಾರ್ ಹೋಟೆಲ್‍ಗೆ ಸಿ.ಎ. ಸೈಟ್ ಕೊಡಲಾಗಿದೆ. ಅದು ವಾಣಿಜ್ಯ ಉದ್ದೇಶದ್ದು, ಅದನ್ನು ಏಲಂ ಮಾಡಬೇಕಿತ್ತು. 2.5 ಎಕರೆಗೆ ದುಪ್ಪಟ್ಟು ದರದಲ್ಲಿ ಕಡಿಮೆ ಎಂದರೂ 12.5 ಕೋಟಿ ಸಿಗಬೇಕಿತ್ತು ಎಂದು ಉದಾಹರಣೆ ಕೊಟ್ಟರು.ಇದನ್ನೂ ಓದಿ: Kolkata Horror | ಕ್ರಿಮಿನಲ್‌ ಮನಸ್ಥಿತಿ ಬರೋದು ಏಕೆ? ಮನೋವಿಜ್ಞಾನಿಗಳು ಏನ್‌ ಹೇಳ್ತಾರೆ?

    ಬಿಡದಿಯಲ್ಲಿ ಸುನಿತಾ ರಾಜಶೇಖರ್ ಅವರಿಗೆ ಅಪಾರ್ಟ್‍ಮೆಂಟ್ ನಿರ್ಮಿಸಲು ಜಾಗ ಕೊಟ್ಟಿದ್ದು, ಇದು ಸೌಲಭ್ಯದಡಿ ಬರುವುದೇ? ಅಥವಾ ವಾಣಿಜ್ಯ ಉದ್ದೇಶದ್ದೇ? ಎಂದರು. ಹಾರೋಹಳ್ಳಿಯಲ್ಲಿ ಸ್ಕಿಲ್ ಡೆವಲಪ್‍ಮೆಂಟ್ ಸಂಸ್ಥೆಗೆ 2.5 ಎಕರೆ ಕೊಟ್ಟಿದ್ದಾರೆ. ಎಸ್‍ಸಿಗಳಿಗೆ ಕೇವಲ ಕಾಲು ಎಕರೆ ಜಾಗ ಕೊಟ್ಟಿದ್ದಾರೆ. 5 ಎಕರೆ, ಆರು ಎಕರೆ ಯಾರಿಗೂ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪ್ರಿಯಾಂಕಾ ಖರ್ಗೆ ಧರ್ಮ ದ್ರೋಹಿ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ: ಈಶ್ವರಪ್ಪ

    ಪ್ರಿಯಾಂಕಾ ಖರ್ಗೆ ಧರ್ಮ ದ್ರೋಹಿ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ: ಈಶ್ವರಪ್ಪ

    ಗದಗ: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಧಾನಿ ಅಭ್ಯರ್ಥಿ ಅಂತ ಬಿಂಬಿಸುವ ಮೂಲಕ ದಲಿತರಿಗೆ ದ್ರೋಹ, ಮೋಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು.

    ನಗರದ ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಗೌರವ ಇದೆ. ಹಿರಿಯ ರಾಜಕಾರಣಿ ಅವರ ಬಗ್ಗೆ ಟೀಕೆ ಮಾಡಲ್ಲ. ಆದರೆ ಸೋಲಿಸಲು ಯಾಕೆ ನಿಲ್ಲಿಸ್ತಾರೆ. ದೇಶದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಕಾಂಗ್ರೆಸ್ ನಿರಂತರವಾಗಿ ದುರುಪಯೋಗ ಮಾಡ್ತಾನೇ ಬಂದಿದ್ದಾರೆ. ದಲಿತರನ್ನು ನಂಬಿಸಿ ಮೋಸ ಮಾಡಿ ಕಾಂಗ್ರೆಸ್ (Congress) ಇಷ್ಟು ವರ್ಷ ಈ ದೇಶದಲ್ಲಿ ಆಡಳಿತ ನಡೆಸಿತು. ಈಗ ಮತ್ತೊಬ್ಬ ದಲಿತರಿಗೆ ಮೊಸ ಮಾಡ್ತಿದ್ದಾರೆ ಎಂದರು.

    ಪ್ರಿಯಾಂಕಾ ಖರ್ಗೆ (Priyank Kharge) ಧರ್ಮ ದ್ರೋಹಿ, ಅವನ ಮಾತಿನ ಬಗ್ಗೆ ಬಹಳ ಬೇಸರ ಬರುತ್ತೆ. ಆದರೆ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ. ಇನ್ನು ಮುಂದೆ ದಲಿತ ಅಸ್ತ್ರ ತೋರಿಸಿ, ದಲಿತ ಪ್ರಧಾನಿ ಮಾಡ್ತೀವಿ ಅಂತ ದಲಿತರಿಗೆ ಮೋಸ ಮಾಡಲು ಹೊರಟಿದ್ದಾರೆ. ಅದು ಇನ್ನುಮುಂದೆ ಸಾಧ್ಯವಿಲ್ಲ. ಬರುವಂತಹ ದಿನಗಳಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ ಎಂದರು. ಇದನ್ನೂ ಓದಿ: ಸೂರಜ್ ರೇವಣ್ಣಗೆ ಬಿಗ್ ರಿಲೀಫ್ – ಎಂಎಲ್‌ಸಿ ಸ್ಥಾನದಿಂದ ಅನರ್ಹಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾ

    ಬರಪರಿಹಾರ ವಿಚಾರವಾಗಿ ದೆಹಲಿಯಲ್ಲಿ ಪ್ರಧಾನಿ ಭೇಟಿ ವೇಳೆ ಸಿದ್ದರಾಮಯ್ಯ ಬಳಿ ಪ್ರಧಾನಿ ಮೋದಿ (Narendra Modi) ಅವರು ಡಿಕೆಶಿ ಹೆಸರು ಪ್ರಸ್ತಾಪ ವಿಚಾರಕ್ಕೆ ವ್ಯಂಗವಾದ ಮಾತುಗಳನ್ನಾಡಿದರು. ಡಿಕೆಶಿಯನ್ನು (DK Shivakumar) ಯಾಕೆ ಕೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಆದರೆ ಎರಡು ತರನಾದ ಪ್ರಖ್ಯಾತಿ ಇರಬೇಕು. ಅದು ಶಿವಾಜಿ ಆಗಿರಬೇಕು, ಇಲ್ಲವೇ ಅಫ್ಜಲ್ ಖಾನ್ ಆಗಿರಬೇಕು. ಇಬ್ಬರೂ ಪ್ರಖ್ಯಾತಿನೇ. ಒಬ್ಬ ರಾಷ್ಟ್ರ ಭಕ್ತ, ಇನ್ನೊಬ್ಬ ಬಗ್ಗೆ ನಾನು ಹೇಳುವುದಕ್ಕೆ ಇಷ್ಟಪಡಲ್ಲ. ಯಾಕೇಂದ್ರೆ ಯಾವ ಆಂಗಲ್ ನಲ್ಲಿ ಮಾತನಾಡಿದ್ದಾರೆ ಎಂಬುದನ್ನು ಮೋದಿ, ಸಿದ್ದರಾಮಯ್ಯ ಇಬ್ಬರಿಗೆ ಗೊತ್ತು ಅಂತ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯರನ್ನು ಅಪ್ಜಲ್ ಖಾನ್ ಗೆ ಈಶ್ವರಪ್ಪ ಹೋಲಿಸಿದ್ರಾ ಎಂಬ ಪ್ರಶ್ನೆ ಮೂಡಿದೆ.

    ದೇಶದಲ್ಲಿ ಹೊಸ ಮಸೀದಿ ಬಗ್ಗೆ ವಿರೋಧ ಮಾಡಿಲ್ಲ. ನಮ್ಮ ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಿದರಲ್ಲಾ, ಆ ಒಂದೇ ಒಂದು ಮಸೀದಿ ಉಳಿಸಲ್ಲ. ಹಿಂದೂಗಳ ದೇವಸ್ಥಾನ ಕೆಡವಿ ಎಲ್ಲೆಲ್ಲಿ ಮಸೀದಿ ಕಟ್ಟಿದ್ದಾರೆ, ಆ ಮಸೀದಿ ಇರಲು ಬಿಡಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪುರಾತನ ದೇವಸ್ಥಾನಗಳೆಲ್ಲವನ್ನೂ ಉಳಿಸುತ್ತೇವೆ. ಹೊಸ ಮಸೀದಿಯಲ್ಲಿ ಏನಾದ್ರೂ ಮಾಡಿಕೊಳ್ಳಿ ನಮ್ಮ ಅಭ್ಯಂತರ ಇಲ್ಲ. ಟಿಪ್ಪು ರಕ್ತ ನಮ್ಮ ಮೈಯಲ್ಲಿ ಇಲ್ಲ. ನಮ್ಮಲ್ಲಿ ಇರುವುದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ರಲ್ಲಾ ಅವರ ರಕ್ತ ಇದೆ. ಅವರ ಕನಸು ನನಸು ಮಾಡಲು ಅಯೋಧ್ಯೆ, ಮಥುರ, ಕಾಶಿ ಇಂಥವುಗಳನ್ನು ಉಳಿಸುತ್ತೆವೆ. ಎಂದರು.

  • ವೀಡಿಯೋ: ಬಿಜೆಪಿ ಅಂದ್ರೆ ಬ್ರೋಕರ್‌ ಜನತಾ ಪಕ್ಷವೆಂದ ಪ್ರಿಯಾಂಕ್ ಖರ್ಗೆ

    ವೀಡಿಯೋ: ಬಿಜೆಪಿ ಅಂದ್ರೆ ಬ್ರೋಕರ್‌ ಜನತಾ ಪಕ್ಷವೆಂದ ಪ್ರಿಯಾಂಕ್ ಖರ್ಗೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಟ್‌ಕಾಯಿನ್‌ ಹಗರಣದಲ್ಲಿ ಸಿಎಂ ತಲೆದಂಡ ಪಡೆಯಲಿದೆ: ಪ್ರಿಯಾಂಕ್ ಖರ್ಗೆ

    ಬಿಟ್‌ಕಾಯಿನ್‌ ಹಗರಣದಲ್ಲಿ ಸಿಎಂ ತಲೆದಂಡ ಪಡೆಯಲಿದೆ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಬಿಟ್‌ಕಾಯಿನ್‌ ಹಗರಣದಲ್ಲಿ ರಾಜ್ಯದ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ. ಒಂದು ವೇಳೆ ಇದರ ತನಿಖೆ ನಡೆಸಿದರೆ ಕರ್ನಾಟಕದ ಮುಖ್ಯಮಂತ್ರಿಯನ್ನು ಖಂಡಿತವಾಗಿ ಬಲಿ ತೆಗೆದುಕೊಳ್ಳಲಿದೆ ಎಂದು ಶಾಸಕರಾದ  ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

    basavaraj bommai

    ಕಲಬುರಗಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಬಿಟ್‌ಕಾಯಿನ್‌, ಕರೆನ್ಸಿ ಸೇರಿದಂತೆ ಹಲವು ಅಕ್ರಮ ದಂಧೆಗಳು ಬಿಂದಾಸಾಗಿ ನಡೆಯುತ್ತಿವೆ. ಇದರಲ್ಲಿ ಸಾವಿರಾರು ಕೋಟಿ ರೂಪಾಯಿಯ ವ್ಯವಹಾರ ಈಗಾಗಲೇ ಆಗಿದೆ. ಅಧಿಕಾರಿಗಳು ಹಾಗೂ ಪ್ರಭಾವಿ ನಾಯಕರು ಸಪೋರ್ಟ್‌ನಿಂದ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊತ್ತಿ ಉರಿದ ಬಸ್- 12 ಮಂದಿ ಸಜೀವ ದಹನ

    bjp - congress

    ಪಾರದರ್ಶಕ ತನಿಖೆ ನಡೆಸಿದರೆ ಈ ಹಗರಣದಲ್ಲಿ ಯಾರು ಭಾಗವಹಿಸಿದ್ದಾರೆ ಎನ್ನುವುದು ಒಂದೇ ಒಂದು ತಿಂಗಳಲ್ಲಿ ಹೊರಬರಲಿದೆ. ಆದರೆ ಸರ್ಕಾರಕ್ಕೆ ಈ ಬಗ್ಗೆ ಆಸಕ್ತಿ ಇದೆಯಾ ಎನ್ನುವುದು ಮುಖ್ಯ ವಾಗಿದೆ. ಈ ಹಗರಣದಲ್ಲಿ ಕಾಂಗ್ರೆಸ್ ಬಿಜೆಪಿ ಯಾವುದೇ ನಾಯಕರು ಇರಲಿ ಮೊದಲು ತನಿಖೆ ನಡೆಸಿ ಕ್ರಮ ಜರುಗಿಸಬೇಕಾಗಿದೆ. ಆದರೆ ಪ್ರಮುಖ ಆರೋಪಿ ಶ್ರೀಕಿಯನ್ನು ವಿಚಾರಣೆಗೆ ಬಿಡುತ್ತಿಲ್ಲ, ಆತನನ್ನು 10 ದಿನ ವಿಚಾರಣೆ ನಡೆಸಿದರೆ ಈ ಹಗರಣ ಸಂಪೂರ್ಣ ಹೊರಬರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನ.11 ಕ್ಕೆ ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗೆ ಸರ್ಕಾರ ಆದೇಶ

    ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಡಾ ಶರಣಪ್ರಕಾಶ್ ಪಾಟೀಲ್, ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಮಲ್ಲಿಕಾರ್ಜುನ, ಎಪಿಎಂಸಿ ಅಧ್ಯಕ್ಷರಾದ ಸಿದ್ದು ಪಾಟೀಲ್, ಈರಣ್ಣ ಝಳಕಿ ಮತ್ತಿತರು ಇದ್ದರು.