Tag: ಪ್ರಿಯಾಂಕಾಗಾಂಧಿ

  • ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಇನ್ನೂ ನೀಡಿಲ್ಲ ಯಾಕೆ – ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

    ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಇನ್ನೂ ನೀಡಿಲ್ಲ ಯಾಕೆ – ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

    ಬೆಂಗಳೂರು: ಕಾಂಗ್ರೆಸ್ (Congress) ಆಡಳಿತ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯಗಳನ್ನೇ ಪ್ರಶ್ನಿಸದ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಈಗ `ಗೃಹಲಕ್ಷ್ಮೀ’ ಯೋಜನೆ ಜಾರಿಗೊಳಿಸುವ ಭರವಸೆ ನೀಡಿರೋದು `ಕಾಂಗ್ರೆಸ್ ಗ್ಯಾರಂಟಿ ಸುಳ್ಳಿನ ಸರಣಿ’ಯ ಮುಂದುವರಿದ ಭಾಗ ಎಂದು ಬಿಜೆಪಿ (BJP) ತಿರುಗೇಟು ನೀಡಿದೆ.

    ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ಕಾಂಗ್ರೆಸ್‌ನ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಜ್ಯ ಕಾಂಗ್ರೆಸ್‌ನ ಮಹಿಳಾ ಪ್ರಣಾಳಿಕೆಯ ಕೆಲವು ಪ್ರಮುಖ ವಿಚಾರಗಳನ್ನು ಘೋಷಣೆ ಮಾಡಿದರು. ಇದೇ ವೇಳೆ? ಗೃಹ ಲಕ್ಷ್ಮಿ’ ಬಾಂಡ್ ಅನ್ನು ಪ್ರಿಯಾಂಕಾ ಗಾಂಧಿ ಪ್ರದರ್ಶಿಸಿದರು. ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ, ಮಹಿಳೆಗೆ ಪ್ರತಿ ತಿಂಗಳು 2,000 ರೂ.: ಪ್ರಿಯಾಂಕಾ ಗಾಂಧಿ

    ಟ್ವೀಟ್‌ನಲ್ಲಿ ಏನಿದೆ?
    ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸಬಲಿಕರಣ ಬಿಡಿ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳನ್ನೇ ಎಂದೂ ಪ್ರಶ್ನಿಸದ ಪ್ರಿಯಾಂಕಾ ಗಾಂಧಿ ಇದೀಗ ಗೃಹಲಕ್ಷ್ಮಿ ಎಂಬ ಯೋಜನೆ ಜಾರಿಗೊಳಿಸುತ್ತೇವೆ ಎಂದಿರುವುದು ಕಾಂಗ್ರೆಸ್’ನ ಗ್ಯಾರಂಟಿ ಸುಳ್ಳಿನ ಸರಣಿಯ ಮುಂದುವರಿದ ಭಾಗ. ಈ ಡೋಂಗಿತನದ ಅರಿವು ರಾಜ್ಯದ ಜನರಿಗಿದೆ.

    ಛತ್ತೀಸ್ಗಡದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಮಾಸಿಕ ಭತ್ಯೆ ಕೊಡ್ತಿಲ್ಲ, ವಿಧವೆಯರಿಗೆ ಮಾಸಿಕ 1,000 ರೂ. ಪೆನ್ಷನ್ ಕೊಡ್ತಿಲ್ಲ, ಹಿಮಾಚಲ ಪ್ರದೇಶದಲ್ಲಿ 18-60 ವರ್ಷದ ಮಹಿಳೆಯರಿಗೆ 1,500ರೂ. ನೆರವು – ಸಿಕ್ತಿಲ್ಲ. ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 3,500 ರೂ. ಮಾಸಿಕ ನಿರುದ್ಯೋಗ ಭತ್ಯೆ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಯಾವುದೂ ಇಲ್ಲ. ಇದನ್ನೂ ಓದಿ: ಚುನಾವಣೆ ಬಂದ್ಮೇಲೆ ಬಿಜೆಪಿಯವರು ಮಸೀದಿ, ಮಂದಿರ, ಪಾಕಿಸ್ತಾನ ಅಷ್ಟೇ ತೋರಿಸೋದು: ಸತೀಶ್ ಜಾರಕಿಹೊಳಿ

    ಅಳಿವು ಉಳಿವಿನ ಕೊನೆಯ ಹಂತಕ್ಕೆ ತಲುಪಿದಾಗ ಸುಳ್ಳು ಹೇಳುವುದು ಮತ್ತು ಹುಸಿ ಭರವಸೆ ನೀಡುವುದು ಸಹಜವಾಗಿ ಮೈಗೂಡುತ್ತದಂತೆ. ಕರ್ನಾಟಕ ಕಾಂಗ್ರೆಸ್ ಪರಿಸ್ಥಿತಿ ಹಾಗೆಯೇ ಆಗಿದೆ. ಚುನಾವಣೆಗೂ ಮುನ್ನ ಯೋಜನೆಗಳ ಸಾಧ್ಯಾಸಾಧ್ಯತೆ ಅರಿಯದೆ ಪ್ರಚಾರಕ್ಕಾಗಿ ಘೋಷಿಸುವುದು ಈಗ ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ.

    ಅಭ್ಯಾಸ ಬಲದಲ್ಲಿ ಮುಂದುವರಿದಿರುವ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕದಲ್ಲೂ ಅದನ್ನೇ ಮಾಡುತ್ತಿದೆ. ಪ್ರಚಾರಕ್ಕೆ ಬೇಕಾಗಿ ಗೃಹಲಕ್ಷ್ಮಿ ಎಂಬ ಪರಿಕಲ್ಪನೆಯನ್ನು ಪ್ರಿಯಾಂಕಾ ಗಾಂಧಿ ಹರಿಬಿಟ್ಟಿದ್ದಾರೆ. ಉದ್ಯೋಗ ಸೃಷ್ಟಿಯ ಕಡೆಗೆ ರಾಜ್ಯ ದಾಪುಗಾಲಿಡುತ್ತಿರುವಾಗ ಕರ್ನಾಟಕ ಕಾಂಗ್ರೆಸ್ ನಿರುದ್ಯೋಗ ಬಯಸುತ್ತಿದೆ.

    ಈ ಮೊದಲು ಕಾಲೇಜು ವಿದ್ಯಾರ್ಥಿಗಳನ್ನು ನೀವು ವಂಚಿಸಿದ್ದೀರಿ. ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ಅನುಕೂಲವಾಗಲು ಬಡ್ಡಿ ರಹಿತ ಸಾಲ ನೀಡುತ್ತೇವೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಹೇಳಿತ್ತು. ಚುನಾವಣೆ ಕಳೆದ ಮೇಲೆ ಅದರ ಬಗ್ಗೆ ತುಟಿಪಿಟಿಕ್ ಎನ್ನಲಿಲ್ಲ. ಮಹಿಳೆಯರಿಗೆ ನೀಡಿದ ಸ್ಮಾರ್ಟ್ ಫೋನ್ ಭರವಸೆಯೂ ಹಾಗೆಯೇ.

    ನಿರುದ್ಯೋಗಿ ಯುವಕ – ಯುವತಿಯರಿಗೆ 2,500 ರೂ. ಮಾಸಾಶನ ಕೊಡುತ್ತೇವೆ ಎಂದು ಛತ್ತೀಸ್‌ಘಡದಲ್ಲಿಯೂ ಇದೇ ಕಾಂಗ್ರೆಸ್ ಪಕ್ಷ ಹೇಳಿತ್ತು. ಆದರೆ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ಸಿಗರಿಗೆ ಅದರ ನೆನಪೇ ಇರಲಿಲ್ಲ. ವಿಧವೆಯರಿಗೆ ತಿಂಗಳಿಗೆ 1,000 ಮಾಸಿಕ ಪಿಂಚಣಿ ಕತೆಯೂ ಅಷ್ಟೇ, ಚುನಾವಣಾ ಘೋಷಣೆಗೆ ಮಾತ್ರ ಸೀಮಿತ.

    ಕರ್ನಾಟಕ ಕಾಂಗ್ರೆಸ್ ರಾಜ್ಯದಲ್ಲಿ ಇನ್ನಷ್ಟು ಯೋಜನೆ ಘೋಷಿಸಲಿ. ಪ್ರತಿಯೊಂದು ಯೋಜನೆಯೂ ಆ ಪಕ್ಷ ಅಸ್ತಿತ್ವಕ್ಕೆ ನಡೆಸುತ್ತಿರುವ ಹೆಣಗಾಟವನ್ನು ಜಗಜ್ಜಾಹೀರು ಮಾಡುತ್ತದೆ. ಜತೆಗೆ ಪ್ರಿಯಾಂಕಾ ಅವರಿಗೆ ಈ ಕ್ಷಣಕ್ಕೆ ಹೇಳಿದ್ದು ಮರುಕ್ಷಣಕ್ಕೆ ನೆನಪಿರುವುದಿಲ್ಲ ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • BJP ಉದ್ಯೋಗದ ಬದಲಿಗೆ ಯುವ ಸಮೂಹಕ್ಕೆ ಡ್ರಗ್ಸ್ ಕೊಡ್ತಿದೆ: ಪ್ರಿಯಾಂಕಾ ಕಿಡಿ

    BJP ಉದ್ಯೋಗದ ಬದಲಿಗೆ ಯುವ ಸಮೂಹಕ್ಕೆ ಡ್ರಗ್ಸ್ ಕೊಡ್ತಿದೆ: ಪ್ರಿಯಾಂಕಾ ಕಿಡಿ

    ಶಿಮ್ಲಾ: ಯುವ ಸಮೂಹಕ್ಕೆ ಉದ್ಯೋಗದ (Employment) ಬದಲಾಗಿ ಡ್ರಗ್ಸ್ (Drugs) ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ಹಿಮಾಚಲ ಪ್ರದೇಶದಲ್ಲಿ ಚುನಾವಣಾ (Himachal Pradesh Elections) ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ನಿಲುವುಗಳ ಬಗ್ಗೆ ಟೀಕಿಸಿದ್ದಾರೆ. ಬಿಜೆಪಿ (BJP) ಪರಿಕಲ್ಪನೆಯನ್ನು ಯಾರೂ ಒಪ್ಪುವುದಿಲ್ಲ. ಹಿಮಾಚಲ ಪ್ರದೇಶದ ಜನರು ತಮ್ಮ ಒಳಿತಿಗಾಗಿ ಸರ್ಕಾರವನ್ನು ಬದಲಾಯಿಸಬೇಕಿದೆ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ನೆರೆಮನೆಯವನಿಂದಲೇ 14ರ ಬಾಲಕಿಯ ಕತ್ತು ಹಿಸುಕಿ ಕೊಲೆ

    ಇದೇ ವೇಳೆ ಬಿಜೆಪಿ (BJP) ಉದ್ಯೋಗ ಸೃಷ್ಟಿಸುವ ಭರವಸೆಗಳ ಕುರಿತು ವಾಗ್ದಾಳಿ ನಡೆಸಿದ ಪ್ರಿಯಾಂಕಾ, ಉದ್ಯೋಗ ಹಕ್ಕನ್ನು ಬೆಂಬಲಿಸುವ ಕಾಂಗ್ರೆಸ್ ಆಡಳಿತ ರಾಜ್ಯಗಳಾದ ಛತ್ತಿಸ್‌ಗಢ (Chhattisgarh) ಹಾಗೂ ರಾಜಸ್ಥಾನವನ್ನು (Rajasthan) ಉದಾಹರಣೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಉದ್ಯೋಗಿಗಳ ವಜಾ – ಟ್ವಿಟ್ಟರ್‌ ನಡೆಯನ್ನು ಖಂಡಿಸಿದ ಕೇಂದ್ರ

    ಛತ್ತಿಸ್‌ಗಢದಲ್ಲಿ ಅತ್ಯಂತ ಕಡಿಮೆ ನಿರುದ್ಯೋಗ ಇದೆ. ಕಳೆದ 3 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಅಲ್ಲಿ 5 ಲಕ್ಷ ಉದ್ಯೋಗಗಳನ್ನು ನೀಡಿದೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ 1.3 ಲಕ್ಷ ಉದ್ಯೋಗ (Employment) ಕಲ್ಪಿಸಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ 63 ಸಾವಿರ ಹುದ್ದೆಗಳು ಖಾಲಿಯಿದ್ದರೂ, ಬಿಜೆಪಿ ಅವುಗಳನ್ನು ಭರ್ತಿ ಮಾಡಿಲ್ಲ. ವಿದ್ಯಾವಂತ ಯುವಕರು, ಶ್ರಮಜೀವಿಗಳು ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದಾರೆ. ಆದರೆ ಬಿಜೆಪಿ ಉದ್ಯೋಗದ ಬದಲಿಗೆ ಡ್ರಗ್ಸ್ ನೀಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

    ಯುವ ಸಮೂಹ ಏನಾದರೂ ಕೆಲಸ ಮಾಡಿ ತಮ್ಮ-ತಮ್ಮ ಕುಟುಂಬವನ್ನು ನೋಡಿಕೊಳ್ಳಬೇಕು ಎಂದು ಬಯಸುತ್ತಿದ್ದಾರೆ. ಅವರ ಕನಸುಗಳು ಈಡೇರುತ್ತಿಲ್ಲ. ಡ್ರಗ್ಸ್ ಹಾವಳಿ ಹೆಚ್ಚಾಗಿ ದಾರಿ ತಪ್ಪುತ್ತಿದ್ದಾರೆ. ಹಾಗಾಗಿ ಹಿಮಾಚಲ ಪ್ರದೇಶದಲ್ಲಿ ಸುಮಾರು 30 ಲಕ್ಷ ಮಂದಿ ಯುವಸಮೂಹದವರು ಇದ್ದರೂ, 15 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈಶಾನ್ಯ ಭಾರತದವರ ಜೀವನ ಶೈಲಿಯ ಮೇಲೆ ಬಿಜೆಪಿ ಹಸ್ತಕ್ಷೇಪ: ಪ್ರಿಯಾಂಕಾ ಗಾಂಧಿ

    ಈಶಾನ್ಯ ಭಾರತದವರ ಜೀವನ ಶೈಲಿಯ ಮೇಲೆ ಬಿಜೆಪಿ ಹಸ್ತಕ್ಷೇಪ: ಪ್ರಿಯಾಂಕಾ ಗಾಂಧಿ

    ನವದೆಹಲಿ: ಬಿಜೆಪಿಯು ಈಶಾನ್ಯ ಭಾರತದವರ ಜೀವನ ಶೈಲಿಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದರಿಂದಾಗಿ ತಾರತಮ್ಯ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.

    ಮಣಿಪುರದಲ್ಲಿ ವರ್ಚುವಲ್ ಪ್ರಚಾರದಲ್ಲಿ ಮಾತನಾಡಿದ ಅವರು, ಅಸ್ಸಾಂ ಬಿಜೆಪಿ ಮತ್ತು ಅದರ ವಿವಿಧ ಸಂಘಟನೆಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ದೂರು ನೀಡಿದ್ದರ ಬಗ್ಗೆ ಕೌಂಟರ್ ನೀಡಿದರು. ಬಿಜೆಪಿ ಬಿಜೆಪಿಯು ರಾಜ್ಯಗಳ ಒಕ್ಕೂಟ ಹಾಗೂ ವೈವಿಧ್ಯತೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದೆ. ನಮ್ಮ ದೇಶದ ಎಲ್ಲಾ ರಾಜ್ಯಗಳು ಸಮಾನತೆಯನ್ನು ಹೊಂದಿರುವ ಅಖಂಡ ರಾಷ್ಟ್ರವೆನಿಸಿಕೊಂಡಿದೆ. ಆದರೆ ಈಶಾನ್ಯ ಭಾಗಕ್ಕೆ ಬಂದರೆ ಬಿಜೆಪಿಗೆ ಏಕರೂಪತೆಯ ಕಲ್ಪನೆಯಿದೆ ಎಂದು ಕಿಡಿಕಾರಿದರು.

    ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ನಮ್ಮ ಸಂಪ್ರದಾಯಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತಿದೆ. ಇದರಿಂದಾಗಿ ಮಣಿಪುರ ಅಭಿವೃದ್ಧಿಯಾಗಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂಗಳು ಹಣೆಗೆ ಕುಂಕುಮ ಇಡುತ್ತಾರೆ, ನಾವು ಅದನ್ನು ಪ್ರಶ್ನೆ ಮಾಡುತ್ತೇವಾ: ಮುಸ್ಲಿಂ ವಿದ್ಯಾರ್ಥಿಗಳು

    ನಮಗೆ ಸಂವಿಧಾನದ ಪೀಠಿಕೆಯ ಮೇಲೆ ನಂಬಿಕೆಯಿದೆ. ಅದರನ್ವಯದಂತೆ ಮಣಿಪುರದ ಪ್ರಾದೇಶಿಕ ಸಮಗ್ರತೆ ಮತ್ತು ಅದರ ಐತಿಹಾಸಿಕ ಗಡಿಗಳನ್ನು ಭದ್ರಪಡಿಸುತ್ತೇವೆ. ಜೊತೆಗೆ ನಾಗರಿಕ ಹಕ್ಕುಗಳನ್ನು ರಕ್ಷಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸುಳ್ಳು ಭರವಸೆಗಳನ್ನು ಕೇಳಬೇಕಿದ್ದರೆ ಮೋದಿ, ಕೇಜ್ರಿವಾಲ್ ಮಾತು ಕೇಳಿ: ರಾಹುಲ್ ಗಾಂಧಿ