ಬೆಂಗಳೂರು: ನಟ ಉಪೇಂದ್ರ (Upendra) ಮತ್ತು ಪತ್ನಿ ಪ್ರಿಯಾಂಕಾ (Priyanka Upendra) ಮೊಬೈಲ್ ಹ್ಯಾಕ್ ಪ್ರಕರಣದ ತನಿಖೆ ನಡೆಸುತ್ತಿರುವ ಸದಾಶಿವನಗರ ಪೊಲೀಸರು ಹ್ಯಾಕರ್‌ಗಳ (Hack) ಮೂಲ ಪತ್ತೆ ಮಾಡಿದ್ದಾರೆ.
ಸುಮಾರು 1.65 ಲಕ್ಷ ರೂ. ಹಣ ಪಡೆದುಕೊಂಡು, ನಾಲ್ಕು ಅಕೌಂಟ್ ಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಆ ನಾಲ್ಕು ಅಕೌಂಟ್ ಗಳು ಕೂಡ ನಕಲಿ ಆಗಿರುವುದು ಗೊತ್ತಾಗಿದೆ.
ಅದೇ ನಂಬರ್ ಬಳಸಿ, ಅದೇ ದಿನ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಕೆಲವರ ಮೊಬೈಲ್ ಗಳನ್ನು ಹ್ಯಾಕ್ ಮಾಡಲಾಗಿದೆ. ಸದ್ಯ ಸದಾಶಿವನಗರ ಪೊಲೀಸರು, ಹ್ಯಾಕರ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಬಿಹಾರಕ್ಕೆ ವಿಶೇಷ ತಂಡ ಕಳುಹಿಸಲು ಸಿದ್ದತೆ ನಡೆದಿದೆ.
ರಿಯಲ್ ಸ್ಟಾರ್ ಉಪೇಂದ್ರ ಅವರ (Upendra) ಮಗಳು ಐಶ್ವರ್ಯಾಗೆ (Aishwarya Upendra) 17ನೇ ವರ್ಷದ ಜನ್ಮದಿನದ ಸಂಭ್ರಮ. ಈ ಹಿನ್ನೆಲೆ ಅದ್ಧೂರಿಯಾಗಿ ಮಗಳ ಬರ್ತ್‌ಡೇಯನ್ನು ಉಪೇಂದ್ರ ದಂಪತಿ ಆಚರಿಸಿದ್ದಾರೆ.
ಹ್ಯಾಪಿ ಬರ್ತ್‌ಡೇ ಬೇಬಿ. ಎಂದಿಗೂ ಚೆನ್ನಾಗಿರು, ನಿನ್ನನ್ನು ನೀನು ನಂಬು. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಪ್ರಿಯಾಂಕಾ ಉಪೇಂದ್ರ (Priyanka Upendra) ಮಗಳಿಗೆ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್ ಪುತ್ರನಿಗೆ ರಂಜನಿ ರಾಘವನ್ ಆ್ಯಕ್ಷನ್ ಕಟ್
ಹೊಸ ಸಿನಿಮಾದ ಪ್ರಚಾರ ಕಾರ್ಯಕ್ಕೆ ಬ್ರೇಕ್ ಕೊಟ್ಟು ಮಗಳ ಬರ್ತ್‌ಡೇಯನ್ನು ಉಪೇಂದ್ರ ಆಚರಿಸಿದ್ದಾರೆ. ಮಗಳಿಗೆ ಕೇಕ್ ತಿನ್ನಿಸಿ ಸಿಹಿ ಮುತ್ತು ಕೊಟ್ಟು ಮುದ್ದು ಮಾಡಿದ್ದಾರೆ ಉಪೇಂದ್ರ ದಂಪತಿ. ಹುಟ್ಟುಹಬ್ಬದ ಸುಂದರ ಫೋಟೋಗಳನ್ನು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದಕ್ಷಿಣ ಭಾರತದಲ್ಲಿ ನನ್ನ ಹೆಸರಲ್ಲೊಂದು ದೇವಸ್ಥಾನ ಆಗಬೇಕು ಎಂದ ಊರ್ವಶಿ – ಟ್ರೋಲ್ ಆದ ನಟಿ
ಬರ್ತ್‌ಡೇಯಂದು ಐಶ್ವರ್ಯಾ ಆಕಾಶ ನೀಲಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಶಾರ್ಟ್ ಆಗಿ ಹೇರ್ ಕಟ್ ಮಾಡಿಸಿ ಮುದ್ದಾಗಿ ಅವರು ಕಾಣಿಸಿಕೊಂಡಿದ್ದಾರೆ. ನಟನ ಪುತ್ರಿಯ ಜನ್ಮದಿನಕ್ಕೆ ನಟಿ ಮಾನ್ಯಾ ನಾಯ್ಡು, ಹರ್ಷಿಕಾ ಪೂಣಚ್ಚ, ಕೀರ್ತಿ ವಿಷ್ಣುವರ್ಧನ್ ಸೇರಿದಂತೆ ಫ್ಯಾನ್ಸ್ ಕೂಡ ಶುಭಹಾರೈಸಿದ್ದಾರೆ.
ಐಶ್ವರ್ಯಾ ಅವರು ಸಾಮಾಜಿಕ ಜಾಲತಾಣದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಷ್ಟಾಗಿ ಅವರು ಆ್ಯಕ್ಟೀವ್ ಆಗಿಲ್ಲ. ಆದರೆ ನಟನ ಪುತ್ರ ಆಯುಷ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಮಾಡಿ ಗುರುತಿಸಿಕೊಳ್ಳುವ ಮಹದಾಸೆ ಅವರಿಗಿದೆ.
ಉಪೇಂದ್ರ ಅವರು ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾ ಪ್ರಚಾರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಪ್ರಿಯಾಂಕಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಲಿವುಡ್ ಖ್ಯಾತನಟಿ ಪ್ರಿಯಾಂಕಾ ಚೋಪ್ರಾ (Priyanka) ಲಾಸ್ ಏಂಜಲೀಸ್ (Los Angeles) ನಲ್ಲಿ ದುಬಾರಿ ಮೊತ್ತದ ಬಂಗಲೆ ಖರೀದಿಸಿದ್ದರು. ಅದೊಂದು ಐಷಾರಾಮಿ ಮನೆಯಾಗಿತ್ತು. ಈ ಮನೆ ಖರೀದಿಗಾಗಿಯೇ ಅವರು ಬರೋಬ್ಬರಿ 20 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಇದೀಗ ಆ ಮನೆಯ ಮಾಲೀಕರ ವಿರುದ್ಧ ಕೋರ್ಟ್ (Court) ಮೆಟ್ಟಿಲು ಏರಿದ್ದಾರೆ ಪ್ರಿಯಾಂಕಾ ದಂಪತಿ.
ಏಳು ಮಲಗುವ ಕೋಣೆಗಳು, ಒಂಬತ್ತು ಸ್ನಾನದ ಗೃಹಗಳು ಸೇರಿದಂತೆ ಸ್ಪಾ ಮತ್ತು ಸ್ಟೀಮ್ ಶವರ್, ಜಿಮ್ ಹಾಗೂ ವೈನ್ ಸೆಲ್ಲಾರ್, ಹೋಂ ಥಿಯೇಟರ್ ಹೀಗೆ ಎಲ್ಲ ಸೌಕರ್ಯವನ್ನು ಆ ಮನೆ ಒಳಗೊಂಡಿತ್ತು. ಮನೆ ಖರೀದಿಸಿದ ನಂತರ ಪೂಲ್ ಮತ್ತು ಸ್ಪಾಗಳಲ್ಲಿ ಸಮಸ್ಯೆ ಕಂಡು ಬಂದಿವೆಯಂತೆ. ಅಲ್ಲದೇ ಬಾರ್ಬೆಕ್ಯೂ ಜಾಗದಲ್ಲಿ ನೀರು ಸೋರಿಕೆ ಆಗಿರುವ ಕಾರಣದಿಂದಾಗಿ ಮೇ 2023ರಲ್ಲಿ ಮೊಕದ್ದಮೆಯನ್ನು ಹೂಡಿದ್ದಾರೆ.
ಸದ್ಯ ಪ್ರಿಯಾಂಕಾ ಮತ್ತು ನಿಕ್ ಜೋನಾಸ್ (Nick Jonas) ದಂಪತಿ ಆ ಮನೆಯಲ್ಲಿ ವಾಸ ಮಾಡುತ್ತಿಲ್ಲ. ಆಗಲೇ ಖಾಲಿ ಮಾಡಿಕೊಂಡು ಬೇರೆ ಮನೆಯಲ್ಲಿ ವಾಸವಿದ್ದಾರೆ. ಮನೆಯಲ್ಲಿ ಹಾನಿ ಆಗಿದ್ದು ಮತ್ತು ಮಾರಾಟಗಾರರು ಅಂತಹ ಮನೆಯನ್ನು ಕೊಟ್ಟಿದ್ದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ನೀಡುವಂತೆ ಅವರು ಕೋರ್ಟಿಗೆ ಮೊರೆ ಹೋಗಿದ್ದಾರೆ.
ಇತ್ತೀಚೆಗಷ್ಟೇ ಕಿರುತೆರೆ ಲೋಕಕ್ಕೆ ಸೇರ್ಪಡೆಯಾಗಿರುವ ‘ಆಸೆ’ (Ase Serial) ಧಾರಾವಾಹಿಯು ತನ್ನ ವಿನೂತನ ಕಥಾ ಹಂದರದಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೊಂದು ಸಾಮಾನ್ಯ ಜನರ ಅಸಮಾನ್ಯ ಕಥೆಯಾಗಿದೆ. ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ರವರು ತುಂಬಾ ಇಷ್ಟ ಪಡುತ್ತಿರುವ ಕಥೆ ಇದಾಗಿದ್ದು, ಆಸೆ ಸೀರಿಯಲ್ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಆಸೆ’ ಎಂಬ ಹೊಸ ಸೀರಿಯಲ್ ಸದ್ಯ ಕಿರುತೆರೆ ಲೋಕದಲ್ಲಿ ಮೋಡಿ ಮಾಡುತ್ತಿದೆ. ಹೀರೋ ಸೂರ್ಯ ಪಾತ್ರದಲ್ಲಿ ‘ನಾಗಿಣಿ 2’ ಖ್ಯಾತಿಯ ನಿನಾದ್ ಹರಿತ್ಸ (Ninaad Harithsa) ಜೀವತುಂಬಿದ್ದಾರೆ. ನಾಯಕಿ ಮೀನಾ ಪಾತ್ರದಲ್ಲಿ ‘ಪುಣ್ಯವತಿ’ ಖ್ಯಾತಿಯ ಪ್ರಿಯಾಂಕಾ (Priyanka) ನಟಿಸಿದ್ದಾರೆ.
ಸಾಮಾನ್ಯವಾಗಿ ಬಡಕುಟುಂಬದಲ್ಲಿ ನಡೆಯುವಂತಹ ಕಷ್ಟ, ನೋವು, ಸಂಕಟ, ಆಸೆ ಎಲ್ಲವನ್ನು ಮನಮುಟ್ಟುವಂತೆ ಈ ಧಾರಾವಾಹಿಯಲ್ಲಿ ಹೇಳಲಾಗಿದೆ. ಸುಂದರ ತಾರಾ ಬಳಗವನ್ನು ಹೊಂದಿರುವ ಈ ಸೀರಿಯಲ್‌ನಲ್ಲಿ ಕಲಾವಿದರಂತೂ ಅತ್ಯದ್ಭುತವಾಗಿ ನಟಿಸುತ್ತಿದ್ದಾರೆ. ಪ್ರತಿಯೊಂದು ಪಾತ್ರವು ಅದರದ್ದೇ ಆದ ತೂಕ ಹೊಂದಿದೆ. ತಂದೆ ಪಾತ್ರದಲ್ಲಿ ನಟ ಮಂಡ್ಯ ರಮೇಶ್ ಕಾಣಿಸಿಕೊಂಡಿದ್ದಾರೆ.
‘ಆಸೆ’ ಸೀರಿಯಲ್‌ನಲ್ಲಿ ಸೂರ್ಯ-ಮೀನಾರ ಕೋಳಿ ಜಗಳ ನೋಡೋದೇ ಸಿಕ್ಕಾಪಟ್ಟೆ ಮಜಾ. ಇದಕ್ಕೆ ಈಗ ಎಮೋಷನಲ್ ಟಚ್ ನೀಡಲಾಗಿದ್ದು, ಮೀನಾ ತಂದೆ ಸಾವನ್ನಪ್ಪಿದ್ದಾರೆ. ಸೂರ್ಯ ತಂದೆ ಆಕೆಯನ್ನು ಮನೆಯ ಸೊಸೆ ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಸದ್ಯ ಮನೆಯವರ ಸಂತೋಷಕ್ಕಾಗಿ ರಂಗನಾಥನ ಮನೆಗೆ ಸೊಸೆಯಾಗಲು ಹೂ ಮಾರುವ ಹುಡುಗಿ ಮೀನಾ ಒಪ್ಪಿದ್ದಾಳೆ. ಇದು ಆಸೆ ಸೀರಿಯಲ್‌ನ ಸದ್ಯದ ಟ್ರ್ಯಾಕ್ ಇದಾಗಿದೆ.
ಇನ್ನು, ಮೇಕಿಂಗ್ ವಿಚಾರದಲ್ಲಿ ‘ಆಸೆ’ ಧಾರಾವಾಹಿ ಒಂದು ಹೆಜ್ಜೆ ಮುಂದಿದೆ. ಜೊತೆಗೆ ಧಾರಾವಾಹಿಯ ಶೀರ್ಷಿಕೆ ಗೀತೆಯಂತೂ ನೋಡುಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಕಥಾ ನಾಯಕಿ ಮೀನಾಳ ಮದುವೆ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ಗೆಳೆಯನ ಜೊತೆ ತಿಮ್ಮಪ್ಪನ ದರ್ಶನ ಮಾಡಿದ ಜಾಹ್ನವಿ ಕಪೂರ್
‘ಆಸೆ’ ನನ್ನ ಮನಸಿಗೆ ತುಂಬಾ ಇಷ್ಟವಾಗಿರೋ ಧಾರಾವಾಹಿ, ಯಾಕಂದ್ರೆ ಸಾಮಾನ್ಯ ಜನರ ಅಸಮಾನ್ಯ ಕಥೆಯಂತಿರೋ ಈ ಸೀರಿಯಲ್ ನಂಗೆ ನ್ಯಾಚುರಲ್ ಫೀಲ್ ಕೊಡ್ತಿದೆ. ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ವಿಚಾರವನ್ನು ಈ ಕಥೆಯಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಹೀಗಾಗಿ ‘ಆಸೆ’ ಸೀರಿಯಲ್ ನಂಗೆ ತುಂಬಾ ಅಚ್ಚು ಮೆಚ್ಚು ಎಂದು ನಟ ರಮೇಶ್ ಅರವಿಂದ್ ಹಾಡಿ ಹೊಗಳಿದ್ದಾರೆ. ಈ ಮೂಲಕ ಆಸೆ ಸೀರಿಯಲ್ ತಂಡಕ್ಕೆ ಬೆಂಬಲಿದ್ದಾರೆ.
ಸ್ಯಾಂಡಲ್ವುಡ್ ಖ್ಯಾತ ನಟಿ ಮಾನ್ವಿತಾ ಕಾಮತ್ (Manvita Kamat) ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಗ್ಯಾಪ್‌ನ ಬಳಿಕ ಮಾನ್ವಿತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೆಂಡಸಂಪಿಗೆ ಬ್ಯೂಟಿ ಲೋಹಿತ್ (Lohit) ನಿರ್ದೇಶನದ ‘ಕ್ಯಾಪ್ಚರ್’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಕ್ಯಾಪ್ಟರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ (Priyanka) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಪ್ರಿಯಾಂಕಾ ಮಗಳ ಪಾತ್ರದಲ್ಲಿ ಮಾನ್ವಿತಾ ನಟಿಸಿದ್ದಾರೆ.
ಕ್ಯಾಪ್ಚರ್ (Capture) ಈಗಾಗಲೇ ಗೊತ್ತಿರುವ ಹಾಗೆ ಇದೊಂದು ಹಾರರ್ ಸಿನಿಮಾ. ಸಂಪೂರ್ಣ ಸಿನಿಮಾ ಸಿಸಿ ಟಿವಿ ಕಾನ್ಸೆಪ್ಟ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡುತ್ತಿರುವುದು ವಿಶೇಷ. ಈಗಾಗಲೇ ಪ್ರಿಯಾಂಕಾ ಉಪೇಂದ್ರ ಅವರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಇದೀಗ ಮಾನ್ವಿತಾ ಕೂಡ ನಟಿಸುತ್ತಿದ್ದಾರೆ ಎನ್ನುವ ವಿಚಾರ ಕ್ಯಾಪ್ಚರ್ ಮೇಲಿನ ಕುತೂಹಲ ಹೆಚ್ಚಿಸಿದೆ. ಮಾನ್ವಿತಾ ಈ ಸಿನಿಮಾದಲ್ಲಿ ಸ್ನೇಹಾ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಹಾರರ್ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ.
‘ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿದ್ದೇನೆ. ಮೊದಲ ತುಂಬಾ ಭಯವಿತ್ತು. ಆದರೆ ಪಾತ್ರ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. 15 ದಿನಗಳು ಗೋವಾದಲ್ಲಿ ಶೂಟಿಂಗ್ ಮಾಡಿದ್ವಿ, ಪ್ರಿಯಾಂಕಾ ಮೇಡಮ್ ಜೊತೆ ಕೆಲಸ ಮಾಡಿದ್ದು ತುಂಬಾ ಇಷ್ಟವಾಯಿತು. ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ತುಂಬಾ ದೃಷ್ಟಿ ಆಗಿತ್ತು ಅನಿಸುತ್ತೆ. ಜ್ವರ ಕೂಡ ಬಂದಿತ್ತು. ದೃಷ್ಟಿ ತೆಗಿಸಿಕೊಂಡ ಮೇಲೆ ಸರಿ ಆಯಿತು’ ಎಂದು ಹೇಳಿದರು.
ಮಾನ್ವಿತಾ ಕೊನೆಯದಾಗಿ ‘ಶಿವ 143’ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ವರ್ಷದ ಬಳಿಕ ತೆರೆಮೇಲೆ ಬರುತ್ತಿದ್ದಾರೆ. ಕ್ಯಾಪ್ಚರ್ ಸಿನಿಮಾದಲ್ಲಿ ಮಾನ್ವಿತಾ ಲುಕ್ ಹೇಗಿರಲಿದೆ ಎನ್ನುವುದು ಸದ್ಯದಲ್ಲೇ ರಿವೀಲ್ ಆಗಲಿದೆ. ಕ್ಯಾಪ್ಚರ್ ಸಿನಿಮಾಗೆ ರವಿರಾಜ್ ಅವರು ತಮ್ಮ ಶ್ರಿ ದುರ್ಗಪರಮೇಶ್ವರಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಈ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಸಿನಿಮಾತಂಡ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಕಾಲಿಡಲಿದೆ.
ಸ್ಯಾಂಡಲ್ವುಡ್ (Sandalwood) ನಟಿ ಪ್ರಿಯಾಂಕಾ ಉಪೇಂದ್ರ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿಯಿದೆ. ಈ ಬೆನ್ನಲ್ಲೇ `ಪ್ರಜೆಯೇ ಪ್ರಭು’ (Prajeye Prabhu) ಎಂಬ ಚಿತ್ರದ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ರಾಜಕಾರಣಿಯಾಗಿ (Politician) ಪ್ರಿಯಾಂಕಾ ತೆರೆಯ ಮೇಲೆ ಮಿಂಚಲಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ (Upendra) ಪ್ರಜಾಕೀಯದ ಮೂಲಕ ಹಲವು ವಿಚಾರಗಳನ್ನು ಹೇಳಲು ಹೊರಟಿದ್ದಾರೆ. ಇದೀಗ ಈ ವಿಚಾರವನ್ನು ತೆರೆಯ ಮೇಲೆ ಉಪ್ಪಿ ಪ್ರಜಾಕೀಯದ ಐಡಿಯಾವನ್ನು ತೋರಿಸಲು ಪ್ರಿಯಾಂಕಾ ಹೊರಟಿದ್ದಾರೆ. ಸಾಯಿಲಕ್ಷಣ್ ಅವರು ಈ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇವರ ಶ್ರಮಕ್ಕೆ ಸೌಭಾಗ್ಯ ಸಿನಿಮಾಸ್ ಅಡಿಯಲ್ಲಿ ಮೂವರು ಉದ್ಯಮಿ ಗೆಳೆಯರು ಸೇರಿಕೊಂಡು ಬಂಡವಾಳ ಹೂಡುತ್ತಿದ್ದಾರೆ. ಇದನ್ನೂ ಓದಿ: ಸಾನ್ಯ ನೆನಪಲ್ಲಿ ಬಿಟ್ಟೋಗ್ಬೇಡ ಎಂದು ಭಾವುಕರಾದ ರೂಪೇಶ್ ಶೆಟ್ಟಿ
ರಾಜಕೀಯ ಹಿನ್ನಲೆಯುಳ್ಳ ಮಹಿಳಾ ಪ್ರಧಾನ ಕಥೆಯನ್ನು ಹೊಂದಿದ್ದು, ಪ್ರಜೆಯೇ ಪ್ರಭುಗಳು ಎಂಬ ಅಡಿಬರಹ ಇರಲಿದೆ. ಭಾರತವನ್ನು ಅಭಿವೃದ್ದಿ ಪಥಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಪ್ರಿಯಾಂಕ ಮಾನವ ಜೀವ ಒಂದೇ ಅಲ್ಲ, ಸರ್ವ ಜೀವಿಗಳು ಸುಖವಾಗಿರಲು ಎಂದೇ ಇವಳ ಅಭಿಲಾಷೆಯಾಗಿರುತ್ತದೆ. ಹಾಗೆಯೇ ಜನರು ನಿಸ್ವಾರ್ಥದಿಂದ ಉನ್ನತ ಹುದ್ದೆಗೆ ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಅವರು ಅದರ ಪರಿಮಿತಿಯಲ್ಲಿ ಸ್ಥಾರ್ಥವನ್ನು ಬಯಸದೆ ಕೆಲಸ ಮಾಡಬೇಕು. ಆಸೆಗಳಿಗೆ ಬಲಿಯಾಗಬಾರದು ಎಂಬುದನ್ನ ಹೇಳಲು ಹೊರಟಿದ್ದಾರೆ. ಈ ಮೂಲಕ ಉಪೇಂದ್ರ ಅವರ ಪ್ರಜಾಕೀಯದ (Prajakeeya) ವಿಚಾರವನ್ನೇ ತೆರೆಯ ಮೇಲೆ ಬಿತ್ತರಿಸಲಿದ್ದಾರೆ.
ಎಂದೂ ಕಾಣಿಸಿಕೊಂಡಿರದ ರಾಜಕಾರಣಿಯ ಪಾತ್ರದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಜನವರಿ ಕೊನೆಯ ವಾರದಂದು ʻಪ್ರಜೆಯೇ ಪ್ರಭುʼ ಸಿನಿಮಾಗೆ ಚಾಲನೆ ಸಿಗಲಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ಸಿಕ್ಕಿದೆ. ಪಂಚ ಸೋಲಿನ ಹೊಣೆ ಹೊತ್ತು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ಹೊತ್ತಿದ್ದ ಪ್ರಿಯಾಂಕಾ ಗಾಂಧಿ ತಮ್ಮ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ನಾಳೆ ಎಐಸಿಸಿ ಕಚೇರಿಯಲ್ಲಿ ನಡೆಯಲಿರುವ ಸಿಡಬ್ಲುಸಿ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಗಾಂಧಿ ಕುಟುಂಬದ ಮೇಲೆ ನಿಷ್ಠೆ ಹೊಂದಿರುವವರಿಂದ್ಲೇ ತುಂಬಿರುವ ಕಾರ್ಯಕಾರಣಿ ಮಂಡಳಿ ಇದಕ್ಕೆ ಅವಕಾಶ ನೀಡುತ್ತಾ? ಒಪ್ಪಿಗೆ ಸೂಚಿಸುತ್ತಾ? ಪ್ರತಿಬಾರಿಯಂತೆ ಈ ಸಭೆಯಲ್ಲೂ ಈ ಹೈಡ್ರಾಮಾದಲ್ಲೇ ಮುಗಿಯುತ್ತಾ? ಅಥ್ವಾ ನಿಜವಾಗಿಯೂ ಸೋನಿಯಾ ಕುಟುಂಬ ವರ್ಗ ರಾಜೀನಾಮೆ ನೀಡಿ, ಹೊಸಬರಿಗೆ ಅವಕಾಶ ನೀಡುತ್ತಾ? ಪಕ್ಷದಲ್ಲಿ ಹೊಸ ಗಾಳಿ ಬೀಸುತ್ತಾ ಎಂಬ ಕುತೂಹಲ ಈಗ ಎಲ್ಲರಲ್ಲಿ ಮನೆ ಮಾಡಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ಗೆ ಹೀನಾಯ ಸೋಲು – ಬಿಜೆಪಿಗಿಂತಲೂ, ಕಾಂಗ್ರೆಸ್‍ಗೆ ಡೇಂಜರ್ ಆ ಪಕ್ಷ!
Congress Working Committee (CWC) meeting to be held tomorrow at 4PM at AICC office in Delhi, to discuss poll debacle in 5 states and current political situation pic.twitter.com/wWg3rRwu4f
ನಿನ್ನೆ ರಾತ್ರಿಯಷ್ಟೇ ಗುಲಾಂ ನಬೀ ಆಜಾದ್ ನಿವಾಸದಲ್ಲಿ ಸಭೆ ಸೇರಿದ ಜಿ-23 ನಾಯಕರು, ಕೂಡ್ಲೇ ಎಐಸಿಸಿ ಅಧ್ಯಕ್ಷೀಯ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ರು. ಶಶಿ ತರೂರ್ ಟ್ವೀಟ್ ಮಾಡಿ, ನಮಗೆ ಯಶಸ್ಸು ಬೇಕಿದ್ರೆ ಬದಲಾವಣೆ ಅನಿವಾರ್ಯ ಎಂದಿದ್ರು. ಆದರೆ ಇದಕ್ಕೆ ಸೋನಿಯಾ ಗಾಂಧಿ ನಿಷ್ಠರು ಮಾತ್ರ, ಗಾಂಧಿ ಕುಟುಂಬದ ನಾಯಕತ್ವ ಇಲ್ಲದೇ ಪಕ್ಷ ಉಳಿಯಲ್ಲ ಅಂತಿದ್ದಾರೆ. ಇದನ್ನೂ ಓದಿ: ಗೋವಾ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರಾ ಪ್ರಮೋದ್ ಸಾವಂತ್?
ಇತ್ತ ಕಾಂಗ್ರೆಸ್ ಕ್ಯಾನ್ಸರ್‍ಗೆ ಚಿಕಿತ್ಸೆ ಇಲ್ಲ ಎಂದು ಸಿಟಿ ರವಿ ಲೇವಡಿ ಮಾಡಿದ್ದಾರೆ. ಮತ್ತೊಮ್ಮೆ ಉತ್ತರ ಪ್ರದೇಶದ ಚುಕ್ಕಾಣಿ ಹಿಡಿಯಲಿರುವ ಯೋಗಿ ಆದಿತ್ಯ ನಾಥ್, ನಾಳೆ ದೆಹಲಿಯಲ್ಲಿ ಪ್ರಧಾನಿ ಮೋದಿ, ಜೆಪಿ ನಡ್ಡಾ ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: ಮಾರ್ಚ್ 16ಕ್ಕೆ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ಸ್ಯಾಂಡಲ್‍ವುಡ್ ಕ್ಯೂಟ್ ಪೇರ್ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟು 18 ವರ್ಷ ಕಳೆದಿದ್ದು, ತಮ್ಮ ವಾರ್ಷಿಕೋತ್ಸವನ್ನು ರೆಸಾರ್ಟ್‍ವೊಂದರಲ್ಲಿ ರೋಮ್ಯಾಂಟಿಕ್ ಆಗಿ ಆಚರಿಸಿದ್ದಾರೆ.
ಯಾವಾಗಲೂ ಸಖತ್ ಕ್ರಿಯೆಟೀವ್ ಆಗಿ ಆಲೋಚಿಸುವ ಉಪೇಂದ್ರ ಅವರು, ಕನ್ನಡದಲ್ಲಿ ಹೊಸ ರೀತಿಯ ಬಗೆ, ಬಗೆಯ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದಾರೆ. ಸದಾ ಸಿನಿಮಾ ಶೂಟಿಂಗ್, ರಾಜಕೀಯ ಎಂದೆಲ್ಲಾ ಬ್ಯುಸಿಯಾಗಿರುವ ಉಪೇಂದ್ರ ಅವರು ಒಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಇದಕ್ಕೆ ಆಗಾಗಾ ಅವರ ಮನೆಯಲ್ಲಿ ಹಬ್ಬದ ಸಂದರ್ಭಗಳಲ್ಲಿ ಸಂಪ್ರದಾಯಿಕ ಪೂಜೆ, ಆಚರಣೆಗಳೇ ಸಾಕ್ಷಿ ಎನ್ನಬಹುದು. ತಾವೂ ಎಷ್ಟೇ ಬ್ಯೂಸಿಯಾಗಿದ್ದರೂ ಈ ಮಧ್ಯೆ ಪತ್ನಿ, ಮಕ್ಕಳಿಗೂ ಕೂಡ ಅಷ್ಟೇ ಸಮಯ ಮೀಸಲಿಡುತ್ತಾರೆ. ಇದನ್ನೂ ಓದಿ: ಮೊದಲ ಪದಗಳನ್ನು ಕಲಿಯುತ್ತಿರುವ ರಾಯನ್ – ಫುಲ್ ಖುಷ್ ಆದ ಮೇಘನಾ
ಸದ್ಯ ಡಿಸೆಂಬರ್ 14ಕ್ಕೆ ಉಪೇಂದ್ರ ಹಾಗೂ ಪ್ರಿಯಾಂಕಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 18 ವರ್ಷ ಕಳೆದಿದ್ದು, ಇದೇ ಖುಷಿಯಲ್ಲಿ ದಂಪತಿ ಕೇರಳದಲ್ಲಿರುವ ವೈಲ್ಡ್ ಪ್ಲಾನೆಟ್ ರೆಸಾರ್ಟ್‍ಗೆ ಭೇಟಿ ನೀಡಿ ಇಬ್ಬರು ಏಕಾಂತವಾಗಿ ಕಾಲ ಕಳೆದಿದ್ದಾರೆ. ಜೊತೆಗೆ ತಮ್ಮ ವಿವಾಹವಾರ್ಷಿಕೋತ್ಸವವನ್ನು ಕೇಕ್ ಕಟ್ ಮಾಡಿ ಸಖತ್ ರೋಮ್ಯಾಂಟಿಕ್ ಆಗಿ ಆಚರಿಸಿದ್ದಾರೆ.
ಇನ್ನೂ ಈ ಫೋಟೋಗಳನ್ನು ಪ್ರಿಯಾಂಕಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಥ್ಯಾಂಕ್ಯು ವೈಲ್ಡ್ ಪ್ಲಾನೆಟ್ ರೆಸಾರ್ಟ್. ಬೆಚ್ಚಗಿನ ಮತ್ತು ಮರೆಯಲಾಗದಂತಹ ಅನುಭವ. ಅಲ್ಲಿನ ಸುಂದರವಾದ ದೃಶ್ಯಗಳು, ಅಧಿಕೃತ ಕೊಠಡಿಗಳು, ರುಚಿಕರವಾದ ಫುಡ್, ಸಿಬ್ಬಂದಿಯ ಸ್ನೇಹ ಮತ್ತು ವಿಶ್ವಾಸ ನಿಮ್ಮ ಅದ್ಭುತ ಆತಿಥ್ಯ ನಮಗೆ ಬಹಳ ಇಷ್ಟವಾಯಿತು. ಮತ್ತೊಮ್ಮೆ ವೈಲ್ಡ್ ಪ್ಲಾನೆಟ್ ರೆಸಾರ್ಟ್‍ಗೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬೋಲ್ಡ್ ದೃಶ್ಯಗಳೇ ಸಮಂತಾ ದಾಂಪತ್ಯಕ್ಕೆ ಮುಳುವಾಯ್ತು!
ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಕುಟುಂಬದವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಲಖೀಂಪುರ್ ಖೇರಿಗೆ ತಲುಪಿ ಭೇಟಿ ನೀಡಿ ಬುಧವಾರ ಸಾಂತ್ವನ ಹೇಳಿದ್ದಾರೆ.
ಮೊದಲಿಗೆ ಇಬ್ಬರು ಪಾಲಿಯಾಗೆ ತಲುಪಿ ಲವ್‍ಪ್ರೀತ್ ಸಿಂಗ್ ಕುಟುಂಬವನ್ನು ಭೇಟಿ ಮಾಡಿದರು. ಈ ವೇಳೆ ಪ್ರಿಯಾಂಕಾ ಹಾಗೂ ರಾಹುಲ್, ಲವ್‍ಪ್ರೀತ್ ಸಿಂಗ್ ಅವರ ಕುಟುಂಬದವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ. ಇನ್ನೂ ಈ ಫೋಟೋವನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಏಕತಾ ದಿನ- ಮಂಗಳೂರಿಗೆ ಆಗಮಿಸಿದ ಸೈಕಲ್ ರ್‍ಯಾಲಿ
इन आँसुओं को पोंछना था हमें
गले लगाकर भरोसा दिलाना था हमें।
वो लगा रहे थे तरकीबें रोकने की,
मगर इनके दर्द ने रुकने न दिया हमें।#NyayHokarRahegapic.twitter.com/3P1rxZmTup
ನಂತರ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಘಟನೆಯಲ್ಲಿ ಮೃತಪಟ್ಟ ಪತ್ರಕರ್ತರಾದ ರಾಮನ್ ಕಶ್ಯಪ್ ಅವರ ನಿಘಾಸನ್ ಅವರ ತಹಸಿಲ್‍ನಲ್ಲಿರುವ ಮನೆಗೆ ಭೇಟಿ ನೀಡಿದರು. ಕೊನೆಗೆ ಧೌರಾಹಾ ತಹಸಿಲ್‍ನಲ್ಲಿರುವ ನಚತಾರ್ ಸಿಂಗ್ ಅವರ ಮನೆಗೆ ತಲುಪಿದರು. ಅಲ್ಲದೇ ಕಾಂಗ್ರೆಸ್ ನಾಯಕರಾದ ಸಚಿನ್ ಪೈಲಟ್ ಮತ್ತು ಆಚಾರ್ಯ ಪ್ರಮೋದ್ ಅವರು ಕೂಡ ಲಖೀಂಪುರ್ ಖೇರಿಯಲ್ಲಿರುವ ಮೃತಪಟ್ಟ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳುತ್ತಿದ್ದ ವೇಳೆ ಮೊರಾದಾಬಾದ್‍ನಲ್ಲಿ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
“पत्रकारों पर हमला संविधान पर हमला है और पत्रकारों की हत्या संविधान की हत्या है।”
ಭಾನುವಾರ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಕೃತ್ಯ ನಡೆದಿದ್ದು, 8 ಜನ ಮೃತಪಟ್ಟಿದ್ದಾರೆ. ಸತ್ತವರಲ್ಲಿ ನಾಲ್ವರು ರೈತರಾಗಿದ್ದಾರೆ. ಇನ್ನೂ ಈ ಕೃತ್ಯ ಖಂಡಿಸಿ ರೈತರು ಬಿಜೆಪಿ ಕಾರ್ಯಕರ್ತರು ಕಾರು ಚಲಾಯಿಸಿದ್ದ ಕಾರಿನ್ನು ಹೊಡೆದುರುಳಿಸಿ ಬೆಂಕಿ ಹಚ್ಚಿದ್ದರು. ಇದನ್ನೂ ಓದಿ: ಹೈದರಾಬಾದ್‌ಗೆ ರೋಚಕ 4 ರನ್ ಜಯ – ಕೊನೆಯಲ್ಲಿ ಪಂದ್ಯ ಕೈ ಚೆಲ್ಲಿದ ಆರ್‌ಸಿಬಿ
ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರ ಹತ್ಯೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದು, ಅವರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿ ಟ್ವಿಟ್ಟರ್‍ನಲ್ಲಿ ಖಂಡಿಸಿದ್ದು, ಈ ಅಮಾನವೀಯ ಹತ್ಯಾಕಾಂಡವನ್ನು ನೋಡಿದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ. ಆದರೆ ನಾವು ಈ ತ್ಯಾಗವನ್ನು ವ್ಯರ್ಥವಾಗಿ ಬಿಡುವುದಿಲ್ಲ, ಕಿಸಾನ್ ಸತ್ಯಾಗ್ರಹ ಜಿಂದಾಬಾದ್! ರೈತ ರಕ್ಷಣೆ ಎಂದು ಬರೆದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
जो इस अमानवीय नरसंहार को देखकर भी चुप है, वो पहले ही मर चुका है।
ಘಟನೆಯೇನು..?
ಲಖೀಂಪುರ್‍ನಲ್ಲಿ ಉಪ ಮುಖ್ಯಮಂತ್ರಿ ಕೇಶವ್‍ಪ್ರಸಾದ್ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿ ನೀಡುವ ವೇಳೆ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬೆಂಗಾವಲು ವಾಹನಗಳ ಸಾಲಿನಲ್ಲಿ ಬರುತ್ತಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾನ ಪುತ್ರ ಇದ್ದ ರೈತರ ಮೇಲೆ ಹರಿದು ನಾಲ್ವರು ರೈತರು ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಆ ಬಳಿಕ ಅಲ್ಲಿ ಪ್ರತಿಭಟನೆ ಉದ್ರಿಕ್ತಗೊಂಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
प्रियंका, मैं जानता हूँ तुम पीछे नहीं हटोगी- तुम्हारी हिम्मत से वे डर गए हैं।
ಲಂಖಿಪುರದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ರೈತರ ಮನೆಗಳಿಗೆ ಭೇಟಿ ನೀಡಲೆಂದು ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿಯವರನ್ನು ಉತ್ತರಪ್ರದೇಶದ ಪೊಲೀಸರು ತಡೆದಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಪೊಲೀಸರು ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಿದ್ದರು. ಸದ್ಯ ಪೊಲೀಸರ ವಶದಲ್ಲಿರುವ ಪ್ರಿಯಾಂಕ ಅವರಿಗೆ ರಾಹುಲ್ ಗಾಂಧಿ ಧೈರ್ಯದ ಮಾತುಗಳನ್ನು ಹೇಳಿದ್ದಾರೆ.
Congress General Secretary Priyanka Gandhi Vadra left for Lakhimpur; earlier visuals from Lucknow pic.twitter.com/5jlWetJftU
ಈ ಪ್ರಕರಣದಿಂದ ನೀವು ಹಿಂದೆ ಸರಿಯಲ್ಲ ಎಂದು ನನಗೆ ಗೊತ್ತು. ಈ ನಿಮ್ಮ ಧೈರ್ಯಕ್ಕೆ ಅವರೇ ಹೆದರುತ್ತಾರೆ. ಈ ಅಹಿಂಸಾತ್ಮಕ ಹೋರಾಟದ ನ್ಯಾಯಕ್ಕಾಗಿ ನಾವು ದೇಶದ ರೈತರನ್ನು ಗೆಲ್ಲುವಂತೆ ಮಾಡುತ್ತೇವೆ ಎಂದು ಟ್ವೀಟ್ ಮಾಡುವ ಮೂಲಕವಾಗಿ ಪೊಲೀಸರ ವಶದಲ್ಲಿ ಇರುವ ಪ್ರಿಯಾಂಕಾ ಅವರಿಗೆ ಧೈರ್ಯವನ್ನು ತುಂಬಿದ್ದಾರೆ.