Tag: ಪ್ರಿಯಾಂಕ

  • ಉಪೇಂದ್ರ ಪುತ್ರ ಚಿತ್ರರಂಗಕ್ಕೆ ಎಂಟ್ರಿ- ‘ಮೊದಲಾ ಸಲ’ ಖ್ಯಾತಿಯ ನಿರ್ದೇಶಕ ಆ್ಯಕ್ಷನ್ ಕಟ್

    ಉಪೇಂದ್ರ ಪುತ್ರ ಚಿತ್ರರಂಗಕ್ಕೆ ಎಂಟ್ರಿ- ‘ಮೊದಲಾ ಸಲ’ ಖ್ಯಾತಿಯ ನಿರ್ದೇಶಕ ಆ್ಯಕ್ಷನ್ ಕಟ್

    ರಿಯಲ್ ಸ್ಟಾರ್ ಉಪೇಂದ್ರ (Upendra) ಮತ್ತು ಪ್ರಿಯಾಂಕ (Priyanka Upendra) ದಂಪತಿಯ ಪುತ್ರ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಆಯುಷ್ ಉಪೇಂದ್ರಗೆ ‘ಮೊದಲಾ ಸಲ’ ಚಿತ್ರದ ನಿರ್ದೇಶಕ ಪುರುಷೋತ್ತಮ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.‌ ಇದನ್ನೂ ಓದಿ:ಪ್ರಭಾಸ್ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡುಕೋಣೆಗೆ 20 ಕೋಟಿ ಸಂಭಾವನೆ!

    ಹಲವು ತಿಂಗಳುಗಳಿಂದ ಉಪೇಂದ್ರ ಪುತ್ರ ಆಯುಷ್ (Ayush) ಚಿತ್ರರಂಗಕ್ಕೆ ಬರಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಯಾವಾಗ ಎಂಬುದು ಕ್ಲ್ಯಾರಿಟಿ ಸಿಕ್ಕಿರಲಿಲ್ಲ. ಈ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ. ಆಯುಷ್ ಸಿನಿಮಾವೊಂದಕ್ಕೆ ಬಣ್ಣ ಹಚ್ಚಲು ತಯಾರಿ ಮಾಡಿಕೊಳ್ತಿದ್ದಾರೆ. ಮಂತ್ರಾಲಯದಲ್ಲಿ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಇದನ್ನೂ ಓದಿ:ಕನ್ನಡತಿ ದಿಶಾ ಮದನ್‌ಗೆ ಕಾನ್ ಫಿಲ್ಮ್ ಫೆಸ್ಟಿವಲ್ ಆಹ್ವಾನ

    ಯಶ್ ನಟಿಸಿದ ‘ಮೊದಲಾ ಸಲ’ ಚಿತ್ರ ನಿರ್ದೇಶನ ಮಾಡಿದ್ದ ಪುರುಷೋತ್ತಮ್ ಅವರು ಆಯುಷ್‌ಗೆ ನಿರ್ದೇಶನ ಮಾಡಲಿದ್ದಾರೆ. ಹಿರಿಯ ಛಾಯಾಗ್ರಾಹಕ ಹೆಚ್. ವೇಣು ಈ ಸಿನಿಮಾಗೆ ಸಿನಿಮಾಟೋಗ್ರಫಿ ಜವಾಬ್ದಾರಿ ಹೊತ್ತಿದ್ದಾರೆ. ಈ ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿ ಐಶ್ವರ್ಯಾ ಉಪೇಂದ್ರ ಕಾರ್ಯನಿರ್ವಹಿಸಲಿದ್ದಾರೆ. ಒಟ್ನಲ್ಲಿ ಪೋಷಕರಂತೆಯೇ ಆಯುಷ್ ಮತ್ತು ಐಶ್ವರ್ಯಾ ಚಿತ್ರರಂಗದಲ್ಲಿ ಬೆಳೆಯಲಿ ಎಂಬುದು ಅಭಿಮಾನಿಗಳ ಹಾರೈಕೆ.

  • ತರುಣ್ ಸುಧೀರ್ ನಿರ್ಮಾಣದ ಹೊಸ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂಟ್ರಿ

    ತರುಣ್ ಸುಧೀರ್ ನಿರ್ಮಾಣದ ಹೊಸ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂಟ್ರಿ

    ನ್ನಡದ ಕಾಟೇರ, ರಾಬರ್ಟ್‌, ತರುಣ್ ಸುಧೀರ್ (Tharun Sudhir) ಬಳಗದಲ್ಲಿ ಕೆಲಸ ಮಾಡಿರುವ ಪುನೀತ್ ರಂಗಸ್ವಾಮಿ ಎಂಬುವವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನೈಜ ಘಟನೆಯ ‘ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ’ಗೆ ಈಗ ಸಂಗೀತ ನಿರ್ದೇಶಕರು ಸಿಕ್ಕಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಮ್ಯೂಸಿಕ್ ಮಾಂತ್ರಿಕ ಡಿ.ಇಮ್ಮಾನ್ (D.Imman) ಅವರು ತರುಣ್ ನಿರ್ಮಾಣದ ಚಿತ್ರಕ್ಕೆ ಟ್ಯೂನ್ ಹಾಕಲಿದ್ದಾರೆ.

    ಇಮ್ಮಾನ್ ಮೂಲತಃ ತಮಿಳು ಸಂಗೀತ ನಿರ್ದೇಶಕ ಮತ್ತು ಗಾಯಕ. ತಮಿಳು ಹೊರತಾಗಿ ಅವರು ಕನ್ನಡ, ತೆಲುಗು, ಹಿಂದಿ, ಮಲಯಾಳಂ ಚಿತ್ರಗಳಿಗೆ ಕೂಡ ಸಂಗೀತ ನೀಡಿದ್ದಾರೆ. ಡಿ.ಇಮ್ಮಾನ್ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’, ಪುನೀತ್ ಅಭಿನಯದ ‘ನಟಸಾರ್ವಭೌಮ’ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಕನ್ನಡದಲ್ಲಿ ತಮ್ಮ ಸಪ್ತ ಸ್ವರದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ನಮ್ಮ ನಾಯಕರು ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು – ನಿನ್ನೆ ಸಮರ್ಥನೆ, ಇಂದು ರಮ್ಯಾ ಆಕ್ಷೇಪ

    ಚಾಮರಾಜನಗರದ ಮೂಲದ ಪ್ರೇಮ ಕಥೆಗೆ ರಕ್ಷಿತಾ ಪ್ರೇಮ್ ಸಹೋದರ ರಾಣಾ (Raana) ಈ ಚಿತ್ರದ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಯ ಟ್ಯಾಗ್‌ ಲೈನ್‌ ಇರುವ ಹೆಸರಿಡದ ಚಿತ್ರಕ್ಕೆ ‘ಮಹಾನಟಿ’ (Mahanati) ಖ್ಯಾತಿಯ ಪ್ರಿಯಾಂಕ (Priyanka) ಅವರು ನಾಯಕಿ ಚಿತ್ರರಂಗಕ್ಕೆ ಮೊದಲ‌ ಹೆಜ್ಜೆ ಇಡುತ್ತಿದ್ದಾರೆ.

    ಈ ಚಿತ್ರಕ್ಕೆ ತರುಣ್ ಮತ್ತು ಅಟ್ಲಾಂಟಾ ನಾಗೇಂದ್ರ ಎಂಬುವವರು ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಈ ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಇರಲಿದೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಉಳಿದ ತಾರಾಬಳಗವನ್ನು ಚಿತ್ರತಂಡ ಪರಿಚಯಿಸಲಿದೆ.

  • ‘ಹುಷಾರ್’ ಹಾಡಿಗೆ ಧ್ವನಿಯಾದ ರಿಯಲ್ ಸ್ಟಾರ್ ಉಪೇಂದ್ರ

    ‘ಹುಷಾರ್’ ಹಾಡಿಗೆ ಧ್ವನಿಯಾದ ರಿಯಲ್ ಸ್ಟಾರ್ ಉಪೇಂದ್ರ

    ತೀಶ್ ರಾಜ್ ನಿರ್ಮಿಸಿ, ನಿರ್ದೇಶಿಸಿರುವ “ಹುಷಾರ್” ಚಿತ್ರದ “ನೀ ನೋಡೋಕ್ಕೆ ಸಿಕ್ಸ್ಟೀನು ಸ್ವೀಟಿ” ಎಂಬ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಇತ್ತೀಚಿಗೆ ಈ ಹಾಡನ್ನು ಪ್ರಿಯಾಂಕ ಉಪೇಂದ್ರ ಬಿಡುಗಡೆ ಮಾಡಿದರು. ಚಿತ್ರದ ಟ್ರೇಲರ್ ನಿರ್ಮಾಪಕ ಎನ್.ಎಂ.ಸುರೇಶ್ ಅವರಿಂದ ಬಿಡುಗಡೆಯಾಯಿತು. ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಉಪೇಂದ್ರ ಅವರು ಹಾಡಿರುವುದು. ಈ ಹಾಡು H20 ಚಿತ್ರದ “ದಿಲ್ ಇಲ್ದೇ ಲವ್ ಮಾಡೋಕಾಗಲ್ವೆ” ಹಾಡಿನ ತರಹ ಇದೆ. ಈ ಹಾಡು ಅದೇ ರೀತಿ ಹಿಟ್ ಆಗಲಿ. ಹಾರಾರ್ ಜಾನರ್ ನ ಈ ಸಿನಿಮಾ ಎಲ್ಲರ ಮನ ಗೆಲ್ಲಲಿ ಎಂದು ಪ್ರಿಯಾಂಕ ಉಪೇಂದ್ರ ಶುಭ ಹಾರೈಸಿದರು. ‌

    ನಾನು ಡಾ||ರಾಜ್ ಅವರ ಅಭಿಮಾನಿ. ಕನ್ನಡ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ರಂಗಭೂಮಿ ನಂಟು ಇದೆ. ಲಾಕ್ ಡೌನ್ ಸಮಯದಲ್ಲಿ “ಹುಷಾರ್” ಪೆನ್ ಡ್ರೈವ್ ಎಂಬ ಕಥೆ ಬರೆದೆ. ಈ ಕಥೆ ಪುಸ್ತಕ ರೂಪದಲ್ಲಿ ಎಲ್ಲೆಡೆ ಲಭ್ಯವಿವೆ.  ಆನಂತರ ಇದನ್ನು ಸಿನಿಮಾ‌ ಮಾಡೋಣ ಎಂದು ಚಿತ್ರೀಕರಣ ಆರಂಭಿಸಿದೆ. ಹಲವು ಅಡೆತಡೆಗಳನ್ನು ದಾಟಿ, ಚಿತ್ರ ಬಿಡುಗಡೆ ಹಂತ ತಲುಪಿದೆ. ಉಪೇಂದ್ರ ಅವರು ನಮ್ಮ ಸಿನಿಮಾದ ಹಾಡೊಂದು ಹಾಡಿರುವುದು ನಮ್ಮ ಹೆಮ್ಮೆ. ಆ ಹಾಡನ್ನು ಬಿಡುಗಡೆ ಮಾಡಿದ ಪ್ರಿಯಾಂಕ ಉಪೇಂದ್ರ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ- ನಿರ್ದೇಶಕ ಸತೀಶ್ ರಾಜ್. ‌ ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

    ನಾಯಕ ಸಿದ್ದೇಶ್, ನಾಯಕಿ ಆದ್ಯಪ್ರಿಯ, ನಟಿ ಪುಷ್ಪಸ್ವಾಮಿ, ನಟರಾದ ಬುಲೆಟ್ ವಿನೋದ್, ಡಿಂಗ್ರಿ ನಾಗರಾಜ್, ನಟಿ ರಚನಾ ಮಲ್ನಾಡ್ ಮುಂತಾದ ಕಲಾವಿದರು  ತಮ್ಮ ಅಭಿನಯದ ಬಗ್ಗೆ ಮಾತನಾಡಿದರು. ಸಹ ನಿರ್ಮಾಪಕಿ ಅಶ್ವಿನಿ ಅರುಣ್ ಕೃಷ್ಣನ್ ಎಲ್ಲರಿಗೂ ಧನ್ಯವಾದ ತಿಳಿಸಿದರು. ಆರ್ಥಿಕ ಸಲಹೆಗಾರರಾದ ಇಂದು ಶೇಖರ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿ ಹುಡುಗಿಗೆ ಇಂಡಿಯಾ ಟಾಪ್ ಮಾಡೆಲ್ಸ್ ಕಿರೀಟ

    ಹುಬ್ಬಳ್ಳಿ ಹುಡುಗಿಗೆ ಇಂಡಿಯಾ ಟಾಪ್ ಮಾಡೆಲ್ಸ್ ಕಿರೀಟ

    ಹುಬ್ಬಳ್ಳಿ: ಹುಬ್ಬಳ್ಳಿ ಮೂಲದ ಪ್ರಿಯಾಂಕ ಕೊಲವೇಕರ ಎಂಬ ರೂಪದರ್ಶಿ ಇಂಡಿಯಾ ಟಾಪ್ ಮಾಡೆಲ್ಸ್-2022 ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತ ಕಿರೀಟವನ್ನು ತಮ್ಮ
    ಮುಡಿಗೇರಿಸಿಕೊಂಡಿದ್ದಾರೆ.

    ಮೇ 29ರಂದು ದಿಲ್ಲಿಯಲ್ಲಿ ಸಂದೀಪ್ ಗೋಸ್ವಾಮಿ, ಸೋನಿಯಾ ಖಟಾನಾ ಆಯೋಜಿಸಿದ್ದ ಪ್ರತಿಷ್ಠಿತ ರೂಪದರ್ಶಿಗಳ ಸ್ಪರ್ಧೆಯಲ್ಲಿ ಪ್ರಿಯಾಂಕ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಈ ಹಿಂದೆ ಗೋವಾದಲ್ಲಿ ನಡೆದ 2019ರ ರಾಯಲ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಗಿ ಹೊರಹೊಮ್ಮಿದ್ದರು. 2018ರಲ್ಲಿ ಇಂಡಿ ರಾಯಲ್ ಪ್ರೈಡ್ ಆಫ್ ನೇಷನ್ ಎಲೈಟ್, 2016ರಲ್ಲಿ ಮಿಸ್ ಇಂಡಿಯಾ ಸೌಥ್ ಬ್ಯೂಟಿಫೂಲ್ ಸ್ಮೈಲ್, 2015 ಮಿಸ್ ಇಂಡಿಯಾ ಅಡ್ವೆಂಚರ್ ಅವಾರ್ಡ್‍ಗಳನ್ನು ಸಹ ಗೆದ್ದಿದ್ದಾರೆ. ಇದನ್ನೂ ಓದಿ: ಉಡುಪಿಯ ಯುಪಿಸಿಎಲ್‍ಗೆ ಹಸಿರುಪೀಠ ಚಾಟಿ – ಅವಾಂತರಕ್ಕೆ 52 ಕೋಟಿ ರೂ. ದಂಡ

    ಪ್ರಿಯಾಂಕ ಮೂಲತಃ ಕಾರವಾರದಲ್ಲಿ ಹುಟ್ಟಿ ಬೆಳೆದಿದ್ದು, ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯಲ್ಲಿ ಮಾಡಿದ್ದಾರೆ. ಅವರ ತಂದೆ ಗಣಪತಿ ಅಕ್ಕಸಾಲಿಗರಾಗಿದ್ದು, ತಾಯಿ ಮಂಗಳ ನಿವೃತ್ತ ಶಿಕ್ಷಕಿಯಾಗಿದ್ದಾರೆ. ಯಾರ ಸಹಾಯವಿಲ್ಲದೆ, ಫಿಟ್ನೆಸ್, ಕಾಸ್ಟ್ಯೂಮ್, ವಾಕಿಂಗ್ ಸ್ಟೈಲ್ ಎಲ್ಲವನ್ನು ಇಂಟರ್‌ನೆಟ್‍ನಲ್ಲಿ ನೋಡಿ ಪ್ರಿಯಾಂಕ ಮಾಡೆಲಿಂಗ್ ಕಲಿತುಕೊಂಡಿದ್ದಾರೆ. ಇದನ್ನೂ ಓದಿ: 23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    ಪ್ರಾಣಿ ಪ್ರಿಯರಾಗಿರುವ ಪ್ರಿಯಾಂಕ ಹುಬ್ಬಳ್ಳಿಯಲ್ಲಿ ಪ್ರತಿದಿನ ಬೆಳಗ್ಗೆ 7ರಿಂದ 10ಗಂಟೆವೆರೆಗೆ ವಿದ್ಯಾನಗರ, ಗೋಕುಲ ರಸ್ತೆಯಲ್ಲಿರುವ ಸುಮಾರು 50 ರಿಂದ 70 ಬೀದಿ ನಾಯಿಗಳಿಗೆ ಆಹಾರ ಹಾಕುವ ಹವ್ಯಾಸಹೊಂದಿದ್ದಾರೆ. ಇದರ ಜೊತೆಗೆ ಗೋವುಗಳಿಗೆ, ಬೀದಿ ನಾಯಿ ಸೇರಿದಂತೆ ಯಾವುದೇ ಪ್ರಾಣಿಗಳ ಸಂಕಷ್ಟಕ್ಕೆ ಮರಗುವ ಗುಣವನ್ನು ಪ್ರಿಯಾಂಕ ಹೊಂದಿದ್ದಾರೆ. ಇವರ ಈ ಸೇವೆಯನ್ನು ಮೆಚ್ಚಿ 2018ರಲ್ಲಿ ಅನಿಶ್ ಚಿಂಚೊರೆ ಮೆಮೊರಿಯಲ್ ಫೌಂಡೆಷನ್ ವತಿಯಿಂದ ಆನಿಮಲ್ ಆಕ್ಟಿವಿಸ್ಟ್ ಎಂಬ ಅವಾರ್ಡ್ ಸಹ ದೊರಕಿದೆ.

  • ಪ್ರಿಯಾಂಕ ಉಪೇಂದ್ರ ನಟನೆಯ 50ನೇ ಸಿನಿಮಾ ಯಾವುದು?

    ಪ್ರಿಯಾಂಕ ಉಪೇಂದ್ರ ನಟನೆಯ 50ನೇ ಸಿನಿಮಾ ಯಾವುದು?

    ಸ್ಯಾಂಡಲ್‌ವುಡ್‌ನಲ್ಲಿ ಆ್ಯಕ್ಷನ್ ಪಾತ್ರಗಳ ಮೂಲಕ ಗಮನ ಸೆಳೆದಿರೋ ನಟಿ ಪ್ರಿಯಾಂಕ ಉಪೇಂದ್ರ ಕನ್ನಡದ ಜತೆ ಪರಭಾಷಾ ಚಿತ್ರಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳು ನಟಿಯ ಕೈಯಲ್ಲಿದೆ. ಇದರ ಬೆನ್ನಲ್ಲೇ `ಡಿಟೆಕ್ಟೀವ್ ತೀಕ್ಷ್ಣʼ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಲ್ಲೂ ಪ್ರಿಯಾಂಕ ನಟನೆಯ 50ನೇ ಚಿತ್ರಕ್ಕೆ ವಿಭಿನ್ನ ಪಾತ್ರದ ಮೂಲಕ ಬರುತ್ತಿದ್ದಾರೆ.

    ಪ್ರಿಯಾಂಕ ಅಭಿನಯದ `ಡಿಟೆಕ್ಟೀವ್ ತೀಕ್ಷ್ಣʼ 50ನೇ ಚಿತ್ರವಾಗಿದ್ದು, ಇದೊಂದು ಬಿಗ್ ಬಜೆಟ್‌ನ ಪ್ಯಾನ ಇಂಡಿಯಾ ಚಿತ್ರವಾಗಿದೆ. ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತ್ರಿವಿಕ್ರಮ ರಾಘು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಪ್ರಿಯಾಂಕ ಉಪೇಂದ್ರ `ಡಿಟೆಕ್ಟೀವ್ ತೀಕ್ಷ್ಣʼ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

    ಎಂದೂ ಮಾಡಿರದ ಡಿಫರೆಂಟ್ ಪಾತ್ರದಲ್ಲಿ ಪ್ರಿಯಾಂಕ ಕಾಣಿಸಿಕೊಳ್ತಿದ್ದು, ಮೇ 12ರಂದು ಮಗ ಆಯುಷ್ ಹುಟ್ಟು ಹಬ್ಬದಂದು ಆಯುಷ್ ಮತ್ತು ನಟ ಉಪೇಂದ್ರ ಚಿತ್ರದ ಮೋಷನ್ ಪೋಸ್ಟರ್ ಜತೆ ಶೀರ್ಷೀಕೆ ಅನಾವರಣ ಮಾಡಲಿದ್ದಾರೆ. ರಘು ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಚಿತ್ರಕ್ಕೆ ಪುರುಷೋತ್ತಮ ಬಿ ಕೊಯೂರು ಬಂಡವಾಳ ಹೂಡುತ್ತಿದ್ದಾರೆ. ಇದನ್ನೂ ಓದಿ: ಆರ್‌ಜೆ ಆಗಿ `ಆನ್ ಏರ್’ ಆಗ್ತಿದ್ದಾರೆ `ಓಲ್ಡ್ ಮಾಂಕ್’ ಶ್ರೀನಿ

    ಆ್ಯಕ್ಷನ್ ಕ್ವೀನ್‌ಗೆ ಟಕ್ಕರ್ ಕೊಡಲು ದಕ್ಷಿಣ ಭಾರದ ಖ್ಯಾತ ವಿಲನ್‌ರೊಬ್ಬರು ಬಣ್ಣ ಹಚ್ಚಲಿದ್ದಾರೆ. ಎರಡು ಭಾಗಗಳಲ್ಲಿ ಬರುತ್ತಿರೋ `ಡಿಟೆಕ್ಟೀವ್ ತೀಕ್ಷ್ಣʼ ಇದೇ ಜೂನ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಕೇರಳ, ರಾಜಸ್ತಾನ, ಗೋವಾ ಸೇರಿದಂತೆ ಹಲವೆಡೆ 120 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ನಟಿ ಪ್ರಿಯಾಂಕ ಉಪೇಂದ್ರ ಅವರನ್ನ ಡಿಟೆಕ್ಟೀವ್ ಅವತಾರದಲ್ಲಿ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

    ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

    ವಾರ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಬಹಳ ಡಿಫರೆಂಟ್ ಟಾಸ್ಕ್‌ಗಳನ್ನು ನೀಡಿದ್ದಾರೆ. ಟಾಸ್ಕ್ ಆರಂಭಕ್ಕೂ ಮುನ್ನ ಮ್ಯೂಸಿಕ್ ವೊಂದನ್ನು ಪ್ಲೇ ಮಾಡಿದಾಗ ಎರಡು ತಂಡದ ಕ್ಯಾಪ್ಟನ್‍ಗಳು ಕನ್ಫೆಕ್ಷನ್ ರೂಮ್‍ಗೆ ಹೋಗಬೇಕಾಗುತ್ತದೆ.

    ಈ ಮಧ್ಯೆ ಮಂಜು ತಮ್ಮ ತಂಡದ ಸದಸ್ಯರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ಮ್ಯೂಸಿಕ್ ಪ್ಲೇ ಆಗುತ್ತದೆ. ಆಗ ದಿವ್ಯಾ ಸುರೇಶ್ ನಿಧಾನವಾಗಿ ಡ್ಯಾನ್ಸ್ ಮಾಡುತ್ತಾ ಬರುತ್ತಾರೆ. ಇದನ್ನು ಕಂಡ ಮಂಜು ದಿವ್ಯಾ ಸುರೇಶ್‍ಗೆ ಬೇಗ ಬಾ ಎಂದು ರೇಗುತ್ತಾರೆ. ಇದರಿಂದ ಬೇಸರಗೊಂಡ ದಿವ್ಯಾ ಸುರೇಶ್ ಪ್ರಿಯಾಂಕ ಬಳಿ, ನಾನು ನಡೆದುಕೊಂಡು ಬರಬೇಕಾದರೆ ಮ್ಯೂಸಿಕ್ ಪ್ಲೇ ಆಯಿತು. ಅದಕ್ಕೆ ನಾನು ಡ್ಯಾನ್ಸ್ ಮಾಡಿಕೊಂಡು ಬರುತ್ತಿದ್ದೆ. ಅದಕ್ಕೆ ಬೇಗ ಬಾ ಏನು ಮಾಡುತ್ತಿದ್ಯಾ ಎಂದು ರೇಗುತ್ತಾರೆ. ನನ್ನ ಮೇಲೆ ರೇಗುವ ಅವಶ್ಯಕತೆ ಏನಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಾವು ಫಸ್ಟ್ ಇನ್ನಿಂಗ್ಸ್‌ನಲ್ಲಿ ಹೇಗಿದ್ವಿ ಹಾಗೇ ಇರಲು ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಆಗುವುದಿಲ್ಲ ಎಂದು ಹೇಳಿದ್ದೆ ಅವನು, ಅವನು ಇರಲು ಆಗುವುದಿಲ್ಲ ಎಂದರೆ ನಾನು ಹಾಗೆಯೇ ಇರುವುದಕ್ಕೆ ಆಗುವುದಿಲ್ಲ. ನಾನು ಸುಮ್ಮನೆ ಒಬ್ಬಳೇ ಕುಳಿತುಕೊಳ್ಳಲು ಆಗುವುದಿಲ್ಲ, ನಾನು ಎಲ್ಲರ ಜೊತೆಯಲ್ಲಿ ಕೂಡ ಮಾತನಾಡಬೇಕಾಗುತ್ತದೆ, ಎಲ್ಲರ ಜೊತೆ ಬೆರೆಯಬೇಕಾಗುತ್ತದೆ. ಕೊಟ್ಟಿರುವ ಟಾಸ್ಕ್‌ಗಳನ್ನು ಮಾಡಬೇಕಾಗುತ್ತದೆ. ಸುದೀಪ್ ಸರ್ ಹೇಳಿದ್ರು, ನಾನು ಚೆನ್ನಾಗಿ ಆಟ ಆಡುತ್ತಿದ್ದೇನೆ ಅಂತ, ನಾನು ಕೂಡ ಅದನ್ನೇ ಮಾಡಬೇಕಾಗುತ್ತದೆ. ಸುಮ್ಮನೆ ನನ್ನ ಮೇಲೆ ರೇಗಾಡಿದ, ಅದರ ಅವಶ್ಯತೆ ಇರಲಿಲ್ಲ ಎಂದು ಹೇಳುತ್ತಾರೆ.

    ಅವನು ಶುಭಾ ಜೊತೆ ಬಹಳ ಕ್ಲೋಸ್ ಆಗಿದ್ದಾನೆ. ಅವನು ಕುಳಿತು ಹೋದ ಬಿನ್ ಬ್ಯಾಗ್ ಮೇಲೆ ಕುಳಿತುಕೊಳ್ಳಲು ನಾನು ಎಷ್ಟು ಯೋಚಿಸುತ್ತೇನೆ ಗೊತ್ತಾ. ನಾನು ನೀನು ಯಾಕೆ ಅಷ್ಟು ಕ್ಲೋಸ್ ಆಗಿದ್ಯಾ ಅಂತ ಒಂದು ಕಂಪ್ಲೇಟ್ ಕೂಡ ಮಾಡಿಲ್ಲ, ನಿನ್ನ ಲೈಫ್, ನೀನು ಏನು ಬೇಕಾದರೂ ಮಾಡಬಹುದು, ಹಾಗೆಯೇ ನನ್ನ ಲೈಫ್ ನಾನು ಏನು ಬೇಕಾದರೂ ಮಾಡಬಹುದು. ನಾನು ಏನು ಮಾಡಿಲ್ಲ ಆದರೂ ಎಲ್ಲರೆದುರು ಸಿಟ್ಟಿನಿಂದ ಬೈಯುವುದು ಎಷ್ಟು ಸರಿ ನಿನ್ನೆ ಕೂಡ ಹೀಗೆ ಮಾಡಿದ ಕಣ್ಣೀರಾಕಿದ್ದಾರೆ. ಇದನ್ನೂ ಓದಿ: ಶಮಂತ್ ಒಂದು ದಾರಿಯಲ್ಲಿ ನಡೆದು ಬಿಟ್ರೆ, ನಾನು ಚಾಲೆಂಜ್ ಮಾಡ್ತೇನೆ: ಚಕ್ರವರ್ತಿ

  • ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ ನೀಡಿದ್ದ ಚಿನ್ನದ ಮೊಟ್ಟೆ ಟಾಸ್ಕ್ ವೇಳೆ ಪ್ರಿಯಾಂಕ ತಿಮ್ಮೇಶ್ ತಲೆಯ ಮೇಲೆ ದಿವ್ಯಾ ಸುರೇಶ್ ಮೊಟ್ಟೆ ಒಡೆದು ಗೆಲ್ಲುತ್ತಾರೆ. ಇದರಿಂದ ತಮ್ಮ ಬಳಿ ಇದ್ದ ಸಂಪೂರ್ಣ ಹಣ ಕಳೆದುಕೊಂಡ ಪ್ರಿಯಾಂಕ ತಿಮ್ಮೇಶ್, ಶಮಂತ್‍ರಿಂದಾಗಿ ದಿವ್ಯಾ ಸುರೇಶ್ ಗೆದ್ದರು ಎಂಬ ಕಾರಣಕ್ಕೆ ಶಮಂತ್ ಲಾಕರ್‌ನಲ್ಲಿದ್ದ ಹಣವನ್ನು ಕದಿಯಲು ಮುಂದಾಗುತ್ತಾರೆ.

    ಈ ವೇಳೆ ಲಾಕರ್‍ನಲ್ಲಿದ್ದ ಹಣವನ್ನು ಕಾಪಾಡಿಕೊಳ್ಳಲು ಶಮಂತ್, ಪ್ರಿಯಾಂಕ ತಿಮ್ಮೇಶ್ ಜೊತೆ ಡೀಲ್ ಮಾಡಿಕೊಳ್ಳುತ್ತಾರೆ. ನಾನು ಈಗ ನಿನಗೆ 14 ಸಾವಿರ ರೂ. ನೀಡುತ್ತೇನೆ. ಆದರೆ ಮುಂದಿನ ಟಾಸ್ಕ್‌ನಲ್ಲಿ ನೀನು ಎಷ್ಟೇ ಗೆದ್ದರೂ 25 ಸಾವಿರ ಮೇಲೆ ದಾಟುವುದಿಲ್ಲ. ಆಗ ನಿನ್ನ ಬಳಿ ಇರುವ ಹಣದಲ್ಲಿ ನನಗೆ ಪಾಲು ನೀಡುವುದಾಗಿ ಪ್ರಾಮಿಸ್ ಮಾಡಿದರೆ ಕೊಡುತ್ತೇನೆ ಎನ್ನುತ್ತಾರೆ. ಅದರಂತೆ ಡೀಲ್ ಓಕೆ ಮಾಡಿಕೊಂಡು ಪ್ರಿಯಾಂಕಗೆ ಶಮಂತ್ ಹಣ ನೀಡುತ್ತಾರೆ.

    ನಂತರ ರಾತ್ರಿ ಗಾರ್ಡನ್ ಏರಿಯಾದಲ್ಲಿ ಶಮಂತ್, ಪ್ರಶಾಂತ್, ಚಕ್ರವರ್ತಿ ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಪ್ರಿಯಾಂಕ ಬಳಿ 14,800ರೂ ಇತ್ತು. ಸದ್ಯ ಅವರ ಲಾಕರ್‌ನಲ್ಲಿ 14,800 ರೂ ಇಟ್ಟಿದ್ದೇನೆ ಅದು ನನಗೆ ಆಮೇಲೆ ವಾಪಸ್ ಬರುತ್ತದೆ ಎಂದು ಹೇಳಿದ್ದಾರೆ. ಆಗ ಚಕ್ರವರ್ತಿಯವರು ನಿನ್ನ ಬಳಿ ಪ್ರಿಯಾಂಕ ಹಣವನ್ನು ಕಿತ್ತುಕೊಂಡು ಹೋಗಿದ್ದಾರಾ ಎಂದಾಗ, ಲಾಕರ್‌ನಲ್ಲಿದ್ದ ಎಲ್ಲವನ್ನು ಎತ್ತಿಕೊಂಡು ಹೋಗಿ ಬಿಟ್ಟಿದ್ದರು ಎಂದು ಶಮಂತ್ ಹೇಳುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಮೊಟ್ಟೆ ಒಡೆದಿರುವುದು ದಿವ್ಯಾ ಸುರೇಶ್, ಹಣ ಕೊಟ್ಟಿರುವುದು ಇವನು, ಇವನೆಷ್ಟು ಮುಟ್ಟಾಳ ಎಂದು ಪ್ರಶಾಂತ್ ಬಳಿ ಮಾತು ಒಪ್ಪಿಸುತ್ತಾ, ಹೊಸ ಚಾಪ್ಟರ್ ಎಂದು ಅಣುಕಿಸುತ್ತಾರೆ.

    ಈ ವೇಳೆ ಶಮಂತ್ ನಗುತ್ತಾ ನಿಮಗೇಕೆ, ನೋಡಿ ನಾನು ಒಂದು ಪ್ರಾಮಿಸ್ ಮೇಲಿನ ನಂಬಿಕೆಯಿಂದ ಹಣ ನೀಡಿದ್ದೇನೆ ಎನ್ನುತ್ತಾರೆ. ಅದಕ್ಕೆ ಚಕ್ರವರ್ತಿಯವರು ನಿನ್ನನ್ನು ನಾನು ಕರೆಸಿ, ನಿನ್ನ ತಲೆಯ ಮೇಲೆ ಮೊಟ್ಟೆ ಹೊಡೆಸಿ, ಇವನಿಗೆ ದುಡ್ಡು ಕೊಟ್ಟು, ಇಷ್ಟೇಲ್ಲಾ ನಾವು ಈ ಹುಡುಗನಿಗೋಸ್ಕರ ಮಾಡಿದರೆ, ಒಂದು ಹುಡುಗಿಗೆ ಹೆದರಿಕೊಂಡು ಹಣ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಪ್ರಶಾಂತ್‍ರವರಿಗೆ ಹೇಳುತ್ತಾರೆ.

    ಈ ಮಧ್ಯೆ ಹೆದರಿಕೊಂಡಿರುವ ಪದವನ್ನು ವಾಪಸ್ ತೆಗೆದುಕೊಳ್ಳಿ ಎಂದು ಶಮಂತ್ ಹೇಳುವ ವೇಳೆ ಪ್ರಶಾಂತ್, ಹಾಗದರೆ ಇವನು ಪ್ರಿಯಾಂಕಗೆ ದುಡ್ಡು ನೀಡಿದ್ದಾನಾ ಎಂದು ಚಕ್ರವರ್ತಿಯವರನ್ನು ಪ್ರಶ್ನಿಸುತ್ತಾರೆ. ಬಳಿಕ ಹಣ ಕೊಟ್ಟಿರುವ ವಿಚಾರ ತಿಳಿದು, ಸೋಫಾ ಮೇಲೆ ಮಲಗಿಕೊಂಡು ನಗುತ್ತಾ, ಬಳಿಕ ಎದ್ದು ತಮ್ಮ ಎರಡು ಚಪ್ಪಲಿಗಳನ್ನು ಪ್ರಶಾಂತ್, ಶಮಂತ್ ಮೇಲೆ ಎಸೆದಿದ್ದಾರೆ.

    ನಂತರ ಈಗ ನೀವು ನಗುತ್ತಿದ್ದೀರಾ ಅಲ್ವಾ, ನಾಳೆಯವರೆಗೂ ನನಗೆ ಟೈಮ್ ಕೊಡಿ ಎನ್ನುತ್ತಾರೆ. ಆಗ ಚಕ್ರವರ್ತಿಯವರು, ಮೊಟ್ಟೆ ಹೊಡೆದಿದ್ದು ಡಿಎಸ್, ಜಗಳ ಆಡಿದ್ದು ಡಿಎಸ್, ಇವನಿಗೋಸ್ಕರ ನೀನು ಅಷ್ಟೇಲ್ಲಾ ತ್ಯಾಗ ಮಾಡಿದೆ ಆದರೆ ಇವನು ಪ್ರಿಯಾಂಕಳನ್ನು ಸೇವ್ ಮಾಡುತ್ತಿದ್ದಾನೆ ಎಂದು ಪ್ರಶಾಂತ್‍ಗೆ ಹೇಳುತ್ತಾ ನಕ್ಕಿದ್ದಾರೆ. ಇದನ್ನೂ ಓದಿ:ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

  • ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

    ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

    ಪ್ರತಿ ದಿನ ದೊಡ್ಮನೆ ಮಂದಿಗೆ ಒಂದಲ್ಲ ಒಂದು ಟಾಸ್ಕ್ ನೀಡುವ ಬಿಗ್‍ಬಾಸ್ 15ನೇ ದಿನದಂದು ಚಿನ್ನದ ಮೊಟ್ಟೆ ಟಾಸ್ಕ್ ನೀಡಿದ್ದರು. ಈ ವೇಳೆ ಗೆದ್ದ ಚಕ್ರವರ್ತಿ, ಮಂಜು, ದಿವ್ಯಾ ಸುರೇಶ್, ಅರವಿಂದ್ ಹಾಗೂ ಶಮಂತ್‍ರವರಿಗೆ ಹೆಚ್ಚುವರಿಯಾಗಿ ಬಿಗ್‍ಬಾಸ್ ಒಂದು ಚಿನ್ನದ ಮೊಟ್ಟೆ ನೀಡಿ, ಅದನ್ನು ಮನೆಯ ಯಾವುದೇ ಸದಸ್ಯರ ತಲೆಯ ಮೇಲೆ ಹೊಡೆದರೆ ಆ ಸದಸ್ಯರ ಲಾಕರ್‍ನಲ್ಲಿರುವ ಹಣ ಮೊಟ್ಟೆ ಹೊಡೆದವರ ಪಾಲಾಗುತ್ತದೆ ಎಂದು ಸೂಚಿಸಿದ್ದರು.

    ಹೀಗಾಗಿ ಚಕ್ರವರ್ತಿ, ಮಂಜು, ದಿವ್ಯಾ ಸುರೇಶ್, ಅರವಿಂದ್ ಹಾಗೂ ಶಮಂತ್ ಮನೆಯ ಇತರ ಸದಸ್ಯರಿಗೆ ಮೊಟ್ಟೆ ಹೊಡೆಯಲು ಪ್ಲಾನ್ ಮಾಡುತ್ತಾರೆ. ಈ ವೇಳೆ ವೈಷ್ಣವಿ, ಶುಭಾ, ಪ್ರಿಯಾಂಕ್ ಬಾತ್ ರೂಮ್‍ನಲ್ಲಿ ಅವಿತುಕೊಂಡಿರುತ್ತಾರೆ. ನಂತರ ಬಾತ್ ರೂಮ್ ಬಾಗಿಲು ತೆಗೆದುಕೊಂಡಿದ್ದ ಪ್ರಿಯಾಂಕರ ಬೆನ್ನ ಹಿಂದೆ ಶಮಂತ್ ಬೀಳುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ಸ್ವಿಮಿಂಗ್ ಪೂಲ್‍ಗೆ ಬಿದ್ದ ಪ್ರಿಯಾಂಕರನ್ನು ಅಟ್ಟಾಡಿಸಿಕೊಂಡು ದಿವ್ಯಾ ಸುರೇಶ್ ಮೊಟ್ಟೆ ಹೊಡೆಯುತ್ತಾರೆ. ಈ ವೇಳೆ ರೊಚ್ಚಿಗೆದ್ದ ಪ್ರಿಯಾಂಕ ದಿವ್ಯಾ ಸುರೇಶ್ ಬೆನ್ನ ಮೇಲೆ ಹೊಡೆಯುತ್ತಾರೆ. ಇದಕ್ಕೆ ದಿವ್ಯಾ ಸುರೇಶ್ ನನಗೆ ಯಾಕೆ ಹೊಡೆದೆ ಎಂದು ಪ್ರಶ್ನಿಸಿದಾಗ, ನೀನು ಏನು ಮಾಡಿದ್ದು ಎಂದು ಪ್ರಿಯಾಂಕ ತಿಮ್ಮೇಶ್ ಕಿಡಿಕಾರಿದ್ದಾರೆ.

    ನಂತರ ಬಿಗ್‍ಬಾಸ್ ನೀರಿನಲ್ಲಿದ್ದಾಗ ಹೊಡೆದಿದ್ದಾರೆ ಎಂದು ಹೇಳುತ್ತಾ ಮನೆಯ ಒಳಗೆ ಸಿಟ್ಟಿನಿಂದ ಹೋಗಿ ಪ್ರಿಯಾಂಕ ತಿಮ್ಮೇಶ್ ದಿವ್ಯಾ ಸುರೇಶ್ ಪೆಟ್ಟಿಗೆಯಲ್ಲಿದ್ದ ಹಣವನ್ನು ಹಾಳು ಮಾಡುತ್ತಾರೆ. ಬಳಿಕ ಸ್ವಿಮಿಂಗ್ ಪೂಲ್‍ಗೆ ಮತ್ತೆ ಇಳಿದ ಪ್ರಿಯಾಂಕ ಮೊಟ್ಟೆ ಹೊಡೆಯುವುದು ದೊಡ್ಡ ವಿಚಾರವಲ್ಲ. ನನಗೆ ಪೆಟ್ಟಾಗುವುದು ಇರುತ್ತದೆ. ಪರಾಚುವುದು ಇರುತ್ತದೆ ಎಂದು ಶಮಂತ್‍ಗೆ ಹೇಳುತ್ತಿರುತ್ತಾರೆ. ಈ ವೇಳೆ ನಾನು ಅವನಿಗೆ ಮೊಟ್ಟೆ ಹೊಡೆಯಲು ಹೇಳಿದೆ ಎಂದು ಚಕ್ರವರ್ತಿಯವರು ಮಧ್ಯೆ ಮಾತನಾಡಿದಾಗ, ನಾನು ಶಮಂತ್ ಹತ್ತಿರ ಮಾತಾಡುತ್ತಿದ್ದೇನೆ ನಿಮ್ಮ ಹತ್ತಿರ ಇಲ್ಲ ಎಂದು ಪ್ರಿಯಾಂಕ ಹೇಳಿದಾಗ, ನಾನು ಶಮಂತ್ ಹತ್ತಿರನೇ ಹೇಳುತ್ತಿದ್ದೇನೆ ಎಂದು ಚಕ್ರವರ್ತಿ ಹೇಳುತ್ತಾರೆ.

    ಇದಕ್ಕೆ ಹೇ.. ಎಂದು, ನೀವೇಕೆ ಮಾತನಾಡುತ್ತಿದೀರಾ ಸುಮ್ಮನೆ ಎಂದು ಪ್ರಿಯಾಂಕ ಚಕ್ರವರ್ತಿ ವಿರುದ್ಧ ಹರಿಹಾಯ್ದಿದ್ದಾರೆ. ಆಗ ಚಕ್ರರ್ತಿಯವರು ನಾನು ನಿನ್ನ ಹತ್ತಿರ ಮಾತನ್ನೇ ಆಡುತ್ತಿಲ್ಲ. ಕಿರುಚಾಡ ಬೇಡ. ನಾನು ಶಮಂತ್ ಹತ್ತಿರ, ಮೊಟ್ಟೆ ಇರುವವರ ಹತ್ತಿರ ಹೇಳುತ್ತಿದ್ದೇನೆ, ನಿನ್ನ ಬಳಿ ಮಾತನಾಡುತ್ತಲೇ ಇಲ್ಲ. ಕೂಗಾಡಿ ಸೀನ್ ಕ್ರಿಯೆಟ್ ಮಾಡಬೇಡ. ನನಗೂ ನಿನಗೂ ವಿಷಯವೇ ಇಲ್ಲ. ನೀನು ಏನಾದರೂ ಮಾಡಿಕೋ, ಕಿರುಚಿಕೋ, ನನ್ನ ಈ ವಿಚಾರಕ್ಕೆ ಎಳೆಯಬೇಡ, ತೆಗೆದುಕೊಂಡರೆ ಕೆಟ್ಟದಾಗಿ ಮಾತನಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:ಆಲೂಗಡ್ಡೆಯಿಂದ ತಯಾರಿಸಿ ರುಚಿಯಾದ ಬೆಳಗ್ಗಿನ ಟಿಫನ್

  • ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‍ನ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ವೇಳೆ ದಿವ್ಯಾ ಸುರೇಶ್ ಹೇಳಿದ ಒಂದು ಹೇಳಿಕೆಯಿಂದ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಆಕ್ರೋಶಗೊಂಡಿದ್ದಾರೆ.

    ಭಾನುವಾರ ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರನ್ನು ಬಹುಶಃ ನಿನ್ನನ್ನು ಸೆಕ್ಯೂರಿಟಿ ಗಾರ್ಡ್ ಆಗಿ ಕರೆಸಿರಬಹುದು. ಯಾವಾಗಲೂ ಹಿಂದೆ ಮಾತನಾಡುತ್ತಿದ್ದರು ಎಂದು ನಮ್ಮ ಮನೆಯಲ್ಲಿ ಹೇಳುತ್ತಿದ್ದರು ಎಂದು ದಿವ್ಯಾ ಸುರೇಶ್ ಸುದೀಪ್ ಎದುರಲ್ಲಿ ಹೇಳಿದ್ದರು.

    ವಾರದ ಕೊನೆಯಲ್ಲಿ ಪ್ರಶಾಂತ್ ಅವರನ್ನು ಎಲಿಮಿನೆಟ್‍ಗೊಳಿಸಿ ನಂತರ ಮನೆಯ ಸ್ಪರ್ಧಿಗಳಿಗೆ, ಪ್ರಶಾಂತ್ ಅವರು ಸೇವ್ ಆಗಿದ್ದು, ಬಿಗ್‍ಬಾಸ್ ಮುಂದಿನ ಆದೇಶದವರೆಗೂ ಮನೆಯಲ್ಲಿ ಪ್ರಶಾಂತ್ ಕಂಡರೂ ಕಾಣದಂತೆ ವರ್ತಿಸಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು. ನಂತರ ಮನೆ ಮಂದಿಯನ್ನೆಲ್ಲಾ ಮಾತನಡಿಸಲು ಸರ್ಕಸ್ ಮಾಡಿದ ಪ್ರಶಾಂತ್ ಜೊತೆಗೆ ಯಾರು ಕೂಡ ಮಾತನಾಡಲಿಲ್ಲ.

    ಈ ವೇಳೆ ದಿವ್ಯಾ ಸುರೇಶ್‍ರನ್ನು ಬಿಡದೇ ಪ್ರಶಾಂತ್ ಸಂಬರ್ಗಿ ಕೆದಕುವ ಪ್ರಯತ್ನ ಮಾಡಿದ್ದಾರೆ. ಡೈನಿಂಗ್ ಹಾಲ್ ಕುಳಿತು ದಿವ್ಯಾ ಸುರೇಶ್ ಟಿಫಿನ್ ಮಾಡುತ್ತಿರುತ್ತಾರೆ. ಆಗ ಪ್ರಶಾಂತ್, ಪ್ರಿಯಾಂಕ ಆಚೆ ಹೋದಾಗ ನನ್ನ ಟಿವಿ ಸಂದರ್ಶನಗಳನ್ನು ನೋಡಿದ್ಯಾ? ಫೇಕ್ ಲವ್ ಸ್ಟೋರಿ ಬಗ್ಗೆ ಹೇಳಿದ್ದೇನೆ. ಅದನ್ನು ಇಲ್ಲಿಯೂ ಒಪ್ಪಿಕೊಂಡಿದ್ದಾರೆ. ಪ್ರಿಯಾಂಕ ಫೇಕ್ ಲವ್ ಸ್ಟೋರಿ ಬಗ್ಗೆ ಕೇಳಿದ್ಯಾ? ಕೃತಕವಾದ ಮೆಕನಿಕಲ್ ಲವ್ ಸ್ಟೋರಿ ಬಗ್ಗೆ ನಾನು ಆಚೆ ಹೇಳಿದ್ದೇನೆ. ಕರ್ನಾಟಕ ಜನತೆ ಮುಂದೆ ಆಡಿರುವ ನಾಟಕ ಒಪ್ಪಿಕೊಂಡಿದ್ದಾರೆ. ಇರುವುದನ್ನು ಹಾಗೇ ನಾನು ಆಚೆ ನೇರವಾಗಿ ಹೇಳಿದರೆ ನಿಷ್ಠುರವಾಗಿ ಕೋಪ ಬರುತ್ತದೆ. ಪ್ರಿಯಾಂಕ ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ ಎಷ್ಟು ಕೆಲಸ ಗೊತ್ತಾ? ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ 30 ಸಾವಿರ ಸಂಬಳ ಜೊತೆಗೆ ಮನೆ ಕೂಡ ನೀಡಿದ್ದೇನೆ ಎಂದು ಅಣುಕಿಸಿದ್ದಾರೆ.

    ನಂತರ ಶಮಂತ್ ಕಿವಿಯ ಬಳಿ ಬಂದು ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು ಕೆಟ್ಟವರಿಗೆ ದುಷ್ಟ ಎಂದು ನನಗೆ ಶತ್ರುಗಳಿಗಿಂತ ಮಿತ್ರರು ಜಾಸ್ತಿ ಇದ್ದಾರೆ. ಆದರೆ ಶತ್ರುಗಳೇ ರಿಯಲ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ

  • ಪಿಂಕಿ ನಿನ್ನ ಸೀರಿಯಲ್ ಸ್ಕೂಲ್‍ನಲ್ಲಿದ್ದಾಗಲೇ ನೋಡ್ತಿದ್ದೆ : ದಿವ್ಯಾ

    ಪಿಂಕಿ ನಿನ್ನ ಸೀರಿಯಲ್ ಸ್ಕೂಲ್‍ನಲ್ಲಿದ್ದಾಗಲೇ ನೋಡ್ತಿದ್ದೆ : ದಿವ್ಯಾ

    ಬಿಗ್‍ಬಾಸ್ ಮನೆಯಲ್ಲಿ ಪ್ರಿಯಾಂಕ ತಿಮ್ಮೇಶ್ ಮತ್ತು ದಿವ್ಯಾ ಸುರೇಶ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ತುಂಬಾ ಅನ್ಯೋನ್ಯವಾಗಿ ಇದ್ದಂತೆ ಕಾಣುತ್ತಿದೆ. ಆದರೆ ದಿವ್ಯಾ ಸುರೇಶ್ ಕೊಟ್ಟ ಚಮಕ್‍ಗೆ ಪ್ರಿಯಾಂಕ ಸರಿಯಾಗಿ ಉತ್ತರ ಕೊಟ್ಟಿದ್ದಾರೆ.

    ನೀನು ನಟನೇ ಮಾಡುತ್ತಿದ್ದ ಧಾರಾವಾಹಿಯನ್ನು ನಾನು ಸ್ಕೂಲ್‍ನಲ್ಲಿ ಇದ್ದಾಗ ನಾನು ನೋಡುತ್ತಿದ್ದೆ. ನನಗೆ ಈಗ 23 ವರ್ಷ ನಾನು ಚಿಕ್ಕವಳು ಎನ್ನುವ ಅರ್ಥದಲ್ಲಿ ದಿವ್ಯಾ ಸುರೇಶ್ ಮಾತನಾಡಿದ್ದಾರೆ. ಆಗ ಪ್ರಿಯಾಂಕ ನನ್ನ ಸೀರಿಯಲ್ ಬರುವಾಗ ನೀನು ಸ್ಕೂಲ್‍ನಲ್ಲಿ ಇದ್ಯಾ..? ನಿನ್ನ ವಯಸ್ಸು ಎಷ್ಟು? ಈಗಲೂ ನೀನು, ನಾನು ದೊಡ್ಡವಳು ಎಂದು ಹೇಳುತ್ತೀಯಾ? ಎಂದು ಹೇಳುತ್ತಾ ಇಬ್ಬರು ಕಿತ್ತಾಡಿಕೊಂಡಿದ್ದಾರೆ.

    ನೀನು ನನ್ನ ಅಕ್ಕ ಎಂದು ಕರಿಯಬೇಕು. ನನ್ನ ಸೀರಿಲ್ ನೋಡ್ಕೋಂಡು ಬೆಳೆದವಳು ನೀನು. ನನ್ನ ಸೀರಿಯಲ್ ನೋಡಿ ನೀನು ನಟನೆ ಕಲಿತುಕೊಂಡಿದ್ದು, ಎಂದು ಹೇಳುತ್ತಾ ದಿಂಬುಗಳಲ್ಲಿ ಹೊಡೆದುಕೊಂಡಿದ್ದಾರೆ. ನಾನು ನೀನಗೆ ಹೊಡೆಯಬೇಕು ನೀನು ನನಗೆ ಹೊಡೆಯುತ್ತಿಯಾ? ನಾನು ಇಲ್ಲಿ ಡೊಡ್ಡವಳು ಎಂದು ಪ್ರಿಯಾಂಕ ಹೇಳಿದ್ದಾರೆ. ಹೀಗೆ ಇಬ್ಬರು ತಮಾಷೆಯಾಗಿ ಜಗಳ ಮಾಡಿಕೊಂಡಿದ್ದಾರೆ.

    ಸ್ಟ್ರಾಟರ್ಜಿ ಪಾಠ ಮಾಡಿದ ದಿವ್ಯಾ ಸುರೇಶ್
    ಸ್ಟ್ರಾಟರ್ಜಿ ಎಂಬುದನ್ನು ನಾನು ಇಲ್ಲಿಯೇ ಹೇಳಿದ್ದು, ಏನು ಹಾಗಂದ್ರೆ ಎಂದು ಪ್ರಿಯಾಂಕ ದಿವ್ಯಾ ಬಳಿ ಕೇಳಿದ್ದಾರೆ. ಆಗ ದಿವ್ಯಾ ಹಾಗಂದ್ರೆ ತಂತ್ರಗಾರಿಕೆ ಎಂದರ್ಥವಾಗಿದೆ. ಸ್ಟ್ರಾಟರ್ಜಿಯಿಂದ ಗೆದ್ದರು ಕೂಡಾ ನಾವು ಹೊರಗೆ ಹೋಗುವುದು ಕೂಡ ರಾಂಗ್‍ವೇ ಆಗಿದೆ. ನಿಯತ್ತಾಗಿ ಆಟ ಆಡಬೇಕು ಎಂದು ಪ್ರಿಯಾಂಕ ಹೇಳಿದ್ದಾರೆ. ಹೀಗೆ ಗೇಮ್ ಪ್ಲ್ಯಾನಿಂಗ್ ಕುರಿತಾಗಿ ಇಬ್ಬರು ಮಾತನಾಡಿಕೊಂಡಿದ್ದಾರೆ.

    ದಿವ್ಯಾ ಸುರೇಶ್ ಮೊದಲ ಇನ್ನಿಂಗ್ಸ್‍ನಲ್ಲಿ ಹೆಚ್ಚಾಗಿ ಮಂಜು ಜೊತೆಗೆ ಮಾತನಾಡುತ್ತಾ ಸಮಯವನ್ನು ಕಳೆಯುತ್ತಿದ್ದರು. ಆದರೆ ಈ ಬಾರಿ ಆಟ ಕೊಂಚ ಬದಲಾಗಿದೆ. ಮಂಜು ತಮ್ಮ ಆಟವನ್ನು ಶುರು ಮಾಡಿದ್ದಾರೆ. ಇಬ್ಬರು ಮನೆಯವರು ಜೊತೆಗೆ ಬೆರೆಯುತ್ತಿದ್ದಾರೆ. ದಿವ್ಯಾ ಹೆಚ್ಚಾಗಿ ಪ್ರಿಯಾಂಕ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರ ಸ್ನೇಹ ಹೀಗೆ ಮುಂದುವರೆಯುತ್ತಾ ಅಥವಾ ಬಿಗ್‍ಬಾಸ್ ಆಟ ಬೇರೆ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.