Tag: ಪ್ರಿಯಕರ

  • ಜೈಲಿಂದ ಬಂದು ಪ್ರಿಯತಮೆಗೆ ಚಾಕುವಿನಿಂದ ಇರಿದ ಪ್ರಿಯಕರ

    ಜೈಲಿಂದ ಬಂದು ಪ್ರಿಯತಮೆಗೆ ಚಾಕುವಿನಿಂದ ಇರಿದ ಪ್ರಿಯಕರ

    ಚಿಕ್ಕಬಳ್ಳಾಪುರ: ಚಾಕುವಿನಿಂದ ಇರಿದು ಪ್ರಿಯತಮೆಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದ ಭಗತ್ ಸಿಂಗ್ ನಗರದಲ್ಲಿ ನಡೆದಿದೆ.

    ಭಗತ್ ಸಿಂಗ್ ನಗರದಲ್ಲಿ ಘಟನೆ ನಡೆದಿದ್ದು, ಆರೋಪಿ ಹೇಮಂತ್ ತನ್ನ ಪ್ರಿಯತಮೆ ಸಂಗೀತಾ(22)ಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಸಂಗೀತಾ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೂಲತಃ ಚಿಂತಾಮಣಿ ಮೂಲದವರಾದ ಸಂಗೀತಾ, ಭಗತ್ ಸಿಂಗ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತಡರಾತ್ರಿ ಹೊಂಚು ಹಾಕಿ ಮನೆಗೆ ನುಗ್ಗಿದ ಹೇಮಂತ್, ಸಂಗೀತಾ ಹೊಟ್ಟೆ, ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ಹೇಮಂತ್ ನನ್ನು ಬಂಧಿಸಿ ಕರೆತಂದಿದ್ದಾರೆ.

    ಮದುವೆಯಾಗಿ ಮಗುವಾದ ನಂತರ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನ ಜೊತೆ ವಿಚ್ಛೇದನ ಪಡೆದಿದ್ದ ಸಂಗೀತಾ, ಮಗು ಹಾಗೂ ತಂದೆ ತಾಯಿಯೊಂದಿಗೆ ನಗರದಲ್ಲಿ ನೆಲೆಸಿದ್ದರು. ಈ ವೇಳೆ ಹೇಮಂತ್ ಜೊತೆ ಸಂಬಂಧ ಬೆಳೆಸಿ, 2 ವರ್ಷಗಳಿಂದ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಆದರೆ ಕಳೆದ 3-4 ತಿಂಗಳ ಹಿಂದೆ ಸಂಗೀತಾ ವರ್ತನೆಯಿಂದ ಆಕೆ ಮೇಲೆ ಅನುಮಾನಪಟ್ಟು, ಹೇಮಂತ್ ಜಗಳ ಮಾಡುತ್ತಿದ್ದ.

    ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಹೇಮಂತ್ ತನ್ನ ಸಹವಾಸಕ್ಕೆ ಬರಬಾರದು ಎಂದು ಸಂಗೀತಾ ಮುಚ್ಚಳಿಕೆ ಬರೆಸಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ಹೇಮಂತ್, ಕುಡಿದ ಅಮಲಿನಲ್ಲಿ ಸಂಗೀತಾ ತಂದೆಯ ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಪ್ರಕರಣ ಸಂಬಂಧ ಪೊಲೀಸರು ಹೇಮಂತ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೀಗ 4 ದಿನಗಳ ಹಿಂದೆ ಜೈಲಿನಿಂದ ಹೊರ ಬಂದ ಹೇಮಂತ್, ಸಂಗೀತಾ ವಾಸವಿದ್ದ ಮನೆ ಹುಡುಕಾಟ ನಡೆಸಿ ಮನೆಗೆ ಹೋಗಿದ್ದಾನೆ.

    ಮನೆಯಲ್ಲಿ ಬೇರೆ ಯುವಕ ಇದ್ದಿದ್ದನ್ನು ಕಂಡು ಇಬ್ಬರ ನಡುವೆ ಜಗಳ ಆಗಿದೆ. ಈ ವೇಳೆ ಹೇಮಂತ್ ಮೇಲೆ ಹಲ್ಲೆ ನಡೆಸಿ ಹೊರ ಹಾಕಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹೇಮಂತ್, ತಡರಾತ್ರಿ ಹೊಂಚು ಹಾಕಿ ಮನೆಗೆ ನುಗ್ಗಿದ ಹೇಮಂತ್, ಸಂಗೀತಾ ಹೊಟ್ಟೆ, ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಇದೀಗ ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರಿಯತಮೆಯನ್ನು ಕೊಂದು ರೈಲಿನಿಂದ ಜಿಗಿದ..!

    ಪ್ರಿಯತಮೆಯನ್ನು ಕೊಂದು ರೈಲಿನಿಂದ ಜಿಗಿದ..!

    ಬೆಂಗಳೂರು: ಪ್ರೇಯಸಿಯನ್ನ ಕೊಲೆ ಮಾಡಿ ಪ್ರಿಯತಮ ಆತ್ಮಹತ್ಯೆಗೆ ಯತ್ನ ಮಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಈ ಘಟನೆ ಬಂಡೆಪಾಳ್ಯದ ಬಳಿ ಇರುವ ಸೋಮಸುಂದ್ರ ಪಾಳ್ಯದಲ್ಲಿ ಜರುಗಿದೆ. ಪ್ರಿಯಕರ ಹಾಗೂ ಆತ್ಮಹತ್ಯೆಗೆ ಯತ್ನಿಸಿದವನನ್ನು ರಾಜು ಎಂದು ಗುರುತಿಸಲಾಗಿದೆ.

    ಝೋಮೊಟೋದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರಾಜು ಮತ್ತು ಆತನ ಪ್ರಿಯತಮೆ ಮಧ್ಯೆ ಜಗಳವಾಗಿದೆ. ಹೀಗಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ರಾಜು ತನ್ನ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

    ಇತ್ತ ಲವ್ವರ್ ಕೊಲೆಗೈದ ಬಳಿಕ ರಾಜು ಚಲಿಸುತ್ತಿರುವ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿರುವ ರಾಜುವನ್ನು ಸ್ಥಳೀಯರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ರಾಜು ನಗರದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆ ಸಂಬಂಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪ್ತಾಪ್ತೆ ಮೇಲೆ ಅತ್ಯಾಚಾರ, ಮುಖಕ್ಕೆ ಆ್ಯಸಿಡ್ ಸುರಿದು, ಕತ್ತು ಹಿಸುಕಿ ಕ್ರೂರವಾಗಿ ಕೊಂದ ಪ್ರಿಯಕರ

    ಅಪ್ತಾಪ್ತೆ ಮೇಲೆ ಅತ್ಯಾಚಾರ, ಮುಖಕ್ಕೆ ಆ್ಯಸಿಡ್ ಸುರಿದು, ಕತ್ತು ಹಿಸುಕಿ ಕ್ರೂರವಾಗಿ ಕೊಂದ ಪ್ರಿಯಕರ

    – ಬಾಲಕಿಗೆ ಬೇರೆ ಹುಡುಗನ ಜೊತೆ ಸಂಬಂಧವಿದ್ದಿದ್ದಕ್ಕೆ ಕೊಲೆ

    ಗದಗ: ಪ್ರಿಯಕರನೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ವಿಚಿತ್ರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಜಿಲ್ಲೆಯ ನರಗುಂದ ಪಟ್ಟಣದ ಬಾಲಕಿ ಕೊಲೆಯಾಗಿದೆ. ಆಕೆಯ ಪ್ರೀಯಕರನೇ ಅಪಹರಿಸಿ ಬೆಳಗಾವಿ ಜಿಲ್ಲೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿ, ಕತ್ತು ಹಿಸುಕಿ, ಮುಖಕ್ಕೆ ಆಸಿಡ್‍ ಹಾಕಿ ಸುಟ್ಟು ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ. ಧಾರವಾಡ ಜಿಲ್ಲೆಯ 23 ವರ್ಷದ ಪ್ರಿಯಕರ ಸದ್ದಾಮ್ ಈ ಕೃತ್ಯ ವ್ಯಸಗಿದ್ದಾನೆ.

    ಧಾರವಾಡ ಜಿಲ್ಲೆಯ ಯುವಕ ಗದಗ ಜಿಲ್ಲೆಯ ಬಾಲಕಿಯನ್ನು ಬೆಳಗಾವಿ ಜಿಲ್ಲೆಗೆ ಕರೆದೊಯ್ದು ಅತ್ಯಾಚಾರ ಎಸಗಿ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಮಾರ್ಚ್ 20ರಂದು ಬಾಲಕಿ ನಾಪತ್ತೆಯಾಗಿದ್ದು, ಮಾ.23 ರಂದು ಪಾಲಕರು ನರಗುಂದ ಪೊಲೀಸ್ ಠಾಣೆಯಲ್ಲಿ ಬಾಲಕಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಕಳೆದ 2 ದಿನಗಳ ಹಿಂದೆ ಬಾಲಕಿ ಕೊಳೆತ ಸ್ಥಿತಿಯ ಶವ ಪತ್ತೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ಮೊಬೈಲ್ ಟ್ರ್ಯಾಪ್ ಮಾಡಿದ ವೇಳೆ ಆಕೆಯ ಪ್ರಿಯಕರ ಸದ್ದಾಮ್ ಸಿಕ್ಕಿಬಿದ್ದಿದ್ದಾನೆ. ಬಳಿಕ ಆರೋಪಿಯನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಮಾಡಿದ ಎಲ್ಲ ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆಕೆಗೆ ಬೇರೆ ಹುಡುಗರ ಜೊತೆಗೆ ಸಂಬಂಧವಿತ್ತು. ಅದೇ ಕಾರಣಕ್ಕೆ ಕೊಲೆ ಮಾಡಿದ್ದೇನೆ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.

    ಸದ್ದಾಮ್ ಧಾರವಾಡ ಜಿಲ್ಲೆಯದವನಾಗಿದ್ದು, ಆಗಾಗ ನರಗುಂದದ ಸಂಬಂಧಿಕರ ಮನೆಗೆ ಬರುತ್ತಿದ್ದ. ಆಗ ಬಾಲಕಿ ಜೊತೆ ಸ್ನೇಹ ಬೆಳೆದು ಪ್ರೇಮಾಂಕುರವಾಗಿತ್ತು. ಕಳೆದ 2 ವರ್ಷಗಳಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಗದಗ ಪೊಲೀಸರು ಆರೋಪಿ ಸದ್ದಾಮ್‍ನನ್ನು ರಾಮದುರ್ಗ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ಕೃತ್ಯದ ಬಗ್ಗೆ ನರಗುಂದ ಪಟ್ಟಣದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಅಕ್ರಮ ಸಂಬಂಧ, ಭಿನ್ನಾಭಿಪ್ರಾಯ- ಪ್ರಿಯತಮೆ ಮಗನನ್ನೇ ಕೊಂದ ಪಾಪಿ

    ಅಕ್ರಮ ಸಂಬಂಧ, ಭಿನ್ನಾಭಿಪ್ರಾಯ- ಪ್ರಿಯತಮೆ ಮಗನನ್ನೇ ಕೊಂದ ಪಾಪಿ

    – 6 ವರ್ಷದ ಬಾಲಕನ ಅಸ್ಥಿಪಂಜರ ಪತ್ತೆ

    ಚಿಕ್ಕಬಳ್ಳಾಪುರ: ಪ್ರಿಯಕರನಿಂದಲೇ ಪ್ರಿಯತಮೆಯ ಮಗನನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದ್ದು, ಕಾಣೆಯಾಗಿದ್ದ 06 ವರ್ಷದ ಬಾಲಕನ ಅಸ್ಥಿಪಂಜರ ಪತ್ತೆಯಾಗಿದೆ.

    ವಾಟದಹೊಸಹಳ್ಳಿಯ 6 ವರ್ಷದ ಬಾಲಕ ವಿಷ್ಣುವರ್ಧನ್‍ನನ್ನು ಕೊಲೆ ಮಾಡಲಾಗಿದೆ. ವಾಟದಹೊಸಹಳ್ಳಿ ಗ್ರಾಮದ ರಾಮಾಂಜಿ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದಾನೆ. ಗೌರಿಬಿದನೂರು ತಾಲೂಕಿನ ಸಾದರ್ಲಹಳ್ಳಿ ಬಳಿ ಅಸ್ಥಿಪಂಜರ ಪತ್ತೆಯಾಗಿದೆ.

    ಬಾಲಕ ವಿಷ್ಣುವರ್ಧನ್ ಪ್ರಭಾವತಿ ಹಾಗೂ ನಾರಾಯಣಸ್ವಾಮಿ ದಂಪತಿಯ ಮಗನಾಗಿದ್ದು, ಮಾರ್ಚ್ 16 ರಂದು ನಿಗೂಢವಾಗಿ ಕಾಣೆಯಾಗಿದ್ದ. ವಿಷ್ಣುವರ್ಧನ್ ನಾಪತ್ತೆ ಪ್ರಕರಣ ಭೇದಿಸಿದ ಗೌರಿಬಿದನೂರು ಪೊಲೀಸರು, ರಾಮಾಂಜಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪಹರಣ ಹಾಗೂ ಕೊಲೆ ಸತ್ಯ ಬಯಲಾಗಿದೆ.

    ಪ್ರಭಾವತಿ ಹಾಗೂ ರಾಮಾಂಜಿ ನಡುವೆ ಅನೈತಿಕ ಸಂಬಂಧ ಇತ್ತು. ಇತ್ತೀಚೆಗೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿ ಬೇರೆಯಾಗಿದ್ದರು. ಅದೇ ದ್ವೇಷ ಹಾಗೂ ಮತ್ತೆ ಪ್ರಭಾವತಿ ಒಲಿಸಿಕೊಳ್ಳಲು ವಿಷ್ಣುವರ್ಧನ್‍ನನ್ನು ರಾಮಾಂಜಿ ಅಪಹರಿಸಿದ್ದಾನೆ. ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣ ದಾಖಲಾಗಿದ್ದಕ್ಕೆ ಆರೋಪಿ ರಾಮಾಂಜಿ ಬಾಲಕ ವಿಷ್ಣುವರ್ಧನ್‍ನ ಕತ್ತು ಹಿಸುಕಿ ಕೊಲೆ ಮಾಡಿ, ಮೂಟೆಯಲ್ಲಿ ಹಾಕಿ ಬಿಸಾಡಿದ್ದ. ಗೌರಿಬಿದನೂರು ಪೊಲೀಸರು ಇದೀಗ ಆರೋಪಿ ರಾಮಾಂಜಿಯನ್ನು ಬಂಧಿಸಿದ್ದಾರೆ.

  • ಮಂಚದ ಕೆಳಗೆ ಅವಿತಿದ್ದ ಪತ್ನಿಯ ಪ್ರಿಯಕರನನ್ನು ಎಳೆದು ಚೂರಿ ಇರಿದು ಕೊಂದ!

    ಮಂಚದ ಕೆಳಗೆ ಅವಿತಿದ್ದ ಪತ್ನಿಯ ಪ್ರಿಯಕರನನ್ನು ಎಳೆದು ಚೂರಿ ಇರಿದು ಕೊಂದ!

    ಬೆಂಗಳೂರು: ಪತ್ನಿಯ ಪ್ರಿಯತಮನನ್ನು ಆಕೆಯ ಪತಿಯೇ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯ ಅಂದ್ರಹಳ್ಳಿಯಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಶಿವು ಎಂದು ಗುರುತಿಸಲಾಗಿದೆ. ವಿನುತಾ ಮತ್ತು ಭರತ್ ಜೋಡಿ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿತ್ತು. ಈ ನಡುವೆ ಪತ್ನಿ ವಿನುತಾ ಜೊತೆ ಶಿವು ಸಂಬಂಧ ಇಟ್ಟುಕೊಂಡಿದ್ದ.

    ಗಂಡ ಕೆಲಸಕ್ಕೆಂದು ಮನೆ ಬಿಟ್ಟು ಹೋದ ಬಳಿಕ ಶಿವು ವಿನುತಾಳನ್ನ ಭೇಟಿಯಾಗಲು ಬರುತ್ತಿದ್ದನು. ಪತಿ ಇಲ್ಲದಿದ್ದಾಗ ಪ್ರಿಯತಮನ ಜೊತೆ ಚಕ್ಕಂದ ಆಡುತ್ತಿದ್ದ ಪತ್ನಿಯ ಕಳ್ಳ ಕೆಲಸ ಭರತ್ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಒಂದು ದಿನ ಕೆಲಸಕ್ಕೆಂದು ಹೋದ ಭರತ್, ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವ ಸಲುವಾಗಿ ಏಕಾಏಕಿ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.

    ಇತ್ತ ಕೆಲಸಕ್ಕೆಂದು ಹೋಗಿದ್ದ ಪತಿ ಏನೂ ಹೇಳದೆ ಮನೆಗೆ ಏಕಾಏಕಿ ಬರುತ್ತಿದ್ದಂತೆಯೇ ಗಾಬರಿಗೊಂಡ ವಿನುತಾ, ತನ್ನ ಪ್ರಿಯಕರನನ್ನು ಮಂಚದ ಕೆಳಗೆ ಅವಿತುಕೊಳ್ಳುವಂತೆ ಸೂಚನೆ ನೀಡಿದ್ದಾಳೆ. ಆದರೆ ಇದನ್ನು ಮನಗಂಡ ಪತಿ ಭರತ್, ಮಂಚದ ಕೆಳಗೆ ಅವಿತಿದ್ದ ಶಿವುನನ್ನು ಹೊರಗೆ ಎಳೆದು ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ.

    ಚಾಕು ಇರಿತದಿಂದ ಗಂಭೀರ ಗಾಯಗೊಂಡ ಶಿವು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧಿಸಿದಂತೆ ಭರತ್ ನನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

  • ಪ್ರಿಯಕರನ ಸಾವಿಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಬಾಲಕಿ

    ಪ್ರಿಯಕರನ ಸಾವಿಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಬಾಲಕಿ

    ರಾಂಚಿ: ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವುದನ್ನು ಕೇಳಿ ಆಘಾತಗೊಂಡು, 2 ದಿನಗಳ ಬಳಿಕ 15 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ರಾತ್ರಿ ಜಾರ್ಖಂಡ್‍ನ ಪಕೂರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಿಯಕರನ ಆತ್ಮಹತ್ಯೆಯ ವಿಷಯ ತಿಳಿದು ಬೇಸತ್ತು ಬಾಲಕಿ ಆತ್ಮಹತ್ಯೆಗೆ ಮಾಡಿಕೊಂಡಿರುವುದಾಗಿ ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

    ಪೋಷಕರಿಲ್ಲದ ವೇಳೆ ಬಾಲಕಿ ಸೋಮವಾರ ರಾತ್ರಿ ಮನೆಯ ಸಮೀಪದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಗಳವಾರ ಬೆಳಗ್ಗೆ ಬಾಲಕಿಯ ಮೃತ ದೇಹ ಕಂಡ ಗ್ರಾಮಸ್ಥರು ಆಕೆಯ ಕುಟುಂಬಸ್ಥರಿಗೆ ಸಾವಿನ ಕುರಿತಾಗಿ ಮಾಹಿತಿ ನೀಡಿದ್ದಾರೆ. ಮನೆಗೆ ಹಿಂದಿರುಗಿ ಬಂದ ಪೋಷಕರಿಗೆ ಮಗಳ ಸಾವಿನ ವಿಚಾರ ತಿಳಿದುಬಂದಿದ್ದು, ಪ್ರಿಯಕರನ ಸಾವಿನ ಸುದ್ದಿಯಿಂದ ಬೇಸತ್ತು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬಾಲಕಿ ತಂದೆ ತಿಳಿಸಿದ್ದಾರೆ.

    ಬಾಲಕಿಯ ತಂದೆ ಪ್ರೀತಿಗೆ ನಿರಾಕರಿಸಿದ ಕಾರಣ ಮಗ ಮೃತಪಟ್ಟಿದ್ದಾನೆ ಎಂದು ಪ್ರಿಯಕರ ತಾಯಿ ಪೊಲೀಸ್ ಠಾಣೆಯಲ್ಲಿ ಬಾಲಕಿ ತಂದೆ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ ಬಾಲಕಿಯನ್ನು ಪ್ರೀತಿಸುತ್ತಿದ್ದರಿಂದ ಈ ಹಿಂದೆ ನನ್ನ ಮಗನಿಗೆ ಬಾಲಕಿ ತಂದೆ ಜೀವ ಬೆದರಿಕೆ ಕೂಡ ಹಾಕಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

  • ಪತಿಯನ್ನ ಕೊಂದು ಒಂದು ವಾರ ಶವವನ್ನ ಮನೆಯಲ್ಲೇ ಇಟ್ಕೊಂಡ್ಳು!

    ಪತಿಯನ್ನ ಕೊಂದು ಒಂದು ವಾರ ಶವವನ್ನ ಮನೆಯಲ್ಲೇ ಇಟ್ಕೊಂಡ್ಳು!

    – ಚಿಕ್ಕಪ್ಪ, ಇನಿಯನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ್ಳು!

    ಚಂಡೀಗಢ: ಅಕ್ರಮ ಸಂಬಂಧ ಉಳಿಸಿಕೊಳ್ಳಲು ಪ್ರಿಯಕರ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿ ಮಹಿಳೆ ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದಿನೇಶ್ ಪತ್ನಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ವ್ಯಕ್ತಿ. ಜನವರಿ 28ರಂದು ಚರಂಡಿ ಬಳಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಮೃತದೇಹ ಸೈನಿಕ್ ಕಾಲೋನಿ ನಿವಾಸಿ ದಿನೇಶ್ ಎಂಬವರದ್ದು ಅಂತ ಗೊತ್ತಾಯ್ತು. ದಿನೇಶ್ ಪ್ರಾಪರ್ಟಿ ಡೀಲರ್ ಆಗಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ತನಿಖೆಯಲ್ಲಿ ದಿನೇಶ್ ಪತ್ನಿ ನಿತಿನ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. ನಿತಿನ್ ಹಾಗೂ ಆಕೆಯ ಸಂಬಂಧಕ್ಕೆ ದಿನೇಶ್ ಅಡ್ಡಿಯಾಗುತ್ತಿದ್ದರಿಂದ ತನ್ನ ಚಿಕ್ಕಪ್ಪ ಹರ್ಜೀತ್ ಸಿಂಗ್, ನಿತಿನ್ ಹಾಗೂ ಆತನ ಸ್ನೇಹಿತರೊಂದಿಗೆ ಮಹಿಳೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದಳು.

    ಜನವರಿ 11 ಹಾಗೂ 12 ಮಧ್ಯರಾತ್ರಿ ಮಹಿಳೆ ಪ್ರಿಯಕರ ನಿತಿನ್, ಆತನ ಸ್ನೇಹಿತರಾದ ವಿನೀತ್ ಮತ್ತು ವಿಷ್ಣು ಕೋಲಿನಿಂದ ದಿನೇಶ್ ಮೇಲೆ ಹಲ್ಲೆ ನಡೆಸಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ನಂತರ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಬಾತ್ ರೂಂನಲ್ಲಿ ಇಟ್ಟಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಹರ್ಜೀತ್ ಸಿಂಗ್ ಪಾತ್ರವು ಇದ್ದು ಆತನು ಬರುವುದು ತಡವಾದ್ದರಿಂದ ನಿತಿನ್ ಹಾಗೂ ಆತನ ಸ್ನೇಹಿತರೇ ದಿನೇಶ್‍ನನ್ನು ಕೊಲೆ ಮಾಡಿ ಮುಗಿಸಿ ಬಿಟ್ಟಿದ್ದರು. ಅಲ್ಲದೆ ಈ ಕೊಲೆ ಮಾಡಲು ನಿತಿನ್ ಸ್ನೇಹಿತರಾದ ವಿನೀತ್ ಮತ್ತು ವಿಷ್ಣುವಿಗೆ 41 ಸಾವಿರ ರೂ. ಹಣ ನೀಡಿದ್ದನು.

    ಸುಮಾರು ಒಂದು ವಾರದವರೆಗೂ ಪತಿಯ ಶವವನ್ನು ಮಹಿಳೆ ಮನೆಯಲ್ಲಿಯೇ ಇಟ್ಟಿಕೊಂಡಿದ್ದಾಳೆ. ಆದರೆ ಶವ ಜನವರಿ 18ಕ್ಕೆ ದುರ್ವಾಸನೆ ಬರಲು ಆರಂಭವಾಗಿದೆ ಹಾಗಾಗಿ ಮಹಿಳೆ ಮತ್ತೋರ್ವ ಸ್ನೇಹಿತ ದೀಪಕ್ ಜೊತೆ ಸೇರಿ ಶವವನ್ನು ಡಬುವಾ ಪ್ರದೇಶದಲ್ಲಿನ ಚರಂಡಿಗೆ ಎಸೆದಿದ್ದಾಳೆ. ಇದೀಗ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಇತರ ಶಂಕಿತರನ್ನು ಬಂಧಿಸಲು ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ.

  • ಗೆಳತಿ ಶವವನ್ನು ನಡು ರಸ್ತೆಯಲ್ಲಿ ಎಸೆದ ಪ್ರಿಯಕರ

    ಗೆಳತಿ ಶವವನ್ನು ನಡು ರಸ್ತೆಯಲ್ಲಿ ಎಸೆದ ಪ್ರಿಯಕರ

    – ಸೆಕ್ಸ್ ವೇಳೆ ಸಾವನ್ನಪ್ಪಿದಳಾ ಯುವತಿ?
    – ಹೋಟೆಲ್ ರೂಂ ಬುಕ್ ಮಾಡಿದ್ದ ಇನಿಯ

    ಭುವನೇಶ್ವರ: ಯುವತಿಯೊಬ್ಬಳ ಶವವನ್ನು ಆಕೆಯ ಪ್ರಿಯಕರ ರಸ್ತೆಬದಿಯಲ್ಲಿ ಎಸೆದು ಹೋಗಿರುವ ಘಟನೆ ಒಡಿಶಾದ ಜಾಬ್‍ಪುರ್ ಜಿಲ್ಲೆಯ ಕೌಖಿಯಾ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶದಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪ್ರಿಯಕರ ಮತ್ತು ಆತನ ಗೆಳೆಯನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮೃತ ಯುವತಿ ಮಯೂರ್‍ಬಂಜ್ ಜಿಲ್ಲೆಯ ನಿವಾಸಿಯಾಗಿದ್ದು, ಜರಾಫುಲಾ ಎಂದು ಗುರುತಿಸಲಾಗಿದೆ. ಅಲ್ಲದೆ ಜರಾಫುಲಾ ಆರ್‍ಡಿ ಮಹಿಳಾ ಯೂನಿವರ್ಸಿಟಿ ವಿದ್ಯಾರ್ಥಿಯಾಗಿದ್ದಾಳೆ.

    ತನಿಖೆ ವೇಳೆ ಜರಾಫುಲಾ ಹಾಗೂ ಪ್ರಿಯಕರ ರಾಕೇಶ್ ಭುವನೇಶ್ವರ್ ಮೂಲದ ಹೋಟೆಲ್‍ವೊಂದರ ರೂಮ್ ನಂ-201ರಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ಕುರಿತಂತೆ ಹೋಟೆಲ್ ಸಿಸಿಟಿವಿ ಕ್ಯಾಮೆರಾ ಫೋಟೇಜ್ ಮತ್ತು ನೋಂದಣಿ ಪುಸ್ತಕದ ವಿವರಗಳನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದಾರೆ.

    ಈ ಕುರಿತಂತೆ ಆರೋಪಿ ರಾಕೇಶ್ ವಿಚಾರಣೆ ವೇಳೆ ಇಬ್ಬರು ಹೋಟೆಲ್‍ನಲ್ಲಿ ದೈಹಿಕ ಸಂಪರ್ಕ ನಡೆಸಿದ್ದೇವು. ಆದರೆ ಮುಂಜಾನೆ ಹೊತ್ತಿಗೆ ಜರಾಫುಲಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಇದನ್ನು ಕಂಡು ಗಾಬರಿಯಿಂದ ನನ್ನ ಸ್ನೇಹಿತ ಶೇಖರ್‍ಗೆ ಕರೆ ಮಾಡಿ ವಿಷಯ ತಿಳಿಸಿದೆ. ಕೂಡಲೇ ಸ್ಥಳಕ್ಕೆ ಬಂದ ಶೇಖರ್ ಜೊತೆ ಜರಾಫುಲಾ ಶವವನ್ನು ಸ್ಕೂಟರ್‍ನಲ್ಲಿ ಕೂರಿಸಿಕೊಂಡು ರಸ್ತೆ ಮಧ್ಯೆ ಎಸೆದು ಪರಾರಿಯಾಗಿರುವುದಾಗಿ ತಿಳಿಸಿದ್ದಾನೆ.

    ಯುವತಿ ತಂದೆ ರಮಾಕಾಂತ್, ಜನವರಿ 24ರಂದು ಜರಾಫುಲಾ, ಚಕ್ರಧರ್ ಎಂಬ ಟೀಚರ್ ಮಗಳ ಬರ್ತ್‍ಡೇ ಸಮಾರಂಭಕ್ಕೆ ಹೋಗುವುದಾಗಿ ಮನೆಗೆ ತಿಳಿಸಿದ್ದಳು, ಜನವರಿ 25ರಂದು ಬರ್ತಡೇ ಸಮಾರಂಭ ನಡೆದಿತ್ತು. ಮಾರನೇ ದಿನ ಜನವರಿಗೆ 26 ರಂದು ಬೆಳಗ್ಗೆ 11 ಗಂಟೆಗೆ ಚಕ್ರಧರ್ ಜರಾಫುಲಾಳನ್ನು ಊರಿಗೆ ಮರಳಲು ಜಯದೇವ್ ವಿವಾರ್ ಸ್ಕ್ವೇರ್‍ಗೆ ಡ್ರಾಪ್ ಮಾಡಿದ್ದರು. ಆದರೆ ಹೊಟ್ಟೆನೋವಿದೆ ಆಸ್ಪತ್ರೆಗೆ ಹೋಗಿ, ಫ್ರೆಂಡ್ಸ್ ಮನೆಯಲ್ಲಿ ತಂಗಿದ್ದು ನಾಳೆ ಬರುವುದಾಗಿ ಮಧ್ಯಾಹ್ನ 3 ಗಂಟೆಗೆ ಕರೆ ಮಾಡಿ ತಿಳಿಸದ್ದ ಜಲಾಫುಲಾಗೆ ರಾತ್ರಿ ಎಷ್ಟೇ ಕರೆ ಮಾಡಿದರು ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ.

    ಅಲ್ಲದೆ ಊರಿನಲ್ಲಿ ಪೈಪ್‍ಲೈನ್ ಕೆಲಸ ಮಾಡುತ್ತಿದ್ದ ರಾಕೇಶ್‍ನನ್ನು ಜರಾಫುಲಾ ಪ್ರೀತಿಸುತ್ತಿದ್ದಳು. ಇಬ್ಬರು ವಾಟ್ಸಪ್ ಹಾಗೂ ವೀಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು. ಜೊತೆಗೆ ಜಲಾಫುಲಾ ಹೆಚ್ಚಾಗಿ ರಾಕೇಶ್‍ನೊಂದಿಗೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಳು. ಜರಾಫುಲಾಳನ್ನು ಆತನೇ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.

    ಇದೀಗ ಪ್ರಕರಣ ಕುರಿತಂತೆ ಪೊಲೀಸರು ರಾಕೇಶ್‍ನನ್ನು ಬಂಧಿಸಿದ್ದು, ಆತನ ಸ್ನೇಹಿತ ಶೇಖರ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಸಾವಿನ ವಿಚಾರವಾಗಿ ಪೊಲೀಸರಿಗೆ ಯಾವುದೇ ನಿಖರವಾದ ಮಾಹಿತಿ ದೊರೆತಿಲ್ಲ.

  • ಮತ್ತೊಬ್ಬಳ ಜೊತೆ ಪ್ರಿಯಕರನ ಸುತ್ತಾಟ- ನೊಂದ ಪ್ರಿಯತಮೆ ಆತ್ಮಹತ್ಯೆ

    ಮತ್ತೊಬ್ಬಳ ಜೊತೆ ಪ್ರಿಯಕರನ ಸುತ್ತಾಟ- ನೊಂದ ಪ್ರಿಯತಮೆ ಆತ್ಮಹತ್ಯೆ

    ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಪ್ರಿಯಕರ ಕೈಕೊಟ್ಟ ಕಾರಣ ಪ್ರಿಯತಮೆ ನೇಣಿಗೆ ಶರಣಾದ ಘಟನೆ ಮೈಸೂರಲ್ಲಿ ನಡೆದಿದೆ.

    ರಷ್ಮಿ(26) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೈಸೂರಿನ ರಾಘವೇಂದ್ರ ನಗರದಲ್ಲಿ ಘಟನೆ ನಡೆದಿದ್ದು, ಯುವತಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್ ನೋಟ್ ನಲ್ಲಿ ಪ್ರಿಯಕರ ಅಕ್ಷಿತ್ ಕುಮಾರ್, ಪ್ರಿಯಕರನ ತಾಯಿ ಲಕ್ಷ್ಮಿ ಹಾಗೂ ಅಕ್ಷಿತ್ ಕುಮಾರ್ ನ ಹೊಸ ಗರ್ಲ್ ಫ್ರೆಂಡ್ ವರ್ಷಿಣಿ ಹೆಸರು ಉಲ್ಲೇಖಿಸಿದ್ದಾರೆ.

    ಕಳೆದ ನಾಲ್ಕು ವರ್ಷಗಳಿಂದ ರಷ್ಮಿ ಹಾಗೂ ಅಕ್ಷಿತ್ ಕುಮಾರ್ ನಡುವೆ ಪ್ರೇಮವಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ರಷ್ಮಿಯನ್ನು ಅಕ್ಷಯ್ ಕುಮಾರ್ ಮದುವೆ ಆಗುವುದಾಗಿ ನಂಬಿಸಿದ್ದ. ಕಳೆದ 15 ದಿನಗಳಿಂದ ವರ್ಷಿಣಿ ಜೊತೆ ಅಕ್ಷಿತ್ ಕುಮಾರ್ ಓಡಾಡುತ್ತಿದ್ದ. ಇದಕ್ಕೆ ಅಕ್ಷಿತ್ ಕುಮಾರ್ ತಾಯಿ ಲಕ್ಷ್ಮಿ ಪ್ರೋತ್ಸಾಹ ಸಹ ಇತ್ತು ಎಂದು ಡೆತ್ ನೋಟ್ ಬರೆಯಲಾಗಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮದುವೆಯಾಗಲು ಪ್ರಿಯಕರ ನಿರಾಕರಿಸಿದಕ್ಕೆ ಬ್ಯೂಟಿಷಿಯನ್ ಸೂಸೈಡ್

    ಮದುವೆಯಾಗಲು ಪ್ರಿಯಕರ ನಿರಾಕರಿಸಿದಕ್ಕೆ ಬ್ಯೂಟಿಷಿಯನ್ ಸೂಸೈಡ್

    – ಫೋನ್ ಪಿಕ್ ಮಾಡದಿದ್ದರಿಂದ ಖಿನ್ನತೆಗೆ ಜಾರಿದ್ದ ಯುವತಿ

    ಗುರುಗ್ರಾಮ: ಪ್ರೀತಿಸಿ ಮದುವೆಯಾಗಲು ಪ್ರಿಯಕರ ನಿರಾಕರಿಸಿದ ಕಾರಣ 25 ವರ್ಷದ ಬ್ಯೂಟಿಷಿಯನ್ ಒಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಸಾಂದರ್ಭಿಕ ಚಿತ್ರ

    ಆತ್ಮಹತ್ಯೆಗೆ ಶರಣಾದವಳನ್ನು ಪೂನಂ(25) ಎಂದು ಗುರುತಿಸಲಾಗಿದೆ. ಈಕೆ ಡಿಸೆಂಬರ್ 24ರಂದು ಸಾವಿಗೀಡಾಗಿದ್ದಾಳೆ. ಪೂನಂಳನ್ನು ಪ್ರಿಯಕರ ಮದುವೆಯಾಗಲು ಒಪ್ಪದೇ ದ್ರೋಹ ಬಗೆದ ಕಾರಣ ಈಕೆ ವಿಷ ಸೇವಿಸಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ಡಿಸೆಂಬರ್ 31ರಂದು ದೂರು ದಾಖಲಿಸಿದ್ದಾರೆ.

    ತನಿಖೆಯಲ್ಲಿ ಪೂನಂ ನಗರದ ಸಲೂನ್ ಒಂದರಲ್ಲಿ ಸುಮಾರು 1 ವರ್ಷದಿಂದ ಕೆಲಸ ಮಾಡುತ್ತಿದ್ದು, 6 ತಿಂಗಳ ಹಿಂದೆ ಕುಲದೀಪ್ ಎಂಬಾತನನ್ನು ಭೇಟಿಯಾಗಿ ಇಬ್ಬರು ಸ್ನೇಹಿತರಾಗಿದ್ದರು. ಯುವತಿ ಕುಟುಂಬಸ್ಥರು ಹೇಳುವ ಪ್ರಕಾರ, ಆಕೆಯನ್ನು ಕುಲದೀಪ್ ಮದುವೆಯಾಗುವುದಾಗಿ ಮಾತುಕೊಟ್ಟಿದ್ದನು. ಆದ್ರೆ ದೀಪಾವಳಿ ಸಮಯದಲ್ಲಿ ಆತ ನನ್ನನ್ನು ಮದುವೆಯಾಗಲು ನಿರಾಕರಿಸಿರುವುದಾಗಿ ನಮಗೆ ತಿಳಿಸಿದ್ದಳು. ನಂತರ ಎಷ್ಟೋ ಬಾರಿ ಕುಲದೀಪ್‍ಗೆ ಕರೆ ಮಾಡಿ ಮಾತನಾಡಲು ಪ್ರಯತ್ನಿಸಿಸಿದ್ದಳು. ಆದ್ರೆ ಆತ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದನು. ಹೀಗಾಗಿ ಆಕೆ ಖಿನ್ನತೆಗೆ ಒಳಗಾಗಿದ್ದಳು. ಇದು ಅವಳನ್ನು ತಪ್ಪು ಹೆಜ್ಜೆ ಇಡಲು ಪ್ರೇರೇಪಿಸಿತು ಎಂದು ಆಕೆಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದರು.

    ಪೂನಂ ಪ್ರೀತಿಸುತ್ತಿದ್ದ ವ್ಯಕ್ತಿ ಅವಳನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾಳೆ. ಇದೇ ಕಾರಣದಿಂದ ಸಾಯುವ ನಿರ್ಧಾರ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಸೆಕ್ಟರ್-29 ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಅಮನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಕುಟುಂಬಸ್ಥರು ಸಲ್ಲಿಸಿರುವ ದೂರಿನ ಅನ್ವಯ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಶರಣಾದ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.