Tag: ಪ್ರಿಯಕರ

  • ಅಪ್ರಾಪ್ತೆ ಮೇಲೆ 8 ತಿಂಗಳಿಂದ ಸಾಮೂಹಿಕ ಅತ್ಯಾಚಾರ – 26 ಆರೋಪಿಗಳ ಬಂಧನ

    ಅಪ್ರಾಪ್ತೆ ಮೇಲೆ 8 ತಿಂಗಳಿಂದ ಸಾಮೂಹಿಕ ಅತ್ಯಾಚಾರ – 26 ಆರೋಪಿಗಳ ಬಂಧನ

    ಮುಂಬೈ: ಡೊಂಬಿವಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಥಾಣೆ ಪೊಲೀಸರು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಿದ್ದು, ಇಲ್ಲಿಯವರೆಗೂ 26 ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಮೂವರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

    15 ವರ್ಷದ ಬಾಲಕಿ ಮೇಲೆ ಕಳೆದ 8 ತಿಂಗಳಿನಿಂದ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಕಾಮುಕರು ಹಲವು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಬಾಲಕಿ ದೂರಿನ ಅನ್ವಯ ಪೊಲೀಸರು ಕಲ್ಯಾಣದ ಡೊಂಬಿವಲಿಯಲ್ಲಿರುವ ಮನ್ಪದ ಪೊಲೀಸರು ಬುಧವಾರ ರಾತ್ರಿ 33 ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ), 376(ಎನ್)(ಪುನರಾವರ್ತಿತ ಅತ್ಯಾಚಾರ), 376(ಡಿ)(ಸಾಮೂಹಿಕ ಅತ್ಯಾಚಾರ) 376(3)(ಹದಿನಾರು ವರ್ಷದೊಳಗಿನ ಮಹಿಳೆಯ ಮೇಲೆ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ(ಪೊಕ್ಸೊ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರತದ ಲಸಿಕಾಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್

    ಈ ಕುರಿತಂತೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ದತ್ತಾತ್ರಯ್ ಕರಾಳೆ ಅವರು, ಈ ವರ್ಷದ ಜನವರಿ 29 ರಿಂದ ಸೆಪ್ಟೆಂಬರ್ 22ರ ನಡುವೆ ಈ ಘಟನೆ ನಡೆದಿದೆ. ಬಾಲಕಿಯ ಪ್ರಿಯಕರ ಆಕೆಯ ಮೇಲೆ ಅತ್ಯಾಚಾರ ಎಸಗಿದ ವೀಡಿಯೋವನ್ನು ರೆಕಾರ್ಡ್ ಮಾಡಿ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ. ನಂತರ ಆತನ ಸ್ನೇಹಿತರು ಮತ್ತು ಪರಿಚಯಸ್ಥರು ಜಿಲ್ಲೆಯ ಡೊಂಬಿವಿಲಿ, ಬದ್ಲಾಪುರ, ಮುರ್ಬಾದ್ ಮತ್ತು ರಬಾನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕನಿಷ್ಟ ನಾಲ್ಕರಿಂದ ಐದು ಬಾರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಸಿಪಿ ಸೋನಾಲಿ ಧೋಲೆ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು(ಎಸ್‍ಐಟಿ) ರಚಿಸಲಾಗಿದೆ. ಇದನ್ನೂ ಓದಿ: ಅರೆನೂರು ಗ್ರಾಮಕ್ಕೆ ಸೇತುವೆ ಇಲ್ಲದೇ ಜನ ಪರದಾಟ- ಪ್ರಾಣ ಕೈಲಿಡಿದೇ ಓಡಾಟ!

    ಬಾಲಕಿ 33 ವ್ಯಕ್ತಿಗಳ ಹೆಸರನ್ನು ತಿಳಿಸಿದ್ದಾಳೆ. ಈ ಪೈಕಿ 26 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಇಬ್ಬರು ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದೆ. ಬಾಲಕಿಯ ಸ್ಥಿತಿ ಸ್ಥಿರವಾಗಿದೆ. ಸದ್ಯ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

  • ಮದುವೆ ಆಗಲು ಒಪ್ಪದ ಪ್ರಿಯಕರನಿಗೆ ಪ್ರೇಯಸಿಯಿಂದ ಬಿತ್ತು ಗೂಸಾ

    ಮದುವೆ ಆಗಲು ಒಪ್ಪದ ಪ್ರಿಯಕರನಿಗೆ ಪ್ರೇಯಸಿಯಿಂದ ಬಿತ್ತು ಗೂಸಾ

    -ಪೊಲೀಸ್ ಠಾಣೆಯ ಮುಂಭಾಗದಲ್ಲೆ ರಂಪಾಟ

    ಕಲಬುರಗಿ: ಮದುವೆ ಆಗಲು ಒಪ್ಪದ ಪ್ರಿಯಕರನೊಬ್ಬನಿಗೆ ಪ್ರೇಯಸಿಯೊಬ್ಬಳು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆ ಎದುರೇ ಗೂಸಾ ಕೊಟ್ಟಿದ್ದಾಳೆ.

    ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ಇರ್ಫಾನ್ ಮತ್ತು ಬೆಂಗಳೂರಿನ ರಹೀನಾ ಬಾನು ಬೆಂಗಳೂರಿನ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗಿದ್ದರು. ಇಬ್ಬರೂ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದರು. ಆದರೆ ಯುವತಿಗೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿದ್ದ ಇರ್ಫಾನ್ ಪ್ರೇಯಸಿಯನ್ನು ಬಿಟ್ಟು ಊರಿಗೆ ವಾಪಸ್ ಬಂದಿದ್ದ. ಹೀಗಾಗಿ ಆತನನ್ನು ಹುಡುಕಿಕೊಂಡು ಬಂದ ಪ್ರೇಯಸಿ ಎಲ್ಲರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆ ಆಗುವಂತೆ ಒತ್ತಾಯಿಸಿದ್ದಾಳೆ. ಆದರೆ ಅದಕ್ಕೆ ಇರ್ಫಾನ್ ಒಪ್ಪದೇ ಇದ್ದಾಗ ಆತನಿಗೆ ಎಲ್ಲರ ಎದುರೇ ಒದೆ ಕೊಟ್ಟಿದ್ದಾಳೆ. ಇದನ್ನೂ ಓದಿ: ಐವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಡೆತ್ ನೋಟ್‍ನಲ್ಲಿ ಅಪ್ಪನ ವಿರುದ್ಧವೇ ಮಕ್ಕಳ ಆರೋಪ

    ಬೆಂಗಳೂರಿನಿಂದ ಕಲಬುರಗಿಗೆ ಹೋಗಿದ್ದ ರಹೀನಾ ಬಾನು, ಇರ್ಫಾನ್ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದಾಳೆ. ಬಳಿಕ ಮಾತುಕತೆಯಿಂದ ಬಗೆ ಹರಿಯದೇ ಇದ್ದಾಗ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ತನಗಾದ ಮೋಸದ ಬಗ್ಗೆ ತಿಳಿಸಿದ್ದಾಳೆ. ಅಲ್ಲಿ ಪೊಲೀಸರು ಜೊತೆಗಿದ್ದಂತೆ ಇರ್ಫಾನ್‍ಗೆ ಹೊಡೆದು ಬುದ್ಧಿಕಲಿಸಲು ಮುಂದಾಗಿದ್ದಾಳೆ.  ಇದನ್ನೂ ಓದಿ: ಕೌಟುಂಬಿಕ ಕಲಹದಿಂದ್ಲೇ ಸಾಮೂಹಿಕ ಆತ್ಮಹತ್ಯೆ – ದುರಂತಕ್ಕೆ ಪತ್ನಿಯೇ ಕಾರಣವೆಂದ ಪತಿ ಶಂಕರ್

  • ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

    ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

    ಶಿವಮೊಗ್ಗ: ಪ್ರೇಮ ವೈಫಲ್ಯದ ಹಿನ್ನೆಲೆ ಪ್ರೇಯಸಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಇಂದು ಸಾವನ್ನಪ್ಪಿದ್ದಾನೆ.

    ಜಿಲ್ಲೆಯ ಹೊಸನಗರ ತಾಲೂಕಿನ ನೇರಲಗಿ ಬಳಿ ಘಟನೆ ನಡೆದಿತ್ತು. ನರ್ಸಿಂಗ್ ವಿದ್ಯಾರ್ಥಿನಿ ಕವಿತಾ(21) ಹಾಗೂ ಬಿಕಾಂ ವಿದ್ಯಾರ್ಥಿ ಶಿವಮೂರ್ತಿ(21) ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚಿಗೆ ಕವಿತಾ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಕವಿತಾ ವಿರುದ್ಧ ಕೆರಳಿದ್ದ ಶಿವಮೂರ್ತಿ, ಜಿಲ್ಲೆಯ ಹೊಸನಗರ ತಾಲೂಕಿನ ನೇರಲಗಿ ಬಳಿ ಪ್ರೇಯಸಿ ಕವಿತಾಳನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ.

    ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿ ಶಿವಮೂರ್ತಿಯನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಿವಮೂರ್ತಿ ಸಹ ಶುಕ್ರವಾರ ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪ್ರಕರಣ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರೇಮ ವೈಫಲ್ಯ- ಪ್ರಿಯತಮೆಯನ್ನು ಕೊಲೆಗೈದು, ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿ

    ಹೊಸನಗರ ತಾಲೂಕಿನ ನೇರಲಗಿ ಗ್ರಾಮದ ಕವಿತಾ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹೊಸನಗರ ತಾಲೂಕಿನ ಕಗಲಿ ಗ್ರಾಮದ ಶಿವಮೂರ್ತಿ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದನು. ಕೊಲೆಯಾದ ಕವಿತಾ ಹಾಗೂ ಕೊಲೆಗೈದ ಆರೋಪಿ ಶಿವಮೂರ್ತಿ ಇಬ್ಬರೂ 7 ವರ್ಷದಿಂದ ಪ್ರೀತಿಸುತ್ತಿದ್ದರು. ಇತ್ತೀಚಿಗೆ ಕವಿತಾ, ಶಿವಮೂರ್ತಿ ಜೊತೆಗಿನ ಪ್ರೀತಿ ತೊರೆದು ಭದ್ರಾವತಿ ಮೂಲದ ಅಂಬುಲೆನ್ಸ್ ಚಾಲಕನ ಪ್ರೇಮ ಪಾಶಕ್ಕೆ ಸಿಲುಕಿದ್ದಳು. ಅಂಬುಲೆನ್ಸ್ ಚಾಲಕನ ಜೊತೆ ಕವಿತಾಗೆ ಪ್ರೇಮಾಂಕುರವಾಗುತ್ತಿದ್ದಂತೆ ಶಿವಮೂರ್ತಿಯನ್ನು ದೂರ ಮಾಡ ತೊಡಗಿದ್ದಳು. ಇದನ್ನೂ ಓದಿ: ಮಾಜಿ ಗಂಡನ ಹೇಳಿಕೆಯಿಂದ ಚೀನಾದ ಖ್ಯಾತ ನಟಿಗೆ ಬಿತ್ತು 340 ಕೋಟಿ ರೂ. ದಂಡ

    ಇದರಿಂದ ರೊಚ್ಚಿಗೆದ್ದ ಭಗ್ನಪ್ರೇಮಿ ಶಿವಮೂರ್ತಿ, ಬುಧವಾರ ಮಧ್ಯಾಹ್ನ ಕವಿತಾಳನ್ನು ನಿನ್ನ ಜೊತೆ ಮಾತನಾಡಬೇಕು ಎಂದು ನೇರಲಗಿ ಬಳಿ ಕರೆಯಿಸಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಮೊದಲೇ ಪ್ರಿಯತಮೆಯನ್ನು ಕೊಲೆಗೈದು, ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಶಿವಮೂರ್ತಿ ನಿರ್ಧರಿಸಿದ್ದ. ಅದರಂತೆ ಪ್ರಿಯತಮೆಯನ್ನು ಕೊಲೆಗೈದು, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಅಲ್ಲದೆ ಕವಿತಾಳನ್ನು ತಾನೇ ಕೊಲೆಗೈದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದ.

  • ಮದುವೆ ನಿಶ್ಚಯವಾಗಿದ್ದ ಯುವತಿ – ವಿವಾಹಿತ ಪ್ರೇಮಿಯೊಂದಿಗೆ ಆತ್ಮಹತ್ಯೆಗೆ ಶರಣು

    ಮದುವೆ ನಿಶ್ಚಯವಾಗಿದ್ದ ಯುವತಿ – ವಿವಾಹಿತ ಪ್ರೇಮಿಯೊಂದಿಗೆ ಆತ್ಮಹತ್ಯೆಗೆ ಶರಣು

    ಚಿತ್ರದುರ್ಗ: ಮದುವೆ ನಿಶ್ಚಯವಾಗಿದ್ದ ಯುವತಿ ತನ್ನ ಪ್ರಿಯಕರನೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದ ಬಳಿ ನಡೆದಿದೆ.

    ಕಳೆದ ಆರು ತಿಂಗಳ ಹಿಂದೆ ಹಿರಿಯೂರು ತಾಲೂಕಿನ ಉಡುವಳ್ಳಿ ಗ್ರಾಮಕ್ಕೆ ಪೈಂಟ್ ಕೆಲಸಕ್ಕಾಗಿ ಬಂದಿದ್ದ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಮೂಲದ ತಿಪ್ಪೇಸ್ವಾಮಿ ಎಂಬ ಆಸಾಮಿಯು, ಪುಷ್ಪಲತಾರನ್ನು ಪ್ರೇಮಿಸಿದ್ದನು. ಈ ತಿಪ್ಪೇಸ್ವಾಮಿಗೆ ಈಗಾಗಲೇ ವಿವಾಹವಾಗಿದ್ದು, ತನ್ನ ಪತ್ನಿಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಉಡುವಳ್ಳಿ ಗ್ರಾಮದ ಪುಷ್ಪಲತಾರನ್ನು ಪ್ರೇಮಿಸಿ, ಅದೇ ಗ್ರಾಮಕ್ಕೆ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದ.

    ಪುಷ್ಪಲತ ಹಾಗೂ ತಿಪ್ಪೇಸ್ವಾಮಿ ನಡುವಿನ ಪ್ರೀತಿ ಅಗಾಧವಾಗಿ ಬೆಳೆದಿದ್ದು, ಆಕೆಯನ್ನು ವಿವಾಹವಾಗುವುದಾಗಿ ಪುಷ್ಪಲತಳ ಮನೆಯಲ್ಲಿ ತಿಪ್ಪೇಸ್ವಾಮಿ ಕೇಳಿದ್ದನು. ಆದರೆ ಅವರ ಪ್ರೀತಿಗೆ ಪುಷ್ಪ ಅವರ ಕುಟುಂಬಸ್ಥರು ವಿರೋಧಿಸಿ, ಯುವತಿಯ ಸೋದರ ಮಾವನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಇದನ್ನೂ ಓದಿ:ಮನೆಗೆ ಬಂದ್ರೆ ಚೆನ್ನಾಗಿ ನೋಡಿಕೊಳ್ಳುತ್ತೇವೆ, ಬರದೆ ಇದ್ರೆ ನಮ್ಮಪ್ಪನ ಮನೆ ಗಂಟು ಏನೂ ಹೋಗಲ್ಲ: ರೇವಣ್ಣ

    ಇದರಿಂದಾಗಿ ಮನನೊಂದ ಪುಷ್ಪಲತ ಹಾಗೂ ತಿಪ್ಪೇಸ್ವಾಮಿ ಆಗಸ್ಟ್ 13 ರಂದು ಮನೆ ಬಿಟ್ಟು ತೆರಳಿದ್ದರು. ನಾಪತ್ತೆಯಾದ ಮಗಳ ಪತ್ತೆಗಾಗಿ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಆಕೆಯ ತಂದೆ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿವ ಪತ್ತೆಗಾಗಿ ಕ್ರಮ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಇಂದು ಕೂನಿಕೆರೆ ಗ್ರಾಮ ಬಳಿಯ ಕಾಲುವೆ ಬಳಿ ಇವರಿಬ್ಬರ ಶವ ಪತ್ತೆಯಾಗಿವೆ.

    ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಮುಂದುವರೆಸಿದ್ದಾರೆ. ಯುವತಿಯನ್ನು ಓದಿಸಿ ಸರ್ಕಾರಿ ಕೆಲಸಕ್ಕೆ ಸೇರಿಸಬೇಕೆಂಬ ಕನಸು ಕಂಡಿದ್ದ ಆಕೆಯ ತಂದೆ ಕನಸು ನುಚ್ಚುನೂರಾಗಿದೆ. ಇನ್ನೂ ಶವಗಳು ಪತ್ತೆಯಾದ ಹಿನ್ನೆಲ್ಲೆಯಲ್ಲಿ ಸ್ಥಳಕ್ಕೆ ಗ್ರಾಮದ ಮಹಿಳೆಯರು ಹಾಗು ಗ್ರಾಮಸ್ಥರು ಜಮಾವಣೆಯಾಗಿದ್ದೂ, ಹಿರಿಯೂರು ತಾಲೂಕು ಆಸ್ಪತ್ರೆಗೆ ಎರಡು ಶವಗಳನ್ನು ರವಾನಿಸಿಸಲಾಗಿದೆ. ಅಲ್ಲಿಗೂ ಧಾವಿಸಿರುವ ಯುವತಿಯ ಸಂಬಂಧಿಗಳು ಈ ಯುವತಿಯ ಸಾವಿನ ಹಿಂದೆ ಕೊಲೆಯ ಸಂಚು ನಡೆದಿರಬಹುದು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂಬ ಆಗ್ರಹ ಕೇಳಿಬಂದಿದೆ.ಇದನ್ನೂ ಓದಿ:ನೆರೆ ಪೀಡಿತ ಸಂತ್ರಸ್ತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ: ಉಮೇಶ್ ಕತ್ತಿ

  • ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿಯ ಬಂಧನ

    ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿಯ ಬಂಧನ

    ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿ ಹತ್ಯೆ ಮಾಡಿದ ಪತ್ನಿಯನ್ನು ಕೊಲೆಯಾದ 9 ತಿಂಗಳ ನಂತರ ಪೊಲೀಸರು ಬಂಧಿಸಿದ್ದಾರೆ.

    ಈ ಕೊಲೆ ಪ್ರಕರಣ ಭೇಧಿಸಿದ ಪೊಲೀಸರು ಪತ್ನಿ ಉಮಾ ಹಾಗೂ ಪ್ರಿಯಕರ ಅವಿನಾಶ್ ನನ್ನು ಬಂಧಿಸಿದ್ದಾರೆ. ಬನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅಕ್ಟೋಬರ್ 2020ರಲ್ಲಿ ನಡೆದಿದ್ದ ವೆಂಕಟರಾಜು (50) ಕೊಲೆಯಾಗಿತ್ತು.

    ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಹುಣಸಗಳ್ಳಿ ಗ್ರಾಮದ ವೆಂಕಟರಾಜು ಮೂಲತಃ ಮಂಡ್ಯ ಜಿಲ್ಲೆ ಹೊನಗಾನಹಳ್ಳಿ ಗ್ರಾಮದ ನಿವಾಸಿ. 10 ವರ್ಷದ ಹಿಂದೆ ಉಮಾಳನ್ನು ಮದುವೆಯಾಗಿದ್ದ. ಉಮಾ ಶ್ರೀರಂಗಪಟ್ಟಣ ತಾಲೂಕಿನ ಬಳ್ಳೆಕರೆ ಗ್ರಾಮದ ನಿವಾಸಿ. 8 ವರ್ಷದ ಒಂದು ಹೆಣ್ಣು ಮಗು 6 ವರ್ಷದ ಗಂಡು ಮಗುವಿದೆ. ವಯಸ್ಸಿನ ಅಂತರದಿಂದಾಗಿ ಗಂಡ ಹೆಂಡತಿ ನಡುವೆ ಸಂಬಂಧ ಬಿರುಕು ಮೂಡಿತ್ತು. ಈ ವೇಳೆ ಉಮಾಗೆ ಅವಿನಾಶ್ ಪರಿಚಯವಾಗಿದ್ದ. ಇದನ್ನೂ ಓದಿ: ಕಡಲ ಅಬ್ಬರ, ಏಂಡಿ ಬಲೆಗೆ ಸಿಕ್ತು ರಾಶಿ-ರಾಶಿ ಮೀನು

    ಅವಿನಾಶ್ ಉಮಾ ಪಕ್ಕದ ಮನೆಯ ನಿವಾಸಿ. ಇಬ್ಬರು ಸೇರಿ ವೆಂಕಟರಾಜು ಕೊಲೆ ಮಾಡಿದ್ದರು. ಅವಿನಾಶ್ ತನ್ನ ಅಜ್ಜಿ ಮನೆಗೆ ವೆಂಕಟರಾಜುನನ್ನು ಕರೆಸಿಕೊಂಡು ಕಾಫಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ವೆಂಕಟರಾಜು ನಿದ್ರಾವಸ್ಥೆಯಲ್ಲಿದ್ದಾಗ ಖಾಸಗಿ ಭಾಗಕ್ಕೆ ಹಲ್ಲೆ ಮಾಡಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಿದ್ದರು.

    ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಈ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಮಂಚದಾಟಕ್ಕೆ ಅಡ್ಡಿಯಾದ ಗಂಡನಿಗೆ ಸುಪಾರಿ ಕೊಟ್ಳು – ಮಂಕಿ ಕ್ಯಾಪ್‍ನಿಂದ ತಗ್ಲಾಕೊಂಡ ಗ್ಯಾಂಗ್

    ಮಂಚದಾಟಕ್ಕೆ ಅಡ್ಡಿಯಾದ ಗಂಡನಿಗೆ ಸುಪಾರಿ ಕೊಟ್ಳು – ಮಂಕಿ ಕ್ಯಾಪ್‍ನಿಂದ ತಗ್ಲಾಕೊಂಡ ಗ್ಯಾಂಗ್

    – ಇನಿಯನ ಜೊತೆ ಸೇರಿ 15 ಲಕ್ಷಕ್ಕೆ ಡೀಲ್
    – ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಕೊಲೆ

    ಬೆಂಗಳೂರು: ಪ್ರಿಯಕರನ ಜೊತೆಗೆ ಸೇರಿ ಗಂಡನಿಗೆ ಸುಪಾರಿ ನೀಡಿ ಪತ್ನಿಯೇ ಕೊಲೆ ಮಾಡಿಸಲು ಯತ್ನಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಮಾದನಾಯಕನಹಳ್ಳಿ ನಿವಾಸಿಯಾಗಿರುವ ರೂಪ ಮತ್ತು ಗಿರೀಶ್ ಮದುವೆ ಆರು ವರ್ಷಗಳ ಹಿಂದೆ ನಡೆದಿತ್ತು. ಕೆಲ ದಿನಗಳ ಕಾಲ ಮನೆಯಲ್ಲೇ ಇದ್ದ ಪತ್ನಿ ರೂಪ ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲಸಕ್ಕೆ ಸೇರಿದ ನಂತರ ರೂಪಾಗೆ ಕುಮಾರ್ ಜೈನ್ ಎಂಬ ವ್ಯಕ್ತಿಯ ಪರಿಚಯವಾಗಿದೆ. ನಂತರ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಮಂಚದ ತನಕ ಹೋಗಿತ್ತು. ಹೀಗಾಗಿ ರೂಪಾಳ ನಡುವಳಿಯಲ್ಲಿ ಕೂಡ ಬದಲಾವಣೆ ಕಾಣಿಸತೊಡಗಿತ್ತು. ಈ ವಿಚಾರ ತಿಳಿದ ರೂಪಾಳ ಗಂಡ ಗಿರೀಶ್ ನೀನು ಇನ್ಮೇಲೆ ಕೆಲಸಕ್ಕೆ ಹೋಗೋದು ಬೇಡ, ಮನೆಯಲ್ಲೇ ಇರು ಅಂತಾ ವಾರ್ನ್ ಮಾಡಿದ್ದಾರೆ.

     

    ಇದರಿಂದ ಬೇಸರಗೊಂಡ ಪತ್ನಿ ರೂಪಾ, ಪ್ರಿಯಕರ ಕುಮಾರ್ ಜೈನ್ ಜೊತೆಗೆ ಸೇರಿ, ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಾಳೆ. ಅದರಂತೆ ಕುಮಾರ್ ಜೈನ್ ಮೂಲಕ ಹದಿನೈದು ಲಕ್ಷಕ್ಕೆ ಗಂಡನ ಕೊಲೆಗೆ ಸುಪಾರಿ ನೀಡಿದ್ದಾನೆ. ಇವರ ಪ್ಲಾನ್ ನಂತೆ ಮೂರು ಲಕ್ಷ ಅಡ್ವಾನ್ಸ್ ಪಡೆದ ನಾಲ್ವರು ಆರೋಪಿಗಳು, ಕೊಲೆಗೆ ಸಿದ್ಧತೆ ನಡೆಸಿ, ಗಿರೀಶ್ ಕೊಲೆ ಮಾಡಲು ಎಲ್ಲರೂ ಮಂಕಿ ಕ್ಯಾಪ್ ಹಾಕಿಕೊಳ್ಳುತ್ತಿದ್ದರು. ಇದೇ ವೇಳೆ ನೈಟ್ ರೌಂಡ್ಸ್ ಬಂದ ಮಾದನಾಯಕನಹಳ್ಳಿ ಪೊಲೀಸರು, ಮಂಕಿ ಕ್ಯಾಪ್ ಗಳನ್ನು ನೋಡಿ ಆರೋಪಿಗಳನ್ನು ಪ್ರಶ್ನಿಸಿದ್ದಾರೆ.

    ತಕ್ಷಣ ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ವೇಳೆ ಸುಪಾರಿ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಪ್ರಮುಖ ಆರೋಪಿ ರೂಪಾ, ಪ್ರಿಯಕರ ಸೇರಿ ಐವರನ್ನು ಪೊಲೀಸರು ಅರೆಸ್ಟ್ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ರ‍್ಯಾಗಿಂಗ್- ಆರು ಮಂದಿ ಬಂಧನ

  • ಬೇರೊಬ್ಬಳೊಂದಿಗೆ ಪ್ರಿಯಕರನ ನಿಶ್ಚಿತಾರ್ಥ- ದಯಾಮರಣ ನೀಡುವಂತೆ ಯುವತಿ, ಪೋಷಕರ ಆಕ್ರಂದನ

    ಬೇರೊಬ್ಬಳೊಂದಿಗೆ ಪ್ರಿಯಕರನ ನಿಶ್ಚಿತಾರ್ಥ- ದಯಾಮರಣ ನೀಡುವಂತೆ ಯುವತಿ, ಪೋಷಕರ ಆಕ್ರಂದನ

    ಕೋಲಾರ: ಪ್ರೀತಿಸಿದ ಯುವಕ ಕೈಕೊಟ್ಟು, ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇತ್ತ ಪ್ರೀತಿಸಿದವನಿಲ್ಲದೆ ದಯಾಮರಣ ಕೋರಿ ಯುವತಿ ಜಿಲ್ಲಾ ರಕ್ಷಣಾಧಿಕಾರಿಗಳ ಮೊರೆ ಹೋಗಿದ್ದಾಳೆ.

    ಕೋಲಾರ ತಾಲೂಕಿನ ಅರಾಭಿಕೊತ್ತನೂರು ನಿವಾಸಿಯಾಗಿರುವ ಅಂಬಿಕಾ ಸುಮಾರು 10 ವರ್ಷಗಳಿಂದ ಮಹೇಶ್‍ನನ್ನು ಪ್ರೀತಿಸಿಸುತ್ತಿದ್ದರು. ಮಹೇಶ್ ಸಹ ಅರಾಭಿಕೊತ್ತನೂರು ಗ್ರಾಮದವನೇ ಆಗಿರುವುದರಿಂದ ಇಬ್ಬರ ನಡುವೆ ಇದ್ದ ಪ್ರೀತಿ ದೈಹಿಕ ಸಂಪರ್ಕದವರಿಗೆ ಬೆಳೆದಿತ್ತು. ಅಂಬಿಕಾಳನ್ನು ಸಂಪೂರ್ಣವಾಗಿ ನಂಬಿಸಿದ್ದ ಮಹೇಶ್, ನಾನು ನಿನ್ನನು ಹೇಗಿದ್ರು ಮದುವೆ ಆಗುತ್ತೇನೆ, ನಮ್ಮಿಬ್ಬರ ನಡುವೆ ಇರುವ ಈ ಸಂಬಂಧವನ್ನು ಗುಟ್ಟಾಗಿಡು ಎಂದು ಅಂಬಿಕಾಳಿಗೆ ಹೇಳಿದ್ದಾನೆ. ಆದರೆ ಮಾರ್ಚ್ 15ರಂದು ಮಹೇಶ್ ತನ್ನ ಮನೆಯಲ್ಲಿ ತೋರಿಸಿದ್ದ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ.

    ವಿಷಯ ತಿಳಿದ ಅಂಬಿಕಾ, ಎಷ್ಟೇ ಮನವಿ ಮಾಡಿದರೂ ಮಹೇಶ್ ತನ್ನ ಮನೆಯವರ ಮಾತಿನಂತೆ ನಡೆದುಕೊಂಡಿದ್ದಾನಂತೆ. ಬಳಿಕ ಬೇಸತ್ತ ಅಂಬಿಕಾ ಮಾರ್ಚ್ 26ರಂದು ಮಹೇಶ್ ವಿರುದ್ಧ ರೇಪ್ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಮಹೇಶ್ ಜಾಮೀನಿನ ಮೇಲೆ ಹೊರಗಡೆ ಬಂದಿದ್ದು, ಬಳಿಕ ಅಂಬಿಕಾಳನ್ನು ಮದುವೆ ಆಗುತ್ತಾನೆ. ಆದರೆ ಒಂದು ದಿನವೂ ಸಂಸಾರ ಮಾಡದೆ ಹೋದವನು ಈ ವರೆಗೆ ಪತ್ತೆ ಇಲ್ಲ. ಹೀಗಾಗಿ ಇಂದು ಎಸ್‍ಪಿ ಕಚೇರಿಗೆ ತೆರಳಿ ನನ್ನ ಸಾವಿಗೆ ಪತಿ ಮಹೇಶ್, ಆತನ ಕುಟುಂಬಸ್ಥರು ಕಾರಣ ಎಂದು ತಂದೆ ಮುನಿಯಪ್ಪ, ತಾಯಿ ಲಕ್ಷ್ಮಮ್ಮ ಮೂರು ಜನರಿಗೂ ದಯಾಮರಣ ನೀಡಿ ಎಂದು ಕೋರಿ ಎಸ್‍ಪಿಗೆ ಅರ್ಜಿ ಸಲ್ಲಿಸಿದ್ದಾರೆ.

    ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ಅಂಬಿಕಾಳ ಕುಟುಂಬಸ್ಥರು ಚಪ್ಪಲಿ ಸವೆಸಿದರೂ, ಕೋಲಾರ ಗ್ರಾಮಾಂತರ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ. ಮಹೇಶನ ಮನೆಯ ಮುಂಭಾಗ ಕುಳಿತು ಏಕಾಂಗಿಯಾಗಿ ಪ್ರತಿಭಟನೆ ಮಾಡಿದರೂ ಯಾರೂ ಅಂಬಿಕಾಗೆ ನ್ಯಾಯ ಕೊಡಿಸಿಲ್ಲವಂತೆ. ಹಣ ಪಡೆದು ಪೊಲೀಸರು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಅಂಬಿಕಾ ಆರೋಪ ಮಾಡುತ್ತಿದ್ದಾರೆ. ಕೇಸ್ ವಾಪಸ್ ತೆಗೆದಿಕೊಳ್ಳಲು ನಂಬಿಸಿ ಮೇ 9 ರಂದು ಮಹೇಶ್ ಮದುವೆಯಾಗಿದ್ದಾನಂತೆ. ಅಂಬಿಕಾ ಬಳಿ ತನ್ನ ಮದುವೆಯ ಒಂದು ಫೋಟೋ ಸಹ ಇಲ್ಲ. ಹೀಗಾಗಿ ಮುಂದೆ ಏನು ಮಾಡಬೇಕು ಎಂದು ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಇದ್ದಾರೆ.

    ಇತ್ತ ಮಗಳ ಈ ಪರಿಸ್ಥಿತಿ ನೋಡದೆ ಮಾನಕ್ಕೆ ಅಂಜಿ ವಯಸ್ಸಾಗಿರುವ ಅಂಬಿಕಾ ಪೋಷಕರು ಊರು ಖಾಲಿ ಮಾಡಿಕೊಂಡು ವೇಮಗಲ್‍ನಲ್ಲಿ ವಾಸಿಸುತ್ತಿದ್ದಾರೆ. ನನ್ನ ಮಗಳು ಮಹೇಶನ ಜೊತೆ ಸಂಸಾರ ಮಾಡಲು ಅವಕಾಶ ಮಾಡಿಕೊಡಿ, ಇಲ್ಲವಾದರೆ ನನ್ನ ಮಗಳ ಜೊತೆ ನಮಗೂ ದಯಾಮರಣ ಕೊಡಿ ಎಂದು ಅಂಗಲಾಚುತ್ತಿದ್ದಾರೆ.

  • ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆಯನ್ನೇ ಕೊಲೆ ಮಾಡಿಸಿದ ಸೊಸೆ

    ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆಯನ್ನೇ ಕೊಲೆ ಮಾಡಿಸಿದ ಸೊಸೆ

    ತುಮಕೂರು: ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದರು ಎಂದು ಅತ್ತೆಯನ್ನೇ ಕೊಲೆ ಮಾಡಿದ ಸೊಸೆಯೋರ್ವಳು ತನ್ನ ಪ್ರಿಯಕರನ ಸಮೇತವಾಗಿ ಪೊಲೀಸರ ಅತಿಥಿಯಾಗಿದ್ದಾಳೆ.

    ಶಿರಾ ತಾಲೂಕು ಗೌಡಗೆರೆ ಹೋಬಳಿ ಉಜ್ಜನಕುಂಟೆ ಗ್ರಾಮದ ಸುಧಾಮಣಿ(28) ಹಾಗೂ ಆಕೆಯ ಪ್ರಿಯಕರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಜವಗೊಂಡನಹಳ್ಳಿ ಹೋಬಳಿಯ ಎಳನೀರು ವ್ಯಾಪಾರಿ ಶ್ರೀರಂಗಪ್ಪ(35) ಬಂಧಿತರು.

    ಏನಿದು ಘಟನೆ..?
    ಇದೇ ಜೂನ್ 24ರಂದು ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಉಜ್ಜನಕುಂಟೆ ಗ್ರಾಮದಲ್ಲಿ ಸರೋಜಮ್ಮ(65) ಎಂಬ ಮಹಿಳೆ ತನ್ನ ವಾಸದ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತಾವರೆಕೆರೆ ಪಿಎಸ್‍ಐ ಪಾಲಾಕ್ಷಪ್ರಭು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಗ ಘಟನೆಯು ಆಕಸ್ಮಿಕವಾಗಿ ನಡೆದಿಲ್ಲ ಎಂಬ ಶಂಕೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ಕೈಗೊಂಡರು. ಇದಕ್ಕೆ ಪೂರಕವಾಗಿ ಮೃತ ಸರೋಜಮ್ಮಳ ಅಳಿಯ ಪ್ರೇಮ್ ಕುಮಾರ್ ಅವರು ಸೊಸೆ ಸುಧಾಮಣಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿದರು. ಇದನ್ನೂ ಓದಿ: ಅಡುಗೆ ಮಾಡುವ ವರ ಬೇಕಾಗಿದ್ದಾನೆ- ಜಾಹೀರಾತು ವೈರಲ್

    ದೂರಿನಲ್ಲಿ ಸೊಸೆ ಸುಧಾಮಣಿಯು ಶ್ರೀರಂಗಪ್ಪ ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಈ ವಿಚಾರದಲ್ಲಿ ಅತ್ತೆ ಸರೋಜಮ್ಮ ಪ್ರಶ್ನೆ ಮಾಡಿ ಜಗಳ ಮಾಡಿದ್ದರು. ಹೀಗಾಗಿಯೇ ಸೊಸೆ ಸುಧಾಮಣಿ ಬೆಂಕಿ ಹಚ್ಚಿ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

    ಪೆಟ್ರೋಲ್ ತಂದಿದ್ದ ಪ್ರಿಯಕರ:
    ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ನಿಜಾಂಶ ತಿಳಿಯಲು ಹೆಚ್ಚು ದಿನ ಬೇಕಾಗಲಿಲ್ಲ. ಜೂನ್ 26ರಂದು ಸುಧಾಮಣಿ ಮತ್ತು ಶ್ರೀರಂಗಪ್ಪನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ. ಆರೋಪಿ ಸುಧಾಮಣಿಯು ಶ್ರೀರಂಗಪ್ಪನೊಂದಿಗೆ ಇಟ್ಟುಕೊಂಡಿದ್ದ ಅಕ್ರಮ ಸಂಬಂಧಕ್ಕೆ ಅತ್ತೆ ಅಡ್ಡಿಪಡಿಸಿದ್ದರಿಂದ ಅತ್ತೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಅದರಂತೆ ಪ್ರಿಯಕರ ಶ್ರೀರಂಗಪ್ಪನು ಸರೋಜಮ್ಮಳಿಗೆ ಬೆಂಕಿ ಹಚ್ಚಲು ಪೆಟ್ರೋಲ್ ತಂದುಕೊಟ್ಟಿದ್ದನು.

    ಸುಧಾಮಣಿಯು ಪ್ಲಾನ್ ಮಾಡಿದಂತೆ ಅತ್ತೆ ಸರೋಜಮ್ಮರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಳು ಎನ್ನುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಈಗ ಈ ಇಬ್ಬರೂ ಆರೋಪಿಗಳು ಜೈಲು ಪಾಲಾಗಿದ್ದಾರೆ. ಆದರೆ ಯಾವುದೇ ತಪ್ಪು ಮಾಡದ ಅತ್ತೆ ಸರೋಜಮ್ಮ ಸೊಸೆಯ ಅಕ್ರಮ ಸಂಬಂಧಕ್ಕೆ ಬಲಿಯಾಗಿದ್ದು ಮಾತ್ರ ವಿಪರ್ಯಾಸ.

  • ಪ್ರೀತಿ ನಿರಾಕರಿಸಿದ್ದಕ್ಕೆ ಮಾಜಿ ಪ್ರಿಯಕರನ ದುಬಾರಿ ಬೈಕ್‍ಗೆ ಬೆಂಕಿ ಇಟ್ಟ ಮಹಿಳೆ

    ಪ್ರೀತಿ ನಿರಾಕರಿಸಿದ್ದಕ್ಕೆ ಮಾಜಿ ಪ್ರಿಯಕರನ ದುಬಾರಿ ಬೈಕ್‍ಗೆ ಬೆಂಕಿ ಇಟ್ಟ ಮಹಿಳೆ

    ಬ್ಯಾಂಕಾಕ್: ಥೈಲ್ಯಾಂಡ್‍ನ 36 ವರ್ಷದ ಮಹಿಳೆಯೊಬ್ಬಳು ತನ್ನ ಜೊತೆಗಿರಲು ನಿರಾಕರಿಸಿದ ಮಾಜಿ ಪ್ರಿಯಕರನ ಬೈಕಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಿದ್ದಾಳೆ.

    ಮಹಿಳೆ ತನ್ನ ಪ್ರಿಯಕರನಿಗೆ 23 ಲಕ್ಷ ರೂ. ಮೌಲ್ಯದ ಟ್ರಯಂಫ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಳು. ಆದರೆ ಅವರಿಬ್ಬರ ನಡುವೆ ಬ್ರೇಕ್ ಆಪ್ ಆದ ನಂತರ ತನ್ನ ಮಾಜಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಬೈಕನ್ನೇ ಸುಟ್ಟುಹಾಕಿದ್ದಾಳೆ.

    ಈ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕನೋಕ್ ವಾನ್ ಎಂಬ ಮಹಿಳೆ, ಡಬ್ಬವೊಂದರಲ್ಲಿ ತಂದಿದ್ದ ಇಂಧನವನ್ನು ಬೈಕ್ ಮೇಲೆ ಸುರಿದಿದ್ದಾಳೆ. ನಂತರ ಬೈಕ್‍ಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಕೆನಡಾದಲ್ಲಿ ಮಗನ ಮದುವೆ – ಆನ್‍ಲೈನ್‍ನಲ್ಲಿ ಆಶೀರ್ವಾದಿಸಿದ ಪೋಷಕರು

    ಈ ಘಟನೆ ವೇಳೆ ತನ್ನ ಮಾಜಿ ಪ್ರಿಯಕರನ ಬೈಕ್ ಜೊತೆಯಲ್ಲಿಯೇ ನಿಲ್ಲಿಸಿದ್ದ ಇನ್ನೂ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿದ್ದಾರೆ. ಅದೃಷ್ಟ ಎಂಬಂತೆ ಘಟನೆ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

  • ಪ್ರಿಯತಮೆಯ ಕೊಲೆಗೈದು ಸಹೋದರನ ಸಹಾಯದಿಂದ ಹೂತು ಹಾಕಿದ!

    ಪ್ರಿಯತಮೆಯ ಕೊಲೆಗೈದು ಸಹೋದರನ ಸಹಾಯದಿಂದ ಹೂತು ಹಾಕಿದ!

    ಕೊಪ್ಪಳ: ಪ್ರಿಯತಮೆಯ ಶೀಲ ಶಂಕಿಸಿ ಪ್ರಿಯತಮ ತನ್ನ ಸಹೋದರನ ಸಹಾಯದಿಂದ ಕೊಲೆ ಮಾಡಿ ಶವ ಹೂತು ಹಾಕಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಲೆಗುಡ್ಡ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಮದ್ದಾನವ್ವ (19) ಕೊಲೆಯಾದ ಯುವತಿ. ಯಲ್ಲಪ್ಪ ಬಮ್ಮನಗೌಡ (22) ಎಂಬಾತನೇ ಕೊಲೆ ಮಾಡಿರುವ ಪ್ರಿಯಕರ. ಯಲ್ಲಪ್ಪ ತನ್ನ ಸಹೋದರ ರಮೇಶ್ (19) ಸಹಾಯದಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಟಿಕ್‍ಟಾಕ್, ಫೇಸ್ಬುಕ್‍ನಲ್ಲಿ ಪರಿಚಯ, ಲವ್ ಬಳಿಕ ಮದುವೆ- 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯ

    ಕಳೆದ ಒಂದು ವರ್ಷದಿಂದ ಯಲ್ಲಪ್ಪ ಮತ್ತು ಮದ್ದಾನವ್ವ ಇಬ್ಬರು ಪ್ರೀತಿಸುತ್ತಿದ್ದು, ಮದುವೆಯಾಗಲು ತಿರ್ಮಾನಿಸಿದ್ದರು. ಯುವತಿ ಅಪ್ರಾಪ್ತಳಾಗಿದ್ದರಿಂದ ಎರಡೂ ಕುಟುಂಬದವರು ಮುಂದಿನ ವರ್ಷ ಮದುವೆಯಾಗುವಂತೆ ಬುದ್ಧಿವಾದ ಹೇಳಿದ್ದರಿಂದ ಯುವಕನ ಮನೆಯಲ್ಲಿ ಯುವತಿಯನ್ನು ಬಿಟ್ಟಿದ್ದರು.

    ಇತ್ತ ಯುವಕ, ಯುವತಿಯ ಮೇಲೆ ಅನುಮಾನ ಪಟ್ಟು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಯುವತಿ ಶವವನ್ನು ಮುರುಡಿ ಗ್ರಾಮದ ಕೆರೆ ಹತ್ತಿರದ ಜಮೀನಲ್ಲಿ ಹೂತು ಹಾಕಿದ್ದಾನೆ. ಪೊಲೀಸರು ನಿನ್ನೆ ಶವವನ್ನು ಹೊರತೆಗೆದು ಆರೋಪಿ ಯಲ್ಲಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ರಮೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.