Tag: ಪ್ರಿಯಕರ

  • ಪತಿ ಜೊತೆ ಬಳೆ ಖರೀದಿಸಲು ಹೋದವಳು ಲವ್ವರ್ ಜೊತೆ ಜೂಟ್

    ಪತಿ ಜೊತೆ ಬಳೆ ಖರೀದಿಸಲು ಹೋದವಳು ಲವ್ವರ್ ಜೊತೆ ಜೂಟ್

    ಪಾಟ್ನಾ: ಗಂಡನೊಂದಿಗೆ ಬಳೆ ಖರೀದಿಸಲು ಹೋದ ಪತ್ನಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಬಿಹಾರದ ಮುಂಗೇರ್‌ನಲ್ಲಿ ನಡೆದಿದೆ.

    ಜೂನ್ 14ರಂದು ಮುಂಗೇರ್ ನಿವಾಸಿ ರಾಮವಿಲಾಸ್ ಗುಪ್ತಾ ಅವರ ಪುತ್ರ ವಿವೇಕ್ ಪೊದ್ದಾರ್ ಹಾಗೂ ನೌವಾಗರ್ಹಿ ನಿವಾಸಿ ರಾಮ್ವಿಲಾಸ್ ಪೊದ್ದಾರ್ ಅವರ ಪುತ್ರಿ ಮೋನಿ ಕುಮಾರಿ ವಿವಾಹವಾಗಿದ್ದರು. ಹೊಸದಾಗಿ ಮದುವೆಯಾದ ನವದಂಪತಿ ಕುಟುಂಬಸ್ಥರ ಮನೆಗೆ ಭೇಟಿ ನೀಡುತ್ತಿದ್ದರು.

    ಜೂನ್ 22ರಂದು ಸಂಜೆ ಮೋನಿ ಕುಮಾರಿ ಬಳೆ ಖರೀದಿಸಲು ನಗರಕ್ಕೆ ಹೋಗಿದ್ದಾಳೆ. ಈ ವೇಳೆ ಕಾರ್‌ನಿಂದ ಬಂದ ನವದಂಪತಿಗೆ ಅಡ್ಡಹಾಕಿ ಪತಿ ವಿವೇಕ್‍ಗೆ ಗನ್ ತೋರಿಸಿ ಬೆದರಿಕೆಯೊಡ್ಡಿದ್ದಾರೆ. ಮತ್ತೊಂದೆಡೆ ಮೋನಿ ಕುಮಾರಿಯನ್ನು ಕಾರ್ ಒಳಗೆ ಹತ್ತಿಸಿಕೊಂಡು ಪರಾರಿಯಾಗಿದ್ದಾರೆ. ನಂತರ ಗಾಬರಿಗೊಂಡ ಪತಿ ವಿವೇಕ್ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಇದು ಮಂಗಗಳ ನೃತ್ಯ – ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟಿನ ಬಗ್ಗೆ ಓವೈಸಿ ವ್ಯಂಗ್ಯ

    ಇದಾದ ಬಳಿಕ ಮನೆಗೆ ಬಂದು ನೋಡಿದರೆ, ಮನೆಯಲ್ಲಿದ್ದ ಒಡವೆ ಯಾವುದೇ ಕಾಣಲಿಲ್ಲ. ಅಲ್ಲದೇ ಮೋನಿಗೆ ಬೇಕಾದ ವಸ್ತುಗಳು ಕೂಡ ರೂಮ್‍ನಲ್ಲಿ ಇರಲಿಲ್ಲ. ಈ ಬಗ್ಗೆ ಅನುಮಾನಗೊಂಡ ವಿವೇಕ್ ಪೊಲೀಸರಿಗೆ ತಿಳಿಸಿದ್ದಾರೆ. ಮೋನಿ ಮೊಬೈಲ್ ಪರಿಶೀಲನೆ ನಡೆಸಿದ ವಿವೇಕ್‍ಗೆ ವ್ಯಕ್ತಿಯೋರ್ವ ಪದೇ, ಪದೇ ಕರೆ ಮಾಡಿರುವ ವಿಚಾರ ತಿಳಿದುಬಂದಿದೆ.

    ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಮೋನಿ ಕುಮಾರಿ ಹಾಗೂ ಆಕೆಯ ಪ್ರಿಯಕರ ದಿವ್ಯಾಂಶು ಕುಮಾರ್ ಫೋನ್ ಟ್ರ್ಯಾಕ್ ಮಾಡಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೋನಿ ಕುಮಾರಿ ಹಾಗೂ ದಿವ್ಯಾಂಶು ಕುಮಾರ್ ಇಬ್ಬರು ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರು ನಿರಾಕರಿಸಿದ್ದರಿಂದ ಮದುವೆಯಾದ ಬಳಿಕ ಓಡಿ ಹೋಗಲು ಮೋನಿ ಕುಮಾರಿ ಪ್ಲ್ಯಾನ್ ಮಾಡಿದ್ದಾಳೆ.

    ಜೂನ್ 22ರಂದು ಮೋನಿ ಕುಮಾರಿ ಪ್ರಿಯಕರ ದಿವ್ಯಾಂಶು ಕುಮಾರ್‌ಗೆ ತನ್ನನ್ನು ಕಿಡ್ನಾಪ್ ಮಾಡುವಂತೆ ತಿಳಿಸಿದ್ದಳು. ಅದರಂತೆ ದಿವ್ಯಾಂಶು ಕುಮಾರ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದು ಮೋನಿಯನ್ನು ಅಪಹರಿಸಿದ್ದಾನೆ. ಎಲ್ಲವೂ ಮೋನಿ ಪ್ಲ್ಯಾನ್ ಪ್ರಕಾರವೇ ಮಾಡಿರುವುದಾಗಿ ದಿವ್ಯಾಂಶು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಇದೀಗ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಎಸ್‍ಎಚ್‍ಒ ಧೀರೇಂದ್ರ ಕುಮಾರ್ ಪಾಂಡೆ ತಿಳಿಸಿದ್ದಾರೆ.  ಇದನ್ನೂ ಓದಿ: ಗುಜರಾತ್ ಗಲಭೆ ಪ್ರಕರಣದಲ್ಲಿ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ತೀಸ್ತಾ ಸೆತಲ್ವಾಡ್ ಬಂಧನ

    ಒಟ್ಟಾರೆ ಮದುವೆ ಬಗ್ಗೆ ಸಾಕಷ್ಟು ಆಸೆ ಕನಸು ಇಟ್ಟುಕೊಂಡಿದ್ದ ಪತಿ ವಿವೇಕ್‍ಗೆ ಹೆಂಡತಿಯ ಕಥೆ ಕೇಳಿ ದಿಕ್ಕು ದೋಚದಂತೆ ಆಗಿದೆ.

    Live Tv

  • ಪ್ರೀತಿಸಿದ ಹುಡುಗಿ ಮದ್ವೆಗೆ ಒಪ್ಪಿಲ್ಲವೆಂದು ಪ್ರಿಯಕರ ಆತ್ಮಹತ್ಯೆ

    ಪ್ರೀತಿಸಿದ ಹುಡುಗಿ ಮದ್ವೆಗೆ ಒಪ್ಪಿಲ್ಲವೆಂದು ಪ್ರಿಯಕರ ಆತ್ಮಹತ್ಯೆ

    ಚಿಕ್ಕಮಗಳೂರು: ಪ್ರೀತಿಸಿದ ಹುಡುಗಿ ಮದುವೆಯಾಗಲು ನಿರಾಕರಿಸಿದಳೆಂದು ಮನನೊಂದು ಪ್ರಿಯಕರ ಆತ್ಮಹತ್ಯೆಯ ದಾರಿ ಹಿಡಿದ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಚೇತನ್(31) ಆತ್ಮಹತ್ಯೆಗೆ ಶರಣಾದ ಯುವಕ. ಎನ್.ಆರ್. ಪುರ ತಾಲೂಕಿನ ಮುತ್ತಿನಕೊಪ್ಪ ಬಳಿಯ ಶಂಕರಪುರದಲ್ಲಿ ಈ ಘಟನೆ ನಡೆದಿದೆ. ನನಗೆ ಶ್ವೇತಾ(ಹೆಸರು ಬದಲಾಯಿಸಲಾಗಿದೆ) ಮೋಸ ಮಾಡಿದಳು ಎಂದು ವಾಯ್ಸ್ ಮೆಸೇಜ್ ಕಳುಹಿಸಿ ಚೇತನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ; ಈಜಲು ಹೋದ ಇಬ್ಬರು ಬಾಲಕಿಯರು ನೀರುಪಾಲು

    ನಾನು ಶ್ವೇತಾ ಕಳೆದ 9 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ನನ್ನಿಂದ ಆಕೆ 4 ಲಕ್ಷ ರೂ. ಹಣವನ್ನು ಕಿತ್ತುಕೊಂಡಿದ್ದಾಳೆ ಎಂದು ವಾಯ್ಸ್ ಮೆಸೇಜ್ ನಲ್ಲಿ ಚೇತನ್ ಗಂಭೀರ ಆರೋಪ ಮಾಡಿದ್ದಾನೆ. ಅಲ್ಲದೆ ನನ್ನ ಸಾವಿಗೆ ನ್ಯಾಯ ಸಿಗಬೇಕೆಂದರೆ ಆಕೆಗೆ ಶಿಕ್ಷೆಯಾಗಬೇಕು. ನನ್ನ ಚಿತೆಗೆ ಆಕೆಯೇ ಬೆಂಕಿ ಇಡಬೇಕು, ಆಕೆ ಬರುವತನಕ ಹೆಣವನ್ನು ಕೆಳಗಿಳಿಸಬೇಡಿ. ನನಗೆ ಮಾನಸಿಕ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ವಾಯ್ಸ್ ಮೆಸೇಜ್ ಹಾಗೂ ಡೆತ್ ನೋಟ್ ಮೂಲಕ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ.

    ಎನ್.ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಗೃಹಿಣಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಿಯಕರ ಅರೆಸ್ಟ್

    ಗೃಹಿಣಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಿಯಕರ ಅರೆಸ್ಟ್

    ಚಿಕ್ಕಬಳ್ಳಾಪುರ: ಗೃಹಿಣಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಿಯಕರನನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮೇ 15 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ಭಾಗ್ಯಶ್ರೀ(35) ಅವರನ್ನು ಪ್ರಿಯಕರ ರಿಯಾಝ್ ಪಾಷಾ ಮನೆಯಿಂದ ಹೊರಗೆಳೆದು, ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ. ನಂತರ ಅಲ್ಲಿಂದ ಪರಾರಿಯಾಗಿದ್ದನು. ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಪರೀಕ್ಷೆ ಅಕ್ರಮ: ಕಿಂಗ್‍ಪಿನ್ ಆರ್.ಡಿ.ಪಾಟೀಲ್ ಮತ್ತೆ ಸಿಐಡಿ ವಶಕ್ಕೆ!

    KILLING CRIME

    ನಡೆದಿದ್ದೇನು?
    ಮೃತ ಭಾಗ್ಯಶ್ರೀ ಪತಿ ಚನ್ನಬಸವರಾಜು ಸಂಬಂಧಿಕರ ಗೃಹ ಪ್ರವೇಶಕ್ಕೆ ತೆರಳಿದ್ದರು. ಈ ವೇಳೆ ಭಾಗ್ಯಶ್ರೀ ಮತ್ತು ಮಕ್ಕಳು ಮನೆಯಲ್ಲಿಯೇ ಇದ್ದರು. ಸಮಯ ನೋಡಿಕೊಂಡು ರಿಯಾಝ್ ಪಾಷಾ, ಭಾಗ್ಯಶ್ರೀ ಮನೆಗೆ ನುಗ್ಗಿ, ಅವಳನ್ನು ಹೊರಗೆಳೆದಿದ್ದನು. ನಂತರ ಮಕ್ಕಳ ಮುಂದೆಯೇ ಭಾಗ್ಯಶ್ರೀಯನ್ನು ನಿರ್ದಯವಾಗಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ.

    crime

    ಈ ಕುರಿತಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂ.ಗ್ರಾ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಡಿವೈಎಸ್‍ಪಿ ನಾಗಾರಾಜ್, ಸರ್ಕಲ್ ಇನ್‍ಸ್ಪೆಕ್ಟರ್ ಹರೀಶ್ ಅವರ ಮಾರ್ಗದರ್ಶನದಲ್ಲಿ ದೊಡ್ಡಬೆಳವಂಗಲ ಸಬ್ ಇನ್‍ಸ್ಪೆಕ್ಟರ್ ಜ್ಞಾನಮೂರ್ತಿ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ:  ಮುಸ್ಲಿಂ ಸಮುದಾಯ ಹಠ ಮಾಡದೇ ದೇವಸ್ಥಾನ ಬಿಟ್ಟು ಕೊಡಬೇಕು: ಮುತಾಲಿಕ್ 

    ಈ ವೇಳೆ ಆರೋಪಿ ರಾಯಚೂರಿನ ಲಿಂಗಸೂಗೂರು ಗ್ರಾಮದಲ್ಲಿ ತಲೆ ಮರೆಸಿಕೊಂಡಿದ್ದ ಎಂದು ತಿಳಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಕಲ್ಯಾಣಮಂಟಪದಿಂದ ಪ್ರಿಯಕರನ ಜೊತೆ ವಧು ಎಸ್ಕೇಪ್ – ಮುರಿದುಬಿತ್ತು ಮದುವೆ

    ಕಲ್ಯಾಣಮಂಟಪದಿಂದ ಪ್ರಿಯಕರನ ಜೊತೆ ವಧು ಎಸ್ಕೇಪ್ – ಮುರಿದುಬಿತ್ತು ಮದುವೆ

    ಚಿಕ್ಕಬಳ್ಳಾಪುರ: ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ತಾಳಿ ಕಟ್ಟೋ ಕೊನೆ ಘಳಿಗೆಯಲ್ಲಿ ವಧು ತಲೆ ಸುತ್ತಿ ಬಿದ್ದು ನಾಟಕ ಮಾಡುವ ಮೂಲಕ ಮದುವೆ ಮುರಿದಿದ್ದಳು. ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲೂ ರಾತ್ರಿ ಆರತಕ್ಷತೆಯಲ್ಲಿ ಭಾಗಿಯಾದ ವಧು ರಾತ್ರೋ ರಾತ್ರಿ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದು, ಮದುವೆ ಮುರಿದುಬಿದ್ದಿದೆ.

    ಹೌದು ಗೌರಿಬಿದನೂರು ನಾಗರೆಡ್ಡಿ ಬಡಾವಣೆಯ ವಧು ವೆನ್ನಲ ಹಾಗೂ ಕರೇಕಲ್ಲಹಳ್ಳಿಯ ವರ ಸುರೇಶ್ ಮದುವೆ ನಿಶ್ಚಯವಾಗಿತ್ತು. ಗುರು ಹಿರಿಯರ ನಿಶ್ಚಯಿಸಿದಂತೆ ವಿದುರಾಶ್ವತ್ಥ ಗ್ರಾಮದ ಚನ್ನರಾಯಸ್ವಾಮಿ ಕಲ್ಯಾಣಮಂಟಪದಲ್ಲಿ ರಾತ್ರಿ ಆರತಕ್ಷತೆಯೂ ನೇರವೇರಿತ್ತು. ಆದರೆ ರಾತ್ರೋರಾತ್ರಿ ವಧು ವೆನ್ನಲ ತನ್ನ ಪ್ರಿಯಕರ ಸೋದರ ಮಾವ ಪ್ರವೀಣ್ ಜೊತೆ ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: ಐಶ್ವರ್ಯ ರಜನೀಕಾಂತ್ ನಿರ್ದೇಶನದಲ್ಲಿ ಸೌರವ್ ಗಂಗೂಲಿ ಬಯೋಪಿಕ್

    ಇದರಿಂದ ಇಂದು ನಡೆಯಬೇಕಿದ್ದ ಮದುವೆ ಮುರಿದುಬಿದ್ದಿದೆ. ಹೀಗಾಗಿ ಸಂಬಂಧಿಕರು ಗೌರಿಬಿದನೂರು ನಗರ ಪೊಲೀಸರ ಮೊರೆ ಹೋಗಿದ್ದು ವಧು ನಾಪತ್ತೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಸದ್ಯ ವಧುವರರ ಸಂಬಂಧಿಕರು ಪೊಲೀಸ್ ಠಾಣೆ ಬಳಿ ಸೇರಿದ್ದು. ಪರಾರಿಯಾದ ವಧು ಹಾಗೂ ಪ್ರಿಯಕರ ಪ್ರವೀಣ್ ಸಹ ಠಾಣೆಗೆ ಬರುವುದಾಗಿ ತಿಳಿಸಿದ್ದಾರಂತೆ. ಹೀಗಾಗಿ ವಧು ಹಾಗೂ ಪ್ರಿಯಕರ ಬಂದ ನಂತರ ಮುಂದೇನಾಗುತ್ತೋ ಕಾದು ನೋಡಬೇಕಿದೆ. ಇದನ್ನೂ ಓದಿ: ತಾಳಿ ಕಟ್ಟುವಾಗ ಕುಸಿದುಬಿದ್ದಂತೆ ವಧು ನಾಟಕ – ಕೊನೆ ಕ್ಷಣದಲ್ಲಿ ಮುರಿದುಬಿತ್ತು ಮದುವೆ

  • ಪ್ರಿಯತಮೆಯ ಆತ್ಮಹತ್ಯೆಯಿಂದ ಮನನೊಂದು ಪ್ರಿಯಕರನೂ ಆತ್ಮಹತ್ಯೆ

    ಪ್ರಿಯತಮೆಯ ಆತ್ಮಹತ್ಯೆಯಿಂದ ಮನನೊಂದು ಪ್ರಿಯಕರನೂ ಆತ್ಮಹತ್ಯೆ

    ತುಮಕೂರು: ಪ್ರಿಯತಮೆಯ ಆತ್ಮಹತ್ಯೆಯಿಂದ ಮನನೊಂದು ಪ್ರಿಯಕರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಮಾಗಡಿ ರಸ್ತೆ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಆರು ತಿಂಗಳ ಬಳಿಕ ಅಸ್ತಿಪಂಜರವಾಗಿ ಶವ ಪತ್ತೆಯಾಗಿದೆ.

    ಮೂಲತಃ ಕುಣಿಗಲ್ ತಾಲೂಕಿನ ಅರಮನೆ ಹೊನ್ನಮಾಚಹಳ್ಳಿ ಗ್ರಾಮದ ಹಾಲಿ ಬೆಂಗಳೂರು ಸುಂಕದಕಟ್ಟೆ ನಿವಾಸಿ ಸಂತೋಷ್ (28), ಹುಲಿಯೂರುದುರ್ಗ ಹೋಬಳಿ ಕೆಬ್ಬಳಿ ಗ್ರಾಮದ ಶಾಲಿನಿ (21) ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳಾಗಿದ್ದಾರೆ. ಇದನ್ನೂ ಓದಿ:  ರಾಷ್ಟ್ರಧ್ವಜದ ಮೇಲೆ ನಿಂತು ನಮಾಜ್- ವ್ಯಕ್ತಿಯ ಬಂಧನ

    POLICE JEEP

    ಸಂತೋಷ್ ಹಾಗೂ ಶಾಲಿನಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಹುಡುಗಿಯ ಕಡೆಯವರು ಸಂತೋಷ್‍ಗೆ ಕೊಟ್ಟು ಮದುವೆ ಮಾಡಲು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಯುವತಿ 2021ರ ಅಕ್ಟೋಬರ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಚಾರ ತಿಳಿದು ಸಂತೋಷ್ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಆತನನ್ನು ಪೋಷಕರು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದರು. ಈ ಸಂಬಂಧ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಯಮುನೋತ್ರಿ ದೇವಸ್ಥಾನದ ಹೆದ್ದಾರಿಯಲ್ಲಿ ಗೋಡೆ ಕುಸಿತ – 10 ಸಾವಿರ ಮಂದಿ ಸಂಕಷ್ಟದಲ್ಲಿ

    ಪುನಃ 6 ತಿಂಗಳ ಹಿಂದೆ ಸಂತೋಷ್ ನಾಪತ್ತೆಯಾಗಿದ್ದನು. ಹುಲಿಯೂರುದುರ್ಗ ದಟ್ಟ ಅರಣ್ಯ ಪ್ರದೇಶದಲ್ಲಿ ಅನಾಮದೇಯವಾಗಿ ನಿಲ್ಲಿಸಿದ ಬೈಕ್ ಹಾಗೂ ಅಸ್ತಿಪಂಜರವಾಗಿ ಬಿದ್ದಿದ್ದ ಮೃತದೇಹವನ್ನು ನೋಡಿದ ಅರಣ್ಯ ಸಿಬ್ಬಂದಿ ಹುಲಿಯೂರುದುರ್ಗ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪಿಎಸ್‍ಐ ಚೇತನ್ ಭೇಟಿ ನೀಡಿ ಪರಿಶೀಲಿಸಿ, ಬೈಕ್ ಹಾಗೂ ಅಸ್ತಿಪಂಜರ ದೇಹವನ್ನು ವಶಕ್ಕೆ ಪಡೆದು, ತನಿಖೆ ನಡೆಸಿದಾಗ ಸಂತೋಷ್‍ನ ಮೃತ ದೇಹ ಎಂದು ತಿಳಿದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಪ್ರೀತಿ ಮುಂದುವರಿಸೋದು ಬೇಡ ಅಂದಿದ್ದಕ್ಕೆ ಪ್ರಿಯಕರನಿಂದಲೇ ಯುವತಿ ಕೊಲೆ

    ಪ್ರೀತಿ ಮುಂದುವರಿಸೋದು ಬೇಡ ಅಂದಿದ್ದಕ್ಕೆ ಪ್ರಿಯಕರನಿಂದಲೇ ಯುವತಿ ಕೊಲೆ

    ಪಣಜಿ: ಪ್ರೀತಿ ಮುಂದುವರಿಸುವುದು ಬೇಡ ಅಂದಿದ್ದಕ್ಕೆ 19 ವರ್ಷದ ಯುವತಿಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದಕ್ಷಿಣ ಗೋವಾದ ವೆಲ್ಸಾನ್ ಬೀಚ್‍ನಲ್ಲಿ ನಡೆದಿದೆ.

    ಆರೋಪಿಯನ್ನು 26 ವರ್ಷದ ಕಿಶನ್ ಕಲಂಗುಟ್ಕರ್ ಎಂದು ರುತಿಸಲಾಗಿದ್ದು, ಯುವತಿಯ ಶವ ಸಮುದ್ರ ತೀರದಲ್ಲಿ ಪತ್ತೆಯಾದ ಒಂದು ದಿನದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕೆನಡಾ ಸಂಸತ್ತಿನಲ್ಲಿ ಕನ್ನಡದ ಕಂಪು ಬೀರಿದ ಚಂದ್ರ ಆರ್ಯ ಮನೆಯಲ್ಲಿ ಸಂತಸ

    CRIME 2

    ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ಆರೋಪಿ, ಬುಧವಾರ ಆಕೆಯೊಂದಿಗೆ ಬೀಚ್‍ಗೆ ತೆರಳಿದ್ದನು. ಈ ವೇಳೆ ಯುವತಿ ಪ್ರೀತಿಯನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಚಾಕುವಿನಿಂದ ಅನೇಕ ಬಾರಿ ಇರಿದು ಆಕೆಯನ್ನು ಕೊಂದಿದ್ದಾನೆ. ನಂತರ ಆಕೆಯ ಮೃತ ದೇಹವನ್ನು ಕಡಲ ತೀರದಲ್ಲಿರುವ ಪೊದೆಯೊಂದರಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ.

    ಮೃತದೇಹ ಪತ್ತೆಯಾದ ಬಳಿಕ ತನಿಖೆ ಆರಂಭಿಸಿ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಅಭಿಷೇಕ್ ಧನಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮುಂದೆ ಶರಣಾಗಲು ಹೆಚ್ಚಿನ ಸಮಯ ಕೇಳಿದ ಸಿಧು 

  • ಬೆಳ್ಳಂಬೆಳಗ್ಗೆ ಗೃಹಿಣಿ ಬರ್ಬರ ಹತ್ಯೆ – ದೂರು ದಾಖಲಿಸಿದ್ದಕ್ಕೆ ಪ್ರೇಯಸಿಯನ್ನೇ ಕೊಂದನಾ ಪ್ರಿಯಕರ?

    ಬೆಳ್ಳಂಬೆಳಗ್ಗೆ ಗೃಹಿಣಿ ಬರ್ಬರ ಹತ್ಯೆ – ದೂರು ದಾಖಲಿಸಿದ್ದಕ್ಕೆ ಪ್ರೇಯಸಿಯನ್ನೇ ಕೊಂದನಾ ಪ್ರಿಯಕರ?

    ಚಿಕ್ಕಬಳ್ಳಾಪುರ: ಗೃಹಿಣಿಯೊಬ್ಬಳು ಮನೆಯ ಮುಂದೆಯೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ನಡೆದಿದೆ.

    ಭಾಗ್ಯಶ್ರೀ(35) ಕೊಲೆಯಾದ ದುರ್ದೈವಿ. ಪತಿ ಚನ್ನಬಸವಪ್ಪ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಭಾಗ್ಯಶ್ರೀ ಇಂದು ಬೆಳ್ಳಂಬೆಳಗ್ಗೆ ಕೊಲೆಯಾಗಿದ್ದಾಳೆ. ಈ ಕೊಲೆಯನ್ನು ಇದೇ ಗ್ರಾಮದ ರಿಯಾಜ್ ಮಾಡಿರಬೇಕು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕಪಿಲ್ ಕ್ರಿಕೆಟ್ ಕ್ಲಬ್‍ನಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ – ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ಆಯೋಜನೆ

    ಹೌದು, ಮೃತ ಭಾಗ್ಯಶ್ರೀ ಇದೇ ಗ್ರಾಮದ ಮುಸ್ಲಿಂ ಸಮುದಾಯದ ರಿಯಾಜ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಸಲುಗೆಯಲ್ಲಿ ದುಡ್ಡು ಕಾಸು ಕೊಟ್ಟು ತೆಗೆದುಕೊಳ್ಳುವ ವ್ಯವವಹಾರ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ಕಳೆದ 3 ದಿನಗಳ ಹಿಂದೆ ರಿಯಾಜ್ ಸುಖಾಸುಮ್ಮನೆ ದುಡ್ಡು ಕೊಡಬೇಕು ಅಂತ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಭಾಗ್ಯಶ್ರೀ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗುತ್ತಿದೆ.

    ಇದೇ ಜಿದ್ದಿಗೆ ಭಾಗ್ಯಶ್ರೀಯನ್ನು ರಿಯಾಜ್ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇಂದು ಬೆಳಗ್ಗೆ ಗಂಡ ಸಹ 5 ಗಂಟೆಗೆ ಫಂಕ್ಷನ್ ಇದೇ ಅಂತ ಮನೆಯಿಂದ ಹೊರಟು ಹೋಗಿದ್ದರು. ಮನೆಯಲ್ಲಿ ಗಂಡನಿಲ್ಲದ ಹೊತ್ತು ನೋಡಿ ರಿಯಾಜ್ ಬಂದು ಕೃತ್ಯ ಎಸಗಿ ಹೋಗಿದ್ದಾನೆ ಎನ್ನುವ ಅನುಮಾನ ಮೂಡಿದೆ. ಇದನ್ನೂ ಓದಿ: ಉದ್ದನೆ ಕೂದಲಿನ, ತುಟಿಗೆ ಬಣ್ಣ ಹಚ್ಚಿ ದೈತ ದಾಂಡಿಗನಾಗಿ ಗಮನಸೆಳೆದ ಸೈಮಂಡ್ಸ್ ಇನ್ನು ನೆನಪು ಮಾತ್ರ

    ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಾಥಮಿಕ ತನಿಖೆ ನಡೆಸಿ ಮೃತದೇಹವನ್ನ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆರಂಭದಲ್ಲಿ ಗಂಡನ ಫೋನ್ ಸ್ವಿಚ್ ಆಫ್ ಆದ ಕಾರಣ ಗಂಡ ಏನಾದರೂ ಕೊಲೆ ಮಾಡಿ ಹೋದನಾ ಅಂತಲೂ ಅನುಮಾನ ಮೂಡಿತ್ತು. ಆದರೆ ಕೊನೆಗೆ ವಿಷಯ ತಿಳಿದು ಗಂಡನೇ ಪೊಲೀಸ್ ಠಾಣೆ ಬಳಿ ಬಂದಿದ್ದು, ತನಗೇನು ಗೊತ್ತಿಲ್ಲ ಅಂತ ಹೇಳುತ್ತಿದ್ದಾನೆ. ರಿಯಾಜ್ ಸಹ ಘಟನೆ ನಂತರ ನಾಪತ್ತೆಯಾಗಿದ್ದು, ರಿಯಾಜ್‍ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಫಸ್ಟ್‌ ಟೈಂ ಜಸ್ಟ್ ಮಿಸ್, ಸೆಕೆಂಡ್‌ ಟೈಂ ಸಕ್ಸಸ್ – ಮದುವೆಯಾದ 1 ತಿಂಗಳಲ್ಲೇ ಪ್ರಿಯಕರ ಜೊತೆ ಸೇರಿ ಪತಿಯನ್ನೇ ಕೊಂದಳು

    ಫಸ್ಟ್‌ ಟೈಂ ಜಸ್ಟ್ ಮಿಸ್, ಸೆಕೆಂಡ್‌ ಟೈಂ ಸಕ್ಸಸ್ – ಮದುವೆಯಾದ 1 ತಿಂಗಳಲ್ಲೇ ಪ್ರಿಯಕರ ಜೊತೆ ಸೇರಿ ಪತಿಯನ್ನೇ ಕೊಂದಳು

    ಹೈದರಾಬಾದ್: ಮದುವೆಯಾದ ಕೇವಲ 36 ದಿನಗಳಲ್ಲಿಯೇ ಮಹಿಳೆಯೊಬ್ಬಳು ನಂತರ ತನ್ನ ಪ್ರಿಯಕರ, ಆತನ ನಾಲ್ವರು ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸೇರಿ ಪತಿಯನ್ನು ಕೊಂದಿದ್ದಾಳೆ.

    ಏಪ್ರಿಲ್ 28 ರಂದು ತೆಲಂಗಾಣದ ಸಿದ್ದಿಪೇಟ್‍ನಲ್ಲಿ ಈ ಭಯಾನಕ ಘಟನೆ ಸಂಭವಿಸಿದ್ದು, 10 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಮುನ್ನ ಆರೋಪಿ ಮಹಿಳೆ, ತನ್ನ ಪತಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಳು. ಆದರೆ ಮೃತ ವ್ಯಕ್ತಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ವಿಚಾರಣೆ ನಡೆಸುವಾಗ ಮಹಿಳೆಯೇ ಕೊಲೆ ಮಾಡಿರುವುದು ಸಾಬೀತಾಗಿದೆ.

    ಮೃತನನ್ನು ಕೆ. ಚಂದ್ರಶೇಖರ್(28) ಎಂದು ಗುರುತಿಸಲಾಗಿದ್ದು, 19 ವರ್ಷದ ಶ್ಯಾಮಲಾ, 20 ವರ್ಷದ ತನ್ನ ಪ್ರಿಯಕರ ಶಿವ ಕುಮಾರ್ ಜೊತೆ ಸೇರಿ ಪತಿ ಚಂದ್ರಶೇಖರ್ ಕತ್ತು ಹಿಸುಕಿ ಕೊಂದಿದ್ದಾಳೆ. ಮೊದಲು ವಿಷ ಹಾಕಿ ಗಂಡನನ್ನು ಕೊಲ್ಲಲು ಯತ್ನಿಸಿ ವಿಫಲವಾದ ಬಳಿಕ, ಪ್ರಿಯಕರ ಶಿವ, ಆತನ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸೇರಿ ಹತ್ಯೆಗೆ ಪ್ಲಾನ್ ಮಾಡಿದ್ದಾಳೆ. ಇದನ್ನೂ ಓದಿ: ಸಂಸಾರದ ತೊಂದರೆ ಸರಿಪಡಿಸುವ ನೆಪದಲ್ಲಿ ಮಾಂತ್ರಿಕನಿಂದ 79 ದಿನ ಮಹಿಳೆಯ ಮೇಲೆ ಅತ್ಯಾಚಾರ

    ಶ್ಯಾಮಲಾ ಕಳೆದ ಮೂರು ವರ್ಷಗಳಿಂದ ಶಿವನನ್ನು ಪ್ರೀತಿಸುತ್ತಿದ್ದಳು. ಆದರೆ ಮನೆಯವರ ಒತ್ತಡದಿಂದ ಮಾರ್ಚ್ 23 ರಂದು ಚಂದ್ರಶೇಖರ್ ಅವರನ್ನು ವಿವಾಹವಾಗಿದ್ದಳು. ಮದುವೆಯ ನಂತರವೂ ಪ್ರಿಯಕರ ಶಿವ ಜೊತೆಗೆ ಸಂಬಂಧವನ್ನು ಮುಂದುವರೆಸಿದಳು. ಬಳಿಕ ಚಂದ್ರಶೇಖರ್‍ನನ್ನು ಸಾಯಿಸಲು ಪ್ಲಾನ್ ಮಾಡಿದಳು. ಅದರಂತೆ ಏಪ್ರಿಲ್ 19 ರಂದು ತನ್ನ ಗಂಡನಿಗೆ ಊಟದಲ್ಲಿ ಇಲಿ ಪಾಷಣವ ಬೆರೆಸಿ ಕೊಲ್ಲಲು ಯತ್ನಿಸಿದಳು. ಆದರೆ ಚಂದ್ರಶೇಖರ್ ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

    crime

    ತದನಂತರ ಪ್ರಿಯಕರನೊಂದಿಗೆ ಹೊಸ ಸಂಚು ರೂಪಿಸಿ, ಅದರಂತೆ ಏಪ್ರಿಲ್ 19 ರಂದು ಚಂದ್ರಶೇಖರ್‌ಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಾಳೆ. ಅನಂತಸಾಗರ ಗ್ರಾಮದ ಹೊರವಲಯದಲ್ಲಿರುವ ನಿರ್ಜನ ಪ್ರದೇಶವನ್ನು ತಲುಪಿದಾಗ, ಶಿವ ತನ್ನ ಸ್ನೇಹಿತರಾದ ರಾಕೇಶ್, ರಂಜಿತ್ ಮತ್ತು ಆತನ ಇಬ್ಬರು ಸಂಬಂಧಿಕರಾದ ಸಾಯಿಕೃಷ್ಣ ಮತ್ತು ಭಾರ್ಗವ್ ಅವರೊಂದಿಗೆ ದ್ವಿಚಕ್ರ ವಾಹನದಿಂದ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಶ್ಯಾಮಲಾ, ಶಿವ ಇಬ್ಬರು ಸೇರಿ ಕತ್ತು ಚಂದ್ರಶೇಖರ್ ಕತ್ತು ಹಿಸುಕಿ ಹತ್ಯೆಗೈದು, ಎದೆನೋವು ಕಾಣಿಸಿಕೊಂಡು ಚಂದ್ರಶೇಖರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರಿಗೆ ತಿಳಿಸಿದ್ದಾಳೆ. ಆದರೆ ಈ ಬಗ್ಗೆ ಅನುಮಾನಗೊಂಡ ಮೃತನ ತಾಯಿ ಶ್ಯಾಮಲಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

    POLICE JEEP

    ಕೊನೆಗೆ ತನಿಖೆ ವೇಳೆ ಪೊಲೀಸರ ಬಳಿ ಆರೋಪಿ ಮಹಿಳೆ ಸತ್ಯ ಬಾಯ್ಬಿಟ್ಟಿದ್ದಾಳೆ. ಇದೀಗ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿದ್ದಿಪೇಟೆ ಎರಡರ ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ರವಿಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ನಿದ್ರೆ ಮಾಡುತ್ತಿರುವಾಗಲೇ ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ

  • ಪತಿ ಕಣ್ಣೆದುರೇ ಪ್ರಿಯಕರನೊಂದಿಗೆ ಪತ್ನಿ ಸೆಕ್ಸ್ – ಸ್ಕ್ರೂಡ್ರೈವರ್‌ನಿಂದ ಇಬ್ಬರನ್ನು ಇರಿದು ಕೊಂದ

    ಪತಿ ಕಣ್ಣೆದುರೇ ಪ್ರಿಯಕರನೊಂದಿಗೆ ಪತ್ನಿ ಸೆಕ್ಸ್ – ಸ್ಕ್ರೂಡ್ರೈವರ್‌ನಿಂದ ಇಬ್ಬರನ್ನು ಇರಿದು ಕೊಂದ

    ಹೈದರಾಬಾದ್: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿಯೇ ಪತ್ನಿ ಮತ್ತು ಆಕೆಯ ಪ್ರಿಯಕರನ ಹತ್ಯೆಗೈದಿರುವ ಘಟನೆ ತೆಲಂಗಾಣದ ಹೈದರಾಬಾದ್‍ನ ರಾಚಕೊಂಡದಲ್ಲಿ ನಡೆದಿದೆ.

    ಕಾರು ಚಾಲಕನಾಗಿದ್ದ ಯಶವಂತ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿಗೆ ಎಷ್ಟು ಬಾರಿ ತಿಳುವಳಿಕೆ ಹೇಳಿದರೂ ಕೇಳದ ಹಿನ್ನೆಲೆ ಅವಮಾನ ಅನುಭವಿಸಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಲ್‍ಬಿ ನಗರದ ಉಪ ಪೊಲೀಸ್ ಆಯುಕ್ತ ಸನ್‍ಪ್ರೀತ್ ಸಿಂಗ್ ತಿಳಿಸಿದ್ದಾರೆ.

    KILLING CRIME

    ವಿಜಯವಾಡದಿಂದ ಹೈದರಾಬಾದ್‍ಗೆ ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ಶಿಫ್ಟ್ ಆಗಿದ್ದರು. ಈ ವೇಳೆ ತನ್ನ ಪತ್ನಿಗೆ ಯಶವಂತ್ ಪರಿಚಯವಾಗಿ ನಂತರ ಇಬ್ಬರ ನಡುವೆ ಅಕ್ರಮ ಸಂಬಂಧ ಶುರುವಾಗಿತ್ತು. ಈ ವಿಚಾರ ತಿಳಿದು ನಿರಾಕರಿಸಿ ಆರೋಪಿ ತನ್ನ ಪತ್ನಿಗೆ ಅನೇಕ ಬಾರಿ ಬುದ್ಧಿವಾದ ಹೇಳಿದ್ದಾನೆ. ಆದರೆ ಆಕೆ ಪತಿಯನ್ನೇ ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ಆರೋಪಿ ಮತ್ತೆ ವಿಜಯವಾಡಕ್ಕೆ ಹಿಂತಿರುಗುವುದಾಗಿ ಹೆಂಡತಿ ಬಳಿ ಪ್ರಸ್ತಾಪಿಸಿದಾಗ ಆಕೆ ಕೂಡ ಒಪ್ಪಿಕೊಂಡಿದ್ದಳು. ಆದರೆ ಜೊತೆಯಲ್ಲಿ ಯಶವಂತ್‍ನನ್ನು ಸಹ ತಮ್ಮೊಂದಿಗೆ ಕರೆದುಕೊಂಡು ಹೋಗಬೇಕೆಂದು ಕೇಳಿಕೊಂಡಿದ್ದಳು. ಇದೇ ವೇಳೆ ಆರೋಪಿ ಕೊಲ್ಲಲು ಪ್ಲಾನ್ ಮಾಡಿದ್ದನು. ಇದನ್ನೂ ಓದಿ: 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    ನಂತರ ಮೂವರೂ ಎರಡು ವಾಹನಗಳಲ್ಲಿ ಕೊತಗುಡೆಂ ಪಟ್ಟಣವನ್ನು ತಲುಪಿದರು. ಬಳಿಕ ತನ್ನನ್ನು ಮತ್ತು ಯಶವಂತ್‍ನನ್ನು ಒಬ್ಬಂಟಿಯಾಗಿ ಬಿಡುವಂತೆ ಮಹಿಳೆ ತನ್ನ ಪತಿಯನ್ನು ಕೇಳಿದ್ದಾಳೆ. ಈ ವೇಳೆ ಆರೋಪಿ ಮದ್ಯ ಸೇವಿಸಲು ಪ್ರಾರಂಭಿಸಿದಾಗ, ಆತನ ಹೆಂಡತಿ ಮತ್ತು ಆಕೆಯ ಪ್ರಿಯಕರ ಆರೋಪಿ ಮುಂದೆಯೇ ಲೈಂಗಿಕ ಸಂಭೋಗವನ್ನು ಪ್ರಾರಂಭಿಸಿದ್ದಾರೆ. ಇದನ್ನು ಕಂಡು ಕೋಪಗೊಂಡ ಆರೋಪಿ ಬಂಡೆಕಲ್ಲುಗಳಿಂದ ಇಬ್ಬರಿಗೂ ಹೊಡೆದು ಸ್ಕ್ರೂಡ್ರೈವರ್‌ನಿಂದ ಇರಿದಿದ್ದಾನೆ. ಇದರಿಂದಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೃತದೇಹಗಳನ್ನು ಜನನಿಬಿಡ ಪ್ರದೇಶದಲ್ಲಿ ಬಿಟ್ಟು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು? 

  • ವಿಶಾಲ್‌, ನನ್ನ ಮದ್ವೆ ಫಿಕ್ಸ್ ಆಗಿದೆ ಓಡೋಗೋಣ ಬಾ- 10 ರೂ. ನೋಟಲ್ಲಿನ ಲವ್ವರ್ ಸಂದೇಶ ವೈರಲ್

    ವಿಶಾಲ್‌, ನನ್ನ ಮದ್ವೆ ಫಿಕ್ಸ್ ಆಗಿದೆ ಓಡೋಗೋಣ ಬಾ- 10 ರೂ. ನೋಟಲ್ಲಿನ ಲವ್ವರ್ ಸಂದೇಶ ವೈರಲ್

    ನವದೆಹಲಿ: ನೋಟುಗಳಲ್ಲಿ ಬರೆಯುವುದು ಕಾನೂನು ಬಾಹಿರವಾಗಿದೆ. ಆದರೂ ಇಲ್ಲೊಬ್ಬ ಪ್ರಿಯತಮೆ ತನ್ನ ಗೆಳೆಯನಿಗೆ 10 ರೂ. ನೋಟಲ್ಲಿ ಕಳುಹಿಸಿರುವ ಸಂದೇಶ ಇದೀಗ ಭಾರೀ ಸುದ್ದಿಯಾಗಿದೆ.

    ವಿಶಾಲ್, ಏಪ್ರಿಲ್ 26ರಂದು ನನ್ನ ಮದುವೆ ಫಿಕ್ಸ್ ಆಗಿದೆ. ಹೀಗಾಗಿ ಆದಷ್ಟು ಬೇಗ ಬಂದು ನನ್ನನ್ನು ಕರೆದುಕೊಂಡು ಹೋಗು. ಐ ಲವ್ ಯೂ. ಇಂತಿ ನಿನ್ನ ಪ್ರಿಯತಮೆ ಕುಸುಮ್ ಎಂದು 10 ರೂ. ನೋಟಿನಲ್ಲಿ ಬರೆಯಲಾಗಿದೆ. ಇದೀಗ ನೋಟಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಈ ರೀತಿ ಬರೆದಿರುವ ನೋಟಿನ ಫೋಟೋ ತೆಗೆದುಕೊಂಡು ಅದನ್ನು ಟ್ವಿಟ್ಟರ್ ಬಳಕೆದಾರ ವಿಪುಲ್ ಶೇರ್ ಮಾಡಿಕೊಂಡಿದ್ದಾರೆ. ಟ್ವಿಟ್ಟರ್, ನಿಮ್ಮ ಶಕ್ತಿಯನ್ನು ತೋರಿಸಿ. ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್‍ಗಳಿಗೆ ಟ್ಯಾಗ್ ಮಾಡಿ. ಅಲ್ಲದೆ ಏಪ್ರಿಲ್ 26 ರ ಮೊದಲು ಕುಸುಮ್ ಅವರ ಈ ಸಂದೇಶವನ್ನು ವಿಶಾಲ್‍ಗೆ ತಲುಪಿಸಬೇಕು. ಈ ಮೂಲಕ ಇವರಿಬ್ಬರು ಕೂಡ ಒಂದಾಗಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: 30 ಲಕ್ಷದ ಚಿನ್ನವನ್ನು ಗುದನಾಳ, ವಿಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಕಿಲಾಡಿ ಕಳ್ಳನ ಬಂಧನ

    ವಿಪುಲ್ ಈ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಹಲವಾರು ಪರ-ವಿರೋಧ ಕಾಮೆಂಟ್ ಗಳು ಬರಲು ಆರಂಭಿಸಿದವು. ಕೆಲವು ನೆಟ್ಟಿಗರು ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್ ಅನ್ನು ಟ್ಯಾಗ್ ಮಾಡಿ ಎಂದು ನೆಟ್ಟಿಗರು ಬರೆದುಕೊಂಡು ಈ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೇ ಈ ಫೋಟೋ ವಿಶಾಲ್‍ನ ಸರ್‍ನೇಮ್ ಅನ್ನು ಅಳಿಸಲಾಗಿದ್ದು, ಆ ಸರ್‌ ನೇಮ್ ಅನ್ನು ಬಹಿರಂಗಪಡಿಸುವಂತೆ ನೆಟ್ಟಿಗರು ವಿನಂತಿಸಿದ್ದಾರೆ. ಇದನ್ನೂ ಓದಿ: ಭಿನ್ನಾಭಿಪ್ರಾಯ ಹತ್ತಿಕ್ಕಿ ಸತ್ಯವನ್ನು ಬಂಧಿಸಲು ಸಾಧ್ಯವಿಲ್ಲ: ಮೋದಿಗೆ ರಾಹುಲ್‌ ತಿರುಗೇಟು