Tag: ಪ್ರಿಯಕರ

  • ಪತ್ನಿಯ ಪ್ರಿಯಕರನನ್ನು ಕೊಂದು ದೇಹದ ಭಾಗಗಳನ್ನು ಕಸದ ರಾಶಿಯಲ್ಲಿ ಎಸೆದ

    ಪತ್ನಿಯ ಪ್ರಿಯಕರನನ್ನು ಕೊಂದು ದೇಹದ ಭಾಗಗಳನ್ನು ಕಸದ ರಾಶಿಯಲ್ಲಿ ಎಸೆದ

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರನನ್ನು (Lover) ಕೊಂದು ಆತನ ದೇಹವನ್ನು 12ಕ್ಕಿಂತಲೂ ಹೆಚ್ಚು ಪೀಸ್‍ಗಳನ್ನಾಗಿ ಮಾಡಿದ ಘಟನೆ ಉತ್ತರ ಪ್ರದೇಶದ (Uttara Pradesh) ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಮೀಲಾಲ್ ಪ್ರಜಾಪತಿ ಬಂಧಿತ ಆರೋಪಿ. ಮೀಲಾಲ್ ಪ್ರಜಾಪತಿಯ ಪತ್ನಿಯು (Wife) ಗಾಜಿಯಾಬಾದ್ ನಿವಾಸಿ ಅಕ್ಷಯ್‍ನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಇದರಿಂದ ಕೋಪಗೊಂಡ ಮೀಲಾಲ್ ಪ್ರಜಾಪತಿಯು ಅಕ್ಷಯನನ್ನು ಹತ್ಯೆ ಮಾಡಿದ್ದಾನೆ.

    ಘಟನೆಯೇನು?: ಮೀಲಾಲ್ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಅಕ್ಷಯ ಆತನ ಮನೆಗೆ ಭೇಟಿ ನೀಡಿದ್ದ. ಅಷ್ಟೇ ಅಲ್ಲದೇ ಮೀಲಾಲ್ ಪತ್ನಿ ನೀಡಿದ್ದ ಚಹಾವನ್ನು ಕುಡಿಯುತ್ತಿರುವಾಗ, ಮಿಲಾಲ್‍ನ ಮಗಳ ಕಾಲಿಗೆ ಕುದಿಯುತ್ತಿರುವ ಚಹಾ ಬಿದ್ದಿದೆ. ಇದರಿಂದಾಗಿ ಆಕೆಗೆ ಸುಟ್ಟಗಾಯಗಳಾಗಿದ್ದವು.

    ಮಿಲಾಲ್ ಮನೆಗೆ ಹಿಂದಿರುಗಿದಾಗ ಮಗಳಿಗೆ ಸುಟ್ಟ ಗಾಯಗಳಾಗಿರುವುದನ್ನು ಗಮನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆತ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಸುಟ್ಟಗಾಯಗಳು ಗಂಭೀರವಾಗಿದ್ದರಿಂದ ಆಸ್ಪತ್ರೆಯಲ್ಲೇ ಇರಲು ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    crime

    ಪತ್ನಿಯ ಅಕ್ರಮ ಸಂಬಂಧ ಜೊತೆಗೆ ಮಗಳಿಗೆ ತೊಂದರೆ ಆಗಿರುವುದನ್ನು ಗಮನಿಸಿದ ಮಿಲಾಲ್ ಕೋಪಗೊಂಡು ಅಕ್ಷಯ್‍ನನ್ನು ಹತ್ಯೆ ಮಾಡಲು ಯೋಜಿಸಿದ್ದಾನೆ. ಅಷ್ಟೇ ಅಲ್ಲದೇ ತನ್ನ ಯೋಜನೆಯಂತೆ ತನ್ನ ಪತ್ನಿ ಬಳಿ ಅಕ್ಷಯನನ್ನು ಮನೆಗೆಲಸದಲ್ಲಿ ಸಹಾಯ ಮಾಡಲು ಕರೆ ಮಾಡುವಂತೆ ತಿಳಿಸಿದ್ದಾನೆ.

    ಅದಾದ ಬಳಿಕ ಅಕ್ಷಯ್ ಮನೆಗೆ ಬಂದಾಗ ಮೀಲಾಲ್ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ದೇಹವನ್ನು ಕತ್ತರಿಸಿ, ಆ ಭಾಗಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಗಾಜಿಯಾಬಾದ್‍ನ ಕಸದ ರಾಶಿಗೆ ಎಸೆದಿದ್ದಾನೆ. ಇದನ್ನೂ ಓದಿ: ಡ್ಯಾಂ ಆವರಣಕ್ಕೆ ತೆರಳಲು ಅವಕಾಶ ನೀಡಲಿಲ್ಲವೆಂದು ಸೆಕ್ಯೂರಿಟಿಗಾರ್ಡ್‌ಗೆ ಮನಬಂದಂತೆ ಥಳಿಸಿದ ಯುವಕರು

    ಕೆಲವರು ಕಸದ ರಾಶಿಯಲ್ಲಿ ದೇಹದ ಭಾಗಗಳನ್ನು ನೋಡಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಮೀಲಾಲ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ದ್ವೇಷಕ್ಕೆ 84 ತೆಂಗಿನ ಸಸಿಗಳ ಮಾರಣಹೋಮ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೂರು ವರ್ಷದ ಮಗಳನ್ನು ಕೊಂದು ಚಲಿಸುತ್ತಿರುವ ರೈಲಿನಿಂದ ಎಸೆದ ಕ್ರೂರಿ ತಾಯಿ!

    ಮೂರು ವರ್ಷದ ಮಗಳನ್ನು ಕೊಂದು ಚಲಿಸುತ್ತಿರುವ ರೈಲಿನಿಂದ ಎಸೆದ ಕ್ರೂರಿ ತಾಯಿ!

    ಜೈಪುರ: ಪಾಪಿ ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗಳನ್ನು ಕೊಂದು ಆಕೆಯ ಶವವನ್ನು ಚಲಿಸುತ್ತಿರುವ ರೈಲಿನಿಂದ ಎಸೆದ ಘಟನೆ ರಾಜಸ್ಥಾನ (Rajasthan) ದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ.

    ಕ್ರೂರಿ ತಾಯಿ ತನ್ನ ಪ್ರಿಯಕರನ ಜೊತೆ ಸೇರಿ ಈ ಕೃತ್ಯ ಎಸಗಿದ್ದಾಳೆ. ಪ್ರಕರಣ ಸಂಬಂಧ ಇದೀಗ ತಾಯಿ ಸುನಿತಾ ಹಾಗೂ ಸನ್ನಿ ಅಲಿಯಾಸ್ ಮಲ್ತಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಸೋಮವಾರ ಮತ್ತು ಮಂಗಳವಾರದ ನಡುವೆ ತಾಯಿ (Mother Killed Daughter) ತನ್ನ ಮಗಳು ಕಿರಣ್‍ಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ತನ್ನ ಪ್ರಿಯತಮನ ಸಹಾಯದಿಂದ ಆಕೆಯ ಶವವನ್ನು ಬೆಡ್‍ಶೀಟ್‍ನಿಂದ ಸುತ್ತಿ ಬಿಸಾಕಲೆಂದು ಶ್ರೀಗಂಗಾನಗರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಅಂತೆಯೇ ಬೆಳಗ್ಗೆ 6.10ಕ್ಕೆ ಹೊರಟ ರೈಲಿನಲ್ಲಿ ಇಬ್ಬರೂ ಶವ ಸಮೇತ ಪ್ರಯಾಣ ಬೆಳೆಸಿದ್ದಾರೆ. ರೈಲು (Train) ಬ್ರಿಡ್ಜ್ ಮೇಲೆ ತೆರಳುತ್ತಿದ್ದಂತೆಯೇ ಶವವನ್ನು ಕಾಲುವೆಗೆಂದು ಎಸೆದಿದ್ದಾರೆ. ಆದರೆ ಅದು ಕಾಲುವೆಗೆ ಬೀಳದೆ ರೈ;ವೆ ಹಳಿಯ ಮೇಲೆ ಬಿದ್ದಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಶ್ರೀಗಂಗಾನಗರ ಎಸ್‍ಪಿ ಆನಂದ್ ಶರ್ಮಾ ತಿಳಿಸಿದ್ದಾರೆ.

    ಐದು ಮಕ್ಕಳನ್ನು ಹೊಂದಿರುವ ಸುನೀತಾ, ಸನ್ನಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಶಾಸ್ತ್ರಿ ನಗರದಲ್ಲಿ ವಾಸಿಸುತ್ತಿದ್ದರೆ, ಮೂವರು ಮಕ್ಕಳು ಪತಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಳ ಮನೆಯಲ್ಲಿದ್ದ ವಿವಾಹಿತೆ, ಮೇಲಿನ ಮನೆಯಲ್ಲಿದ್ದ ವಿವಾಹಿತನ ಜೊತೆಗೆ ಎಸ್ಕೇಪ್!

    ಬಾಲಕಿಯ ಶವದ ಗುರುತು ಪತ್ತೆ ಮಾಡಿದ ಬಳಿಕ ಸುನಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಈ ವೇಳೆ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಬಳಿಕ ಇಬ್ಬರೂ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೀತಿಗೆ ಅಡ್ಡಿಪಡಿಸಿದ್ದಕ್ಕೆ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ 17ರ ಹುಡುಗಿ

    ಪ್ರೀತಿಗೆ ಅಡ್ಡಿಪಡಿಸಿದ್ದಕ್ಕೆ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ 17ರ ಹುಡುಗಿ

    ಭೋಪಾಲ್: ಪ್ರೀತಿಯನ್ನು ಅಡ್ಡಿಪಡಿಸಿದ್ದಕ್ಕೆ 17 ವರ್ಷದ ಹುಡುಗಿಯೊಬ್ಬಳು (Girl) ತನ್ನ ತಾಯಿಗೆ (Mother) ಚಾಕುವಿನಿಂದ ಇರಿದು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ ನಗರದಲ್ಲಿ ನಡೆದಿದೆ.

    ಭಿಂಡ್ ಜಿಲ್ಲೆಯವರಾದ 38 ವರ್ಷದ ಮಹಿಳೆಯು ಗಡಿಯಾಪುರದಲ್ಲಿ ತನ್ನ 17 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು. 17 ವರ್ಷದ ಹುಡುಗಿಯು 25 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಈ ಪ್ರೇಮ ಸಂಬಂಧಕ್ಕೆ ಆಕೆಯ ತಾಯಿಯು ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದಾಗಿ ಹುಡುಗಿಯು ತನ್ನ ಪ್ರಿಯಕರನೊಂದಿಗೆ 2 ತಿಂಗಳ ಹಿಂದೆ ಓಡಿಹೋಗಿದ್ದಳು.

    ಈ ಹಿನ್ನೆಲೆಯಲ್ಲಿ ಆಕೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹುಡುಗಿಯನ್ನು ವಶಕ್ಕೆ ಪಡೆದು, ಆಕೆಯ ಪ್ರಿಯಕರನ್ನು ಬಂಧಿಸಿದ್ದರು. ನಂತರ ಹುಡುಗಿಯನ್ನು ಆಕೆಯ ತಾಯಿಗೆ ಒಪ್ಪಿಸಿದ್ದರು.

    ಇತ್ತ ಆಕೆಯ ಪ್ರಿಯಕರ ಜಾಮೀನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಈ ವೇಳೆ ಹುಡುಗಿ ಹಾಗೂ ಆಕೆಯ ಪ್ರಿಯಕರ ಸೇರಿ ತಮ್ಮ ಪ್ರೀತಿಗೆ ಅಡ್ಡ ಬಂದಿರುವ ತಾಯಿಯನ್ನು ಕೊಲೆ ಮಾಡಬೇಕು ಎಂದು ಸಂಚು ಮಾಡಿದ್ದಾರೆ. ಅದರ ಪ್ರಕಾರವಾಗಿಯೇ ಹುಡುಗಿಯು ತನ್ನ ಪ್ರಿಯಕರನ ಸಹಾಯ ಪಡೆದು ತಾಯಿಯನ್ನು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಸುಮಲತಾ ಕೂಡ ಬಿಜೆಪಿ ಅಸೋಸಿಯೇಟ್‌ ಮೆಂಬರ್ – ಡಿಕೆಶಿ ವ್ಯಂಗ್ಯ 

    ಮರುದಿನ ನೆರೆಹೊರೆಯವರು ಮಹಿಳೆ ಬಾಗಿಲು ತೆರೆಯುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ವೇಳೆ ಮಹಿಳೆಯು ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಹುಡುಗಿಯನ್ನು ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಾರ್ಟಿ ಮಾಡಲು ಹೋದ ಮೂವರು ಯುವಕರು ತುಂಗಾಭದ್ರಾ ನದಿಯಲ್ಲಿ ಮುಳುಗಿ ಸಾವು

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನೊಂದಿಗೆ ಸರಸವಾಡಲು ಪತಿಯನ್ನೇ ಕೊಂದ್ಲು – 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಹೂತಿಟ್ಳು

    ಪ್ರಿಯಕರನೊಂದಿಗೆ ಸರಸವಾಡಲು ಪತಿಯನ್ನೇ ಕೊಂದ್ಲು – 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಹೂತಿಟ್ಳು

    ಚಂಡೀಗಢ: ಪ್ರಿಯಕರನ ಜೊತೆ ಸೇರಿ ಮಹಿಳೆಯೊಬ್ಬಳು ತನ್ನ ಪತಿಯ ಕತ್ತು ಹಿಸುಕಿ ಕೊಂದು 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಶವವನ್ನು ಹೂತು ಹಾಕಿರುವ ಘಟನೆ ಪಂಜಾಬ್‍ನ (Punjab) ಸಂಗ್ರೂರ್ (Sangrur) ಜಿಲ್ಲೆಯಲ್ಲಿ ನಡೆದಿದೆ.

    ಬಕ್ಷೀವಾಲಾ ನಿವಾಸಿ ಅಮ್ರಿಕ್ ಸಿಂಗ್ ಮೃತ ದುರ್ದೈವಿಯಾಗಿದ್ದು, ಸುಮಾರು ಒಂದು ತಿಂಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಶನಿವಾರ ಮೃತದೇಹವನ್ನು ಶೌಚಾಲಯದ ಗುಂಡಿಯಿಂದ ಹೊರ ತೆಗೆಯಲಾಗಿದೆ. ಇದನ್ನೂ ಓದಿ: ತುಂಗಾತೀರದಲ್ಲಿ ಮಾತ್ರವಲ್ಲ, ಚಾರ್ಮಾಡಿ ತಪ್ಪಲಿನಲ್ಲೂ ನಡೀತಾ ಟ್ರಯಲ್ ಬ್ಲಾಸ್ಟ್?

    ಆರೋಪಿಯನ್ನು 35 ವರ್ಷದ ರಜ್ಜಿ ಕೌರ್ ಅಲಿಯಾಸ್ ಜಸ್ವಿರ್ ಕೌರ್ ಎಂದು ಗುರುತಿಸಲಾಗಿದ್ದು, ತನ್ನ 13 ಮತ್ತು 11 ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ನವೆಂಬರ್ 20 ರಂದು ತನ್ನ ಪತಿ ನಾಪತ್ತೆಯಾಗಿರುವುದಾಗಿ ಪತಿಗೆ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ತನಿಖೆ ವೇಳೆ ಕೌರ್ ಅದೇ ಪ್ರದೇಶದ ನಿವಾಸಿ ಸುರ್ಜಿತ್ ಸಿಂಗ್ ಬಗ್ಗಾ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರ ಬಯಲಾಗಿದೆ. ಪ್ರಿಯಕರ ಸುರ್ಜಿತ್ ಜೊತೆ ಸೇರಿ ತನ್ನ ಪತಿಯನ್ನು ಅಕ್ಟೋಬರ್ 27ರಂದು ಕೊಂದಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಸಂಗ್ರೂರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಸುರೇಂದ್ರ ಲಂಬಾ ತಿಳಿಸಿದ್ದಾರೆ.

    ಅಕ್ಟೋಬರ್ 27ರ ಸಂಜೆ ತನ್ನ ಪತಿ ಅಮ್ರಿಕ್‍ಗೆ ಕೋಳಿ ಸಾಂಬಾರ್‍ನಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿ ಊಟ ಮಾಡಿಸಿದ್ದಾಳೆ. ನಂತರ ಅಮ್ರಿಕ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಬಳಿಕ ಪ್ರಿಯಕರನನ್ನು ಮನೆಗೆ ಕರೆಸಿ ಇಬ್ಬರು ಸೇರಿ ಆತನ ಕತ್ತು ಹಿಸುಕಿ ಕೊಂದಿದ್ದಾರೆ. ಬಳಿಕ 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಶವವನ್ನು ಹೂತು ಹಾಕಿದ್ದಾರೆ. ಕೊನೆಗೆ ಯಾವುದೇ ಅನುಮಾನ ಬರದಂತೆ 20 ದಿನಗಳ ನಂತರ ನಾಪತ್ತೆ ದೂರು ನೀಡಿದ್ದಾಳೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಶನಿವಾರ ಶವವನ್ನು ಹೊರತೆಗೆಯಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಬುಲೆಟ್ ಸವಾರಿ – ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ತಲೆಗೆ ಬಲವಾದ ಆಯುಧದಿಂದ ಹೊಡೆದು ಪ್ರೀತಿಸಿ ಮದುವೆಯಾಗಿದ್ದದವಳ ಕೊಲೆ!

    ತಲೆಗೆ ಬಲವಾದ ಆಯುಧದಿಂದ ಹೊಡೆದು ಪ್ರೀತಿಸಿ ಮದುವೆಯಾಗಿದ್ದದವಳ ಕೊಲೆ!

    ತುಮಕೂರು: ರಾತ್ರಿ ಮನೆಯಲ್ಲಿದ್ದ ಮಹಿಳೆ ಬೆಳಗ್ಗೆ ಪಕ್ಕದ ತೋಟದಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ಕೊಲೆಯಾದ ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದಿದ್ದಾನೆ. ಮಾತ್ರವಲ್ಲ ಕೊಲೆಗೆ ಕಾರಣವೇನು ಎಂಬುದು ಕೂಡ ಬಹಿರಂಗಗೊಂಡಿದೆ.

    ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಬಳಿಯ ಕುರುಬರಹಳ್ಳಿಯ ಆಶಾ (29) ಸಾವಿಗೀಡಾದಾಕೆ. ಈಕೆ ಕುರುಬರಹಳ್ಳಿ (Kurubarahalli) ಗ್ರಾಮದ ರವಿಕುಮಾರ್ ಎಂಬಾತನನ್ನು ಇತ್ತೀಚೆಗಷ್ಟೇ ಮದುವೆಯಾಗಿದ್ದಳು. ಆದರೆ ರಾತ್ರಿ ಮನೆಯಲ್ಲಿದ್ದ ಆಶಾ, ಬೆಳಗ್ಗೆ ಪಕ್ಕದ ತೋಟದ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಳು. ನಿನ್ನೆ ಬೆಳಗ್ಗೆ ಗ್ರಾಮಸ್ಥರು ಶವವನ್ನು ನೋಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಆಳಂದದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ- 70ರ ವೃದ್ಧೆ ಮೇಲೆ 28ರ ಯುವಕನ ಅಟ್ಟಹಾಸ

    ಆಶಾ ತಲೆಗೆ ಯಾವುದೋ ವಸ್ತುವಿಂದ ಬಲವಾಗಿ ಹೊಡೆದು ಕೊಲೆ ಮಾಡಿರುವುದು ಕಂಡುಬಂದಿತ್ತು. ಸ್ಥಳಕ್ಕೆ ತುರುವೇಕೆರೆ ತಾಲೂಕಿನ ದಂಡಿನಶಿವರ ಪೊಲೀಸರು (Dandinashivara Police) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಕೊಲೆಯಾದ ಕೆಲವೇ ಗಂಟೆಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ವೆಂಕಟೇಶ್ (32) ನನ್ನು ಬಂಧಿಸಿದ್ದಾರೆ.

    ಆಶಾ ಹಾಗೂ ವೆಂಕಟೇಶ್ ಮಧ್ಯೆ ಅನೈತಿಕ ಸಂಬಂಧ ಇರುವುದು ತಿಳಿದುಬಂದಿದೆ. ಅಲ್ಲದೆ ನಿನ್ನೆ ರಾತ್ರಿ ಹಣಕಾಸು ವಿಚಾರಕ್ಕೆ ವೆಂಕಟೇಶ್ ಹಾಗೂ ಆಶಾ ನಡುವೆ ಗಲಾಟೆ ನಡೆದಿದೆ. ಆಗ ಆಶಾಳ ತಲೆಗೆ ಬಲವಾಗಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿ, ಬಳಿಕ ಆಶಾ ಮನೆ ಪಕ್ಕದಲ್ಲೇ ಇರೋ ಹಳ್ಳದಲ್ಲಿ ಶವ ಎಸೆದು ವೆಂಕಟೇಶ್ ಪರಾರಿಯಾಗಿದ್ದ.

    Live Tv
    [brid partner=56869869 player=32851 video=960834 autoplay=true]

  • ಮೊದಲ ಗಂಡ ಸಾಯ್ತಾನೆ – ಜ್ಯೋತಿಷಿ ಮಾತು ನಂಬಿ ಪ್ರಿಯಕರನಿಗೆ ವಿಷ ಕೊಟ್ಟು ಸಾಯಿಸಿದ್ಲು

    ಮೊದಲ ಗಂಡ ಸಾಯ್ತಾನೆ – ಜ್ಯೋತಿಷಿ ಮಾತು ನಂಬಿ ಪ್ರಿಯಕರನಿಗೆ ವಿಷ ಕೊಟ್ಟು ಸಾಯಿಸಿದ್ಲು

    ತಿರುವನಂತಪುರಂ: ಮೊದಲನೇ ಗಂಡ ಸಾಯುತ್ತಾನೆ ಎಂಬ ಜ್ಯೋತಿಷಿ ಮಾತು ಕೇಳಿ ಪ್ರೇಯಸಿಯೇ ಪ್ರಿಯಕರನಿಗೆ ವಿಷಪ್ರಾಶನ ನೀಡಿ ಹತ್ಯೆಗೈದಿರುವ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿ (Thiruvananthapuram ) ನಡೆದಿದೆ.

    ಮೃತದುರ್ದೈವಿಯನ್ನು ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ (23) ಎಂದು ಗುರುತಿಸಲಾಗಿದ್ದು, ಅಕ್ಟೋಬರ್ 25ರಂದು ಈತ ಮೃತಪಟ್ಟಿದ್ದಾನೆ. ಅಕ್ಟೋಬರ್ 31ರಂದು ಎಂಟು ಗಂಟೆಗಳ ಕಾಲ ನಡೆದ ವಿಚಾರಣೆ ಬಳಿಕ ಪ್ರೇಯಸಿಯೇ ತನ್ನ ಪ್ರಿಯಕರನನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ- ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್!

    ಆರೋಪಿಯನ್ನು ಗ್ರೀಷ್ಮಾ ಎಂದು ಗುರುತಿಸಲಾಗಿದ್ದು, ಲವ್ ಬ್ರೇಕ್ ಅಪ್ ಮಾಡಿಕೊಳ್ಳುವುದಕ್ಕಾಗಿ ಶರೋನ್ ರಾಜ್ ಅನ್ನು ಕೊಂದಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ. ಕೊಲೆ ಮಾಡಲು ಮೊದಲೇ ಪ್ರೀ ಪ್ಲಾನ್ ಮಾಡಿದ್ದ ಗ್ರೀಷ್ಮಾ ಅಕ್ಟೋಬರ್ 14 ರಂದು ಶರೋನ್ ರಾಜ್ ಅನ್ನು ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಕಷಾಯದೊಂದಿಗೆ ಕೀಟನಾಶಕವನ್ನು ಬೆರೆಸಿ ಕುಡಿಸಿದ್ದಾಳೆ. ಇದಾದ ಬಳಿಕ ಪ್ರಿಯಕರ ವಾಂತಿ ಮಾಡಿಕೊಳ್ಳಲು ಆರಂಭಿಸಿ, ಬಳಿಕ ಸ್ನೇಹಿತನೊಂದಿಗೆ ತೆರಳಿದನು. ಇದನ್ನೂ ಓದಿ: ಸಿವಿಲ್ ಡಿಪ್ಲೊಮಾ ಎಂಜಿನಿಯರಿಂಗ್ ರಾಜ್ಯಕ್ಕೆ ಪ್ರಥಮ ಬಂದ 70ರ ವೃದ್ಧ

    ಗ್ರೀಷ್ಮಾ ಮತ್ತು ಶರೋನ್ ಒಂದು ವರ್ಷದಿಂದ ರಿಲೇಶನ್ ಶಿಪ್‍ನಲ್ಲಿದ್ದರು. ಅಲ್ಲದೇ ಮನೆಯವರು ಗ್ರೀಷ್ಮಾಗೆ ಬೇರೆಯವರೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಫೆಬ್ರವರಿಯಿಂದ ಗ್ರೀಷ್ಮಾ ಹಾಗೂ ಶರೋನ್ ನಡುವೆ ಕೆಲವು ಮನಸ್ತಾಪಗಳು ಪ್ರಾರಂಭವಾಯಿತು. ಹೀಗಿದ್ದರೂ ಇಬ್ಬರೂ ರಿಲೇಶನ್ ಶಿಪ್ ಮಂದುವರೆಸಿದರು. ಆದರೆ ಇತ್ತೀಚೆಗೆ ಇವರಿಬ್ಬರ ನಡುವೆ ಮನಸ್ತಾಪ ಹೆಚ್ಚಾಗಿದ್ದರಿಂದ ಶರೋನ್ ಅನ್ನು ಬಿಡುವ ಸಲುವಾಗಿ, ವಿಷ ನೀಡಿ ಕೊಲ್ಲಲು ನಿರ್ಧರಿಸಿದಳು. ಮೊದಲಿಗೆ ಸಮಾಧಾನದಿಂದ ಮೃದು ಸ್ವಭಾವದಿಂದ ಬ್ರೇಕ್ ಅಪ್ ಮಾಡಿಕೊಳ್ಳೋಣ ಎಂದು ತಿಳಿಸಿದಳು. ಆದರೆ ಇದಕ್ಕೆ ಶರೋನ್ ರಾಜ್ ನಿರಾಕರಿಸಿದ್ದಾನೆ. ಅಲ್ಲದೇ ಜ್ಯೋತಿಷಿ ಒಬ್ಬರು ಗ್ರೀಷ್ಮಾ ಜಾತಕದ ಪ್ರಕಾರ, ಆಕೆಯ ಮೊದಲ ಪತಿ ಸಾಯುತ್ತಾನೆ ಎಂದು ಹೇಳಿದ್ದರು. ಇದರಿಂದ ಭಯಗೊಂಡು ಆತನೊಂದಿಗೆ ಬ್ರೇಕ್ ಮಾಡಿಕೊಳ್ಳಲು ಪ್ರಯತ್ನಿಸಿದಳು.

    ಶರೋನ್‍ಗೆ ಏನು ನೀಡಿದ್ದಾಳೆ ಎಂದು ತಿಳಿದುಕೊಳ್ಳಲು ಆತನ ಸಹೋದರ ಗ್ರೀಷ್ಮಾಗೆ ನಿರಂತರ ಕರೆ ಮಾಡುತ್ತಿದ್ದನು. ಆದರೆ ಭಯದಿಂದ ಏನನ್ನೂ ಕೂಡ ಆಕೆ ಹೇಳಿಕೊಳ್ಳಲಿಲ್ಲ. ಒಂದು ವೇಳೆ ಸತ್ಯ ತಿಳಿಸಿದ್ದರೆ ಆತನನ್ನು ಉಳಿಸಬಹುದಾಗಿತ್ತು. ಅಕ್ಟೋಬರ್ 25 ರಂದು ಶರೋನ್ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು. ಆತನ ಸಾವಿಗೆ ಪ್ರೇಯಸಿಯೇ ಕಾರಣ ಎಂದು ಶರೋನ್ ಕುಟುಂಬಸ್ಥರು ಆರೋಪಿಸಿದ್ದಾರೆ.

    ಈ ಪ್ರಕರಣ ಸಂಬಂಧ ಅಕ್ಟೋಬರ್ 20 ರಂದು ಶರೋನ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ತಾನೂ ಯಾರ ಮೇಲೂ ಅನುಮಾನ ಹೊಂದಿಲ್ಲ ಎಂದು ತಿಳಿಸಿ ಕೊನೆಯುಸಿರೆಳೆದಿದ್ದಾನೆ. ಇದೀಗ 8 ಗಂಟೆಗಳ ವಿಚಾರಣೆಯ ಬಳಿಕ ತಪ್ಪೊಪ್ಪಿಕೊಂಡ ಗ್ರೀಷ್ಮಾಳನ್ನು ತಿರುವನಂತಪುರಂನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಸಿದವಳಿಂದ ಕಪಾಳಮೋಕ್ಷ – ಅವಮಾನ ಸಹಿಸಲಾರದೇ ಪ್ರಿಯಕರ ಆತ್ಮಹತ್ಯೆ

    ಪ್ರೀತಿಸಿದವಳಿಂದ ಕಪಾಳಮೋಕ್ಷ – ಅವಮಾನ ಸಹಿಸಲಾರದೇ ಪ್ರಿಯಕರ ಆತ್ಮಹತ್ಯೆ

    ಚಂಡೀಗಢ: ಪ್ರೀತಿಸಿದ ಯುವತಿ ಕಪಾಳಮೋಕ್ಷ ಮಾಡಿದ್ದರಿಂದ ಮನನೊಂದು ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಲೂಧಿಯಾನದಲ್ಲಿ (Ludhiana) ನಡೆದಿದೆ.

    ಗುರುದೀಪ್ ಸಿಂಗ್ (30) ಮೃತ ಪ್ರಿಯಕರನಾಗಿದ್ದು, ಆರೋಪಿಯನ್ನು ರಣವಾನ್ ಗ್ರಾಮದ ರಾಜ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ದುಬೈನಲ್ಲಿ (Dubbai) ಕೆಲಸಮಾಡುತ್ತಿದ್ದ ನನ್ನ ಮಗ ಸುಮಾರು ಎರಡೂವರೆ ವರ್ಷಗಳ ಹಿಂದೆ ಮನೆಗೆ ಮರಳಿದ್ದನು. ಗುರ್ದೀಪ್ ಸಿಂಗ್ ವಿದೇಶದಲ್ಲಿದ್ದಾಗ ಗ್ರಾಮದಲ್ಲಿ ವಾಸಿಸುತ್ತಿದ್ದ ರಾಜ್ವಿಂದರ್ ಕೌರ್ ಜೊತೆ ರಿಲೇಷನ್‍ಶಿಪ್‍ನಲ್ಲಿದ್ದನು (Relationship). ಅಲ್ಲದೇ ಆಕೆಗೆ ಹಣವನ್ನು ಕಳುಹಿಸುತ್ತಿದ್ದನು.  ಇದನ್ನೂ ಓದಿ: 68ನೇ ಸಾಲಿನ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ ಸ್ಟಾರ್‌ಗಳು ಇವರೇ

    ಯುವತಿ ತನ್ನ ಮಗನ ಕತ್ತು ಹಿಡಿದು ಮುಖಕ್ಕೆ ಕಪಾಳಮೋಕ್ಷ ಮಾಡುತ್ತಾ, ನನಗೆ ಯಾವುದೇ ಸಾಲವನ್ನು ನೀಡಿಲ್ಲ ಎಂದು ನಿಂದಿಸಿದ್ದಾಳೆ. ಘಟನೆ ಬಳಿಕ ನನ್ನ ಮಗ ಅಳುತ್ತಿದ್ದನು ಮತ್ತು ನನಗೆ ತುಂಬಾ ಅವಮಾನವಾಗಿದೆ, ನಾನು ಸಾಯುತ್ತೇನೆ ಎಂದು ಹೇಳಿದ್ದನು. ಅದೇ ರೀತಿ ಸಂಜೆ ವೇಳೆಗೆ ನನ್ನ ಮಗ ವಿಷ ಸೇವಿಸಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದರಿಂದ ಕೂಡಲೇ ಲುಧಿಯಾನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಗುರುದೀಪ್ ಸಿಂಗ್ ಅವರ ತಂದೆ ನಛತಾರ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.

    ಇದೀಗ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಈ ಸಂಬಂಧ ತನಿಖೆ ನಡೆಸಲು ಆರಂಭಿಸಿದ್ದಾರೆ. ಇದನ್ನೂ ಓದಿ: ಹಿಂದೂ ಕುಟುಂಬಕ್ಕೋಸ್ಕರ ಏರಿಯಾದಲ್ಲಿ ಮುಸ್ಲಿಮರಿಂದ ದುರ್ಗಾ ಪೂಜೆ ಆಯೋಜನೆ

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

    ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

    ಬೆಳಗಾವಿ: ಪ್ರಿಯಕರನ ಜೊತೆ ಸೇರಿಕೊಂಡ ತನ್ನ ಗಂಡನನ್ನು (Husband) ಪತ್ನಿಯೇ(Wife) ಕೊಲೆ ಮಾಡಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಪಾಂಡಪ್ಪ ಜಟಕನ್ನವರ(35) ಮೃತ ವ್ಯಕ್ತಿ. ಈತನ ಪತ್ನಿ ಲಕ್ಷ್ಮಿ ಜಟಕನ್ನವರ ಹೊಸೂರ ಗ್ರಾಮದ ರಮೇಶ್ ಬಡಿಗೇರ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದೇ ಕಾರಣಕ್ಕೆ ಆಗಾಗ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ ರಾತ್ರಿ ಪಾಂಡಪ್ಪ ಹಾಗೂ ಲಕ್ಷ್ಮೀ ನಡುವೆ ಇದೇ ವಿಷಯಕ್ಕೆ ಜಗಳವಾಡಿದ್ದು, ಈ ವಿಷಯ ರಮೇಶ್(36)ಗೆ ಲಕ್ಷ್ಮಿ ತಿಳಿಸಿ, ಬಳಿಕ ಗಂಡನನ್ನು ಕೊಲೆ ಮಾಡಲು ತಂತ್ರ ರೂಪಿಸಿದ್ದಾಳೆ.

    ಈ ಪ್ರಕಾರವಾಗಿಯೇ ರಮೇಶ್ ಬಡಿಗೇರ ಲಕ್ಷ್ಮಿ ಮನೆಗೆ ಬಂದಿದ್ದ. ಈ ವೇಳೆ ರಮೇಶ್ ಹಾಗೂ ಪಾಂಡಪ್ಪ ಮಧ್ಯೆ ನಡೆದಿದ್ದ ಜಗಳ ವಿಕೋಪಕ್ಕೆ ತಿರುಗಿತ್ತು. ಆಗ ಪಾಂಡಪ್ಪನ ತಲೆಗೆ ಲಕ್ಷ್ಮಿ ಕೃಷಿ ಉಪಕರಣದಿಂದ ಹೊಡೆದಿದ್ದಾಳೆ. ಇದರಿಂದಾಗಿ ಪಾಂಡಪ್ಪನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಾದ ಬಳಿಕ ಲಕ್ಷ್ಮಿ ತನ್ನ ಪ್ರಿಯಕರನ ಜೊತೆ ಸೇರಿ ಪಾಂಡಪ್ಪ ಜಕ್ಕನವರ ಶವವನ್ನು ಬೈಕ್ ಮೇಲೆ ಹೊತ್ತೊಯ್ದು, ರಾಮದುರ್ಗ ತಾಲೂಕಿನ ಹೊಸೂರು ಹೊರವಲಯದ ಕಿರುಸೇತುವೆ ಬಳಿ ಎಸೆಯಲಾಗಿತ್ತು. ಇದನ್ನೂ ಓದಿ: ಹನೂರಿನಲ್ಲಿ 20 ಅಡಿ ಆಳದ ಹಳ್ಳಕ್ಕೆ ಬಿದ್ದ ಬೆಂಗಳೂರಿನ ಕಾರು

    POLICE JEEP

    ಈ ಹಿನ್ನೆಲೆಯಲ್ಲಿ ಪಾಂಡಪ್ಪ ಅಪಘಾತದಿಂದ ಮೃತ ಪಟ್ಟಿದ್ದಾನೆ ಎಂದು ಬಿಂಬಿಸಬೇಕು ಎಂಬ ಕಾರಣಕ್ಕೆ ಲಕ್ಷ್ಮಿ ತನಗೆ ಏನೂ ಗೊತ್ತೆ ಇಲ್ಲದ ರೀತಿಯಲ್ಲಿ ಮನೆಗೆ ಹೋಗಿ ಮರುದಿನ ತನ್ನ ಗಂಡ ಮನೆಗೆ ಮರಳಿ ಬಂದಿಲ್ಲ ಎಂದು ನಾಟಕವಾಡಿದ್ದಾಳೆ. ಇದನ್ನೂ ಓದಿ: ಪಟಾಕಿ ಬ್ಲಾಸ್ಟ್‌ ನೆಪದಲ್ಲಿ ಸ್ಫೋಟಕ ಸ್ಫೋಟ – ಇದು ಶಿವಮೊಗ್ಗ ಶಂಕಿತ ಉಗ್ರನ ಟ್ರಯಲ್‌ ಬ್ಲ್ಯಾಸ್ಟ್‌ ಕಥೆ

    ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಕಟಕೋಳ ಪೊಲೀಸರು 24 ಗಂಟೆಯೊಳಗಾಗಿಯೇ ಪ್ರಕರಣವನ್ನು ಭೇದಿಸಿದ್ದಾರೆ. ಲಕ್ಷ್ಮಿ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಘಟನೆ ಕುರಿತು ಲಕ್ಷ್ಮಿ ಹಾಗೂ ಆಕೆಯ ಪ್ರಿಯಕರ ರಮೇಶ್ ಬಡಿಗೇರನನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಗಳ ಪ್ರಿಯಕರನ ಮುಖಕ್ಕೆ ಮೆಣಸಿನ ಪುಡಿ ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಮಹಿಳೆ

    ಮಗಳ ಪ್ರಿಯಕರನ ಮುಖಕ್ಕೆ ಮೆಣಸಿನ ಪುಡಿ ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಮಹಿಳೆ

    ಮುಂಬೈ: ಮಗಳನ್ನು(Daughter) ಪ್ರೀತಿಸುತ್ತಿದ್ದ ಪ್ರಿಯಕರನ (Lover) ಮುಖಕ್ಕೆ ಮೆಣಸಿನ ಪುಡಿ (Chilli Powder) ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಆರೋಪದಡಿ ಮಹಿಳೆ ಮತ್ತು ಆಕೆಯ ಪುತ್ರನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

    ಸೆಪ್ಟೆಂಬರ್ 13 ರಂದು ಚಿಂಚ್‍ವಾಡ್ ಪ್ರದೇಶದ ಪಾಶ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ವಿಶಾಲ್ ಕಸ್ಬೆ(Vishal Kasbe) ಎಂದು ಗುರುತಿಸಲಾಗಿದ್ದು, ಕಳೆದ ಆರು ವರ್ಷಗಳಿಂದ ಯುವಕ ಹಾಗೂ ಮಹಿಳೆಯ ಪುತ್ರಿ ಪರಸ್ಪರ ಪ್ರೀತಿಸುತ್ತಿದ್ದರು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಯುವತಿಯನ್ನು ಭೇಟಿಯಾಗಲು ಯುವಕ ಬಂದಿದ್ದನು. ಆದರೆ ಆತ ತನ್ನ ಗೆಳತಿಯನ್ನು (Girlfriend) ಭೇಟಿಯಾಗುವ ಮುನ್ನವೇ ಆಕೆಯ ತಾಯಿ ಮತ್ತು ಇಬ್ಬರು ಅಪ್ರಾಪ್ತ ಸಹೋದರರು ಮನೆಯಿಂದ ಹೊರಬಂದು ಯುವಕನನ್ನು ವಿಚಾರಿಸಲು ಆರಂಭಿಸಿದ್ದಾರೆ. ಈ ವೇಳೆ ಮಾತು ಜಗಳಕ್ಕೆ ತಿರುಗಿದೆ.

    ನಂತರ ಯುವಕನ ಮುಖಕ್ಕೆ ಮಹಿಳೆ ಮೆಣಸಿನ ಪುಡಿ ಎರಚಿದ್ದಾಳೆ. ಇದರಿಂದ ಅಸಹಾಯಕನಾದ ಯುವಕನಿಗೆ ಮಹಿಳೆಯ ಪುತ್ರರು ರಾಡ್‍ನಿಂದ(Rod) ಹಲ್ಲೆ ನಡೆಸಿ ಅಮಾನುಷವಾಗಿ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರು(Residents) ಯುವಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದೀಗ ಪ್ರಿಯಕರ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ(Treatment) ಪಡೆಯುತ್ತಿದ್ದಾನೆ ಮತ್ತು ಆತನ ತಲೆಗೆ ಹಲವಾರು ಗಾಯಗಳಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ – ಡಿಕ್ಕಿ ಹೊಡೆದು, ಬೈಕ್ ಸವಾರನ ಎಳೆದೊಯ್ದ ಲಾರಿ

    ಸದ್ಯ ಗೆಳತಿಯ ತಾಯಿ ಹಾಗೂ ಆಕೆಯ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಬೆದರಿಕೆ ಪ್ರಕರಣ – ಮೂವರು ಕಾಂಗ್ರೆಸ್ ಕಾರ್ಯಕರ್ತರು ಅಮಾನತು

    Live Tv
    [brid partner=56869869 player=32851 video=960834 autoplay=true]

  • ಬೇರೊಬ್ಬನ ಜೊತೆ ಸಂಗ – ಪ್ರಿಯಕರನಿಂದ ಮಹಿಳೆ ಹತ್ಯೆ

    ಬೇರೊಬ್ಬನ ಜೊತೆ ಸಂಗ – ಪ್ರಿಯಕರನಿಂದ ಮಹಿಳೆ ಹತ್ಯೆ

    ಮಡಿಕೇರಿ: ಪತಿಯಿಂದ(Husband) ದೂರವಾಗಿ ಮತ್ತೊಬ್ಬನ ಜೊತೆ ಗೌಪ್ಯ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯೊಬ್ಬಳು ಬೇರೊಬ್ಬನ ಸಂಗ ಬೆಳೆಸಿದ್ದಕ್ಕೆ ಪ್ರಿಯಕರಿನಿಂದ(Lover) ಕೊಲೆಯಾದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಕೊಡಗು(Kodagu) ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರದ ಝಾಹಿರಾ ಮೃತ ಮಹಿಳೆ. ಝಾಹಿರಾ ಗಂಡನಿಂದ ದೂರಾಗಿ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಳು. ಇದರ ಜೊತೆಗೆ ಝಾಹಿರಾ ಹಲವು ವರ್ಷಗಳಿಂದ ಪೂವಯ್ಯನ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಳು. ಆಗಾಗ ಪೂವಯ್ಯ ಈಕೆಯ ಮನೆಗೆ ಬಂದು ಹೋಗುತ್ತಿದ್ದ. ಈ ಬಗ್ಗೆ ಊರವರೆಲ್ಲರೂ ಮಾತನಾಡಿಕೊಳ್ಳುತ್ತಿದ್ದರು.

    ಪೂವಯ್ಯನಿಗೆ ಹೆಂಡತಿ, ಮಕ್ಕಳು ಇದ್ದರೂ, ಝಾಹಿರಾಳ ಜೊತೆ ಅಕ್ರಮ ಸಂಬಂಧ ಇಟ್ಕೊಂಡಿದ್ದ. ಆದರೆ ಇದರ ನಡುವೆ ಝಾಹಿರಾ ಮತ್ತೊಬ್ಬ ಗೆಳೆಯನನ್ನು ಬಯಸಿದ್ದಳು. ಈ ಬಗ್ಗೆ ತಿಳಿದ ಪೂವಯ್ಯ ಇಂದು ಝಾಹಿರಾ ಮನೆಗೆ ಬಂದು ಆಕೆಯ ಜೊತೆ ಕ್ಯಾತೆ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಝಾಹಿರಾಳಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ತನ್ನ ಹೆಂಡತಿಗೆ ಕರೆ ಮಾಡಿ ಬೇಗ ಮನೆಗೆ ಬಾ, ನಾನು ಕೊಲೆ ಮಾಡಿದ್ದೇನೆ. ಇನ್ನೇನು ಜೈಲಿಗೆ(Jail) ಹೋಗುತ್ತೇನೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ವಿರೋಧದ ಮಧ್ಯೆ ಮತಾಂತರ ನಿಷೇಧ ಮಸೂದೆ ಅಂಗೀಕಾರ

    ಇದೀಗ ತಂದೆಯಿಂದ ದೂರಾಗಿದ್ದ ಮಕ್ಕಳು ತಾಯಿ ಝಾಹಿರಾಳ ನಡೆ ಹಾಗೂ ತಾಯಿಯ ಗೆಳೆಯ ಪೂವಯ್ಯನ ಕೃತ್ಯದಿಂದ ಇದೀಗ ಅನಾಥವಾಗಿವೆ. ಅತ್ತ ಹೆಂಡತಿ ಇದ್ದರೂ ಪರಸ್ತ್ರೀ ಆಸೆಗೆ ಬಿದ್ದ ಪೂವಯ್ಯ ಮಾಡಿದ ತಪ್ಪಿನಿಂದ ಆತನ ಹೆಂಡತಿ ಮಕ್ಕಳು ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ. ಘಟನೆಗೆ ಸಂಬಂಧಿಸಿ ಮಾದವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೂವಯ್ಯನನ್ನು ಪೊಲೀಸರು ಬಂಧಿಸಿದ್ದಾರೆ.(Arrest) ಇದನ್ನೂ ಓದಿ: ಭಾರತವನ್ನು ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ರೂಪಿಸಿ – ಗೆಹ್ಲೋಟ್

    Live Tv
    [brid partner=56869869 player=32851 video=960834 autoplay=true]