Tag: ಪ್ರಿಯಕರ

  • ತನ್ನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿಗೆ ಅರೆಸ್ಟ್ ಭಾಗ್ಯ ಕರುಣಿಸಿದ ಪತಿ!

    ತನ್ನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿಗೆ ಅರೆಸ್ಟ್ ಭಾಗ್ಯ ಕರುಣಿಸಿದ ಪತಿ!

    ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರ ಈಗ ಪೊಲೀಸರ ಅತಿಥಿಯಾಗಿದ್ದಾರೆ.

    ಪತ್ನಿ ಶೈಲಜಾ ಹಾಗೂ ಪ್ರಿಯಕರ ಆನಂದ್ ಬಂಧಿತ ಆರೋಪಿಗಳು. ಪತಿ ಪ್ರಸನ್ನ ಕುಮಾರ್ ಅವರ ದೂರಿನ ಹಿನ್ನೆಲೆಯಲ್ಲಿ ಜ್ಞಾನಭಾರತಿ ಪೊಲೀಸರು ಈಗ ಇಬ್ಬರನ್ನೂ ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಶೈಲಜಾ ಪ್ರಸನ್ನಕುಮಾರ್ ಎಂಬುವರನ್ನು ಮದುವೆಯಾಗಿದ್ದರೂ ಕಳೆದ 5 ವರ್ಷಗಳಿಂದ ಆನಂದ್ ಎಂಬಾತನ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದಳು. ಈ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಪತಿ ಪ್ರಸನ್ನ ಕುಮಾರ್ ಪ್ರಶ್ನೆ ಮಾಡಿದ್ದರು.

    ಪತಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದು ತಿಳಿದ ಶೈಲಜಾ, ಪ್ರಸನ್ನ ಕುಮಾರ್ ಮುಗಿಸಲು ಪ್ರಿಯಕರನ ಜೊತೆ ಸೇರಿ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಕೊಲ್ಲುವ ಸಂಚು ರೂಪಿಸಿದ್ದಳು. ಆದರೆ ಅವರ ಪ್ಲಾನ್ ಯಶಸ್ವಿ ಆಗದ ಕಾರಣ ಬೇರೆ ರೀತಿಯಲ್ಲಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದಳು.

    ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡುವ ಸಂಚು ಪತ್ನಿಯ ಫೋನ್ ನಲ್ಲಿ ರೆಕಾರ್ಡ್ ಆಗಿತ್ತು. ಈ ಆಡಿಯೋವನ್ನು ಪತ್ನಿಗೆ ತಿಳಿಯದಂತೆ ಪತಿ ಪಡೆದುಕೊಂಡು ಪೋಲಿಸರಿಗೆ ದೂರು ನೀಡಿದ್ದಾರೆ. ಜ್ಞಾನಭಾರತಿಯ ಪೊಲೀಸರು ಪತಿ ನೀಡಿದ ಮೊಬೈಲ್ ಆಡಿಯೋ ರೆಕಾರ್ಡ್ ಆಧಾರದ ಮೇಲೆ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

  • ಆತ್ಮಹತ್ಯೆ ಮಾಡ್ಕೊಂಡ ಪ್ರಿಯತಮೆಯ ಶವವನ್ನು ಬೆನ್ನಿಗೆ ಕಟ್ಕೊಂಡು ಠಾಣೆಗೆ ತಂದ ಪ್ರಿಯಕರ!

    ಆತ್ಮಹತ್ಯೆ ಮಾಡ್ಕೊಂಡ ಪ್ರಿಯತಮೆಯ ಶವವನ್ನು ಬೆನ್ನಿಗೆ ಕಟ್ಕೊಂಡು ಠಾಣೆಗೆ ತಂದ ಪ್ರಿಯಕರ!

    ಬಳ್ಳಾರಿ: ತನ್ನ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮೆಯ ಶವವನ್ನು ಪ್ರಿಯಕರ ಬೆನ್ನಿಗೆ ಕಟ್ಟಿಕೊಂಡು ಬೈಕ್ ನಲ್ಲಿ ಠಾಣೆಗೆ ತಂದ ಹೃದಯವಿದ್ರಾವಕ ಘಟನೆಯೊಂದು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

    ಸಿರುಗುಪ್ಪ ತಾಲೂಕಿನ ಸಿರಿಗೆರೆಯ ಹುಚ್ಚೇಶ್ವರ ನಗರದ ಹನುಮಂತಮ್ಮ(19) ಹಾಗೂ ಹಣ್ಣಿನ ವ್ಯಾಪಾರಿ ದಾವಲ್ ಸಾಬ್ ಕಳೆದ ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ದಾವಲ್ ಸಾಬ್ ಪೋಷಕರು ಇದನ್ನು ಒಪ್ಪದೆ ಮಗನ ಮನವೊಲಿಸಿ ಬೇರೆ ಹುಡುಗಿಯನ್ನು ನೋಡಿ ವಿವಾಹ ಮಾಡಲು ಮುಂದಾಗಿದ್ದರು.

    ಅಂತೆಯೇ ದಾವಲ್ ಸಾಬ್ ಗೆ ಬೇರೆ ಕಡೆ ವಧು ಸಹ ನಿಶ್ಚಯವಾಗಿತ್ತು. ದಾವಲ್ ಸಾಬ್ ಮದುವೆಯ ಬಗ್ಗೆ ಮಾತುಕತೆ ನಡೆಯುವ ವಿಚಾರ ತಿಳಿದ ಪ್ರಿಯತಮೆ ಹನುಮಂತಮ್ಮ ಭಾನುವಾರ ದಾವಲ್ ಸಾಬ್ ಜೊತೆ ಮಾತನಾಡುವ ವೇಳೆ ಆತನ ಕಣ್ಣೆದುರೇ ನೇಣಿಗೆ ಶರಣಾಗಿದ್ದಾಳೆ.

    ದಾವಲ್ ಸಾಬ್ ತನ್ನ ಪ್ರೇಯಸಿಯನ್ನು ಸಮಾಧಾನಪಡಿಸುವ ವೇಳೆಯಲ್ಲೇ ಘಟನೆ ನಡೆದೇ ಹೋಯಿತು. ಇದರಿಂದ ಆತಂಕಗೊಂಡ ದಾವಲ್ ಸಾಬ್ ಆತ್ಮಹತ್ಯೆ ಮಾಡಿಕೊಂಡ ಹನುಮಂತಮ್ಮಳ ಶವವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಬೈಕ್ ನಲ್ಲಿ ನೇರವಾಗಿ ಠಾಣೆಗೆ ಬಂದು ಶರಣಾಗಿದ್ದಾನೆ.

    ಸದ್ಯ ಪೊಲೀಸರು ದಾವಲ್ ಸಾಬ್ ನನ್ನು ವಶಕ್ಕೆ ಪಡೆದಿದ್ದು, ಹನುಮಂತಮ್ಮಳ ಸಾವಿಗೆ ಈತನೇ ಕಾರಣವೆಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಸಂಬಂಧ ಸಿರಗುಪ್ಪ ತಾಲೂಕಿನ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೆಕ್ಸ್, ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆಯ ಬಂಧನ

    ಸೆಕ್ಸ್, ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆಯ ಬಂಧನ

    ನವದೆಹಲಿ: ಮದುವೆಯಾಗಲು ನಿರಾಕರಿಸಿದ್ದಕ್ಕೆ ತನ್ನ ಪ್ರಿಯಕರನ ಮರ್ಮಾಂಗವನ್ನು ಕತ್ತರಿಸಿದ 23 ವರ್ಷದ ಮಹಿಳೆಯನ್ನು ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ.

    ದೆಹಲಿಯ ಮಂಗೋಲ್ಪುರಿಯ ಮಹಿಳೆಯ ಮನೆಯಲ್ಲಿ 35 ವರ್ಷದ ಬೀದಿ ವ್ಯಾಪಾರಿ ರವಿ ಮೇಲೆ ಬುಧವಾರದಂದು ದಾಳಿ ನಡೆದಿದೆ. ಮಹಿಳೆಯ ಸಂಬಂಧಿಯೊಬ್ಬರು ರವಿಯನ್ನ ಅಲ್ಲಿಗೆ ಕರೆಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ರವಿ ತನ್ನ 4 ವರ್ಷದ ಪ್ರೇಯಸಿಯ ಮನೆಗೆ ಹೋದ ನಂತರ ಮದುವೆಯ ಬಗ್ಗೆ ಪ್ರಸ್ತಾಪವಾಗಿದೆ. ಆದ್ರೆ ಮದುವೆಗೆ ತನ್ನ ಮನೆಯವರ ವಿರೋಧವಿದೆ ಎಂದು ರವಿ ಮದುವೆಯಾಗಲು ನಿರಾಕರಿಸಿದ್ದಾರೆ. ನಂತರ ಮಹಿಳೆಯು ರವಿಯನ್ನು ಬಲವಂತವಾಗಿ ಬಾತ್‍ರೂಮಿಗೆ ಕರೆದೊಯ್ದು, ಆತನ ಬಟ್ಟೆ ಕಳಚಿ ಆಕೆಯೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯ ಮಾಡಿದಳು ಎಂದು ರವಿ ಪೊಲೀಸರಿಗೆ ಹೇಳಿದ್ದಾರೆ.

    ತಾನು ಹೇಳಿದಂತೆ ಮಾಡದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಹಿಳೆ ಬೆದರಿಕೆ ಹಾಕಿದ್ದು, ರವಿ ಇದಕ್ಕೆ ನಿರಾಕರಿಸಿದಾಗ ಚಾಕುವಿನಿಂದ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಈ ಘಟನೆ ನಡೆದಾಗ ಮಹಿಳೆಯ ಸಹೋದರ ಹಾಗೂ ಅತ್ತಿಗೆ ಮನೆಯಲ್ಲೇ ಇದ್ದರು. ಆಕೆ ನನ್ನ ಮೇಲೆ ದಾಳಿ ಮಾಡಿದಾಗ ಅವರು ತಡೆಯಲು ಮುಂದಾಗಲಿಲ್ಲ ಎಂದು ರವಿ ಹೇಳಿದ್ದಾರೆ.

    ದಾಳಿಯ ಬಳಿಕ ರವಿ ಕಿರುಚುತ್ತಾ ಮನೆಯಿಂದ ಹೊರಗೆ ಓಡಿಬಂದಿದ್ದು, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿ, ರವಿಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ರವಿಯನ್ನು ಜೈಪುರ ಗೋಲ್ಡನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೃತ್ಯವೆಸಗಿದ ನಂತರ ಮಹಿಳೆ ಹಾಗೂ ಆಕೆಯ ಮನೆಯವರು ಪರಾರಿಯಾಗಿದ್ದರು. ಭಾನುವಾರದಂದು ಸಹೋದರ ಹಾಗೂ ಅತ್ತಿಗೆಯನ್ನು ಪತ್ತೆಹಚ್ಚಿದ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದು, ನಂತರ ಮಹಿಳೆಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

  • ಗರ್ಭಿಣಿಯನ್ನಾಗಿಸಿ, ಮದುವೆ ಬೇಡ ಎಂದ ಪ್ರಿಯಕರ – ಪ್ರಿಯತಮೆ ಆತ್ಮಹತ್ಯೆ

    ಗರ್ಭಿಣಿಯನ್ನಾಗಿಸಿ, ಮದುವೆ ಬೇಡ ಎಂದ ಪ್ರಿಯಕರ – ಪ್ರಿಯತಮೆ ಆತ್ಮಹತ್ಯೆ

    ಕೊಪ್ಪಳ: ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಭಾವತಿ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ.

    ಪ್ರಭಾವತಿಗೆ ಅದೇ ಗ್ರಾಮದ ರವಿಕುಮಾರ ಅನ್ನೋ ಯುವಕ ನಂಬಿಸಿ ಮೋಸ ಮಾಡಿದ್ದಾನೆ. ಪ್ರಭಾವತಿ ಹಾಗೂ ರವಿಕುಮಾರ ಇಬ್ಬರು ಮರ್ಲಾನಹಳ್ಳಿ ಗ್ರಾಮದವರಾಗಿದ್ದು, ಇಬ್ಬರು ಪರಸ್ಪರ ಕಳೆದ ಮೂರು ವರ್ಷದಿಂದಲೂ ಪ್ರೀತಿ ಮಾಡುತ್ತಿದ್ರು. ಅಲ್ಲದೇ ಪ್ರಭಾವತಿ ಗರ್ಭವತಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಪ್ರಭಾವತಿ ಮದುವೆ ಮಾಡಿಕೋ ಅಂತ ಪ್ರೀಯಕರನನ್ನ ಕೇಳಿದ್ದಾಳೆ. ಆದ್ರೆ ಇದಕ್ಕೆ ಪ್ರಿಯಕರ ರವಿಕುಮಾರ ನಿರಾಕರಿಸಿದ್ದಾನೆ. ಇದರಿಂದ ಮನನೊಂದ ಪ್ರಭಾವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರೈಲಿಗೆ ತಲೆ ಕೊಟ್ಟು ಪಿಹೆಚ್‍ಡಿ ವಿದ್ಯಾರ್ಥಿನಿ ಆತ್ಮಹತ್ಯೆ

    ರೈಲಿಗೆ ತಲೆ ಕೊಟ್ಟು ಪಿಹೆಚ್‍ಡಿ ವಿದ್ಯಾರ್ಥಿನಿ ಆತ್ಮಹತ್ಯೆ

    ಕಲಬುರಗಿ: ಪಿಹೆಚ್‍ಡಿ ವಿದ್ಯಾರ್ಥಿನಿಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ.

    31 ವರ್ಷದ ಶ್ರೀದೇವಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೇ ಹಳಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೃತ ಶ್ರೀದೇವಿ ಗುಲ್ಬರ್ಗಾ ವಿವಿ ಅರ್ಥಶಾಸ್ತ್ರ ವಿಭಾಗದ ಪಿಹೆಚ್‍ಡಿ ವಿದ್ಯಾರ್ಥಿನಿಯಾಗಿದ್ದರು. ಈಕೆ ಸಾಯುವ ಮುನ್ನ ಮನೆಯಲ್ಲಿ ಡೆತ್‍ನೋಟ್ ಬರೆದಿಟ್ಟು ಕಾಣೆಯಾಗಿದ್ದು, ಇದೀಗ ಶವವಾಗಿ ಪತ್ತೆಯಾಗಿದ್ದಾರೆ.

    ಆತ್ಮಹತ್ಯೆಗೆ ಕಾರಣವೇನು?: ತಿಪ್ಪಣ್ಣ ಎಂಬ ವ್ಯಕ್ತಿ ತನಗೆ 5 ವರ್ಷಗಳಿಂದ ಪರಿಚಯವಿದ್ದು, ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ. ತುಂಬಾ ತೊಂದರೆ ಕೊಡುತ್ತಿದ್ದಾನೆ. ನನ್ನ ಗೈಡ್ ಕೂಡ ದುಡ್ಡಿಗಾಗಿ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ನನ್ನ ಸಾವಿಗೆ ತಿಪ್ಪಣ್ಣ ಕಾರಣ ಎಂದೆಲ್ಲಾ ಡೆತ್‍ನೋಟ್‍ನಲ್ಲಿ ಶ್ರೀದೇವಿ ಬರೆದಿದ್ದಾರೆ.

    ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=wIVy7EU-WkI