Tag: ಪ್ರಿಯಕರ

  • ಬ್ರೇಕಪ್ ಆಗಿದ್ದಕ್ಕೆ ಲವ್ವರ್ ಮನೆ ಮುಂದೆ ಕುಡಿದು, ಡಿಜೆ ಹಾಕಿ ಯುವತಿಯಿಂದ ಡ್ಯಾನ್ಸ್- ವೈರಲ್ ವಿಡಿಯೋ

    ಬ್ರೇಕಪ್ ಆಗಿದ್ದಕ್ಕೆ ಲವ್ವರ್ ಮನೆ ಮುಂದೆ ಕುಡಿದು, ಡಿಜೆ ಹಾಕಿ ಯುವತಿಯಿಂದ ಡ್ಯಾನ್ಸ್- ವೈರಲ್ ವಿಡಿಯೋ

    ನವದೆಹಲಿ: ಪ್ರೀತಿಸಿದವ ಮೋಸ ಮಾಡಿದನೆಂದು ಯುವತಿ ಆತನ ಮನೆ ಮುಂದೆ ಡಿಜೆ ಹಾಕಿ, ಕುಡಿದು ಡ್ಯಾನ್ಸ್ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಯುವತಿಯೊಬ್ಬಳು ತನ್ನ ಪ್ರಿಯಕರ ಮೋಸ ಮಾಡಿದನೆಂದು ಆತನ ಮನೆ ಮುಂದೆ ಬಾಲಿವುಡ್ ಡಿಜೆ ಹಾಡುಗಳಿಗೆ ಮದ್ಯ ಸೇವಿಸಿ ಕುಣಿದು ಕುಪ್ಪಳಿಸಿದ್ದಾಳೆ. ಯುವತಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ವರದಿಗಳ ಪ್ರಕಾರ ವಿಡಿಯೋದಲ್ಲಿ ಯುವತಿ ಮದ್ಯ ಸೇವಿಸಿ ಅಮೀರ್ ಖಾನ್ ನಟನೆಯ ರಾಜ ಹಿಂದೂಸ್ತಾನಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಯುವತಿ ಡ್ಯಾನ್ಸ್ ಆಡಿದ ನಾಲ್ಕು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಯುವತಿ ತಾನೇ ಡಿಜೆ ಅನ್ನು ಕರೆತಂದು ಮೋಸ ಮಾಡಿದ ಯುವಕನ ಮನೆ ಮುಂದೆ ಡ್ಯಾನ್ಸ್ ಮಾಡಿದ್ದಾಳೆ. ಮೋಸ ಮಾಡಿದ ಯುವಕನ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿ ಈ ರೀತಿ ಮಾಡಿದ್ದಾಳೆ.

    https://www.youtube.com/watch?time_continue=90&v=hBt1zdKNLJI

    https://www.youtube.com/watch?v=fJ0SkDBT93c

  • ಪತಿ, ಪತ್ನಿಯನ್ನು ಬಿಟ್ಟು ಬಂದು ಅಕ್ರಮ ಸಂಬಂಧದಲ್ಲಿದ್ದ ಜೋಡಿ ಆತ್ಮಹತ್ಯೆ

    ಪತಿ, ಪತ್ನಿಯನ್ನು ಬಿಟ್ಟು ಬಂದು ಅಕ್ರಮ ಸಂಬಂಧದಲ್ಲಿದ್ದ ಜೋಡಿ ಆತ್ಮಹತ್ಯೆ

    ಮೈಸೂರು: ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರ ಮತ್ತು ಆತನ ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.

    ವರದಮ್ಮ(35) ಹಾಗೂ ಮಹದೇವಸ್ವಾಮಿ(31) ಮೃತ ಪ್ರೇಮಿಗಳು. ಇವರಿಬ್ಬರಿಗೂ ಈಗಾಗಲೇ ಮದುವೆಯಾಗಿದ್ದು, ವರದಮ್ಮ ತಮ್ಮ ಪತಿ ಹಾಗೂ ಮಹದೇವಸ್ವಾಮಿ ತನ್ನ ಪತ್ನಿಯನ್ನು ಬಿಟ್ಟು ಬಂದಿದ್ದರು. ಎರಡು ವರ್ಷದಿಂದ ಬೇರೊಂದು ಮನೆ ಮಾಡಿ ಸಂಸಾರ ನಡೆಸುತ್ತಿದ್ದರು. ಆದ್ರೆ ಭಾನುವಾರ ಬೆಳಗ್ಗೆ ವರದಮ್ಮ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದ ಮಹದೇವಸ್ವಾಮಿ ಕೂಡ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಇಬ್ಬರ ಮೃತದೇಹವನ್ನು ನಿನ್ನೆಯೇ ಹೆಚ್‍ಡಿ ಕೋಟೆ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಹೆಚ್‍ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲವರ್ ಜೊತೆ ಸೇರಿ ಮಾಜಿ ಪ್ರಿಯಕರನ ಮೇಲೆ ಕಾರ್ ಹರಿಸಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ಳು

    ಲವರ್ ಜೊತೆ ಸೇರಿ ಮಾಜಿ ಪ್ರಿಯಕರನ ಮೇಲೆ ಕಾರ್ ಹರಿಸಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ಳು

    ಥಾಣೆ: ಮಾಜಿ ಪ್ರಿಯಕರನ ಮೇಲೆ ಕಾರ್ ಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆತನ ಪ್ರಿಯಕರನನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಇದನ್ನು ಅಪಘಾತ ಎಂದು ತಿಳಿಯಲಾಗಿತ್ತು. ಆದ್ರೆ ಬಳಿಕ ಇದೊಂದು ಯೋಜಿತ ಸಂಚು ಎಂಬುದು ಗತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.

    ನವೆಂಬರ್ 18ರಂದು ಈ ಕೊಲೆ ನಡೆದಿತ್ತು. 46 ವರ್ಷದ ರಾಮ್‍ಜೀ ಶರ್ಮಾ ಕೊಲೆಯಾದ ವ್ಯಕ್ತಿ. ಥಾಣೆಯ ಅಜಾದ್ ನಗರ್ ಪ್ರದೇಶದಲ್ಲಿ ಬೆಳಗ್ಗಿನ ಜಾವ ವಾಕಿಂಗ್ ಮಾಡುವಾಗ ಶರ್ಮಾ ಮೇಲೆ ಕಾರ್ ಹರಿಸಲಾಗಿತ್ತು. ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಶರ್ಮಾ ಒಂದು ತಿಂಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಜಯಪ್ರಕಾಶ್ ಮಂಗ್ರು ಚವಾನ್(32) ಹಾಗೂ ಸುಮಾರಿ ಯಾದವ್ (45) ಬಂಧಿತ ಆರೋಪಿಗಳು. ಜಯಪ್ರಕಾಶ್ ಕಾರ್ ಚಾಲಕನಾಗಿ ಕೆಲಸ ಮಾಡ್ತಿದ್ದ. ಸುಮಾರಿ ಯಾದವ್ ವಿವಾಹಿತಳಾಗಿದ್ದು ಐವರು ಮಕ್ಕಳಿದ್ದಾರೆ. ಈಕೆಗೆ ಹಲವು ಅಕ್ರಮ ಸಂಬಂಧಗಳಿದ್ದು, ಮಾಜಿ ಪ್ರಿಯಕರ ಶರ್ಮಾನನ್ನು ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.

    ಘಟನೆಗೆ ಸಂಬಂಧಿಸಿದಂತೆ ಮೋಟಾರು ವಾಹನ ಕಾಯ್ದೆ ಹಾಗೂ ಐಪಿಸಿ ಯ ಸೂಕ್ತ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಬಗ್ಗೆ ತನಿಖೆ ಮಾಡುವ ಸಂದರ್ಭದಲ್ಲಿ ಇದೊಂದು ಯೋಜಿತ ಸಂಚು ಎಂಬ ಬಗ್ಗೆ ಅನುಮಾನ ಮೂಡಿತ್ತು ಎಂದು ಡಿಸಿಪಿ ಸುನಿಲ್ ಲೋಖಂಡೆ ಹೇಳಿದ್ದಾರೆ.

    ಕಾರ್ ರಿಪೇರಿಯಿಂದ ಅನುಮಾನ: ಅಪಘಾತದ ನಂತರ ವಾಹನವನ್ನ ರಿಪೇರಿ ಮಾಡಿಸಲಾಗಿತ್ತು. ಜೊತೆಗೆ ವಾಹನದ ಬಣ್ಣ ಬದಲಾಯಿಸಿದ್ದರಿಂದ ಅನುಮಾನ ಹುಟ್ಟಿತ್ತು. ಅಪಘಾತ ನಡೆದ ಕೆಲವು ದಿನಗಳ ಬಳಿಕ ಸೂಕ್ತ ಮಾಹಿತಿ ಆಧರಿಸಿ ಪೊಲೀಸರು ಕಾರನ್ನ ಪತ್ತೆ ಮಾಡಿದ್ರು. ಆದ್ರೆ ಆಶ್ಚರ್ಯವೆಂಬಂತೆ ಕಾರನ್ನು ಆಗಲೇ ರಿಪೇರಿ ಮಾಡಿಸಲಾಗಿತ್ತು. ಕನ್ನಡಿ ಹಾಗೂ ಫಾಗ್ ಲ್ಯಾಂಪ್ ಬದಲಾಯಿಸಲಾಗಿತ್ತು. ಡೆಂಟ್ ಕೂಡ ಸರಿಪಡಿಸಿ, ಹೊಸದಾಗಿ ಪೇಂಟ್ ಮಾಡಿಸಲಾಗಿತ್ತು. ಇದರಿಂದ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಲ್ಲದೆ ಮೃತ ಶರ್ಮಾ ಅವರ ಮಗ ತನ್ನ ತಂದೆ ಲವರ್ ಜೊತೆ ಫೋನ್‍ನಲ್ಲಿ ಗಂಟೆಗಟ್ಟಲೆ ಮಾತಾಡುತ್ತಿದ್ದರು. ಅಪಘಾತಕ್ಕೆ ಕಲ ದಿನಗಳ ಮುಂಚೆ ಮಾತಾಡುತ್ತಿರಲಿಲ್ಲ ಎಂದು ಹೇಳಿದ್ದ. ಇದರಿಂದ ಹಿರಿಯ ಇನ್ಸ್ ಪೆಕ್ಟರ್‍ಗಳಾದ ಸತ್ತಾ ಧೋಲೆ ಹಾಗೂ ನಸೀರ್ ಕುಲಕರ್ಣಿ ಅವರಿಗೆ ಅನುಮಾನ ಮೂಡಿತ್ತು. ಜೊತೆಗೆ ಶರ್ಮಾ ಫೋನ್ ಪರಿಶೀಲಿಸಿದಾಗ ಸುಮಾರಿ ಯಾದವ್ ನಂಬರ್ ಸಿಕ್ಕಿತ್ತು.

    ನಮಗೆ ಮಹಿಳೆಯ ನಂಬರ್ ಸಿಕ್ಕಿತ್ತು. ನಂತರ ಕಾಲ್ ರೆಕಾಡ್ರ್ಸ್ ಪರಿಶೀಲಿಸಿದಾಗಿ ಘಟನೆ ನಡೆದ ಸಂದರ್ಭದಲ್ಲಿ ಶರ್ಮಾ ಹಾಗೂ ಚೌಹಾನ್‍ಗೆ ಅತೀ ಹೆಚ್ಚು ಕರೆಗಳನ್ನ ಮಾಡಿರುವುದು ತಿಳಿಯಿತು. ನಂತರ ಆಕೆಯನ್ನು ವಿಚಾರಣೆಗೆ ಕರೆದೆವು ಎಂದು ಪೊಲೀಸರು ಹೇಳಿದ್ದಾರೆ.

    ವಿಚಾರಣೆ ವೇಳೆ ಸುಮಾರಿ ಶರ್ಮಾ ಸೂಕ್ತ ಉತ್ತರಗಳನ್ನ ನೀಡುವಲ್ಲಿ ವಿಫಲಳಾಗಿದ್ದಳು. ನಂತರ ಸತ್ಯಾಂಶವನ್ನ ಬಾಯ್ಬಿಟ್ಟಳು. ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಶರ್ಮಾ ಆಕೆಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ ಬೆಳಗ್ಗಿನ ವಾಕಿಂಗ್ ಸಮಯದಲ್ಲಿ ಆಕೆ ಹಾಗೂ ಆಕೆಯ ಗಂಡನನ್ನು ಹಿಂಬಾಲಿಸಿ ಬರುತ್ತಿದ್ದ. ಇದರಿಂದ ಬೇಸತ್ತು ತನ್ನ ಪ್ರಿಯಕರ ಚೌಹಾನ್ ಜೊತೆ ಸೇರಿ ಕೊಲೆ ಮಾಡಿ, ಅಪಘಾತ ಎಂದು ಬಿಂಬಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಚೌಹಾನ್ ಕೆಲವು ದಿನಗಳ ಕಾಲ ಶರ್ಮಾ ಚಲನವಲನವನ್ನು ಗಮನಿಸಿದ್ದ. ಅದರಂತೆ ನವೆಂಬರ್ 18ರಂದು ಶರ್ಮಾ ಮೇಲೆ ತನ್ನ ಕಾರ್ ಹರಿಸಿ ಪರಾರಿಯಾಗಿದ್ದ. ಸದ್ಯ ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮನೆಗೆ ಬಂದು ಜಗಳವಾಡಿದಳೆಂದು ಗೃಹಿಣಿಯನ್ನು ಕೊಲೆಗೈದ ಪ್ರಿಯಕರ

    ಮನೆಗೆ ಬಂದು ಜಗಳವಾಡಿದಳೆಂದು ಗೃಹಿಣಿಯನ್ನು ಕೊಲೆಗೈದ ಪ್ರಿಯಕರ

    ಮೈಸೂರು: ಗೃಹಿಣಿಯನ್ನು ತನ್ನ ಪ್ರಿಯಕರನೇ ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮಾರುತಿ ಬಡಾವಣೆ ನಿವಾಸಿ ಜ್ಯೋತಿ(29) ಕೊಲೆಯಾದ ಮಹಿಳೆ. ಹುಣಸೂರು ಪಟ್ಟಣದ ಪ್ರವೀಣ್ ಕೊಲೆ ಮಾಡಿದ ಆರೋಪಿ. ಜ್ಯೋತಿಗೆ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ.

    ಒಂದು ವರ್ಷದಿಂದ ಜ್ಯೋತಿ ಮತ್ತು ಪ್ರವೀಣ್ ನಡುವೆ ಅಕ್ರಮ ಸಂಬಂಧವಿತ್ತು. ಶುಕ್ರವಾರ ರಾತ್ರಿ ಜ್ಯೋತಿ, ಪ್ರವೀಣ್ ಮನೆಗೆ ಹೋಗಿ ಜಗಳವಾಡಿದ್ದಳು. ಇದರಿಂದ ಕುಪಿತನಾಗಿದ್ದ ಪ್ರವೀಣ್ ಇಂದು ಬೆಳಗ್ಗೆ ಜ್ಯೋತಿ ಮನೆಗೆ ನುಗ್ಗಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದಿದ್ದಾನೆ.

    ಆರೋಪಿ ಪ್ರವೀಣ್ ಕೊಲೆ ಮಾಡಿ ಬೈಪಾಸ್ ರಸ್ತೆಯ ಪ್ರಶಾಂತ್ ಲಾಡ್ಜ್ ನ ಮೇಲಿನ ಮಹಡಿಗೆ ಹೋಗಿ ತನ್ನ ತಂದೆಗೆ ಫೋನ್ ಮಾಡಿದ್ದಾನೆ. ಬಳಿಕ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಇದನ್ನು ಕೇಳಿದ ತಂದೆ ಕೂಡಲೇ ಸ್ಥಳಕ್ಕೆ ಆಗಮಿಸಿ ಪುತ್ರನ ಮನವೊಲಿಸಿದ್ದಾರೆ.

    ಡಿವೈಎಸ್ಪಿ ಭಾಸ್ಕರ್, ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ಹಾಗೂ ಪಿಎಸ್‍ಐ ಷಣ್ಮುಗಂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲವ್ವರ್ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದ ಮಗಳು!

    ಲವ್ವರ್ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದ ಮಗಳು!

    ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ ಮಹಿಳೆ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

    ಮಹಿಳೆಯನ್ನು ಸ್ವಂತ ಮಗಳೇ ಲವ್ವರ್ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಕೆರೂರು ಪಟ್ಟಣದಲ್ಲಿ ಅಕ್ಟೋಬರ್ 31 ರಂದು 50 ವರ್ಷದ ಸಂಗವ್ವ ಎಂಬ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಮೃತರ ಕುಟುಂಬಸ್ಥರು ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

    ಪ್ರಕರಣದ ತನಿಖೆ ನಡೆಸಿದಾಗ ಭಯಾನಕ ಸತ್ಯ ಗೊತ್ತಾಗಿದ್ದು, ಮೃತ ಮಹಿಳೆಯ ಮಗಳಾದ ಹರ್ಷಾ ಬನ್ನೂರ ಮತ್ತು ಪ್ರಿಯಕರ ಶ್ರೀಕಾಂತ್ ಚಮ್ಮಾರ ಸೇರಿ ಕೊಲೆ ಮಾಡಿದ್ದಾರೆ ಎಂಬುದು ಬಯಲಾಗಿದೆ.

    ಏನಿದು ಪ್ರಕರಣ?: ಸಂಗವ್ವಗೆ ಹರ್ಷಾ ಹಾಗೂ ಬಸು ಎಂಬ ಇಬ್ಬರು ಮಕ್ಕಳಿದ್ದಾರೆ. ತಂದೆಯಿಲ್ಲದ ಕಾರಣ ಮಗಳು ಹರ್ಷಾಳನ್ನು ತುಂಬಾ ಮುದ್ದು ಮಾಡಿ ಬೆಳೆಸಿದ್ದರು. ಹರ್ಷಾ ದ್ವಿತೀಯ ಪಿಯುಸಿ ಓದುವಾಗ ನರಗುಂದ ತಾಲೂಕು ಶೀರೋಳ ಗ್ರಾಮದ ಶ್ರೀಕಾಂತ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ತುಂಬಾ ಸಲುಗೆಯಿಂದ ಇದ್ದರು. ಶ್ರೀಕಾಂತ್ ಹರ್ಷಾ ಮನೆಗೆ ಆಗಾಗ ಹೋಗುತ್ತಿದ್ದ. ಇದನ್ನು ಗಮಿನಿಸಿದ ಸಂಗವ್ವ ಅವನಿಂದ ದೂರವಿರಲು ಹೇಳಿದ್ದರು. ತಾಯಿಯ ಮಾತನ್ನ ಕೇಳಿಸಿಕೊಳ್ಳದ ಹರ್ಷಾ, ನನಗೆ ನನ್ನ ಪ್ರಿಯಕರ ಬೇಕೆಂದು ಶ್ರೀಕಾಂತ್ ಜೊತೆ ಓಡಿ ಹೋಗಿದ್ದಳು. ನಂತರ ತಾಯಿ ಕಣ್ಣೀರು ಹಾಕಿ, ಮನೆಗೆ ಬರುವಂತೆ ಕೇಳಿದ್ದರಿಂದ 15 ದಿನಗಳ ನಂತರ ಮನೆಗೆ ಹಿಂದಿರುಗಿದ್ದಳು. ಆಗ ಹರ್ಷಾಳನ್ನು ಸಂಗವ್ವ ರೂಮಿನಲ್ಲಿ ಕೂಡಿ ಹಾಕಿದ್ದರು. ರೂಮಿನಲ್ಲೇ ಇದ್ದ ಹರ್ಷಾಗೆ ಅದ್ಹೇಗೋ ಫೋನ್ ಸಿಕ್ಕಿತ್ತು. ಆಗ ಶ್ರೀಕಾಂತ್‍ಗೆ ಕರೆ ಮಾಡಿ ನಡೆದ ಘಟನೆ ವಿವರಿಸಿದ್ದಳು. ನಾವು ಓಡಿ ಹೋಗೋಣ ಎಂದು ಹೇಳಿದ್ದಳು ಅಂತ ಮೃತ ಸಂಗವ್ವ ಅಣ್ಣ ಮಡಿವಾಳಪ್ಪ ಕಡಕೋಳ್ ವಿವರಿಸಿದ್ದಾರೆ.

    ಮದುವೆ ಮಾತುಕತೆಗೆ ಬಂದು ಕೊಂದೇಬಿಟ್ರು: ಹರ್ಷಾಳ ಮಾತಿನಂತೆ ಶ್ರೀಕಾಂತ್ ವಿಜಯಪುರದಲ್ಲಿರುವ ತನ್ನ ಮಾವ ನವಲಪ್ಪನನ್ನು ಹರ್ಷಾಳ ಮನೆಗೆ ಕರೆದುಕೊಂಡು ಬಂದಿದ್ದ. ನವಲಪ್ಪ ಸಂಗವ್ವ ಬಳಿ ಮಾತನಾಡಿ ಶ್ರೀಕಾಂತ್ ಜೊತೆ ಹರ್ಷಾಳ ಮದುವೆ ಮಾಡಿಸಿಕೊಡುವುದಕ್ಕೆ ಕೇಳಿದ್ದರು. ಸಂಗವ್ವ ಇದಕ್ಕೆ ನಿರಾಕರಿಸಿ ಅವರ ಮೇಲೆ ಕೋಪಗೊಂಡು, ಬೈದು ಮನೆಯಿಂದ ಹೊರ ಹೋಗುವುದಕ್ಕೆ ಹೇಳಿದ್ದರು. ಇದ್ದರಿಂದ ಕೋಪಗೊಂಡ ಶ್ರೀಕಾಂತ್ ಹಾಗೂ ಅವನ ಮಾವ ನವಲಪ್ಪ, ಸಂಗವ್ವನ ಬಾಯಿಗೆ ಹತ್ತಿ ಇಟ್ಟು, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.

    ಸಂಗವ್ವ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದಾರೆಂದು ಮನೆಯವರು ನವೆಂಬರ್ 2 ರಂದು ಪೊಲೀಸರಿಗೆ ದೂರು ನೀಡಿದ್ದರು. ಆಗ ಹರ್ಷಾಳ ಮೇಲೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು ಹಾಗೂ ಪೊಲೀಸರು ಆಕೆಯ ಫೋನ್ ಟ್ರೇಸ್ ಮಾಡಿದ್ದರು. ನಂತರ ಹರ್ಷಾ, ಪ್ರಿಯಕರ ಶ್ರೀಕಾಂತ್, ಮಾವ ನವಲಪ್ಪನನ್ನು ಕೆರೂರು ಪೊಲೀಸರು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • Sorry ಅಪ್ಪು.. ದಯವಿಟ್ಟು ನನ್ನ ಕ್ಷಮಿಸಿಬಿಡಿ- ಲವ್ವರ್ ಗೆ ವಿಡಿಯೋ ಕಳ್ಸಿ ಯುವತಿ ಆತ್ಮಹತ್ಯೆಗೆ ಯತ್ನ

    Sorry ಅಪ್ಪು.. ದಯವಿಟ್ಟು ನನ್ನ ಕ್ಷಮಿಸಿಬಿಡಿ- ಲವ್ವರ್ ಗೆ ವಿಡಿಯೋ ಕಳ್ಸಿ ಯುವತಿ ಆತ್ಮಹತ್ಯೆಗೆ ಯತ್ನ

    ತುಮಕೂರು: ಪ್ರಿಯಕರ ಸರಿಯಾಗಿ ಮಾತನಾಡಿಸುತ್ತಿಲ್ಲ ಎಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ತುಮಕೂರು ನಗರದ ಎಸ್.ಎಸ್. ಪುರಂನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಮಾಡುತ್ತಾ ಮಾತ್ರೆಗಳನ್ನು ನುಂಗುತ್ತಾ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ವಿಡಿಯೋದಲ್ಲಿ `ಸಾರಿ ಅಪ್ಪು.. ಐ ಆಮ್ ಸೋ ಸಾರಿ.. ನನ್ನಿಂದ ಯಾರಿಗೂ ನೋವಾಗೋದಕ್ಕೆ ನಾನು ಇಷ್ಟಪಡಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ’ ಅಂತ ಕೈಮುಗಿದು ಬೇಡಿಕೊಂಡು ಬಳಿಕ ಮಾತ್ರೆಗಳನ್ನು ತೆಗೆದುಕೊಂಡಿದ್ದಾರೆ.

    ಈ ವಿಡಿಯೋ ನೋಡಿದ ಪ್ರಿಯಕರ ಕೂಡಲೇ ಯುವತಿಯಿದ್ದ ಹಾಸ್ಟೆಲ್ ಗೆ ಕರೆ ಮಾಡಿ ಯುವತಿಯ ಪ್ರಾಣ ಉಳಿಸಿದ್ದಾರೆ. ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • ಗಂಡನನ್ನು ಬಿಟ್ಟು ಹೋದ ಮಹಿಳೆಗೆ ಪ್ರಿಯಕರನಿಂದ್ಲೂ ಮೋಸ..!

    ಗಂಡನನ್ನು ಬಿಟ್ಟು ಹೋದ ಮಹಿಳೆಗೆ ಪ್ರಿಯಕರನಿಂದ್ಲೂ ಮೋಸ..!

    ಧಾರಾವಾಡ: ತನ್ನ ಮೊದಲ ಗಂಡನನ್ನು ಬಿಟ್ಟು ಬಂದು ಜೀವನ ಸಾಗಿಸುತ್ತಿದ್ದ ಮಹಿಳೆಗೆ ಚಿಕ್ಕ ವಯಸ್ಸಿನ ಯುವಕನೊಬ್ಬನ ಎಂಟ್ರಿಯಾಗಿತ್ತು. ಆತ ಕೆಲ ದಿನಗಳ ಕಾಲ ಸಂಸಾರ ಕೂಡ ಮಾಡಿದ್ದ. ಕೊನೆಗೆ ಕೈಕೊಟ್ಟ. ಇದರಿಂದ ನೊಂದ ಮಹಿಳೆ ಮೋಸ ಮಾಡಿದವನ ಮನೆಗೆ ಬಂದು ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾಳೆ.

    ಹೌದು. ರಾಯಭಾಗ ತಾಲೂಕಿನ ಕಲಾವತಿಗೆ ಮೂರು ಮಕ್ಕಳ ತಂದೆ ಜೊತೆ ಈ ಹಿಂದೆ ಮದುವೆಯಾಗಿತ್ತು. ಆದರೆ ಗಂಡನ ಕಿರಿಕಿರಿ ತಾಳಲಾರದೇ ಆತನನ್ನು ಬಿಟ್ಟು ಬಂದು ಧಾರವಾಡದ ನಿಗದಿ ಗ್ರಾಮದಲ್ಲಿರುವ ಗೆಳತಿ ಮನೆಯಲ್ಲಿ ವಾಸವಾಗಿದ್ದಳು. ಆಗ ವಯಸ್ಸಲ್ಲಿ ಕಲಾವತಿಗಿಂತ ಚಿಕ್ಕವನಾದ 23 ವರ್ಷದ ಮುತ್ತು ಮಡಿವಾಳರ ಎಂಬಾತ ಭೇಟಿಯಾದ. ಮದುವೆಯಾಗೋದಾಗಿ ಹೇಳಿ ಧಾರವಾಡ ನಗರದ ರಾಜೀವ್ ಗಾಂಧಿ ನಗರದಲ್ಲಿ ಮನೆ ಮಾಡಿ ಮೂರು ತಿಂಗಳು ಸಂಸಾರ ಕೂಡ ನಡೆಸಿದ್ದ.

    ಮೂರು ತಿಂಗಳು ಆಕೆ ಜೊತೆ ಮಜಾ ಮಾಡಿದ್ದ ಮುತ್ತು ಎಂಟು ದಿನಗಳ ಹಿಂದೆ ಕಲಾವತಿಗೆ ಕೈಕೊಟ್ಟು ತನ್ನ ಮನೆಗೆ ಹೋಗಿ ನೆಲೆಸಿದ್ದಾನೆ. ಪ್ರಿಯಕರ ಫೋನ್ ಸಂಪರ್ಕಕ್ಕೂ ಸಿಗದಿದ್ದಾಗ ನೇರವಾಗಿ ಮುತ್ತುವಿನ ಮನೆಗೆ ಬಂದ ಕಲಾವತಿ ತನ್ನನ್ನು ಮದುವೆಯಾಗುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ. ಸತ್ತರೂ ಬಿಟ್ಟು ಹೋಗಲ್ಲ ಎಂದು ಹೇಳುತ್ತಿದ್ದಾಳೆ. ಮುತ್ತು ಮಾತ್ರ ಏನೂ ಅರಿಯದ ಮುಗ್ಧನಂತೆ ನಟಿಸುತ್ತಿದ್ದಾನೆ.

    ಸದ್ಯ ಕೈಕೊಟ್ಟ ಪ್ರಿಯಕರನ ಮನೆಯಲ್ಲೇ ನೊಂದ ಮಹಿಳೆ ಉಳಿದುಕೊಂಡಿದ್ದಾಳೆ. ಈ ಬಗ್ಗೆ ಮುತ್ತುವಿನ ಮನೆಯವರನ್ನು ಪ್ರಶ್ನಿಸಿದರೆ ಅವರು ಜಗಳಕ್ಕೆ ನಿಂತಿದ್ದಾರೆ.

  • ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!

    ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!

    ಬೆಂಗಳೂರು: ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯ ಮಾಡುತ್ತಿದ್ದ ಬಾಯ್ ಫ್ರೆಂಡ್ ವರ್ತನೆಯಿಂದ ಬೇಸತ್ತು ಪ್ರಿಯತಮೆ ಪ್ರಿಯಕರನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.

    ಪ್ರಿಯಕರ ಮುತ್ತುರಾಜ್ ನನ್ನು ಪ್ರೇಯಸಿ ಸುನಂದಾ ಎಂಬಾಕೆ ಕೊಲೆ ಮಾಡಿದ್ದಾಳೆ.

    ಏನಿದು ಘಟನೆ?: ಖಾಸಗಿ ಬಸ್ ನಿರ್ವಾಹಕನಾಗಿರೋ ಮುತ್ತುರಾಜ್ ಸುನಂದಾ ಎಂಬಾಕೆಯನ್ನು ಪ್ರೀತಿಸುತ್ತಿದ್ದನು. ಅಲ್ಲದೇ ಪ್ರತಿನಿತ್ಯ ಕುಡಿದು ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಡ ಹೇರುತ್ತಿದ್ದನು. ತನ್ನ ಪ್ರಿಯಕರನ ಈ ವರ್ತನೆಯಿಂದ ಬೇಸತ್ತ ಸುನಂದಾ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತ್ರ ಕುಡಿದ ಮತ್ತಿನಲ್ಲಿ ಆತ ಸಾವನ್ನಪ್ಪಿರುವುದಾಗಿ ಬಿಂಬಿಸಲು ಮುಂದಾಗಿದ್ದಳು. ಅಲ್ಲದೇ ಆತನ ಮೃತದೇಹವನ್ನು ಪಕ್ಕದ ರೋಡಿಗೆ ತಂದು ಎಸೆದಿದ್ದಳು. ಆದರೂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅದು ಕುಡಿತದಿಂದಾದ ಸಾವಲ್ಲ. ಉಸಿರುಗಟ್ಟಿಸಿ ನಡೆಸಿರುವ ಕೃತ್ಯ ಎಂಬ ಅಂಶ ಬೆಳಕಿಗೆ ಬಂದಿದೆ.

    ಮರಣೋತ್ತರ ವರದಿ ಕೈ ಸೇರುತ್ತಿದ್ದಂತೆಯೇ ಕೋಣನಕುಂಟೆ ಪೊಲೀಸರು ಆರೋಪಿ ಸುನಂದಾಳನ್ನು ಬಂಧಿಸಿದ್ದಾರೆ. ಈಕೆಯ ವಿಚಾರಣೆಯ ವೇಳೆ ಮುತ್ತುರಾಜ್ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಳು ಎಂದು ಬಾಯ್ಬಿಟ್ಟಿದ್ದಾಳೆ.

     

  • ಪ್ರಿಯಕರನಿಗಾಗಿ ಕಿಡ್ನಿಯನ್ನೇ ಮಾರಲು ಮುಂದಾದ ಮಹಿಳೆ

    ಪ್ರಿಯಕರನಿಗಾಗಿ ಕಿಡ್ನಿಯನ್ನೇ ಮಾರಲು ಮುಂದಾದ ಮಹಿಳೆ

    ನವದೆಹಲಿ: ಮಹಿಳೆಯೊಬ್ಬರು ತನ್ನ ಪ್ರಿಯಕರನನ್ನು ಮದುವೆಯಾಗುವ ಸಲುವಾಗ ಆತ ಡಿಮ್ಯಾಂಡ್ ಮಾಡಿದ ಹಣ ನೀಡಲು ಕಿಡ್ನಿಯನ್ನೇ ಮಾರಲು ಮುಂದಾದ ಬಗ್ಗೆ ವರದಿಯಾಗಿದೆ.

    ಬಿಹಾರದ ನಿವಾಸಿಯಾದ 21 ವರ್ಷದ ಮಹಿಳೆಗೆ ಈಗಾಗಲೇ ಡೈವೋರ್ಸ್ ಆಗಿತ್ತು. ಆಕೆಯ ಪ್ರಿಯಕರ ಮದುವೆಯಾಗಲು 1.8 ಲಕ್ಷ ರೂ. ಹಣ ಡಿಮ್ಯಾಂಡ್ ಮಾಡಿದ್ದ. ಹೀಗಾಗಿ ಆಕೆ ಕಿಡ್ನಿ ಮಾರಲು ದೆಹಲಿಗೆ ಬಂದಿದ್ದಾರೆ.

     

    ದೆಹಲಿಯ ಆಸ್ಪತ್ರೆಗೆ ಮಹಿಳೆ ಬಂದ ನಂತರ ಆಕೆ ಕಿಡ್ನಿ ಮಾರಾಟ ಜಾಲದಲ್ಲಿ ಸಿಲುಕಿಕೊಂಡಿರಬಹುದೆಂಬ ಅನುಮಾನದಿಂದ ಆಸ್ಪತ್ರೆ ಸಿಬ್ಬಂದಿ ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದು, ಪೊಲೀಸರಿಗೂ ವಿಷಯ ಮುಟ್ಟಿಸಿದ್ದರು.

    ದೆಹಲಿ ಮಹಿಳಾ ಆಯೋಗದ ತಂಡ ಕೂಡ ಆಸ್ಪತ್ರೆಗೆ ಬಂದು ಮಹಿಳೆಯನ್ನ ವಿಚಾರಿಸಿದ್ದರು. ಆಗ ಆಕೆ, ನಾನು ವಿಚ್ಛೇದನದ ನಂತರ ತಂದೆ ತಾಯಿಯೊಂದಿಗೆ ಬಿಹಾರದಲ್ಲಿ ವಾಸವಿದ್ದೇನೆ. ಅಲ್ಲಿ ನೆರಮನೆಯ ವ್ಯಕ್ತಿಯೊಬ್ಬರು ಪರಿಚಯವಾಗಿ ಪ್ರೀತಿಯಾಗಿತ್ತು. ಆದ್ರೆ ನಮ್ಮ ತಂದೆ ತಾಯಿ ಈ ಮದುವೆಗೆ ಒಪ್ಪಿರಲಿಲ್ಲ. ಉತ್ತರಪ್ರದೇಶದ ಮೊರಾದಾಬಾದ್‍ನಲ್ಲಿ ಪ್ರಿಯಕರ ಕೆಲಸ ಮಾಡುತ್ತಿದ್ದು, ನನ್ನನ್ನು ಮದುವೆಯಾಗುತ್ತಾರೆ ಎಂದುಕೊಂಡು ಅವರಿದ್ದ ಸ್ಥಳಕ್ಕೆ ಹೋದೆ ಎಂದು ಹೇಳಿದ್ದಾರೆ.

    ಆದ್ರೆ ಅವರಿಗೆ ಹಣ ಕೊಟ್ಟರೆ ಮಾತ್ರ ಮದುವೆಯಾಗೋದಾಗಿ ಹೇಳಿದ್ರು. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಕಿಡ್ನಿ ಮಾರಲು ನಿರ್ಧರಿಸಿ ದೆಹಲಿಗೆ ಬಂದೆ ಎಂದು ಮಹಿಳೆ ಹೇಳಿದ್ದಾರೆ.

    ಮಹಿಳಾ ಆಯೋಗದ ಸದಸ್ಯೆಯೊಬ್ಬರು ಮಹಿಳೆಗೆ ಕೌನ್ಸೆಲಿಂಗ್ ಮಾಡಿದ್ದು, ಪ್ರಿಯಕರನ ವಿರುದ್ಧ ಪೊಲೀಸರಿಗೆ ದೂರು ನೀಡಲು ಸಲಹೆ ನೀಡಿದ್ದಾರೆ. ಆದ್ರೆ ಮಹಿಳೆ ದೂರು ನೀಡಲು ನಿರಾಕರಿಸಿದ್ದು, ಬಿಹಾರದ ತನ್ನ ಪೋಷಕರ ಮನೆಗೆ ಹಿಂದಿರುಗಿದ್ದಾರೆ.

    ದೆಹಲಿ ಮಹಿಳಾ ಆಯೋಗದವರು ಈ ಪ್ರಕರಣವನ್ನ ಬಿಹಾರ ಮಹಿಳಾ ಆಯೋಗಕ್ಕೆ ವರ್ಗಾಯಿಸಿದ್ದು, ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮಹಿಳೆಗೆ ನೆರವಾಗುವಂತೆ ಕೇಳಿಕೊಂಡಿದ್ದಾರೆ.

  • ಹಳೇ ಪ್ರಿಯಕರನಿಂದ ಬೆಂಗಳೂರಿನ ಮಾಡೆಲ್ ಮೇಲೆ ಅತ್ಯಾಚಾರ

    ಹಳೇ ಪ್ರಿಯಕರನಿಂದ ಬೆಂಗಳೂರಿನ ಮಾಡೆಲ್ ಮೇಲೆ ಅತ್ಯಾಚಾರ

    ಬೆಂಗಳೂರು: ಹಳೆ ಪ್ರಿಯಕರ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಾಡೆಲ್ ಒಬ್ಬರು ಚಂದ್ರ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಹಳೇ ಪ್ರೇಮಿ ಗೌತಮ್ ನಾನು ಮನೆಯಲ್ಲಿ ಒಬ್ಬಳೆ ಇದ್ದಾಗ ಬಂದು ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

    ದೂರಿನಲ್ಲಿ ಏನಿದೆ?
    ಮೂಲತಃ ಚಿಕ್ಕಮಗಳೂರು ನಿವಾಸಿಯಾದ ಗೌತಮ್ ಪೂರ್ವಂಕರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ನನಗೆ ಮತ್ತು ಗೌತಮ್ ಮಧ್ಯೆ ಕೆಲ ದಿನಗಳಿಂದ ಪ್ರೇಮವಾಗಿದ್ದು. ಆದರೆ ಆತ ನನ್ನ ಫೋನ್ ಹ್ಯಾಕ್ ಮಾಡಿ ಸ್ನೇಹಿತರಿಗೆ ಅಶ್ಲೀಲ ಮೆಸೇಜ್ ಕಳುಹಿಸಿತ್ತಿದ್ದ. ಈ ವಿಚಾರ ಗೊತ್ತಾಗಿ ನಾನು ಆತನಿಂದ ದೂರವಾಗಿದ್ದೆ. ಅಷ್ಟೇ ಅಲ್ಲದೇ ಆತನಿಗೆ ಎರಡು ಕಡೆ ಎಂಗೇಜ್ ಮೆಂಟ್ ಆಗಿತ್ತು. ಈಗ ನಕಲಿ ಐಡಿ ಬಳಸಿ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ದೌರ್ಜನ್ಯಕ್ಕೆ ಒಳಗಾದ ಮಾಡೆಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.