Tag: ಪ್ರಿಯಕರ

  • ಪ್ರಿಯಕರನ ಜೊತೆ ಸೇರಿ ಪತಿ ಕೊಲೆ; ಮೃತದೇಹ ಸುಟ್ಟುಹಾಕಲು ಹೋಗಿದ್ದ ಆರೋಪಿಗಳು ಪೊಲೀಸರಿಗೆ ಲಾಕ್‌

    ಪ್ರಿಯಕರನ ಜೊತೆ ಸೇರಿ ಪತಿ ಕೊಲೆ; ಮೃತದೇಹ ಸುಟ್ಟುಹಾಕಲು ಹೋಗಿದ್ದ ಆರೋಪಿಗಳು ಪೊಲೀಸರಿಗೆ ಲಾಕ್‌

    – ಪೊಲೀಸರ ಕಂಡೊಡನೆ ಶವವಿದ್ದ ಕಾರು ಬಿಟ್ಟು ಎಸ್ಕೇಪ್‌ಗೆ ಮುಂದಾಗಿದ್ದ ಆರೋಪಿಗಳು

    ಕೋಲಾರ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಪತಿಯನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪತ್ನಿ ಸೇರಿ ಮೂವರನ್ನ ಕೋಲಾರದ ರಾಯಲ್ಪಾಡು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಹೋಬಳಿಯ ಎಸ್.ಗೊಲ್ಲಪಲ್ಲಿ ಗ್ರಾಮದ ವೆಂಕಟರಮಣ ಎಂಬವನನ್ನ 2 ದಿನಗಳ ಹಿಂದೆ ಕೊಲೆ ಮಾಡಲಾಗಿತ್ತು. ವೆಂಕಟರಮಣನ ಪತ್ನಿ, ಆಕೆಯ ಪ್ರಿಯಕರ ವೇಣುಗೋಪಾಲ್ ಹಾಗೂ ಆತನಿಗೆ ಸಹಾಯ ಮಾಡಿದ ಬಾಲಾಜಿ ಎಂಬವರನ್ನ ಬಂಧಿಸಲಾಗಿದೆ.

    ಆ.24 ರ ರಾತ್ರಿ ಕೊಲೆ ಮಾಡಿದ್ದ ಆರೋಪಿಗಳು, ವೆಂಕಟರಮಣ ಶವವನ್ನ ಬುಲೆರೋ ಕಾರ್‌ನಲ್ಲಿ ಹಾಕಿಕೊಂಡು ಚಿಕ್ಕಬಳ್ಳಾಪುರ, ತುಮಕೂರು, ಹಿಂದೂಪುರ ಸೇರಿ ಹಲವೆಡೆ ಸುತ್ತಾಡಿದ್ದರು. ಎಲ್ಲಿಯೂ ಶವವನ್ನು ಬಿಸಾಡಲು ಜಾಗ ಸಿಗದೇ ರಾಯಲ್ಪಾಡು ಬಳಿ ಅರಣ್ಯದಲ್ಲಿ ಸುಟ್ಟು ಹಾಕಲು ತೆರಳುವ ವೇಳೆ ಪೊಲೀಸರ ಕಂಡು ಕಾರು ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ.

    ನಂಬರ್ ಪ್ಲೇಟ್ ಮೇಲೆ ಸ್ಟಿಕ್ಕರ್ ಅಂಟಿಸಿದ್ದ ಹಿನ್ನೆಲೆ ಅನುಮಾನಗೊಂಡ ರಾಯಲ್ಪಾಡು ಪಿಎಸ್‌ಐ, ವಾಹನ ಪರಿಶೀಲನೆ ನಡೆಸಿದ ವೇಳೆ ಡಿಕ್ಕಿಯಲ್ಲಿ ವೆಂಕಟರಮಣನ ಶವ ಪತ್ತೆಯಾಗಿತ್ತು. ವೆಂಕಟರಮಣನನ್ನ ಕೊಂದ ಪತ್ನಿ ಸೇರಿ ಆಕೆಗೆ ಸಹಾಯ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಲವ್ವರ್‌ ಜೊತೆ ಗಂಡನ ಹತ್ಯೆ – ಧರ್ಮಸ್ಥಳಕ್ಕೆ ಹೋಗಿದ್ದಾನೆಂದು ಕಥೆ ಕಟ್ಟಿ ಹಬ್ಬ ಮಾಡಿದ್ದ ಪತ್ನಿ ಅಂದರ್‌

    ಲವ್ವರ್‌ ಜೊತೆ ಗಂಡನ ಹತ್ಯೆ – ಧರ್ಮಸ್ಥಳಕ್ಕೆ ಹೋಗಿದ್ದಾನೆಂದು ಕಥೆ ಕಟ್ಟಿ ಹಬ್ಬ ಮಾಡಿದ್ದ ಪತ್ನಿ ಅಂದರ್‌

    – ರಾಡ್‌ನಿಂದ ಹೊಡೆದು, ಪೆಟ್ರೋಲ್‌ ಸುರಿದು ಸುಟ್ಟಿದ್ದ ಮುದ್ದಿನ ಹೆಂಡ್ತಿ
    – ಮೂರು ಮಕ್ಕಳ ತಂದೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ

    ಕೊಪ್ಪಳ: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು, ಸುಟ್ಟು ಹಾಕಿದ ಬಳಿಕ ನಾಗರ ಪಂಚಮಿ ಹಬ್ಬ ಮಾಡಿದ್ದ ವಿಲಕ್ಷಣ ಘಟನೆಯೊಂದು ಕೊಪ್ಪಳ (Koppala) ತಾಲೂಕಿನ ಬುದಗೂಂಪದಲ್ಲಿ ನಡೆದಿದೆ.

    ದ್ಯಾಮಣ್ಣ ವಜ್ರಬಂಡಿ (38) ಕೊಲೆಯಾದ ಪತಿ, ನೇತ್ರಾವತಿ (Netravati) ಚಟ್ಟಕಟ್ಟಿದ ಪತ್ನಿ. ತನ್ನ ಪ್ರಿಯಕರ ಶಾಮಣ್ಣ ಜೊತೆ ಸೇರಿಕೊಂಡು ಪತಿಯನ್ನ ಕೊಲೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – 6ನೇ ಪಾಯಿಂಟಲ್ಲಿ 12 ಮೂಳೆಗಳು ಪತ್ತೆ, ಇಂದು 7ನೇ ಸಮಾಧಿ ಅಗೆತ

    ಕೊಲೆ ನಡೆದಿದ್ದು ಹೇಗೆ?
    ಪತ್ನಿ ನೇತ್ರಾವತಿ ಜುಲೈ 25ರಂದು ಪ್ರೀಯಕರ ಶ್ಯಾಮಣ್ಣ ಜೊತೆ ಸೇರಿಕೊಂಡು ಗಂಡನನ್ನ ಕೊಲೆ ಮಾಡಿದ್ದಳು. ತಮ್ಮ ಜಮೀನಿನಲ್ಲಿಯೇ ರಾಡ್ ನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ 5 ಕಿಲೋ ಮೀಟರ್ ದೂರದವರೆಗೆ ಹೋಗಿ ಶವ ಸುಟ್ಟು ಹಾಕಿದ್ದಳು. ಶ್ಯಾಮಣ್ಣ ಜೊತೆ ಸೇರಿಕೊಂಡು ಪೆಟ್ರೋಲ್‌ ಸುರಿದು ಶವ ಸುಟ್ಟಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್- ವಿಕಾಸ್ ಕುಮಾರ್ ಸಸ್ಪೆಂಡ್ ಆದೇಶ ವಾಪಸ್

    ಪರಸಂಗಕ್ಕೆ ಅಡ್ಡಿಯಾದ ಪತಿಗೆ ಚಟ್ಟ
    ಆರೋಪಿ ಶ್ಯಾಮಣ್ಣ ಮೂಲತಃ ಕೊಪ್ಪಳ ತಾಲೂಕಿನ ಕಾಮನೂರ ನಿವಾಸಿ. ಅದೇ ಗ್ರಾಮದ ನೇತ್ರಾವತಿಯನ್ನ ಬೂದಗುಂಪ ಗ್ರಾಮದ ದ್ಯಾಮಣ್ಣ ಜೊತೆ ಮದುವೆ ಮಾಡಿ ಕೊಡಲಾಗಿತ್ತು. ಆದ್ರೆ ನೇತ್ರಾವತಿ ಹಾಗೂ ಶ್ಯಾಮಣ್ಣ ನಡುವೆ ಅಕ್ರಮ ಸಂಭಂದ ಇತ್ತು. ಶ್ಯಾಮಣ್ಣನಿಗೆ ಮೂರು ಮಕ್ಕಳಿದ್ದರೂ ಇಬ್ಬರ ಅಕ್ರಮ ಸಂಬಂಧ ಮುಂದುವರಿದಿತ್ತು. ಇಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಪತ್ನಿ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಇದನ್ನೂ ಓದಿ: ಆನೇಕಲ್ | ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನ ಕಿಡ್ನ್ಯಾಪ್ ಮಾಡಿ ಬರ್ಬರ ಹತ್ಯೆ

    ದ್ಯಾಮಣ್ಣನನ್ನ ಕೊಲೆ ಮಾಡಲೆಂದೇ ಬೂದಗುಂಪದ ಗ್ಯಾರೇಜ್ ಒಂದರಲ್ಲಿ ಶ್ಯಾಮಣ್ಣ ರಾಡ್ ಪಡೆದು ಅದೇ ರಾಡ್ ನಿಂದ ಹೊಡೆದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಲಾರಿ ಚಕ್ರ ರಿಪೇರಿಗೆಂದು ರಾಡ್ ಪಡೆದುಕೊಂಡದಿದ್ದ ಶ್ಯಾಮಣ್ಣ, ಅದೇ ರಾಡ್ ನಿಂದ ದ್ಯಾಮಣ್ಣನನ್ನ ಕೊಂದಿದ್ದಾನೆ. ಕೊಲೆ ನಂತ್ರ ರಾಡ್ ವಾಪಸ್‌ ಕೊಟ್ಟಿದ್ದಾನೆ. ಜೊತೆಗೆ ಲಾರಿಗೆ ಪಂಚರ್‌ ಹಾಕಿಸಿಕೊಂಡು ಹಣ ಆಮೇಲೆ ಕೊಡ್ತೀನಿ ಎಂದು ಸಹಿ ಮಾಡಿ ಹೋಗಿದ್ದ, ಅಷ್ಟರಲ್ಲಿ ತಗಲ್ಲಾಕೊಂಡಿದ್ದಾನೆ.

    ಧರ್ಮಸ್ಥಳಕ್ಕೆ ಹೋಗಿದ್ದಾನೆಂದು ಕಥೆ ಕಟ್ಟಿದ್ದ ಐನಾತಿ
    ಜುಲೈ 25ರಂದು ಪತಿಯನ್ನ ಕೊಲೆ ಮಾಡಿದ್ದ ನೇತ್ರಾವತಿ 5 ದಿನಗಳ ಕಾಲ ಮನೆಯಲ್ಲೇ ಇದ್ದಳು. ಕೊಲೆ ನಂತರ ತನ್ನ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಳು. ದ್ಯಾಮಣ್ಣನ ಮನೆಯವರು ಗಂಡನನ್ನ ಕೇಳಿದ್ರೆ ಧರ್ಮಸ್ಥಳಕ್ಕೆ (Dharmasthala) ಹೋಗಿದ್ದಾರೆಂದು ಕಥೆ ಕಟ್ಟಿದ್ದಳು. ಇದರಿಂದ ಅನುಮಾನಗೊಂಡ ದ್ಯಾಮಣ್ಣ ಸಹೋದರರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಬಳಿಕ ನೇತ್ರಾವತಿ ಸತ್ಯ ಒಪ್ಪಿಕೊಂಡಿದ್ದಾಳೆ. ಬಳಿಕ ನೇತ್ರಾವತಿ ಹಾಗೂ ಕೊಲೆ ಮಾಡಿದ ಪ್ರೀಯಕರ ಶ್ಯಾಮಣ್ಣನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

    ಇನ್ನೂ ಅಪರಿಚಿತ ಶವ ಪತ್ತೆಯಾದಾಗ ಗುರುತು ಸಿಗದ ಹಿನ್ನೆಲೆ ಕೊಪ್ಪಳ ಮುನಿರಾಬಾದ್ ಪೊಲೀಸರೇ ಶವ ಸಂಸ್ಕಾರ ಮಾಡಿದ್ರು. ಗುರುವಾರ (ಜು.31) ವಿಷಯ ತಿಳಿದ ಬಳಿಕ ದ್ಯಾಮಣ್ಣ ಕುಟುಂಬಸ್ಥರು ಶವಕ್ಕೆ ಮಣ್ಣು ಹಾಕಿ ಶಾಸ್ತ್ರ ನೆರವೇರಿಸಿದ್ದಾರೆ. ದ್ಯಾಮಣ್ಣ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಅಕ್ರಮ ಸಂಬಂಧಕ್ಕೆ ಅಡ್ಡಿ – ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೆರೆಗೆ ತಳ್ಳಿ ಕೊಂದ ಪತ್ನಿ

    ಅಕ್ರಮ ಸಂಬಂಧಕ್ಕೆ ಅಡ್ಡಿ – ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೆರೆಗೆ ತಳ್ಳಿ ಕೊಂದ ಪತ್ನಿ

    ಹಾವೇರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ ಪ್ರಿಯಕರ ಜೊತೆ ಸೇರಿ ಪತಿಯನ್ನೇ ಪತ್ನಿ ಕೆರೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ಹಾವೇರಿಯ ರಟ್ಟಿಹಳ್ಳಿ ತಾಲೂಕಿನಲ್ಲಿ ನಡೆದಿದೆ.

    ಹರಿಹರ ಮೂಲದ ಶಫಿವುಲ್ಲಾ ಅಬ್ದುಲ್ ಮಹೀಬ್ (38) ಕೊಲೆಯಾದ ಪತಿ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಪತ್ನಿ ಶಹೀನಾಬಾನು ಹಾಗೂ ಆಕೆಯ ಪ್ರಿಯಕರ ಮುಬಾರಕ್ ಖಲಂದರಸಾಬ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ತಾಯಿಯನ್ನು ಕೊಂದ ಪಾಪಿಯಿಂದ ತಂದೆಯ ಮೇಲೂ ಮೃಗೀಯ ವರ್ತನೆ – ಚರ್ಮ ಸುಲಿಯುವಂತೆ ಹಲ್ಲೆ

    ಮುಬಾರಕ್ ಖಲಂದರಸಾಬ್ ಮತ್ತು ಶಹೀನಾಬಾನು ಮಧ್ಯೆ ಅನೈತಿಕ ಸಂಬಂಧ ಇತ್ತು. ಮುಬಾರಕ್ ಖಲಂದರಸಾಬ್‌ನನ್ನು ಮದುವೆ ಆಗುವಂತೆ ಶಹೀನಾಬಾನು ಪೀಡಿಸುತ್ತಿದ್ದಳು. ನಮ್ಮಿಬ್ಬರ ಮದುವೆಗೆ ನಿನ್ನ ಪತಿ ಅಡ್ಡಿಯಾಗ್ತಾನೆ ಎಂದು ಹೇಳಿದ್ದ. ಇದನ್ನೂ ಓದಿ: 10,000 ಕೊಡ್ತೀನಿ ಬಾ – ಯುವತಿಯನ್ನು ಮಂಚಕ್ಕೆ ಕರೆದ ಕಾಮುಕ ಪ್ರಿನ್ಸಿಪಾಲ್ ಅರೆಸ್ಟ್

    ಹೀಗಾಗಿ ಇಬ್ಬರೂ ಸೇರಿ ಶಫೀವುಲ್ಲಾ ಕೊಲೆಗೆ ಸಂಚು ರೂಪಿಸಿದ್ದರು. ಬಳಿಕ ಮುಬಾರಕ್ ಖಲಂದರಸಾಬ್, ಶಫೀವುಲ್ಲಾ ಜೊತೆ ಗೆಳೆತನ ಬೆಳಸಿ ಮನೆಗೆ ಬಂದು ಹೋಗಿ ಮಾಡುತ್ತಿದ್ದ. ಜು. 27ರಂದು ಕೆರೆ ನೋಡಲು ಹೋಗೋಣ ಎಂದು ಪುಸಲಾಯಿಸಿ ಶಫೀವುಲ್ಲಾನನ್ನು ಕೆರೆ ಕಡೆ ಕರೆದುಕೊಂಡು ಹೋಗಿದ್ದ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರಳಿದ ಸಾರಿಗೆ ಬಸ್ – ಪ್ರಯಾಣಿಕರು ಸೇಫ್

    ಮದಗಮಾಸೂರು ಕೆರೆ ಬಳಿ ಎಣ್ಣೆ ಪಾರ್ಟಿ ಮಾಡಿ, ಬಳಿಕ ಶಫೀವುಲ್ಲಾನನ್ನು ಕೆರೆಗೆ ತಳ್ಳಿದರು. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಿದ್ದರು. ಮೃತದೇಹ ಪತ್ತೆಯಾದ ಬಳಿಕ, ದೇಹದಲ್ಲಿ ಗಾಯಗಳಿರುವುದು ಕಂಡು ಅನುಮಾನ ಮೂಡಿತ್ತು. ಪೊಲೀಸರು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಗಳು ಕೊಲೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇದೀಗ ಹಿರೇಕೆರೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಶ್ರದ್ಧಾ ವಾಕರ್ ಮಾದರಿ ಮಾಜಿ ಸೈನಿಕನ ಹತ್ಯೆ – ಪ್ರಿಯಕರನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ ಪತ್ನಿ

    ಶ್ರದ್ಧಾ ವಾಕರ್ ಮಾದರಿ ಮಾಜಿ ಸೈನಿಕನ ಹತ್ಯೆ – ಪ್ರಿಯಕರನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ ಪತ್ನಿ

    ಲಕ್ನೋ: 2022ರಲ್ಲಿ ದೆಹಲಿಯಲ್ಲಿ ನಡೆದಿದ್ದ ಲಿವ್‌ ಇನ್‌ ಗೆಳತಿ ಶ್ರದ್ಧಾವಾಕರ್‌ (Shraddha walkar) ಹತ್ಯೆ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಅದೇ ರೀತಿಯ ಪ್ರಕರಣ ಉತ್ತರ ಪ್ರದೇಶದ (Uttar Pradesh) ಬಾಲಿಯಾ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಮಾಜಿ ಸೈನಿಕ (Ex-Army Soldier) ಪತಿಯನ್ನ ಹತ್ಯೆ ಮಾಡಿದ್ದಲ್ಲದೇ ದೇಹವನ್ನ 6 ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 50 ವರ್ಷದ ಮಹಿಳೆ, ಆಕೆಯ ಪ್ರಿಯಕರ ಮತ್ತು ಇಬ್ಬರು ಸಹಚರರನ್ನ ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಏನಿದು ಕೇಸ್‌?
    ಉತ್ತರ ಪ್ರದೇಶದ ಬಹದ್ದೂರ್‌ ಪುರ ನಿವಾಸಿಯಾಗಿರುವ ಆರೋಪಿ ಮಹಿಳೆ ಮಾಯಾದೇವಿ ಪ್ರಿಯಕರ ಅನಿಲ್‌ ಯಾದವ್‌ ಜೊತೆ ಸೇರಿ ತನ್ನ ಮಾಜಿ ಸೈನಿಕ ಪತಿ ದೇವೇಂದ್ರ ಕುಮಾರ್‌ನನ್ನ ಹತ್ಯೆ ಮಾಡಿದ್ದಾಳೆ. ಈ ಪ್ರಕರಣದಲ್ಲಿ ಇವರಿಬ್ಬರಿಗೆ ಸಹಾಯ ಮಾಡಿದ್ದಕ್ಕಾಗಿ ಸತೀಶ್ ಯಾದವ್ ಮತ್ತು ಮಿಥಿಲೇಶ್ ಇಬ್ಬರು ಸಹಚರರನ್ನೂ ಬಂಧಿಸಲಾಗಿದೆ.

    ಏನಾಗಿತ್ತು?
    ಪೊಲೀಸರ ಮಾಹಿತಿ ಪ್ರಕಾರ, ಕಳೆದ ಮೇ 10 ರಂದು ಉತ್ತರ ಪ್ರದೇಶದ ಖರೀದ್‌ ಗ್ರಾಮದಲ್ಲಿ ಕತ್ತರಿಸಿದ ಶವ ಪತ್ತೆಯಾಗಿತ್ತು. ಒಂದು ಕಡೆ ಕೈ-ಕಾಲುಗಳು ತುಂಡಾಗಿ ಬಿದ್ದಿರುವುದು ಕಂಡುಬಂದಿತ್ತು. 2 ದಿನಗಳ ನಂತರ ಹತ್ತಿರದ ಬಾವಿಯಲ್ಲಿ ತಲೆ, ಕೈಕಾಲುಗಳಿಲ್ಲದ ದೇಹ ಪತ್ತೆಯಾಗಿತ್ತು. ಆದ್ರೆ ಮೃತ ವ್ಯಕ್ತಿಯ ತಲೆ ಇನ್ನೂ ಪತ್ತೆಯಾಗಿಲ್ಲ. ಅದಕ್ಕಾಗಿ ಡೈವರ್‌ಗಳಿಂದ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

    ಇತ್ತ ಪತಿಯನ್ನ ಕೊಂದಿದ್ದ ಮಾಯಾದೇವಿ ಠಾಣೆಗೆ ಬಂದು ನಾಪತ್ತೆ ಆಗಿದ್ದಾರೆಂದು ದೂರು ನೀಡಿದ್ದಳು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಪ್ರಾಥಮಿಕ ವಿಚಾರಣೆ ವೇಳೆ ಮಾಯಾದೇವಿ, ನನ್ನ ಪತಿ ಮಗಳನ್ನು ಕರೆದುಕೊಂಡು ಬರಲು ಬಿಹಾರದ ಬಕ್ಸಾರ್ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದರು, ವಾಪಸ್‌ ಮನೆಗೆ ಬರಲಿಲ್ಲ. ಅವರ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿದೆ ಅಂತ ಕಥೆ ಕಟ್ಟಿದ್ದಳು. ಆದ್ರೆ ಮೃತದೇಹ ಪತ್ತೆಯಾದ ನಂತರ ಅನುಮಾನಗೊಂಡ ಪೊಲೀಸರು ಮತ್ತೆ ಪತ್ನಿಯನ್ನ ವಿಚಾರಣೆಗೆ ಒಳಪಡಿಸಿದಾಗ ನಾಟಕ ಬಯಲಾಯಿತು.

    ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಲ್ಲದೇ ಪತಿಯ ತಲೆಯನ್ನ ಘಾಘರ್‌ ನದಿಯಲ್ಲಿ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

  • ಮದುವೆಗೆ ನಿರಾಕರಿಸಿದಕ್ಕೆ ಯುವತಿಗೆ ಚಾಕು ಇರಿದ ಪ್ರಿಯಕರ

    ಮದುವೆಗೆ ನಿರಾಕರಿಸಿದಕ್ಕೆ ಯುವತಿಗೆ ಚಾಕು ಇರಿದ ಪ್ರಿಯಕರ

    ವಿಜಯನಗರ: ಯುವತಿ ಮದುವೆಯಾಗಲು ನಿರಾಕರಿಸಿದಕ್ಕೆ ಪ್ರಿಯಕರ ಜನನಿಬಿಡ ಸ್ಥಳದಲ್ಲಿಯೇ ಚಾಕು ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆಯ ನಗರಸಭೆ ಕಾರ್ಯಾಲಯ ಎದುರುಗಡೆ ನಡೆದಿದೆ.

    ಭಾರತಿ ಶಾವಿ(26) ಹಲ್ಲೆಗೊಳಗಾದ ಯುವತಿ. ವಿಜಯಭಾಸ್ಕರ್(26) ಹಲ್ಲೆ ಮಾಡಿದ ಪ್ರೇಮಿ. ಇದನ್ನೂ ಓದಿ: ನಾಪತ್ತೆಯಾಗಿದ್ದ ಪಿಯು ಪ್ರೇಮಿಗಳಿಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

    ಕಳೆದ 10 ವರ್ಷಗಳಿಂದ ಯುವತಿ ಭಾರತಿ ಹೊಸಪೇಟೆಯಲ್ಲಿ ತಂದೆ-ತಾಯಿ ಜೊತೆ ವಾಸವಿದ್ದಳು. 5 ವರ್ಷಗಳ ಹಿಂದೆ ಯುವಕನ ಜೊತೆ ಫೇಸ್‌ಬುಕ್‌ನಲ್ಲಿ ಪರಿಚಯ ಆಗಿ ಇಬ್ಬರಿಗೂ ಲವ್ ಆಗಿತ್ತು. ಆ ಬಳಿಕ ಯುವತಿ ಆಂಧ್ರದ ಸ್ವಗ್ರಾಮಕ್ಕೆ ಹೋದಾಗಲೆಲ್ಲಾ ತೀರಾ ಸಲುಗೆಯಿಂದ ಇರ್ತಿದ್ರು. ಇತ್ತೀಚೆಗೆ ಯುವತಿ ಯುವಕನಿಂದ ಅಂತರ ಕಾಯ್ದುಕೊಂಡಿದ್ದಳು ಎನ್ನಲಾಗಿದೆ. ಅಂತರ ಕಾಯ್ದುಕೊಂಡಿದ್ದಲ್ಲದೇ ಭಾರತಿ, ವಿಜಯಭಾಸ್ಕರ ಪ್ರೀತಿ ನಿರಾಕರಿಸಿದ್ದಳು.

    ಯುವತಿಯು ಮದುವೆಗೆ ನಿರಾಕರಿಸಿದಕ್ಕೆ ಆಂಧ್ರಪ್ರದೇಶದ (AndhraPradesh) ನಂದ್ಯಾಲ ಗ್ರಾಮದಿಂದ ಹೊಸಪೇಟೆ ನಗರಕ್ಕೆ ಆಗಮಿಸಿದ ಯುವಕ ಆಕೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಯುವತಿಯು ಕೆಲಸಕ್ಕೆ ತೆರಳುತ್ತಿದ್ದಾಗ ಚಾಕುವಿನಿಂದ ಆಕೆಯ ಹೊಟ್ಟೆ ಹಾಗೂ ಕೈಗೆ ಇರಿದಿದ್ದಾನೆ. ಇದನ್ನೂ ಓದಿ: ಪ್ರಿಯಾಂಕಾ Vs ಬಾನ್ಸುರಿ ಸ್ವರಾಜ್‌ – ʼNational Herald Ki Lootʼ ಕೈಚೀಲ ಹೊತ್ತು ಸಭೆಗೆ ಹಾಜರ್‌

    ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಪೇಟೆ ಪಟ್ಟಣ ಠಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಪತಿಯನ್ನು ಕೊಂದು ಪೀಸ್ ಪೀಸ್ ಮಾಡಿ ಡ್ರಮ್‌ನಲ್ಲಿ ಮುಚ್ಚಿಟ್ಟ ಪತ್ನಿ

    ಪತಿಯನ್ನು ಕೊಂದು ಪೀಸ್ ಪೀಸ್ ಮಾಡಿ ಡ್ರಮ್‌ನಲ್ಲಿ ಮುಚ್ಚಿಟ್ಟ ಪತ್ನಿ

    – ಪತ್ನಿ, ಪ್ರಿಯಕರ ಅರೆಸ್ಟ್

    ಲಕ್ನೋ: ಪತ್ನಿ ಆಕೆಯ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು, ದೇಹವನ್ನು ಪೀಸ್ ಪೀಸ್ ಮಾಡಿ, ಡ್ರಮ್‌ನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಿಟ್ಟಿರುವ ಘಟನೆ ಉತ್ತರಪ್ರದೇಶದ (Uttar Pradesh) ಬ್ರಹ್ಮಪುರಿಯ ಇಂದಿರಾ ನಗರದಲ್ಲಿ ನಡೆದಿದೆ.

    ಖಾಸಗಿ ಹಡಗು ಕಂಪನಿಯ ಉದ್ಯೋಗಿ ಸೌರಭ್ ರಜಪೂತ್(29) ಕೊಲೆಯಾದ ಪತಿ. ಮೃತ ಸೌರಭ್ ಮಾ. 4ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಪೊಲೀಸರು ಅನುಮಾನದಿಂದ ಪತ್ನಿ ಮುಸ್ಕಾನ್(27)ನನ್ನ ವಿಚಾರಣೆ ನಡೆಸಿದ್ದರು. ಈ ವೇಳೆ ಆಕೆ ಪ್ರಿಯಕರ ಸಾಹಿಲ್(25) ಜೊತೆ ಸೇರಿ ಸೌರಭ್‌ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ರಂಜಾನ್‌ ಹಬ್ಬದ ಸಮಯದಲ್ಲಿ 1 ತಿಂಗಳು ಉಪವಾಸ ಮಾಡುವುದೇಕೆ? ಖರ್ಜೂರ ತಿಂದು ಉಪವಾಸ ಮುರಿಯುವುದರ ಹಿಂದಿನ ಕಾರಣವೇನು?

    ಮಾ. 4ರಂದು ಸೌರಭ್‌ನನ್ನ ಮುಸ್ಕಾನ್ ಹಾಗೂ ಸಾಹಿಲ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ನಂತರ ಆತನ ದೇಹವನ್ನು ಪೀಸ್ ಪೀಸ್ ಆಗಿ ಕತ್ತರಿಸಿ, ಡ್ರಮ್‌ನೊಳಗೆ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.

    ಕೊಲೆ ಮಾಡಿದ ಬಳಿಕ ಮುಸ್ಕಾನ್, ಸೌರಭ್‌ನ ಫೋನ್‌ನಿಂದ ಕುಟುಂಬಸ್ಥರಿಗೆ ಮೆಸೇಜ್ ಕಳುಹಿಸುವ ಮೂಲಕ ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನಿದ್ದಳು. ಬಳಿಕ ಆಕೆ ಪ್ರಿಯಕರ ಸಾಹಿಲ್ ಜೊತೆ ಸುತ್ತಾಡಲು ತೆರಳಿದ್ದಳು. ಸದ್ಯ ಆರೋಪಿಗಳಾದ ಮುಸ್ಕಾನ್ ಹಾಗೂ ಸಾಹಿಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್- 286 ದಿನಗಳ ಅಂತರಿಕ್ಷ ವಾಸ ಅಂತ್ಯ

    ಸೌರಭ್ 2016ರಲ್ಲಿ ಗೌರಿಪುರದ ಮುಸ್ಕಾನ್ ರಸ್ತೋಗಿಯನ್ನು ಪ್ರೇಮ ವಿವಾಹವಾಗಿದ್ದರು. ಕುಟುಂಬಸ್ಥರು ಇವರಿಬ್ಬರ ವಿವಾಹದಿಂದ ಅಸಮಾಧಾನಗೊಂಡಿದ್ದರಿಂದ ಸೌರಭ್ ಹಾಗೂ ಮುಸ್ಕಾನ್, 3 ವರ್ಷದ ಪುತ್ರಿಯೊಂದಿಗೆ ಇಂದಿರಾನಗರದ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಚಿಕ್ಕಬಳ್ಳಾಪುರ| ಪ್ರಿಯಕರನ ಜೊತೆಯಲ್ಲಿದ್ದ 8 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು

    ಚಿಕ್ಕಬಳ್ಳಾಪುರ| ಪ್ರಿಯಕರನ ಜೊತೆಯಲ್ಲಿದ್ದ 8 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು

    ಚಿಕ್ಕಬಳ್ಳಾಪುರ: ಪ್ರಿಯಕರನ ಜೊತೆಯಲ್ಲಿದ್ದ 8 ತಿಂಗಳ ಗರ್ಭಿಣಿ (Pregnant) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಗುಂತಪನಹಳ್ಳಿ (Guntapanahalli) ಗ್ರಾಮದ ಬಳಿ ನಡೆದಿದೆ.

    ಚಿಕ್ಕಬಳ್ಳಾಪುರದ ಅಂಬೇಡ್ಕರ್ ನಗರದ ನಿವಾಸಿ ಅನುಷಾ (28) ಮೃತ ಗರ್ಭಿಣಿ ಮಹಿಳೆ. ಹೊಸಕೋಟೆ ಮೂಲದ ವ್ಯಕ್ತಿಯೊಂದಿಗೆ 08 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಒಂದು ಹೆಣ್ಣು ಮಗು ಸಹ ಇತ್ತು. ಆದರೆ ಗಂಡನಿಗೆ ಪ್ಯಾರಾಲಿಸಿಸ್ ಆದ ನಂತರ ಗಂಡನನ್ನು ತೊರದು ತವರು ಮನೆಗೆ ಬಂದು ವಾಸವಾಗಿದ್ದಳು. ಆಗ ಕೂಲಿ ಮಾಡುತ್ತಿದ್ದ ಅನುಷಾಳಿಗೆ ಗುಂತಪನಹಳ್ಳಿ ಗ್ರಾಮದ ಪವನ್ ಪರಿಚಯವಾಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದು ಗರ್ಭಿಣಿ ಸಹ ಆಗಿದ್ದಾಳೆ. ಇದರಿಂದ ತನ್ನನ್ನ ಮದುವೆಯಾಗುವಂತೆ ಅನುಷಾ ಒತ್ತಾಯಿಸಿ ಪವನ್ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಬೇರೆ ಬೇರೆ ಜಾತಿ ಎರಡನೇ ಮದುವೆ ಅಂತ ಪವನ್ ಮನೆಯವರು ಇಬ್ಬರಿಗೂ ಬೈದು ಮನೆಗೆ ಕರೆದುಕೊಂಡಿಲ್ಲ. ಇದನ್ನೂ ಓದಿ: ಇದು ಮೋಸದ ಸರ್ಕಾರ: ಬಸ್‌ ಟಿಕೆಟ್‌ ದರ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶ

    15 ದಿನಗಳ ಹಿಂದೆ ಸಹ ಪವನ್ ಊಟದ ಜೊತೆ ಇಲಿ ಪಾಷಾಣ ತಿನ್ನಿಸಿ ಕೊಲೆ ಮಾಡಲು ಯತ್ನಿಸಿದ್ದ ಎಂದು ಆಕೆ ಆರೋಪಿಸಿದ್ದಳು. ಪೊಲೀಸ್ ಠಾಣೆಗೆ ಪವನ್ ವಿರುದ್ಧ ದೂರು ನೀಡಿದ್ದಳು. ತದನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದು ಇಬ್ಬರು ಸಹ ಜೊತೆಯಾಗಿದ್ದಾರೆ. ಕಳೆದ ರಾತ್ರಿ ಗುಂತಪನಹಳ್ಳಿ ಗ್ರಾಮದ ಬಳಿ ಹೊಂಗೆ ಮರದಡಿ ಮದ್ಯಪಾನ ಮಾಡಿ ಮಲಗಿದ್ದರಂತೆ. ಬೆಳಗ್ಗೆ ಎದ್ದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಿಯಕರ ಪವನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇನ್ನೂ ಪೊಲೀಸರು ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: Mandya| ನಡುರಸ್ತೆಯಲ್ಲೇ ಎಎಸ್‌ಐ ಮೇಲೆ ಹಲ್ಲೆ – ಆರೋಪಿ ಅರೆಸ್ಟ್

  • ಅನೈತಿಕ ಸಂಬಂಧ; ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಮುಗಿಸಿದ ಪತ್ನಿ

    ಅನೈತಿಕ ಸಂಬಂಧ; ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಮುಗಿಸಿದ ಪತ್ನಿ

    – ಆರೋಪಿಗಳು ಅರೆಸ್ಟ್

    ಹಾವೇರಿ: ಪ್ರಿಯಕರನೊಂದಿಗೆ ಅನೈತಿಕ ಸಂಬಂಧ (Immoral relationship) ಹೊಂದಿದ್ದ ಪತ್ನಿ ತನ್ನ ಗಂಡನ ಪ್ರಾಣವನ್ನೇ ತೆಗೆದ ಘಟನೆ ಹಾವೇರಿ (Haveri) ಜಿಲ್ಲೆ ಹಿರೆಕೆರೂರು (Hirekerur) ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.

    ಸಾಧಿಕ್ ಮತ್ತೂರ್ (30) ಕೊಲೆಯಾದ ಪತಿ. ಚಿಕ್ಕೇರೂರು ಗ್ರಾಮದ ಸಾಧಿಕ್ ಮತ್ತೂರು ಜೀವನೋಪಾಯಕ್ಕಾಗಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸಾಧಿಕ್ ನಾಲ್ಕು ವರ್ಷದ ಹಿಂದೆ ಸಲ್ಮಾ ಎಂಬ ಸ್ವಗ್ರಾಮದ ಯುವತಿಯನ್ನೇ ಮದುವೆಯಾಗಿದ್ದ. ಪ್ರಾರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ನಡುವೆ ಕೌಟುಂಬಿಕ ಕಲಹ ಪ್ರಾರಂಭವಾಗಿತ್ತು. ಆ ಕೌಟುಂಬಿಕ ಕಲಹದ ಹಿಂದೆ ಇದ್ದಿದ್ದು ಅನೈತಿಕ ಸಂಬಂಧ. ಸಲ್ಮಾ, ಜಾಫರ್ ಎಂಬ 28 ವರ್ಷದ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇಬ್ಬರು ಸೇರಿ ಗಂಡನನ್ನು ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಕನ್ನಡದಲ್ಲೇ ರೈಲ್ವೆ ಪರೀಕ್ಷೆ: ಸೋಮಣ್ಣ ಘೋಷಣೆ

    ಕೊಲೆಯಾದ ಪತಿ

    ಸಾಧಿಕ್‌ನನ್ನು ಮದುವೆ ಆಗುವ ಮೊದಲೇ ಜಾಫರ್ ಹಾಗೂ ಸಲ್ಮಾ ನಡುವೆ ಪ್ರೇಮ ಕಹಾನಿ ನಡೆದಿತ್ತಂತೆ. ಆದರೆ ಅದನ್ನು ಗುಟ್ಟಾಗಿಯೇ ಇಟ್ಟಿದ್ದ ಸಲ್ಮಾ ಮದುವೆ ಆದ ಬಳಿಕವೂ ಪ್ರಿಯಕರ ಜಾಫರ್ ಜೊತೆ ಸರಸ ಸಲ್ಲಾಪ ನಡೆಸಿದ್ದಳು. ಹೆಂಡತಿಯ ಕಾಮಪುರಾಣ ಗೊತ್ತಾಗಿ ಪತಿ ಸಾಧಿಕ್ ಎಚ್ಚರಿಕೆ ನೀಡಿದ್ದ. ನೀವೇನಾದರೂ ಈ ಸಂಬಂಧ ಮುಂದುವರಿಸಿದರೆ ನಿಮ್ಮಿಬ್ಬರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನನೊಂದು ಎಚ್ಚರಿಕೆ ಕೂಡಾ ನೀಡಿದ್ದ. ಹೆಂಡತಿ ಬಳಿ ಇದ್ದ ಮೊಬೈಲ್ ಕೂಡಾ ಕಸಿದುಕೊಂಡಿದ್ದ. ಇದನ್ನೂ ಓದಿ: ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಭದ್ರಕೋಟೆಯೇ ಛಿದ್ರ – ತುರ್ತು ಸಭೆಗೆ ವಿಶ್ವಸಂಸ್ಥೆ ತಯಾರಿ

    ಇಬ್ಬರ ಹೆಸರು ಬರೆದಿಟ್ಟು ಸತ್ತರೆ ನಾವು ಜೈಲುಪಾಲಾಗಬಹುದು ಎಂದು ಯೋಚಿಸಿ ಸಲ್ಮಾ ಪ್ರಿಯಕರನ ಜೊತೆ ಸೇರಿ ಗಂಡನ ಸಾವಿಗೆ ಮುಹೂರ್ತ ಫಿಕ್ಸ್ ಮಾಡಿದ್ದಳು. ಇದೀಗ ಪೊಲೀಸ್ ತನಿಖೆಯ ಬಳಿಕ ಪತ್ನಿ ಹಾಗೂ ಪ್ರಿಯಕರ ಜೈಲು ಪಾಲಾಗಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಆರ್‌.ಅಶೋಕ್‌ ವಿರುದ್ಧ ಸಚಿವ ಪರಮೇಶ್ವರ್‌ ನೂರಾರು ಕೋಟಿ ಭೂ ಹಗರಣ ಬಾಂಬ್‌

  • ಪ್ರೇಯಸಿಯನ್ನೇ ಬರ್ಬರವಾಗಿ ಇರಿದು ಕೊಂದ ಪ್ರಿಯಕರ – ಶವವನ್ನು ಪೊದೆಗೆ ಎಸೆದು ಎಸ್ಕೇಪ್

    ಪ್ರೇಯಸಿಯನ್ನೇ ಬರ್ಬರವಾಗಿ ಇರಿದು ಕೊಂದ ಪ್ರಿಯಕರ – ಶವವನ್ನು ಪೊದೆಗೆ ಎಸೆದು ಎಸ್ಕೇಪ್

    ಮುಂಬೈ: 20ರ ಹರೆಯದ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ (Lover) ಬರ್ಬರವಾಗಿ ಇರಿದು ಕೊಂದು, ಆಕೆಯ ಶವವನ್ನು ರೈಲ್ವೆ ನಿಲ್ದಾಣದ (Railway Station) ಬಳಿಯ ಪೊದೆಯಲ್ಲಿ ಎಸೆದಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.

    ಘಟನೆಯ ಕುರಿತು ಉಪ ಪೊಲೀಸ್ ಆಯುಕ್ತ (ನವಿ ಮುಂಬೈ) ವಿವೇಕ್ ಪನ್ಸಾರೆ ಪ್ರತಿಕ್ರಿಯಿಸಿ, ಉರಾನ್ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ ಎಂದು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಆಕೆಯ ಮೃತದೇಹ ಅನೇಕ ಗಾಯದ ಗುರುತುಗಳು ಮತ್ತು ಇರಿತದ ಗಾಯಗಳನ್ನು ಒಳಗೊಂಡಿದೆ. ಇದು ಆಕೆಯನ್ನು ಅತ್ಯಂತ ಬರ್ಬರವಾಗಿ ಹತ್ಯೆಗೈಯಲಾಗಿದೆ ಎಂದು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಟಿಕೆಟ್, OTT ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್‌ ವಿಧಿಸಲು ತೀರ್ಮಾನ – ಫಿಲ್ಮ್‌ ಚೇಂಬರ್‌ ಅಸಮಾಧಾನ

    ಕೊಲೆಯಾದ ಯುವತಿಯನ್ನು ಯಶಶ್ರೀ ಶಿಂಧೆ ಎಂದು ಗುರುತಿಸಲಾಗಿದ್ದು, ಆಕೆ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಾಗಿತ್ತು. ಈಕೆ ಊರನ್ ನಿವಾಸಿಯಾಗಿದ್ದು, ಸುಮಾರು 25 ಕಿ.ಮೀ ದೂರದ ಬೇಲಾಪುರದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕಬಿನಿ, ಕೆಆರ್‌ಎಸ್‌ ಜಲಾಶಯಗಳು ಭರ್ತಿ – ಸೋಮವಾರ ಸಿದ್ದರಾಮಯ್ಯ, ಡಿಕೆಶಿ ಬಾಗಿನ ಅರ್ಪಣೆ

    ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೀತಿ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಯ ಬಳಿಕ ಪ್ರಿಯಕರ ಕೂಡ ನಾಪತ್ತೆಯಾಗಿದ್ದಾನೆ. ಈ ಕುರಿತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಅಲ್ಲದೇ ಆರೋಪಿ ಪ್ರಿಯಕರನ ಪತ್ತೆಗೆ ಐದು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ – ಹಿಂದೂ ಸಂಘಟನೆಗಳ ಒಕ್ಕೂಟದಿಂದ ಕಮಿಷನರ್‌ಗೆ ದೂರು

  • 3 ಬಾರಿ ಗರ್ಭಪಾತ, ಬೇರೆ ಹೆಣ್ಮಕ್ಕಳ ಜೀವನ ಹಾಳು ಮಾಡ್ಬೇಡ- ಗೆಳೆಯನ ಮರ್ಮಾಂಗಕ್ಕೇ ವೈದ್ಯೆ ಕತ್ತರಿ!

    3 ಬಾರಿ ಗರ್ಭಪಾತ, ಬೇರೆ ಹೆಣ್ಮಕ್ಕಳ ಜೀವನ ಹಾಳು ಮಾಡ್ಬೇಡ- ಗೆಳೆಯನ ಮರ್ಮಾಂಗಕ್ಕೇ ವೈದ್ಯೆ ಕತ್ತರಿ!

    ಪಾಟ್ನಾ: ವೈದ್ಯೆಯೊಬ್ಬರು ತನ್ನ ಪ್ರಿಯತಮನ ಮರ್ಮಾಂಗವನ್ನೇ ಕತ್ತರಿಸಿದ ಅಮಾನವೀಯ ಘಟನೆಯೊಂದು ಬಿಹಾರದ (Bihar) ಸರನ್ ಜಿಲ್ಲೆಯಲ್ಲಿ ನಡೆದಿದೆ.

    ಪ್ರಕರಣ ಸಂಬಂಧ ವೈದ್ಯೆಯನ್ನು (Woman Doctor) ಬಂಧಿಸಲಾಗಿದೆ. ವಿಚಾರಣೆಯ ವೇಳೆ ಆಕೆ ಪ್ರಿಯಕರ ತನಗೆ ಅನ್ಯಾಯ ಮಾಡಿದ್ದರಿಂದ ನಾನು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾಳೆ. ಘಟನೆಯ 2 ವೀಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ವೈರಲ್‌ ವೀಡಿಯೋದಲ್ಲಿ ವೈದ್ಯೆ, ಆತ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಮೂರು ಬಾರಿ ನಾನು ಗರ್ಭಪಾತಕ್ಕೆ ಒಳಗಾಗಬೇಕಾಯಿತು ಎಂದು ಹೇಳಿದ್ದಾಳೆ. ಅಲ್ಲದೇ ಮರ್ಮಾಂಗ ಕತ್ತರಿಸಿದ್ದು ಯಾಕೆ ಎಂದು ಕೇಳಿದಾಗ, ಅವನು ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಕೋಪದಲ್ಲಿ ಈ ಕೃತ್ಯ ಎಸಗಿದ್ದೇನೆ. ಸಾಯಿಸಬೇಕು ಎಂದು ಮಾಡಿಲ್ಲ. ಅಲ್ಲದೇ ಮುಂದೆ ಬೇರೆ ಯಾವುದೇ ಯುವತಿಗೂ ಇಂತಹ ದ್ರೋಹ ಅವನು ಎಸಗಬಾರದು ಎಂದು ನಾನು ಬಯಸುತ್ತೇನೆ ಎಂದು ಹೇಳುತ್ತಿರುವುದನ್ನು ಗಮನಿಸಬಹುದು.

    ಇನ್ನೊಂದು ವೀಡಿಯೋದಲ್ಲಿ ವೈದ್ಯೆ ಹಾಗೂ ಸಂತ್ರಸ್ತ ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ನೋವಿನಿಂದ ಅಳುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಮಗುವಿಗೆ ಔಷಧಿ ತರಲು ತೆರಳಿದ್ದ ಮಹಿಳೆಯನ್ನು ನುಂಗಿದ ಹೆಬ್ಬಾವು!

    ವೈದ್ಯೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ದಲ್ಲದೇ ಬಳಿಕ ಶೌಚಾಲಯದಲ್ಲಿ ಫ್ಲಶ್ ಮಾಡಿದ್ದಾಳೆ. ಸಂತ್ರಸ್ತ ಮಧುರಾ ಬ್ಲಾಕ್‌ನ ವಾರ್ಡ್‌ ನಂ.12ರ ಕೌನ್ಸಿಲರ್‌ ಆಗಿದ್ದು, ಸದ್ಯ ಪಾಟ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (PMCH) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.