Tag: ಪ್ರಿನ್ಸಿಪಾಲ್

  • ಗೂಂಡಾಗಿರಿ ಮಾಡಿದ ವಿದ್ಯಾರ್ಥಿಗೆ ಬುದ್ಧಿ ಹೇಳಿದ ಪ್ರಿನ್ಸಿಪಾಲ್ ವಿರುದ್ಧವೇ ಪೋಷಕರಿಂದ ದೂರು!

    ಗೂಂಡಾಗಿರಿ ಮಾಡಿದ ವಿದ್ಯಾರ್ಥಿಗೆ ಬುದ್ಧಿ ಹೇಳಿದ ಪ್ರಿನ್ಸಿಪಾಲ್ ವಿರುದ್ಧವೇ ಪೋಷಕರಿಂದ ದೂರು!

    -ವಿದ್ಯಾರ್ಥಿಯ ಪುಂಡಾಟಿಕೆ ಸಿಸಿ ಕ್ಯಾಮರಾದಲ್ಲಿ ಸೆರೆ!

    ಬಳ್ಳಾರಿ: ತರಗತಿಯಲ್ಲಿ ರೌಡಿಯಂತೆ ವರ್ತನೆ ಮಾಡಿದ ವಿದ್ಯಾರ್ಥಿಯನ್ನು ಥಳಿಸಿದ್ದಕ್ಕೆ ಪ್ರಿನ್ಸಿಪಾಲ್ ವಿರುದ್ಧವೇ ಪೋಷಕರು ಪೊಲೀಸರಿಗೆ ದೂರು ನೀಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಸಹಪಾಠಿಗಳ ಮೇಲೆ ಹಲ್ಲೆ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಮಾಸ್ಟರ್‌ಗೆ ಸಿಟ್ಟು ಬಂದಿದೆ. ಜಿಲ್ಲೆಯ ಬ್ರಹ್ಮ ಚೈತ್ಯನ್ಯ ಶಾಲೆಯ 8 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ತರಗತಿಯಲ್ಲಿನ ಇತರೆ ವಿಧ್ಯಾರ್ಥಿಗಳ ಮೇಲೆ ನಿತ್ಯ ಹಲ್ಲೆ ಮಾಡುತ್ತಿದ್ದ. ವಿದ್ಯಾರ್ಥಿಯ ಈ ಪುಂಡಾಟಿಕೆಯನ್ನು ಪ್ರಶ್ನೆ ಮಾಡಿದಕ್ಕೆ ವಿದ್ಯಾರ್ಥಿಯ ಪೋಷಕರು ಇದೀಗ ಪ್ರಿನ್ಸಿಪಾಲ್ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಖಾಸಿಂ ರಜಾಕ್ ಮಾಡಿದ ಪುಂಡಾಟಿಕೆ ಶಾಲೆಯಲ್ಲಿದ್ದ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಇದನ್ನು ಗಮನಿಸಿದ ಶಾಲೆಯ ಶಿಕ್ಷಕರು ಹಾಗೂ ಪ್ರಿನ್ಸಿಪಾಲ್ ವಿದ್ಯಾರ್ಥಿಗೆ ಸ್ವಲ್ಪ ಹೆಚ್ಚು ಎನ್ನುವಂತೆ ಥಳಿಸಿ ಬುದ್ಧಿ ಹೇಳಿದರು. ಇದನ್ನೇ ತಪ್ಪಾಗಿ ತಿಳಿದ ಪೋಷಕರು ಪೊಲೀಸ್ ಠಾಣೆಯ ಮೇಟ್ಟಿಲೇರಿದ ನಂತರ ಪ್ರಿನ್ಸಿಪಾಲ್ ವಿದ್ಯಾರ್ಥಿಯ ಪುಂಡಾಟಿಕೆಗೆ ಬುದ್ಧಿ ಹೇಳಿದ್ದೆ ತಪ್ಪಾಯ್ತು ಅಂತಿದ್ದಾರೆ.

    ವಿದ್ಯಾರ್ಥಿಗೆ ಥಳಿಸಿದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪ್ರಿನ್ಸಿಪಾಲ್ ವಿದ್ಯಾರ್ಥಿಯ ಪುಂಡಾಟಿಕೆಯ ವಿಡಿಯೋ ನೋಡಿದ ನಂತರ ಪೋಷಕರು ಇದೀಗ ರಾಜಿ ಸಂಧಾನ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10ನೇ ತರಗತಿಯಿಂದ ಹೊರಹಾಕಿದ್ದಕ್ಕೆ ವಿದ್ಯಾರ್ಥಿಯಿಂದ ಪ್ರಾಂಶುಪಾಲರ ಮೇಲೆ ಗುಂಡೇಟು

    10ನೇ ತರಗತಿಯಿಂದ ಹೊರಹಾಕಿದ್ದಕ್ಕೆ ವಿದ್ಯಾರ್ಥಿಯಿಂದ ಪ್ರಾಂಶುಪಾಲರ ಮೇಲೆ ಗುಂಡೇಟು

    ಲಕ್ನೋ: ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ತರಗತಿಯಿಂದ ಹೊರಹಾಕಿದ್ದಕ್ಕೆ ಪ್ರಿನ್ಸಿಪಾಲ್ ಮೇಲೆ ಶೂಟ್ ಮಾಡಿ ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.

    ವಿದ್ಯಾರ್ಥಿಯ ವರ್ತನೆಯನ್ನು ತಾಳಲಾರದೇ ಪ್ರಿನ್ಸಿಪಾಲ್ ಆತನನ್ನು ಶಾಲೆಯಿಂದ ಹೊರಹಾಕಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿ ಪ್ರಿನ್ಸಿಪಾಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲು ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಬುಧವಾರ ಬೆಳಗ್ಗೆ ಘಟನೆ ನಡೆದಿದ್ದು, ಆರೋಪಿ 17 ವರ್ಷದ ಬಾಲಕನಾಗಿದ್ದು, 15 ದಿನಗಳ ಹಿಂದೆ ಈ ಖಾಸಗಿ ಶಾಲೆಗೆ ಸೇರಿಕೊಂಡಿದ್ದ.

    ಈ ಘಟನೆಯನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು, ಆ ಬಾಲಕ ಬುಧವಾರ ಬೆಳಿಗ್ಗೆ ತನ್ನ ತಾಯಿಯೊಂದಿಗೆ ಶಾಲೆಗೆ ಬಂದು ಮರಳಿ ಶಾಲೆಗೆ ಬರಲು ಪ್ರಿನ್ಸಿಪಾಲರ ಬಳಿ ಮನವಿ ಮಾಡಿಕೊಂಡಿದ್ದಾನೆ. ಆದರೆ ಅವರು ಒಪ್ಪದಿದ್ದಾಗ ಮನೆಗೆ ತೆರಳುತ್ತಾನೆ. ಬಳಿಕ ಮಧ್ಯಾಹ್ನ 12ಕ್ಕೆ ಮರಳಿ ಪಿಸ್ತೂಲ್ ನೊಂದಿಗೆ ಶಾಲೆಗೆ ಬಂದು ಶೂಟ್ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

    ಪ್ರಾಂಶುಪಾಲರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಯ ಮೇಲೆ ಐಪಿಸಿ ಸೆಕ್ಷನ್ 307 (ಕೊಲೆ) ಅಡಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೀಚರ್ಸ್ ಡೇ ದಿನದಂದು ಜಮಖಂಡಿ ಪ್ರಿನ್ಸಿಪಾಲ್ ಡಾನ್ಸ್- ವಿಡಿಯೋ ಫುಲ್ ವೈರಲ್

    ಟೀಚರ್ಸ್ ಡೇ ದಿನದಂದು ಜಮಖಂಡಿ ಪ್ರಿನ್ಸಿಪಾಲ್ ಡಾನ್ಸ್- ವಿಡಿಯೋ ಫುಲ್ ವೈರಲ್

    ಬಾಗಲಕೋಟೆ: ಶಿಕ್ಷಕರ ದಿನಾಚರಣೆಯಂದು ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಗಳ ಎದುರಿಗೇ ಸಖತ್ ಸ್ಟೆಪ್ ಹಾಕಿ ಫುಲ್ ಫೇಮಸ್ ಆಗಿದ್ದಾರೆ.

    ಜಿಲ್ಲೆಯ ಜಮಖಂಡಿ ನಗರದ ಬಾಲಕಿಯರ ಸರ್ಕಾರಿ ಪಿಯುಸಿ ಕಾಲೇಜು ಪ್ರಾಂಶುಪಾಲರಾದ ಹೆಚ್ ಎಲ್ ಶೇಗುಣಶಿ ಎಂಬವರು ಕನ್ನಡ ಚೌಕ ಸಿನಿಮಾದ `ಅಲ್ಲಾಡ್ಸು.. ಅಲ್ಲಾಡ್ಸು..’ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಇದನ್ನು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಒಂದು ವರ್ಷದ ನಂತರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕಳೆದ ವರ್ಷ ಶಿಕ್ಷಕರ ದಿನಾಚರಣೆ ವೇಳೆ ಟೀಚಿಂಗ್ ಡಯಾಸ್ ಮೇಲೆ ಪ್ರಿನ್ಸಿಪಾಲ್ ನೃತ್ಯ ಮಾಡಿದ್ದರು. ಇದನ್ನು ಕಂಡ ವಿದ್ಯಾರ್ಥಿನಿಯರು ಕೇಕೆ ಹಾಕಿ ಸಂಭ್ರಮಿಸಿದ್ದರು. ಪ್ರಿನ್ಸಿಪಾಲ್ ಕುಣಿತವನ್ನ ಅಲ್ಲಿ ಸೇರಿದ್ದ ಎಲ್ಲರೂ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರು.

    https://www.youtube.com/watch?v=bfmIQfuEpss

    ಈ ಡ್ಯಾನ್ಸ್ ನೋಡಿ ಕೆಲ ವಿಧ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ರೆ ಇನ್ನೂ ಕೆಲ ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರು ಟೀಕೆ ಮಾಡಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಿನ್ಸಿಪಾಲ್ ರ ನೃತ್ಯಕ್ಕೆ ಪರವಿರೋಧ ಅಭಿಪ್ರಾಯ ವ್ಯಕ್ತವಾಗಿವೆ. ಇದನ್ನು ಓದಿ: ಬ್ರಾಂಡ್ ಅಂಬಾಸಿಡರ್ ಆದ್ರು `ಗೋವಿಂದ ಡಾನ್ಸ್ ಸ್ಟೈಲ್’ ಅಂಕಲ್

    ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ್ ಅವರ ಅಂಕಲ್ ಡ್ಯಾನ್ಸ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ದೇಶವಿದೇಶಗಳಿಂದ ಭಾರಿ ಮೆಚ್ಚುಗೆ ಕಾರಣವಾಗಿದ್ದ ಅಂಕಲ್ ಡ್ಯಾನ್ಸ್ ಸಾಕಷ್ಟು ಸುದ್ದಿ ಮಾಡಿತ್ತು.

    https://www.youtube.com/watch?v=Jv6vUS0h_4U

  • ಸ್ಪೆಷಲ್ ಕ್ಲಾಸ್ ನೆಪದಲ್ಲಿ ಪ್ರಿನ್ಸಿಪಾಲ್‍ನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

    ಸ್ಪೆಷಲ್ ಕ್ಲಾಸ್ ನೆಪದಲ್ಲಿ ಪ್ರಿನ್ಸಿಪಾಲ್‍ನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

    – ನೊಂದ ವಿದ್ಯಾರ್ಥಿನಿ ಎಸ್‍ಪಿ ಅಣ್ಣಾಮಲೈಗೆ ದೂರು

    ಚಿಕ್ಕಮಗಳೂರು: ಕಾಲೇಜು ಪ್ರಿನ್ಸಿಪಾಲ್ ನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಚಿಕ್ಕಮಗಳೂರು ನಗರದ ಪಿಯು ಕಾಲೇಜುವೊಂದರ ಪ್ರಿನ್ಸಿಪಾಲ್ ಪರಮೇಶ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನೊಂದ ವಿದ್ಯಾರ್ಥಿನಿ ಎಸ್‍ಪಿ ಅಣ್ಣಾಮಲೈ ಅವರಿಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ.

    ಆರೋಪಿ ಪರಮೇಶ್ ಈ ಹಿಂದೆಯು ಕೂಡ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌಜನ್ಯ ಕುರಿತಂತೆ ಪ್ರಕರಣ ದಾಖಲಾಗಿತ್ತು. ಪರಮೇಶ್ 3-4 ವರ್ಷಗಳ ಹಿಂದೆ ಹೆಂಡತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದಾನೆ. ಈಗ ತಮ್ಮ ಕಾಲೇಜಿನಲ್ಲಿ ಓದುತ್ತಿದ್ದ ಪಿಯುಸಿ ವಿದ್ಯಾರ್ಥಿನಿಗೆ ಈದ್ ಮಿಲಾದ್ ಹಬ್ಬದ ದಿನ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಕಾಲೇಜಿಗೆ ಕರೆಸಿಕೊಂಡಿದ್ದಾನೆ.

    ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿನಿ ಒಬ್ಬಳೆ ಇದುದ್ದರಿಂದ ಆರೋಪಿ ಪರಮೇಶ್ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌಜನ್ಯ ಎಸಗಿದ್ದಾನೆ. ನಂತರ ವಿದ್ಯಾರ್ಥಿನಿ ಎಸ್‍ಪಿ ಅಣ್ಣಾಮಲೈಗೆ ಕರೆ ಮಾಡಿ ದೂರು ನೀಡಿದ್ದಾರೆ.  ಎಸ್‍ಪಿ ವಿದ್ಯಾರ್ಥಿನಿ ಜೊತೆ ಮಾತನಾಡಿ ವಿಚಾರ ತಿಳಿದುಕೊಂಡು ಬಳಿಕ ಚಿಕ್ಕಮಗಳೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೊಡಿಸಿದ್ದಾರೆ.

    ಮಹಿಳಾ ಪೊಲೀಸರು ಆರೋಪಿ ಪರಮೇಶ್ ನನ್ನು ಬಂಧಿಸಿ, ಆತನ ವಿರುದ್ಧ 354, 376, 511 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.

  • ಕಾಲೇಜಿನ ಅವ್ಯವಸ್ಥೆ ಪ್ರಶ್ನಿಸಿದ್ದೇ ತಪ್ಪಾಯ್ತು- ಹಲ್ಲೆ ಮಾಡಿದ ಪ್ರಿನ್ಸಿಪಾಲ್ ವಿರುದ್ಧ ಗಂಗಾವತಿಯಲ್ಲಿ ಪ್ರತಿಭಟನೆ

    ಕಾಲೇಜಿನ ಅವ್ಯವಸ್ಥೆ ಪ್ರಶ್ನಿಸಿದ್ದೇ ತಪ್ಪಾಯ್ತು- ಹಲ್ಲೆ ಮಾಡಿದ ಪ್ರಿನ್ಸಿಪಾಲ್ ವಿರುದ್ಧ ಗಂಗಾವತಿಯಲ್ಲಿ ಪ್ರತಿಭಟನೆ

    ಕೊಪ್ಪಳ: ಕಾಲೇಜಿನಲ್ಲಿ ಆಗ್ತಿರೋ ತಪ್ಪುಗಳ ಬಗ್ಗೆ ಧ್ವನಿಯೆತ್ತಿದ ಕಾರಣಕ್ಕೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಚಾರ್ಯರೊಬ್ಬರು ಹಲ್ಲೆ ಮಾಡಿದ್ದರು. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಕೊಪ್ಪಳ ಜಿಲ್ಲೆ ಗಂಗಾವತಿ ಕಾಲೇಜಿನಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

    ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ರೋ ಎಸ್‍ಕೆಎನ್ ಜಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪ್ರಾಚಾರ್ಯ ಪ್ರೊ, ಹಸನ್ಮಿಯ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸ್ತಿದ್ದಾರೆ.

    ಇಂದು ಪದವಿ ಪರೀಕ್ಷೆ ನಡೆಯೋ ವೇಳೆಗೆ ಸ್ನಾತಕೋತ್ತರ ವಿದ್ಯಾರ್ಥಿಗಳು ರಮೇಶ್ ಹಾಗೂ ಆನಂದ ಮೇಲ್ಭಾಗದ ಕೊಠಡಿ ಹತ್ತಿರ ಹೋಗಿದ್ದಾರೆ ಇದನ್ನೇ ನೆಪವಾಗಿಟ್ಟುಕೊಂಡು ಪ್ರಾಚಾರ್ಯ ಹಲ್ಲೆ ಮಾಡಿ ನಿಂದಿಸಿದ್ದಾರೆ. ಅಲ್ಲದೇ ಈ ಕಾಲೇಜಿನ ಲ್ಲಿ ಪ್ರಾಚಾರ್ಯರು ಪದೇ ಪದೇ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.