Tag: ಪ್ರಿನ್ಸಿಪಾಲ್

  • ಅತ್ಯಾಚಾರ ವಿರೋಧಿಸಿದ್ದಕ್ಕಾಗಿ ಪ್ರಾಂಶುಪಾಲನಿಂದ 6 ವರ್ಷದ ಬಾಲಕಿಯ ಕೊಲೆ

    ಅತ್ಯಾಚಾರ ವಿರೋಧಿಸಿದ್ದಕ್ಕಾಗಿ ಪ್ರಾಂಶುಪಾಲನಿಂದ 6 ವರ್ಷದ ಬಾಲಕಿಯ ಕೊಲೆ

    ಅಹಮದಾಬಾದ್: ಅತ್ಯಾಚಾರ ವಿರೋಧಿಸಿಕ್ಕಾಗಿ 6 ವರ್ಷದ ಬಾಲಕಿಯನ್ನು ಕೊಲೆ ಮಾಡಿರುವ ಘಟನೆ ಗುಜರಾತ್‌ನ (Gujarat) ದಾಹೋದ್ (Dahod) ಜಿಲ್ಲೆಯಲ್ಲಿ ನಡೆದಿದೆ.

    ಶಾಲೆಯ ಪ್ರಾಂಶುಪಾಲ ಆರೋಪಿ 55 ವರ್ಷದ ಗೋವಿಂದ್ ನಟ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

    ಹಿರಿಯ ಪೊಲೀಸ್ ಅಧಿಕಾರಿ ರಾಜದೀಪ್ ಸಿಂಗ್ ಝಾಲಾ ಮಾತನಾಡಿ, ಬಾಲಕಿ ಮನೆಗೆ ಬಾರದಿರುವುದನ್ನು ಕಂಡು ಆಕೆಯ ಪೋಷಕರು ದೂರು ದಾಖಲಿಸಿದ್ದು, ಶಾಲಾ ಆವರಣದಲ್ಲಿ ಆಕೆಯ ಮೃತ ದೇಹ ಪತ್ತೆಯಾಗಿದೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ರಾಜೀನಾಮೆ ಯಾಕೆ ಕೊಡಬೇಕು? ತನಿಖೆಗೆ ಮಾತ್ರ ಮಾತ್ರ ಅನುಮತಿ, ಪ್ರಾಸಿಕ್ಯೂಷನ್‌ಗೆ ಅಲ್ಲ: ಸಿದ್ದರಾಮಯ್ಯ

    ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, 10 ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ. ಆಕೆಯ ಪೋಷಕರ ಮಾಹಿತಿಯ ಪ್ರಕಾರ ಪ್ರತಿದಿನ ಪ್ರಾಂಶುಪಾಲ ಗೋವಿಂದ್ ನಟ್ ಜೊತೆ ಶಾಲೆಗೆ ಹೋಗುತ್ತಿದ್ದಳು ಎಂದು ಬಾಲಕಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

    ಘಟನೆಯಾದ ದಿನ ಪ್ರಾಂಶುಪಾಲ ಬಾಲಕಿಯನ್ನು ಶಾಲೆಗೆ ಬಿಟ್ಟು ಯಾವುದೋ ಕೆಲಸಕ್ಕೆ ತೆರಳಿರುವುದಾಗಿ ತಿಳಿಸಿದ್ದಾನೆ. ಆದರೆ ಆ ದಿನ ಅವಳು ಶಾಲೆಗೆ ಬಾರದಿರುವುದನ್ನು ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಖಚಿತಪಡಿಸಿದ್ದಾರೆ. ಬಳಿಕ ಪ್ರಾಂಶುಪಾಲರ ಫೋನ್ ಲೊಕೇಶನ್ ಮಾಹಿತಿಯನ್ನು ಪಡೆದುಕೊಂಡಾಗ ಆತನ ಮೇಲೆ ಅನುಮಾನ ಉಂಟಾಗಿದೆ. ಆತನನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

    ಬೆಳಿಗ್ಗೆ 10:20ರ ಸುಮಾರಿಗೆ ಬಾಲಕಿಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದನು. ಆಕೆಯ ತಾಯಿ ಆಕೆಯನ್ನು ಪ್ರಿನ್ಸಿಪಾಲ್ ಕಾರಿನಲ್ಲಿ ಕೂರಿಸಿ ಕಳುಹಿಸಿದ್ದಾರೆ. ಶಾಲೆಗೆ ಹೋಗುವ ದಾರಿಯಲ್ಲಿ, ಪ್ರಾಂಶುಪಾಲರು ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ. ಆಗ ಆಕೆ ಕೂಗಲು ಪ್ರಾರಂಭಿಸಿದಳು. ಅದನ್ನು ತಡೆಗಟ್ಟಲು ನಾನು ಆಕೆಯ ಮುಖಕ್ಕೆ ಕೈಹಿಡಿದಾಗ ಅವಳು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಪ್ರಾಂಶುಪಾಲ ತಿಳಿಸಿದ್ದಾನೆ.

    ಶಾಲೆ ತಲುಪಿದ ಮೇಲೆ ಆಕೆಯ ಶವವನ್ನು ಕಾರಿನಲ್ಲಿಯೇ ಬಿಟ್ಟು ಬೀಗ ಹಾಕಿ ನಾನು ಶಾಲೆಗೆ ಹೋದೆ. ಸಂಜೆ 5 ಗಂಟೆ ಸುಮಾರಿಗೆ ಆಕೆಯ ಶವವನ್ನು ಶಾಲೆಯ ಕಟ್ಟಡದ ಹಿಂದೆ ಬಿಸಾಕಿದೆ ಹಾಗೂ ಆಕೆಯ ಬ್ಯಾಗ್ ಮತ್ತು ಬೂಟುಗಳನ್ನು ಅವಳ ತರಗತಿಯ ಹೊರಗೆ ಬಿಸಾಕಿರುವುದಾಗಿ ಪ್ರಾಂಶುಪಾಲ ಒಪ್ಪಿಕೊಂಡಿದ್ದಾನೆ.ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೆ ತನಿಖೆ ಪಕ್ಷಾಪಾತವಾಗಿ ನಡೆಯಲು ಸಾಧ್ಯವಿಲ್ಲ: ಶೋಭಾ ಕರಂದ್ಲಾಜೆ

    ಸದ್ಯ ಪೊಲೀಸರು ಆರೋಪಿ ಗೋವಿಂದ್ ನಟ್‌ನನ್ನು ಪೋಕ್ಸೊ (POCSO) ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದಾರೆ.

  • ಪ್ರಾಕ್ಟಿಕಲ್ ಕ್ಲಾಸ್ ವೇಳೆ ಮೊಬೈಲ್‍ನಲ್ಲಿ ರೀಲ್ಸ್- ರೊಚ್ಚಿಗೆದ್ದ ಪ್ರಿನ್ಸಿಪಾಲ್‍ರಿಂದ ಮೊಬೈಲ್ ಪೀಸ್ ಪೀಸ್!

    ಪ್ರಾಕ್ಟಿಕಲ್ ಕ್ಲಾಸ್ ವೇಳೆ ಮೊಬೈಲ್‍ನಲ್ಲಿ ರೀಲ್ಸ್- ರೊಚ್ಚಿಗೆದ್ದ ಪ್ರಿನ್ಸಿಪಾಲ್‍ರಿಂದ ಮೊಬೈಲ್ ಪೀಸ್ ಪೀಸ್!

    ಬೆಂಗಳೂರು: ಶಾಲಾ-ಕಾಲೇಜುಗಳಿಗೆ ಮೊಬೈಲ್ (Mobile) ಕೊಂಡೊಯ್ಯಬಾರದು ಅನ್ನೋದು ನಿಯಮ. ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ರೆ ಮೊಬೈಲ್ ಕಥೆ ಅಷ್ಟೆ. ಫೈನ್ ಹಾಕೋದು, ಪೇರೆಂಟ್ಸ್ ಗೆ ಕಂಪ್ಲೆಂಟ್ ಮಾಡೋದು ಮಾಡಿ ವಿದ್ಯಾರ್ಥಿಗಳಲ್ಲಿ ಲೆಕ್ಚರರ್ಸ್ ಸದಾ ಭಯ ಇಟ್ಟಿರ್ತಾರೆ. ಇಷ್ಟಿದ್ದರು ಕೂಡ ಕಾಲೇಜು ವಿದ್ಯಾರ್ಥಿಗಳು ಕದ್ದು ಮುಚ್ಚಿ ಮೊಬೈಲ್ ಬಳಸ್ತಾರೆ. ವಿರಾಮದಲ್ಲೋ, ಲಂಚ್ ಬ್ರೇಕ್, ಕಾಲೇಜು ಸಮಯ ಮುಗಿದ ಬಳಿಕ ಮೊಬೈಲ್ ಬಳಸಿದ್ರೆ ಯಾರೂ ಕೇಳೊಕೆ ಬರೊಲ್ಲ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪ್ರಿನ್ಸಿಪಾಲ್ (Principal) ಮೊಬೈಲ್ ಹೊಡೆದು ಹಾಕಿದ್ದಾರೆ ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಹೊಸಕೋಟೆಯ (Hosakote) ಖಾಸಗಿ ಕಾಲೇಜಿನ ವಿದ್ಯಾರ್ಥಿ ಸೂರ್ಯ ಮೊಬೈಲ್ ತೆಗೆದುಕೊಂಡು ಹೋಗಿದ್ದ. ಈ ಹಿಂದೆಯೇ ಕ್ಲಾಸ್ ರೂಂಗೆ ಮೊಬೈಲ್ ತರದಂತೆ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್ ನಾಗರಾಜ್ ವಾರ್ನ್ ಮಾಡಿದ್ರಂತೆ. ಪ್ರಿನ್ಸಿಪಾಲ್ ಮಾತಿಗೆ ಕಿಮ್ಮತ್ತು ಕೊಡದ ವಿದ್ಯಾರ್ಥಿಗಳು, ಕಾಲೇಜಿಗೆ ಮೊಬೈಲ್ ಕೊಂಡೊಯ್ತಿದ್ರು. ಪಾಠದ ನಡುವೆಯೇ ಮೊಬೈಲ್‍ನಲ್ಲಿ ಆಟ ಕಾಮನ್ ಆಗೋಗಿತ್ತು. ವೆಲ್ಡಿಂಗ್ ಟ್ರೈನಿಂಗ್ ಕ್ಲಾಸ್ ನಡೆಯುತ್ತಿರೋ ವೇಳೆ ಸೂರ್ಯ ಹಾಗೂ ಆತನ ಸ್ನೇಹಿತರು ರೀಲ್ಸ್ ಮಾಡ್ತಿದ್ರಂತೆ. ಇದನ್ನು ಗಮನಿಸಿದ ಶಾಲಾ ಪ್ರಿನ್ಸಿಪಾಲ್, ಕೋಪದಲ್ಲಿ ಮೊಬೈಲ್ ತೆಗೆದು ನೆಲಕ್ಕೆ ಹೊಡೆದು ಪುಡಿ ಮಾಡಿದ್ದರು.

    ಸೂರ್ಯ ಮನೆಯವರಿಂದ ಪ್ರಿನ್ಸಿಪಾಲ್ ವಿರುದ್ಧ ದೂರು ನೀಡಿದ್ದು, ಇಎಂಐ ಕಟ್ತಾ ಇದ್ದೀವಿ ಪ್ರಿನ್ಸಿಪಾಲ್ ಮೊಬೈಲ್ ಹಾಳು ಮಾಡಿದ್ದಾರೆ ಅಂತಾ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

  • ಕಾಲೇಜ್‌ ಕ್ಯಾಂಟೀನ್‌ನಲ್ಲಿ ಪ್ರಿನ್ಸಿಪಾಲ್‌ ನೇಣಿಗೆ ಶರಣು

    ಕಾಲೇಜ್‌ ಕ್ಯಾಂಟೀನ್‌ನಲ್ಲಿ ಪ್ರಿನ್ಸಿಪಾಲ್‌ ನೇಣಿಗೆ ಶರಣು

    ಬಾಗಲಕೋಟೆ: ಪದವಿ ಕಾಲೇಜು ಆವರಣದಲ್ಲೇ ನೇಣು ಹಾಕಿಕೊಂಡು ಪ್ರಿನ್ಸಿಪಾಲ್‌ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ (Hungund City) ನಡೆದಿದೆ.

    ಹುನಗುಂದ ಸರ್ಕಾರಿ ಪದವಿ ಕಾಲೇಜಿನ ಪ್ರಿನ್ಸಿಪಾಲ್‌ (Principal) ಆಗಿರುವ ನಾಗರಾಜ್ ಮುದಗಲ್ (57) ನೇಣಿಗೆ ಶರಣಾಗಿರುವ ದುರ್ದೈವಿ. ಇಂದು ಬೆಳಗಿನ ಜಾವ ಕಾಲೇಜ್ ಆವರಣದಲ್ಲಿಯ ಕ್ಯಾಂಟೀನ್‌ ಸ್ಟೇರ್ ಕೇಸ್ ಗ್ರಿಲ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ

    ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ನಾಗರಾಜ್ ಮುದಗಲ್ (Nagaraj Mudugal) ಶವವನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಿನ್ಸಿಪಾಲ್‌ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ, ಆತ್ಮಹತ್ಯೆಗೂ ಮುನ್ನ ಡೆತ್‌ ನೋಟ್ ಏನಾದರೂ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಅನುಮಾನ ಇದೆ.

    ಮಂಗಳವಾರ ಸರ್ಕಾರಿ ಪದವಿ ಕಾಲೇಜ್‌ನಲ್ಲಿ “ಜನಪದ ಜಾತ್ರೆ ಹೊನ್ನ ಸಂಭ್ರಮ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೀಗಾಗಿ ಸೋಮವಾರ ರಾತ್ರಿಯವರೆಗೆ ಕಾರ್ಯಕ್ರಮಕ್ಕಾಗಿ ಗಣ್ಯರಿಗೆಲ್ಲ ಆಮಂತ್ರಣ ನೀಡಿ ಬಂದಿದ್ದ ಪ್ರಿನ್ಸಿಪಾಲ್‌ ಇಂದು ಬೆಳಿಗ್ಗೆ ಮನೆಗೆ ಹೋಗಿ ಕಾಲೇಜಿಗೆ ಬಂದು ನೇಣು ಹಾಕಿಕೊಂಡಿದ್ದಾರೆಂಬ ಮಾಹಿತಿ ಇದೆ.

     

    ಮೃತ ಪ್ರಿನ್ಸಿಪಾಲ್‌ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಪ್ರಿನ್ಸಿಪಾಲ್‌ಗೆ ಪತ್ನಿ, ಮೂವರು ಮಕ್ಕಳಿದ್ದಾರೆ. 14 ವರ್ಷಗಳಿಂದ ಇಳಕಲ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ನಾಗರಾಜ್ ಆರು ತಿಂಗಳ ಹಿಂದೆಯಷ್ಟೇ ಹುನಗುಂದ ಸರ್ಕಾರಿ ಪದವಿ ಕಾಲೇಜಿಗೆ ವರ್ಗಾವಣೆಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೈಟಾಗಿ ಮನವಿ ಪತ್ರ ನೀಡಲು ಬಂದ ಪ್ರಿನ್ಸಿಪಾಲ್- ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕಳಿಸಿದ ಶಾಸಕ

    ಟೈಟಾಗಿ ಮನವಿ ಪತ್ರ ನೀಡಲು ಬಂದ ಪ್ರಿನ್ಸಿಪಾಲ್- ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕಳಿಸಿದ ಶಾಸಕ

    ಚಿಕ್ಕಮಗಳೂರು: ಮದ್ಯಪಾನ (Alcohol) ಮಾಡಿ ಫುಲ್ ಟೈಟಾಗಿ ಶಾಸಕರಿಗೆ ಮನವಿ ಪತ್ರ ನೀಡಲು ಬಂದ ಪ್ರಾಂಶುಪಾಲರಿಗೆ ಶಾಸಕರು ರಸ್ತೆ ಮಧ್ಯೆಯೇ ಕ್ಲಾಸ್ ತೆಗೆದುಕೊಂಡು ಆಸ್ಪತ್ರೆಗೆ ಕಳಿಸಿದ ಪ್ರಸಂಗವೊಂದು ನಡೆದಿದೆ.

    ಈ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಂಸೆ ಗ್ರಾಮದಲ್ಲಿ ನಡೆದಿದೆ. ಎನ್.ಆರ್.ಪುರ ತಾಲೂಕಿನ ಸಂಸೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಲೋಕ ನಾಯಕ್ (Principal LokNayak) ಅವರು ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ಶಾಸಕ ಟಿ.ಡಿ. ರಾಜೇಗೌಡ (TD Rajegowda) ರಿಗೆ ಮನವಿ ನೀಡಲು ಆಗಮಿಸಿದ್ದರು. ಈ ವೇಳೆ ಪ್ರಿನ್ಸಿಪಾಲ್ ಲೋಕನಾಯಕ್ ಫುಲ್ ಟೈಟ್ ಆಗಿರುವುದನ್ನ ಕಂಡ ಶಾಸಕ ರಸ್ತೆ ಮಧ್ಯೆಯೇ ಫುಲ್ ಗರಂ ಆಗಿದ್ದರು. ಇದನ್ನೂ ಓದಿ: 15ರ ರೇಪ್ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಬಾಂಬೆ ಹೈಕೋರ್ಟ್

    ಸ್ಥಳದಲ್ಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಪ್ರಿನ್ಸಿಪಾಲರನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು. ಅಷ್ಟೆ ಅಲ್ಲದೆ ಬ್ರೀಥಿಂಗ್ ಆಲ್ಕೋಹಾಲ್ ಆನ್ ಲೇಸರ್ ಮೂಲಕ ಪ್ರಾಂಶುಪಾಲರನ್ನು ತಪಾಸಣೆ ನಡೆಸಿದಾಗ ಮದ್ಯಪಾನ ಮಾಡಿದ್ದು ಪತ್ತೆಯಾಗಿದೆ. ಈ ಹಿನ್ನೆಲೆ ಶಿಕ್ಷಕರೇ ಹೀಗೆ ವರ್ತಿಸಿದರೆ ಮಕ್ಕಳ ಪಾಡೇನು ಎಂದು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

    ಕೂಡಲೇ ಸರ್ಕಾರಿ ಆಸ್ಪತ್ರೆಗೆ ಫೋನ್ ಮಾಡಿ ಅಂಬುಲೆನ್ಸ್ ಕರೆಸಿ ಪ್ರಿನ್ಸಿಪಾಲ್ ಲೋಕ ನಾಯಕ್ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ಎನ್.ಆರ್. ಪುರ ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಪ್ರಸ್ತುತ 240 ಜನ ಹೆಣ್ಣು ಮಕ್ಕಳಿದ್ದಾರೆ. ಈಗ ಮತ್ತೆ ಹೊಸದಾಗಿ 40 ಜನ ಬರುವವರು ಇದ್ದಾರೆ. ಹಾಸ್ಟೆಲ್ ನಲ್ಲಿ ವಾರ್ಡನ್ ಅಂತ ಯಾರೂ ಇಲ್ಲ. ಹೀಗಾಗಿ ವಾರ್ಡನ್ ಹಾಗೂ ಪ್ರಿನ್ಸಿಪಾಲ್ ಎರಡೂ ಹುದ್ದೆಯನ್ನು ಲೋಕ ನಾಯಕ್ ಅವರೇ ನಿರ್ವಹಿಸುತ್ತಿದ್ದಾರೆ.

    ಸುಮಾರು 300 ಜನ ಹೆಣ್ಣು ಮಕ್ಕಳಿರುವ ವಸತಿ ಶಾಲೆಯಲ್ಲಿ ಇಂತಹ ಪ್ರಿನ್ಸಿಪಾಲ್ ಇದ್ದರೆ ಹೆಣ್ಣು ಮಕ್ಕಳ ಗತಿ ಏನು ಎಂದು ಶಾಸಕ ರಾಜೇಗೌಡ ಪ್ರಿನ್ಸಿಪಾಲ್ ವಿರುದ್ಧ ಅಸಮಾಧಾನ ಅವರ ಹಾಕಿ ಕೂಡಲೇ ಅಮಾನತು ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಪ್ರಿನ್ಸಿಪಾಲ್ ರೋಮ್ಯಾನ್ಸ್ -ಗ್ರಾಮಸ್ಥರು ಆಕ್ರೋಶ

    ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಪ್ರಿನ್ಸಿಪಾಲ್ ರೋಮ್ಯಾನ್ಸ್ -ಗ್ರಾಮಸ್ಥರು ಆಕ್ರೋಶ

    ಛತ್ತೀಸ್‍ಗಢ: ಶಾಲೆಯ ಪ್ರಾಂಶುಪಾಲರು ಶಿಕ್ಷಕಿ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪರಿಣಾಮ ಪ್ರಾಂಶುಪಾಲರನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ.

    ಛತ್ತೀಸ್‍ಗಢದಲ್ಲಿ ಸರ್ಕಾರಿ ಸಾಲೆಯಲ್ಲಿ ಪ್ರಾಂಶುಪಾಲ ತನ್ನ ಲೈಂಗಿಕ ಆಸೆಯನ್ನು ಈಡೆರಿಸಿಕೊಳ್ಳಲು ಶಾಲೆಯಲ್ಲಿದ ಇತರ ಶಿಕ್ಷಕಿಯರನ್ನು ಬಳಸಿಕೊಳ್ಳುತ್ತಿರುವುದು ಗ್ರಾಮಸ್ಥರಿಗೆ ತಿಳಿದುಬಂದಿದೆ. ಈ ಕುರಿತು ಸ್ಥಳಿಯರೆ ಪ್ರಾಂಶುಪಾಲ ರಾಸಲೀಲೆಯನ್ನು ಸೆರೆ ಹಿಡಿದಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಹರಿ ಬಿಟ್ಟಿದ್ದಾರೆ. ವಿಷಯ ತಿಳಿದ ಶಾಲೆಯ ಆಡಳಿತ ಪ್ರಾಂಶುಪಾಲನ ವಿರುದ್ಧ ಕ್ರಮ ತೆಗೆದುಕೊಂಡಿದ್ದು, ಶಾಲೆಯಿಂದ ಅಮಾನತು ಮಾಡಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಶಾಲೆಯ ಪ್ರಾಂಶುಪಾಲರನ್ನು ಆಡಳಿತವು ಅಮಾನತುಗೊಳಿಸಿದೆ. ಇದನ್ನೂ ಓದಿ:  ಮದ್ಯದಿಂದ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ – ವೀಡಿಯೋ ವೈರಲ್ 

    ನಡೆದಿದ್ದೇನು?
    ಈ ಅಸಂಬಂಧ ಘಟನೆ ಛತ್ತೀಸ್‍ಗಢದ ಕಂಕೇರ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಪ್ರಾಂಶುಪಾಲನಿಗೆ ಮದುವೆಯಾಗಿದ್ದರೂ ಸಹ ಶಾಲೆಯಲಿ ಶಿಕ್ಷಕಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದ. ತನ್ನ ಕಾಮಚೇಷ್ಟೆ ನಡೆಸಲು ಶಾಲೆಯ ಕೊಠಡಿಯನ್ನೆ ಬಳಸಿಕೊಳ್ಳುತ್ತಿದ್ದ. ಈ ಹಿನ್ನೆಲೆ ಪ್ರಾಂಶುಪಾಲನನ್ನು ನೇರವಾಗಿ ಹಿಡಿಯಬೇಕೆಂದು ಗ್ರಾಮದ ಜನರು ನಿರ್ಧರಿಸಿದ್ದಾರೆ.

    ಈ ಹಿನ್ನೆಲೆ ಪ್ರಾಂಶುಪಾಲ ಶಿಕ್ಷಕಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ನಡೆಸುತ್ತಿದ್ದಾಗ ಅವರಿಗೆ ಗೊತ್ತಾಗದಂತೆ ಗ್ರಾಮಸ್ಥರು ವೀಡಿಯೋ ಮಾಡಿದ್ದಾರೆ. ನಂತರ ಈ ವೀಡಿಯೋವನ್ನು ಶಾಲೆಯ ಆಡಳಿತ ಮಂಡಳಿಗೆ ಕೊಟ್ಟಿದ್ದು, ಪ್ರಾಂಶುಪಾಲರನ್ನು ಅಮಾನತ್ತು ಮಾಡಿಸಿದ್ದಾರೆ. ಇದನ್ನೂ ಓದಿ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್ 

    ಪ್ರಾಂಶುಪಾಲ ಮತ್ತು ಶಿಕ್ಷಕಿ ನಡುವೆ ಕೊರೊನಾ ಸಮಯದಲ್ಲಿ ಅನೈತಿಕ ಸಂಬಂಧ ಬೆಳೆದಿತ್ತು. ಅವರ ಖಾಸಗಿ ವಿಚಾರಕ್ಕೆ ಶಾಲೆಯ ಆವರಣ ಬಳಸಿಕೊಳ್ಳುತ್ತಿರುವುದು ಸರಿಯಲ್ಲವೆಂದು ಎಂದು ದೂರಿನಲ್ಲಿ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು. ವೀಡಿಯೋ ರೆಕಾರ್ಡ್ ಮಾಡಿದ ಮೇಲೆ ಪ್ರಾಂಶುಪಾಲರಿಗೆ ಈ ವೀಡಿಯೋ ತೋರಿಸಿದಾಗ ರೆಕಾರ್ಡ್ ಮಾಡಿದವರಿಗೆ ಹಣದ ಆಮಿಷವನ್ನು ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

  • ಪ್ರಿನ್ಸಿಪಾಲ್ ಮೇಲೆ ಆ್ಯಸಿಡ್ ಎರಚಲು ಮುಂದಾದ ಪ್ರಾಧ್ಯಾಪಕ

    ಪ್ರಿನ್ಸಿಪಾಲ್ ಮೇಲೆ ಆ್ಯಸಿಡ್ ಎರಚಲು ಮುಂದಾದ ಪ್ರಾಧ್ಯಾಪಕ

    ಕಲಬುರಗಿ: ಸಹಾಯಕ ಪ್ರಾಧ್ಯಾಪಕನೋರ್ವ ಕಾಲೇಜಿನ ಪ್ರಿನ್ಸಿಪಾಲ್ ಮೇಲೆ ಆ್ಯಸಿಡ್ ಎರಚಿ ಹಲ್ಲೆ ಮಾಡಲು ಯತ್ನಿಸಿರುವ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ.

    ಹೆಚ್‍ಕೆಇ ಸೊಸೈಟಿಯ ಫಾರ್ಮಸಿ ಕಾಲೇಜ್‍ನ ಪ್ರಿನ್ಸಿಪಾಲ್ ಡಾ.ಅರುಣ್ ಕುಮಾರ್ ಬೆನಕಳ ಮೇಲೆ ಇದೇ ಫಾರ್ಮಸಿ ಕಾಲೇಜ್‍ನ ಸಹಾಯಕ ಪ್ರಾಧ್ಯಾಪಕನಾಗಿರುವ ಶಾಂತವೀರ ಸಲಗಾರ ಆ್ಯಸಿಡ್ ಎರಚಿ ಹಲ್ಲೆಗೆ ಯತ್ನ ನಡೆಸಿದ್ದಾರೆ. ಈ ಘಟನೆ ಮಾರ್ಚ್ 21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಶಾಂತವೀರ ಪರೀವಿಕ್ಷಣಾ ಇನ್ಸ್‌ಪೆಕ್ಟರ್ ಆಗಿ ನೇಮಕವಾಗಬೇಕಾಗಿತ್ತು. ಆದರೆ ಪ್ರಿನ್ಸಿಪಾಲ್ ಅರುಣ್ ಕುಮಾರ್ ತಮ್ಮ ಕೈವಾಡದಿಂದ ಹುದ್ದೆ ತಪ್ಪಿಸಿದ್ದಾರೆ ಎಂದು ಗ್ರಹಿಸಿಕೊಂಡು ಶಾಂತವೀರ ಆ್ಯಸಿಡ್ ದಾಳಿ ನಡೆಸಲು ಮುಂದಾಗಿದ್ದಾರೆ. ಎಚ್‍ಕೆಇ ಫಾರ್ಮಸಿ ಕಾಲೇಜ್ ಆವರಣದಲ್ಲಿಯೇ ಆ್ಯಸಿಡ್ ಎರಚಲು ಮುಂದಾಗಿದ್ದ ಶಾಂತವೀರ, ಅವಾಚ್ಯ ಶಬ್ದಗಳಿಂದ ಪ್ರಿನ್ಸಿಪಾಲ್‍ರನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ ತನ್ನ ಕಾರಿನಿಂದ ಡಿಕ್ಕಿ ಹೊಡೆದು ಅಪಘಾತಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಕೆಲ ಪ್ರಾಧ್ಯಾಪಕರು ಪ್ರಿನ್ಸಿಪಾಲ್‍ರನ್ನು ರಕ್ಷಣೆ ಮಾಡಿ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯೇತರ ಪ್ರತಿಪಕ್ಷಗಳ ಆಧಾರ ಸ್ತಂಭ ಮಮತಾ ಬ್ಯಾನರ್ಜಿ: ಕಾಂಗ್ರೆಸ್‌ ಸಂಸದ ಬಣ್ಣನೆ

    POLICE JEEP

    ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಶಾಂತವೀರ ಸಲಗಾರ ಆ್ಯಸಿಡ್ ಎರಚಲು ಪ್ರಯತ್ನ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಈ ಕುರಿತು ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕಿದ್ದ ಪ್ರಾಧ್ಯಾಪಕ ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ

  • ಪ್ರಿನ್ಸಿಪಾಲ್ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಹಾಸನ ವಿದ್ಯಾರ್ಥಿ

    ಪ್ರಿನ್ಸಿಪಾಲ್ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಹಾಸನ ವಿದ್ಯಾರ್ಥಿ

    ಹಾಸನ: ಉದ್ದೇಶ ಪೂರ್ವಕವಾಗಿ ಉತ್ತರ ಪತ್ರಿಕೆಯ ಉತ್ತರಗಳನ್ನು ಹೊಡೆದು ಹಾಕಿ ತಾನು ಫೇಲ್ ಆಗಲು ಕಾರಣರಾಗಿದ್ದಾರೆ ಎಂದು ಆರೋಪಿಸಿ ಬಿಎಸ್‍ಸಿ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜಿನ ಪ್ರಿನ್ಸಿಪಾಲರ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಹಾಸನದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್‍ಸಿ ನರ್ಸಿಂಗ್ ಓದುತ್ತಿದ್ದ ಚನ್ನಯ್ಯ ಪ್ರಿನ್ಸಿಪಾಲರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಚನ್ನಯ್ಯ ರ್ಯಾಂಕ್ ವಿದ್ಯಾರ್ಥಿ ಆಗಿದ್ದು, ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಫೇಲ್ ಆಗಿದ್ದ.

    ಫೇಲ್ ಆಗಿದ್ದರ ಬಗ್ಗೆ ಅನುಮಾನಗೊಂಡು ಉತ್ತರ ಪತ್ರಿಕೆ ಪ್ರತಿ ತರಿಸಿ ನೋಡಿದಾಗ, ವಿದ್ಯಾರ್ಥಿ ಚನ್ನಯ್ಯ ಬರೆದಿರುವ ಹಲವು ಸರಿ ಉತ್ತರಗಳನ್ನು ಪೆನ್‍ನಲ್ಲಿ ಗೀಚಿ ಹೊಡೆದು ಹಾಕಲಾಗಿದೆ. ಇದರಿಂದಾಗಿ ನಾನು ಫೇಲ್ ಆಗಿದ್ದೇನೆ ಎಂದು ಅಸಹಾಯಕತೆ ಹೊರಹಾಕಿದ್ದಾನೆ.

    ತನ್ನನ್ನು ಫೇಲ್ ಮಾಡಿರುವುದರಲ್ಲಿ ಕಾಲೇಜಿನ ಪ್ರಾಂಶುಪಾಲರ ಕೈವಾಡವಿದೆ ಎಂದು ಆರೋಪಿಸಿರುವ ವಿದ್ಯಾರ್ಥಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ತರಿಸಿ ಹೋರಾಟಕ್ಕಿಳಿದಿದ್ದಾನೆ. ಘಟನೆ ಸಂಬಂಧ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಶೋಭ ದೇವಮಾನೆ ವಿರುದ್ಧ ದೂರು ದಾಖಲಾಗಿದೆ.

  • ಆಫೀಸ್ ರೂಮಿನಲ್ಲೇ ಇಬ್ಬರು ಶಿಕ್ಷಕಿಯರ ಜೊತೆ ಪ್ರಿನ್ಸಿಪಾಲ್ ಸೆಕ್ಸ್

    ಆಫೀಸ್ ರೂಮಿನಲ್ಲೇ ಇಬ್ಬರು ಶಿಕ್ಷಕಿಯರ ಜೊತೆ ಪ್ರಿನ್ಸಿಪಾಲ್ ಸೆಕ್ಸ್

    ಚಂಢೀಗಡ: ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ ಇಬ್ಬರು ಶಿಕ್ಷಕಿಯರ ಜೊತೆ ದೈಹಿಕ ಸಂಬಂಧ ಬೆಳೆಸಿದ ಘಟನೆ ಪಂಜಾಬ್‍ನ ಹೋಶಿಯಾಪುರದಲ್ಲಿ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಶಾಲೆಯ ಪ್ರಿನ್ಸಿಪಾಲ್‍ನ ಈ ವರ್ತನೆ ಕಂಡು ಸಿಬ್ಬಂದಿ ಬೇಸತ್ತು ಹೋಗಿದ್ದರು. ಅಲ್ಲದೆ ಆತನ ಕೃತ್ಯ ಎಲ್ಲರ ಮುಂದೆ ಬಯಲು ಮಾಡಲು ಆಫೀಸ್ ರೂಮಿನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿ ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ.

    ಎರಡು ವಿಡಿಯೋದಲ್ಲಿ ಪ್ರಿನ್ಸಿಪಾಲ್ ಇಬ್ಬರು ಶಿಕ್ಷಕಿಯರ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಈ ಆರೋಪಗಳನ್ನು ಒಪ್ಪಿಕೊಳ್ಳಲು ಶಾಲೆಯ ಪ್ರಿನ್ಸಿಪಾಲ್ ನಿರಾಕರಿಸುತ್ತಿದ್ದಾನೆ. ನನ್ನ ಹೆಸರಿಗೆ ಕಳಂಕ ತರಲು ಯಾರೋ ಈ ರೀತಿಯ ಹುಡುಗಾಟ ಆಡಿದ್ದಾರೆ ಎಂದು ಹೇಳುತ್ತಿದ್ದಾನೆ.

    ಈ ಘಟನೆ ಬಗ್ಗೆ ಸರಪಂಚ್ ಶಾಲೆಯ ಕಮಿಟಿ ಜೊತೆ ಚರ್ಚೆ ನಡೆಸಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಪ್ರಕರಣ ಈಗ ಕ್ಲೋಸ್ ಆಗಿದ್ದು, ಪ್ರಿನ್ಸಿಪಾಲ್ ಅಸಭ್ಯವಾಗಿ ವರ್ತಿಸಿದ್ದಕ್ಕೆ ಶಾಲೆಯ ಸಿಬ್ಬಂದಿ ಹಾಗೂ ಪಂಚಾಯ್ತಿಯಲ್ಲಿ ಎಲ್ಲರ ಮುಂದೆ ಕ್ಷಮೆ ಕೇಳಿದ್ದಾರೆ.

  • ಫೀಸ್ ಕೊಡಬೇಡ, ರೂಂಗೆ ಬಾ ಎಂದ ಪ್ರಿನ್ಸಿಪಾಲ್ ಮಗ!

    ಫೀಸ್ ಕೊಡಬೇಡ, ರೂಂಗೆ ಬಾ ಎಂದ ಪ್ರಿನ್ಸಿಪಾಲ್ ಮಗ!

    ಬೆಂಗಳೂರು: ಫೀಸ್ ಕಟ್ಟೋದು ಸ್ವಲ್ಪ ಲೇಟ್ ಆಗುತ್ತೆ ಎಂದ ವಿದ್ಯಾರ್ಥಿ ತಾಯಿಗೆ ಅಡ್ಜೆಸ್ಟ್ ಆಗು ಎಂದು ಪ್ರಿನ್ಸಿಪಾಲ್ ಮಗ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ನಾಗವಾರ ಬಳಿ ಇರುವ ಇಮ್ಯಾನುಯಲ್ ಸ್ಕೂಲ್‍ನಲ್ಲಿ ನಡೆದಿದೆ.

    ರೂತ ಚೆಲುವರಾಜ್ ಅಸಭ್ಯವಾಗಿ ವರ್ತಿಸಿದ ಪ್ರಿನ್ಸಿಪಾಲ್ ಮಗ. ಫೀಸ್ ಕಟ್ಟುವುದು ತಡವಾಗಿದ್ದಕ್ಕೆ ವಿದ್ಯಾರ್ಥಿ ಮಹಮದ್ ಫರಾನ್ ಖಾನ್‍ನ ಆಡ್ಮೀಷನ್ ಮಾಡಿಕೊಳ್ಳದೆ ಲೇಡಿ ಪ್ರಿನ್ಸಿಪಾಲ್ ಸತಾಯಿಸುತ್ತಿದ್ದಳು. ಅಲ್ಲದೆ ಶಾಲೆಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಲು ಹೋದ ವಿದ್ಯಾರ್ಥಿಯ ತಾಯಿಯೊಂದಿಗೆ ಚೆಲುವರಾಜ್ ಅಸಭ್ಯವಾಗಿ ವರ್ತಿಸಿದ್ದಾನೆ.

    ಕಾಮುಕ ಚೆಲುವರಾಜ್ ಫೀಸ್ ಕೊಡಬೇಡ, ರೂಂಗೆ ಬಾ ಎಂದು ಕೊಠಡಿಯಲ್ಲೆ ವಿದ್ಯಾರ್ಥಿ ತಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಫೀಸ್ ಕಟ್ಟಲು ಆಗಿಲ್ಲ ಅಂದರೆ ನನ್ನ ಜೊತೆ ಅಡ್ಜಸ್ಟ್ ಮಾಡಿಕೊಳ್ಳುವಂತೆ ರೂತ ಚೆಲುವರಾಜ್ ವಿದ್ಯಾರ್ಥಿಯ ತಾಯಿಯ ಬಳಿ ಹೇಳಿದ್ದಾನೆ. ಕಾಮುಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿಯ ತಾಯಿ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ನನ್ನ ಮಗ ಇಮ್ಯಾನುಯಲ್ ಶಾಲೆಯಲ್ಲಿ ಓದುತ್ತಿದ್ದು, 8ನೇ ತರಗತಿ ಅಡ್ಮಿಷನ್ ಕೇಳಲು ಶಾಲೆಗೆ ಹೋದಾಗ ಚೆಲುವರಾಜ್ ಮತ್ತು ಸ್ಯಾಮ್ ಅವರು ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ನನ್ನ ಮೈಕೈ ಮುಟ್ಟಿ ಹೊರತಳ್ಳಿದ್ದಾರೆ. ಫೀಸ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ ಫೀಸ್ ಕಟ್ಟಲು ತೊಂದರೆಯಾದರೆ ನನ್ನ ಜೊತೆ ಹೇಳು ಅಡ್ಮಿಷನ್ ಮತ್ತು ಫೀಸ್ ಕಡಿಮೆ ಮಾಡುತ್ತೇನೆ ಎಂದಾಗ ನಾನು ಒಪ್ಪದೇ ಪ್ರತಿಭಟಿಸಿದಕ್ಕೆ ಚೆಲುವರಾಜ್ ಕೋಪಿತವಾಗಿ ವರ್ತಿಸಿ ನನ್ನನ್ನು ಬಲವಂತವಾಗಿ ಕೈಮುಟ್ಟಿ ಹೊರ ಹಾಕಿದ್ದಾನೆ. ಇದು ಮೇ 28ರಂದು ಈ ಘಟನೆ ನಡೆದಿದ್ದು, ಅಲ್ಲಿಂದಾಚೆಗೆ ಸುಮಾರು 3-4 ಬಾರಿ ಶಾಲೆಗೆ ಹೋದಾಗ ಕೂಡ ಆಡ್ಮಿಷನ್ ಮಾಡಿಕೊಳ್ಳದೇ ಚೆಲುವರಾಜ್, ಸ್ಯಾಮ್ ದುವರ್ತನೆ ತೋರಿದ್ದಾರೆ. ಈಗ ನನ್ನ ಮಗ ಇದನ್ನೆಲ್ಲ ನೋಡಿ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾನೆ. ದಯವಿಟ್ಟು ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ ಎಂದು ಕೋರಿಕೊಳ್ಳುತ್ತೇನೆ.

  • ಸಹೋದ್ಯೋಗಿಯನ್ನು ಅಪ್ಪಿಕೊಂಡು ಪ್ರಿನ್ಸಿಪಾಲ್ ರೊಮ್ಯಾನ್ಸ್..!

    ಸಹೋದ್ಯೋಗಿಯನ್ನು ಅಪ್ಪಿಕೊಂಡು ಪ್ರಿನ್ಸಿಪಾಲ್ ರೊಮ್ಯಾನ್ಸ್..!

    – ಕೊಠಡಿಯಲ್ಲಿ ವಿಡಿಯೋ ರೆಕಾರ್ಡ್

    ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಳೂರು ಗ್ರಾಮದಲ್ಲಿ ಮಕ್ಕಳಿಗೆ ನೈತಿಕತೆಯ ಪಾಠ ಮಾಡಬೇಕಾದ ಪ್ರಾಂಶುಪಾಲನೊಬ್ಬ ಸಹೋದ್ಯೋಗಿ ಜೊತೆ ಚಕ್ಕಂದವಾಡುತ್ತಿದ್ದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

    ಮೊರಾರ್ಜಿ ವಸತಿ ಶಾಲೆಯ ಪ್ರಿನ್ಸಿಪಾಲ್ ಚಂದ್ರಪ್ಪ ಈ ರೀತಿ ಶಾಲೆಯಲ್ಲೇ ರೊಮ್ಯಾನ್ಸ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈ ವಸತಿ ಶಾಲೆಯಲ್ಲಿ ಆರನೇ ತರಗತಿಯಿಂದ ಹತ್ತನೇ ತರಗತಿವರೆಗೆ ಸುಮಾರು 250 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಶಿಕ್ಷಕರು, ಶಿಕ್ಷಕಿಯರು, ಅಡುಗೆಯವರು ಮತ್ತು ಅಡುಗೆ ಸಹಾಯಕರು ಸೇರಿ 20 ಮಂದಿ ಇಲ್ಲಿನ ಕ್ವಾರ್ಟರ್ಸ್ ಗಳಲ್ಲಿ ವಾಸವಾಗಿದ್ದಾರೆ.

    ಸುಪ್ರೀಂಕೋರ್ಟ್ ಆದೇಶವಿದೆ ಎಂದ:
    ಈ ವಸತಿ ಶಾಲೆಯ ಉದ್ಯೋಗಿಯಾಗಿ ಬಂದ ಮಹಿಳೆಯೊಬ್ಬರ ಜೊತೆ ಪ್ರಿನ್ಸಿಪಾಲ್ ಚಂದ್ರಪ್ಪ ಚಕ್ಕಂದ ಶುರು ಮಾಡಿದ್ದಾನೆ. ಕದ್ದುಮುಚ್ಚಿ ನಡೆಯುತ್ತಿದ್ದ ಇವರಿಬ್ಬರ ಪ್ರೀತಿ ಶಾಲೆಯ ಇನ್ನಿತರ ಶಿಕ್ಷಕರು ಹಾಗೂ ಮಕ್ಕಳಿಗೂ ಗೊತ್ತಾಗಿದೆ. ಈ ಬಗ್ಗೆ ಗ್ರಾಮಸ್ಥರು ಆಕ್ಷೇಪ ಮಾಡಿದಾಗ, ಸುಪ್ರೀಂಕೋರ್ಟ್ ಆದೇಶ ಇದೆ. ಯಾರು ಯಾರ ಜೊತೆ ಬೇಕಾದರೂ ಸಂಬಂಧ ಇಟ್ಟುಕೊಳ್ಳಬಹುದು ಎಂದು ಅವಾಜ್ ಹಾಕಿದ್ದಾನೆ.

    ಅಷ್ಟೇ ಅಲ್ಲದೆ ಇವರಿಬ್ಬರು ಇತ್ತೀಚೆಗೆ ಅಡುಗೆ ಸಾಮಾಗ್ರಿಗಳಿದ್ದ ರೂಮಿನಲ್ಲಿ ಅಪ್ಪಿಕೊಂಡು ರೊಮ್ಯಾನ್ಸ್ ಮಾಡಿದ್ದಾರೆ. ಇದನ್ನು ಅವರಿಗೆ ಗೊತ್ತಾಗದೇ ರೀತಿಯಲ್ಲಿ ಕಿಟಕಿಯಿಂದ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಸಮಾಜ ಕಲ್ಯಾಣ ಇಲಾಖೆ ಸುಪರ್ದಿಯಲ್ಲಿರುವ ಈ ಶಾಲೆಯ ಪ್ರಿನ್ಸಿಪಾಲ್ ರೊಮ್ಯಾನ್ಸ್ ವಿಷಯ ಹಿರಿಯ ಅಧಿಕಾರಿಗಳಿಗೆ ತಿಳಿದಿದ್ದರೂ, ಸೂಕ್ತ ಕ್ರಮ ಕೈಗೊಳ್ಳದೆ ಸಂಬಂಧವೇ ಇಲ್ಲವೇನು ಎಂಬಂತೆ ಇದ್ದಾರೆ. ಇಂತಹ ವಿಷಯದಿಂದ ಮಕ್ಕಳ ಮೇಲಾಗುವ ಪರಿಣಾಮಗಳ ಬಗ್ಗೆ ಇಲಾಖೆ ಗಂಭೀರವಾಗಿ ಯೋಚಿಸಬೇಕು ಎಂದು ಪೋಷಕರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv