Tag: ಪ್ರಾಸಿಕ್ಯೂಷನ್

  • ಯಾವುದೇ ತನಿಖೆ ನಡೆಯಲಿ ಸಿಎಂ ಕ್ಲೀನ್ ಆಗಿ ಹೊರಗೆ ಬರ್ತಾರೆ : ಡಿಸಿಎಂ ಡಿಕೆಶಿ

    ಯಾವುದೇ ತನಿಖೆ ನಡೆಯಲಿ ಸಿಎಂ ಕ್ಲೀನ್ ಆಗಿ ಹೊರಗೆ ಬರ್ತಾರೆ : ಡಿಸಿಎಂ ಡಿಕೆಶಿ

    ಬೆಂಗಳೂರು: ಮುಡಾ (MUDA) ಪ್ರಕರಣ ಸಂಬಂಧ ಸಿಎಂ ವಿರುದ್ಧ ಯಾವುದೇ ತನಿಖೆ ನಡೆಯಲಿ ಕ್ಲೀನ್ ಆಗಿ ಹೊರಗೆ ಬರ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ತಿಳಿಸಿದರು.

    ಹೈಕೋರ್ಟ್ ತೀರ್ಪು ನೀಡಿದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಸಿಎಂ ಮೇಲೆ ದೊಡ್ಡ ಷಡ್ಯಂತ್ರ ನಡೆದಿದೆ. ಯಾವುದೇ ತನಿಖೆ ನಡೆಯಲಿ ಕ್ಲೀನ್ ಆಗಿ ಹೊರಗೆ ಬರ್ತಾರೆ. ಏನು ಹಿನ್ನಡೆಯಾಗಿದೆ? ಆದೇಶ ಏನಿದೆ ನೋಡುತ್ತೇನೆ. ಸಿಎಂ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಆದರೆ ನಾವು ಸಿಎಂ ಪರ ಇದ್ದೇವೆ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದರು.ಇದನ್ನೂ ಓದಿ: ಡಿಕೆಶಿಗೆ ಸಿಎಂ ಆಗುವ ಅವಕಾಶ ಬಂದೇ ಬರುತ್ತೆ: ಶಾಸಕ ಬಸವರಾಜ್ ಶಿವಗಂಗಾ

    ನನ್ನ ವಿರುದ್ಧವೂ ಹೀಗೆಯೇ ಷಡ್ಯಂತ್ರ ನಡೆದಿತ್ತು. ನನ್ನನ್ನು ಜೈಲಿಗೆ ಕಳುಹಿಸಿದ್ದರು. ಈಗ ಆ ಕೇಸ್ ಏನಾಗಿದೆ? ಹಾಗೆಯೇ ಸಿಎಂ ವಿರುದ್ಧವೂ ಷಡ್ಯಂತ್ರ ನಡೆದಿದೆ. ಏನೇ ಆಗಲಿ ಸಿಎಂ ಕ್ಲೀನ್ ಆಗಿ ಹೊರಗೆ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮುಡಾ (Mysuru Urban Development Authority) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಿನ್ನಡೆಯಾಗಿದ್ದು ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.ಇದನ್ನೂ ಓದಿ:  ಸಿದ್ದರಾಮಯ್ಯನವರು ಇದಕ್ಕಿಂತ ಜಾಸ್ತಿ ಭಂಡತನ ಮಾಡದಿರಲಿ, ರಾಜೀನಾಮೆ ಕೊಡುವುದೊಂದೇ ದಾರಿ: ಸಿ.ಟಿ.ರವಿ

  • ಬಿಜೆಪಿ ಸರ್ಕಾರಗಳನ್ನೇ ಸಂಪೂರ್ಣ ವಿಸರ್ಜನೆ ಮಾಡಬೇಕು – ಈಶ್ವರ್ ಖಂಡ್ರೆ ಕಿಡಿ

    ಬಿಜೆಪಿ ಸರ್ಕಾರಗಳನ್ನೇ ಸಂಪೂರ್ಣ ವಿಸರ್ಜನೆ ಮಾಡಬೇಕು – ಈಶ್ವರ್ ಖಂಡ್ರೆ ಕಿಡಿ

    ಬೆಂಗಳೂರು: ಬಿಜೆಪಿ ಸರ್ಕಾರಗಳನ್ನೇ ಸಂಪೂರ್ಣ ವಿಸರ್ಜನೆ ಮಾಡಬೇಕು ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ಬಿಜೆಪಿ (BJP) ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಹೈಕೋರ್ಟ್ (High Court) ಸಿಎಂ ತನಿಖೆಗೆ ಅನುಮತಿ ನೀಡಿದ ಬೆನ್ನಲ್ಲೇ ಸಿಎಂ (CM Siddaramaiah) ರಾಜೀನಾಮೆ ನೀಡಬೇಕು ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಆಪ್ತರ ಮಾತು ಕೇಳಿ ಸಿಎಂ ಕೆಟ್ಟರು, ಸತ್ಯಕ್ಕೆ ಜಯ ಸಿಕ್ಕಿದೆ : ಶಾಸಕ ಶ್ರೀವತ್ಸ

    ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಬಿಜೆಪಿಯವರು ಹಗಲು ದರೋಡೆ ಮಾಡಿದ್ದಾರೆ. ಬಿಜೆಪಿ ಸರ್ಕಾರಗಳನ್ನೇ ಸಂಪೂರ್ಣ ವಿಸರ್ಜನೆ ಮಾಡಬೇಕು. ಅಷ್ಟು ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದರು.

    ಸಿಎಂ ಯಾಕೆ ರಾಜೀನಾಮೆ ಕೊಡಬೇಕು? ನಾವು ಕಾನೂನು ಹೋರಾಟ ಮಾಡುತ್ತೇವೆ. ಕಾನೂನು ಹೋರಾಟಕ್ಕೆ ಹಲವು ಅವಕಾಶಗಳಿವೆ. ಸರ್ಕಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ನಾವು ಉತ್ತಮ ಕೆಲಸ ಮಾಡಿದ್ದೇವೆ. ಜನ ನಮ್ಮ ಜೊತೆ ಇದ್ದಾರೆ, ನಾವು ಮೇಲ್ಮನವಿ ಹಾಕುತ್ತೇವೆ. ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ ಎಂದು ಹೇಳಿದರು.ಇದನ್ನೂ ಓದಿ: ಹಿಂದಿ ಬಿಗ್ ಬಾಸ್‌ಗೆ ಎಂಟ್ರಿ ಕೊಡ್ತಾರಾ ಮಹೇಶ್ ಬಾಬು ಸಂಬಂಧಿ?

  • ಇಂದು ಸಿದ್ದರಾಮಯ್ಯಗೆ ಬಿಗ್‌ ಡೇ – ಕಾರ್ಯಕ್ರಮಗಳನ್ನು ರಿಸರ್ವ್ ಮಾಡಿದ ಸಿಎಂ

    ಬೆಂಗಳೂರು: ಇಂದು ಸಿದ್ದರಾಮಯ್ಯನವರಿಗೆ (CM Siddaramaiah) ಬಿಗ್ ಡೇ ಆಗಿರುವ ಕಾರಣ ಸಿಎಂ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರಿಸರ್ವ್ ಮಾಡಿದ್ದಾರೆ.

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಹಗರಣ ಕೇಸ್‌ಗೆ ಸಂಬಂಧಿಸಿದಂತೆ ರಾಜ್ಯಪಾಲರು (Governer) ಪ್ರಾಸಿಕ್ಯೂಷನ್ (Prosection) ಅನುಮತಿ ನೀಡಿರುವ ಹಿನ್ನೆಲೆ ಹೈಕೋರ್ಟ್‌ನಲ್ಲಿ (High Court) ವಿಚಾರಣೆ ನಡೆಯುತ್ತಿದೆ.ಇದನ್ನೂ ಓದಿ: ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನ; ನವೀಕರಿಸಬಹುದಾದ ಶಕ್ತಿಯ ಭರವಸೆ – ಏನಿದು ತಂತ್ರಜ್ಞಾನ?

    ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೈಕೋರ್ಟ್‌ನಲ್ಲಿ ಶನಿವಾರ ಎರಡು ದಿನಗಳ ಕಾಲ ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು (ಸೆ.2) ಮಧ್ಯಾಹ್ನ 2:30ಕ್ಕೆ ನಡೆಯಲಿದೆ.

    ಶನಿವಾರ ನಡೆದ ವಿಚಾರಣೆಯಲ್ಲಿ ಪ್ರತಿವಾದಿಗಳ ವಾದಕ್ಕೆ ಉತ್ತರ ಕೊಡಲು ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಸಮಯಾವಕಾಶ ನೀಡುವಂತೆ ಕೋರಿದ್ದರು. ನಂತರ ಕೋರ್ಟ್ ಇಂದು (ಸೆ.2) ವಿಚಾರಣೆಯನ್ನು ಮುಂದೂಡಿತ್ತು.ಇದನ್ನೂ ಓದಿ: ಯಾದಗಿರಿಯಲ್ಲಿ ನಿರಂತರ ಮಳೆಯಿಂದಾಗಿ ನಂದೆಪಲ್ಲಿ ಸೇತುವೆ ಸಂಪೂರ್ಣ ಜಲಾವೃತ

    ಮಧ್ಯಾಹ್ನ ಹೈಕೋರ್ಟ್‌ನಲ್ಲಿ ವಿಚಾರಣೆ ಪ್ರಾರಂಭವಾಗಲಿರುವ ಹಿನ್ನೆಲೆ ವಕೀಲರ ಜೊತೆ ಚರ್ಚೆ ನಡೆಸಬೇಕು ಎಂಬ ಕಾರಣಕ್ಕೆ ಇಂದು ಸಂಜೆ 5 ಗಂಟೆಯವರೆಗೆ ಪೂರ್ವ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮಯ್ಯನವರು ಕಾಯ್ದಿರಿಸಿದ್ದಾರೆ.

  • ಸಿಎಂ ಬಳಿಕ ಹಲವು ಕೈ ನಾಯಕರಿಗೆ ಪ್ರಾಸಿಕ್ಯೂಷನ್‌ ಭೀತಿ

    ಸಿಎಂ ಬಳಿಕ ಹಲವು ಕೈ ನಾಯಕರಿಗೆ ಪ್ರಾಸಿಕ್ಯೂಷನ್‌ ಭೀತಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಬಳಿಕ ಇದೀಗ ಕಾಂಗ್ರೆಸ್ ನಾಯಕರಿಗೆ (Congress Leaders) ಪ್ರಾಸಿಕ್ಯೂಷನ್ ಭೀತಿ ಎದುರಾಗಿದೆ. ಸಿಎಂ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧವೂ ಪ್ರಾಸಿಕ್ಯೂಷನ್ ಅನುಮತಿ ಕೇಳಲು ಸಿದ್ಧತೆ ನಡೆದಿದ್ಯಾ ಎಂಬ ಪ್ರಶ್ನೆ ಎದ್ದಿದೆ.

    ಈಗಾಗಲೇ ಸಚಿವ ಕೆಐಎಡಿಬಿಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಎಂ.ಬಿ.ಪಾಟೀಲ್ (MB Patil) ಹಾಗೂ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧದ ದೂರು ರಾಜ್ಯಪಾಲರ ಮುಂದಿದೆ. ಡಿಸಿಎಂ ಡಿಕೆಶಿ ವಿರುದ್ಧವೂ ಪ್ರಾಸಿಕ್ಯೂಷನ್ ಅನುಮತಿ ಕೇಳಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.

    ನನ್ನ ವಿರುದ್ಧವೂ ಪ್ರಾಸಿಕ್ಯೂಷನ್ ಅನುಮತಿ ಕೇಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನನ್ನ ವಿರುದ್ಧವೂ ಏನೇನೋ ಸಿದ್ದತೆ ನಡೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕೇರಳ ರಾಜಕಾರಣದಲ್ಲೂ ಕಾಸ್ಟಿಂಗ್ ಕೌಚ್ ಕೋಲಾಹಲ; ಪಕ್ಷದ ನಾಯಕರಿಂದ ಕಿರುಕುಳ – ಕಾಂಗ್ರೆಸ್ ನಾಯಕಿ ರೋಸ್‌ಬೆಲ್ ಬಾಂಬ್‌

     

    ಈ ಹಿಂದೆ ನಡೆದ ವಿಚಾರಣೆ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮೂವರು ಮಾಜಿ ಸಚಿವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳು ತಮ್ಮ ಬಳಿ ಬಾಕಿ ಇಲ್ಲ ಎಂದು ರಾಜಭವನ ಅಧಿಕೃತ ದಾಖಲೆಯನ್ನು ನ್ಯಾಯಾಲಯಕ್ಕೆ ನೀಡಿತ್ತು.

    ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠಕ್ಕೆ ಟಿ.ಜೆ.ಅಬ್ರಾಹಂ ಪರ ವಕೀಲ ರಂಗನಾಥ್ ರೆಡ್ಡಿ ಈ ದಾಖಲೆ ಸಲ್ಲಿಸಿದ್ದರು. ಈ ವೇಳೆ ನ್ಯಾ.ನಾಗಪ್ರಸನ್ನ ಅವರು ನಿಮಗೆ ಈ ವಿಷಯ ಹೇಗೆ ಗೊತ್ತು ಎಂದು ಪ್ರಶ್ನಿಸಿದ್ದರು. ಇದಕ್ಕೆ ರಂಗನಾಥ್ ರೆಡ್ಡಿ, ಆರ್‌ಟಿಐ ಮೂಲಕ ಮಾಹಿತಿ ಪಡೆಯಲಾಗಿದೆ. ರಾಜಭವನ ಕಚೇರಿ ನೀಡಿರುವ ಉತ್ತರದಲ್ಲಿ ಯಾವುದೇ ಅರ್ಜಿ ಬಾಕಿ ಇಲ್ಲ ಎಂದು ತಿಳಿಸಲಾಗಿದೆ ಎಂದು ಉತ್ತರಿಸಿದ್ದರು.

     

  • ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತ್ರ ಹೈಕಮಾಂಡ್ ತೀರ್ಮಾನ ಏನು ಗೊತ್ತಿಲ್ಲ – ಸತೀಶ್ ಜಾರಕಿಹೋಳಿ

    ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತ್ರ ಹೈಕಮಾಂಡ್ ತೀರ್ಮಾನ ಏನು ಗೊತ್ತಿಲ್ಲ – ಸತೀಶ್ ಜಾರಕಿಹೋಳಿ

    ಬೆಂಗಳೂರು: ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತರ ಹೈಕಮಾಂಡ್ ತೀರ್ಮಾನ ಏನು ಅನ್ನೋದು ಗೊತ್ತಿಲ್ಲ ಮುಂದೆ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ‌ (Satish Jarkiholi) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಿಎಂ, ಡಿಸಿಎಂ ದೆಹಲಿ ಭೇಟಿ ನಮಗೆ ಅಷ್ಟೊಂದು ಗೊತ್ತಿಲ್ಲ ವಿಷ್ಯ ಏನೂ ಗೊತ್ತಿಲ್ಲ. ಸಾಮಾನ್ಯವಾಗಿ ಇಲ್ಲಿ ನಡೀತಿರೋ ವಿಚಾರವನ್ನ ಹೈಕಮಾಂಡ್ ಗಮನಕ್ಕೆ ತರೋ ಕೆಲಸ ಆಗ್ತಿದೆ. ಅದೇ ಕಾರಣಕ್ಕೆ ದೆಹಲಿಗೆ ಹೋಗಿದ್ದಾರೆ. ಪ್ರಾಸಿಕ್ಯೂಷನ್ (Prosecution) ನಂತ್ರ ಹೈಕಮಾಂಡ್ ತೀರ್ಮಾನ ಏನು? ಎಂಬ ವಿಚಾರದ ಬಗ್ಗೆ ಯಾವುದೇ ಕ್ಲಾರಿಫಿಕೇಷನ್ ಬಂದಿಲ್ಲ. ಕೋರ್ಟ್ ನಲ್ಲಿ ಆದೇಶ ಬಂದ್ಮೇಲೆ ಮುಂದಿನ ತೀರ್ಮಾನ. ಇಂಡಿಯಾ ಒಕ್ಕೂಟ ‌ಏನು ತೀರ್ಮಾನ ಕೈಗೊಳ್ಳುತ್ತದೆ ನೋಡಬಹುದು. ಬೇರೆ ಕಡೆ ಕೂಡ ಈ ರೀತಿ ಕೆಲಸ ಆಗ್ತಿವೆ ಎಂದು ಹೇಳಿದ್ದಾರೆ.

    ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಸರ್ಕಾರಗಳ ನಡುವೆ ಸಂಘರ್ಷ ನಡೆದಿವೆ. ತಮಿಳುನಾಡು, ಬಂಗಾಳ ಸೇರಿ ನಮ್ಮ ರಾಜ್ಯದಲ್ಲೂ ನಡೀತಿದೆ. ರಾಜ್ಯಪಾಲರು ಬಿಲ್ ವಾಪಸ್ ಕಳಿಸಿದ್ದಾರೆ. ಕೆಲ ಬಿಲ್‌ಗಳನ್ನ ವಾಪಸ್ ಕಳಿಸಿದ್ದಾರೆ. ಅವರು ಬಿಲ್ ಕುರಿತು ಸ್ಪಷ್ಟನೆ ಕೇಳೋಕೆ ಹಕ್ಕಿದೆ. ಅದನ್ನ ಸರ್ಕಾರ ಕೂಡ ಉತ್ತರ ಕೊಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? – ನಾವು ಸರ್ಕಾರ ಬೀಳಿಸಲ್ಲ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ

    ಇನ್ನೂ ಸರ್ಕಾರ ಅಸ್ಥಿರ‌ಗೊಳಿಸುವ ಕುರಿತು ಮಾತನಾಡಿ, ಸರ್ಕಾರ ಅಸ್ಥಿರ ಗೊಳಿಸೋ‌ ವಿಚಾರದ ಬಗ್ಗೆ ಸಿಎಂ ಹೇಳಿದ್ದಾರೆ. ಹಿಂದೆಯಿಂದಲೂ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಆದ್ರೆ ಯಾವುದೇ ಬದಲಾವಣೆ ಆಗಲ್ಲ. 6 ಗಳಿಗೊಮ್ಮೆ‌ ಸರ್ಕಾರ ಬೀಳಿಸೋ ವಿಚಾರ ಮುನ್ನಲೆಗೆ ಬರುತ್ತಿರುತ್ತೆ. ಮುಂದಿನ 4 ವರ್ಷಗಳ ಕಾಲ ನಮ್ಮದೇ ಸರ್ಕಾರ ಅಲ್ಲಿವರೆಗೆ ಬೀಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತೆ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಕಪ್ಪುಚುಕ್ಕಿ ತರುವ ಸುಳ್ಳು ಆರೋಪಕ್ಕೆ‌ ರಾಜ್ಯಪಾಲರ ಸಮ್ಮತಿ: ಸಚಿವ ಎಂ.ಬಿ.ಪಾಟೀಲ್

  • ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? – ನಾವು ಸರ್ಕಾರ ಬೀಳಿಸಲ್ಲ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ

    ಬೆಂಗಳೂರು: ಆರೋಪ ಬಂದ ಮೇಲೆ ರಾಜೀನಾಮೆ ಕೋಡಬೇಕಿತ್ತು. ಆದ್ರೆ ಕುರ್ಚಿಗೆ ಅಂಟಿಕೊಡು ಸಿಎಂ (Chief Minister) ಕೂತ್ಕೊಂಡು ರಾಜ್ಯಪಾಲರ ಮೇಲೆ ಗೂಬೆ ಕೂರಿಸೋದನ್ನ ಬಿಡಬೇಕು ಅಂತಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ (Sunil Kumar) ಕಿಡಿ ಕಾರಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ (BJP Office) ಮಾತನಾಡಿದ ಅವರು, ಮೊದಲು ರಾಜೀನಾಮೆ ಕೊಟ್ಟು ತನಿಖೆ ಎದರಿಸಲಿ, ನಂತರ ಅದರಲ್ಲಿ ತಪ್ಪಿಲ್ಲ ಅಂದರೆ ಮತ್ತೆ ಸಿಎಂ ಆಗಲಿ. ಇನ್ನೂ ನಾವು ಯಾವುದೇ ಅಪರೇಷನ್ ಕಮಲಕ್ಕೆ ಕೈ ಹಾಕಿಲ್ಲ ಕೈ ಹಾಕೋದು ಇಲ್ಲ. ಅವರರವರ ಒಳಗಿನ ಮತ್ತೆ ಭ್ರಷ್ಟಾಚಾರ ಮುಚ್ಚಿ ಕೊಳ್ಳಲು ಈ ಹೇಳಿಕೆ ಕೊಡ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಅಂತಹ ಪ್ರಯತ್ನ ಬಿಜೆಪಿ ಮಾಡಲ್ಲ ಅಂತ ಹೇಳಿದರು. ಇದನ್ನೂ ಓದಿ: ಟೀಚರ್ ಹೊಡೆದ್ರು ಅಂತಾ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ – ಶಾಲಾ ಬಿಲ್ಡಿಂಗ್‌ನ 3ನೇ ಫ್ಲೋರ್‌ನಿಂದ ಏಕಾಏಕಿ ಜಿಗಿದ ವಿದ್ಯಾರ್ಥಿನಿ!

    ಕಾಂಗ್ರೆಸ್ ಸರ್ಕಾರದಲ್ಲಿ (Karnataka Government) ಅಸ್ಥಿರತೆ ಕಾಣ್ತಿದೆ. ಸ್ವತಃ ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಜನ ಕಲ್ಯಾಣದ ಯೋಜನೆಗಳ ಕೈ ಬಿಟ್ಟಿದ್ದಾರೆ. ಯಾವುದೇ ಜಿಲ್ಲೆಗಳಲ್ಲೂ ಸಚಿವರು ಪ್ರವಾಸ ಸಭೆಗಳನ್ನು ನಡೆಸ್ತಿಲ್ಲ. ಜನರ ಬವಣೆಗಳನ್ನು ಕೇಳದಿರುವ ಪರಿಸ್ಥಿತಿ ಇದೆ. ಆಡಳಿತ ಪಕ್ಷದ ಸದಸ್ಯರೇ ಬೇರೆ ಬೇರೆ ಪ್ರತಿಭಟನೆ ಮಾಡ್ತಿದ್ದಾರೆ. ಜನರ ಬಗ್ಗೆ ಯೋಚನೆ ಮಾಡದಿರುವುದು ಅತ್ಯಂತ ಶೋಚನೀಯ ಸ್ಥಿತಿ ಅಂತಾ ಟೀಕಿಸಿದರು. ಆದ್ರೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ಗೆ ವರದಿ ಕೊಡಲು ಸಿಎಂ ದೆಹಲಿಗೆ ತೆರಳಿದ್ದಾರೆ.

    ಸಿಎಂ ರಾಜ್ಯದ ಜನರ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಮೈಸೂರಿನಲ್ಲಿರುವ ಜಮೀನನ್ನು ಹೇಗೇ ಅಕ್ರಮವಾಗಿ ತಮ್ಮ ಬಾಮೈದನಿಗೆ ರಿಜಿಸ್ಟರ್ ಮಾಡಿಸಿಕೊಂಡ್ರು? ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? ಇಷ್ಟು ದೊಡ್ಡ ಪ್ರಮಾಣದ ಹಗರಣ ಆಗ್ತಿದ್ರು ಸಿಎಂ ಯಾಕೇ ಕೈ ಕಟ್ಟಿಕೊಂಡು ಕುಳಿತುಕೊಂಡಿದ್ಸಾರೆ?ವಾಲ್ಮೀಕಿ ಹಗರಣದಲ್ಲಿ ತನಿಖೆ ಮಾಡ್ತಾ ಮಾಡ್ತಾ ಚಾರ್ಜ್ ಶೀಟ್ ನಲ್ಲಿ ಯಾಕೇ ಸಚಿವರು, ಶಾಸಕರ ಹೆಸರನ್ನು ಕೈ ಬಿಟ್ರಿ? ನಾವು ದಲಿತರ ಪರ ಎಂದು ಏಕೆ ಹೇಳ್ತಿದ್ದೀರಿ? ಇದಕ್ಕೆಲ್ಲಾ ಸ್ವತಃ ತಾವೇ ಉತ್ತರವನ್ನು ಕೊಡಬೇಕು ಅಂತಾ ಆಗ್ರಹಿಸಿದ್ರು. ಇದನ್ನೂ ಓದಿ: ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕವನ್ನ ಕಡ್ಡಾಯವಾಗಿ ಕನ್ನಡದಲ್ಲೇ ಪ್ರದರ್ಶಿಸಬೇಕು – CS ಆದೇಶ

    ಸರ್ಕಾರವನ್ನು ಬೀಳಿಸ್ತೀವಿ ಅಂತಾ ನಾವು ಯಾರು ಹೇಳಿಲ್ಲ. ಸರ್ಕಾರ ಉರುಳಿಸಲು ನಿಮ್ಮ ಪಾರ್ಟಿಯಿಂದಲೇ ನಡೆದಿದ್ಯಾ? ಸಿದ್ದರಾಮಯ್ಯ ಇಳಿದ್ರೆ ಕಾಂಗ್ರೆಸ್‌ನಲ್ಲಿ ಮತ್ತೊಬ್ಬ ಸಿಎಂ ಆಗುವ ಅರ್ಹತೆ ಇಲ್ಲವಾ? ನಿಮ್ಮ ಮಾತು ನೋಡಿದ್ರೆ ರಾಜ್ಯದ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಬಿಟ್ಟರೆ, ಮತ್ತೊಬ್ಬ ಪರ್ಯಾಯ ಸಿಎಂ ಆಗುವ ಅರ್ಹತೆ ಇಲ್ಲ ಅಂತಾ ವಾಗ್ದಾಳಿ ನಡೆಸಿದ್ರು. ಬಿಲ್‌ಗಳನ್ನ ವಾಪಸ್‌ ಕಳುಹಿಸಿದ್ದಾರೆಂದು ಗವರ್ನರ್ ಬಗ್ಗೆ ಮಂತ್ರಿಗಳು ಎಲ್ಲೆ ಮೀರಿ ಮಾತಾಡ್ತಿದ್ದಾರೆ. ಹಿಂದೆಯೂ ಗವರ್ನರ್‌ಗಳು ವಿಧೇಯಕ ವಾಪಸ್ಸು ಕಳುಹಿಸಿರುವ ಉದಾಹರಣೆಗಳಿವೆ. ಯಾವ ವಿಧೇಯಕ ಜನಪರವಾಗಿ ಇರುತ್ತೋ ಅದನ್ನು ಗವರ್ನರ್ ಅಂಗೀಕಾರ ಮಾಡಿ ಕಳುಹಿಸ್ತಾರೆ. ಯಾವುದಾದರೂ ಅನುಮಾನ ಇದ್ದರೇ ಏಕ ಪಕ್ಷೀಯವಾಗಿ ಇರಬಹುದು ಅಂತಾ ವಾಪಸ್ಸು ಕಳುಹಿಸ್ತಾರೆ. ಇದೇನೂ ಮೊದಲ ಬಾರಿಯಾಗಿ ಅಲ್ಲ. ಗವರ್ನರ್ ಸಂವಿಧಾನ ಬದ್ಧವಾಗಿ ನಡೆಯುತ್ತಿದ್ದಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಮಾತಾಡ್ತಿರೋದು ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ ಅಂತಾ ಕಿಡಿಕಾರಿದ್ರು. ಇದನ್ನೂ ಓದಿ: ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ: ಸಿಎಂಗೆ ಹೈಕಮಾಂಡ್ ಅಭಯ

  • ರಾಜ್ಯಪಾಲರಿಗೆ ಬಂತು ಬುಲೆಟ್ ಫ್ರೂಫ್ ಕಾರು!

    ರಾಜ್ಯಪಾಲರಿಗೆ ಬಂತು ಬುಲೆಟ್ ಫ್ರೂಫ್ ಕಾರು!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governer Thawar Chand Gehlot) ಅವರು ಬುಲೆಟ್ ಪ್ರೂಫ್ ಕಾರನ್ನು ಬಳಸಲು ಆರಂಭಿಸಿದ್ದಾರೆ.

    ಮುಡಾ (MUDA) ಪ್ರಕರಣದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ನೀಡಿದ ಬಳಿಕ ರಾಜ್ಯದಲ್ಲಿ ಕೆಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಯಿಂದಾಗಿ ರಾಜ್ಯಾಪಾಲರು ಎಚ್ಚರಿಕೆಯ ನಡೆಯನ್ನು ತೋರಿಸಿದ್ದಾರೆ.ಇದನ್ನೂ ಓದಿ: MUDA Scam | ಹೊಸ ಟ್ವಿಸ್ಟ್‌ – ಸಿಎಂ ಪತ್ನಿ ಬರೆದ ಪತ್ರವನ್ನೇ ಅಧಿಕಾರಿಗಳು ತಿರುಚಿದ್ದಾರಾ?

    ಇಷ್ಟು ದಿನ ಅವಕಾಶ ಇದ್ದರೂ ನಾರ್ಮಲ್ ಇನ್ನೋವಾ ಕಾರನ್ನು ಬಳಸುತ್ತಿದ್ದ ರಾಜ್ಯಪಾಲರು ಇದೀಗ ಬುಲೆಟ್ ಫ್ರೂಫ್ ಕಾರನ್ನು (BulletProof Car) ಬಳಸಲು ಆರಂಭಿಸಿದ್ದಾರೆ. ರಾಜ್ಯಪಾಲರು ಅಧಿಕಾರ ಸ್ವೀಕರಿಸಿದಾಗಲೇ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ಕಾರನ್ನು ವಾಪಸ್ ಕಳುಹಿಸಿದ್ದರು. ಈಗ ಮತ್ತೆ ಗುಪ್ತಚರ ಇಲಾಖೆಯಿಂದ ಸೂಚನೆ ಬಂದ ನಂತರ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿದೆ.

    ಶನಿವಾರ ಮಧ್ಯಾಹ್ನ ಇಂದೋರ್‌ಗೆ ತೆರಳಿದ್ದ ರಾಜ್ಯಪಾಲರು ಮಂಗಳವಾರ ರಾತ್ರಿ ವಾಪಸಾಗಿದ್ದಾರೆ. ಇಂದು ನಡೆಯಬೇಕಿದ್ದ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಸೇರಿ ಆ.29ರ ತನಕ ಪೂರ್ವ ನಿಗದಿಯಾಗಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.ಇದನ್ನೂ ಓದಿ: ನನ್ನ ಮಕ್ಕಳನ್ನು ಗುಂಡು ಹೊಡೆದು ಸಾಯಿಸಿ – ಪೊಲೀಸರ ಮುಂದೆ ರೌಡಿಶೀಟರ್ ತಂದೆ ಅಳಲು

  • ಸಿದ್ದರಾಮಯ್ಯಗೆ ಈಗ ಮೂರು ಸಂಕಟ – ಮೂರು ಹೋರಾಟ!

    ಸಿದ್ದರಾಮಯ್ಯಗೆ ಈಗ ಮೂರು ಸಂಕಟ – ಮೂರು ಹೋರಾಟ!

    ಬೆಂಗಳೂರು: ಸಿದ್ದರಾಮಯ್ಯಗೆ (Siddaramaiah) ಈಗ ಮೂರು ಸಂಕಟ, ಮೂರು ಹೋರಾಟ ಇವೆ. ಭಾವನಾತ್ಮಕ ಸಂಕಟ.. ರಾಜಕೀಯ ಸಂಕಟ.. ಕಾನೂನು ಸಂಕಟಗಳು ಇವೆ.

    ಮೂರು ಸಂಕಟಗಳನ್ನ ಹೋರಾಟದ ಮೂಲಕವೇ ಸಮಚಿತ್ತದಿಂದ ಎದುರಿಸಬೇಕಾಗಿದೆ. ಎಫ್‌ಐಆರ್ (FIR) ದಾಖಲಾದರೇ ಸಾರ್ವಜನಿಕವಾಗಿ ಕಾಣಿಸಿ ಕೊಳ್ಳದ ಪತ್ನಿ ವಿಚಾರಣೆ ಎದುರಿಸಬೇಕು. ಇದು ಸಹಜವಾಗಿಯೇ ಸಿಎಂ ಸಿದ್ದರಾಮಯ್ಯಗೆ ಇದು ಅರಗಿಸಿಕೊಳ್ಳಲಾಗದ ವಿಷಯ. ಅನಿರೀಕ್ಷಿತವಾಗಿ ಕುಟುಂಬದಿಂದಲೇ ಬಂದ ಆರೋಪವನ್ನ ಭಾವನಾತ್ಮಕ ಹೋರಾಟದ ಮೂಲಕ ಎದುರಿಸಬೇಕಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಪೊಲಿಟಿಕಲ್ ಸೇಫ್ – ಆದ್ರೆ ಮುಂದೇನು?

    ಇನ್ನು ರಾಜಕೀಯ ಸಂಘರ್ಷ (Political conflict) ಮಾಡದ ಹೊರತು ಅಧಿಕಾರ ಉಳಿಸಿಕೊಳ್ಳಲು ಆಗದು. ರಾಜ್ಯಪಾಲರ ರಾಜಕೀಯ ಪಿತೂರಿ ಆರೋಪದಿಂದ ಹಿಡಿದು ಅಧಿಕಾರ ಉಳಿಸಿಕೊಳ್ಳುವ ತನಕ ರಾಜಕೀಯ ಹೋರಾಟ ಮಾಡುವುದು ಅನಿವಾರ್ಯ. ಆರೋಪ ಮುಕ್ತರಾಗಲು ಕೋರ್ಟ್ ನಲ್ಲೇ (Karnataka Highcourt) ಹೋರಾಟ ನಡೆಸಬೇಕಿದೆ. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್‌; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

    ಇಷ್ಟು ವರ್ಷದ ರಾಜಕಾರಣದಲ್ಲಿ ಕಾಪಾಡಿಕೊಂಡು ಬಂದಿದ್ದದ್ದನ್ನ ಮರಳಿಪಡೆಯಲು ಕಾನೂನು ಹೋರಾಟ ಅಗತ್ಯ. ಕಾನೂನು ಹೋರಾಟದ ಮೂಲಕ ಜಯಿಸಿ ಬಂದು ವಿರೋಧಿಗಳಿಗೆ ಉತ್ತರ ಕೊಡಬೇಕಾದ ಅನಿವಾರ್ಯತೆಯೂ ಇದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಮೂರು ಸಂಕಟಗಳನ್ನ ಅನುಭವಿಸಿಯೇ ಮೇಲೆದ್ದು ಬರ್ತಾರಾ? ವಿರೋಧಿಗಳ ಬಾಯಿ ಮುಚ್ಚಿಸುತ್ತಾರಾ? ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: TB Dam | ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ – ತಾಂತ್ರಿಕ ತಂಡಕ್ಕೆ 2 ಲಕ್ಷ ಬಹುಮಾನ

  • ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಪೊಲಿಟಿಕಲ್ ಸೇಫ್ – ಆದ್ರೆ ಮುಂದೇನು?

    ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಪೊಲಿಟಿಕಲ್ ಸೇಫ್ – ಆದ್ರೆ ಮುಂದೇನು?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸದ್ಯಕ್ಕೆ ರಾಜಕೀಯವಾಗಿ ಸೇಫ್. ಆದ್ರೆ ಮುಂದೆನು? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ (Congress High Command) ಸಿಎಂ ಸಿದ್ದರಾಮಯ್ಯ ಪರ ನಿಂತಿರುವ ಬಗ್ಗೆ ಹಲವು ರಾಜಕೀಯ ಲೆಕ್ಕಚಾರಗಳು ಇವೆ ಎನ್ನಲಾಗಿದೆ.

    ಕುರುಬ, ಹಿಂದುಳಿದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ (Congress) ಕಡೇ ತನಕ ಸಿದ್ದರಾಮಯ್ಯ ಪರ ನಿಲ್ಲಲು ಸಂದೇಶ ರವಾನಿಸಿದೆ. ಕೋರ್ಟ್ ಮುಂದೆ ಕಾನೂನು ಹೋರಾಟ ಕ್ಲಿಯರ್ ಆದ ಬಳಿಕವೇ ಬೇರೆ ತೀರ್ಮಾನ ಮಾಡೋಣ ಎಂಬುದು ಎಐಸಿಸಿ ನಾಯಕರ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂಬುದು ಮೂಲಗಳ ಮಾಹಿತಿ. ಇದನ್ನೂ ಓದಿ: TB Dam | ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ – ತಾಂತ್ರಿಕ ತಂಡಕ್ಕೆ 2 ಲಕ್ಷ ಬಹುಮಾನ

    ರಾಜಕೀಯ ಹೋರಾಟದಲ್ಲಿ ಹಿಂದೆ ಸರಿಯಬಾರದು, ಸಿದ್ದರಾಮಯ್ಯ ಕೈ ಬಿಡಬಾರದು, ಹಿಂದುಳಿದ ವರ್ಗದ ನಾಯಕ, ಭವಿಷ್ಯದ ದೃಷ್ಟಿಯಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕಡೇ ಹಂತದ ತನಕ ಕಾನೂನು ಹೋರಾಟ ನಡೆಯಲಿ… ಅಲ್ಲಿ ತನಕ ಸಿದ್ದರಾಮಯ್ಯ ಜೊತೆ ಇರಲೇಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಪಾಕ್‌, ಬಾಂಗ್ಲಾ, ಅಫ್ಘಾನಿಸ್ತಾನದ 188 ಹಿಂದೂ ನಿರಾಶ್ರಿತರಿಗೆ ಪೌರತ್ವ ಪ್ರಮಾಣಪತ್ರ ನೀಡಿದ ಅಮಿತ್‌ ಶಾ

    ರಾಜಕೀಯ ಕಾರಣಗಳಿಗಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ಕೊಟ್ಟಿರುವುದು ಸ್ಪಷ್ಟ. ಪಕ್ಷ, ಸರ್ಕಾರ ಎರಡನ್ನೂ ಇಕ್ಕಟಿಗೆ ಸಿಲುಕಿಸುವ ವಿರೋಧಿಗಳ ಯತ್ನಕ್ಕೆ ಜಯ ಸಿಗಬಾರದೆಂಬ ತಂತ್ರಗಾರಿಕೆ ಕಾಂಗ್ರೆಸ್ ಹೈಕಮಾಂಡ್‌ನದ್ದು. ಹಾಗಾಗಿ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಸೇಫ್. ರಾಜಕೀಯ ಬಲ ಕೊಟ್ಟಿರುವ ಹೈಕಮಾಂಡ್, ಮುಂದೆಯೂ ಹೀಗೆ ಇರುತ್ತಾ? ಎಂಬುದನ್ನ ಕಾದುನೋಡಬೇಕಿದೆ.  ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್‌; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ 

  • ಸಿಎಂಗೆ ಮುಡಾ ಸಂಕಷ್ಟ – ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ

    ಸಿಎಂಗೆ ಮುಡಾ ಸಂಕಷ್ಟ – ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ

    ಬೆಂಗಳೂರು: ಮುಡಾ ಅಕ್ರಮ (MUDA Scam) ಕೇಸ್‌ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ ದೊರೆತಿದೆ. ಅಬ್ರಹಾಂ ಎಂಬವರು ನೀಡಿದ್ದ ಖಾಸಗಿ ದೂರಿನ ಆಧಾರದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.

    ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ರಾಜ್ಯಪಾಲರು ರವಾನಿಸಿದ್ದಾರೆ. ಇದನ್ನೂ ಓದಿ: ಬಡವರಿಗಾಗಿ 5 ರೂ.ಗೆ ಊಟ; ಆಂಧ್ರದಲ್ಲಿ ‘ಅನ್ನ ಕ್ಯಾಂಟೀನ್’‌ ಮತ್ತೆ ಆರಂಭ

    ಸಿಎಂ ಕುಟುಂಬದ ಪ್ರಭಾವದ ಎರಡು ಅಂಶಗಳನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ, ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರಭಾವದ ಬಗ್ಗೆ ಉಲ್ಲೇಖವಾಗಿದೆ. ಸಿದ್ದರಾಮಯ್ಯ ಸಿಎಂ ಆಗುವ ತನಕ ಪಾರ್ವತಿ ಕಾದು, ಆ ಬಳಿಕ ಅರ್ಜಿ ಹಾಕಿದ್ದಾರೆ. 2010 ರಲ್ಲಿ ಪಾರ್ವತಿ ಜಮೀನು ಮಾಲೀಕರಾದರೂ ಪರಿಹಾರಕ್ಕೆ ಅರ್ಜಿ ಹಾಕಲು 4 ವರ್ಷ ಕಾಯುತ್ತಾರೆ. ಸಿದ್ದರಾಮಯ್ಯ ಸಿಎಂ ಆದ್ಮೇಲೆ 40:60 ಸೈಟ್ ಪರಿಹಾರ ಅನುಪಾತ, 50:50 ಆಯ್ತು. ಪಾಲಿಸಿ ಬದಲಾವಣೆಗೆ ಆಗಿನ ಸಿದ್ದರಾಮಯ್ಯ ಕ್ಯಾಬಿನೆಟ್ ಅನುಮತಿ ನೀಡಿತ್ತು. ಸಿದ್ದರಾಮಯ್ಯ ಪತ್ನಿ ಕೊಟ್ಟ ಅರ್ಜಿಯ ಆಧಾರದ ಮೇಲೆ ಪಾಲಿಸಿ ಬದಲಾವಣೆ ಮಾಡಿದ್ರು. ಆ ನಂತರ ಪರಿಹಾರ ನೀಡುವ ಸಂಬಂಧ ನಡೆದ ಮುಡಾ ಸಭೆಯಲ್ಲಿ ಶಾಸಕರಾಗಿದ್ದ ಯತೀಂದ್ರ ಇದ್ದರು ಎಂದು ಪ್ರಭಾವದ ಬಗ್ಗೆ ಉಲ್ಲೇಖಿಸಲಾಗಿದೆ.

    ದೂರುದಾರ ಟಿ.ಜೆ.ಅಬ್ರಹಾಂ ಮತ್ತು ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ, ಪ್ರದೀಪ್‌ ಅವರನ್ನು ರಾಜಭವನಕ್ಕೆ ಬರುವಂತೆ ಆಹ್ವಾನಿಸಲಾಗಿದೆ. ಇದನ್ನೂ ಓದಿ: ರಾಜ್ಯಕ್ಕೂ ತಟ್ಟಿದ ಬಾಂಗ್ಲಾ ಆರ್ಥಿಕ ಬಿಕ್ಕಟ್ಟಿನ ಎಫೆಕ್ಟ್ – ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ದಿಢೀರ್ ಕುಸಿತ

    ಸಿಎಂ ವಿರುದ್ಧ ಪ್ಯಾಸಿಕ್ಯೂಷನ್‌ಗೆ ಅನುಮತಿ ಕೋರಿ ಜು.26 ರಂದು ಟಿ.ಜೆ.ಅಬ್ರಹಾಂ ಅವರು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಸಿಎಂಗೆ ರಾಜ್ಯಪಾಲರು ನೋಟಿಸ್‌ ನೀಡಿದ್ದರು.