Tag: ಪ್ರಾಧ್ಯಾಪಕ

  • ಹುಡುಗಿಯರು ಅಂದ್ರೆ ಬಾಯಿ ಬಾಯಿ ಬಿಡೋ ಕಾಮುಕ- ವಿದ್ಯಾರ್ಥಿಗಳ ಮೇಲೆ ಕಣ್ ಹಾಕೋ ಪ್ರಾಧ್ಯಾಪಕ

    ಹುಡುಗಿಯರು ಅಂದ್ರೆ ಬಾಯಿ ಬಾಯಿ ಬಿಡೋ ಕಾಮುಕ- ವಿದ್ಯಾರ್ಥಿಗಳ ಮೇಲೆ ಕಣ್ ಹಾಕೋ ಪ್ರಾಧ್ಯಾಪಕ

    ಬೆಂಗಳೂರು: ಸಹಾಯಕ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದ ಘಟನೆ ಬೆಂಗಳೂರಿನ ಪ್ರತಿಷ್ಠಿತ ಮಹಾರಾಣಿ ಕಾಲೇಜಿನಲ್ಲಿ ನಡೆದಿದೆ.

    ವಿಶ್ವನಾಥ್ ಮಹಾರಾಣಿ ಕಾಲೇಜಿನ ಜೀವಾಣು ಶಾಸ್ತ್ರದ ಪ್ರಾಧ್ಯಾಪಕನಾಗಿದ್ದು, ಈತ ಮಾಡೋ ಕೆಲಸ ಮಾತ್ರ ಪ್ರಾಧ್ಯಾಪಕ ವೃತ್ತಿಗೆನೇ ಕಳಂಕ ತರೋವಂತದ್ದು. ಮಹಾರಾಣಿ ವಿಜ್ಞಾನ ಕಾಲೇಜ್ ಕ್ಯಾಂಟೀನ್ ಬಳಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ.

    ವಿಶ್ವನಾಥ್ ವಿದ್ಯಾರ್ಥಿನಿಗಳ ಜೊತೆ ಚೆಲ್ಲಾಟ ಆಡುತ್ತಾನೆ. ಅನೇಕ ವರ್ಷಗಳಿಂದ ಈ ಕಾಲೇಜಿನಲ್ಲೇ ಕೆಲಸ ಮಾಡಿಕೊಂಡಿದ್ದು, ವಿಶ್ವನಾಥ್‍ನಿಗೆ ಕಾಲೇಜಿನಲ್ಲಿ ಹೇಳೋರು ಕೇಳೋರು ಇಲ್ಲ. ಇದರಿಂದಾನೇ ಅತಿಯಾಗಿ ಆಡುತ್ತಿದ್ದಾನೆ ಎಂದು ಹೇಳಲಾಗಿದೆ.

    ವಿಶ್ವನಾಥ್ ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸ್ತಾನೆ. ಅಷ್ಟೇ ಅಲ್ಲದೇ ಕೊಠಡಿಯ ಬೀಗದ ಕೈ ತನ್ನ ಬಳಿಯೇ ಇಟ್ಟುಕೊಂಡಿರುತ್ತಾನೆ. ಇನ್ನೂ ರಜಾ ದಿನಗಳಲ್ಲಿ ಯಾರಿಗೂ ತಿಳಿಯದಂತೆ ಕಾಲೇಜಿಗೆ ಬಂದು ಕೆಲ ವಿದ್ಯಾರ್ಥಿನಿಯರ ಜೊತೆ ಮಜಾ ಮಾಡುತ್ತಾನೆ.

    ಇನ್ನು ವಿಶ್ವನಾಥ್‍ನ ಈ ಕೆಲಸದಿಂದ ಬೇಸೆತ್ತಿರೋ ಕಾಲೇಜು ಆಡಳಿತ ಮಂಡಳಿ ನೋಟೀಸ್ ಕೂಡಾ ಜಾರಿ ಮಾಡಿದೆ. ಅಷ್ಟೇ ಅಲ್ಲ ಮಹಿಳಾ ಆಯೋಗಕ್ಕೂ ದೂರು ನೀಡಿದೆ.

  • ಕಾಲೇಜಿನ ಸ್ಟಾಫ್  ರೂಂಗೆ ನುಗ್ಗಿ ಕುಳಿತ್ತಿದ್ದ ಪ್ರಾಧ್ಯಾಪಕರಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

    ಕಾಲೇಜಿನ ಸ್ಟಾಫ್ ರೂಂಗೆ ನುಗ್ಗಿ ಕುಳಿತ್ತಿದ್ದ ಪ್ರಾಧ್ಯಾಪಕರಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

    ಚಂಡೀಗಢ: ವಿದ್ಯಾರ್ಥಿಯೊಬ್ಬ ಕಾಲೇಜ್ ಸ್ಟಾಫ್ ರೂಂಗೆ ನುಗ್ಗಿ ಸಹಾಯಕ ಪ್ರಾಧ್ಯಾಪಕರೊಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

    ಹರ್ಯಾಣದ ಸೋನೆಪತ್ ನ ಪಿಪ್ಲಿ ಹಳ್ಳಿಯಲ್ಲಿನ ಶಹೀದ್ ದಲ್ಬಿರ್ ಸಿಂಗ್ ಕಾಲೇಜ್ ಕ್ಯಾಂಪಸ್ ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ರಾಜೇಶ್ ಮಲ್ಲಿಕ್ ವಿದ್ಯಾರ್ಥಿಯಿಂದ ಹತ್ಯೆಯಾದ ಸಹಾಯಕ ಪ್ರಾಧ್ಯಾಪಕ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಪ್ರಾಧ್ಯಾಪಕ ಮಲ್ಲಿಕ್ ಜೊತೆ ಸಹಪಾಠಿ ರಾಜೇಶ್ ಸ್ಟಾಫ್ ರೂಮಿನಲ್ಲಿ ಕುಳಿತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ವಿದ್ಯಾರ್ಥಿ ಏಕಾಏಕಿ ನಾಲ್ಕು ಬಾರಿ ಗುಂಡು ಹಾರಿಸಿದ್ದಾನೆ. ಆತ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಕಾರಣ ಅಲ್ಲಿದ್ದ ಯಾರು ಅವನನ್ನು ಗುರುತಿಸಲು ಸಾಧ್ಯವಾಗಿಲ್ಲ. ತಕ್ಷಣ ಗುಂಡಿನ ಶಬ್ಧ ಕೇಳಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ದಂಗಾಗಿದ್ದಾರೆ ಎಂದು ರಾಜೇಶ್ ತಿಳಿಸಿದ್ದಾರೆ.

    ಆರೋಪಿ ವಿದ್ಯಾರ್ಥಿ ಗುಂಡು ಹೊಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ರಾಜೇಶ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಪ್ರಾಧ್ಯಾಪರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಸುಮಾರು ಬೆಳಿಗ್ಗೆ 9 ಗಂಟೆಯಲ್ಲಿ ನಡೆದಿದ್ದು, ಆರೋಪಿಗಾಗಿ ಶೋಧಕಾರ್ಯ ಶುರುವಾಗಿದೆ. ಪ್ರಾಧ್ಯಾಪಕರ ಶವವನ್ನು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ವೀರೇಂದರ್ ಸಿಂಗ್ ಹೇಳಿದರು.

     

  • ದುರ್ಗಾ ಮಾತೆ ವೇಶ್ಯೆಯಂತೆ: ಎಫ್‍ಬಿಯಲ್ಲಿ ಪ್ರಾಧ್ಯಾಪಕನ ಪೋಸ್ಟ್ ವಿವಾದ

    ದುರ್ಗಾ ಮಾತೆ ವೇಶ್ಯೆಯಂತೆ: ಎಫ್‍ಬಿಯಲ್ಲಿ ಪ್ರಾಧ್ಯಾಪಕನ ಪೋಸ್ಟ್ ವಿವಾದ

    ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ (ಡಿಯು) ಸಹಾಯಕ ಪ್ರಾಧ್ಯಾಪಕರೊಬ್ಬರು ಹಿಂದೂ ದುರ್ಗಾ ದೇವತೆಯನ್ನು ಅಶ್ಲೀಲ ಪದಗಳಿಂದ ಬರೆದು ಪ್ರಕಟಿಸಿದ ಫೇಸ್‍ಬುಕ್‍ನ ಪೋಸ್ಟ್ ಇದೀಗ ವಿವಾದವನ್ನು ಸೃಷ್ಟಿಸಿದೆ.

    ದೆಹಲಿಯ ದಾಯಲ್ ಸಿಂಗ್ ಕಾಲೇಜಿನ ಪ್ರಾಧ್ಯಾಪಕ ಕೇದರ್ ಕುಮಾರ್ ಮಂಡಲ್ “ಭಾರತೀಯ ಪುರಾಣದಲ್ಲಿ ದುರ್ಗಾ ಅತ್ಯಂತ ವೇಶ್ಯೆ” ಎಂದು ಬರೆದಿದ್ದು, ಸೆಪ್ಟಂಬರ್ 22 ರಂದು ಸಂಜೆ ಸುಮಾರು 6.43 ಕ್ಕೆ ಪೋಸ್ಟ್ ಪ್ರಕಟವಾಗಿತ್ತು.

    ಈ ಪೋಸ್ಟ್ ಕುರಿತು ಆಕ್ಷೇಪವನ್ನು ವ್ಯಕ್ತಪಡಿಸಿರುವ ಬಿಜೆಪಿ ಅಂಗಸಂಸ್ಥೆಯಾದ ನ್ಯಾಷನಲ್ ಡೆಮೋಗ್ರಸಿ ಟೀಚರ್ಸ್ ಫ್ರಂಟ್ (ಎನ್‍ಡಿಟಿಎಫ್) ಪ್ರಾಧ್ಯಾಪಕ ಮಂಡಲ್ ವಿರುದ್ಧ ದೆಹಲಿಯ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ನ್ಯಾಷನಲ್ ಸ್ಟುಡೆಂಟ್ಸ್ ಯುನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ) ನಂತಹ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು  ದೆಹಲಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ತಕ್ಷಣ ಕುಮಾರ್ ಮಂಡಲ್ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.